ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ರಾಮಮಂದಿರ ರಸ್ತೆಯ ಬದಿಯಲ್ಲಿದ್ದ ಭಾರಿಗಾತ್ರದ ಮರವೊಂದು ಧರಾಶಾಹಿಯಾಗಿದ್ದು ಮರದ ಕೆಳಕ್ಕೆ ನಿಲ್ಲಿಸಲಾಗಿದ್ದ ಲಾರಿ ಹಾಗೂ ಗಂಗೊಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಮೇಲೆರಗಿ ವಾಹನಗಳನ್ನು ಜಖಂಗೊಳಿಸಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮಮಂದಿರದ ಬಳಿ ಇದ್ದ ಭಾರಿ ಗ್ರಾತ್ರದ ಆಲದ ಮರವು ಭಾರ ತಡೆಯಲಾಗದೆ ನೆಲಕ್ಕುರುಳಿದೆ ಎನ್ನಲಾಗಿದೆ. ಮರದ ಕೆಳಕ್ಕೆ ನಿಲ್ಲಿಸಲಾಗಿದ್ದ ಲಾರಿ ಮೇಲೆ ಬಿದ್ದು ನಂತರ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದಿದ್ದರಿಂದ ಬಸ್ಸಿನಲ್ಲಿದ್ದ ನಲವತ್ತಕ್ಕೂ ಅಧಿಕ ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ. ಘಟನೆಯಿಂದ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆ ತಡೆ ಉಂಟಾಯಿತು. ಬಳಿಕ ಸ್ಥಳೀಯ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು/ ಕುಂದಾಪ್ರ ಡಾಟ್ ಕಾಂ ಸುದ್ದಿ/
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಆಹಾರ ಪದ್ಧತಿ, ಒತ್ತಡ, ಆಹಾರ, ವಿಹಾರ ಮೊದಲಾದ ಅನೇಕ ಕಾರಣಗಳಿಂದ ಮನುಷ್ಯನು ವಿವಿಧ ರೀತಿಯ ಕಾಯಿಲೆಗಳು ಮತ್ತು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಪ್ರಕೃತಿಯಲ್ಲಿ ಬೆಳೆಯುವ ಹಸಿರು ತರಕಾರಿಗಳಿಂದ ಮತ್ತು ತಾಜಾ ಆಹಾರಗಳ ಸೇವನೆಯಿಂದ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ನಮ್ಮ ಜೀವಕ್ಕೆ ಬೇಕಾಗುವ ಪ್ರೋಟಿನ್ ಲವಣಾಂಶಯುಕ್ತ ಆಹಾರಗಳ ನಿಮಿಯಮಿತ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಗ್ರಾಮ ಪಂಚಾಯತ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಕ್ರಾಂತಿವೀರರ ಅಭಿಮಾನಿ ಬಳಗ ಗಂಗೊಳ್ಳಿ ಇವರ ಸಹಕಾರದೊಂದಿಗೆ ಜರಗಿದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಜನರು ಆರೋಗ್ಯ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಲೇಖನ ಭಾರತೀಯ ಚಿತ್ರರಂಗ ಕಂಡ ಮಹಾನ್ ಕಲಾವಿದರಲ್ಲೊಬ್ಬರಾದ ಗುರುದತ್ ಅವರ ಪೂರ್ಣ ಹೆಸರು ಗುರುದತ್ ಶಿವಶಂಕರ್ ಪಡುಕೋಣೆ. ಶಿವಶಂಕರ ರಾವ್ ಪಡುಕೋಣೆ ಹಾಗೂ ವಸಂತಿ ಪಡುಕೋಣೆ ದಂಪತಿಯ ಮಗನಾಗಿ ಗುರುದತ್ ಜುಲೈ 9, 1925ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ನಟನಾಗಿ ನಿರ್ಮಾಪಕ, ನಿರ್ದೇಶಕನಾಗಿ ಆತ ಚಿತ್ರರಂಗದಲ್ಲಿ ಮೂಡಿಸಿದ ಚಿತ್ರಗಳು ಅವಿಸ್ಮರಣೀಯವಾದುದು ಗುರುದತ್ ಅವರ ತಂದೆ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ಮೊದಲು ಮುಖ್ಯೋಪಾಧ್ಯಾಯರಾಗಿ ನಂತರ ಬ್ಯಾಂಕ್ ಉದ್ಯೋಗಿಯಾಗಿದ್ದರು. ತಾಯಿ ವಸಂತಿ ಶಾಲೆಯೊಂದರಲ್ಲಿ ಉಪಾಧ್ಯಾಯಿನಿಯಾಗಿ, ಖಾಸಗಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಅವರು ಸಣ್ಣ ಕಥೆಗಳನ್ನು ಬರೆಯುತ್ತಿದ್ದರು ಹಾಗೂ ಹಲವಾರು ಬಂಗಾಳಿ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಚಲನಚಿತ್ರ ನಿರ್ದೇಶಕಿಯಾದ ಕಲ್ಪನಾ ಲಾಜ್ಮಿ ಇವರ ತಂಗಿಯ ಮಗಳು. ಗುರುದತ್ ತನ್ನ ಬಾಲ್ಯದ ಬಹುಪಾಲು ಸಮಯದಲ್ಲಿ ಪೋಸ್ಟರುಗಳನ್ನು ಬಿಡಿಸುತ್ತಿದ್ದ. ತಾಯಿಯ ತಮ್ಮನಾದ ಬಾಲಕೃಷ್ಣ ಬಿ.ಬೆನೆಗಲ್ ಅವರೊಂದಿಗೆ ಆಟವಾಡುತ್ತಿದ್ದ. ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ಯಾಮ್ ಬೆನೆಗಲ್ ಬಾಲಕೃಷ್ಣರವರ ತಮ್ಮನಾದ ಶ್ರೀಧರ.ಬಿ.ಬೆನೆಗಲ್ ಅವರ ಮಗ. ಗುರುದತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಲಯದ ಪ್ರೌಢಶಾಲೆಗಳ ಕನ್ನಡ ಬೋಧಕರ ಒಂದು ದಿನದ ಕಾರ್ಯಾಗಾರವು ಮರವಂತೆಯ ಸುಭಾಶ್ಚಂದ್ರ ಬೋಸ್ ಸರಕಾರಿ ಫೌಢಶಾಲೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಶಿಕ್ಷಕರು ಕನ್ನಡ ಭಾಷೆಯ ಕಲಿಕೆಗೆ ಎದುರಾಗುವ ತೊಡಕುಗಳನ್ನು ಗುರುತಿಸಿಕೊಂಡು ಅವುಗಳನ್ನು ಮೀರುವ ಪ್ರಯತ್ನ ನಡೆಸಬೇಕು. ಕಾರ್ಯಾಗಾರದಲ್ಲಿ ಅದರ ಕುರಿತು ಚರ್ಚೆ ನಡೆಯಲಿ ಮತ್ತು ಕನ್ನಡ ಭಾಷೆಯ ಪರಿಣಾಮಕಾರಿ ಬೋಧನೆಯ ಮಾರ್ಗ ಹೊರಹೊಮ್ಮಲಿ ಎಂದು ಆಶಿಸಿದರು. ಕಾರ್ಯಾಗಾರದ ಸಹ ಪ್ರಾಯೋಜಕ ಉದ್ಯಮಿ ಮನ್ಸೂರ್ ಇಬ್ರಾಹಿಮ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸರ್ವೋತ್ತಮ ಭಟ್ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ವಂದಿಸಿದರು. ಚಂದ್ರ ಡಿ. ನಿರೂಪಿಸಿದರು. ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಡಾ. ಕಿಶೋರಕುಮಾರ ಶೆಟ್ಟಿ ಮತ್ತು ಉಪ್ಪುಂದದ ಕನ್ನಡ ಶಿಕ್ಷಕ ನಾಗರಾಜ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚೆಚ್ಚು ಅವಿಷ್ಕಾರಗಳಿಂದ ಕೊಡಿರುವುದರಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಸಾರ್ವಜನಿಕ ಹುದ್ದೆಗಳಿಗೆ ಸ್ಪರ್ಧಿಸಿ ಹುದ್ದೆಗಿಟಿಸಿಕೊಳ್ಳುವ ಸಲುವಾಗಿ ಉದ್ಯೋಗದ ಬಗ್ಗೆ ಕೆಲವೂಂದು ಮಾಹಿತಿಗಳನ್ನು ತಿಳಿದುಕೊಂಡು ಕಾಲೇಜಿನಲ್ಲಿ ನಡೆಯುವ ಉದ್ಯೋಗ ಮಾರ್ಗದರ್ಶನ ಶಿಬಿರಗಳ ಭಾಗವಹಿಸಿ ಸಂಪೂರ್ಣ ಪ್ರಯೋಜವನ್ನು ಪಡೆದುಕೊಂಡಾಗ ಮಾತ್ರ ವಿದ್ಯಾರ್ಥಿಗಳು ಸಮಾಜದಲ್ಲಿ ಯಶ್ವಸಿಯಾಗಲು ಸಾಧ್ಯ ಎಂದು ಜೀವ ವಿಮಾ ನಿಗಮದ ಅಧಿಕಾರಿ ಶಂಕರ ಐತಾಳ್ ಹೇಳಿದರು. ಅವರು ಕೋಟೇಶ್ವರ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಮಂಗಳೂರು ವಿಶ್ವ ವಿಧ್ಯಾನಿಲಯ, ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಹಾಗೂ ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರ ಪ್ರಥರ್ಮ ದರ್ಜೇ ಕಾಲೇಜು ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉದ್ಯೋಗ ಮಾರ್ಗದರ್ಶನ ಹಾಗೂ ಸಾಹಿತ್ಯ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಸಭೆಯ ಅಧ್ಯಕ್ಷತೆ ವಹಿಸಿದರು. ಉಜಿರೆ ಎಸ್.ಡಿ.ಎಮ್. ಕಾಲೇಜಿ ಇಂಗ್ಲಿಷ್ ಪಿ,ಜಿ. ವಿಭಾಗ ಪ್ರೊ.ಮಾಧವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಮಂಜಯ್ಯ ಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿರುವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಗೋಡೆಯನ್ನು ಕೊರೆದು ಒಳನುಗ್ಗಿರುವ ಕಳ್ಳರು ಚಿನ್ನ ಹಾಗೂ ನಗದು ದೋಚುವ ವಿಫಲ ಯತ್ನ ನಡೆಸಿದ್ದಾರೆ. ಬ್ಯಾಂಕಿನ ಎದುರಿನ ಶಟರ್ ಹಾಗೆಯೇ ಇದ್ದು, ಬಲಬಾಗದಲ್ಲಿ ಗೋಡೆಯನ್ನು ಕೊರೆದು ಒಳನುಗ್ಗಿದ್ದಾರೆ. ಬ್ಯಾಂಕಿನ ಒಳಗಡೆ ಇದ್ದ ಸಿಸಿ ಕ್ಯಾಮರಾವನ್ನು ಒಡೆದು ಹಾಕುವ ಪ್ರಯತ್ನ ನಡೆಸಿದ್ದು, ಮಾಹಿತಿ ದೊರೆಯಬಾರದೆಂಬ ಕಾರಣಕ್ಕೆ ಅದರ ಡಿವಿಆರ್’ ಕೊಂಡೊಯ್ದಿದ್ದಾರೆ. ಬ್ಯಾಕಿನ ಲಾಕರ್ ಎದುರು ಭಾಗದಲ್ಲಿಯೇ ಗೋಡೆ ಕೊರೆದಿದ್ದು, ವ್ಯವಸ್ಥಿತ ತಂಡ ಕಳ್ಳತನಕ್ಕೆ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನದ ಹಿಂದಷ್ಟೇ ಆಸೋಡು ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಎರಡು ಅಂಗಡಿ ಕಳವು ಪ್ರಕರಣದಲ್ಲಿಯೂ ದೇವಸ್ಥಾನದಲ್ಲಿ ದೇವಳ ಪ್ರಭಾವಳಿಯೊಂದಿಗೆ ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಹಾಗೂ ಡಾಟಾ ಸಂಗ್ರಹವಾಗುವ ಡಿವಿಆರ್ ಕದ್ದೊಯ್ದಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತನ್ನ ಮನೆಯಲ್ಲಿ ಪ್ರತಿನಿತ್ಯ 40ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುತ್ತಾ, ಕಳೆದೊಂದು ದಶಕಗಳಿಂದ ಹಸಿದ ನಾಯಿಗಳ ಹೊಟ್ಟೆ ತುಂಬಿಸುತ್ತಿದ್ದ ಗಂಗೊಳ್ಳಿ ಮೂಲದ ನೇತ್ರಾವತಿಯಮ್ಮ ಈಗ ಕ್ಯಾನ್ಸ್‌ರ್ ರೋಗಕ್ಕೆ ತುತ್ತಾಗಿದ್ದು ಕಿಮೋಥೇರಪಿ ಚಿಕಿತ್ಸೆ ಪಡೆಯುತ್ತಿದ್ದರೂ, ಹಸಿದ ನಾಯಿಗಳಿಗೆ ಅನ್ನಹಾಕುವ ಕಾಯಕ ನಿಲ್ಲಿಸದೇ ತನ್ನ ಶ್ವಾನಪ್ರೇಮ ಮೆರೆಯುತ್ತಿದ್ದಾರೆ. ನಾಯಿಗಳ ಯೋಗಕ್ಷೇಮ, ಆರೈಕೆಗೆ ನಿಂತ ನೇತ್ರಾವತಿಯಮ್ಮ ಅನಾರೋಗ್ಯಕ್ಕೆ ತುತ್ತಾಗಿದ್ದರೂ, ತನ್ನ ಮನೆಯಲ್ಲಿ ನಾಯಿಗಳಿಗೆ ಊಟ ಹಾಕುವುದನ್ನು ನಿಲ್ಲಿಸಿಲ್ಲ. ಮಂಗಳೂರಿನಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರೂ, ಬೆಂಗಳೂರಿನ ತನ್ನ ಮನೆಯಲ್ಲಿ ಒಬ್ಬ ನಂಬಿಕಸ್ಥನನ್ನು ನೇಮಿಸಿಕೊಂಡು ನಾಯಿಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ. ನೇತ್ರಾವತಿಯಮ್ಮ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ಹೊಟ್ಟೆ ಪಾಡಿಗಾಗಿ ಬೆಂಗಳೂರು ಸೇರಿದವರು. ಅಚಾನಾಕ್ಕಾಗಿ ನಡೆದ ಒಂದು ಘಟನೆ ಇವರಿಗೆ ಶ್ವಾನದ ಮೇಲೆ ಮಮಕಾರ ಮೂಡುವಂತಾಯಿತು. ಅಲ್ಲಿಂದಿಚೆಗೆ ಬೆಂಗಳೂರು ಜೆಪಿ ನಗರದ ಬೀದಿ ನಾಯಿಗಳಿಗೆ ನೇತ್ರಾವತಿಯಮ್ಮ ಹೊಟ್ಟೆ ತುಂಬ ಉಣಬಡಿಸುತ್ತಿದ್ದರು. ಕುಂದಾಪ್ರ ಡಾಟ್ ಕಾಂ ವರದಿ. ನಾಯಿ ಆರೈಕೆಯಲ್ಲಿ ನೆಮ್ಮದಿ ದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಕುಂದಾಪುರದ ಹೋಲಿ ರೋಜರಿ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯಲ್ಲಿ ಪರಿಕ್ಷಾ ಪೂರ್ವ ತಯಾರಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿ, ಬಸ್ರೂರು ನಿವೇದಿತಾ ಪ್ರೌಢಶಾಲೆ ಮುಖ್ಯೋಪಧ್ಯಾಯ ದಿನಕರ ಆರ್ ಶೆಟ್ಟಿ ಮಾತನಾಡಿ ಮಾನಸಿಕ ಧೃಡತೆ, ಕಲಿಕೆಯಲ್ಲಿ ಪೂರ್ವ ತಯಾರಿಯೊಂದಿಗೆ ಬದ್ದತೆಯನ್ನು ಹೊಂದಿದಾಗ ಉತ್ತಮ ಅಂಕ ಗಳಿಸಲು ಸಾಧ್ಯ ಆದುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಅಗತ್ಯ. ಆಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ಧರ್ಮಗುರು ವಂ| ಪ್ರವೀಣ್ ಅಮೃತ್ ಮಾರ್ಟಿಸ್ ಅವರು ವಹಿಸಿ ಪರಿಕ್ಷಾ ಪೋಬಿಯಾವನ್ನು ಹೋಗಲಾಡಿಸುವ ಕುರಿತು ತಿಳಿ ಹೇಳಿದರು. ರೋಟರಿ ಸನ್‌ರೈಸ್‌ನ ಇಂಟರ‍್ಯಾಕ್ಟ್ ಛೇರ್‌ಮೆನ್ ಜಗದೀಶ್ ಚಂದ್ರನ್, ಸದಸ್ಯರಾದ ಉಲ್ಲಾಸ ಕ್ರಾಸ್ತಾ, ಡುಂಡಿರಾಜ್, ಗಿರಿಜಾ ಎಂ. ಗೋಪಾಲ್, ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಜೋಯ್ಸ್‌ಲಿನ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪ್ರತಿಮಾ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶಿರೂರು ಮಾರ್ಕೆಟ್ ಬಳಿ ಟ್ಯಾಂಕರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಭಟ್ಕಳದ ಗಣೇಶ್ ನಾಯ್ಕ್ (23) ಎಂದು ಗುರುತಿಸಲಾಗಿದೆ. ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಟ್ಯಾಂಕ್‌ರ್ ಬೈಕಿನಲ್ಲಿ ತೆರಳುತ್ತಿದ್ದ ಗಣೇಶ್ ನಾಯ್ಕ್‌ಗೆ ಡಿಕ್ಕಿ ಹೊಡಿದು, ಅವರ ತಲೆಯ ಮೇಲೆಯೇ ಹಿಂದಿನ ಚಕ್ರಗಳು ಹಾದುಹೋದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ದಾಂಡೆಲಿಯವರಾದ ಗಣೇಶ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಭಟ್ಕಳದ ತನ್ನ ಸಂಬಂಧಿಯ ಮನೆಯಲ್ಲಿ ವಾಸವಾಗಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನ ಕಲೆ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದುದು. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಯಕ್ಷಗಾನ ಜನರಿಂದ ದೂರವಾಗುತ್ತಿದೆ ಎಂದು ಕೆಲವರು ಆಡಿಕೊಳ್ಳುತ್ತಾರೆ. ಆದರೆ ದಿನದ ೨೪ ಗಂಟೆಯೂ ಲಭ್ಯವಿರುವ ವಿದ್ಯುನ್ಮಾನ ಮಾಧ್ಯಮಗಳ ಮನೋರಂಜನೆಯ ನಡುವೆ ಈ ಸೀಮಿತ ಪ್ರದೇಶದಲ್ಲಿರುವ ವೃತ್ತಿ ಮೇಳಗಳು, ಹವ್ಯಾಸಿ ತಂಡಗಳು, ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನೀಡುವ ಪ್ರದರ್ಶನಗಳ ಸಂಖ್ಯೆ ಅಚ್ಚರಿ ಹುಟ್ಟಿಸುವಂತಿದೆ. ಅದರಲ್ಲೂ ಹಿಮ್ಮೇಳ ಮತ್ತು ಅರ್ಥದಾರಿಗಳು ಮಾತ್ರ ಸಾಕಾಗುವ ಅತ್ಯಂತ ಸರಳ ರಂಗಭೂಮಿಯಾದ ತಾಳಮದ್ದಲೆಗೂ ದೊಡ್ಡ ಶ್ರೋತೃವರ್ಗ ಇರುವುದು ಜೀವಂತ ಕಲೆ ನಶಿಸದು ಎಂಬ ಭರವಸೆ ನೀಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು. ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಮತ್ತು ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಯಕ್ಷಗುರು ಹೇರಂಜಾಲು ವೆಂಕಟರಮಣ ಗಾಣಿಗ ವೇದಿಕೆಯಲ್ಲಿ ಆರಂಭವಾದ ತಾಳಮದ್ದಲೆ ಸಪ್ತಾಹದ…
