Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಚರಿಸುವ ರಾಷ್ಟ್ರಿಯ ಅರಣ್ಯ ಹುತಾತ್ಮರದಿನಾಚರಣೆಯನ್ನಶುಕ್ರವಾರ ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಆಚರಿಸಲಾಯಿತು. ಪಿ.ಶ್ರೀನಿವಾಸ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ಗಡಿಭಾಗದಲ್ಲಿ ಸೈನಿಕರು ಹೇಗೆ ದೇಶ ಸೇವೆ ಮಾಡುತ್ತಾರೋ ಹಾಗೇ ನಾಡಿನ ಒಳಗೆ ತಮ್ಮ ಇಲಾಖೆಯ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಎಮ್.ವಿ, ವೀರಪ್ಪನ್ ಕರ್ಯಾಚರಣೆಯಲ್ಲಿ ಮಡಿದ ಅರಣ್ಯ ಹುತಾತ್ಮ  ಸಿಬ್ಬಂದಿಗಳ ಅರಣ್ಯ ಸೇವೆಯನ್ನು ಶ್ಲಾಘಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.11ರ ಶುಕ್ರವಾರ 168 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 44, ಉಡುಪಿ ತಾಲೂಕಿನ 96 ಹಾಗೂ ಕಾರ್ಕಳ ತಾಲೂಕಿನ 26 ಮಂದಿಗೆ ಪಾಸಿಟಿವ್ ಬಂದಿದೆ. 2 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 96 ಸಿಂಥಮೇಟಿವ್ ಹಾಗೂ 72 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 107, ILI 49, ಸಾರಿ 1 ಪ್ರಕರಣವಿದ್ದು, 11 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಇಂದು 63 ಮಂದಿ ಆಸ್ಪತ್ರೆಯಿಂದ ಹಾಗೂ 169 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರದ 73 ವರ್ಷದ ವೃದ್ಧ, ಉಡುಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದಾವಣಗೆರೆ ಜಿಲ್ಲೆಯ 60 ವರ್ಷದ ವೃದ್ಧ ಇಂದು ಮೃತಪಟ್ಟಿದ್ದಾರೆ. 1320 ನೆಗೆಟಿವ್: ಈ ತನಕ ಒಟ್ಟು 82948 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 68795 ನೆಗೆಟಿವ್, 13743 ಪಾಸಿಟಿವ್ ಬಂದಿದ್ದು, 410 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕರೋನಾದಿಂದ ಬಹಳ ಸಂಕಷ್ಟ ಎದುರಾಗಿದ್ದು, ದೇಶದ ಅಭಿವೃದ್ಧಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶಕ್ಕೆ ಕೊರೊನಾದಿಂದ ಬಹಳ ದೊಡ್ಡ ಅನಾಹುತಗಳಾಗಿಲ್ಲ. ನಮ್ಮ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ನೀಡುವಷ್ಟು ನಮ್ಮ ದೇಶ ಸಮರ್ಥವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಕಾರ್ಯಕ್ರಮದ ಮೂಲಕ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಎಲ್ಲರೂ ಸ್ವಾವಲಂಬಿಗಳಾಗಲು, ಆರ್ಥಿಕವಾಗಿ ಸಬಲರಾಗಲು ಆತ್ಮನಿರ್ಭರ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕುಂದಾಪುರ ತಾಲೂಕು ಸಂಘ ಚಾಲಕ ಗುರುರಾಜ್ ರಾವ್ ಕೋಟೇಶ್ವರ ಹೇಳಿದರು. ಗ್ರಾಮವಿಕಾಸ ಸಮಿತಿ ಗಂಗೊಳ್ಳಿ ಮತ್ತು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ ಇವರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದ್ದ ಮೀನುಗಾರಿಕೆ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆತ್ಮನಿರ್ಭರ್ ಭಾರತ್ ಆಶಯದಂತೆ ಕೋವಿಡ್-೧೯ ನಿಂದಾಗಿ ಪರ ಊರುಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ ಸಂಘ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯ ಹಾಗೂ ರೋಟರ‍್ಯಾಕ್ಟ್ ಕುಂದಾಪುರ ದಕ್ಷಿಣ ವಲಯ ಇವರ ಸಂಯೋಜನೆಯಲ್ಲಿ ಹಣ್ಣು ಮತ್ತು ಔಷಧೀಯ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ ಡಾ| ಉತ್ತಮ್ ಕುಮಾರ್ ಶೆಟ್ಟಿ, ಉತ್ತಮ್ ಹೋಮಿಯೋ ಕ್ಲಿನಿಕ್, ಕುಂದಾಪುರ ಮಾತನಾಡಿ, ಇಡೀ ಜೀವನ ಪದ್ಧತಿ ಹಾಗೂ ಪ್ರಕೃತಿಯೊಂದಿಗಿನ ಕೊಡು-ಕೊಳ್ಳುವಿಕೆಯಲ್ಲಾದ ಸಕರಾತ್ಮಕ ಮಾರ್ಪಾಡುಗಳಿಂದಲೇ ಮನುಕುಲದ ದೈಹಿಕ ಮಾನಸಿಕ ಸ್ಥಿಮಿತತೆ ಕಷ್ಟಸಾಧ್ಯವಾಗಿದ್ದು, ಜೀವ ಸಂಕುಲದ ಸ್ವಾಸ್ಥ್ಯತೆಗಾಗಿ ಪ್ರಕೃತಿ ರಕ್ಷಣೆ ಈ ದಿನಮಾನದ ತುರ್ತು ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯ ಕಾರ್ಯದರ್ಶಿಯಾದ ಜೂಡಿತ್ ಮೆಂಡೊನ್ಸ್, ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಹಾಗೂ ರೋಟರಿ ಕ್ಲಬ್‌ನ ಸದಸ್ಯರಾದ ಆಲ್ಡ್ರಿನ್ ಡಿಸೋಜಾ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲಿ ಸೆ. ೧೧ ಹಾಗೂ ೧೨ ರಂದು ರೆಡ್ ಅಲರ್ಟ್ ಮತ್ತು ಸೆ. ೧೩ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದರಿಂದ ಹೆಚ್ಚು ಮಳೆಯಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗೃತಾ ಕ್ರಮವಹಿಸಬೇಕಾಗಿರುವುದರಿಂದ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದ್ದು, ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು/ನಿಯೋಜನೆಗೊಂಡ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತನ್ನು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ಸಾರ್ವಜನಿಕರು ನದಿ/ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಈ ಸಂದರ್ಭದಲ್ಲಿ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ/ಕಟ್ಟಡ/ಮರಗಳ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳಗಳನ್ನು ತಲುಪಬೇಕು. ತುರ್ತು ಸೇವೆಗೆ 1077, ದೂರವಾಣಿ ಸಂಖ್ಯೆ: 0824-2574802 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ  ಡಾಟ್  ಕಾಂ  ಸುದ್ದಿ ಬೈಂದೂರು : ಕುಂದಾಪುರ – ಬೈಂದೂರು ತಾಲೂಕು ಹವ್ಯಕ ಸಭಾದಿಂದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಗೂರು ಸಂದೀಪನ್ ಸ್ಕೂಲಿನಲ್ಲಿ ವ್ಯಾಸಂಗ ಮಾಡಿ 625 ಕ್ಕೆ620 ಅಂಕ ಗಳಿಸಿ ಕರ್ನಾಟಕ ರಾಜ್ಯಕ್ಕೆ 6  ನೇ ರ‍್ಯಾಂಕ್ ಮತ್ತು ಉಡುಪಿ ಜಿಲ್ಲೆಗೆ 3  ನೇ ರ‍್ಯಾಂಕ್ ಗಳಿಸಿ ವಿಶೇಷ ಸಾಧನೆ ಮಾಡಿದ ಬೈಂದೂರಿನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಮಣ್ಯ ಭಟ್ ಮತ್ತು  ಸುಮ ದಂಪತಿಗಳ ಪುತ್ರಿ ಕವನಾ ಭಟ್ ಹಾಗೂ ಶಿಕ್ಷಕ ಮಂಜುನಾಥ ಶಿರೂರು ಮತ್ತು ಶಿಕ್ಷಕಿ ಶಶಿಕಲಾ ದಂಪತಿಗಳ ಪುತ್ರಿ ಮೈತ್ರೇಯಿ ಅವರನ್ನು ಹವ್ಯಕ ಸಭಾದಿಂದ ಬೈಂದೂರಿನಲ್ಲಿ ಸನ್ಮಾನಿಸಲಾಯಿತು ಹವ್ಯಕ ಸಭಾ ಅಧ್ಯಕ್ಷ ಎನ್ ನಾಗರಾಜ್ ಭಟ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡುತ್ತಾ ರ‍್ಯಾಂಕ ಪಡೆದ ವಿದ್ಯಾರ್ಥಿಗಳ ಸಾಧನೆ ಎಲ್ಲರಿಗೂ ಸಂತಸ ತಂದಿದ್ದು ಗ್ರಾಮಿಣ ಭಾಗದಲ್ಲಿ ಎಲ್ಲಾ ಸೌಕರ್ಯ ಇಲ್ಲದೇಯೂ ಹಾಗೂ ಕೋವಿಡ್ ಮಾಹಾಮಾರಿ ಕಾಯಿಲೆಯ ಆತಂಕದ ನಡುವೆಯು ಅತ್ಯುತ್ತಮ ಸಾಧನೆ ಮಾಡಿದಾರೆಂದು ಹೇಳಿದರು. ನಿವೃತ್ತ ಉದ್ಯೋಗಿ ಎಸ್.ಎಮ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿ ಗ್ರಾಮ ಪಂಚಾಯಿತಿಗಳಿಗೆ ಆರೋಗ್ಯ ಹಸ್ತ ಕಿಟ್ ವಿತರಣೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ ಕೊಡವೂರು ಚಾಲನೆ ನೀಡಿ, ರಾಜ್ಯದ ಜನತೆ ಕರೊನಾ ಸಂಕಷ್ಟದಲ್ಲಿರುವಾಗ ಸರ್ಕಾರ ಜನತೆಯ ಕಷ್ಟಗಳಿಗೆ ಸ್ಪಂದಿಸದೆ ಆಕ್ರಮ ದಂದೆ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದರೂ ಜನರಿಗೆ ಸಾಂತ್ವಾನ ಹೇಳಿ ಪ್ರತಿ ಮನೆಗೂ ವೈಧ್ಯಕೀಯ ಮಾರ್ಗದರ್ಶನ ನೀಡುವ ಕೆಲಸವನ್ನು ಆರೋಗ್ಯ ಹಸ್ತದ ಕಾರ್ಯಕ್ರಮದ ಮೂಲಕ ಮುಂದಿನ ದಿನಗಳಲ್ಲಿ ನಡೆಸಲಾಗುವುದು’ ಎಂದರು. ಬ್ಲಾಕ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು. ಆರೋಗ್ಯ ಹಸ್ತದ ಸಂಚಾಲಕ ಡಾ. ಸಂದೀಪ, ಮಾಜಿ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಹಿರಿಯ ಕಾಂಗ್ರೆಸ್ ನಾಯಕ ಕೃಷ್ಣದೇವ ಕಾರಂತ, ರಾಜ್ಯ ಐ.ಟಿ.ಸೆಲ್ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಪುರಸಭಾ ಸದಸ್ಯೆಋಆದ ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಲಕ್ಷ್ಮಿ ಭಾಯಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.9ರ ಬುಧವಾರ 258 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 39, ಉಡುಪಿ ತಾಲೂಕಿನ 162 ಹಾಗೂ ಕಾರ್ಕಳ ತಾಲೂಕಿನ 41 ಮಂದಿಗೆ ಪಾಸಿಟಿವ್ ಬಂದಿದೆ. 16 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 144 ಸಿಂಥಮೇಟಿವ್ ಹಾಗೂ 114 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 171, ILI 49, ಸಾರಿ 7 ಪ್ರಕರಣವಿದ್ದು, 31 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಇಂದು 75 ಮಂದಿ ಆಸ್ಪತ್ರೆಯಿಂದ ಹಾಗೂ 143 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕಾರ್ಕಳದ 64 ವರ್ಷದ ಮಹಿಳೆ ಇಂದು ಮೃತಪಟ್ಟಿದ್ದಾರೆ. 1000 ನೆಗೆಟಿವ್: ಈ ತನಕ ಒಟ್ಟು 80804 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 67091 ನೆಗೆಟಿವ್, 13345 ಪಾಸಿಟಿವ್ ಬಂದಿದ್ದು, 368 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1000 ನೆಗೆಟಿವ್, 258 ಪಾಸಿಟಿವ್ ಬಂದಿದೆ. 1,884…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೃಢಸಂಕಲ್ಪ, ಪರಿಶುದ್ಧ ಮನಸ್ಸಿನಿಂದ ಮಾಡುವ ಕಾರ್ಯದಲ್ಲಿ ಸೋಲೆಂಬುದಿಲ್ಲ. ಕರ್ತವ್ಯದಲ್ಲಿ ಪ್ರಾಮಾಣಿಕತೆ, ಸ್ವಾಮಿನಿಷ್ಠೆ ಇದ್ದರೆ ಎಲ್ಲದರಲ್ಲಿಯೂ ಯಶಸ್ಸ ಕಾಣಲು ಸಾಧ್ಯವಿದೆ. ಕೆಲಸದಲ್ಲಿ ಚಿಕ್ಕದು ದೊಡ್ಡದು ಎಂಬುವುದಕ್ಕಿಂತ ಅದನ್ನು ಎಷ್ಟು ಶಿಸ್ತುಬದ್ಧವಾಗಿ ಮಾಡುತ್ತೇವೆ ಎನ್ನುವುದಷ್ಟೇ ಮುಖ್ಯ ಎಂದು ಯು. ಬಿ. ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಯು. ಬಿ. ಶೆಟ್ಟಿ ಹೇಳಿದರು. ಅವರು ಬುಧವಾರ ಬೈಂದೂರು ಯು. ಬಿ. ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರು ಬಾಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಪುಸ್ತಕ ವಿತರಣೆ, ಶಾಲೆಗೆ ಪಿಠೋಪಕರಣ ಹಸ್ತಾಂತರ ಹಾಗೂ ಸುಸಜ್ಜಿತ ಶೌಚಾಲಯವನ್ನು ಹಸ್ತಾಂತರಿಸಿ ಮಾತನಾಡಿದರು. ಬಾಡಾ ಶಾಲೆಯನ್ನು ದತ್ತು ಸ್ವೀಕರಿಸಿ ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಪಣತೊಡಲಾಗಿದೆ. ಅದರಂತೆಯೇ ಯಾವುದೇ ಲೋಪವಿಲ್ಲದೇ ಶಾಲೆಯ ಏಳ್ಗೆಗಾಗಿ ಶ್ರಮಿಸಲಾಗುವುದು. ಟ್ರಸ್ಟ್ ಮೂಲಕ ಹಲವು ಜನಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಈ ಬಗ್ಗೆ ಸಂತೃಪ್ತಿ ಇದೆ ಎಂದರು. ವಿದ್ಯಾರ್ಥಿಗಳ ಶೌಚಾಲಯ ನಿರ್ಮಿಸಿದ ಗುತ್ತಿಗೆದಾರ ಸುಕುಮಾರ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ `ಮೊಂತಿ ಫೆಸ್ತ್ (ತೆನೆ ಹಬ್ಬ) ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಚರ್ಚುಗಳಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು. ರೈತರು ಬೆಳೆದ ಭತ್ತದ ತೆನೆಯನ್ನು ಆಯಾ ಚರ್ಚ್ನಲ್ಲಿ ಪ್ರಮುಖರು ಸಂಗ್ರಹಿಸಿ, ಈ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಆಯಾ ಚರ್ಚ್ಗಳಲ್ಲಿ ಭಕ್ತರಿಗೆ ದಿವ್ಯಬಲಿಪೂಜೆಯ ಬಳಿಕ ಹಂಚಲಾಯಿತು. ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಧರ್ಮಗುರು ರೆ.ಫಾ ವಿನ್ಸೆಂಟ್ ಕುವೆಲ್ಲೂ, ರೆ.ಫಾ ಹೆರಾಲ್ಡ್ ಪಿರೇರಾ ಮತ್ತು ಬ್ರದರ್ ಲಿವನ್ ಮಥಾಯಸ್ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು. ಚಿತ್ರಗಳು: ಎ ಒನ್ ಸ್ಟುಡಿಯೋ

Read More