ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಬೈಂದೂರಿನ ಎಚ್ಎಂಎಂಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಒಡೆತನವನ್ನು ಧಾರವಾಡ ಕೇಂದ್ರಿತ ಯು. ಬಿ. ಶೆಟ್ಟಿ ಟ್ರಸ್ಟ್ ವಹಿಸಿಕೊಂಡಿದ್ದು, ಈ ಶಾಲೆಗಳನ್ನು ಲಾಭದ ದೃಷ್ಟಿಯಿಂದ ನೋಡದೆ, ಹುಟ್ಟೂರಿನ ಜನರಿಗೆ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಡೆಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಉದ್ಯಮಿ ಯು. ಬಿ. ಶೆಟ್ಟಿ ಹೇಳಿದರು. ವಿವೇಕಾನಂದ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಲಾ ಶಿಕ್ಷಣ ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿ ಉತ್ತಮ ಫಲಿತಾಂಶ ತರುವ ಗುರಿ ಹೊಂದಿದರೆ ಸಾಲದು. ಅಲ್ಲಿ ಕಲಿಯುವ ಎಲ್ಲವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ದೃಷ್ಟಿ ಅದಕ್ಕಿರಬೇಕು. ಎರಡೂ ಶಾಲೆಗಳಲ್ಲಿ ಅದರತ್ತ ಗಮನ ಹರಿಸಿ ಜಿಲ್ಲೆಯ ಮಾದರಿ ಶಾಲೆಗಳಾಗಿ ಅವುಗಳನ್ನು ರೂಪಿಸಲಾಗುವುದು. ಎರಡೂ ಸಂಸ್ಥೆಗಳ ಆಡಳಿತದ ನೇತೃತ್ವವನ್ನು ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ. ಶೆಟ್ಟಿ ನೋಡಿಕೊಳ್ಳುವರು. ವಿವೇಕಾನಂದ ಶಾಲೆ ಅದೇ ಹೆಸರಿನಲ್ಲಿ ಮತ್ತು ಬೈಂದೂರಿನದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆ, 2020ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು, ವಿವರ ಈ ಕೆಳಗಿನಂತಿದೆ. ಪ್ರೌಢಶಾಲಾ ವಿಭಾಗ: ಬಿ.ಮೋಹನ ದಾಸ್ ಶೆಟ್ಟಿ, ಮುಖ್ಯ ಶಿಕ್ಷಕರು, ಜನತಾ ಪ್ರೌಢಶಾಲೆ ಹೆಮ್ಮಾಡಿ, ಬೈಂದೂರು ವಲಯ. ಉದಯ್ ಕುಮಾರ್ ಶೆಟ್ಟಿ ಬಿ., ಮುಖ್ಯ ಶಿಕ್ಷಕರು, ಸಂಜಯ ಗಾಂಧಿ ಪ್ರೌಢಶಾಲೆ ಅಂಪಾರು, ಕುಂದಾಪುರ ವಲಯ ಪ್ರೇಮಾನಂದ, ಸಹ ಶಿಕ್ಷಕರು, ವಿವೇಕ ಪ.ಪೂ.ಕಾಲೇಜು ಕೋಟ, ಬ್ರಹ್ಮಾವರ ವಲಯ. ವಿನಾಯಕ ನಾಯ್ಕ, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೆಂಜಾಳ, ಕಾರ್ಕಳ ವಲಯ. ಸಂಜೀವ ಎಚ್.ನಾಯಕ್, ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ರಾಮನಗರ, ಉಡುಪಿ ವಲಯ, ಪ್ರಾಥಮಿಕ ಶಾಲಾ ವಿಭಾಗ: ಶಶಿಧರ ಶೆಟ್ಟಿ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು ತೊಪ್ಲುಬೈಂದೂರು ವಲಯ, ಎಚ್. ಪ್ರಭಾಕರ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುವಾಲ್ತೂರು, ಕುಂದಾಪುರ ವಲಯ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.3ರ ಗುರುವಾರ 226 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 59, ಉಡುಪಿ ತಾಲೂಕಿನ 137 ಹಾಗೂ ಕಾರ್ಕಳ ತಾಲೂಕಿನ 25 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಈತನಕ ಜಿಲ್ಲೆಯಲ್ಲಿ ಒಟ್ಟು 106 ಮಂದಿ ಮೃತಪಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 118 ಸಿಂಥಮೇಟಿವ್ ಹಾಗೂ 108 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 128 ಪುರುಷರು, 98 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 121, ILI 68, ಸಾರಿ 8 ಪ್ರಕರಣವಿದ್ದು, 27 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಓರ್ವ ವ್ಯಕ್ತಿ ಅಂತರ್ಜಿಲ್ಲಾ ಹಾಗೂ ಓರ್ವ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 134 ಮಂದಿ ಆಸ್ಪತ್ರೆಯಿಂದ ಹಾಗೂ 194 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರದ 46 ವರ್ಷದ ಪುರುಷ, ಕಾರ್ಕಳದ 84 ವರ್ಷದ ವೃದ್ಧ, ಉಡುಪಿಯ 65 ವರ್ಷದ ವೃದ್ಧ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ಜೆಸಿ ಘಟಕಕ್ಕೆ ವಲಯಾಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸುರಭಿ. ಎಸ್. ಶೆಟ್ಟಿಗೆ ಜೆಸಿಐ ಉಪ್ಪುಂದದಿಂದ ಗೌರವ, ಝೋನ್ 15ರ ವಲಯಾಧ್ಯಕ್ಷರಾದ ಜೆಸಿ ಕಾರ್ತಿಕೇಯ ಮಧ್ಯಸ್ಥ ಜೆಸಿಐ ಉಪ್ಪುಂದ ಘಟಕಕ್ಕೆ ಭೇಟಿ ನೀಡಿದ ಸಂದರ್ಭ ಸುರಭಿ ಎಸ್. ಶೆಟ್ಟಿ ಹಾಗೂ ಆಕೆಯ ಪೋಷಕರನ್ನು ಗೌರವಿಸಿಲಾಯಿತು. ಈ ಸಂದರ್ಭ ವಲಯ ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ಶೇಷಗಿರಿ ನಾಯಕ್, ಘಟಕಾಧ್ಯಕ್ಷರಾದ ದೇವರಾಯ ದೇವಾಡಿಗ, ನಿಕಟಪೂರ್ವಾಧ್ಯಕ್ಷರಾದ ಪುರಂದರ ಖಾರ್ವಿ, ವಲಯ ನಿರ್ದೇಶಕ ಮಂಗೇಶ್ ಶಾನುಭಾಗ್, ಪೂರ್ವಾಧ್ಯಕ್ಷರಾದ ಯು ಪ್ರಕಾಶ್ ಭಟ್, ಸುಬ್ರಹ್ಮಣ್ಯ ಜಿ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರ್ದೇಶಕ ಪುರುಷೋತ್ತಮ್ ದಾಸ್, ಜೆಜೆಸಿ ಅಧ್ಯಕ್ಷ ಮಹೇಶ್ ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘವು ಶಾಲೆಯಲ್ಲಿ ಕುಸಿಯುತ್ತಿರುವ ವಿದ್ಯಾರ್ಥಿ ಸಂಖ್ಯೆಯನ್ನು ಒಂದು ಸವಾಲಾಗಿ ಸ್ವೀಕರಿಸಿತು. ವಿದ್ಯಾಭಿಮಾನಿಗಳು ನೀಡಿದ ದೇಣಿಗೆ, ಸದಸ್ಯರು ಮಾಡಿದ ಸಾಲ ಬಳಸಿಕೊಂಡು ಒಟ್ಟು ರೂ ೧೫ ಲಕ್ಷ ವೆಚ್ಚದಲ್ಲಿ ಬಸ್ ಖರೀದಿಸಿ ಶಾಲೆಗೆ ಹಸ್ತಾಂತರಿಸಿತು. ಪ್ರಾಥಮಿಕ ಪೂರ್ವ ತರಗತಿಗಳನ್ನು ಆರಂಭಿಸಿ, ನಡೆಸಿತು. ಅದರ ಫಲವಾಗಿ ಶಾಲೆ ನಿರೀಕ್ಷಿತ ಪ್ರಗತಿ ಸಾಧಿಸಿತು ಎಂದು ಸಂಘದ ಅಧ್ಯಕ್ಷ ದಯಾನಂದ ಬಳೆಗಾರ್ ಹೇಳಿದರು. ಅವರು ಸಾಧನಾ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಮೂಲಗಳಿಂದ ಧನಸಂಗ್ರಹ ಮಾಡಿ ಬಸ್ಗೆ ಮಾಡಿದ ಋಣದಿಂದ ಸಂಘ ಈಗ ಮುಕ್ತವಾಗಿದೆ. ಮುಂದಿನ ದಿನಗಳಲ್ಲೂ ಶಾಲೆಯ ಅಭಿವೃದ್ಧಿಗೆ ನೆರವಾಗುವ ಮೂಲಕ ಕಲಿತ ಶಾಲೆಯ ಋಣ ತೀರಿಸಲು ಸಂಘ ಬದ್ಧವಾಗಿದೆ ಎಂದರು. ಅನಿತಾ ಆರ್. ಕೆ, ಪ್ರಾರ್ಥನೆ ಹಾಡಿದರು. ಅಣ್ಣಪ್ಪ ಖಾರ್ವಿ ಸ್ವಾಗತಿಸಿದರು. ದೇವಿದಾಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಈಚೆಗೆ ಕೊಡೇರಿ ದೋಣಿ ದುರಂತದಲ್ಲಿ ಮೃತರಾದ ಉಪ್ಪುಂದದ ನಾಲ್ವರು ಮೀನುಗಾರರ ಕುಟುಂಬಗಳಿಗೆ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟವು ಭಾನುವಾರ ತಲಾ ₹ 5 ಲಕ್ಷದಂತೆ ₹ 20 ಲಕ್ಷ ನೆರವು ನೀಡಿತು. ಸಂಘದ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಈ ನೆರವನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಬಿ.ಎಂ.ಸುಕುಮಾರ್ ಶೆಟ್ಟಿ ಮೃತ ಮೀನುಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಂದರು ಅಳಿವೆ ಬಾಗಿನಲ್ಲಿ ಹೂಳು ಎತ್ತಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಬ್ರೇಕ್ ವಾಟರ್ ಕಾಮಗಾರಿ ವಿಸ್ತರಣೆ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಹೇಳಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಸದಸ್ಯೆ ಪ್ರವೀಳಾ ದೇವಾಡಿಗ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ಬಟವಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮದನಕುಮಾರ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಪಧಾನ ಕಾರ್ಯದರ್ಶಿ ಡಿ. ಮಂಜುನಾಥ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ– 66 ರ ತಲ್ಲೂರು ಜಂಕ್ಷನ್ ಬಳಿ ಬುಧವಾರ ರಾತ್ರಿ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಸವಾರ ಮೃತಪಟ್ಟಿದ್ದಾರೆ. ಕುಂದಾಪುರದಲ್ಲಿ ವರ್ತಕರಾಗಿರುವ ಸೀತಾರಾಮ್ ಶೆಟ್ಟಿ ಮೃತರು. ಇವರು ವ್ಯಾಪಾರ ಮುಗಿಸಿ ಮನೆಗೆ ತೆರಳುತ್ತಿದ್ದಾಗ ತಲ್ಲೂರಿನಲ್ಲಿ ಬೈಂದೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿಹೊಡೆದಿತ್ತು. ಇದೇ ಸಂದರ್ಭ ಸ್ಕೂಟಿ ಸವಾರ ಮಗುಚಿರುವುದನ್ನು ಕಂಡು ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಇನ್ನೊಂದು ಅಪಘಾತವೂ ಇಲ್ಲಿ ಸಂಭವಿಸಿದೆ. ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೆ.2ರ ಬುಧವಾರ 167 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 19, ಉಡುಪಿ ತಾಲೂಕಿನ 92 ಹಾಗೂ ಕಾರ್ಕಳ ತಾಲೂಕಿನ 52 ಮಂದಿಗೆ ಪಾಸಿಟಿವ್ ಬಂದಿದೆ. 4 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಈತನಕ ಜಿಲ್ಲೆಯಲ್ಲಿ ಒಟ್ಟು 102 ಮಂದಿ ಮೃತಪಟಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 112 ಸಿಂಥಮೇಟಿವ್ ಹಾಗೂ 55 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 101 ಪುರುಷರು, 66 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 46, ILI 61, ಸಾರಿ 2 ಪ್ರಕರಣವಿದ್ದು, 56 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. ಓರ್ವ ವ್ಯಕ್ತಿ ಅಂತರ್ಜಿಲ್ಲಾ ಹಾಗೂ ಓರ್ವ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 65 ಮಂದಿ ಆಸ್ಪತ್ರೆಯಿಂದ ಹಾಗೂ 185 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 70, 85 ವರ್ಷದ ವೃದ್ಧ ಹಾಗೂ 55 ವರ್ಷದ ಪುರುಷ ಇಂದು ಮೃತಪಟ್ಟಿದ್ದಾರೆ. 812 ನೆಗೆಟಿವ್:…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಸೆ.2: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ, ಜಿ.ಪಂ ಮಾಜಿ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದ ಮಂಜಯ್ಯ ಶೆಟ್ಟಿ ಅವರು, ಕಾಂಗ್ರೆಸ್ ಪಕ್ಷದಿಂದ ಒಂದು ಬಾರಿ ಜಿ.ಪಂ ಹಾಗೂ ಒಂದು ಬಾರಿ ತಾ.ಪಂ ಸದಸ್ಯರಾಗಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ದುಡಿದಿದ್ದರು. ಆಲೂರು ಹರ್ಕೂರು ಭಾಗದಲ್ಲಿ ಪ್ರಭಾವಿ ನಾಯಕರೆನಿಸಿಕೊಂಡಿದ್ದರು. ಬುಧವಾರ ನೆಂಪುವಿನ ಶಾಸಕ ಬಿ. ಎಂ ಸುಕುಮಾರ್ ಶೆಟ್ಟಿ ಅವರ ನಿವಾಸದಲ್ಲಿ ಶಾಸಕರ ಸಮ್ಮುಖದಲ್ಲಿ ಹರ್ಕೂರು ಮಂಜಯ್ಯ ಶೆಟ್ಟಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರೊಂದಿಗೆ ಕಾಂಗ್ರೆಸ್ ಪಕ್ಷದ ಉಳ್ಳೂರು-೭೪ ಗ್ರಾಮದ ಪ್ರಸಾದ್, ಮುಖಂಡರಾದ ಕೆಂಚನೂರು ಸುಬ್ಬಣ್ಣ ಶೆಟ್ಟಿ, ಸುಧೀರ್, ನವೀನ್ ಆಚಾರ್ಯ ಮೊದಲಾದವರು ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭ ಜಿ.ಪಂ ಸದಸ್ಯರಾದ ಶಂಕರ್ ಪೂಜಾರಿ, ರೋಹಿತ್ ಶೆಟ್ಟಿ, ಶೋಭಾ ಜಿ ಪುತ್ರನ್ ಕುಂದಾಪುರ ತಾ.ಪಂ ಸದಸ್ಯ ಉಮೇಶ್ ಕಲ್ಗದ್ದೆ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಸೆ.2: ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಬಾರಂದಾಡಿಯಲ್ಲಿ ಹೈಕ್ಲಾಸ್ ತಂಗುದಾಣವೊಂದು ನಿರ್ಮಾಣಗೊಂಡಿದ್ದು, ಇಂದು ಉದ್ಘಾಟನೆಗೊಂಡಿದೆ. ಬಸ್ ತಂಗುದಾಣವು ವಿಶ್ರಾಂತಿ ಕೊಠಡಿ, ಅಂಗಡಿ ಕೋಣೆ, ಶೌಚಾಲಯ, ಬಾತ್ ರೂಮ್ ಮುಂತಾದ ಸೌಲಭ್ಯ ಒಳಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಉತ್ಕೃಷ್ಟ ದರ್ಜೆಯ ತಂಗುದಾಣ ನಿರ್ಮಿಸಿದಂತಾಗಿದೆ. ಹೊಳ್ಮಗೆ ಕರುಣಾಕರ ಶೆಟ್ಟಿ ಕಾವ್ರಾಡಿ ಸ್ಮರಣಾರ್ಥ 15 ಲಕ್ಷ ವೆಚ್ಚದಲ್ಲಿ ಪುತ್ರ ನಿಕಟಪೂರ್ವ ಹಕ್ಲಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಭಾಸ್ ಶೆಟ್ಟಿ ಹೊಳ್ಮಗೆ ಹಾಗೂ ಸಹೋದರಿಯರು ನಿರ್ಮಿಸಿದ ಸೂಪರ್ ಸ್ಪೆಷಾಲಿಟಿ ಬಸ್ ತಂಗುದಾಣ ನಿರ್ಮಿಸಿದ್ದು, ಗ್ರಾಮ ಪಂಚಾಯತ್ ನಿರ್ವಹಣೆ ಜವಾಬ್ದಾರಿ ಹೊತ್ತಿದೆ. ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಬಸ್ ತಂಗುದಾಣ ಉದ್ಘಾಟಿಸಿದರು. ಹಕ್ಲಾಡಿ ಚೆನ್ನಕೇಶವ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಾಳೆಮನೆ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಅಧ್ಯಕ್ಷ ಎನ್.ಎಂ.ಹೆಗ್ಡೆ, ಲಯನ್ಸ್ ಪದಾಧಿಕಾರಿಗಳಾದ ವಿ. ಜಿ. ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ, ಹಕ್ಲಾಡಿ ಗ್ರಾಪಂ ಪಿಡಿಒ ಚಂದ್ರ ಬಿಲ್ಲವ, ಉಮಾನಾಥ ಹೆಗ್ಡೆ…
