Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿ ನೂತನ ಶಿಲಾಮಯ ದೇಗುಲ ಸಮರ್ಪಣೆ – ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಕ್ರಮಗಳು ಎಪ್ರಿಲ್ 5ರಿಂದ 13ರ ತನಕ ಜರುಗಲಿದ್ದು, ಶುಕ್ರವಾರ ಆಮಂತ್ರಣ ಪತ್ರಿಕೆಯನ್ನು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ  ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ರಘುರಾಮ ಶೆಟ್ಟಿ ಬಿಜೂರು, ಮದನಕುಮಾರ್ ಉಪ್ಪುಂದ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಶಿರೂರು ಬಿಲ್ಲವ ಸಂಘದ ಅಧ್ಯಕ್ಷ ಚಿಕ್ಕು ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ನಾಗರಾಜ ಶೆಟ್ಟಿ, ಆನಂದ ಶೆಟ್ಟಿ ನಾಕಟ್ಟೆ, ನಾಗರಾಜ ಗಾಣಿಗ ಬಂಕೇಶ್ವರ, ಮಂಜಯ್ಯ ಪೂಜಾರಿ ಏಳಜಿತ, ರಘುರಾಮ ಪೂಜಾರಿ ಶಿರೂರು, ಶೇಖರ ಪೂಜಾರಿ ಉಪ್ಪುಂದ, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ ಪಂಜುರ್ಲಿ ಗರಡಿಯಲ್ಲಿ ಪರಿವಾರ ಶಕ್ತಿಗಳ ನೂತನ ಶಿಲಾಮಯ ದೇಗುಲ ಸಮರ್ಪಣೆ – ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಕ್ರಮಗಳು ಎಪ್ರಿಲ್ 5ರಿಂದ 13ರ ತನಕ ಜರುಗಲಿದ್ದು, ಪೂರ್ವಭಾವಿಯಾಗಿ, ಚಪ್ಪರ ಮುಹೂರ್ತ ಕಾರ್ಯಕ್ರಮ ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ರಘುರಾಮ ಶೆಟ್ಟಿ ಬಿಜೂರು, ಮದನಕುಮಾರ್ ಉಪ್ಪುಂದ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಶಿರೂರು ಬಿಲ್ಲವ ಸಂಘದ ಅಧ್ಯಕ್ಷ ಚಿಕ್ಕು ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಕಾರ್ಯದರ್ಶಿ ಕಿಶೋರ್ ಕುಮಾರ್ ಸಸಿಹಿತ್ಲು, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ನಾಗರಾಜ ಶೆಟ್ಟಿ, ಆನಂದ ಶೆಟ್ಟಿ ನಾಕಟ್ಟೆ, ನಾಗರಾಜ ಗಾಣಿಗ ಬಂಕೇಶ್ವರ, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಗಣಕಯಂತ್ರ ವಿಭಾಗದಲ್ಲಿ ವಿಪುಲವಾದ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತಿಹೆಚ್ಚು ತೊಡಗಿಸಿಕೊಂಡಾಗ ಅದರ ಪ್ರತಿಫಲವನ್ನು ಔದ್ಯೋಗಿಕ ಜೀವನದಲ್ಲಿ ಕಂಡುಕೊಳ್ಳಬಹುದು ಎಂದು ಡ್ಯಾನ್ಸ್ಕೆ ಬ್ಯಾಂಕ್ ನ ಸೀನಿಯರ್ ಸಾಫ್ಟ್‌ವೇರ್ ಅರ್ಕಿಟೆಕ್ಟ್ ಕಾತಿಮಯ್ಯ ಹೇಳಿದರು. ಆಳ್ವಾಸ್ ಇಂಜಿನಿರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ವತಿಯಿಂದ ನಡೆದ ’ಟೆಕ್ನೋಫಿಯಾ’ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು. ಡಿಲೈಟ್ ಕಂಪನಿಯ ಡೈರೆಕ್ಟರ್ ಅರುಣ್ ರಾಜ್ ಪುರೋಹಿತ್ ಮಾತಾನಾಡುತ್ತಾ “ಕೇವಲ ಹಣಗಳಿಸುವದು ಮತ್ತು ಒಳ್ಳೆಯ ಉದ್ಯೋಗವನ್ನು ಪಡಯುವುದು ನಿಜವಾದ ಜೀವನವಲ್ಲ. ಅದರ ಜತೆಗೆ ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮಿಂದ ಏನು ಮಾಡಲು ಸಾದ್ಯ ಎಂಬುದನ್ನು ಯೋಚಿಸಬೇಕು. ನಾವೆಲ್ಲರು ಎಲ್ಲರ ಕಷ್ಟ ದು:ಖಗಳಲ್ಲಿ ಭಾಗಿಯಾಗಿ ಮಾನವೀಯತೆಯಿಂದ ಬದುಕೋಣ ಎಂದರು. ಕಾರ‍್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಇಂಜಿನಿರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್ ಮಾತನಾಡಿ, ಗಣಕಯಂತ್ರ ವಿಭಾಗ ಅತ್ಯಂತ ಕ್ಲಿಷ್ಟ ಮತ್ತು ಸವಾಲಿನ ವಿಭಾಗವಾದ್ದರಿಂದ ವಿದ್ಯಾರ್ಥಿಗಳು ದಿನೇ ದಿನೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಧಾರವಾಡದ ಉದ್ಯಮಿ ಯು. ಬಿ. ಶೆಟ್ಟಿಯವರು ತಮ್ಮ ಯುಬಿಎಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣ ಇಲಾಖೆಯ ಮೌಖಿಕ ಆದೇಶದೊಂದಿಗೆ ಶಾಲೆಯನ್ನು ಗುರುವಾರ ದತ್ತು ಸ್ವೀಕರಿಸಿದರು. ಶಾಲಾ ದತ್ತು ಸ್ವೀಕಾರ ಹಾಗೂ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತದೆ, ಸರ್ಕಾರಿ ಶಾಲೆಗಳು ಮುನ್ನೆಲೆಯಲ್ಲಿ ಗುರುತಿಸಿಕೊಳ್ಳಬೇಕಾದರೆ ಖಾಸಗಿ ಸಹಭಾಗಿತ್ವ ಅಗತ್ಯವಾಗಿದ್ದು, ಯು.ಬಿ. ಶೆಟ್ಟಿ ಅಂತಹ ದಾನಿಗಳು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಪ್ರತಿ ಊರಿನಲ್ಲಿ ದೇವಾಲಯಗಳಿರುವಂತೆಯೇ ಅಲ್ಲಿನ ಶಾಲೆಗಳು ಕೂಡಾ ಸುಸ್ಥಿತಿಯಲ್ಲಿದ್ದರೇ ಮಾತ್ರ ಆ ಊರಿಗೆ ಮನ್ನಣೆ ಲಭಿಸುತ್ತದೆ ಎಂದರು. ಬೈಂದೂರು ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಅಶೋಕಕುಮಾರ ಬಾಡ ಕಾರ್ಯಕ್ರಮ ಉದ್ಘಾಟಿಸಿ ಶುಭಸಂಶನೆಗೈದರು. ತಾ.ಪಂ. ಸದಸ್ಯೆ…

Read More

ಕುಂದಾಪ್ರ ಡಾಟ್ ಕಾಂ ವರದಿ ಉಡುಪಿ: ಉಡುಪಿ ಜಿಲ್ಲೆ ಕನ್ನಡ ನಾಡು ನುಡಿಯ ಸಂಭ್ರಮದ ಹಬ್ಬಕ್ಕೆ ಸಜ್ಜಾಗುತ್ತಿದೆ. ಕನ್ನಡದ ಕಂಪು ಇಡೀ ಜಿಲ್ಲೆ ಪಸರಿಸಲು ವೇದಿಕೆ ತಯಾರಾಗಿದೆ. ಸಾಹಿತ್ಯ ಲೋಕದ ದಿಗ್ಗಜರ ಅಪೂರ್ವ ಸಂಗಮಕ್ಕೆ ನಾಂದಿಯಾಗಲು 14 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಯಾರಾಗಿದೆ. ಕನ್ನಡದ ತೇರು ಎಳೆಯಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಾರೆ. ಹೌದು ಕನ್ನಡ-ನಾಡು ನುಡಿಯನ್ನು ಬಿಂಬಿಸುವ, ಕನ್ನಡ ಸಾಹಿತ್ಯ ಲೋಕದ ಮಜಲುಗಳನ್ನು ಬಿಂಬಿಸುವ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಇರುವಂತಿಗೆ-2020(ಹೊಸ ದಿಸೆಯ ಬೆಳಕು) ಹೆಸರಿನೊಂದಿಗೆ ಮಾರ್ಚ್ 14 ಹಾಗೂ 15 ರಂದು ಚೇತನ ಫ್ರೌಡಶಾಲೆ ಹಂಗಾರಕಟ್ಟೆಯಲ್ಲಿ ಸಂಭ್ರಮದ ವಾತವರಣ. ಇಲ್ಲಿ ಹಾಡು -ನೃತ್ಯ-ಕವಿಗೋಷ್ಠಿ-ಸಂವಾದ-ಸಾಧಕರನ್ನು ಗುರುತಿಸುವುದು ಇನ್ನೂ ಹತ್ತು ಹಲವಾರು ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ಇದೆ. ಸಮ್ಮೇಳನದ ಅಧ್ಯಕ್ಷೆ ವೈದೇಹಿ: ಕನ್ನಡ ಸಾಹಿಯ ಲೋಕಕ್ಕೆ ಕರಾವಳಿಗರ ಪಾಲು ತುಂಬಾನೇ ಇದೆ. ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕಾರಂತಜ್ಜ ನಮ್ಮ ಕರಾವಳಿಯವರು ಎಂಬುವುದು ನಮ್ಮ ಹೆಮ್ಮೆ. ಹಾಗೆಯೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕರ್ನಾಟಕ ಮುಸ್ಲಿಂ ಜಮಾಅತ್‌ನ ಬೈಂದೂರು ತಾಲ್ಲೂಕು ಸಮಿತಿ ಘೋಷಣಾ ಸಮಾವೇಶವು ನಾವುಂದ ಬುಸ್ತಾನುಲ್ ಉಲೂಂ ಮದ್ರಸ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಎಫ್. ರಫೀಖ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುದರ್ರಿಸ್ ಅಬ್ದುಲ್ ಲತೀಫ್ ಅಲ್ ಫಾಳಿಲಿ ಸಮಾವೇಶವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ಬಿ. ಸಿ. ಬಶೀರ್ ಅಲಿ ಮೂಳೂರು ವಿಷಯ ಮಂಡಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರೂ, ಜಿಲ್ಲಾ ಕಾರ್ಯದರ್ಶಿಯೂ ಆದ ಕೆ. ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿಕ ಭಾಷಣ ಮಾಡಿದರು. ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ಬೈಂದೂರು ತಾಲ್ಲೂಕು ಸಮಿತಿಯ ಆಯ್ಕೆ ಪ್ರಕ್ರಿಯೆಯ ನೇತೃತ್ವ ವಹಿಸಿ ನೂತನ ಸಮಿತಿಯನ್ನು ಘೋಷಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ವಂದಿಸಿದರು. ಸಮಾವೇಶದಲ್ಲಿ ಕರ್ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ನೂತನ ಶಿಲಾದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ ಹಾಗೂ ಅಷ್ಟಬಂಧ ಸಹಸ್ರ ಕಲಶ, ಬ್ರಹ್ಮಕುಂಬಾಭಿಷೇಕ ಹಾಗೂ ಮಹಾ ಅನ್ನಸಂತರ್ಪಣೆಗೆ ಕಾರ್ಯಕ್ರಮ ಮಾಚ್ 27ರಿಂದ ಎಪ್ರಿಲ್ 04ರ ತನಕ ಜರುಗಲಿದ್ದು, ಪೂರ್ವಭಾವಿಯಾಗಿ ಬುಧವಾರ ದೇವಳದ ವಠಾರದಲ್ಲಿ ಚಪ್ಪರ ಮುಹೂರ್ತ ಜರುಗಿತು. ಆಗಮ ಪಂಡಿತರಾದ ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ, ಅರ್ಚಕರುಗಳಾಗ ಗಣಪಯ್ಯ ಹಾಗೂ ವೆಂಕಟಾಚಲ ಮಯ್ಯ ಅವರ ಮಾರ್ಗದರ್ಶನದಲ್ಲಿ ಚಪ್ಪರ ಮೂಹೂರ್ತ ಕಾರ್ಯ ನಡೆಯಿತು. ಈ ಸಂದರ್ಭ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಚಂದ್ರಶೇಖರ ಶೆಟ್ಟಿ ಕಳವಾಡಿ, ಕೆ. ವಸಂತ ಕುಮಾರ್ ಶೆಟ್ಟಿ ಕಾರಿಕಟ್ಟೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಿವಾಕರ ಹೆಗ್ಡೆ ಕಳವಾಡಿ, ಕಾರ್ಯದರ್ಶಿ ಸಂಜೀವ ಆಚಾರ್ಯ, ಉತ್ಸವ ಸಮಿತಿ ಅಧ್ಯಕ್ಷರಾದ ಹೆಚ್. ವಸಂತ ಹೆಗ್ಡೆ ಕಳವಾಡಿ, ದೇವಳದ ಟ್ರಸ್ಟೀಗಳಾದ ಎಸ್. ರಾಜು ಪೂಜಾರಿ ಯಡ್ತರೆ, ರಾಮ ಮೊಗವೀರ ಕಳವಾಡಿ, ಸೀತಾರಾಮ ಕೊಠಾರಿ, ಸುಬ್ಬಣ್ಣ ಶೆಟ್ಟಿ ಸಣ್ಮನೆ, ನಾಗಯ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಜನವರಿ 2019 ರಿಂದ ಡಿಸೆಂಬರ್ 2019 ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ವಿವಿಧ ಬಹುಮಾನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕೃತಿಗಳ ಪ್ರಕಾಶಕರು/ ಮುದ್ರಕರು/ ಕಲಾವಿದರಿಗೆ ಕನ್ನಡ ಪುಸ್ತಕ ಸೊಗಸು -2019 ಬಹುಮಾನವನ್ನು ನೀಡಲಾಗುವುದು. ಆಸಕ್ತ ಪ್ರಕಾಶಕರು/ ಮುದ್ರಕರು/ ಕಲಾವಿದರು/ ಲೇಖಕರುಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು/ ಚಿತ್ರ ಕಲಾವಿದರ ಪೂರ್ಣ ವಿಳಾಸ ಈ ಎಲ್ಲಾ ವಿವರಗಳೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಏಪ್ರಿಲ್ 4 ರ ಒಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಬೆಂಗಳೂರು ಇಲ್ಲಿಗೆ ಕಳುಹಿಸಬೇಕು. ಸಲ್ಲಿಸಲಾಗುವ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಬೆಂಗಳೂರು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗ ಹಾಗೂ ಶ್ರೀ ಶಾರದಾ ಕನ್‌ಸೆಲ್ಟೆನ್ಸಿ ಸರ್ವಿಸಸ್, ಆದಾಯ ತೆರಿಗೆ ಪಾನ್ ಕಾರ್ಡ್ ಸೆಂಟರ್, ಕುಂದಾಪುರ ಇದರ ವತಿಯಿಂದ ವಿದ್ಯಾರ್ಥಿಗಳಿಗೆ 2 ದಿನಗಳ ಕಾಲ ಪಾನ್ ಕಾರ್ಡ್ ಮೇಳ ಮತ್ತು ಅರಿವು ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಶ್ ಶೆಟ್ಟಿ ವಕ್ವಾಡಿ ಹಾಗೂ ಶ್ರೀ ಶಾರದಾ ಕನ್‌ಸೆಲ್ಟೆನ್ಸಿ ಸರ್ವಿಸ್‌ನ ನರ್ಮದಾ ಎಸ್. ಪ್ರಭು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019 ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು, ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮ ದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ. ಮಾಡಿಸಿದಾಗ ಕನಿಷ್ಠ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. ಕೃತಿಯು ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ…

Read More