ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಹಾಗೂ ಆಸುಪಾಸಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಸಹಕಾರಿಯ ಬೆಳವಣಿಗೆಯ ಜೊತೆಗೆ ಸಹಕಾರಿಯ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸದಸ್ಯರಿಗೆ ವಿನೂತನ ಸೌಲಭ್ಯ ಯೋಜನೆಗಳನ್ನು ನೀಡುವ ಸಹಕಾರಿಯ ಪ್ರಯತ್ನ ಶ್ಲಾಘನೀಯ ಎಂದು ಗಂಗೊಳ್ಳಿ ಶ್ರೀ ಅಂಬಿಕಾ ದೇವಸ್ಥಾನದ ಅರ್ಚಕ ವೇದಮೂರ್ತಿ ಜಿ.ವಸಂತ ಭಟ್ ಹೇಳಿದರು. ಅವರು ಗಂಗೊಳ್ಳಿಯ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಕಛೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಹಕಾರಿಯ ವಿನೂತನ ‘ಎಸ್.ಎಂ.ಎಸ್. ಬ್ಯಾಂಕಿಂಗ್ ಸೇವೆ’ಗೆ ಚಾಲನೆ ನೀಡಿ ಆಶೀರ್ವಚನ ನೀಡಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮಾತನಾಡಿ, ಶತಮಾನದ ಹೊಸ್ತಿಲಲ್ಲಿ ಇರುವ ಸಹಕಾರಿಯು ಸೇವೆಗೆ ಪ್ರಸಿದ್ಧಿಗೊಂಡಿದೆ. ತನ್ನ ಸೇವೆಗಳ ಮೂಲಕ ಜನಮನ ಗೆದ್ದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ತನ್ನ ಸದಸ್ಯರಿಗೆ ಇನ್ನಷ್ಟು ಸೌಲಭ್ಯ…
Author: ನ್ಯೂಸ್ ಬ್ಯೂರೋ
. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದ ದಾಳಿ ಬೆಂಗಳೂರನ್ನು ಹತ್ತಿ ಊರಿಯುವಂತೆ ಮಾಡಿತ್ತು. ಕುಂದಾಪುರ ತಂಡದ ಚಾಲಕ ಮಂಜುನಾಥ ಕುಲಾಲ ಅವರ ಮೇಲೆ ತಮಿಳರು ಅಮಾನವೀಯ ಹಲ್ಲೆ ಮಾಡಿರುವುದನ್ನು ವೀಡಿಯೊ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಬಳಿಕ ಎಲ್ಲೆಡೆ ಗಲಾಟೆ ಆರಂಭಗೊಂಡಿತು. ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆಯ ಸದಸ್ಯರು ರಾಮೇಶ್ವರದಲ್ಲಿ ನಿಲ್ಲಿಸಿದ್ದ ಕರ್ನಾಟಕ ನೋಂದಣಿಯ ವಾಹನಗಳಿಗೆ ಮತ್ತು ಅದರಲ್ಲಿದ್ದ ಕನ್ನಡಿಗರಿಗೆ ಮನಸೋ ಇಚ್ಛೆ ದಾಳಿ ನಡೆಸಿದರು. ಅದನ್ನು ಸಂಘಟನೆಯವರೇ ವೀಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಗಲಭೆಗಳು ಆರಂಭಗೊಂಡಿದ್ದವು. ತಮಿಳುನಾಡಿನ ವಾಹನಗಳಿಗೆ ಬೆಂಕಿ, ಸೊತ್ತು ನಾಶಕ್ಕೆ ಕರ್ನಾಟಕದ ಕೆಲವು ಸಂಘಟನೆಗಳೂ ಮುಂದಾಗಿದ್ದವು. ಕೊನೆಗೆ ಒಬ್ಬ ಯುವಕ ದಾರುಣವಾಗಿ ಗುಂಡೇಟಿಗೆ ಬಲಿಯಾಗಬೇಕಾಯಿತು. ಪರಿಸ್ಥಿತಿ ನಿಯಂತ್ರಿಸಲು ಹಲವಡೆ ಕರ್ಪ್ಯೂ ಜಾರಿಗೊಳಿಸಲಾಗಿದೆ. ಕುಂದಾಪ್ರ ಡಾಟ್ ಕಾಂ. ಕುಂದಾಪುರಿಗರು ಸೇಫ್:…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದಿದೆ. ಗಲಭೆಯಲ್ಲಿ ಕುಂದಾಪುರದಿಂದ ದಕ್ಷಿಣ ಭಾರತ ಪ್ರವಾಸಕ್ಕೆಂದು ತೆರಳಿದ್ದ ವಾಹನದ ಗಾಜು ಪುಡಿಗೈದಿರುವುದಲ್ಲದೇ ವಾಹನ ಚಾಲಕ ಮಂಜುನಾಥ ಕುಲಾಲ್ (38) ಎಂಬುವವರಿಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ. ಕುಂದಾಪುರ ತಾಲೂಕಿನ ರಟ್ಟಾಡಿಯ ಮಂಜುನಾಥ ಕುಲಾಲ್ ತಮ್ಮ ಟೆಂಪೂ ಟ್ರಾವೆಲರ್‌ನಲ್ಲಿ ಕುಟುಂಬಿಕರು ಹಾಗೂ ಸ್ನೇಹಿತರು ಸೇರು ಒಟ್ಟು ಹನ್ನೆರಡು ಮಂದಿ ದಕ್ಷಿಣ ಭಾರತದ ಪ್ರವಾಸಕ್ಕೆ ತೆರಳಿದ್ದರು. ತಮಿಳುನಾಡಿನಲ್ಲಿ ಕಾವೇರಿ ಗಲಾಟೆ ಹೆಚ್ಚುತ್ತಿದ್ದಂತೆ ರಾಮೇಶ್ವರಂನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ನಿಲ್ಲಿಸಿದ್ದ ವಾಹನದ ಮುಂಭಾಗ, ಕಿಟಕಿ ಹಾಗೂ ಹಿಂಬದಿಯ ಗಾಜನ್ನು ಸಂಪೂರ್ಣ ಪುಡಿಗೈದು ಜಖಂಗೊಳಿಸಿದ್ದಾರೆ. ಬಳಿಕ ದೂರದಲ್ಲಿ ನಿಂತಿದ್ದ ಮಂಜುನಾಥ ಕುಲಾಲ್ ಅವರ ಬಳಿ ತೆರಳಿ ’ಕಾವೇರಿ ತಮಿಳುನಾಡಿಗೆ ಸೇರಿದ್ದು’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾಹನದಲ್ಲಿದ್ದ ಮಂಜುನಾಥ ಕುಲಾಲರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠ್ಠಲ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ, ರವಿಚಂದ್ರ ಶೆಟ್ಟಿ ಕನ್ಯಾನ ಮತ್ತು ಸುದೀಪ್ ಶೆಟ್ಟಿ ಹೆಬ್ಬಾಡಿ ಜಂಟಿ ಸಂಯೋಜನೆಯಲ್ಲಿ ಭಕ್ತಪ್ರಹ್ಲಾದ – ಭಕ್ತಸುಧನ್ವ – ಗಧಾಪರ್ವ ಎಂಬ ಮೂರು ಪ್ರಸಂಗಗಳ ‘ಯಕ್ಷಮಿಲನ’ ಸೆ.17ರ ಶನಿವಾರ ರಾತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ಏನು ವಿಶೇಷತೆ? ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಶಂಕರನಾರಾಯಣ, ರವೀಂದ್ರ ಶೆಟ್ಟಿ ಹೊಸಂಗಡಿ, ಗಣೇಶ ಹೆಬ್ರಿ, ಸುಧಾಕರ ಕೊಠಾರಿ, ರಾಕೇಶ್ ಮಲ್ಯ, ಗಣೇಶ್ ಗಾವಔಕರ್, ಎನ್.ಜಿ ಹೆಗ್ಡೆ , ಪ್ರಶಾಂತ್ ಭಂಡಾರಿ ಇರಲಿದ್ದಾರೆ. ಮುಮ್ಮೇಳದಲ್ಲಿ *ಯಾಜಿ- ಹಿರಣ್ಯಕಶಿಪು *ಯಲಗುಪ್ಪ – ಖಯಾದು *ಕಾರ್ತಿಕ್ ಚಿಟ್ಟಾಣಿ – ಪ್ರಹ್ಲಾದ *ಹಳ್ಳಾಡಿ – ಕಾಸರ್ಗೋಡು – ಗುರು ಶಿಷ್ಯರು *ಕೋಟ-ಸುಧನ್ವ *ಐರಬೈಲ್ – ಅರ್ಜುನ *ವಿನಯ್ ಭಟ್ – ಕೃಷ್ಣ *ಪಂಜು ಪೂಜಾರಿ – ಪ್ರಭಾವತಿ *ಜಲವಳ್ಳಿ – ಕೌರವ *ಸು. ಚಿಟ್ಟಾಣಿ – ಭೀಮ *ತೋಂಬಟ್ಟು – ಕೃಷ್ಣ *ಕಾಸರ್ಗೋಡು -…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ಯಾಗ ಬಲಿದಾನಗಳ ಹಬ್ಬವೆಂದೇ ಪ್ರಸಿದ್ಧಿ ಪಡೆದ ಬಕ್ರೀದ್ ಹಬ್ಬವನ್ನು ಕುಂದಾಪುರ ತಾಲೂಕಿನಾದ್ಯಂತ ಮುಸ್ಲಿಂ ಭಾಂದವರಿಂದ ಸಡಗರದಿಂದ ಆಚರಿಸಲಾಯಿತು. ಶಿರೂರು, ಬೈಂದೂರು, ನಾವುಂದ, ಗಂಗೊಳ್ಳಿ, ಕುಂದಾಪುರ, ಕಂಡ್ಲೂರು, ಗುಲ್ವಾಡಿ ಸೇರಿದಂತೆ ತಾಲೂಕಿನ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಕೋಡಿ ಕನ್ಯಾನದ ಮನೆಯ ಶೆಡ್‌ನಲ್ಲಿ ಮಾರಾಟ ಮಾಡುವ ಸಲುವಾಗಿ ದನ ಕಡಿದು ಮಾಂಸ ಮಾಡುತ್ತಿದ್ದವರನ್ನು ಮೂವರನ್ನು ಕೋಟ ಪೊಲೀಸ್‌ರು ಬಂಧಿಸಿದ್ದಾರೆ. ಶೆಡ್‌ನಲ್ಲಿ ಎರಡು ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಮುನೀರ್, ಫಿರೋಝ್ ಮತ್ತು ಅಸ್ಲಾಂ ಎಂಬುವವರನ್ನು ಬಂಧಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಡಿ ಕನ್ಯಾನದ ಶನೀಶ್ವರ ದೇವಸ್ಥಾನದ ಬಳಿಯ ಮನೆಯೊಂದರಲ್ಲಿ ದನವನ್ನು ಕಡಿಯುವ ಕುರಿತು ಬಂದ ಮಾಹಿತಿ ಮೇರೆಗೆ ಕೋಟ ಪೊಲೀಸ್ ಉಪನಿರೀಕ್ಷಕ ಕಬ್ಬಾಳ್‌ರಾಜ್ ಎಚ್.ಡಿ. ಮತ್ತು ಸಿಬ್ಬಂದಿಗಳು ಮುನಿರ್ ಅವರ ಮನೆಯ ಶೆಡ್‌ಗೆ ತೆರಳಿ ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಒಟ್ಟು ಎರಡು ದನವನ್ನು ಕಡಿಯಲಾಗಿದ್ದು, ಒಂದು ದನವನ್ನು ಸಂಪೂರ್ಣ ಮಾಂಸ ಮಾಡಿದ್ದು, ಇನ್ನೊಂದನ್ನು ಮಾಂಸ ಮಾಡುವ ಸಿದ್ಧತೆಯಲ್ಲಿದ್ದಾಗ ಪೊಲೀಸ್‌ರಿಗೆ ಸಿಕ್ಕಿಬಿದ್ದಿದ್ದಾರೆ. ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮಾಂಸ ಮಾಡಿ ಉದ್ದೇಶದಿಂದ ದನಗಳನ್ನು ಕಡಿಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ನೇತೃತ್ವದಲ್ಲಿ ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಮೇಳಕ್ಕೆ ಚಾಲನೆ ನೀಡಲಾಯಿತು. ಸಾಗರದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗ್ಡೆ ಅವರು ಯಕ್ಷಗಾನ ಮೇಳಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಯಕ್ಷಗಾನ ಸಂಶೋಧಕ ಪಾದೇಕಲ್ಲು ವಿಷ್ಣು ಭಟ್ ಮಾತನಾಡಿ ಯಕ್ಷಗಾನಕ್ಕೆ ಸಾಹಿತ್ಯ ಮಾನ್ಯತೆ ದೊರೆಯ ಬೇಕಿದೆ. ಯಕ್ಷಗಾನದ ಭಾಷಾ ಜ್ಞಾನ, ವೈಖರಿ ಅಗಾಧವಾಗಿದ್ದು ಕನ್ನಡದ ಸಾಹಿತ್ಯ ಜಗತ್ತನ್ನು ಶ್ರೀಮಂತಗೊಳಿಸೆದೆ ಆದುದರಿಂದ ಯಕ್ಷಗಾನ ಸಾಹಿತ್ಯವೆಂಬುದನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದರು. ಶುಭಾಶಂಸನೆ ಮಾಡಿದ ಮಣಿಪಾಲ ಎಂ ಐ ಟಿಯ ಉಪನ್ಯಾಸಕ ಉದಯಕುಮಾರ ಶೆಟ್ಟಿ ಮಾತನಾಡಿ ಸಾಹಿತ್ಯಿಕ ಸಾಂಸ್ಕೃತಿಕ ನೆಲಗಟ್ಟಿನ ಹಟ್ಟಿಯಂಗಡಿಯಲ್ಲಿ ಉದಯವಾದ ಯಕ್ಷಗಾನ ಮೇಳ ಪೌರಾಣಿಕ ಪ್ರಸಂಗಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತಾಗಲಿ. ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸುವಂತಾಗಲಿ ಎಂದರು. ಈ ಸಂದರ್ಭದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುಸ್ತಕ ಎನ್ನುವುದು ಜ್ನಾನದ ತನ್ನದಾಗಿಸಿಕೊಳ್ಳುತ್ತಾನೆ. ಈ ಹವ್ಯಾಸವನ್ನು ವಿದ್ಯಾರ್ಥಿಗಳು ಕಾಲೇಜಿನ ದಿನದಿಂದಲೇ ಆರಂಭಿಸಬೇಕು. ಓದು ಎನ್ನುವುದು ಕೇವಲ ಪಠ್ಯಪುಸ್ತಕ, ಆಕರ ಗ್ರಂಥಗಳಿಗೆ ಸೀಮಿತವಾಗಬಾರದು. ಪ್ರತಿದಿನ ದಿನಪತ್ರಿಕೆಗಳಿಂದಲೇ ಓದನ್ನು ಆರಂಭಿಸಬೇಕು ಅಲ್ಲಿನ ಅಂಕಣ ಬರಹಗಳು, ಅಲ್ಲಿ ಪ್ರಕಟವಾಗುವ ಲೇಖನಗಳನ್ನು ಓದುತ್ತಾ ವಾರಪತ್ರಿಕೆ, ಮಾಸಪತ್ರಿಕೆ, ಕಥೆ ಕಾದಂಬರಿಗಳತ್ತ ಓದು ವಿಸ್ತಾರಗೊಳಿಸಬೇಕೆಂದು ಡಾ.ಚಂದ್ರಾವತಿ ಶೆಟ್ಟಿಯವರು ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಂಡ “ನನ್ನ ಮೆಚ್ಚಿನ ಪುಸ್ತಕ” ಕಾರ್ಯಕ್ರಮದಲ್ಲಿ ಮುಖ್ಯಾತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಓದುವ ಹವ್ಯಾಸವುಳ್ಳವರಿಗೆ ಅನುಭವದೊಂದಿಗೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಅದು ಬದುಕಿನಲ್ಲಿ ತಲೀತ್ತಿ ನಡೆಯುವುದಕ್ಕೆ ಪ್ರೇರಣೆಯಾಗುತ್ತದೆ. ಎನ್ನುತ್ತಾ ಭಂಡಾರ್ಕಾರ್ಸ್ ಕಾಲೇಜಿನ ಪುಸ್ತಕ ಪ್ರೇಮಿಗಳ ಬಳಗ ಇನ್ನಷ್ಟು ವೃದ್ಧಿಯಾಗಲಿ. ನಿಸರ್ಗದ ಸೌಂದರ್ಯವನ್ನು ಸಮತೋಲನವನ್ನು ಗಿಳಿಗಳ ಬಳಗ ಹೆಚ್ಚಿಸುವಂತೆ ಪುಸ್ತಕ ಓದುವ ವಿದ್ಯಾರ್ಥಿಗಳ ಬಳಗ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ.ಕೋಟ ಶಿವರಾಮ ಕಾರಂತರ ಕನಸು ನನಸು ಮಾಡುವ ದಾರಿಯಲ್ಲಿರುವ ಕೋಟತಟ್ಟು ಗ್ರಾಮ ಪಂಚಾಯಿತಿ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲಿ ಇಡೀ ರಾಜ್ಯದಲ್ಲೆ ಮಾದರಿ ಗ್ರಾಮ ಪಂಚಾಯಿತಿಯಾಗಿ ರೂಪುಗೊಂಡಿದೆ. ಕಾರಂತರ ಸಾಹಿತ್ಯ ಥೀಂ ಪಾರ್ಕ ಮೂಲಕ ನಿತ್ಯ ನೂತನವಾಗುತ್ತಿರುವುದು ಸಂತಸದ ವಿಚಾರ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರು ಕೋಟ ಥೀಂ ಪಾರ್ಕನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಕೋಟತಟ್ಟು ಗ್ರಾಮ ಪಂಚಾಯಿತಿ, ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಡಾ.ಶಿವರಾಮ ಕಾರಂತ ವಿಷಯಾಧಾರಿತ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇದೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ೨೫ರಂದು ನಡೆಯಲಿರುವ ಪಂಚಾಯತ್ ಕ್ರೀಡಾ ಕೂಟ ಹೊಳಪು ಇದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಸ್ಕೃತಿಯ ಪ್ರೀತಿ ಜೀವನದಲ್ಲಿ ಹೊಸ ಬದುಕನ್ನು ರೂಪಿಸುತ್ತದೆ. ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ. ಅದೇ ರೀತಿ ಕೇವಲ ಪುಸ್ತಕದ ಜ್ಞಾನ ಜೀವನಕ್ಕೆ ಸಾಕಾಗುವುದಿಲ್ಲ. ಶಿಕ್ಷಣೇತರ ಚಟುವಟಿಕೆಗಳು ಜೀವನದದ್ದುಕ್ಕಕ್ಕೂ ನೆನಪಿನಲ್ಲಿ ಉಳಿದು ಸಾಂಸ್ಕೃತಿಕವಾಗಿ ಎಲ್ಲವನ್ನು ಎದುರಿಸುವ ಧೈರ್ಯ ತುಂಬಲು ಸಹಕಾರಿಯಾಗುತ್ತದೆ ಎಂದು ಮೀನುಗಾರಿಕಾ, ಯುವಜನ ಸೇವೆ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಬೈಂದೂರು ರತ್ತೂಬಾಯಿ ಜನತಾ ಪೌಢಶಾಲೆಯಲ್ಲಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಸಿರಿವಂತಿಕೆ ಪಡೆದ ಭಾರತದೇಶ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಿಂದಿನವರಿಂದ ಪರಂಪರಾಗತವಾಗಿ ಬಂದಿರುವ ಹಲವು ಕಲೆಗಳನ್ನು ಮುಂದಿನ ಪೀಳಿಗೆಯವರೆಗೂ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹೊಸ ಪ್ರತಿಭೆಗಳಗೆ ಉತ್ತೇಜನ ನೀಡುತ್ತಿದೆ. ಇದು ಕೇವಲ ಮನರಂಜನೆ ಮಾತ್ರ ಸೀಮಿತಗೊಳಿಸದೇ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಾಸಕ ಕೆ.…
