ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಪ್ರೇರಣಾ ಯುವ ವೇದಿಕೆ (ರಿ) ನೈಕಂಬ್ಳಿ ಚಿತ್ತೂರು ಇದರ ನಾಲ್ಕನೇ ಅವಧಿಗೆ ಅಧ್ಯಕ್ಷರಾಗಿ ರಾಘವೇಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ . ಸಂಸ್ಥೆಯ ಉಪಾಧ್ಯಕ್ಷರಾಗಿ ಪ್ರತಾಪ ಶೆಟ್ಟಿ , ಖಜಾಂಚಿಯಾಗಿ ಅಣ್ಣಪ್ಪ ಶೆಟ್ಟಿ, ಕಾರ್ಯಕಾರಿ ಸಮಿತಿಯಲ್ಲಿ ಅಶೋಕ ಕೊಡ್ಲಾಡಿ, ಉದಯ ಆಚಾರ್ಯ , ಚಂದ್ರ ಶೆಟ್ಟಿ, ದಿನೇಶ ಶೆಟ್ಟಿ, ನಾಗೇಂದ್ರ ಆಚಾರ್ಯ, ಮಂಜುನಾಥ ಪೂಜಾರಿ, ಅಕ್ಷಯ ಕುಮಾರ್, ಸಂತೋಷ ಶೆಟ್ಟಿ, ಪ್ರಶಾಂತ ಶೆಟ್ಟಿ, ನೀಲ ಕುಮಾರ್ ಹಾಗೂ ಇನ್ನು ಅನೇಕರು ಕಾರ್ಯ ಕಾರಿಣಿಯಲ್ಲಿದ್ದಾರೆ ಎಂದು ಪ್ರೇರಣಾ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜ್ ನೈಕಂಬ್ಳಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಭಾರತದ ವೀರನಿಧಿಗೆ (ಭಾರತ್ ಕೆ ವೀರ್ ಫಂಡ್) ರೂ ೪೬,೧೮೯ ದೇಣಿಗೆ ನೀಡುವ ಮೂಲಕ ದೇಶದ ಶೌರ್ಯಾಳುಗಳ ಅಪ್ರತಿಮ ತ್ಯಾಗವನ್ನು ಗೌರವಿಸಿದುದಕ್ಕಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಕೇಂದ್ರ ಗೃಹ ಸಚಿವಾಲಯ ಅಭಿನಂದಿಸಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಂಭವಿಸಿದ ದೇಶದ ಸೈನಿಕರ ಬಲಿದಾನದಿಂದ ರಾಷ್ಟ್ರಭಕ್ತಿ ಪ್ರೇರಿತರಾದ ಕಾಲೇಜಿನ ವಿದ್ಯಾಥಿಗಳು ಕಾಲೇಜಿನಲ್ಲಿ ಆಹಾರೋತ್ಸವ ನಡೆಸುವ ಮೂಲಕ ಮತ್ತು ಊರಿನ ವಾರದ ಸಂತೆಯಲ್ಲಿ ವಿವಿಧ ಖಾದ್ಯ ಸಾಮಗ್ರಿಗಳನ್ನು ಮಾರುವ ಮೂಲಕ ಗಳಿಸಿದ ಲಾಭವನ್ನು ಸೈನಿಕರ ನಿಧಿಗೆ ಕಳುಹಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಗೃಹ ಮಂತ್ರಾಲಯ ತನ್ನೆಲ್ಲ ಸಶಸ್ತ್ರಬಲ ಕುಟುಂಬದ ಪರವಾಗಿ ೨೧ರಂದು ನೀಡಿದ ದೃಢೀಕರಣ ಪತ್ರದಲ್ಲಿ ಕಾಲೇಜಿನ ಈ ಕೊಡುಗೆಯನ್ನು ಪ್ರಶಂಸಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಬಾರಿಯ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ಯನ್ನು ಖ್ಯಾತ ಸಾಹಿತಿ ಡಾ. ಗಾಯತ್ರೀ ನಾವಡರಿಗೆ ನೀಡಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ೨೫,೦೦೦ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿತ್ತು. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಬ್ಬ ಸ್ತ್ರೀವಾದಿ ಚಿಂತಕಿಯಾಗಿ, ಸಂಸ್ಕೃತಿ ವಿಮರ್ಶಕಿಯಾಗಿ, ಜಾನಪದ ವಿದ್ವಾಂಸರಾಗಿ ಡಾ. ಗಾಯತ್ರೀ ನಾವಡರದು ವಿಶಿಷ್ಟ ಹೆಸರು. ‘ಕಾಡ್ಯನಾಟ’. ‘ಭಾರತೀಯ ಸ್ತ್ರೀವಾದ’, ಮಹಿಳಾ ಸಾಂಸ್ಕೃತಿಕ ಸಬಲೀಕರಣ, ಸ್ತ್ರೀವಾದಿ ಜಾನಪದದಂತಹ ಹೊಸ ಶೋಧಗಳನ್ನು, ಪರಿಕಲ್ಪನೆಗಳನ್ನು ಸಂಶೋಧನ ಲೋಕಕ್ಕೆ ನೀಡಿದವರು. ಬಂಧುತ್ವ ವ್ಯವಸ್ಥೆ ಮತ್ತು ಪಠ್ಯದ ಅಂತರ್ ಸಂಬಂಧವನ್ನು ಕುರಿತು ಸಂಕಥನವನ್ನು ಕಟ್ಟಿಕೊಟ್ಟವರು. ಕರಾವಳಿಯ ಮಾತೃರೂಪಿ ಸಂಸ್ಕೃತಿಯ ತುಳು, ಕನ್ನಡ ಮೌಖಿಕ ಪರಂಪರೆಯ ಬಗೆಗೆ ಸ್ತ್ರೀವಾದಿ ದೃಷ್ಟಿಕೋನದಿಂದ ಸಂಶೋಧನೆ ನಡೆಸಿದ ಮೊದಲಿಗರು. ಅದು ಪ್ರಕಟಿಸುವ ಸ್ತ್ರೀತ್ವದ ಶೋಧನ ಮೂಲಕ ಪಾಶ್ಚಾತ್ಯ ಸ್ತ್ರೀವಾದವನ್ನು ಮುರಿದು ಭಾರತೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುದೂರು ತಪ್ಪೆಗುಡ್ಡೆಯಲಿ ಗಿರಿಜಾ ಮಂಜಯ್ಯ ಶೆಟ್ಟಿ ಮತ್ತು ಮಕ್ಕಳು ಏರ್ಪಡಿಸಿದ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಸೇವೆ ಆಟದ ಮೊದಲು ನಿವೃತ್ತ ಯೋಧ, ಅಂಕಣಕಾರ ಬೈಂದೂರು ಚಂದ್ರಶೇಖರ ನಾವಡ ಮತ್ತು ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇವಳದ ಮೊಕ್ತೇಶರ ಸಚ್ಚಿದಾನಂದ ಚಾತ್ರರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಚ್ಚಿದಾನಂದ ಚಾತ್ರ ಮಾತನಾಡಿ ದೈವಭಕ್ತಿ , ದೇಶಭಕ್ತಿ ಹಾಗೂ ಪ್ರಾಮಾಣಿಕತೆಯಿಂದ ನಡೆಸುವ ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸು ಸಿಗುತ್ತದೆ ಎಂದರು. ಯಕ್ಷಗಾನ ನಮ್ಮ ಪ್ರಾಚೀನ ಕಲೆಯಾಗಿದ್ದು ಅದನ್ನು ಪ್ರೋತ್ಸಾಹಿಸುವಂತೆ ಅವರು ಕರೆ ನೀಡಿದರು. ಬಳಿಕ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ ನಮ್ಮ ದೇಶದ ಸೇನೆಯಲ್ಲಿ ಇಂದಿಗೂ ಕೃಷಿ ಹಾಗೂ ಗ್ರಾಮೀಣ ಹಿನ್ನೆಲೆಯ ಯೋಧರೆ ಅಧಿಕ ಸಂಖ್ಯೆಯಲ್ಲಿದ್ದಾರೆ. ಅನ್ನ ಕೊಡುವ ರೈತ ಹಾಗೂ ಸೈನಿಕರ ತ್ಯಾಗದಿಂದಲೇ ಇಂದು ದೇಶ ಸುಭದ್ರವಾಗಿದೆ. ರೈತ ಮತ್ತು ಯೋಧರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸದಿಂದ ದೇಶ ವಿಶ್ವ ಶಕ್ತಿಶಾಲಿಯಾಗಲಿದೆ ಎಂದು ಹೇಳಿದರು. ಸಚ್ಚಿದಾನಂದ ಚಾತ್ರರು ಕುಟುಂಬದವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶುಭದಾ ಆಂಗ್ಲಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮತದಾನ ಸಾಕ್ಷರತಾ ಕ್ಲಬ್ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ ನಡೆಯಿತು. ಕಿರಿಮಂಜೇಶ್ವರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಆರಂಭಗೊಂಡು ಅರೆಹೊಳೆ ಮಾರ್ಗವಾಗಿ ಮೆರವಣಿಗೆಯ ಮೂಲಕ ಶಾಲೆಗೆ ಆಗಮಿಸಿದರು. ಮತದಾನದ ಕುರಿತು ವಿವಿಧ ಘೋಷಣೆಗಳ ನಾಮಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳ ಮೂಲಕ ಮತದಾನದ ಅರಿವು ಮೂಡಿಸಿದರು. ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಜಾಥಾದಲ್ಲಿ ಸಂಸ್ಥೆಯ ನಿರ್ದೇಶಕರು, ಸಂಚಾಲಕರು, ಶಿಕ್ಷಕರು ,ಶಾಲಾ ವಾಹನಚಾಲಕರು ಭಾಗವಹಿಸಿ ಜಾಥಾಕ್ಕೆ ಮೆರಗು ತಂದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ತಂಪು ಪಾನೀಯ ನೀಡಲಾಯತು. ಶಾಲೆಯ ಸ್ಥಾಪಕ ಅಧ್ಯಕ್ಷ ಡಾ. ಎನ್.ಕೆ.ಬಿಲ್ಲವರು ಜಾಥಾದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವೀಪ್ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ಮಂಗಳವಾರ ನಡೆದ ಮತದಾನ ಜಾಗೃತಿ ಜಾಥಾ ಪಕ್ಷದ ಪ್ರಚಾರ ವೇದಿಯಾಗಿ ಮಾರ್ಪಟ್ಟು, ಅಧಿಕಾರಿಗಳಿಗೆ ಇರಿಸುಮುರಿಸಾದ ಪ್ರಸಂಗವೊಂದು ನಡೆದಿದೆ. ಕುಂದಾಪುರ ಗಾಂಧಿ ಮೈದಾನಕ್ಕೆ ಬರುವಾಗಲೇ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ಮೋದಿ ಪರ ಘೋಷಣೆ ಕೂಗುತ್ತಲೇ ಆಗಮಿಸಿದ್ದರು. ಮತದಾನ ಜಾಗೃತಿ ಪ್ರತಿಜ್ಞಾವಿಧಿ ಬೋಧನೆಗೂ ಮುನ್ನಾ ಸೇರಿದ ಸಾವಿರಾರು ವಿದ್ಯಾರ್ಥಿಗಳಲ್ಲಿ ಯಾರೋ ಚಿಕ್ಕದಾಗಿ ಉಚ್ಛರಿಸಿದ ಮೋದಿ ಹೆಸರಿಗೆ ನೂರಾರು ವಿದ್ಯಾರ್ಥಿಗಳ ಸ್ವರದ ಮೂಲಕ ಶಕ್ತಿ ತುಂಬಿದರು. ಗಾಂಧಿ ಮೈದಾನದಿಂದ ಹೊರಟ ಜಾಥಾ ಉದ್ದಕ್ಕೂ ಹೌವ್ ಈಸ್ ದ ಜೋಶ್.. ಪದೇ ಪದೇ ಪುನರಾವರ್ತನೆ ಆಗಿ, ದೊಡ್ಡ ಸ್ವರದ ಪ್ರತಿಕ್ರಿಯೆ ಕೂಡಾ ಸಿಕ್ಕಿತು. ವಂದೇ ಮಾತರಂ ಉದ್ಘೋಷ ನಿರಂತರವಾಗಿ ಕೇಳಿ ಬಂತು. ಮತದಾನದ ಜಾಗೃತಿ ಮೂಡಿಸುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ವಂದೇ ಮಾತರಂ, ಉರಿ ಸಿನಿಮಾದ ಡೈಲಾಗ್, ಮೋದಿ ಬಗ್ಗೆ ಘೋಷಣೆ ಕೂಗಿ ಅಚ್ಚರಿ ಮೂಡಿಸಿದರು. ಕಾರ‍್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವೀಪ್ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ವಿವಿಧ ಕಾಲೇಜುಗಳ ಸಹಯೋಗದೊಂದಿಗೆ ಮಂಗಳವಾರ ನಡೆದ ಮತದಾನ ಜಾಗೃತಿ ಜಾಥಾವು ವಿದ್ಯಾರ್ಥಿಗಳಿಂದಾಗಿ ಪಕ್ಷವೊಂದರ ಪ್ರಚಾರ ವೇದಿಯಾಗಿ ಮಾರ್ಪಟ್ಟು, ಅಧಿಕಾರಿಗಳಿಗೆ ಇರಿಸುಮುರಿಸಾದ ಪ್ರಸಂಗವೊಂದು ನಡೆದಿದೆ. ಜಾಥಾದ ಸಲುವಾಗಿ ಕುಂದಾಪುರ ಗಾಂಧಿ ಮೈದಾನಕ್ಕೆ ಬರುವಾಗಲೇ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ಮೋದಿ ಪರ ಘೋಷಣೆ ಕೂಗುತ್ತಲೇ ಆಗಮಿಸಿದ್ದರು. ಮತದಾನ ಜಾಗೃತಿ ಪ್ರತಿಜ್ಞಾವಿಧಿ ಬೋಧನೆಗೂ ಮುನ್ನಾ ಸೇರಿದ ಸಾವಿರಾರು ವಿದ್ಯಾರ್ಥಿಗಳಲ್ಲಿ ಯಾರೋ ಚಿಕ್ಕದಾಗಿ ಉಚ್ಛರಿಸಿದ ಮೋದಿ ಹೆಸರಿಗೆ ನೂರಾರು ವಿದ್ಯಾರ್ಥಿಗಳ ಸ್ವರದ ಮೂಲಕ ಶಕ್ತಿ ತುಂಬಿದರು. ಗಾಂಧಿ ಮೈದಾನದಿಂದ ಹೊರಟ ಜಾಥಾ ಉದ್ದಕ್ಕೂ ಹೌವ್ ಈಸ್ ದ ಜೋಶ್.. ಪದೇ ಪದೇ ಪುನರಾವರ್ತನೆ ಆಗಿ, ದೊಡ್ಡ ಸ್ವರದ ಪ್ರತಿಕ್ರಿಯೆ ಕೂಡಾ ಸಿಕ್ಕಿತು. ವಂದೇ ಮಾತರಂ ಉದ್ಘೋಷ ನಿರಂತರವಾಗಿ ಕೇಳಿ ಬಂತು. ಮತದಾನದ ಜಾಗೃತಿ ಮೂಡಿಸುವ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳ ವಂದೇ ಮಾತರಂ, ಉರಿ ಸಿನಿಮಾದ ಡೈಲಾಗ್, ಮೋದಿ ಬಗ್ಗೆ ಘೋಷಣೆ ಕೂಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ಚುನಾವಣಾ ಆಯೋಗ, ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಉಡುಪಿ ಜಿಲ್ಲೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ದೊರೆಯಿತು. ವಿದ್ಯಾರ್ಥಿಗಳು ಹೊಸಬಸ್ ನಿಲ್ದಾಣ ತನಕ ತೆರಳಿ ಅಲ್ಲಿಂದ ಶಾಸ್ತ್ರೀವೃತ್ತಕ್ಕೆ ಮೆರವಣಿಯ ಮೂಲಕವೇ ಮರಳಿ ಮೈದಾನಕ್ಕೆ ಹಿಂತಿರುಗಿ ದಾರಿಯುದ್ದಕ್ಕೂ ಮತದಾನದ ಅರಿವು ಮೂಡಿಸಿದರು. ಜಾಥಾಕ್ಕೆ ಚಾಲನೆ ನೀಡಿದ ಕುಂದಾಪುರ ಎಸಿ ಡಾ. ಮಧುಕೇಶ್ವರ್ ಮಾತನಾಡಿ ನಾವೆಲ್ಲರೂ ನಮ್ಮ ಹಕ್ಕು ಕೇಳುತ್ತೇವೆ. ಹಾಗೆ ಅದರೊಟ್ಟಿಗೆ ನಮ್ಮ ಕರ್ತವ್ಯಗಳೂ ಇವೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತಾದರರು ಯಾವುದೇ ಆಮಿಷಕ್ಕೊಳಗಾಗದೆ ಮತದಾನ ಮಾಡಬೇಕು ಎಂದರು. ಕುಂದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿರಣ್ ಫೆಡ್ನೇಕರ್, ತಹಶೀಲ್ದಾರ್ ವಿಜಯೇಂದ್ರ ಬಾಡ್ಕರ್, ಡಿವೈಎಸ್‌ಪಿ ಬಿ.ಪಿ ದಿನೇಶ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ…
ವಿಶ್ವನಾಥ ನಾಯ್ಕ್ ಬೆಳ್ವೆ || ಕುಂದಾಪ್ರ ಡಾಟ್ ಕಾಂ ವಿಶೇಷ ಲೇಖನ ಕುಂದಾಪುರ: ಫಾಲ್ಗುಣ ಮಾಸದ ಹೋಳಿ ಹುಣ್ಣಿಮೆ ಮತ್ತೆ ಬರುತ್ತಿದೆ. ಕುಡುಬಿ ಸಮುದಾಯದ ಹೋಳಿ ಆಚರಣೆಯ ಪರ್ವಕಾಲವದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆಕರ್ಷಕ ವೇಷಭೂಷಣಗಳೊಂದಿಗೆ ಕೊಂಕಣಿ ಭಾಷೆಯಲ್ಲಿ ರಾಮಾಯಣ – ಮಹಾಭಾರತದ ಕಥೆಯನ್ನು ಸಾರುವ ಹಾಡು ಗುನುಗುತ್ತಾ, ಗುಮ್ಮಟೆ ನುಡಿಸುತ್ತಾ ಜಾನಪದ ನೃತ್ಯದಲ್ಲಿ ನಿರತರಾಗಿರುವ ಕುಡುಬಿ ಮತ್ತು ಮರಾಟಿ ಸಮುದಾಯದ ಹೋಳಿ ಮೇಳಗಳು ಕಾಣಸಿಗುತ್ತವೆ. ಹೋಳಿ ಪೂರ್ವಸಿದ್ಧತೆ: ಕುಡುಬಿ ಸಮುದಾಯದ ಹೋಳಿ ಆಚರಣೆ ಫಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣಿಮೆಯವರೆಗೆ ಆದರೂ ಕೂಡ ನಿಯಮ ನಿಷ್ಠೆಗಳು ಅiವಾಸ್ಯೆಯಿಂದಲೇ ಆರಂಭವಾಗುತ್ತವೆ. ಅಮವಾಸ್ಯೆಯ ನಂತರ ಮಾಂಸ, ಮದಿರೆಗಳನ್ನು ತ್ಯಜಿಸಿ ಹಬ್ಬಕ್ಕೆ ತಯಾರಿ ನಡೆಸುತ್ತಾರೆ. ಪ್ರತಿ ಗ್ರಾಮದ ಕುಡುಬಿ ಕೂಡುವಳಿಯ (ಕುಡುಬಿ ಸಮುದಾಯದಅಲ್ಲಲ್ಲಿ ಕೂಡು ಕಟ್ಟುಗಳಿರುತ್ತವೆ, ಇದರ ಯಜಮಾನನನ್ನು ಗುರಿಕಾರನೆಂತಲೂ ಅವರ ಮನೆಯನ್ನು ಹತ್ತರಕಟ್ಟೆ ಎಂದು ಕರೆಯಲಾಗುತ್ತದೆ.) ಯಜಮಾನ ಪ್ರತಿ ಮನೆಗೂ ಪಂಚಾಯತಿಯ ಹೇಳಿಕೆ ನೀಡಿ ಕೂಡುಕಟ್ಟಿನ ಮನೆಯಲ್ಲಿ ಎಲ್ಲರನ್ನು ಒಟ್ಟುಗೂಡಿಸುತ್ತಾನೆ. ಕೂಡುವಳಿಯೊಳಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ರಥೋತ್ಸವವು ಮಾ. 28ರಂದು ನಡೆಯಲಿದೆ. ಮಾ. 21ರಿಂದ ಮಾ. 30ರ ವರೆಗೆ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಪ್ರತಿದಿನ ಸಂಜೆ ಸ್ವರ್ಣಮುಖೀ ಸಭಾಭವನದಲ್ಲಿ ಆಯ್ದ ತಂಡಗಳಿಂದ ಭರತನಾಟ್ಯ, ಕೂಚುಪುಡಿ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ ಸಹಿತ ನೃತ್ಯ ಕಾರ್ಯಕ್ರಮ ನಡೆಯಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಕಲ ಸೌಲಭ್ಯ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ವಾಹನ ಸಂಚಾರ ಹಾಗೂ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು ತುರ್ತು ಸೇವೆಗೆ ಗಮನಹರಿಸಲಾಗಿದ್ದು ದೇಗುಲದ ವಸತಿಗೃಹಗಳನ್ನು ಭಕ್ತರಿಗಾಗಿ ಮೀಸಲಿಡಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಚ್. ಹಾಲಪ್ಪ ತಿಳಿಸಿದ್ದಾರೆ.
