ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಉಡುಪಿ ಜಿಲ್ಲೆಯ ರಾಷ್ಟ್ರಿಯ ಹೆದ್ದಾರಿ-೬೬ರಲ್ಲಿ ಅಳವಡಿಸಿರುವ ಕನ್ನಡ ಫಲಕಗಳಲ್ಲಿರುವ ಪದಗಳ ತಪ್ಪು ಬಳಕೆ ಸರಿಪಡಿಸುವಂತೆ ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಸ್ತಾನ ಸುಂಕ ಸಂಗ್ರಹಣಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರಕುಮಾರ್ ಕೋಟ ಸೇರಿದಂತೆ ಪರಿಷತ್ತಿನ ತಾಲೂಕು, ಹೋಬಳಿ ಪದಾಧಿಕಾರಿಗಳು, ಸಂಘಸಂಸ್ಥೆಗಳ ಪ್ರಮುಖರು ಪ್ರತಿಭಟನೆಗೆ ಸಾಥ್ ನೀಡಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳು ಕ್ರಿಸ್‌ಮಸ್ ಡೇ ಯನ್ನು ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಹಬ್ಬವನ್ನು ಪ್ರತಿಬಿಂಬಿಸುವ ಎಲ್ಲಾ ವಸ್ತುಗಳನ್ನು ಇಟ್ಟು ಅಲಂಕರಿಸಲಾಗಿತ್ತು. ಹಬ್ಬಗಳು ಸಾಮರಸ್ಯದ ಬದುಕಿಗೆ ಹೇಗೆ ಪೂರಕವಾಗಿರಬೇಕು ಎನ್ನುವುದರ ಜೊತೆಗೆ ಕ್ರಿಸ್‌ಮಸ್ ಹಬ್ಬವು ಮಾನವೀಯ ಗುಣಗಳನ್ನು ಉದ್ದೀಪಗೊಳಿಸುವ ಪರಸ್ಪರ ಪ್ರೀತಿ,ಶಾಂತಿ, ಸಮಾನತೆಯನ್ನು ಸಾರುವುದರ ಜೊತೆಗೆ ಪರಿಸರ ರಕ್ಷಣೆ, ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮ ಧ್ಯೇಯವಾಗಿರಬೇಕು, ಎನ್ನುವ ಮಾಹಿತಿಯ ಜೊತೆಗೆ ಏಸುವಿನ ಜನನ ಮತ್ತು ಜೀವನ ಹಾಗೂ ಅವರು ಸಾರಿದ ಸಂದೇಶಗಳ ಮಹತ್ವವನ್ನು ಮಕ್ಕಳಿಗೆ ವಿಸ್ತಾರವಾಗಿ ಶಿಕ್ಷಕಿಯರು ವಿವರಿಸಿದರು. ನಂತರ ಪುಟಾಣಿಮಕ್ಕಳಿಗೆ ಸಿಹಿ ಹಂಚುವ ಮೂಲಕ ಈ ದಿನವನ್ನು ಅರ್ಥಪೂರ್ಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಾಂಡ್ಯ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ಪ್ರಾಂಶುಪಾಲರಾದ ಶಾಯಿಜು ಕೆ. ಆರ್. ನಾಯರ್ ಹಾಗೂ ಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ಹೋಲಿಕ್ರಾಸ್ ಚರ್ಚ್‌ನಲ್ಲಿ ಯೇಸುವಿನ ಜನ್ಮದಿನ ಕ್ರಿಸ್ಮಸ್ ಆಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ತಾಲೂಕಿನ ಕುಂದಾಪುರ ಹೊಲಿಕ್ರಾಸ್ ಚರ್ಚ್, ಬಸ್ರೂರು ಫಿಲೀಪ್ ನೇರಿ ಚರ್ಚ್, ತ್ರಾಸಿ ಕ್ರಿಸ್ಟ್‌ಕಿಂಗ್ ಚರ್ಚ್, ಗಂಗೊಳ್ಳಿ ಅವರ್ ಲೇಡಿ ಆಫ್ ಇಮ್ಯಾಕ್ಯೂಲೇಟ್ ಚರ್ಚ್, ತಲ್ಲೂರು, ಬೆಳ್ವೆ ಜೊಸೆಫ್ ಚರ್ಚ್, ಫ್ರಾನ್ಸಿಸ್ ಆಸಿಸಿ ಚರ್ಚ್, ಬೈಂದೂರು ಹೊಲಿಕ್ರಾಸ್ ಚರ್ಚ್‌ಗಳಲ್ಲಿ ಹಾಗೂ ಕ್ರೈಸ್ತ ಸಮುದಾಯದಲ್ಲಿ ಕ್ರಿಸ್ಮಸ್ ಸಂಭ್ರಮ ಮನೆಮಾಡಿದೆ. ಚರ್ಚ್‌ಗಳಿಗೆ ಕುಟುಂಬ ಸಮೇತ ತೆರಳಿದ ಕ್ರೈಸ್ತರು, ಯೇಸು ಕ್ರಿಸ್ತನ ಶೀಲುಬೆ ಮುಂದೆ ನಿಂತು ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ನ ಆವರಣದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಗೋದಲಿಗಳು ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದ್ದವು. ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆಮಾಡಿದ್ದು, ಗೋದಲಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಬ್ಯಾರೀಸ್ ಪಿಯು ಕಾಲೇಜು ಕೋಡಿ ಕುಂದಾಪುರ ದ್ವಿತೀಯ ಸ್ಥಾನ ಪಡೆದು ಮಹಮ್ಮದ್ ಹಯಾಜ್ ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಇವರನ್ನು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರೀತೇಶ್ ಶೆಟ್ಟಿ ಗುಲ್ವಾಡಿ, ಇಲಿಯಾಸ್ ಹಾಗೂ ಜಫ್ ಸನ್ನಿ ಡಿಸೋಜಾ ಇವರು ತರಬೇತಿ ಗೊಳಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಸದಸ್ಯನಾದ ಮೇಲೆ ಸಮಾಜ ಮುಖಿ ಸೇವೆ ಮಾಡುವಲ್ಲಿ ಯಾವುದೇ ಹಿಂಜರಿಕೆ ಬೇಡ, ರೋಟರಿಯಲ್ಲಿ ತನ್ನ ಬದ್ದತೆಯನ್ನು ತೋರ್ಪಡಿಸುವಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ್ದು ಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ಮಾಡುವ ಸೇವೆಯಲ್ಲಿ ಆರ್ಥಿಕ ಮಟ್ಟದ ಬೇಧ ನೋಡದೆ, ದುಬಾರಿ ಸೇವೆಯೊಂದಿಗೆ ಮಿತ ಖರ್ಚಿನ ಸೇವೆ ಮಾಡಲು ಯಾವುದೇ ಹಿಂಜರಿಕೆ ಬೇಡ ಎಂದು ರೋಟರಿ ಸದಸ್ಯರಿಗೆ ಕರೆ ನೀಡಿದರು. ಅವರು ಇತ್ತೀಚೆಗೆ ನಡೆದ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳರು ಈ ರೋಟರಿ ವರ್ಷದಲ್ಲಿ ಸಾಂಸ್ಕೃತಿಕ ಸ್ಪರ್ಧೆಯ ವಲಯ ಚಾಂಪಿಯನ್‌ಶಿಪ್ ಪಡೆದ ಮತ್ತು ವಲಯ ಕ್ರೀಡಾಕೂಟದಲ್ಲಿ ೧೭ಕ್ಕೂ ಮಿಕ್ಕಿ ಬಹುಮಾನ ಗಳಿಸಿದ ಕ್ಲಬ್‌ನ ಸದಸ್ಯರನ್ನು, ಅವರ ಕುಟುಂಬಿಕರಿಗೂ ಗೌರವ ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಆನ್ಸ್ ಕ್ಲಬ್ ಅಧ್ಯಕ್ಷರಾದ ಶೀಲಾ ಚಂದ್ರಶೇಖರ್, ಆನ್ಸ್ ಕ್ಲಬ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸಂಸ್ಕೃತ ಭಾಷೆಯು ಜಗತ್ತಿನ ಅತ್ಯಂತ ಪುರಾತನವಾದ ಭಾಷೆಗಳಲ್ಲಿ ಒಂದಾಗಿದೆ. ಸಂಸ್ಕೃತ ಭಾಷೆಯು ಹಲವು ಭಾಷೆಗಳಿಂದ ಕಟ್ಟಲ್ಪಟ್ಟಿದ್ದು, ಈ ಭಾಷೆಯಲ್ಲಿರುವ ಜ್ಞಾನ ಜಗತ್ತಿನ ಯಾವ ವಿಜ್ಞಾನಿಗಳ ತಲೆಯಲ್ಲಿಯೂ ಇಲ್ಲ. ಯಾವುದೇ ಭಾಷೆ ವ್ಯವಹಾರದಲ್ಲಿ ಇಲ್ಲದಿರುವಾಗ ಆ ಭಾಷೆ ಜನರಿಂದ ದೂರ ಸರಿಯುತ್ತದೆ. ಪ್ರಸ್ತುತ ಸಂಸ್ಕೃತ ಭಾಷೆ ಹೆಚ್ಚು ಪ್ರಚಲಿತದಲ್ಲಿರದಿರುವುದು ಈ ಭಾಷೆಯ ಬೆಳವಣಿಗೆಗೆ ಹಿನ್ನಡೆಯಾಗಿದೆ ಎಂದು ನಿವೃತ್ತ ಉಪನ್ಯಾಸಕ ಕೋ.ಶಿವಾನಂದ ಕಾರಂತ ಹೇಳಿದರು. ಅವರು ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಆಯೋಜಿಸಲಾಗಿರುವ ೧೦ ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದಿಪುಲ್ ರಾಯ್ ಮಾತನಾಡಿ, ಸಂಸ್ಕೃತ ಭಾರತಿಯು ದೇಶಾದ್ಯಂತ ಸಂಸ್ಕೃತ ಭಾಷೆಯನ್ನು ಪಸರಿಸುವ ಕೆಲಸ ಮಾಡುತ್ತಿದೆ. ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡಿ, ಈ ಭಾಷೆಯನ್ನು ವ್ಯವಹಾರದಲ್ಲಿ ಬಳಕೆಯಾಗುವಂತೆ ಮಾಡಬೇಕಾಗಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ಸಂಸ್ಕೃತ ಸಂಭಾಷಣಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಪಕ್ಷ ಸಂಘಟನೆಯಲ್ಲಿ ಬಿಜೆಪಿ ಯುವಮೊರ್ಚಾದ ಪ್ರತಿ ಸದಸ್ಯನೂ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ. ಯುವಶಕ್ತಿಯ ಬೆಂಬಲದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಲ್ಲಿ ಬರಲು ಪ್ರತಿಯೊಬ್ಬರೂ ಈಗಿನಿಂದಲೇ ಕಾರ್ಯೊನ್ಮಖರಾಗಬೇಕಿದೆ ಎಂದು ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಹೇಳಿದರು. ಅವರು ಶನಿವಾರ ಹೆಮ್ಮಾಡಿಯ ಜಯಶ್ರಿ ಸಭಾಂಗಣದಲ್ಲಿ ಜರುಗಿದ ಬೈಂದೂರು ಬಿಜೆಪಿ ಯುವಮೊರ್ಚಾದ ಪ್ರಥಮ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಯಶಸ್ಸನ್ನು ಕೋರಿ ಜನವರಿ 1ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ನವ ಚಂಡಿಯಾಗ ನಡೆಯಲಿದ್ದು, ಜಡ್ಕಲ್ ವೃತ್ತಿಂದ ಕೊಲ್ಲೂರಿನ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ರೈತರ ಸೇವಾ ಸಂಘ, ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ ಹಾಗೂ ರೈತ ಸೇವಾ ಕೂಟ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಇಲ್ಲಿನ ಶಂಕರ ಕಲಾ ಮಂದಿರ ಸಮೃದ್ಧ್ ಸಭಾಭವನದಲ್ಲಿ ರೈತ ದಿನಾಚರಣೆ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮರವಂತೆಯ ಹಿರಿಯ ಕೃಷಿಕ ಹಾಗೂ ನಿವೃತ್ತ ಪ್ರಾಧ್ಯಾಪಕ ಎ. ರಿಚರ್ಡ್ ರೆಬೆಲ್ಲೊ ಮಾತನಾಡಿ, ರೈತರದ್ದು ಸ್ವಾಭಿಮಾನದ ಬದುಕಾಗಿದ್ದು, ಸಮಸ್ಯೆಗಳಿಗೆ ಧೃತಿಗೆಡದೆ ಜೀವನ ಸಾಗಿಸುವ ರೈತರ ಜೀವನ ಇತರರಿಗೆ ಮಾದರಿಯಾಗಿದೆ. ಇಂದು ರೈತರ ಹೆಸರು ಬಳಸಿಕೊಂಡು ವೈಭವಿಕರಣದ ವ್ಯಾಪಾರೀಕರಣ ನಡೆಯುತ್ತಿದೆ. ಆದರೆ ನಿಜವಾದ ರೈತರ ಸ್ಥಿತಿ ಚಿಂತಜನಕವಾಗಿದೆ ಎಂದರು. ಬೆವರು ಹರಿಸಿ ದುಡಿಯುವ ರೈತರು ತಮ್ಮ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯಿಲ್ಲದೇ ನಲುಗಿ ಹೋಗಿದ್ದಾರೆ. ಬಡತನದ ಬೇಗುದಿ, ಸಾಲದ ಬಾಧೆಯಿಂದ ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರ ಬೆಂಬಲಕ್ಕೆ ಸರಕಾರಗಳು ನಿಲ್ಲಬೇಕು. ಇವರ ಬೆಳೆಗೆ ದರನಿಗದಿ ಮಾಡುವ ಮದ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಮಾರುಕಟ್ಟೆಯಲ್ಲಿ ಇವರಿಗೆ ನೇರವಾಗಿ ಸೂಕ್ತಬೆಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಡುವರಿ ಗ್ರಾಮ ಪಂಚಾಯತ್ ಆಯೋಜಿಸಿದ್ದ ಮಕ್ಕಳ ಮತ್ತು ಮಹಿಳೆಯರ ವಿಶೇಷ ಗ್ರಾಮಸಭೆ ವಿಭಿನ್ನ ಮತ್ತು ವಿಶಿಷ್ಟವಾಗಿ ಮೂಡಿಬಂದಿತು. ಮಹಿಳೆಯರು ಗರಿಷ್ಠ ಸಂಖ್ಯೆಯಲ್ಲಿ ಸೇರಿದ್ದರೆ, ಊರಿನ ಐದುಶಾಲೆಗಳ ಮಕ್ಕಳ ಭಾಗವಹಿಸಿದ್ದರು. ಉಭಯರೂ ಊರಿನ ಸಮಸ್ಯೆಗಳನ್ನು ಮಂಡಿಸಿ, ಗ್ರಾಮ ಪಂಚಾಯತ್‌ನಿಂದ ಪರಿಹಾರ ಬಯಸಿದರು. ಮಹತ್ವದ ವಿಷಯಗಳ ಕುರಿತು ಪರಿಣತರು ಮಾಹಿತಿ ನೀಡಿದರು. ಮಕ್ಕಳಿಗೆ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಣೆಯಾಯಿತು. ಆಸಕ್ತರಿಗೆ ಛಾಯಾಗ್ರಹಣ ಮತ್ತು ವರದಿಗಾರಿಕೆ ತರಬೇತಿ ನೀಡಲಾಯಿತು. ವಿದ್ಯಾರ್ಥಿನಿ ಪ್ರಿಯಾಂಕಾ ಸ್ವಾಗತಿಸಿದ ಬಳಿಕ ವೇದಿಕೆಯಲ್ಲಿ ಇರಿಸಿದ್ದ ಕಂಬಕ್ಕೆ ಮಕ್ಕಳ ಸಂಘದ ಪ್ರತಿನಿಧಿಗಳು ತಾವು ಗುರುತಿಸಿರುವ ಸಮಸ್ಯೆಗಳನ್ನು ಸಂಕೇತಿಸುವ ಕೆಂಪುಪಟ್ಟಿಗಳನ್ನು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ಶೆಟ್ಟಿ ಮತ್ತು ಸದಸ್ಯರು ತಾವು ಪರಿಹರಿಸಿದ ಸಮಸ್ಯೆಗಳನ್ನು ಸಂಕೇತಿಸುವ ಬಿಳಿಪಟ್ಟಿ ಕಟ್ಟುವ ಮೂಲಕ ಗ್ರಾಮಸಭೆಯನ್ನು ವಿಶಿಷ್ಟವಾಗಿ ಉದ್ಘಾಟಿಸಿದರು. ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕಿ ಜಯಲಕ್ಮೀ ಹಿಂದಿನ ಗ್ರಾಮಸಭೆಯ ಅನುಪಾಲನಾ ವರದಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯಿಂದ ಕಾನೂನು ಮಾಹಿತಿ ಬೈಂದೂರು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜರುಗಿತು. ವೃತ್ತನಿರೀಕ್ಷಕ ರಾಘವ ಪಡೀಲ್ ಮಾತನಾಡಿ ಕಾನೂನುಬಾಹಿರ ಚಟುವಟಿಕೆಗಳಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯವಜನತೆಗೆ ಸರಿಯಾದ ಮಾಹಿತಿ, ಕಾರ್ಯಾಗಾರಗಳ ಮೂಲಕ ಅರಿವು ಮೂಡಿಸುವುದರಿಂದ ಸುಧಾರಣೆ ತರಬಹುದು ಎಂದು ಹೇಳಿದರು. ದ್ವಿಚಕ್ರ ಸವಾರಿ ಮಾಡುವಾಗ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಲೇಬೇಕು. ಇಲ್ಲವಾದರೆ ದಂಡದ ಜೊತೆಗೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದಾಗಿ ಬೈಂದೂರು ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ, ಈ ನೆಲೆಯಲ್ಲಿ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಪರಸ್ಪರ ಮಾತನಾಡುತ್ತಾ ಸಾಗುವುದು, ಮೊಬೈಲ್ ಫೋನ್ ಬಳಕೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ತಪ್ಪು ಯಾರೇ ಮಾಡಿದರೂ ತಪ್ಪೆ. ವಿದ್ಯಾರ್ಥಿಗಳು ಎನ್ನುವ ಕಾರಣಕ್ಕೆ ಬಿಟ್ಟುಬಿಡಲಾಗುವುದಿಲ್ಲ. ಹಾಗಾಗಿ ಸಂಚಾರದ ಸಮಯದಲ್ಲಿ ಜಾಗೃತೆವಹಿಸಿ ಎಂದ ಅವರು, ಈಗಿನ ಸ್ಥಿತಿಯಲ್ಲಿ ತಿಳಿಯದೇ ತಪ್ಪು ಮಾಡಿದೆ…
