Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕೆಗಾ೯ಲ್ ಗ್ರಾಮದ ಉದ್ಯೋಗ ಖಾತ್ರಿ ಕೂಲಿಕಾರರ ಸಭೆ ನಡೆಯಿತು ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ್ ಕೋಣಿ ಉದ್ಘಾಟಿಸಿ ಮಾತನಾಡಿ, ನರೇಗಾ ಕೂಲಿಕಾರರಿಗೆ ಬೇಡಿಕೆ ಆಧಾರದಲ್ಲಿ ಈ ಕೂಡಲೇ ಕೆಲಸ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು .ಇಲ್ಲವಾದರೆ ಆಗಸ್ಟ್ 9ರಂದು ಕೂಲಿಕಾರರ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು. ಮುಖಂಡರಾದ ನಾಗರತ್ನ ನಾಡ, ವೀಣಾ ಭಂಡಾರಿ ,ಜಯಂತಿ, ಸಾಕು, ಶ್ರೀಮತಿ, ಸುಶೀಲ, ನೇತ್ರಾವತಿ, ನಾಗರತ್ನ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಕಾಲ ಯೋಜನೆಯಡಿಯ ವಿಳಂಬ ರಹಿತ ಅರ್ಜಿ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆಯು ಜುಲೈ ಮಾಹೆಯಲ್ಲಿಯೇ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಪ್ರಥಮ ಸ್ಥಾನ ಹೊಂದಬೇಕು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಕಾಲ ಯೋಜನೆಯು ನಾಗರಿಕರಿಗೆ ಸರಕಾರದ ಸೇವೆಯನ್ನು ನಿಗದಿತ ಕಾಲಾವಧಿಯಲ್ಲಿ ಒದಗಿಸುವ ಪ್ರಮುಖ ಯೋಜನೆಯಲ್ಲಿ ಒಂದಾಗಿದ್ದು, ಸಾರ್ವಜನಿಕರು ಸರಕಾರದ 101 ವಿವಿಧ ಇಲಾಖೆಗಳಲ್ಲಿ 1,112 ಸೇವೆಗಳಿಗೆ ನಿಗದಿತ ಪ್ರಮಾಣದಲ್ಲಿ ಅರ್ಜಿ ಸಲ್ಲಿಸಿ, ಸೇವೆಯ ಪ್ರಯೋಜನೆವನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಸಾರ್ವಜನಿಕರು ಸಕಾಲದಡಿಯಲ್ಲಿ ನಿಗದಿತ ಅರ್ಜಿಯನ್ನು ಸಲ್ಲಿಸಿದಾಗ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದಾಗ ಶೀಘ್ರದಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಎಂದ ಅವರು ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಅವುಗಳನ್ನು ತಡವಿಲ್ಲದೇ ವಿಲೇವಾರಿ ಮಾಡಬೇಕು ಎಂದರು. ವಿವಿಧ ಸೇವೆಗಳನ್ನು ಪಡೆಯಲು ನಾಗರಿಕರು ಸಲ್ಲಿಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಡ್ತಾಡಿ ಯುವವಾಹಿನಿ ಘಟಕದಿಂದ ಆಸಾಡಿಯಂಗ್ ಒಂದ್ ದಿನ ಹಳಿ ಹಂಬ್ಲ್ ಕಾರ್ಯಕ್ರಮ ನಡೆಯಿತು. ನಾವೆಲ್ಲ ಎಷ್ಟೆಷ್ಟೋ ಹಳೆ ನೆನಪುಗಳನ್ನು ಮರೆಯುತ್ತಾ ಕೆಲಸದ ಜಂಜಾಟದಲ್ಲಿ ಸಿಲುಕಿದ್ದೇವೆ. ಹಿರಿಯರು ಕೂಡಿ ಸಂಭ್ರಮಿಸುತ್ತಿದ್ದ ರೀತಿ ರಿವಾಜುಗಳನ್ನು ಮೂಲೆ ಗುಂಪಾಗಿರಿಸಿದ್ದೇವೆ. ನಮ್ಮ ಸಂಸ್ಕೃತಿ ಆಚರಣೆಗಳು ನಮಗೆ ತಿಳಿಯದೆ ಮೌನವಾಗಿ ಜೀವನ ಸಾಗಿಸುತ್ತಿದ್ದೆವೆ. ಈ ಬದುಕು ಅಲ್ಪ ಅನಿಸಿದರೂ ಸಂಭ್ರಮಿಸುವ ಸಂಭ್ರಮ ನಮ್ಮಲಿಲ್ಲ. ಮುಂದಿನ ಯುವ ಮನಸ್ಸುಗಳಿಗೆ ಇದನ್ನು ತಲುಪಿಸಿ ಪೂರ್ವಜರ ಆಚಾರ ವಿಚಾರಗಳನ್ನು ಕೊಡುಗೆಗಳನ್ನು ತಿಳಿಸುವ ಜವಬ್ದಾರಿ ನಮ್ಮ ಮೇಲಿರುವುದು ಸುಳ್ಳಲ್ಲ ಈ ಉದ್ದೇಶವಿಟ್ಟುಕೊಂಡು ಯುವವಾಹಿನಿ ರಿ. ಯಡ್ತಾಡಿ ಘಟಕ ಹಳೆ ಹಂಬ್ಲ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. 64ಖಾದ್ಯಗಳ ವಿಶೇಷ ತಿನಿಸು ಯುವ ವಾಹಿನಿ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ಒಟ್ಟು64 ತಿಂಡಿ-ತಿನಿಸು-ಪದಾರ್ಥಗಳು ಎಲ್ಲರ ಗಮನ ಸೆಳೆಯಿತು. ಹಳೆ ಕಾಲದಲ್ಲಿ ಮನೆಯಲ್ಲಿ ಮಾಡುತ್ತಿದ್ದ ದಾಸನ್ ಸಪ್ಪಿನ್ ಹಿಟ್, ಪತ್ರೋಡಿ,ಹೊರಳಿ ಬಜ್ಜಿ,ಕ್ಯಾನಿಗೆಂಡಿ ಹಿಟ್,ನುಗ್ಗಿ ಸೊಪಪ್ಪಿನ್ ಒಗ್ರಣಿ, ಬಾಳಿ ದಿಂಡಿನ್ ಪಲ್ಯ,ಶೂಂಠಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉತ್ತಮ ಶಿಕ್ಷಕರು ಸಮಾಜದ ಆಸ್ತಿ ಶಿಕ್ಷಕರು ತಮ್ಮ ಕೆಲಸದಿಂದ ಶಶಕ್ತ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಾರೆ ಅಂತಹ ಶಿಕ್ಷಕರ ಸೇವೆಯನ್ನು ಗುರುತಿಸುವುದು ನಮ್ಮೆಲ್ಲರ ಹೊಣೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಂ. ಮುಂದಿನಮನಿ ತಿಳಿಸಿದರು. ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ ) ಬೆಂಗಳೂರು- ಬೈಂದೂರು ತಾಲೂಕು ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮಯ್ಯಾಡಿಯಲ್ಲಿ ನಡೆದ ಗುರು ಕುಟುಂಬ ಸನ್ಮಾನ – ಶಾಲಾ ಕೈತೋಟಕ್ಕೆ ಗಿಡ ಸಮರ್ಪಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಮೇ, ಜೂನ್, ಜುಲೈ ತಿಂಗಳಲ್ಲಿ ನಿವೃತ್ತರಾದ ಜಯಂತಗೆ ಕೆ. ಎ. ಮುಖ್ಯೋಪಾಧ್ಯಾಯರು ಸ. ಹಿ. ಪ್ರಾ ಶಾಲೆ ಕೆರಾಡಿ. ವಾಸುದೇವ ಎಚ್ ಸ. ಹಿ. ಪ್ರಾ. ಶಾಲೆ ಕೋಟೆಬಾಗಿಲು. ವಿದ್ಯಾ ಲತಾ ಹೆಗ್ಗಡೆ ಸ. ಕಿ. ಪ್ರಾ. ಶಾಲೆ. ಶಿಕ್ಷಕಿ ಶೀಲಾವತಿ ಸ. ಕಿ. ಪ್ರಾ. ಶಾಲೆ ಕೊಡಪಾಡಿ, ವೆಂಕಟರಮಣ ಶಾಸ್ತ್ರಿ ಸ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುನೈಟೆಡ್ ಕಿಂಗ್‌ಡಂನ ಮಧ್ಯಪ್ರಾಂತದ ಡೆನ್ಬಿಯಲ್ಲಿ ಆಲ್ ಕೌಂಟಿ ಕನ್ನಡ ಅಸೋಸಿಯೇಶನ್ ಆಶ್ರಯದಲ್ಲಿ ಭಾನುವಾರ ನಡೆದ ಕನ್ನಡಿಗರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ನೈಋತ್ಯ ಇಂಗ್ಲೆಂಡ್ ತಂಡ ಜಯಶಾಲಿಯಾಯಿತು. ಸೀಮಿತ ಓವರುಗಳ ಈ ಸ್ಪರ್ಧೆಯಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್, ವೇಲ್ಸ್, ಆಗ್ನೇಯ ಇಂಗ್ಲೆಂಡ್, ನೈಋತ್ಯ ಇಂಗ್ಲೆಂಡ್, ಆಂಗ್ಲಿಕನ್ ಇಂಗ್ಲೆಂಡ್, ಮಿಡ್ಲ್ಯಾಂಡ್ಸ್‌ನ ಕನ್ನಡಿಗರ ತಂಡಗಳು ಸ್ಪರ್ಧಿಸಿದ್ದುವು. ವಿಜೇತ ತಂಡವು ಸೆಮಿ ಫೈನಲ್‌ನಲ್ಲಿ ಮಿಡ್ಲ್ಯಾಂಡ್ಸ್ ತಂಡವನ್ನು ಮತ್ತು ಫೈನಲ್‌ನಲ್ಲಿ ಆಂಗ್ಲಿಕನ್ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ವಿಜೇತ ತಂಡದಲ್ಲಿ ಕುಂದಾಪುರ ಮೂಲದ ಪರೀಕ್ಷಿತ್ ಶೆಟ್ಟಿ ಮತ್ತು ಯೋಗೀಂದ್ರ ಮರವಂತೆ ಇದ್ದರು. ಪರೀಕ್ಷಿತ್ ಶೆಟ್ಟಿ ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಮತ್ತು ಯೋಗೀಂದ್ರ ಮರವಂತೆ ಏರ್‌ಬಸ್ ವಿಮಾನ ತಯಾರಿ ಕಂಪನಿಯಲ್ಲಿ ತಂತ್ರಜ್ಞ ಆಗಿದ್ದಾರೆ. ಪರೀಕ್ಷಿತ್ ಶೆಟ್ಟಿ ಪರಿಣಿತ ಯುವ ಆಲ್‌ರೌಂಡರ್. ಎಲ್ಲ ಪಂದ್ಯಗಳ ಬ್ಯಾಟಿಂಗ್, ಬೌಲಿಂಗ್, ಪೀಲ್ಡಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು ಪಂದ್ಯ ಶ್ರೇಷ್ಠ ಆಟಗಾರ ಮತ್ತು ಅತ್ಯುತ್ತಮ ದಾಂಡಿಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಡೀ ದೇಶವನ್ನು ವ್ಯಾಪಿಸಿರುವ ಕೊರೋನಾ ಮಹಾಮಾರಿ ದುಡಿಯುವ ಜನರಿಗೆ ಆದಾಯವೇ ಇಲ್ಲದಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನವೀಯತೆ ಇಲ್ಲದೇ ಪೋಷಕರನ್ನು ಪೀಡಿಸಿ ಶುಲ್ಕ ವಸೂಲಾತಿ ಮಾಡುತ್ತಿರುವುದು ಖಂಡನೀಯ ಎಂದು ಡಿವೈಎಫ್‌ಐ ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಹೇಳಿದರು. ಅವರು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ದುಪ್ಪಟ್ಟು ಶುಲ್ಕ ವಸೂಲಾತಿಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಾತಿಯ ನೆಪದಲ್ಲಿ ಪೋಷಕರಿಗೆ ದೊಡ್ಡ ರೀತಿಯಲ್ಲಿ ಹಿಂಸೆ ಕೊಡುತ್ತಿದೆ. ಬಹುತೇಕ ಶಾಲಾ ಕಾಲೇಜುಗಳಲ್ಲಿ ಡೊನೇಶನ್ ಹಣ ಕೊಡದಿದ್ದರೆ ಆನ್‌ಲೈನ್ ತರಗತಿಯನ್ನು ಸ್ಥಗಿತ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಸಂವಿಧಾನ ನಮಗೆ ಶಿಕ್ಷಣದ ಹಕ್ಕನ್ನು ನೀಡಿದೆ. ಆದರೆ ಸಂವಿಧಾನಕ್ಕೆ ವಿರುದ್ದವಾಗಿ ಸರ್ಕಾರದ ಆಶಯಗಳಿಗೆ, ಶಿಕ್ಷಣ ಇಲಾಖೆಯ ಸುತ್ತೋಲೆಗಳಿಗೆ ವಿರುದ್ದವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರನ್ನು ಸಿಬ್ಬಂದಿಗಳ ಪರವಾಗಿ ಬೀಳ್ಕೊಡಲಾಯಿತು. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಅವರು ಸಿಬ್ಬಂದಿಗಳ ಪರವಾಗಿ ನಿತ್ಯಾನಂದ ಅವರನ್ನು ಗೌರವಿಸಿ ಬೀಳ್ಕೊಟ್ಟರು. ಪೊಲೀಸ್ ಇಲಾಖೆಯಲ್ಲಿ ಒಟ್ಟು 30 ವರ್ಷ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಕಳೆದ ೪ ವರ್ಷಗಳಿಂದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರ ಸೇವೆಯನ್ನು ಸ್ಮರಿಸಿಕೊಂಡ ಉಪನಿರೀಕ್ಷಕ ವಿಜಯ ಅಮೀನ್, ಠಾಣೆಯ ಸಿಬ್ಬಂದಿಗಳಾದ ಸುರೇಂದ್ರ ಮತ್ತು ದಿನೇಶ, ಕೆಎನ್‌ಡಿ ಸಿಬ್ಬಂದಿ ಜಯರಾಜ್ ಅವರು ವಯೋನಿವೃತ್ತಿ ಹೊಂದಿದ ನಿತ್ಯಾನಂದ ಅವರನ್ನು ಅಭಿನಂದಿಸಿದರು. ಶಾರದಾ ನಿತ್ಯಾನಂದ, ಠಾಣೆಯ ಸಿಬ್ಬಂದಿಗಳು, ಕೆಎನ್‌ಡಿ ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಠಾಣೆಯ ಸಿಬ್ಬಂದಿ ಸುರೇಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಕ್ಷಗಾನ ಕರಾವಳಿ ಜನರ ಬದುಕಲ್ಲಿ ಹಾಸುಹೊಕ್ಕಾಗಿದೆ, ಇದಕ್ಕೆ ಜನರು ವಿಶೇಷ ಸ್ಥಾನ ಮಾನ ನೀಡುತ್ತಿದ್ದು, ಯಕ್ಷಗಾನ ಮನೋರಂಜನೆ ಜೊತೆಗೆ ಬದುಕಿಗೆ ಸಾಕಷ್ಟು ಅನುಭವಗಳನ್ನು ನೀಡುತ್ತದೆ. ಯಕ್ಷಗಾನ ಎಷ್ಟೊ ಕಲಾವಿದರ ಬದುಕಿಗೆ ಆಸರೆಯಾಗಿದ್ದು ಅದರಿಂದನೇ ಜೀವನ ಸಾಗಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ಯಕ್ಷಗಾನ ಕಲಾವಿದರ ಬದುಕು ಅತಂತ್ರ ಸ್ಥಿತಿಯಲ್ಲಿ ಇದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಸುರೇಶ್ ಕೋಟ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ ರಿ. ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಇವರ ಆಶ್ರಯದಲ್ಲಿ ನಡೆದ ತಿಂಗಳ ಕಾರ್ಯಕ್ರಮ ಯಕ್ಷ-ಗಾನ-ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಉಪಸ್ಥಿತರಿದ್ದರು. ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಜನ್ಸಾಲೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯದ ಎಲ್ಲಾ ಸದಸ್ಯರಿಗೆ ಆಹಾರ ಕಿಟ್ ವಿರತಣಾ ಕಾರ್ಯಕ್ರಮ ಇಲ್ಲಿನ ಮಾಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಕಿಟ್ ವಿತರಿಸಿ ಮಾತನಾಡಿದ ಬೈಂದೂರು ತಹಶೀಲ್ದಾರರಾದ ಶೋಭಾಲಕ್ಷ್ಮಿ ಎಚ್.ಎಸ್ ಈ ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಂತರ ಕಾಪಾಡಿಕೊಂಡು ಯಾವುದೇ ಸಭೆ ಸಮಾರಂಭದಲ್ಲಿ ಹೆಚ್ಚಿನ ಜನ ಸೇರದೆ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು. ರಾಜ್ಯ ಟೈಲರ್ಸ್ ಅಸೋಸಿಯೇಷನ್ ಬೈಂದೂರು ವಲಯದ ಅಧ್ಯಕ್ಷರಾದ ರಾಜು ಟೈಲರ್ ಕೊಲ್ಲೂರು, ಕಾರ್ಯದರ್ಶಿ ಲಕ್ಷ್ಮಿ ಬೈಂದೂರು. ಬೈಂದೂರು ನಗರ ಸಮಿತಿಯ ಅಧ್ಯಕ್ಷರಾದ ಮಹಾಬಲ ಮೊಗವೀರ ಹಾಗೂ ಏಳು ವಲಯಗಳ ಅಧ್ಯಕ್ಷರು ಕಾರ್ಯದರ್ಶಿ ಉಪಸ್ಥಿತರಿದ್ದರು. ನಾಗೇಂದ್ರ ಚಿತ್ತೂರು ಕಾರ್ಯಕ್ರಮವನ್ನು ನಿರೂಪಿಸಿ, ಆಶಾ ದಿನೇಶ ಸ್ವಾಗತಿಸಿದರು. ನೇತ್ರಾವತಿ ಗೋಳಿಹೊಳೆ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಫೈನಾನ್ಸಿನ ವ್ಯವಹಾರದಲ್ಲಿನ ಒಡಕಿನಿಂದಾಗಿ ತನ್ನ ವ್ಯವಹಾರದ ಪಾಲುದಾರ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿದ್ದಾಗಿ ಅನೂಪ್ ಶೆಟ್ಟಿ ಒಪ್ಪಿಕೊಂಡಿದ್ದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ. ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಕರಣ ಮಾಹಿತಿ ನೀಡಿ , ಆರೋಪಿ ಅನೂಪ್ ಶೆಟ್ಟಿ ಈ ಮೊದಲು ದುಬಾಯಿ ಮತ್ತು ಸಿಂಗಾಪೂರದಲ್ಲಿ ಕೆಲಸ ಮಾಡಿಕೊಂಡಿದ್ದು ಬಳಿಕ ಊರಿಗೆ ಮರಳಿ ಅಜೇಂದ್ರ ಶೆಟ್ಟಿಯೊಂದಿಗೆ ಸೇರಿಕೊಂಡು ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ಫೈನಾನ್ಸ್ ವ್ಯವಹಾರದಲ್ಲಿ ಇಬ್ಬರಿಗೂ ಆಗಿಂದಾಗ್ಗೆ ಗಲಾಟೆಗಳು ನಡೆದಿದ್ದು, ಇದೇ ಕೊಲೆಗೆ ಪ್ರಮುಖ ಕಾರಣವಾಗಿದೆ. ಜುಲೈ 30ರಂದು ಅಜೇಂದ್ರ ಶೆಟ್ಟಿಯನ್ನು ಮಾರಕಾಯುಧದಿಂದ ಕಡಿದು ಕೊಲೆ ಮಾಡಿ ಅಜೇಂದ್ರ ಶೆಟ್ಟಿಯ ಕೊರಳಿನಲ್ಲಿದ್ದ ಚಿನ್ನದ ಚೈನ್ ಮತ್ತು ಅವರ ಹೊಸ ಹೊಂಡಾ ಸಿಟಿ ಕಾರನ್ನು ಸುಲಿಗೆ ಮಾಡಿಕೊಂಡು ಹೋಗಿದ್ದ. ಅನೂಪ್ ಪಟ್ಟಿಯು ತಲೆಮರೆಸಿಕೊಂಡಿದ್ದರಿಂದ ಈತನ ವಿರುದ್ಧ ಅಜೇಂದ್ರ ಶೆಟ್ಟಿಯ ಅಣ್ಣ ಮಹೇಂದ್ರ ಶೆಟ್ಟಿಯು ನೀಡಿರುವ ದೂರಿನಂತೆ ಕುಂದಾಪ್ರರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ…

Read More