ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಒಂದು ಅಂತರಾಷ್ಟ್ರೀಯ ಸಂಸ್ಥೆ ಪ್ರಪಂಚದಾದ್ಯಂತ ಯಾವುದೇ ಅಡೆತಡೆಯಿಲ್ಲದೇ ವಿವಿಧ ರಂಗಗಳಲ್ಲಿ ಸೇವೆಯನ್ನು ಜನತೆಗೆ ನೀಡುತ್ತಿದೆ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಈ ಸಂಸ್ಥೆ ಕಾರ್ಯವೆಸಗುತ್ತಿದೆ ಎಂದು 371ಸಿ ಲಯನ್ಸ್ ಜಿಲ್ಲೆಯಲ್ಲಿ ಕುಂದಾಪುರ ಕ್ಲಬ್ ಅತ್ಯಂತ ಶಿಸ್ತಿನ ಹಾಗೂ ನಾಯಕತ್ವವನ್ನು ಹೊಂದಿರುವ ಕ್ಲಬ್ ಕಳೆದ 4 ದಶಕಗಳಿಂದ ಅಮೂಲ್ಯವಾದ ಸೇವೆಯನ್ನು ಈ ಭಾಗದ ಜನತೆಗೆ ನೀಡುತ್ತಾ ಬಂದಿದೆ ಎಂದು ಲಯನ್ ಜಿಲ್ಲೆ 312ಸಿ ಯ ಜಿಲ್ಲಾ ಗವರ್ನರ್ ಡಾ. ತಲ್ಲೂರು ಶಿವರಾಮ ಶೆಟ್ಟಿ ಕುಂದಾಪುರ ಲಯನ್ಸ್ ಕ್ಲಬಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಡಾ. ಶಿವಕುಮಾರರವರು ವಹಿಸಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಜಿಲ್ಲಾ ಕ್ಯಾಬಿನೆಟ್ ಸೆಕ್ರೆಟರಿ ಲಯನ್ ಎಸ್. ಓ. ಕಕೆರ ಕ್ಲಬಿನ ಚಟುವಟಿಕೆಯನ್ನು ಕೊಂಡಾಡಿದರು. ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ ಮದ್ಯಾಹ್ನದ ಭೋಜನ ನಿಧಿಗೆ ರೂ. ೨೫೦೦೦/- ನ್ನು ನೀಡಲಾಯಿತು. ಸುಶ್ರತಾ ಮತ್ತು ಬಾಬಣ್ಣ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ದಿವಾಕರ ಎನ್.ಖಾರ್ವಿ ಆಯ್ಕೆಯಾಗಿದ್ದಾರೆ. ಎಚ್.ಗಣೇಶ ಕಾಮತ್ (ಗೌರವಾಧ್ಯಕ್ಷ), ಶೇಖರ ಜಿ., ಸತೀಶ ಜಿ., ಬಿ.ಪ್ರಕಾಶ ಶೆಣೈ, ಬಿ.ರಾಘವೇಂದ್ರ ಪೈ (ಉಪಾಧ್ಯಕ್ಷರು), ಬಿ.ಲಕ್ಷ್ಮೀಕಾಂತ ಮಡಿವಾಳ (ಪ್ರಧಾನ ಕಾರ್ಯದರ್ಶಿ), ಭಾಸ್ಕರ ಎಚ್.ಜಿ. (ಕಾರ್ಯದರ್ಶಿ), ಟಿ.ಶ್ರೀಕರ ಶೆಣೈ, ಪ್ರಕಾಶ ಪಡಿಯಾರ್, ಕೃಷ್ಣಾನಂದ ಮಡಿವಾಳ, ನಾಗರಾಜ ಕಲೈಕಾರ್, ಮಹಮ್ಮದ್ ಹುಸೇನ್, ಪಾಂಡುರಂಗ ಮಡಿವಾಳ (ಜತೆ ಕಾರ್ಯದರ್ಶಿಗಳು), ಜಿ.ಸುದನೇಶ ಶ್ಯಾನುಭಾಗ್ (ಖಜಾಂಚಿ) ಇತರ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಹತ್ತನೇ ವರ್ಷದ ಬ್ರಹ್ಮರಥೋತ್ಸವದ ಅಂಗವಾಗಿ ಕವಿತಾ ಶೆಣೈ ಮಂಗಳೂರು ಇವರಿಂದ ಭಜನ ಸಂಧ್ಯಾ ಕಾರ್ಯಕ್ರಮ ಜರಗಿತು. ತಬಲಾದಲ್ಲಿ ವಿಘ್ನೇಶ ಕಾಮತ್ ಕೋಟೇಶ್ವರ ಹಾಗೂ ಹಾರ್ಮೋನಿಯಂನಲ್ಲಿ ನಾಗರಾಜ ಶೆಣೈ ಕಾರ್ಕಳ ಸಹಕರಿಸಿದರು. ದೇವಳದ ಧರ್ಮದರ್ಶಿಗಳು, ಊರ ಪರ ಊರಿನ ಭಜಕರು, ಕುಳಾವಿಗಳು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಾಕುಹಿತ್ಲು ಫ್ರೆಂಡ್ಸ್ ಗಂಗೊಳ್ಳಿ ಇವರ ವತಿಯಿಂದ ಮಂಗಳ ಖಾರ್ವಿ, ಮನೋಜ ಪೂಜಾರಿ, ಉತ್ತ ಶ್ರೀನಿವಾಸ ಖಾರ್ವಿ, ಪ್ರರ್ವಿಣ ಪೂಜಾರಿ ಇವರ ಸ್ಮರಣಾರ್ಥ ನಡೆದ ಕಬಡ್ಡಿ ಪಂದ್ಯದಿಂದ ಬಾಕಿ ಉಳಿದ ಮೊತ್ತವನ್ನು ೪ ಕುಟುಂಬಗಳಿಗೆ ಸಮನಾಗಿ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ವಾಂಟು ಚಂದ್ರ ಖಾರ್ವಿ ಅವರ ಮೂಲಕ ಹಸ್ತಾಂತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಸಂದೀಪ್ ಗಂಗೋಳ್ಳಿ, ಸುನೀಲ್ ಖಾರ್ವಿ, ಸಂದೇಶ ಖಾರ್ವಿ ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿನ್ನೆ ಪಾಕಿಸ್ತಾನ ಪ್ರೇರಿತ ಕಾಶ್ಮೀರ ಉಗ್ರನೊಬ್ಬ ಬಾಂಬ್ ದಾಳಿ ನಡೆಸಿ 40ಸಿಆರ್‌ಪಿಎಫ್ ಯೋದರ ಹತ್ಯೆಗೆ ಕಾರಣವಾಗಿರುವ ಘಟನೆಯನ್ನು ಕಾಂಗ್ರೆಸ್ ಪಕ್ಷವು ಅತ್ಯುಗ್ರವಾಗಿ ಖಂಡಿಸುತ್ತದೆ ಮತ್ತು ಈ ಘಟನೆಯು ಕಾಶ್ಮೀರದಲ್ಲಿ ಕಳೆದ 20ವರ್ಷಗಳಲ್ಲೆ ನಡೆದ ಅತ್ಯಂತ ಭೀಕರ ದಾಳಿಯಾಗಿದೆ ಆ ಕಾರಣಕ್ಕಾಗಿ ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುವ ಯೋದರ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಈಗಿಂದೀಗಲೇ ಕೈಗೊಳ್ಳಬೇಕು ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಆಗ್ರಹಿಸಿದ್ದಾರೆ. ಅವರು ಇಂದು ಕಾಂಗ್ರೆಸ್ ಕಛೇರಿ ಇಂದಿರಾ ಪ್ರಿಯದರ್ಶಿನಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಘಟನೆಯನ್ನು ಖಂಡಿಸಿ ಮಾತನಾಡುತ್ತಿದ್ದರು. ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ಗೋಪಾಲ್ ಕೃಷ್ಣ ಶೆಟ್ಟಿ, ಕೃಷ್ಣದೇವ ಕಾರಂತ, ನಾರಾಯಣ ಆಚಾರ್, ವಿನೋದ್ ಕ್ರಾಸ್ಟೊ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಧರ್ಮ ಪ್ರಕಾಶ್, ಶೋಬಾ ಸಚ್ಚಿದಾನಂದ, ಅಶೋಕ್ ಸುವರ್ಣ, ಕೇಶವ ಭಟ್, ಶಿವಾನಂದ ಕೆ. ಜ್ಯೋತಿ ಡಿ. ನಾಯ್ಕ್, ಚಂದ್ರಕಾಂತ ಖಾರ್ವಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಳ್ಳಿಹಬ್ಬ ಆಚರಿಸುತ್ತಿರುವ ಕಿರಿಮಂಜೇಶ್ವರ ಶುಭದಾ ಶಾಲೆಗೆ ಈ ಶೈಕ್ಷಣಿಕ ವರ್ಷದಲ್ಲೇ ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದನ್ನು ಪರಿಗಣಿಸಿ ಡೈಮಂಡ್ ಆಫ್ ಏಷ್ಯಾ ಇಂಟರ್‌ನ್ಯಾಶನಲ್ ಅವಾರ್ಡ್ ಫಾರ್ ಕ್ವಾಲಿಟಿ ಏಜ್ಯುಕೇಶನ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಫೆಬ್ರವರಿ 15 ರಂದು ಥೈಲಾಂಡ್ ರಾಜಧಾನಿಯಾದ ಬ್ಯಾಂಕಾಕ್‌ನಲ್ಲಿ ನಡೆದ ಹೋಲಿಡೇ ಇನ್ ಹೋಟೇಲ್ ಬ್ಯಾಂಕಾಕ್ ಕಾರ್ಯಕ್ರಮದಲ್ಲಿ ಶುಭದಾ ಶಾಲೆಗಳ ಸಂಸ್ಥಾಪಕರಾದ ಡಾ| ಎನ್. ಕೆ. ಬಿಲ್ಲವ ಹಾಗೂ ಸಂಚಾಲಕ ಶಂಕರ ಎಸ್. ಪೂಜಾರಿ ಸ್ವೀಕರಿಸಿದರು. ಡಾ| ಎನ್. ಕೆ. ಬಿಲ್ಲವರು ಶೈಕ್ಷಣಿಕ, ಸಾಮಾಜಿಕ, ಸಹಕಾರಿ, ಧಾರ್ಮಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತ್ತಿಚಿಗೆ ಬೆಂಗಳೂರಿನಲ್ಲಿ ಜರುಗಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯಕ್ರಮದಲ್ಲಿ ಕಳೆದ ಇಪ್ಪತ್ತು ವರ್ಷದಿಂದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಶಿರೂರು ಹಡವಿನಕೋಣೆಯ ರಮಾನಾಥ್ ಸುಬ್ಬಣ್ಣ ಮೇಸ್ತ ಅವರಿಗೆ ಬೆಳ್ಳಿ ಪದಕ ದೊರೆತಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರ ಸಹಯೋಗದೊಂದಿಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ.ಕ.ಜಿಲ್ಲೆಯಿಂದ ಪ್ರತಿಸಿಧಿಸಿದ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿ, ಶಿಕ್ಷಕ ನಾಗರಾಜ ಖಾರ್ವಿ 4×100 ಮೀ. ಫ್ರೀ ಸ್ಟೈಲ್ ಸ್ವಿಮ್ಮಿಂಗ್ ರಿಲೇಯಲ್ಲಿ ಚಿನ್ನವನ್ನೂ, 4×100 ಮೀ ಮೆಡ್ಲೇ ಸ್ವಿಮ್ಮಿಂಗ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತೇನೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀನಿವಾಸ ಖಾರ್ವಿ ಮತ್ತು ಪ್ರೇಮಾ ಸಿ.ಎಸ್.ಪೂಜಾರಿ ಅವರನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಮ್ಮ ಸ್ವಗೃಹದಲ್ಲಿ ಶನಿವಾರ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ಗಂಗೊಳ್ಳಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಗಂಗೊಳ್ಳಿ-ಕುಂದಾಪುರ ಸೇತುವೆ, ರಿಂಗ್ ರೋಡ್, ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸಹಿತಿ ಸಾಧ್ಯವಾಗುವ ಎಲ್ಲಾ ಕಾರ್ಯಗಳನ್ನು ಮಾಡುವ ಪ್ರಯತ್ನ ನಡೆಸುತ್ತೇನೆ. ಗಂಗೊಳ್ಳಿ ಗ್ರಾಮ ಪಂಚಾಯತ್‌ನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯತ್ ಅಥವಾ ಪುರಸಭೆ ಮಾಡಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಗಂಗೊಳ್ಳಿ ಗ್ರಾಮ ಪಂಚಾಯತ್‌ನ್ನು ಮಾದರಿ ಪಂಚಾಯತ್ ಆಗಿ ಬೆಳೆಸುವ ಪ್ರಯತ್ನ ಗ್ರಾಪಂ ಸದಸ್ಯರ ಮೂಲಕ ನಡೆಯಬೇಕು. ಎಲ್ಲಾ ಸದಸ್ಯರ ಸಹಕಾರ ಬೆಂಬಲ ಪಡೆದು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಅವರು ಹೇಳಿದರು. ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿಗಳಾದ ದೀಪಕಕುಮಾರ್ ಶೆಟ್ಟಿ, ಬಾಲಚಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮಾಹಿತಿ ಕಾರ್ಯಾಗಾರ ನಡೆಯಿತು. ಎರೆನಾ ಆನಿಮೇಶನ್ ಸಂಸ್ಥೆಯ ಸಂಜಯ್ ಪಾಟೀಲ್ ವಿದ್ಯಾರ್ಥಿಗಳಿಗೆ ಆನಿಮೇಶನ್ ಕೋರ್ಸ್‌ಗಳನ್ನು ಪರಿಚಯಿಸಿ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಎರೆನಾ ಆನಿಮೇಶನ್‌ನ ಪ್ರಜ್ವಲಾ ಶೆಟ್ಟಿ, ಕಾಲೇಜಿನ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್, ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮಹೇಶ್ ಬಾಬು ಉಪಸ್ಥಿತರಿದ್ದರು.
