ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್ ವಿಪತ್ತಿನ ಸಹಾಯ ನಿಧಿ ರೋಟರಿ ಜಿಲ್ಲೆ 3182 ಜೋನ್-1ರ ವತಿಯಿಂದ ಸುಮಾರು ಎರಡು ಲಕ್ಷದ ಐವತ್ತು ಸಾವಿರ ಮೌಲ್ಯದ ಪಿಪಿಇ ಕಿಟ್, ಎನ್-೯೫ ಮಾಸ್ಕ್, ಟ್ರಿಪಲ್ ಲೇಯರ್ ಮಾಸ್ಕ್, ಥರ್ಮಲ್ ಸ್ಕ್ಯಾನರ್, ರೆಸ್ಪಿರೇಟರ್ ಹಾಗೂ ಪ್ಲಸ್ ಒಕ್ಸ್‌ಮಿಟರ್ ಕೊವೀಡ್ ಪರಿಕರಣಗಳನ್ನು ಜೋನ್-1ರ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿಯವರು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೋನ್-1 ರ ಅಸಿಸ್ಟೆಂಟ್ ಗವರ್ನರ್ ಡಾ. ನಾಗಭೂಷಣ ಉಡುಪ ಅವರು 2019-20 ನೇ ಸಾಲಿನ ರೋಟರಿ ಜಿಲ್ಲೆ 3182 ಗವರ್ನರ್ ಬಿ.ಎನ್. ರಮೇಶ್ ಹಾಗೂ ವಲಯ 1ರ ಎಲ್ಲಾ ರೋಟರಿ ಅಧ್ಯಕ್ಷ, ಕಾರ್ಯದರ್ಶಿ, ವಲಯ ಸೇನಾನಿಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಆಸ್ಪತ್ರೆ ಕುಂದಾಪುರದ ಪಿಜಿಷೀಯನ್ ಡಾ. ನಾಗೇಶ, ಸೀನಿಯರ್ ಪಾರಮೆಸಿಸ್ಟ್ ಬಿ.ಎಮ್. ಚಂದ್ರಶೇಖರ್ ಹಾಗೂ ರೋಟರಿ ಕುಂದಾಪುರ ದಕ್ಷಿಣದ ನಿಕಟಪೂರ್ವಾಧ್ಯಕ್ಷ ದೇವರಾಜ್ ಉಪಸ್ಥಿತರಿದ್ದರು.