Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ಪತ್ರಕರ್ತ, ಚಂದನ ವಾಹಿನಿಯ ವರದಿಗಾರ ಉದಯ ಪಡಿಯಾರ್ ಅವರಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 1997ರಲ್ಲಿ ಡಿಡಿ ಚಂದನ ವಾಹಿನಿ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಉದಯ ಪಡಿಯಾರ್ ಅವರು ಸತತ 23 ವರ್ಷಗಳಿಂದ ಅದೇ ವಾಹಿನಿಯಲ್ಲಿ ಮುಂದುವರಿದಿದ್ದಾರೆ. 2001ರಿಂದ 2 ವರ್ಷ ಈಟಿವಿ ಅನ್ನದಾತ ಕಾರ್ಯಕ್ರಮಕ್ಕಾಗಿಯೂ ವರದಿ ಮಾಡಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ವರದಿಗಾಗಿ ಚಂದನ ವಾಹಿನಿಯಿಂದ ಮನ್ನಣೆ ದೊರೆತಿದೆ. 1984ರಲ್ಲಿ ಧಾರವಾಡದಲ್ಲಿ ಪೋಟೋಗ್ರಫಿಯೊಂದಿಗೆ ವೃತ್ತಿ ಬದುಕು ಆರಂಭಿಸಿ ಬಳಿಕ ಸ್ವಂತ ಸ್ವುಡಿಯೋ ಆರಂಭಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಅವರಿಗೆ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೇರ, ದಿಟ್ಟ ವರದಿಗಾರಿಕೆಯ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಪತ್ರಕರ್ತ, ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ ಅವರ ಹತ್ತಾರು ವರದಿಗಳು ಮಹತ್ತರ ಸಾಮಾಜಿಕ ಬದಲಾವಣೆಗೆ ಕಾರಣವಾಗಿರುವುದಲ್ಲದೇ, ಆಡಳಿತಯಂತ್ರವನ್ನು ನಿರಂತರವಾಗಿ ಎಚ್ಚರಿಸುತ್ತಲೇ ಬಂದಿದೆ. ಹಕ್ಲಾಡಿ ಅವರಿಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯು ಕೊಡಮಾಡುವ ಆರನೇ ವರ್ಷದ `ಕಡಲ ತೀರದ ಭಾರ್ಗವ ಡಾ.ಕೆ.ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವ ನಿಲುವು ಇದ್ದರೂ ಕೂಡಾ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗದೇ ಇರುವುದನ್ನು ಕಾಣುತ್ತೇವೆ. ವ್ಯವಸ್ಥೆಯೊಳಗಿರುವ ಭ್ರಷ್ಟಚಾರ ಹೊರ ಬಂದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಪಂಚಾಯತಿ ಪ್ರತಿನಿಧಿಗಳು ಕಾಯ್ದೆಗಳನ್ನು ತಿಳಿದುಕೊಂಡು ತಮ್ಮ ಹಕ್ಕು, ಕರ್ತವ್ಯಗಳನ್ನು ಪಾಲಿಸಬೇಕು. ಆ ಹಿನ್ನೆಲೆಯಲ್ಲಿ ’ಜನಾಧಿಕಾರ’ ಕೃತಿ ಮಾರ್ಗದರ್ಶಿಯಾಗಬಲ್ಲದು ಎಂದು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು. ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನ ಮತ್ತು ಪಂಚಾಯತ್ ರಾಜ್ ಒಕ್ಕೂಟ ಇವರ ಸಹಕಾರದೊಂದಿಗೆ ಕುಂದಾಪುರ ತಾಲೂಕು ಪಂಚಾಯತಿ ಸಭಾಭವನದಲ್ಲಿ ನಡೆದ ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಪ್ರಕಟಿಸಿರುವ ಪಂಚಾಯತ್ ರಾಜ್ ತಜ್ಞ ಎಸ್.ಜನಾರ್ದನ ಮರವಂತೆ ಸಂಕಲಿಸಿರುವ ಜನಾಧಿಕಾರ ಗ್ರಾಮ ಪಂಚಾಯಿತಿ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರಗಳು ಜನಹಿತವಾಗಿ ಕೆಲಸ ಮಾಡಬೇಕು. ಆದರೆ ಇವತ್ತು ಕೆಳಸ್ತರದಿಂದ ಲೋಕಸಭೆಯ ತನಕ ಮನಸ್ಸು ಬಿಚ್ಚಿ ಮಾತನಾಡುವ ಸ್ಥಿತಿ ಇದ್ದಂತಿಲ್ಲ. ಕೆಲವೊಂದು ಬಾರಿ ಅಧಿಕಾರವನ್ನು ಅಧಿಕಾರಿಗಳು ಕಬಳಿಸುತ್ತಾರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಭಿನವ ಕಲಾ ತಂಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಕುಂದಾಪುರದ ವಿಠಲವಾಡಿಯಲ್ಲಿ ನಡೆಯಿತು. ಕುಂದಗನ್ನಡದ ರಾಯಾಭಾರಿ ಅಧ್ಯಾಪಕರು ಮನು ಹಂದಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನಾಟಕ ನಿರ್ದೇಕರಾದ ರಾಮಚಂದ್ರ ಉಡುಪ ವಹಿಸಿದ್ದರು. ಕಲಾ ತಂಡದ ಚೊಚ್ಚಲ ನಾಟಕ ಕೃತಿ ‘ರತ್ನ ಶ್ಯಾಮಿಯಾನ’ ಇದರ ಬಿಡುಗಡೆಯನ್ನು ದಿನೇಶ ಗೋಡೆ ನೆರವೇರಿಸಿದರು. ಸಂಸ್ಥೆಯ ಸಾಮಾಜಿಕ ಜಾಲತಾಣವನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ರಾಮಚಂದ್ರ ಉಡುಪ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಂಸ್ಥೆಯ ಸ್ಥಾಪಕರಾದ ನಾಗರಾಜ ವಿಠಲವಾಡಿ, ಗುರು ಕುಂದಾಪುರ, ಉದಯ ಪೂಜಾರಿ, ಉಪಸ್ಥಿತರಿದ್ದರು. ಶ್ರೀನಿವಾಸ ಪೈ ಸ್ವಾಗತಿಸಿದರು, ಚೈತ್ರ ಕಾರ್ಯಕ್ರಮ ನಿರೂಪಿಸಿದರು, ಗುರು ಕುಂದಾಪುರ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ವತಿಯಿಂದ ಕೋಟೇಶ್ವರದ ಗಣೇಶ್ ಕಲ್ಪತರು ಇಂಡಸ್ಟ್ರೀಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಕುಂದಾಪುರದ ನಂದಾ ಡೆಂಟಲ್ ಕ್ಲಿನಿಕ್‌ನ ವೈದ್ಯರಾದ ಡಾ. ಸ್ಮಿತಾ ಆರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಕಲ್ಪತರು, ಕಾರ್ಯದರ್ಶಿ ರಾಜೇಂದ್ರ, ಮಾಜಿ ಅಧ್ಯಕ್ಷರಾದ ರಾಜೀವ ಕೋಟ್ಯಾನ್, ಕೋಶಾಧಿಕಾರಿ ಕಿರಣ್ ಕುಮಾರ್, ಮಾಜಿ ಅಧ್ಯಕ್ಷರಾದ ರಮಾನಂದ ಇಂಜಿನಿಯರ್, ಸದಸ್ಯರಾದ ನಾರಾಯಣ ಶೆಟ್ಟಿ ಉಪಸ್ಥಿತರುದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕೈಗಾರಿಕಾ ಭೇಟಿಯ ಭಾಗವಾಗಿ ಕೋಟೇಶ್ವರದ ಸನ್‌ರೈಸ್ ಪೈಪ್ ಇಂಡಸ್ಟ್ರಿ ಮತ್ತು ರಾಜಾರಾಮ್ ಪೊಲಿಮರ‍್ಸ್ ಇಂಡಸ್ಟ್ರಿ ಕೋಟೇಶ್ವರ ಇಲ್ಲಿಗೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸನ್‌ರೈಸ್ ಕೈಗಾರಿಕೆಯ ವ್ಯವಸ್ಥಾಪಕರಾದ ಕುಮಾರ್ ಹಾಗೂ ರಾಜರಾಮ್ ಪೊಲಿಮರ‍್ಸ್ ಇಂಡಸ್ಟ್ರಿಯ ಪಾಲುದಾರರಾದ ವಿಘ್ನೇಶ್ ಕಾಮತ್‌ರವರು ಉತ್ಪನ್ನಗಳ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆಯ ಕುರಿತು ಉಪನ್ಯಾಸ ನೀಡಿದರು. ಜೊತೆಗೆ ಯಂತ್ರಗಳ ಕಾರ್ಯವೈಖರಿಯನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ಅವಕಾಶ ಮತ್ತು ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿಗೆ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ವೇತಾ ಯು. ಶೆಟ್ಟಿಯವರು ವಂದಿಸಿದರು. ಕಾಲೇಜಿನ ವತಿಯಿಂದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಚೈತ್ರಾ ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಿರುಷಾ ಶೆಟ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2020ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಲ್ಕು ಸಂಘ ಸಂಸ್ಥೆಗಳು ಸೇರಿ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗಿದೆ. ದೈವಾರಾಧನೆ, ರಂಗಭೂಮಿ, ಸಾಹಿತ್ಯ, ಯಕ್ಷಗಾನ, ಪತ್ರಿಕೋದ್ಯಮ, ಶೈಕ್ಷಣಿಕ, ಸಂಕೀರ್ಣ, ಯೋಗ, ಕಲೆ – ಕರಕುಶಲ, ಕಲೆ ಕಾಷ್ಟ ಶಿಲ್ಪ, ಕಲೆ – ಪೆನ್ಸಿಲ್ ಲೆಡ್ ಕಲೆ, ಕಲೆ – ಶಿಲ್ಪಕಲೆ, ವೈದ್ಯಕೀಯ, ಸಂಗೀತ, ನೃತ್ಯ, ಸಮಾಜಸೇವೆ, ಕ್ರೀಡೆ, ಬಾಲಪ್ರತಿಭೆ, ಸಂಘ ಸಂಸ್ಥೆ ವಿಭಾಗಗಳಿಂದ ಒಟ್ಟು 40 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೈವಾರಾಧನೆ: ರಂಗ ಪಾಣ,  ಮೋಂಟು ಪಾಣರ, ಮಂಜುನಾಥ ಶೇರಿಗಾರ ರಂಗಭೂಮಿ: ಪಾರಂಪಳ್ಳಿ ನರಸಿಂಹ ಐತಾಳ್,  ವಸಂತ ಪೂಜಾರಿ ಮುನಿಯಾಲು,  ದಿನಕರ ಭಂಡಾರಿ ಕಣಜಾರು ಸಾಹಿತ್ಯ: ನವೀನ್ ಸುವರ್ಣ ಪಡ್ರೆ ಯಕ್ಷಗಾನ: ಸುದರ್ಶನ ಉರಾಳ,  ಶಶಿಕಲಾ ಪ್ರಭು, ನಾಗೇಶ್ ಗಾಣಿಗ ಪತ್ರಿಕೋದ್ಯಮ: ಉದಯ ಪಡಿಯಾರ್,   ಆರ್. ಶ್ರೀಪತಿ ಹೆಗಡೆ ಹಕ್ಲಾಡಿ ಶೈಕ್ಷಣಿಕ: ಡಾ. ಕೆ ಗೋಪಾಲಕೃಷ್ಣ ಭಟ್,  ಡಾ. ಸುಧಾಕರ ಶೆಟ್ಟಿ, …

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ:  ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ಮುಂದಿನ ಮೂರು ವರ್ಷಗಳ ಆಡಳಿತಾವಧಿಗೆ 9 ಮಂದಿ ಸದಸ್ಯರನ್ನೊಳಗೊಂಡ ನೂತನ ವ್ಯವಸ್ಥಾಪನ ಸಮಿತಿಯನ್ನು ರಾಜ್ಯ ಸರಕಾರ ಧಾರ್ಮಿಕ ಪರಿಷತ್ ನೇಮಕ ಮಾಡಿ ಆದೇಶ ಹೊರಡಿಸಿದ್ದು, ವ್ಯವಸ್ಥಾಪನ ಸಮಿತಿಯ ಪ್ರಥಮ ಸಭೆಯಲ್ಲಿ ಆನಂದ್ ಸಿ. ಕುಂದರ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸದಸ್ಯರೆಲ್ಲರೂ ಸರ್ವಾನುಮತದಿಂದ ಪುನರಾಯ್ಕೆ ಮಾಡಿದ್ದಾರೆ. ಒಟ್ಟು 43 ಮಂದಿ ಆಕಾಂಕ್ಷಿಗಳು ಸಮಿತಿಯ ಸದಸ್ಯರಾಗಲು ಅರ್ಜಿ ಸಲ್ಲಿಸಿದ್ದು ಇವರಲ್ಲಿ ಓರ್ವ ಪ್ರಧಾನ ಅರ್ಚಕರು ಹಾಗೂ ಸಾಮಾನ್ಯ ವರ್ಗದಿಂದ ಆನಂದ್ ಸಿ. ಕುಂದರ್, ರಾಮದೇವ ಐತಾಳ್, ಸುಬ್ರಾಯ ಆಚಾರ್ಯ, ಸತೀಶ್ ಹೆಗಡೆ, ಚಂದ್ರ ಪೂಜಾರಿ ಕದ್ರಿಕಟ್ಟು ಹಾಗೂ ಮಹಿಳಾ ಮೀಸಲಾತಿಯಲ್ಲಿ ಜ್ಯೋತಿ ಬಿ. ಶೆಟ್ಟಿ ಸುಶೀಲಾ ಸೋಮಶೇಖರ್, ಎಸ್. ಸಿ ಕೋಟಾದಿಂದ ಸುಂದರ್ ಕೆ. ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ₹50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮ ಪಂಚಾಯಿತಿಯ ಕಲ್ಲಾನಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದಿಂದ ಬೇಲೆಬದಿಗೆ ಹೋಗುವ ರಸ್ತೆ ಕಾಮಗಾರಿಗೆ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ರಸ್ತೆಗಳು ಊರಿನ ಜೀವನಾಡಿಯಿದ್ದಂತೆ. ಊರಿನ ವಿವಿಧ ರಂಗಗಳ ಅಭಿವೃದ್ಧಿಯಲ್ಲಿ ಉತ್ತಮ ರಸ್ತೆಗಳು ಪ್ರಮುಖ ಪಾತ್ರ ವಹಿಸುತ್ತವೆ ರಾಜ್ಯ ಸರ್ಕಾರ ರಸ್ತೆ ನಿರ್ಮಾಣ, ದುರಸ್ತಿ ಮತ್ತು ಉನ್ನತೀಕರಣಕ್ಕೆ ಆದ್ಯತೆ ನೀಡುತ್ತಿದೆ. ಈ ವಿಚಾರದಲ್ಲಿ ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೂ ಆದ್ಯತೆ ನೀಡಲಾಗುತ್ತಿದೆ’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ. ಜಿ ಪುತ್ರನ್, ರಾಜ್ಯ ಯೋಜನಾ ಮಂಡಳಿ ಸದಸ್ಯೆ ಪ್ರಿಯದರ್ಶಿನಿ ಬೆಸ್ಕೂರ್, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ. ತ್ರಾಸಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಿಥುನ್ ದೇವಾಡಿಗ, ಜಿಲ್ಲಾ ಪಂಚಾಯಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಶ್ರೀ ವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ – ಯಡ್ತಾಡಿ ಇದರ ನೂತನ ಅಧ್ಯಕ್ಷರಾಗಿ ರತ್ನಾಕರ ಪೂಜಾರಿ , ಕಾರ್ಯದರ್ಶಿಯಾಗಿ ಪ್ರಶಾಂತ್ ಸೂರ್ಯ ಇವರು ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಶ್ ದೇವಾಡಿಗ, ಕೋಶಾಧಿಕಾರಿಯಾಗಿ ಜಗದೀಶ್ ನಾಯ್ಕ, ಜೊತೆ ಕಾರ್ಯದರ್ಶಿಯಾಗಿ ಪ್ರಭಾಕರ್ ಶಾಮಂತ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಘವೇಂದ್ರ ಸಿ. ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಕಾರ್ತಿಕ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ವಿಶ್ವನಾಥ ಅವರನ್ನು ನೂತನವಾಗಿ ಮುಂದಿನ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More