Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವ ಹಿಂದೂ ಪರಿಷತ್  ಬಜರಂಗದಳ ನಾವುಂದ ಘಟಕದ ವತಿಯಿಂದ ನಾವುಂದ ಕರಾವಳಿ ಮಾರ್ಗದಲ್ಲಿ ಸ್ವಚತಾ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು, ಕಾರ್ಯಕ್ರಮದಲ್ಲಿ ಬಜರಂಗದಳ ಬೈಂದೂರು ತಾಲೂಕು ಸುರಕ್ಷಾ ಪ್ರಮುಖ್ ಮಹೇಶ್ ಖಾರ್ವಿ, ಸಂಪರ್ಕ ಪ್ರಮುಖ್ ಸತೀಶ್ ನಾವುಂದ, ನಾವುಂದ ಘಟಕದ ಅಧ್ಯಕ್ಷರಾದ ಮುತ್ತ ಎಸ್. ಎo., ಕಾರ್ಯದರ್ಶಿ ಅಜಿತ್ ಸಂಚಾಲಕರಾದ ಜಗದೀಶ್, ಸಹ ಸಂಚಾಲಕ ಸತೀಶ್ ಆರ್, ಸೇವಾ ಪ್ರಮುಖ್ ಕೇಶವ, ಸಾಪ್ತಾಹಿಕ ಮಿಲನ್ ಪ್ರಮುಖ್ ಸುಮಂತ್, ಅಖಾಡ ಪ್ರಮುಖ್ ಸುಬ್ರಮಣ್ಯ ಕೆ. ಮತ್ತು ಕಾರ್ಯಕರ್ತರಾದ ಕೃಷ್ಣ, ಪ್ರವೀಣ, ಉಮೇಶ್, ಗಣಪತಿ, ವಿಠಲ, ಸುಧಾಕರ, ನಾಗರಾಜ, ಸಂತೋಷ್, ಗಣೇಶ ಇತರರು ಪಾಲ್ಗೊಂಡಿದ್ದರು,

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಹನಾ ಕನ್ವೆನ್ಷನ್ ಸೆಂಟರ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಿತ್ರಕೂಟ ಕುಂದಾಪುರ ಹಾಗೂ ಸ್ನೇಹಮಹಿ ಟ್ರಸ್ಟ್ ವತಿಯಿಂದ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯ್ ಎಸ್ . ಪೂಜಾರಿ ಯವರಿಗೆ ಸಹನಾ ಸುರೇಂದ್ರ ಶೆಟ್ಟಿ ಹಾಗೂ ಸಂತ ಅಂತೋನಿ ಕಂಪನಿಯ ರೋವನ್ ಡಿಕೋಸ್ಟಾ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಸನ್ಮಾನವನ್ನು ಮಾಡಿದ ಯುವ ಉದ್ಯಮಿ ರೋಟರಿ ಮಾಜಿ ಗವರ್ನರ್ ಅಭಿನಂದನ ಶೆಟ್ಟಿ ವಿಜಯರವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ ವಿಜಯ ರವರಿಗೆ ಜವಾಬ್ದಾರಿ ಹಾಗೂ ಕಾರ್ಯವನ್ನು ವಿವರಿಸಿದರು. ಲಕ್ಷ್ಮಣ ಶೆಟ್ಟಿ ಹಾಗೂ ವಿಕಾಸ ಹೆಗ್ಡೆ ಅಭಿನಂದಿಸಿದರು. ಸತೀಶ್ ಕೋಟ್ಯಾನ್ ಹಾಗೂ ರವಿಕಿರಣ ಡಿಕೋಸ್ಟಾ ಶುಭಾಶಯ ಸಲ್ಲಿಸಿದರು. ಸನ್ಮಾನಕ್ಕೆ ಉತ್ತರಿಸಿದ ವಿಜಯರವರು ತಾನು ನಡೆದು ಬಂದ ರಾಜಕೀಯ ಹಾಗೂ ಸಾಮಾಜಿಕ ಜೀವನದ ಬಗ್ಗೆ ಮನದಾಳದ ಮಾತುಗಳನ್ನಾಡಿ ತಮ್ಮ ಸೇವೆಯನ್ನು ಇನ್ನೂ ಮುಂದುವರೆಸುವುದಾಗಿ ಹೇಳಿ ಮಾನ್ಯ ಶಾಸಕರಾದ ಶ್ರೀನಿವಾಸ ಶೆಟ್ಟಿ ಹಾಗೂ ರವಿಕಿರಣ ಕೊಡ್ಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಡಿವೈಎಫ್‌ಐ, ದಲಿತ ಸಂಘರ್ಷ ಸಮಿತಿ ಸಂಯುಕ್ತ ಆಶ್ರಯಲ್ಲಿ ನಡೆದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಉಡುಪಿ ಜಿಲ್ಲಾ ಮುಖಂಡ ಕೆ.ವಿಕಾಸ್ ಹೆಗ್ಡೆ ಮಾತನಾಡಿ ಪ್ರಧಾನಿ ದಿ. ಇಂದಿರಾ ಗಾಂಧಿ ಕಾಯ್ದೆ ಮೂಲಕ ಉಳುವವನನ್ನು ಹೊಲದೊಡೆಯ ಮಾಡಿದ್ದರು, ಮುಖ್ಯಮಂತ್ರಿ ದಿ. ದೇವರಾಜ ಅರಸು ಜೀತಪದ್ಧತಿ ಕಿತ್ತೊಗೆದು ಭೂಮಾಲೀಕರನ್ನಾಗಿಸುವ ದಿಟ್ಟ ಸಂಕಲ್ಪ ಮಾಡಿದ್ದರು ಎನ್ನುವುದನ್ನು ಜನರು ನೆನಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಸಿಪಿಎಂ ಮುಖಂಡ ಕೆ, ಶಂಕರ್, ‘ರೈತರನ್ನು ಬದುಕನ್ನೇ ಕಸಿಯಲು ಹೊರಟಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳನ್ನು ಮನೆಗೆ ಕಳುಹಿಸಲು ಇನ್ನೊಂದು ಚುನಾವಣೆಯವರೆಗೆ ಕಾಯುವ ಅವಶ್ಯಕತೆ ಇಲ್ಲ’ ಎಂದರು.ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ಅಧ್ಯಕ್ಷ ಉದಯ್ಕುಮಾರ ತಲ್ಲೂರ್, ‘ರೈತ ವಿರೋಧಿ ಕಾಯ್ದೆ ವಿರೋಧಿಸದಿದ್ದರೆ, ತುತ್ತು ಊಟಕ್ಕೂ ಪರದಾಡಬೇಕಾಗುತ್ತದೆ’ ಎಂದರು. ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ:  ಗಂಗೊಳ್ಳಿ – ಕುಂದಾಪುರ ಸಂಪರ್ಕ ಸೇತುವೆ ಹೋರಾಟ ಸಮಿತಿ ವತಿಯಿಂದ ಗಂಗೊಳ್ಳಿ -ಕುಂದಾಪುರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಕಳೆದ ವರ್ಷಗಳಿಂದ ಗಂಗೊಳ್ಳಿ – ಕುಂದಾಪುರ ಸಂಪರ್ಕ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಲೇ ಬಂದಿದ್ದಾರೆ. ಗಂಗೊಳ್ಳಿ ಗ್ರಾಪಂ ಮತ್ತು ಕುಂದಾಪುರ ಪುರಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ವ್ಯಾಪಾರ, ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಹೀಗಾಗಿ ಗಂಗೊಳ್ಳಿ-ಕುಂದಾಪುರ ಸಂಪರ್ಕ ಸೇತುವೆ ನಿರ್ಮಿಸುವ ಸಂಬಂಧ ಗ್ರಾಮ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಂಡು ಸರಕಾರ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿ ಒತ್ತಡ ಹೇರಬೇಕು. ಶಾಸಕರು, ಸಂಸದರು ಗ್ರಾಮಸ್ಥರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಸಂಪರ್ಕ ಸೇತುವೆ ನಿರ್ಮಾಣವಾಗುವ ಭರವಸೆ ಇದೆ ಎಂದು ಸಮಿತಿ ಅಧ್ಯಕ್ಷ ಬಿ.ಸದಾನಂದ ಶೆಣೈ ಒತ್ತಾಯಿಸಿದರು. ಮನವಿ ಸ್ವೀಕರಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ವತಿಯಿಂದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿನಮನ ಕಾರ್ಯಕ್ರಮ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ನೆಡೆಯಿತು. ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮಾತನಾಡಿ, ಜಗತ್ತಿನ ಶ್ರೇಷ್ಠ ಗಾಯಕರಾಗಿ, ಯಾರೂ ಮರಿಯಲಾರದ ಸಾಧನೆ ಮಾಡಿ ೫೫ ವರ್ಷಗಳಲ್ಲಿ 40 ಸಾವಿರಕ್ಕಿಂತ ಅಧಿಕ ಹಾಡುಗಳನ್ನು ಹಾಡಿದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ದಕ್ಷಿಣ ಭಾರತಕ್ಕೆ ಸೀಮಿತರಾಗದೇ ಜಗತ್ತಿನೆಲ್ಲೆಡೆ ಗುರುತಿಸಿಕೊಂಡವರು ಎಂದು ಹೇಳಿದರು. ರೋಟರಿ ಕ್ಲಬ್‌ನ ಡಾ. ರಾಜಾರಾಮ್ ಶೆಟ್ಟಿ ಮಾತನಾಡಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಸೂಯೆ ಇಲ್ಲದ ಸಂಗೀತ ಸಾಮ್ರಾಜ್ಯ ಕಟ್ಟಿಕೊಂಡ ಧೀಮಂತ ಗಾಯಕ. ಆಡಂಭರ ಇಲ್ಲದ ವ್ಯಕ್ತಿತ್ವ, ಪ್ರತಿ ನಟನಿಗೂ ಬೇಕಾದ ಧ್ವನಿ ಕೊಡುವ ವಿಶಿಷ್ಟ ಸ್ವರ ಸಾಮರ್ಥ್ಯ ಹೊಂದಿದ ಅಪರೂಪದ ವ್ಯಕ್ತಿ ಎಂದರು. ಉದಯ್ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘ ವಕ್ತಾರ ಕೆ. ವಿಕಾಸ ಹೆಗ್ಡೆ, ಮನೋಜ್ ನಾಯರ್ , ಡಿ. ಸತೀಶ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಳ್ವೆ ಪೇಟೆಯ ಆಸುಪಾಸಿನ ಒಂದು ಕಿ.ಮೀ ವ್ಯಾಪ್ತಿಯ ಅಲ್ಲಲ್ಲಿ ಅನೇಕ ಹೊಂಡಗಳು ಸೃಷ್ಟಿಯಾಗಿದ್ದು ವಾಹನ ಸವಾರರು ನಿತ್ಯ ಯಾತನೆ ಅನುಭವಿಸುವಂತಾಗಿದೆ. ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿ – 90ರ ಬೆಳ್ವೆ ಪೇಟೆ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೊಲ್ಲುರು – ಶೃಂಗೇರಿಯನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಯಾಗಿದ್ದರೂ ಇವರೆಗೆ ದುರಸ್ತಿ ಭಾಗ್ಯ ಕಂಡಿಲ್ಲ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತಿಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರ ವತಿಯಿಂದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಸಂಸ್ಮರಣೆ ಕಾರ್ಯಕ್ರಮ ಪಕ್ಷದ ಕಚೇರಿಯಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರ್ ಅಂಕದಕಟ್ಟೆ ಮಾತನಾಡಿ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರು ಉತ್ತಮ ಸಾಹಿತಿ, ಅಪ್ರತಿಮ ದೇಶಭಕ್ತ, ಆದರ್ಶ ಚಿಂತಕ, ಸಮಾಜ ಸುಧಾರಕ, ಪ್ರಬುದ್ದ ತತ್ವಜ್ಞಾನಿ, ಮೇಧಾವಿ ಅರ್ಥಶಾಸ್ತ್ರಜ್ಞ, ರಾಷ್ಟ್ರ ನಿರ್ಮಾಪಕ ಗುಣಗಳನ್ನೊಂಡ ಮಹಾನ್ ವ್ಯಕ್ತಿ. ಜನಸಂಘದಂತಹ ರಾಷ್ಟ್ರೀಯ ರಾಜಕೀಯ ಪಕ್ಷದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿಪ್ರಬುದ್ದ ಭಾರತ ನಿರ್ಮಾಣದ ಹೋರಾಟ ನಡೆಸಿದ್ದರು ಎಂದು ಹೆಳಿದರು. ಭಾರತೀಯ ಜನತಾ ಪಕ್ಷದ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಗುಣರತ್ನ, ಪುರಸಭೆ ಸದಸ್ಯರಾದ ಸಂದೀಪ್ ಖಾರ್ವಿ, ಪ್ರಭಾಕರ್ ವಿ., ಅಶ್ವಿನಿ ಪ್ರದೀಪ್, ಶ್ವೇತಾ ಸಂತೋಷ್, ವೀಣಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಬಹುದೊಡ್ಡ ಸೇತುವೆಗಳಲ್ಲಿ ಒಂದಾದ ಅರಾಟೆ ಸೇತುವೆ ಬಿರುಕು ಬಿಟ್ಟಿದ್ದು, ವಾಹನದ ಸವಾರರ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಮುಳ್ಳಿಕಟ್ಟೆ ಸಮೀಪ ಚತುಷ್ಟಥ ಕಾಮಗಾರಿ ಸಂದರ್ಭ ಹಳೆ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಂದು ಹೊಸ ಸೇತುವೆಯ ಪಿಲ್ಲರ್ ಮೇಲಿನ ಜೋಡಣೆಯಲ್ಲಿ ಬಿರುಕು ಬಿಟ್ಟಿದ್ದು, ರಾಡ್‌ಗಳೂ ತುಂಡಾಗಿವೆ. ಸದ್ಯ ವಾಹನಗಳನ್ನು ಹಳೆ ಸೇತುವೆಯ ಮೂಲಕ ತೆರಳಲು ಅನುವು ಮಾಡಿಕೊಡಲಾಗಿದೆ. ಅರಾಟೆ ಸೇತುವೆಯ ಆರಂಭದಲ್ಲಿ ಈ ಹಿಂದೆಯೂ ಕುಸಿತ ಉಂಟಾಗಿತ್ತು. ಇದೀಗ ಇನ್ನೊಂದು ಕಡೆಯಲ್ಲಿ ಸೇತುವೆ ಬಿರುಕು ಉಂಟಾಗಿದ್ದು, ಹೊಸತರಲ್ಲೇ ಸೇತುವೆ ಕುಸಿದಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಕಾಮಗಾರಿ ನಡೆದಿದೆಯೇ ಎಂಬ ಬಗ್ಗೆ ತನಿಖೆ‌ ನಡೆಸಿ ಗುತ್ತಿಗೆ ಕಂಪೆನಿಯ ವಿರುದ್ದ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಹಾಗೂ ಹೈವೇ ಪ್ಯಾಟ್ರೋಲ್ ಭೇಟಿ ನೀಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಂಬಯಿ: ಮುಂಬಯಿ ಮಹಾನಗರದ ಪ್ರತಿಷ್ಠಿತ ಸಮುದಾಯ ಸಂಘಟನೆಗಳಲ್ಲಿ ಒಂದಾದ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಎನ್. ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸಮುದಾಯ ಸಂಘಟನೆಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅಶೋಕ ಎನ್. ಪೂಜಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವವಿರುವ ಇವರು ಸಂಘದ ನೂತನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುತ್ತಾರೆ ಎಂದು ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ತಿಳಿಸಿರುತ್ತಾರೆ. ಬೈಂದೂರು ತಾಲೂಕಿನ ಪಡುಕೋಣೆಯವರಾದ ಅಶೋಕ ಎನ್. ಪೂಜಾರಿ ಕಳೆದೆರಡು ದಶಕಗಳಿಂದ ಮುಂಬಯಿ ಮಹಾನಗರದಲ್ಲಿ ನೆಲೆಸಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದು ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಸಮುದಾಯ ಸಂಘಟನೆಯಲ್ಲಿ ವಿಶೇಷ ಒಲವು ಹೊಂದಿರುವ ಇವರು ಸಂಘದ ಕ್ರಿಯಶೀಲ ಸದಸ್ಯನಾಗಿರುವುದಲ್ಲದೆ ಒರ್ವ ಸಂಘಟಕನಾಗಿ ನಿಷ್ಠಾವಂತ ಸಮಾಜಸೇವಕನಾಗಿ ಸಮುದಾಯದಲ್ಲಿ ಗುರುತಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನ ರಾಜ್ಯದ ಸರಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಅನ್‌ಲೈನ್ ನಾನ್-ಇಂಟರಾಕ್ಟೀವ್ ಕೌನ್ಸಲಿಂಗ್ ಮೂಲಕ ಎರಡು ವರ್ಷಗಳ ಐ.ಟಿ.ಐ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ / ತಾಂತ್ರಿಕ ವಿಷಯಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರೀ ಸ್ಕೀಂ ರಡಿಯಲ್ಲಿ 2 ನೇ ವರ್ಷ / 3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸೆಪ್ಟಂಬರ್ 28 ರಿಂದ ಅಕ್ಟೋಬರ್ 6 ರ ವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆಯ ಅಧಿಸೂಚನೆಯ ವಿವರಗಳನ್ನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ dtek.karnataka.gov.in ಅಥವಾ dtetech.karnataka.gov.in/kartechnical ನಿಂದ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಥವಾ ಸಮೀಪದ ಸರ್ಕಾರಿ/ ಅನುದಾನಿತ ಪಾಲಿಟೆಕ್ನಿಕ್‌ಗಳಿಗೆ ಭೇಟಿ ನೀಡಿ ಸರ್ಜಿ ಸಲ್ಲಿಸಲು ಹಾಗೂ ಆಪ್ಷನ್ ಎನ್ಟಿç ಯನ್ನು ಆನ್‌ಲೈನ್‌ನಲ್ಲಿ ದಾಖಲಿಸಬಹುದು. ಪ್ರಸಕ್ತ ಸಾಲಿನ ಪ್ರಥಮ ಸೆಮಿಸ್ಟರ್…

Read More