ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಮುಂಬಯಿಯಲ್ಲಿ ನೆಲೆಸಿರುವ ಕರಾವಳಿಗರು ತಮ್ಮ ಊರಿಗೆ ಮರಳಲು ಉಡುಪಿ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದ್ದು, ಸೇವಾಸಿಂಧುವಿನ ಮೂಲಕ ಅರ್ಜಿ ಸಲ್ಲಿಸಿ, ಪಾಸ್ ಪಡೆದು ಊರಿನಲ್ಲಿ ಕ್ವಾರಂಟೈನ್ಗೆ ಒಳಪಡುವವರಿಗೆ ಮಾತ್ರ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಸದೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಶೇಷ ಚರ್ಚೆ ನಡೆದು ಮುಂಬಯಿಯಿಂದ ಆಗಮಿಸುವವರಿಗೆ ಷರತ್ತುಬದ್ಧ ಅನುಮತಿ ನೀಡಲು ಸಭೆ ನಿರ್ಧರಿಸಿತು. ಇವರು ಮೊದಲು 14 ದಿನ ಶಾಲೆ, ಕಾಲೇಜು, ಹಾಸ್ಟೆಲ್ಗಳಲ್ಲಿ (ಇಸ್ಟಿಟ್ಯೂಷನಲ್ ಕ್ವಾರಂಟೈನ್) ಕ್ವಾರಂಟೈನ್ನಲ್ಲಿರಬೇಕು, ಬಳಿಕ 14 ದಿನ ಹೋಮ್ ಕ್ವಾರಂಟೈನ್ನಲ್ಲಿರಬೇಕು. ಶಾಲೆ ಕಾಲೇಜುಗಳಲ್ಲಿ ಉಳಿದುಕೊಳ್ಳಲು ಕಷ್ಟ ಎನ್ನುವವರು ಹಣ ಪಾವತಿಸಿ ಹೊಟೇಲ್ ಲಾಡ್ಜ್ ಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಲ್ಲಿರುವ ಉಡುಪಿ ಜಿಲ್ಲೆಯವರು ಸೇವಾಸಿಂಧು ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆದು ಖಾಸಗಿ ವಾಹನಗಳ ಮೂಲಕ ಜಿಲ್ಲೆ ಪ್ರವೇಶಿಸಬೇಕು. ಗಡಿ ಪ್ರವೇಶಿಸಿದ ನಂತರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು, ಮೇ.7: ವಾರದ ಹಿಂದೆ ಬೈಂದೂರು ಭಾಗದ ನಾಗರಿಕರಲ್ಲಿ ಭಾರಿ ಆತಂಕ ಸೃಷ್ಟಿಸಿದ್ದ ‘ಕೋರೋನಾ ಪಾಸಿಟಿವ್’ ಎಂಬ ಸುಳ್ಳುಸುದ್ದಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಿದೆ. ಮೇ.1ರ ರಾತ್ರಿ ಬೈಂದೂರು ತಾಲೂಕಿನ ಕಳವಾಡಿಗೆ ಬಂದಿದ್ದ ವ್ಯಕ್ತಿಯೋರ್ವನಿಗೆ ಬೆಳಗಾವಿಯಲ್ಲಿ ಮಾಡಲಾಗಿದ್ದ ಕೋರೋನಾ ಟೆಸ್ಟ್ ವರದಿ ನೆಗೆಟಿವ್ ಬಂದಿರುವುದು ಮೇ.2ರಂದು ಖಚಿತವಾಗಿತ್ತು. ಅಷ್ಟರಲ್ಲಾಗಲೇ ಆ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವ ವದಂತಿ ಹರಿದಾಡಿದ್ದರಿಂದ ಉಡುಪಿಯಿಂದಲೂ ಪರೀಕ್ಷೆಗೆ ಕಳುಹಿಸಲಾಗಿದ್ದ ಕೋರೋನಾ ಟೆಸ್ಟ್ ವರದಿ ನಿನ್ನೆ ದೊರಕಿದ್ದು, ಅದರಲ್ಲಿಯೂ ಆತನಿಗೆಕೊರೋನಾ ನೆಗೆಟಿವ್ ಇರುವುದು ಖಾತ್ರಿಯಾಗಿದೆ. ಬೆಳಗಾವಿಯ ಕಾನಾಪುರದಿಂದ ಬೈಂದೂರು ಕಳವಾಡಿಯ ಬಂದಿದ್ದ ವ್ಯಕ್ತಿಯೋರ್ವರಿಗೆ, ಬೆಳಗಾವಿಯ ಆಸ್ಪತ್ರೆಯಲ್ಲಿ ಕೋರೋನಾ ಟೆಸ್ಟಿಂಗ್ ವರದಿ ಅಪ್ಡೇಟ್ ಮಾಡುವ ಸಂದರ್ಭ ಆಗಿದ್ದ ಯಡವಟ್ಟಿನಿಂದಾಗಿ ಆರೋಗ್ಯ ಸೇತು ಆ್ಯಪ್ ಕೊರೋನಾ ಪಾಸಿಟಿವ್ ಇದೆ ಎಂದು ತೋರಿಸಿತ್ತು ಎನ್ನಲಾಗಿದೆ. ಅದರ ಆಧಾರದ ಮೇಲೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯನ್ನು ಕೂಡಲೇ ಆಂಬುಲೆನ್ಸ್ ಮೂಲಕ ಕುಂದಾಪುರದ ಐಸೋಲೇಶನ್ ವಾರ್ಡ್ ಕರೆದೊಯ್ದು ಆತನ ಗಂಟಲು ದ್ರವವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರವು ಇರುವ ೫ ವೈದ್ಯಾಧಿಕಾರಿ ಹುದ್ದೆಗೆ ಎಂ.ಬಿ.ಬಿ.ಎಸ್ ವಿದ್ಯಾರ್ಹತೆಯ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿಯವರನ್ನು, ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಅಥವಾ ನೇರ ನೇಮಕಾತಿ ಆಗುವವರೆಗೆ/ಖಾಯಂ ವೈದ್ಯರು ವರ್ಗಾವಣೆಯಿಂದ ಹುದ್ದೆ ಭರ್ತಿಯಾದಲ್ಲಿ (ಯಾವುದು ಮೊದಲೂ ಅಲ್ಲಿಯವರೆಗೆ) ನೇಮಕಾತಿ ಮಾಡಲು ಎಂ.ಬಿ.ಬಿ.ಎಸ್ ವಿದ್ಯಾರ್ಹತೆ ಹೊಂದಿರುವ ವೈದ್ಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ, ಅಜ್ಜರಕಾಡು, ಜಿಲ್ಲಾಸ್ಪತ್ರೆ ಆವರಣ, ಉಡುಪಿ ಇಲ್ಲಿಂದ ಪಡೆಯಬಹುದಾಗಿದೆ. ಅಜಿ ಸಲ್ಲಿಸಲು ಮೇ 21ರ ಸಂಜೆ 5 ಗಂಟೆಯ ಕೊನೆಯ ದಿನಾಂಕವಾಗಿದ್ದು, ಸಂದರ್ಶನ ದಿನಾಂಕದಂದು ಖಾಲಿ ಇರುವ ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡಲಾಗುವುದು. ನೇಮಕಾತಿಗೆ ಸಂಬಂದಿಸಿದ ಮಾಹಿತಿಯನ್ನು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ ಜಿಲ್ಲೆ ದೂ.ಸಂ.0820-2536650ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ನಿಂದ ಬೈಂದೂರು ಭಾಗದ ಗೂಡ್ಸ್ ರಿಕ್ಷಾ ಚಾಲಕರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರ್ ಕಿಟ್ ವಿತರಿಸಿದರು. ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ಎಂ. ವಿನಾಯಕ ರಾವ್, ಕಾರ್ಯನಿರ್ವಹಣಾಧಿಕಾರಿ ಸೀತರಾಮ ಮಡಿವಾಳ, ಶಾಖಾ ಪ್ರಬಂಧಕ ನಾಗರಾಜ ಪಿ. ಯಡ್ತರೆ, ಎಸ್ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಯುವಕರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಡ್ತರೆ ಜಂಕ್ಷನ್ ಬಳಿ ಬುಧವಾರ ಸಂಜೆಯ ಹೊತ್ತಿಗೆ ನಡೆದಿದೆ. ಯಡ್ತರೆ ಬಾಳೆಹಿತ್ಲು ನಿವಾಸಿ ಬಾಬು ದೇವಾಡಿಗರ ಪುತ್ರ ದಿಲೀಪ್ ಕುಮಾರ್ (24) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಬು ದೇವಾಡಿಗ ಹಾಗೂ ಅವರ ಪುತ್ರ ದಿಲೀಪ್ ಕುಮಾರ್ ತಮ್ಮ ಹೋಟೆಲ್ನಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಆಪಾದಿತ ಸುಕೇಶ್ ಪೂಜಾರಿ, ಆಕಾಶ್ ಪೂಜಾರಿ, ರೋಶನ್, ಶಿವರಾಜ್ ಹಾಗೂ ಕಿರಣ್ ಎನ್ನುವರು ತಲವಾರು ದಾಳಿ ನಡೆಸಿದ್ದಲ್ಲದೇ ರಾಡು ಹಾಗೂ ದೊಣ್ಣೆಯಿಂದ ಥಳಿಸಿ ಕೊಲೆಗೆ ಯತ್ನಿಸಿದ್ದಾರೆ. ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಿಲೀಪ್ ತಿಳಿಸಿದ್ದಾನೆ. ತಲೆ, ಮುಖ, ದೇಹದ ಮೇಲೆ ಗಂಭೀರ ಗಾಯವಾಗಿದ್ದ ದೀಪಕ್ನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೈಂದೂರು ಪೊಲೀಸರು ತನಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಂಗಮ್ನ ಬಳಿ ಅಪರಿಚಿತ ವ್ಯಕ್ತಿಯೋರ್ವ ವಿಪರೀತ ಮದ್ಯ ಸೇವಿಸಿ ಮೃತಪಟ್ಟಿರುವುದು ವರದಿಯಾಗಿದೆ. ಸಂಗಮ್ ರಸ್ತೆಯ ಪಶ್ಚಿಮ ಬದಿಯ ಮಣ್ಣು ರಸ್ತೆಯಲ್ಲಿ ಸುಮಾರು ೩೫ ರಿಂದ ೪೦ ವರ್ಷದ ಗಂಡಸಿನ ಮೃತದೇಹ ಕಂಡುಬಂದಿದ್ದು, ವ್ಯಕ್ತಿಯು ವಿಪರೀತ ಮದ್ಯ ಸೇವನೆ ಮಾಡಿ ಹೃದಯಾಘಾತದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದೆಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೋಟದಲ್ಲಿದ್ದ ಬಾವಿಗೆ ಬಿದ್ದ ಜಿಂಕೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ತಾಲೂಕಿನ ಕೋಟೇಶ್ವರ ಸಮೀಪದ ಅಸೋಡು ನಾಯ್ಕರಗುಡ್ಡೆ ಎಂಬಲ್ಲಿ ನಡೆದಿದೆ. ಖಾಸಗಿ ವ್ಯಕ್ತಿಯೋರ್ವರ ತೋಟದ ಬಾವಿಗೆ ಜಿಂಕೆಯೊಂದು ಬಿದ್ದಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಕುಂದಾಪುರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಇಲಾಖಾ ಸಿಬ್ಬಂದಿಗಳು ೪೦ ಅಡಿಗೂ ಅಧಿಕ ಆಳವಿರುವ ಬಾವಿಯಲ್ಲಿದ್ದ ಜಿಂಕೆಯನ್ನು ಮೇಲಕ್ಕೆತ್ತಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಚೇತರಿಸಿಕೊಂಡ ಜಿಂಕೆ ಮತ್ತೆ ಕಾಡಿನತ್ತ ಓಡಿಹೋಗಿದೆ. ಕುಂದಾಪುರ ಆರ್.ಎಫ್.ಒ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಉದಯ್, ಅರಣ್ಯ ರಕ್ಷಕಾರದ ಮಾಲತಿ, ವೀಕ್ಷಕ ಸೋಮಶೇಖರ್ ಹಾಗೂ ಸ್ಥಳಿಯರು ಜಿಂಕೆ ರಕ್ಷಣೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2019-20 ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಸುಹಾಸಿನಿ ಆರ್. ಗೋಟ 600ಕ್ಕೆ 595 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ನನಗೆ ಪೊಲೀಸರ ಭದ್ರತೆ ಬೇಡ, ಕಾರ್ಯಕರ್ತರೇ ಶ್ರೀರಕ್ಷೆ. ರಾಜ್ಯದ ಜನಸಂಖ್ಯೆ ಹೋಲಿಸಿದರೆ ಪೊಲೀಸರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಇಬ್ಬರು ಗನ್ಮ್ಯಾನ್ಗಳಿಗೂ ವಾಪಾಸ್ ಕಳುಹಿಸಿದ್ದೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಕುಂದಾಪುರದಲ್ಲಿ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ನಿತ್ಯವೂ ವಿದೇಶದಿಂದ ಹಲವು ಇಂಟರ್ನೆಟ್ ಬೆದರಿಕೆ ಕರೆ ಬರುತ್ತಿದೆ. ಈ ಬಗ್ಗೆ ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಬಳಿ ಮಾತನಾಡಿದ್ದೇನೆ. ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. ಕಳೆದ ೨ ವರ್ಷದಿಂದ ಇಂತಹ ಕರೆ ಬರುತ್ತಿದ್ದ ಬಗ್ಗೆ ಈ ಹಿಂದೆಯೂ ದೂರು ನೀಡಲಾಗಿತ್ತು. ಪಿಎಫ್ಐ ಹಾಗೂ ಎಸ್ಡಿಪಿಐ ವಿರುದ್ಧ ಮಾತನಾಡಿದಾಗ ಇಂತಹ ಕರೆಗಳು ಬಂದಿದ್ದವು ಇತ್ತೀಚೆಗೆ ತಬ್ಲಿಘಿ ಜಮಾತ್ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಕರೆಗಳು ಬರುತ್ತಿದೆ. ಹೀಗೆ ಬೆದರಿಕೆ ಹಾಕುತ್ತಿರುವ ಕರೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದು, ತನಿಕೆ ನಡೆಸಲಿ ಎಂದರು. ಪಡಿಯಾರ್ ಮನೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗಳಿಗೆ ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಆನ್ಲೈನ್ ತರಗತಿಗಳಿಗೆ ಚಾಲನೆ ನೀಡಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ 7:30 ರಿಂದ 10:30 ರವರೆಗೆ ಆನ್ಲೈನ್ನಲ್ಲಿ ತರಗತಿಗಳು ನೇರಪ್ರಸಾರಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ತಯಾರಿ ನಡೆಸಿದ್ದು ಬ್ಯಾಂಕಿಂಗ್ ಫೌಂಡೇಷನ್, ಸಿ.ಎ./ಸಿಎಸ್ ಫೌಂಡೇಷನ್ ಕೋರ್ಸಗಳನು ಕೂಡ ಆನ್ಲೈನ್ನಲ್ಲಿ ಪರಿಚಯಿಸುವುದಾಗಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ. ________________ Need a Website / Mobile App / Bulk SMS / Online Class Help for your Institutions or Business? Call 9743877358 / Mails us for quotation: samashtimv@gmail.com …
