Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಒಂದು ತಿಂಗಳ ಕಾಲ ಹಮ್ಮಿಕೊಂಡ ‘ಆಪರೇಷನ್ ಸುರಕ್ಷಾ’ ಅಭಿಯಾನದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಬಸ್ಸು ಹಾಗೂ ಇನ್ನಿತರ ಘನ ವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಶ ಹಾರ್ನ್ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕುಂದಾಪುರದ ಶಾಸ್ತ್ರೀವೃತ್ತ, ಸಂಗಮ್, ಮುಳ್ಳಿಕಟ್ಟೆ ಮುಂತಾದೆಡೆ ಕಾರ್ಯಾರಣೆ ನಡೆಸಿದ್ದಾರೆ. ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಸಂಚಾರಿ ಠಾಣಾಧಿಕಾರಿ ಜಯ ಮತ್ತು ದೇವೇಂದ್ರ, ಮುಳ್ಳಿಕಟ್ಟೆಯಲ್ಲಿ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹಾರನ್ ತೆರವುಗೊಳಿಸಿದ್ದಾರೆ. ಕರ್ಕಶ ಶಬ್ದದ ಹಾರ್ನ್‌ಗಳಿಂದ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಇತರೆ ವಾಹನ ಚಾಲಕರು ವಿಚಲಿತರಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಅರಿತ ಪೊಲೀಸರು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯ ತನಕ ವ್ಯಾಕ್ಯೂಮ್ ಹಾರ್ನ್ ತೆರವುಗೊಳಿಸಿದ್ದು ಕುಂದಾಪುರದಲ್ಲಿ ಮೊದಲ ದಿನವೇ 75ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಿ 40 ವಾಹನಗಳಿಗೆ ರೂ.100ರಂತೆ ದಂಡ ವಿಧಿಸಲಾಗಿದೆ.

Read More

ಸಾಸ್ತಾನ ಮಿತ್ರರು ಹಾಗೂ ಯಕ್ಷೇಶ್ವರಿ ಬಳಗದ ಅಭಿಯಾನಕ್ಕೆ ಗಣ್ಯರ ಸಾಥ್ ಸೆಲ್ಫಿ ನೆಪದಲ್ಲಿ ಹುಟ್ಟಿಸಿದ ಹಸಿರು ಪ್ರೀತಿ! ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ಒಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭೂಮಿಯ ತಾಪಮಾನ. ಅದಕ್ಕೆ ಪೂರಕವೋ ಎಂಬಂತೆ ಉಲ್ಭಣಿಸುತ್ತಿರುವ ಮಾಲಿನ್ಯದ ವಾತಾವರಣ. ಈ ಮಧ್ಯೆ ಕ್ಷೀಣಿಸುತ್ತಿರುವ ವೃಕ್ಷ ಸಂಕುಲ. ಪರಿಸ್ಥಿತಿ ಹೀಗೆ ಮುಂದುವರಿದರೇ ಆಪತ್ತು ಖಂಡಿತ ಎಂಬುದನ್ನು ಅರಿತು ಹತ್ತಾರು ಸಂಘ ಸಂಸ್ಥೆಗಳು ಗೀಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. [quote font_size=”16″ bgcolor=”#ffffff” bcolor=”#59d600″ arrow=”yes” align=”right”]ನೀವೂ ಗೀಡ ನೆಡಿ. ಸೆಲ್ಫಿ ಕಳಿಸಿ ಕೊನೆಯ ದಿನಾಂಕ ಜುಲೈ 31 ವಾಟ್ಸ್‌ಪ್ -8197407570 email sasthana576226@gmail.com[/quote] ಆದರೆ ಸಾಸ್ತಾನ ಮಿತ್ರರು ಹಾಗೂ ಯಕ್ಷೇಶ್ವರಿ ಬಳಗದ ಮುಂದಾಳತ್ವದಲ್ಲಿ ವೃಕ್ಷ ಸಂಕುಲದ ವೃದ್ಧಿಗೆ ಹಮ್ಮಿಕೊಂಡ ಯೋಜನೆ ಮಾತ್ರ ಸ್ವಲ್ಪ ಭಿನ್ನವಾದದ್ದು. ಆಧುನಿಕ ಜಮಾನದಲ್ಲಿ ಹೆಚ್ಚಿರುವ ಸೆಲ್ಫಿ ಟ್ರೆಂಡ್‌ಗೆ ತಕ್ಕಂತೆ ಗೀಡಗಳನ್ನು ನೆಟ್ಟು ಅದರೊಂದಿಗೆ ಒಂದು ಸೆಲ್ಫಿ ತೆಗೆದು ಕಳುಹಿಸಿ ಎಂದು ಸಂಘಟಕರು ಸಾಮಾಜಿಕ ತಾಣಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರ್ಕಾರದ ನೂರು ಸೇವೆ ಒಂದೇ ಸೂರಿನಡಿ ಎನ್ನುವ ಯೋಜನೆ ಬಾಪೂಜಿ ಸೇವಾ ಕೇಂದ್ರವನ್ನು ಕರ್ಕುಂಜೆ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿದಾಸ್ ಮತ್ತು ತಾಲೂಕು ಪಂಚಾಯತ್ ಸದಸ್ಯ ಸತೀಶ್ ಪೂಜಾರಿ ಫಲಾನುಭವಿಗಳಿಗೆ ಆರ್‌ಟಿಸಿ ನೀಡುವೂದರ ಮೂಲಕ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಖಾರಿ ರಿಯಾಜ್ ಅಹಮದ್, ಪಂಚಾಯತ್ ಸದಸ್ಯರುಗಳು, ಮತ್ತು ಸಿಬ್ಬಂದಿವರ್ಗ ಹಾಗೂ ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ಧರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ(ರಿ.), ಕುಂದಾಪುರ ಅಭಿಯೋಗ ಇಲಾಖೆ ಮತ್ತು ಅರಣ್ಯ ಇಲಾಖೆ ಕುಂದಾಪುರ ಮತ್ತು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ಜರುಗಿತು. ಕುಂದಾಪುರ ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ತಾ. ಕಾ. ಸೇ. ಸಮಿತಿ ಕಾರ್ಯದರ್ಶಿ ಪ್ರೀತ್ ಜೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ, ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ನಾಯ್ಕ್, ವಲಯ ಅರಣ್ಯಾಧಿಕಾರಿಗಳು ಶರತ್‌ಕುಮಾರ್ ಶೆಟ್ಟಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ರಕ್ಷಿತ್ ರಾವ್ ಗುಜ್ಜಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ಮಾವಿನಕಟ್ಟೆ ಶ್ರೀ ಮೂಕಾಂಬಿಕಾ ದೇವಳದ ಪೌಢ ಶಾಲೆಯಲ್ಲಿ ಹದಿನಾಲ್ಕು ವರ್ಷಗಳ ಕಾಲ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಗೊಂಡ ಮಂಗಳಾ ಅವರನ್ನು ಸನ್ಮಾನಿಸಲಾಯಿತು. ಕೊಲ್ಲೂರು ದೇವಳದ ಕಾರ್ಯನಿರ್ವಹಣಾಧಿಕಾರಿ ಟಿಆರ್ ಉಮಾ ಇವರು ಶುಭಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಎಚ್. ಕುಶಲ್ ಶೆಟ್ಟಿ, ಸಹಶಿಕ್ಷಕರುಗಳಾದ ಸುಚೇತ, ರೀತಾ, ಕಾಂತಿ, ಸಂತೋಷ ಶೆಟ್ಟಿ, ಮಲ್ಲಿಕಾ, ಸರಸ್ವತಿ, ದಿನಕರ ನಾಯಕ್, ರೇಖಾ, ಜಯಶೀಲ್, ಹರೀಶ್, ಹಾಗೂ ಭೋದಕೇತರ ಸಿಬ್ಬಂದಿಗಳಾದ ಸುಭೋದ , ಗಣೇಶ್ ಉಪಸ್ಥಿತರಿದ್ಧರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ೨೦೧೫, ಚಾಲಕರ ವಿರೋಧಿ ಜನ ಸಾಮಾನ್ಯರ ಸಾರಿಗೆ ವ್ಯವಸ್ಥೆಯನ್ನು ರದ್ದು ಮಾಡುವ, ಜನ ಸಾಮಾನ್ಯರಿಗೆ ಸಾರಿಗೆ ವ್ಯವಸ್ಥೆಯನ್ನು ನಾಶ ಮಾಡುವುದು ಎಂದು ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ‍್ಸ್ ಯೂನಿಯನ್ ರಾಜ್ಯ ಸಮಿತಿಯ ಕೋಶಾಧಿಕಾರಿ ಸಿ.ಎನ್.ಶ್ರೀನಿವಾಸ ಬೆಂಗಳೂರು ಹೇಳಿದರು. ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಇದರ ೪೦ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅವರು ಮುಂದುವರಿದು ಮಾತನಾಡುತ್ತಾ ಈಗಿರುವ ಈಗಿರುವ ಮೋಟಾರು ವಾಹನ ಕಾಯಿದೆ ೧೯೮೮ ರ ಬದಲಿಗೆ ಕೇಂದ್ರ ಸರಕಾರ ತರುತ್ತಿರುವ ಈ ಹೊಸ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ -೨೦೧೫ ರ ಬದಲಿಗೆ ಎಲ್ಲಾ ರಸ್ತೆ ಸಾರಿಗೆ ವಲಯಗಳಿಗೆ ಆತ್ಮಹತ್ಯೆಕಾರಿಯಾಗದೇ ಮತ್ತು ಕಾರ್ಪೋರೇಟ್ ವಲಯದವರಿಗೆ ಉತ್ತೇಜನಕಾರಿಯಾಗಿದೆ ಎಂದು ಶ್ರೀನಿವಾಸ ಅಭಿಪ್ರಾಯ ಪಟ್ಟರು. ಇದು ಕಾನೂನಾದರೆ ಪ್ರತಿಯೊಬ್ಬ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಟ್ಟಿಯಂಗಡಿ ಗ್ರಾಮ ಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮ ಸಭೆಯು ಕೂಡ್ಲು ಕನ್ಯಾನ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಹಟ್ಟಿಯಂಗಡಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಜೀವ ಶೆಟ್ಟಿ ಅದ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ ಇರುವೂದರಿಂದ ಶಾಸಕರು ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ತಾಲೂಕು ಪಂಚಾಯತ್ ಸದಸ್ಯರು ಪಂಚಾಯತಿಗೆ ಅನುದಾನ ದೊರಕಿಸಿಕೊಡಿ ಎಂದು ಮನವಿ ಮಾಡಿದರು. ಪಂಚಾಯತ್ ಉಪಾದ್ಯಕ್ಷ ಪ್ರತಾಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ, ತಾಲೂಕು ಪಂಚಾಯತ್ ಸದಸ್ಯ ಕರುಣ್ ಪೂಜಾರಿ, ಎಲ್ಲಾ ಇಲಾಖೆಯ ಅಧಿಕಾರಿಗಳು, ಹಾಗೂ ಶಾಲಾ ಮುಖ್ಯ ಶಿಕ್ಷಕರುಗಳು, ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ಧರು. ಶಿಕ್ಷಣ ಇಲಾಖೆಗೆ ಆರ್‌ಟಿಐ ಅಡಿಯಲ್ಲಿ ಸಿಗುವಂತ ಸೌಲಭ್ಯವನ್ನು ಗ್ರಾಮ ಪಂಚಾಯತ್ ಕೊಡುವ ಬಗ್ಗೆ ದೀರ್ಘ ಚರ್ಚೆಗಳು ನಡೆದವು, ಹಾಗೂ ಲಾಟರಿ ಮೂಲಕ ಆಯ್ಕೆ ಮಾಡುವುದನ್ನು ರದ್ಧು ಪಡಿಸಬೇಕೆಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು ಮತ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಕೋಟೇಶ್ವರದ ಸುಮುಖ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಲಯನ್. ವಿ.ಜಿ.ಶೆಟ್ಟಿಯವರು ನೂತನ ಅಧ್ಯಕ್ಷ ಲಯನ್ ಸತೀಶ್‌ಕುಮಾರ್, ಕಾರ್ಯದರ್ಶಿ ಲಯನ್ ಅನಿಲ್ ಶೆಣೈ ಹಾಗೂ ಖಜಾಂಚಿಯಾಗಿ ಲಯನ್ ನಿತಿನ್‌ಕುಮಾರ್ ಹಾಗೂ ಲಯನೆಸ್ ವಿಭಾಗದ ಅಧ್ಯಕ್ಷೆಯಾಗಿ ಲಯನೆಸ್ ಮಾಲಿನಿ ಸತೀಶ್, ಕಾರ್ಯದರ್ಶಿಯಾಗಿ ಲಯನೆಸ್ ಅನೂಷಾ ಶೆಣೈ, ಖಜಾಂಚಿಯಾಗಿ ಶೀಜಾ ಸಾಲಿಯಾನ್‌ರವರ ಪದಪ್ರದಾನ ಮಾಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಬಳಿಕ ಮಾತನಾಡಿದ ಅವರು, ಲಯನ್ಸ್ ಒಂದು ಸೇವಾ ಸಂಸ್ಥೆ ಇದರಲ್ಲಿ ಸೇವೆ ಮಾಡುವುದೇ ನಮ್ಮ ಧರ್ಮ, ನಮ್ಮ ಗಳಿಕೆಯ ಒಂದು ಪಾಲನ್ನು ಸಮಾಜದಅಶಕ್ತರಿಗೆ, ದೀನದಲಿತರಿಗೆ ಮೀಸಲಾಗಿಡೋಣ ಎಂದು ಕರೆ ನೀಡಿದರು. ನೂತನ ಸದಸ್ಯರ ಸೇರ್ಪಡೆಗೊಳಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಲಯನ್ ಕಿರಣ್, ಪ್ರಾಂತೀಯ ಕಾರ್ಯದರ್ಶಿ ಲಯನ್ ನಿರಂಜನ್, ಪ್ರಾಂತೀಯ ಅಧ್ಯಕ್ಷ ಲಯನ್ ರತ್ನಾಕರ ಶೆಟ್ಟಿ, ಕೋರ್ ಕಮಿಟಿ ಸದಸ್ಯ ಲಯನ್ ಪ್ರಕಾಶ್…

Read More

ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಕೆಲವೊಂದು ಕಾರ್ಯಕ್ರಮಗಳು ತನ್ನದೇ ಆದ ಕಾರಣಗಳಿಂದಾಗಿ ವಿಶೇಷ ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿಗಳು ಅವರದ್ದೇ ಆದ ಭಿನ್ನ ನಿಲುವಿನಂದಾಗಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಇತ್ತಿಚಿಗೆ ನಡೆದ ಕಾರ್ಯಕ್ರಮವೊಂದು ಅಂತಹದ್ದೇ ಸಂದರ್ಭಕ್ಕೆ ಸಾಕ್ಷಿಯಾಯಿತು. ನಿವೃತ್ತಿಯ ವೇಳೆಗೆ ಅಭಿನಂದನೆ ಸ್ವೀಕರಿಸಿ ತೆರಳುವ ಮುಖ್ಯೋಪಧ್ಯಾಯರು, ತನ್ನ ವೃತ್ತಿ ಬದುಕಿನಲ್ಲಿ ಸಹಕರಿಸಿದವರನ್ನೆಲ್ಲಾ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಜುಲೈ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ. ಎಸ್. ಭಟ್ ಅವರನ್ನು ಗೌರವಿಸಲು ಪೋಷಕರು, ಶಿಕ್ಷಕರು ಇತ್ತೀಚೆಗೆ ಹಮ್ಮಿಕೊಂಡ ಸಮಾರಂಭದ ಪ್ರಥಮಾರ್ಧದಲ್ಲಿ ಭಟ್ ಅವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಸಹೋದ್ಯೋಗಿಗಳಿಗೆ, ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಕಾರ್ಯಕ್ರಮ ವಿಶಿಷ್ಟವೆನಿಸುವಂತೆ ಮಾಡಿದರು. ಮೊದಲು ತನ್ನೊಂದಿಗೆ ದುಡಿಯುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಗಳಾದ ಡಿ. ಸಿ. ಹಾಸ್ಯಗಾರ್, ಮಂಜು ಕಾಳಾವರ, ಚಂದ್ರ ಕೆ, ಆನಂದ ಮದ್ದೋಡಿ, ಪ್ರಕಾಶ ಮಾಕೋಡಿ, ಶ್ರೀಧರ ಗಾಣಿಗ, ನಿರ್ಮಲಾ, ಪಾರ್ವತಿ, ಗಿರಿಜಾ, ಸುಮನಾ, ಚೈತ್ರಾ, ಸ್ವಾತಿ, ಅಡುಗೆಯವರಾದ ಲಕ್ಷ್ಮಕ್ಕ,…

Read More