ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಆಡಳಿತ ಕಛೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ವಾರಂಟೈನ್‌ನಲ್ಲಿರುವವರ ವಿವರ, ವಿದೇಶ, ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರ ವಿವರವನ್ನು ಕಲೆಹಾಕುತ್ತಿರುವ ರೀತಿ, ಚಿಕಿತ್ಸಾ ಹಂತಗಳು, ಕೊವೀಡ್ ರೋಗಿಗಳ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂಧಿಗಳಿಗೆ ಅಗತ್ಯವಿರುವ ಕಿಟ್, ಕ್ಷೇತ್ರ ವ್ಯಾಪ್ತಿಯಲ್ಲಿ ಪಡಿತರ ವಿತರಿಸಲಾಗುತ್ತಿರುವ ಕ್ರಮ, ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪಡಿತರ, ಪೊಲೀಸ್ ಇಲಾಖೆಯ ಭದ್ರತಾ ಕಾರ್ಯ, ಕೃಷಿ ಸಂಬಂಧಿತ ತೊಡಕುಗಳು, ಬೆಸಿಗೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಮೊದಲಾದವುಗಳ ಬಗೆಗೆ ಅಧಿಕಾರಿಗಳ ಮಾಹಿತಿ ಪಡೆದುಕೊಂಡು, ಪರಿಣಾಮಕಾರಿಯಾಗಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ದೇಶದಾದ್ಯಂತ ವ್ಯಾಪಕವಾಗಿ ಕೋವಿಡ್-19 ಹರಡುತ್ತಿರುವ ಹಿನ್ನೆಯಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಘೋ?ಣೆಯಾಗಿರುವುದರಿಂದ, ರೈತರಿಗೆ ಕೃಷಿ ಪರಿಕರಗಳ ಲಭ್ಯತೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ವಸ್ತುಗಳಾದ ಬೀಜ, ಗೊಬ್ಬರ, ಪೀಡೆನಾಶಕಗಳು, ಕೃಷಿ ಕೊಯ್ಲು ಯಂತ್ರೋಪಕರಣಗಳ ಸಾಗಣೆಯಲ್ಲಿ ಕೆಳಗಿನಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಗತ್ಯ ವಸ್ತುಗಳ ಸೇವೆಯಡಿ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಗೊಬ್ಬರ, ಪೀಡೆನಾಶಕ, ಹಾಗೂ ಕೃಷಿ ಯಂತ್ರೋಪಕರಣಗಳು ಸೇರುವುದರಿಂದ, ಸದರಿ ಪರಿಕರಗಳ ವಿತರಣೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸೂಚನೆಗಳನ್ನು ಹಾಗೂ ಸುರಕ್ಷಿತ ಕ್ರಮಗಳನ್ನು ತಪ್ಪದೆ ಪಾಲಿಸಲು ಸಂಬಂಧಿಸಿದ ವಿತರಕರಿಗೆ ಕಡ್ಡಾಯಗೊಳಿಸುವುದು. ವಿತರಣಾ ಸಮಯದಲ್ಲಿ ಗೊಂದಲಗಳಿಗೆ ಎಡೆಮಾಡದೆ, ಕೃಷಿ ಪರಿಕರಗಳ ವಿತರಣೆಗಾಗಿ ಅನುಮತಿ ಚೀಟಿಯನ್ನು ಅಧಿಕೃತ ಮಾರಾಟ/ವಿತರಕರಿಗೆ ನೀಡಲು ಕ್ರಮ ಕೈಗೊಳ್ಳುವುದು. ಪರಿಕರಗಳನ್ನು ಖರೀದಿಸುವ ವೇಳೆಯಲ್ಲಿ ರೈತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರಾಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ವಿಧಿಸಿರುವ ನಿರ್ಭಂದಗಳಿಂದಾಗಿ ಹಸಿವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗೆ ಶೆಲ್ಟರ್ ರೂಂಗಳಲ್ಲಿ ಸೂಕ್ತ ವಸತಿ ಮತ್ತು ಊಟೋಪಚಾರ ವ್ಯವಸ್ಥೆಯನ್ನು ದೇವಾಲಯಗಳ ಮೂಲಕ ಒದಗಿಸಿಕೊಡಲು ಉಡುಪಿ ಜಿಲ್ಲಾಡಳಿತ ಸೂಚನೆ ನೀಡಿದೆ. ವಸತಿ ಮತ್ತು ಊಟೋಪಚಾರ ವ್ಯವಸ್ಥೆ ಒದಗಿಸಲು ತಗುಲುವ ವೆಚ್ಚವನ್ನು, ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಂದಾರ್ತಿ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಶ್ರೀ ಅನಂತ ಪದ್ಮನಾಭ ಮತ್ತು ಅರ್ಧ ನಾರೀಶ್ವರ ದೇವಸ್ಥಾನ ಹೆಬ್ರಿ ಈ ದೇವಾಲಯಗಳ ನಿಧಿಯಿಂದ ಭರಿಸಲು ಆಯಾಯಾ ತಾಲೂಕಿನ ಅವಶ್ಯಕತೆಗೆ ಸಂಬಂದಿಸಿದಂತೆ, ಸ್ಥಳೀಯ ತಹಸೀಲ್ದಾರ್‌ಗಳು, ಸಂಬಂದಿಸಿದ ದೇವಾಲಯಗಳ ಆಡಳಿತಾಧಿಕಾರಿ/ಕಾರ್ಯ ನಿರ್ವಹಣಾಧಿಕಾರಿ/ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು/ಆಡಳಿತ ಮೊಕ್ತೇಸರರಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ. ಸಚಿವ ಕೋಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಪಡಿತರ ವಿತರಣೆ ಆರಂಭವಾಗಲಿದ್ದು, ಕೊರೋನಾ ಹಿನ್ನಲೆಯಲ್ಲಿ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಬಂದರು, ಮೀನುಗಾರಿಕೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಮಂಗಳವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿನ ಅಂತ್ಯೋದಯ, ಬಿಪಿಎಲ್ ಮತ್ತು ಆಹಾರ ಪಡೆಯಲು ನೊಂದಾಯಿಸಿರುವ ಎಪಿಲ್ ಕಾರ್ಡ್‌ದಾರರಿಗೆ ಸರಕಾರದ ಸೂಚನೆಯಂತೆ, ಎರಡು ತಿಂಗಳ ಪಡಿತರವನ್ನು ವಿತರಿಸುವಂತೆ ಸೂಚಿಸಿದ ಸಚಿವ ಕೋಟ, ಪಡಿತರ ಪಡೆಯಲು ಒಟಿಪಿ ಸಂಖ್ಯೆಯನ್ನು ಕಡ್ಡಾಯಗೊಳಿಸಿದೇ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿಕೊಂಡು ಪಡಿತರ ವಿತರಿಸಿ, ಪಡಿತರ ವಿತರಣೆಯಲ್ಲಿ ಜನಸಂದಣಿ ತಪ್ಪಿಸಲು, ಪ್ರತಿ ಅಂಗಡಿಯಲ್ಲಿ, ದಿನದಲ್ಲಿ ನಿಗದಿತ ಸಂಖ್ಯೆಯ ಪಡಿತರದಾರರಿಗೆ ಮಾತ್ರ ಅಂಗಡಿಗೆ ಬರುವಂತೆ ಮಾಹಿತಿ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಿಸುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಬಾವಿಕಟ್ಟೆಯ ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘದ ವತಿಯಿಂದ ಗಂಗೊಳ್ಳಿ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಗುರುತಿಸಿದ ಗಂಗೊಳ್ಳಿ ಪರಿಸರದ ಬಡ ಮತ್ತು ವಿಕಲಚೇತನರ ಮನೆಗಳಿಗೆ ತಲಾ ೧೫ ಕೆ.ಜಿ. ಅಕ್ಕಿಯನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು. ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘದ ಅಧ್ಯಕ್ಷ ಜಗದೀಶ ಗಂಗೊಳ್ಳಿ, ಸಂಪತ್ ಎಂ. ಜಿ., ಸಚಿನ್ ಬಿ., ಸವಿನ್ ಡಿ., ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಚಂದ್ರಶೇಖರ ಮತ್ತು ಶ್ರೀಧರ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೊರೋನಾ ಕಾರಣದಿಂದ ಜಿಲ್ಲೆಯಲ್ಲಿ ಅಗತ್ಯ ದಿನಸಿ ವಸ್ತುಗಳಾದ ಅಕ್ಕಿ, ತೆಂಗಿನ ಎಣ್ಣೆ ಪೂರೈಕೆ ಮಾಡುವ ರೈಸ್ ಮಿಲ್ ಮತ್ತು ಎಣ್ಣೆ ಮಿಲ್‌ಗಳ ಮಾಲೀಕರು ತಕ್ಷಣದಿಂದಲೇ ರೈಸ್ ಮಿಲ್ ಗಳನ್ನು ತೆಗೆದು ಎಂದಿನಂತೆ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದ್ದು,ಜಿಲ್ಲೆಗೆ ಹೊರ ಜಿಲ್ಲೆಯಿಂದ ಪೂರೈಕೆಯಾಗುವ ಸಾಮಗ್ರಿಗಳ ವಾಹನಗಳಿಗೆ ಸಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲವಾಗಿದ್ದು, ದಿನಸಿ ವಸ್ತುಗಳ ಕೊರತೆ ಕುರಿತಂತೆ ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗ್ಯವಿಲ್ಲ, ದಿನಸಿ ವಸ್ತುಗಳ ಕೊರತೆಯಾಗದಂತೆ ಎಲ್ಲಾ ಅಗ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ದಿನಸಿ ವಸ್ತು ಪೂರೈಕೆ ಮಾಡುವ ಸಗಟು ವಾಹನಗಳನ್ನು ಎಲ್ಲೂ ತಡೆಹಿಡಿದಿಲ್ಲ, ದಿನಸಿ ಸಾಗಾಟ ವಾಹನಗಳ ಸಂಚಾರವನ್ನು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ತಡೆಯದಂತೆ ಆದೇಶವಿದೆ, ರಖಂ ಮಾರಾಟಗಾರರು ತಮ್ಮ ಅಂಗಡಿಗಳನ್ನು ತೆರೆದು ಚಿಲ್ಲರೆ ಮಾರಾಟಗಾರರಿಗೆ ವಿತರಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ದಿನಸಿ ವಸ್ತುಗಳ ಕೃತಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕಂಡುಬರುವ ಕೊರೋನಾ ಪಾಸಿಟಿವ್ ಪ್ರಕರಣದ ರೋಗಿಗಳಿಗೆ ಚಿಕಿತ್ಸೆ ನೀಡಲು, ಉಡುಪಿ ನಗರದಲ್ಲಿರುವ ಡಾ. ಟಿಎಂಎ ಪೈ ಆಸ್ಪತ್ರೆಯನ್ನು ಮೀಸಲಿಡಲಾಗಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ.ಹೆಚ್.ಎಸ್. ಬಲ್ಲಾಳ್ ಮತ್ತು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಂದಲ್ಲಿ ನಡದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆ: ಆಸ್ಪತ್ರೆಯು 100 ಹಾಸಿಗೆಗಳ ಅಸ್ಪತ್ರೆಯಾಗಿದ್ದು, 11 ಐಸಿಯು ಹಾಸಿಗೆಗಳು, 15 ಎಚ್.ಡಿ.ಯು ಹಾಸಿಗೆಗಳು, 36 ಖಾಸಗಿ ಕೊಠಡಿಗಳಿದ್ದು ಇವುಗಳನ್ನು ಐಸೋಲೇಶನ್ ಉದ್ದೇಶಕ್ಕಾಗಿ ಬಳಸಲಾಗುವುದು, ಜೊತೆಗೆ 43 ಸಾಮಾನ್ಯ ಹಾಸಿಗೆಗಳು ಸಹ ಲಭ್ಯವಿದ್ದು , ಕಸ್ತೂರ್ಬಾ ಆಸ್ಪತ್ರೆ ಹಾಗೂ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯರ ತಂಡ, ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸಹಾಯಕು ಸಿಬ್ಬಂದಿಗಳ ತಂಡ 24*7 ಕಾರ್ಯ ನಿರ್ವಹಿಸಲಿದ್ದು, ಏಪ್ರಿಲ್ 1 ರಿಂದ ಇದು ಸಂಪೂರ್ಣವಾಗಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಮೀಸಲಿಡಲಾಗಿದ್ದು, ಕೋವಿಡ್-19 ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಅಳವಡಿಸಲಾಗಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಶಿರೂರಿನ ದಾಸನಾಡಿ, ಮುದ್ರಮಕ್ಕಿ, ಬೈಂದೂರು ಹಾಗೂ ಹಳಗೇರಿಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರು ಹಾಗೂ ಅಗತ್ಯವುಳ್ಳ ಬಡ ಕುಟುಂಬಕ್ಕೆ ಮುಸ್ಲಿಂ ಒಕ್ಕೂಟ ತಾಲೂಕು ಘಟಕದಿಂದ ಅಕ್ಕಿ, ಬೆಳೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು. ಶಿರೂರಿನಲ್ಲಿ ವಿತರಿಸುವ ವೇಳೆ ಬೈಂದೂರು ಠಾಣಾ ಪಿಎಸೈ ಸಂಗೀತಾ, ಪೊಲೀಸ್ ಸಿಬ್ಬಂದಿಗಳಾದ ಅಶೋಕ್, ಸಂತೋಷ್, ನಾಗೇಶ್ ಮತ್ತು ಸುಧೀರ್, ತಾಲೂಕು ಘಟಕದ ಅಧ್ಯಕ್ಷರಾದ ಹಸನ್ ಮಾವಡ್, ಜಿಲ್ಲಾ ಸಮಿತಿ ಸದಸ್ಯ ತಬ್ರೇಜ್ ನಾಗೂರು ಇದ್ದರು. ಲಾಕ್‌ಡೌನ್ ಸಂದರ್ಭ ಬಡವರು ಹಾಗೂ ಅಗತ್ಯವುಳ್ಳವರಿಗೆ ಆಹಾರ ಸಾಮಾಗ್ರಿ ದೊರೆಯುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಅಂದಾಜು ರೂ.2000 ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಇತರೆ ಅಗತ್ಯವುಳ್ಳವರನ್ನು ಕಂಡುಬಂದರೆ ಅವರಿಗೂ ವಿತರಿಸಲಾಗುವುದು. ಕರೋನಾ ಭೀತಿ ಇರುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. – ಹಸನ್ ಮಾವಡ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸಾಗರ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ವತಿಯಿಂದ ಸಂಕಷ್ಟದಲ್ಲಿರುವವರಿಗಾಗಿ ಆಹಾರ ಸಾಮಾಗ್ರಿ ಮತ್ತು ಔಷಧಿ ಖರೀದಿಗಾಗಿ ರೂ. 50,000ಮೌಲ್ಯ ಚೆಕ್ ಬೈಂದೂರು ತಹಶೀಲ್ದಾರರಿಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಂಸ್ಥೆಯ ವತಿಯಿಂದ ರೂ. 50,000 ಚೆಕ್‌ನ್ನು ಬೈಂದೂರು ತಹಶೀಲ್ದಾರ್ ಬಿ. ಪಿ. ಪೂಜಾರ್ ಅವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಯುವ ಮುಂದಾಳು ಶೇಖರ ಪೂಜಾರಿ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಕುಂದಾಪುರ ಪುರಸಭೆ ಮದ್ದುಗುಡ್ಡೆ ವಾರ್ಡ್ ನಿವಾಸಿಗಳು ತಮ್ಮ ಏರಿಯಾಕ್ಕೆ ಯಾರೂ ಹೊರಗಿನವರು ಬಾರದಂತೆ ನಾಮಫಲಕ ಹಾಕಿದ್ದಾರೆ. ಮದ್ದುಗುಡ್ಡೆ ವಾರ್ಡ್ ಪ್ರವೇಶದಲ್ಲಿ ಗೇಟ್ ಮಾಡಿ ಒಳಗೆ ಹೊರಗೆ ಹೋಗುವವರ ಗೇಟ್ ಮೂಲಕ ಬಿಡುತ್ತಿದ್ದಾರೆ. ಪೊಲೀಸ್ ಗೇಟ್ ರೀತಿಯಲ್ಲಿ ಗೇಟ್ ಅಳವಡಿಸಿದ್ದು, ಹಗ್ಗದ ಮೂಲಕ ಗೇಟ್ ಏರಿಸಿ, ಇಳಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕರೋನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ದಯವಿಟ್ಟು ಹೊರಗಡೆಯವರಿಗೆ ನಮ್ಮಲ್ಲಿ ಪ್ರವೇಶ ಇಲ್ಲ. ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸೋಣ ಎಂಬ ಬೋರ್ಡ್ ಅಳವಡಿಸಲಾಗಿದೆ. ಮದ್ದುಗುಡ್ಡೆ ವಾರ್ಡ್ ನಿವಾಸಿಗಳು ತಮಗೆ ತಾವೇ ನಿರ್ಬಂಧ ಹೇರಿಕೊಳ್ಳುವ ಮೂಲಕ ಮನೆಯಲ್ಲಿ ಉಳಿದಿದ್ದಾರೆ.
