Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮದೇ ಆದ ವೆಬ್ ಸೈಟ್‌ನ ಅಗತ್ಯತೆ ಇದ್ದು ಇದರಿಂದ ಶೈಕ್ಷಣಿಕ ಸಂಸ್ಥೆಗೆ , ವಿದ್ಯಾರ್ಥಿಗಳಿಗೆ ರಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವೆಬ್ ಸೈಟ್ ನ್ನು ಉದ್ಘಾಟಿಸಲು ನನಗೆ ತುಂಬ ಸಂತೋಷವಾಗುತ್ತಿದ್ದು ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಬಿ.ನಾಯಕ್ ರವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದರು ಮುಖ್ಯ ಅತಿಥಿ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನ ಖ್ಯಾತ ಮಕ್ಕಳ ತಜ್ಞ ಹಾಗೂ ೨೦೧೭ನೇ ಸಾಲಿಗೆ ಇಂಡಿಯನ್ ಪಿಡಿಯಾಟ್ರಿಕ್ಸ್ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಸಂತೋಷ ಟಿ ಸೋನ್ಸ್ ರವರು ಮಾತನಾಡುತ್ತಾ ಇಂದು ದೇಶದ ಮೂಲೆ ಮೂಲೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಯುವಕ ಯುವತಿಯರು ತಮ್ಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಉತ್ಸವಗಳ ಪಾತ್ರ ಬಹುಮುಖ್ಯವಾದುದು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಿಂದ ಎಲ್ಲರನ್ನೂ ಒಗ್ಗಟ್ಟಾಗಿ ಕಾಣಲು ಸಾಧ್ಯವಿದೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ ೨೦೧೬’ ನಾಟಕ ಸಪ್ತಾಹದಲ್ಲಿ ದಿನದ ನುಡಿಗಳನ್ನಾಡುತ್ತಿದ್ದರು. ಆಧುನಿಕ ಮಾಧ್ಯಮಗಳ ಪ್ರಭಾವದಿಂದ ಕಲೆಯ ಸೆಳೆತ ಕಡಿಮೆಯಾಗುತ್ತಿದೆ. ಟಿ.ವಿಯಲ್ಲಿ ನೋಡುವ ನಾಟಕ, ನೃತ್ಯ, ಯಕ್ಷಗಾನ ಪ್ರದರ್ಶನಗಳನ್ನು ಎದುರಿಗೆ ನೋಡಲು ಇಷ್ಟಪಡುತ್ತಿಲ್ಲ. ಸಮುದಾಯದೊಂದಿಗೆ ಸೇರದ, ಎಲ್ಲರೂ ಸೇರಿದಾಗ ನಾವು ಅಲ್ಲಿರದ ಸಂಕುಚಿತ ಮನಸ್ಥಿತಿ ನಮ್ಮದಾಗುತ್ತಿರುವುದರಿಂದ ಮನಸ್ಸಿನ ಒತ್ತಡಗಳು ಹೆಚ್ಚುತ್ತಿವೆ ಎಂದರು. ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ರಾಜೇಂದ್ರ ಕಾರಂತ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಸುಜಾತ ದೇವಾಡಿಗ, ವಿಜಯಕುಮಾರ್ ಶೆಟ್ಟಿ, ಲಾವಣ್ಯ ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ ನಮ್ಮಲ್ಲಿರುವ ಮಾನವ ಸಂಪನ್ಮೂಲದ ಅಭಿವೃದ್ಧಿಯಾಗಬೇಕು. ಭಾರತ ದೇಶ ಮಾನವ ಸಂಪನ್ಮೂಲದಲ್ಲಿ ದೊಡ್ಡ ಅಭಿವೃದ್ಧಿ ಸಾಧಿಸಿರುವುದರಿಂದಾಗಿ ಜಗತ್ತಿನ ದೃಷ್ಟಿ ಭಾರತದ ಕಡೆ ನೆಟ್ಟಿದೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನುಡಿದರು. ತಾಲೂಕಿನ ಬೀಜಾಡಿ-ಗೋಪಾಡಿಯ ಮೂಡು ಶಾಲಾ ವಠಾರದ ಮಿತ್ರ ಸೌಧದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಬೀಜಾಡಿ ಹಾಗೂ ಮಿತ್ರ ಸಂಗಮ ಬೀಜಾಡಿ-ಗೋಪಾಡಿಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಕುಂದಾಪುರ ತಾಲ್ಲೂಕು ಯುವಜನ ಮೇಳ ’ಸಂಗಮ-2016’ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಯೇ ದೊಡ್ಡ ಯುವ ಸಮೂಹವನ್ನು ಹೊಂದಿರುವ ಭಾರತಕ್ಕೆ ಅದುವೇ ನಿಜವಾದ ಆಸ್ತಿಯಾಗಿದೆ. ಜನಸಂಖ್ಯೆಯ ಒಂದೆ ಕಾರಣಕ್ಕಾಗಿ ಸಂನ್ಮೂಲ ಕ್ರೋಢಿಕರಣಗೊಳ್ಳುವುದಿಲ್ಲ. ಸ್ಥಳೀಯವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವುದರಿಂದಾಗಿ ದೇಶ ಬೆಳೆಯುತ್ತದೆ. ಯುವ ಜನರಲ್ಲಿ ಸಮರ್ಪಣಾ ಮನೋಭಾವಗಳಿರಬೇಕು. ಬದುಕನ್ನು ಕಟ್ಟುವ ಜತೆಯಲ್ಲಿ ಇನ್ನೊಬ್ಬರಿಗೆ ಬದುಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮನುಷ್ಯನ ಬಗೆ ಬಗೆಯ ಮುಖಗಳನ್ನು ರಂಗಭೂಮಿಯಿಂದ ಮಾತ್ರ ಬಯಲು ಮಾಡಲು ಸಾಧ್ಯವಿದೆ. ಬದುಕಿನ ಪ್ರತಿಬಿಂಬದಂತೆ ಕಾಣುವ ರಂಗಭೂಮಿಯಲ್ಲಿ ಹೆಣ್ಣಿನ ಧ್ವನಿ ಇನ್ನಷ್ಟು ಸಶಕ್ತವಾಗಿ ಮೂಡಿಬರಬೇಕಿದೆ ಎಂದು ಪತ್ರಕರ್ತೆ ರೂಪಾ ಕೋಟೇಶ್ವರ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ 2016’ ನಾಟಕ ಸಪ್ತಾಹದಲ್ಲಿ ದಿನದ ನುಡಿಗಳನ್ನಾಡುತ್ತಿದ್ದರು. ಮಹಿಳೆಯರು ನಟನೆ, ನಿರ್ದೇಶನದ ಜೊತೆಗೆ ರಂಗ ಪರಿಕಲ್ಪನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಬೇಕು. ಆಗ ಮಾತ್ರ ರಂಗಭೂಮಿಯಲ್ಲಿ ಹೊಸ ಆಯಾಮ ಕಂಡುಕೊಳ್ಳಲು ಸಾಧ್ಯವಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು ಪ್ರಾದೇಶಿಕ ಭಾಷಾ ಸೊಗಡನ್ನು ರಂಗಭೂಮಿಯಲ್ಲಿ ಅಳವಡಿಸಿಕೊಂಡರೆ ಸುಲಭವಾಗಿ ಜನರ ಮನಸ್ಸನ್ನು ತಟ್ಟಲು ಸಾಧ್ಯವಿದೆ ಎಂದರು. ರಂಗ ಹಾಗೂ ಚಲನಚಿತ್ರ ನಿರ್ದೇಶಕ ರಾಜ್‌ಗುರು ಹೊಸ್ಕೋಟೆ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹುಲ್ಕಡಿಕೆ ದೇವಸ್ಥಾನದಲ್ಲಿ ಆಧ್ಯಾತ್ಮ ಚಿಂತಕ ಮಂಗೇಶ ಶ್ಯಾನುಭೋಗ ಏಳಜಿತ ಅವರ ನೇತೃತ್ವದಲ್ಲಿ ಆಸಕ್ತರಿಗಾಗಿ ಭಗವದ್ಗೀತಾ ಅಭಿಯಾನ ಜರುಗಿತು. ಹಳ್ಳಿಹೊಸೂರು ಮಹಾಬಲೇಶ್ವರ ಮಯ್ಯ ಅವರ ಕುಟುಂಬಿಕರು ಕಾರ್ಯಕ್ರಮ ಭಾಗವಹಿಸಿ ಭಗವದ್ದೀತೆ ಪಾರಾಯಣ ಮಾಡಿದರು.

Read More

ಸಾರ್ವಜನಿಕರ ಸಹಭಾಗಿತ್ವದಿಂದ ಕನ್ನಡ ಶಾಲೆಯ ಯಶಸ್ಸು: ಶಾಸಕ ಗೋಪಾಲ ಪೂಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರದೊಂದಿಗೆ ಸಾರ್ವಜನಿಕರ ಸಹಭಾಗಿತ್ವವಿದ್ದರೆ ಕನ್ನಡ ಶಾಲೆಯಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಈ ಬಗ್ಗೆ ಶಿಕ್ಷಕರು ಹಾಗೂ ಊರಿನವರು ಗಂಭೀರವಾಗಿ ಚಿಂತಿಸಿ ಸರಕಾರಿ ಶಾಲೆಗಳ ಉಳಿವಿಗೆ ಕೈಜೊಡಿಸುವ ಅಗತ್ಯವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ವಲಯದ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿಸಿಯೂಟ, ಹಾಲು, ಪುಸ್ತಕ, ಸಮವಸ್ತ್ರ, ಬೂಟು, ಸ್ಕಾಲರ್‌ಶಿಪ್ ಮೂಲಕ ಕನ್ನಡ ಶಾಲೆಯ ಮಕ್ಕಳ ಕಲಿಕೆಗೆ ಸರಕಾರ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಆದಾಗ್ಯೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತಮ ಶಿಕ್ಷಣದೊಂದಿಗೆ ಸಾರ್ವಜನಿಕರ ಸಹಕಾರದಿಂದ ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಮಕ್ಕಳ ಉನ್ನತಿಯನ್ನು ಕಾಣಬಹುದಾಗಿದೆ ಎಂದರು. ಕುಂದಾಪ್ರ ಡಾಟ್…

Read More

ಕುಂದಾಪ್ರ ಡಾಟ್ ಕಾಂ ವರದಿ. ಯಾವುದೇ ಊರಿನ ಶ್ರೀಮಂತಿಕೆ ತೆರೆದುಕೊಳ್ಳುವುದು ಅಲ್ಲಿ ಇರುವ ವಿದ್ಯಾ ಸಂಸ್ಥೆಗಳ ವೈಭವದಲ್ಲಿ. ವಿದ್ಯೆ ನೀಡುವ ಶಾಲೆಗಳು ಊರಿನ ಅತ್ಯಮೂಲ್ಯ ಆಸ್ತಿ. ಊರಿನ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮಾಜದ ಬೆಳವಣಿಗೆಯ ಹಿಂದೆ ಶಾಲೆಗಳು ವಹಿಸುವ ಪಾತ್ರ ಅನನ್ಯವಾದದ್ದು. ಅಂತಹ ಶಾಲೆಗಳನ್ನು ಉಳಿಸಿ ಬೆಳೆಸಿ ಅಭಿವೃದ್ಧಿಗೊಳಿಸಿ ಭವಿತವ್ಯವನ್ನು ಮತ್ತಷ್ಟು ಸುಂದರವಾಗಿಸುವ ಹೊಣೆಗಾರಿಕೆ ಎಲ್ಲರದ್ದೂ ಆಗಿದೆ ಕಳೆದ ಐವತ್ತು ವರುಷಗಳಿಂದ ಊರ ಪರವೂರ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಾ ಸಾರ್ಥಕ ಐವತ್ತು ವರುಷಗಳನ್ನು ಪೂರೈಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಫ್ರೌಢಶಾಲೆ ಇದೀಗ ತನ್ನ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ 1966ರಲ್ಲಿ ಪೂಜ್ಯ ಫಾದರ್ ಮೈಕಲ್ ನೊರೊನ್ನಾ ಅವರು ಗಂಗೊಳ್ಳಿಯ ಕಡಲ ತಡಿಯಲ್ಲಿ ಹೆಣ್ಮಕ್ಕಳಿಗಾಗಿಯೇ ವಿಶೇಷವಾದ ಫ್ರೌಢಶಾಲೆಯನ್ನು ತೆರೆಯುವ ಕನಸು ಹೊತ್ತು ಗಂಗೊಳ್ಳಿಯ ಮಾತಾ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಸನಿಹದಲ್ಲಿ ಶಾಲೆಯೊಂದನ್ನು ಸಣ್ಣ ಕೊಠಡಿಯೊಂದರಲ್ಲಿ ಆರಂಭಿಸಿದರು.ಕಡಲ ತಾರೆ ಎನ್ನುವ ಅನ್ವರ್ಥ ನಾಮದೊಂದಿಗೆ ಆ ಶಾಲೆಗೆ ಸ್ಟೆಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಭಾರತದ ಪರ ಪ್ರಮುಖ ಮೂರು ಯುದ್ಧಗಳಲ್ಲಿ ಹೋರಾಟ ನಡೆಸಿದ ಹಾಗೂ ಪ್ರಥಮ ರಾಷ್ಟ್ರಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅಂಗ ರಕ್ಷಕರಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧ ಸಾಸ್ತಾನ ನಿವಾಸಿ ಮೇಜರ್ ನಾರಾಯಣ(೮೫)ಗುರುವಾರದಂದು ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಮತ್ತು ಇರ್ವರು ಪುತ್ರಿಯರನ್ನು ಅಗಲಿದ್ದಾರೆ. ೧೯೫೨ರಲ್ಲಿ ಸೇನೆಗೆ ಸೇರ್ಪಡೆಗೊಂಡು ೧೯೬೨ ರ ಭಾರತ ಚೀನ ಯುದ್ಧ, ೧೯೭೧ ರ ಭಾರತ ಪಾಕಿಸ್ಥಾನ ಯುದ್ಧ ಹಾಗೂ ಭಾರತ ಬಾಂಗ್ಲಾ ಯುದ್ಧದಲ್ಲಿ ಹೋರಾಟ ನೆಡೆಸಿ ವೀರ ಪದಕ ಫಡೆದಿದ್ದರು ಮತ್ತು ನಾಗಲ್ಯಾಂಡ್ ಬಂಡುಕೋರರನ್ನು ಹಿಮ್ಮೆಟ್ಟಿಸಿದ ತಂಡದಲ್ಲಿ ಪ್ರಮುಖರಾಗಿದ್ದು ಕಿಂಗ್ ಆಫ್ ನಾಗ ಹಿಲ್ಸ್ ಬಿರುದು ಪಡೆದಿದ್ದರು. ಸೇನೆಯಲ್ಲಿರುವಾಗ ಪ್ರಥಮ ರಾಷ್ಟ್ರಾಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರ ಅಂಗರಕ್ಷಕರಾಗಿ ಸೇವೆ ಸಲ್ಲಿಸಿದ್ದರು. ೧೯೭೨ ರಲ್ಲಿ ಸೇನೆಯಿಂದ ನಿವೃತ್ತಿ ಪಡೆದು ಮಾಜಿ ಸೈನಿಕರ ಸಂಘದ ಪದಾಧಿಕಾರಿಯಾಗಿ, ಹವ್ಯಾಸಿ ಲೇಖಕರಾಗಿ ನಿವೃತ್ತ ಜೀವನ ನಡೆಸುತ್ತಿದ್ದರು.ಪ್ರಶಸ್ತಿ, ಪುರಸ್ಕಾರಗಳಿಗೆ ಆಸೆ ಪಡದ ಅವರನ್ನು ಸಾಸ್ತಾನದಲ್ಲಿ ಯುವಬ್ರಿಗೇಡ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ವತಃ ಜಾಗವಿಲ್ಲದೇ ಸರಕಾರಿ ಜಾಗದಲ್ಲಿ ಹತ್ತಾರು ವರ್ಷಗಳಿಂದ ನೆಲೆ ಕಂಡಿರುವರಿಗೆ ಹಕ್ಕಪತ್ರ ನೀಡಲು ಜಿಲ್ಲಾಡಳಿತ ಹಾಗೂ ತಾಲೂಕು ಕಂದಾಯ ಇಲಾಖೆ ವಿಳಂಬ ನೀತಿ ಅನುಸರಿಸುತ್ತಿದ್ದು, ಅರ್ಹ ಫಲಾನುಭಾವಿಗಳು ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವಂತಾಗಿದೆ. ಇಲಾಖಾಧಿಕಾರಿಗಳ ಬೇಜವಾಬ್ದಾರಿಯಿಂದ ಬಡವರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು ಕುಂದಾಪುರ ತಾಲ್ಲೂಕಿನಾದ್ಯಾಂತ ೯೪ಸಿ ಕಾಯಿದೆಯನ್ವಯ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಹಕ್ಕು ಪತ್ರ ನೀಡುವಲ್ಲಿ ಕಂದಾಯ ಇಲಾಖೆಯ ವಿಳಂಬ ಧೋರಣೆ ಖಂಡಿಸಿ ಶುಕ್ರವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ನಡೆದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡಿದರು. ಜಿಲ್ಲಾಡಳಿತ ಹಾಗೂ ತಾಲೂಕು ಕಂದಾಯ ಇಲಾಖೆಯ ವಿಳಂಬ ನೀತಿಯಿಂದಾಗಿ ತಾಲೂಕಿನ ಸಾವಿರಾರು ಬಡ ಜನರು ಮೂಲಸೌಕರ್ಯದಿಂದ ವಂಚಿತರಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಶಾಸನ ಸಭೆಯಲ್ಲಿ ಭರವಸೆ ಹಾಗೂ ಕಂದಾಯ ಮಂತ್ರಿಗಳ ಆದೇಶವನ್ನೂ ಲೆಕ್ಕಿಸದೇ ಇಲಾಖೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಬಡವರ ಕೆಲಸದ ಬಗ್ಗೆ…

Read More