ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಸಮಯಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ “ಹೊಯ್ಸಳ”ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ” ಪ್ರಶಸ್ತಿಯನ್ನು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಕರಣವು ಆಗಸ್ಟ್ 2019 ರಿಂದ ಜುಲೈ 2020 ರೊಳಗೆ ನಡೆದಿರಬೇಕು. ದಿನಾಂಕ: 01-08-2002 ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ .10000/-ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. 2020-21 ನೇ ಸಾಲಿನ ಪ್ರಶಸ್ತಿಗಾಗಿ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನು ಉಪನಿರ್ದೇಶಕರು,ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಡುಪಿ ಇವರಿಂದ ಪಡೆದು ಭರ್ತಿಮಾಡಿ ಆಗಸ್ಟ್ 31 ರೊಳಗೆ ಸಲ್ಲಿಸತಕ್ಕದ್ದು.ಅರ್ಜಿಗಳನ್ನು ಕನ್ನಡ ಭಾಷೆಯಲ್ಲಿಯೇ ಸಲ್ಲಿಸತಕ್ಕದ್ದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಣೆಗಳಿಗಾಗಿ ,ಉಪನಿರ್ದೇಶಕರ ಕಛೇರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್ ವಿಪತ್ತಿನ ಸಹಾಯ ನಿಧಿ ರೋಟರಿ ಜಿಲ್ಲೆ 3182 ಜೋನ್-1ರ ವತಿಯಿಂದ ಸುಮಾರು ಎರಡು ಲಕ್ಷದ ಐವತ್ತು ಸಾವಿರ ಮೌಲ್ಯದ ಪಿಪಿಇ ಕಿಟ್, ಎನ್-೯೫ ಮಾಸ್ಕ್, ಟ್ರಿಪಲ್ ಲೇಯರ್ ಮಾಸ್ಕ್, ಥರ್ಮಲ್ ಸ್ಕ್ಯಾನರ್, ರೆಸ್ಪಿರೇಟರ್ ಹಾಗೂ ಪ್ಲಸ್ ಒಕ್ಸ್‌ಮಿಟರ್ ಕೊವೀಡ್ ಪರಿಕರಣಗಳನ್ನು ಜೋನ್-1ರ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿಯವರು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೋನ್-1 ರ ಅಸಿಸ್ಟೆಂಟ್ ಗವರ್ನರ್ ಡಾ. ನಾಗಭೂಷಣ ಉಡುಪ ಅವರು 2019-20 ನೇ ಸಾಲಿನ ರೋಟರಿ ಜಿಲ್ಲೆ 3182 ಗವರ್ನರ್ ಬಿ.ಎನ್. ರಮೇಶ್ ಹಾಗೂ ವಲಯ 1ರ ಎಲ್ಲಾ ರೋಟರಿ ಅಧ್ಯಕ್ಷ, ಕಾರ್ಯದರ್ಶಿ, ವಲಯ ಸೇನಾನಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ತಾಲೂಕು ಆಸ್ಪತ್ರೆ ಕುಂದಾಪುರದ ಪಿಜಿಷೀಯನ್ ಡಾ. ನಾಗೇಶ, ಸೀನಿಯರ್ ಪಾರಮೆಸಿಸ್ಟ್ ಬಿ.ಎಮ್. ಚಂದ್ರಶೇಖರ್ ಹಾಗೂ ರೋಟರಿ ಕುಂದಾಪುರ ದಕ್ಷಿಣದ ನಿಕಟಪೂರ್ವಾಧ್ಯಕ್ಷ ದೇವರಾಜ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಶೇ. 95.6 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 159 ವಿದ್ಯಾರ್ಥಿಗಳ ಪೈಕಿ 152 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 42 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 88 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಹಫ್ಸಾ (586), ವಾಣಿಜ್ಯ ವಿಭಾಗದಲ್ಲಿ ಅಕ್ಷಿತಾ (574) ಮತ್ತು ಯಶ್ರ (574) ಹಾಗೂ ಕಲಾ ವಿಭಾಗದಲ್ಲಿ ಚೈತ್ರ (557) ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗಣಿತಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಂಸ್ಕೃತದಲ್ಲಿ ತಲಾ ಮೂವರು ವಿದ್ಯಾರ್ಥಿಗಳು, ಅಕೌಂಟೆನ್ಸಿ, ಕಂಪ್ಯೂಟರ್ ಸಾಯನ್ಸ್ ಮತ್ತು ಬಯೋಲಜಿಯಲ್ಲಿ ತಲಾ ಒಬ್ಬರು 100 ಅಂಕ ಪಡೆದುಕೊಂಡಿದ್ದಾರೆ.
ರಾಜ್ಯ ಸರ್ಕಾರ ತಂದಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿಯು , ಬಡವರಿಂದ ಭೂಮಿ ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡುವುದೇ ಸರ್ಕಾರದ ಅಜೆಂಡಾ. ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ ಮತ್ತು ಕೃಷಿಕರ ವಿರುದ್ಧದ ಸುಗ್ರೀವಾಜ್ಞೆ ಹೊರಡಿಸಿರುವುದು ರಾಜ್ಯದ ಪಾಲಿಗೆ ಕರಾಳ ದಿನ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಇಂತಹ ಸಂಧರ್ಭವನ್ನು ತನ್ನ ಸರ್ವಾಧಿಕಾರ ಬಳಸುತ್ತಿದೆ. ಸರ್ಕಾರ ತಿದ್ದುಪಡಿ ತರಲು ಹೊರಟಿರುವ ಭೂಸುಧಾರಣೆ ಕಾಯ್ದೆ, ರೈತರ, ಕೂಲಿಕಾರ್ಮಿಕರ, ಹಿಂದುಳಿದವರ ವಿರೋಧಿಯಾದಂತಹ ತಿದ್ದುಪಡಿಯ ಸುಗ್ರೀವಾಜ್ಞೆ ಹೊರಡಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕಪಟ ನಾಟಕವಾಗಿದೆ. ಭೂಸುಧಾರಣೆ ಕಾಯ್ದೆ(1961)ಗೆ 1974ರಲ್ಲಿ ದೇವರಾಜ ಅರಸು ಅವರು ಸೆಕ್ಷನ್ 63, ಸೆಕ್ಷನ್ 79 ಎ , ಸೆಕ್ಷನ್ 79 ಬಿ ,ಸೆಕ್ಷನ್ 79 ಸಿ ಹಾಗೂ ಸೆಕ್ಷನ್ 80 ಇವುಗಳನ್ನು ಸೇರ್ಪಡೆಗೊಳಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಜು.17ರ ಶುಕ್ರವಾರ 84 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 40, ಉಡುಪಿ ತಾಲೂಕಿನ 33 ಹಾಗೂ ಕಾರ್ಕಳ ತಾಲೂಕಿನ 11 ಮಂದಿಗೆ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ 50 ಪುರುಷರು, 34 ಮಹಿಳೆಯರು ಸೇರಿದ್ದಾರೆ. ಇವರಲ್ಲಿ 7 ಮಂದಿ ಮಂಬೈ ಪ್ರಯಾಣದ ಹಿನ್ನೆಲೆ, 6 ಮಂದಿ ಬೆಂಗಳೂರು, 3 ಮಂದಿ ಮಂಗಳೂರು, ತಲಾ ಓರ್ವ ವ್ಯಕ್ತಿ ದುಬೈ ಹಾಗೂ ಅಬಿದಾಬಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಉಳಿದ ಪ್ರಕರಣಗಳು ಪ್ರಾಥಮಿಕ ಸಂಪರ್ಕದಿಂದ ಹಾಗೂ ILI ಪ್ರಕರಣಗಳಾಗಿವೆ. 489 ನೆಗೆಟಿವ್: ಈ ತನಕ ಒಟ್ಟು 23,858 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 21,465 ನೆಗೆಟಿವ್, 1,979 ಪಾಸಿಟಿವ್ ಬಂದಿದ್ದು, 414 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 309 ನೆಗೆಟಿವ್, 84 ಪಾಸಿಟಿವ್ ಬಂದಿದೆ. ಒಟ್ಟು 2,124 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ. 429 ಸಕ್ರಿಯ ಪ್ರಕರಣ:…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ರೋಗಿಗಳ ಚಿಕಿತ್ಸೆ ಬಗ್ಗೆ ಹಾಲಿ ಇರುವ ವ್ಯವಸ್ಥೆಯನ್ನು ಉನ್ನತಿಕರಿಸಬೇಕಾದ ಅಗತ್ಯತೆ ಇದೆ. ಅದೇ ರೀತಿ ವೈದ್ಯರು/ಸ್ಟಾಫ್ ನರ್ಸ್‌ಗಳ ಅಗತ್ಯವಿದೆ. ಅಲ್ಲದೇ ಲ್ಯಾಬ್‌ಗಳಲ್ಲಿ ಲ್ಯಾಬ್ ಟೆಕ್ನೀಶೀಯನಗಳ ಕೆಲಸ ಅವಶ್ಯಕತೆ ಇರುತ್ತದೆ. ಆದುದರಿಂದ ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸಲು ಇಚ್ಚಿಸುವ ವೈದ್ಯರು, ಸ್ಟಾಫ್ ನರ್ಸ್‌ಗಳು ಮತ್ತು ಲ್ಯಾಬ್ ಟೆಕ್ನಿಶಿಯನ್‌ಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಡುಪಿ ಇವರನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ವೆಂಟಿಲೇಟರ್‌ಗಳು ಮತ್ತು ಹೈ ಪ್ರೆಜರ್ ಆಕ್ಸಿಜನ್ ಸಿಸ್ಟಮ್‌ಗಳ ತೀರಾ ಅವಶ್ಯಕತೆ ಇರುವುದರಿಂದ ವೆಂಟಿಲೇಟರ್ ಹಾಗೂ ಹೈ ಪ್ರೆಜರ್ ಆಕ್ಸಿಜನ್ ಸಿಸ್ಟಮ್‌ಗಳನ್ನು ನೀಡಲು ಇಚ್ಚಿಸುವ ದಾನಿಗಳು /ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸಿ ಕೋವಿಡ್ -೧೯ ನಿಯಂತ್ರಣದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಸಹಕರಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಕ್ವಾರಂಟೈನ್ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ: ಜಾಗತಿಕ ಸೋಂಕಾಗಿರುವ ಕೋವಿಡ್-19 ರೋಗವು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಡ ಗ್ರಾಮದ ಚುಂಗಿಗುಡ್ಡೆ ಲಕ್ಷ್ಮೀನಾರಾಯಣ ಹೆಬ್ಬಾರ್-ಜ್ಯೋತಿ ಹೆಬ್ಬಾರ್ ದಂಪತಿಯ ಪುತ್ರಿ ಅನನ್ಯಾ ಹೆಬ್ಬಾರ್ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಶೇ 99 ಅಂಕ ಗಳಸಿ ರಾಜ್ಯದಲ್ಲಿ ಐದನೆ ಸ್ಥಾನ ಗಳಿಸಿದ್ದಾಳೆ. ಈಕೆ ಬೆಂಗಳೂರು ಮಲ್ಲೇಶ್ವರದ ವಿದ್ಯಾಮಂದಿರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ. ಇಂಗ್ಲಿಷ್‌ನಲ್ಲಿ 94 ಅಂಕ ಬಂದಿದ್ದು, ಉಳಿದ ಐದು ವಿಷಯಗಳಾದ ಸಂಸ್ಕೃತ, ವ್ಯವಹಾರ ಶಾಸ್ತ್ರ, ಲೆಕ್ಕಾಚಾರ ಶಾಸ್ತ್ರ, ಸಂಖ್ಯಾ ಶಾಸ್ತ್ರ, ಮೂಲಗಣಿತದಲ್ಲಿ 100 ಅಂಕಗಳು ಬಂದಿವೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಉಚಿತ ದೂರವಾಣಿ ಸಮಲೋಚನೆ ನೀಡಲು ಟೋಲ್ ಫ್ರೀ ನಂ – 18004252244 ಪ್ರಾರಂಭಿಸುತ್ತಿದೆ. ಉಚಿತ ಟೆಲಿ-ಆಪ್ತ ಸಮಲೋಚನೆಗೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಳಕೆಗೆ ಯೂನಿಸೆಫ್ ಹಣಕಾಸು ಸಹಾಯ ಮಾಡುತ್ತದೆ. ಕರ್ನಾಟಕದಲ್ಲಿ ಸಮಲೋಚನೆ ಅಗತ್ಯವಿರುವ ಎಲ್ಲ ಮಕ್ಕಳಿಗಾಗಿ ಉಚಿತ ಟೆಲಿ-ಕೌನ್ಸ್ ಲಿಂಗ್ ಸೌಲಭ್ಯ ವನ್ನು ನೀಡಲು ಯೋಜಿಸಲಾಗಿದೆ. ಆಪ್ತ ಸಮಲೋಚನೆ ಬಯಸುವ ಕರ್ನಾಟಕದಲ್ಲಿನ ಎಲ್ಲಾ ಮಕ್ಕಳು ಹಾಗೂ ಮಕ್ಕಳ ಪೋಷಕರು ಸಹ 18004252244 ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಲೋಚನೆ ಸೌಲಭ್ಯ ಪಡೆಯಬಹುದು. ಉಚಿತ ಟೆಲಿ- ಆಪ್ತ ಸಮಲೋಚನೆ ಸೌಲಭ್ಯ ವು ಪ್ರಮುಖವಾಗಿ 2 ಸಿಬ್ಬಂದಿಗಳನ್ನು ಹೊಂದಿದ್ದು ಒಬ್ಬ ಸಿಬ್ಬಂದಿ ಬೆಳ್ಳಿಗೆ 8 ರಿಂದ ಮಧ್ಯಾಹ್ನ 2 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ರವರಗೆ ಕೆಲಸ ನಿರ್ವಹಿಸುತ್ತಾರೆ. ಇವರು ಪ್ರಥಮವಾಗಿ ಮಗುವಿನ ಕರೆಗಳನ್ನು ಸ್ವೀಕರಿಸಿ ಮಗುವಿನ ನಿರ್ದಿಷ್ಟ ವಾದ ಸಮಾಲೋಚನೆಯ ಅವಶ್ಯಕತೆಯನ್ನು ಆಧರಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ದಮನಿತ ಮಹಿಳೆಯರಿಗೆ ಜಿಲ್ಲೆಯ ಬ್ಯಾಂಕ್ ಪ್ರಾಯೋಜಿತ ಸಂಸ್ಥೆಗಳ ಮೂಲಕ ಕ್ಯಾಂಡಲ್ ಮೇಕಿಂಗ್, ಕ್ಯಾರಿ ಬ್ಯಾಗ್, ಹರ್ಬಲ್ ಸೋಪ್ , ಡಿಟರ್ಜೆಂಟ್, ಫಿನಾಯಿಲ್, ಕೃತಕ ಆಭರಣ, ಹೋಂ ನರ್ಸಿಂಗ್, ಅಣಬೆ ಕೃಷಿ, ಅಲಂಕಾರಿಕ ವಸ್ತುಗಳ ತಯಾರಿಕೆ ಇನ್ನಿತರ ಕೌಶಲ್ಯ ಚಟುವಟಿಕೆಗಳಲ್ಲಿ ಉಚಿತ ತರಬೇತಿ ನೀಡಲಾಗುವುದು. ಆಸಕ್ತ ದಮನಿತ ಮಹಿಳೆಯರು ಇಲಾಖೆಯಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೂ ತರಬೇತಿಯನ್ನು ನೀಡಲು ಆಸಕ್ತಿಯುಳ್ಳ ರುಡ್‌ಸೆಟ್ / ಬ್ಯಾಂಕ್ ನಿರ್ಮಿತ ತರಬೇತಿ ಸಂಸ್ಥೆಗಳು/ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಜೀವನೋಪಾಯ ಇಲಾಖೆಗಳಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪ್ರಸ್ತಾವನೆ ಕೂಡಾ ಆಹ್ವಾನಿಸಿದ್ದು ಜುಲೈ 31 ರೊಳಗೆ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ರಜತಾದ್ರಿ ಮಣಿಪಾಲ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574978 ನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಮೇಲ್‌ಗಂಗೊಳ್ಳಿ ರಾಮ ಪೈ ಮಠದ ಬಳಿಯ ನಿವಾಸಿ ಮುಕುಂದ ನಾಯಕ್ ಎಂಬುವರ ವಾಸ್ತವ್ಯದ ಮನೆ ಭಾರೀ ಮಳೆಗೆ ಗುರುವಾರ ರಾತ್ರಿ ಸಂಪೂರ್ಣವಾಗಿ ಧರೆಶಾಯಿಯಾಗಿದೆ. ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಪೀಠೋಪಕರಣ ಸಹಿತ ಇನ್ನಿತರ ವಸ್ತುಗಳು ಮನೆಯ ಅವಶೇಷಗಳ ಅಡಿ ಸಿಲುಕಿ ಹಾನಿಗೊಳಗಾಗಿದೆ. ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಮುರಿದು ಬೀಳುತ್ತಿರುವ ಸದ್ದು ಕೇಳುತ್ತಿದ್ದಂತೆಯೇ ಮನೆಯಲ್ಲಿದ್ದ ಮುಕುಂದ ನಾಯಕ್, ಅವರ ತಾಯಿ, ತಂಗಿ ಮತ್ತು ತಮ್ಮ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದರಿಂದ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಗೋಡೆಗಳು ಹಾಗೂ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ರಾಘವೇಂದ್ರ ಪೈ ಹಾಗೂ ಬಿ.ಗಣೇಶ ಶೆಣೈ ಮತ್ತಿತರರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಕುಂದಾಪುರ ತಹಶೀಲ್ದಾರ್ ಅವರಿಗೆ ಕರೆ…
