ಸೆಲ್ಫಿ ವಿದ್ ಗ್ರೀನ್: ಪರಿಸರ ಉಳಿಸುವ ಅಭಿಯಾನಕ್ಕೆ ಆಧುನಿಕತೆಯ ಸ್ವರ್ಶ

Call us

Call us

Call us

ಸಾಸ್ತಾನ ಮಿತ್ರರು ಹಾಗೂ ಯಕ್ಷೇಶ್ವರಿ ಬಳಗದ ಅಭಿಯಾನಕ್ಕೆ ಗಣ್ಯರ ಸಾಥ್
ಸೆಲ್ಫಿ ನೆಪದಲ್ಲಿ ಹುಟ್ಟಿಸಿದ ಹಸಿರು ಪ್ರೀತಿ!

Call us

Click Here

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಕುಂದಾಪುರ: ಒಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭೂಮಿಯ ತಾಪಮಾನ. ಅದಕ್ಕೆ ಪೂರಕವೋ ಎಂಬಂತೆ ಉಲ್ಭಣಿಸುತ್ತಿರುವ ಮಾಲಿನ್ಯದ ವಾತಾವರಣ. ಈ ಮಧ್ಯೆ ಕ್ಷೀಣಿಸುತ್ತಿರುವ ವೃಕ್ಷ ಸಂಕುಲ. ಪರಿಸ್ಥಿತಿ ಹೀಗೆ ಮುಂದುವರಿದರೇ ಆಪತ್ತು ಖಂಡಿತ ಎಂಬುದನ್ನು ಅರಿತು ಹತ್ತಾರು ಸಂಘ ಸಂಸ್ಥೆಗಳು ಗೀಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

[quote font_size=”16″ bgcolor=”#ffffff” bcolor=”#59d600″ arrow=”yes” align=”right”]ನೀವೂ ಗೀಡ ನೆಡಿ. ಸೆಲ್ಫಿ ಕಳಿಸಿ
ಕೊನೆಯ ದಿನಾಂಕ ಜುಲೈ 31
ವಾಟ್ಸ್‌ಪ್ -8197407570
email sasthana576226@gmail.com[/quote]

ಆದರೆ ಸಾಸ್ತಾನ ಮಿತ್ರರು ಹಾಗೂ ಯಕ್ಷೇಶ್ವರಿ ಬಳಗದ ಮುಂದಾಳತ್ವದಲ್ಲಿ ವೃಕ್ಷ ಸಂಕುಲದ ವೃದ್ಧಿಗೆ ಹಮ್ಮಿಕೊಂಡ ಯೋಜನೆ ಮಾತ್ರ ಸ್ವಲ್ಪ ಭಿನ್ನವಾದದ್ದು. ಆಧುನಿಕ ಜಮಾನದಲ್ಲಿ ಹೆಚ್ಚಿರುವ ಸೆಲ್ಫಿ ಟ್ರೆಂಡ್‌ಗೆ ತಕ್ಕಂತೆ ಗೀಡಗಳನ್ನು ನೆಟ್ಟು ಅದರೊಂದಿಗೆ ಒಂದು ಸೆಲ್ಫಿ ತೆಗೆದು ಕಳುಹಿಸಿ ಎಂದು ಸಂಘಟಕರು ಸಾಮಾಜಿಕ ತಾಣಗಳ ಮೂಲಕವೇ ಪ್ರಚಾರಕ್ಕೆ ಇಳಿದರು. ಈಗ ಸಂಘಟಕರ ನಿರೀಕ್ಷೆಗೂ ಮೀರಿ ಗೀಡ ನೆಟ್ಟು ಸೆಲ್ಫಿ ತೆಗೆದುಕೊಂಡ ಪೋಟೋಗಳು ಬರುತ್ತಿವೆ. ಪರಿಸರ ಕಾಳಜಿಯಿಂದ ಎದ್ದ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಅತ್ಯುತ್ತಮ ಮೂರು ಸೆಲ್ಫಿಗಳಿಗೆ ಬಹುಮಾನವೂ, ಇಲ್ಲವಾದರೂ ಗಿಡವೊಂದನ್ನು ನಾವೇ ನೆಟ್ಟ ಖುಷಿ. ಅಂದಹಾಗೆ ಗಿಡ ನೆಡುವುದಕ್ಕಷ್ಟೇ ಪ್ರೇರೆಪಿಸಿ ಸುಮ್ಮನಾಗದ ಆಯೋಜಕರು ಗಿಡಗಳನ್ನು ಪಾಲನೆ ಮಾಡಿ ಮೂರು ತಿಂಗಳ ಬಳಿಕ ಅದೇ ಗಿಡದೊಂದಿಗೆ ಸೆಲ್ಫಿ ತೆಗೆದು ಕಳುಹಿಸಿದರೇ ಅದಕ್ಕೂ ಬಹುಮಾನವಿರುವುದಾಗಿ ಘೋಷಿಸಿ ಅಭಿಯಾನದ ನಿರಂತರತೆಗೊಂದು ಜೀವ ತುಂಬಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ:
ಸಾಮಾಜಿಕ ತಾಣಗಳ ಮೂಲಕ ನೀಡಿದ ಕರೆಗೆ ಗಣ್ಯರೂ ಕಿವಿಗೊಟ್ಟಿದ್ದಾರೆ. ಪೇಜಾವರ ಮಠದ ಕಿರಿಯ ಸ್ವಾಮಿಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ, ಕೋಟ ಠಾಣಾಧಿಕಾರಿ ಕಬ್ಬಳ್ ರಾಜ್ ಎಚ್.ಡಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದರೇ, ವಿಶೇಷವೆಂಬಂತೆ ಚಿಕ್ಕಬಳ್ಳಾಪುರದ ಆನೂರು ಶಾಲೆಯ ಮಕ್ಕಳು ೧೦೦ ಗಿಡಗಳನ್ನು ನೆಟ್ಟ ಪೋಟೋ ಕಳುಹಿಸಿ ಅಭಿಯಾನಕ್ಕೆ ಮೆರಗು ತಂದಿದ್ದಾರೆ /ಕುಂದಾಪ್ರ ಡಾಟ್ ಕಾಂ ವರದಿ/

Click here

Click here

Click here

Click Here

Call us

Call us

  • ಪ್ರತಿಯೊಬ್ಬರೂ ನೆರಳು ಬೇಕು ಎಂದು ಬಯಸುತ್ತಾರೆ. ಆದರೆ ಗಿಡ ನೆಡುವ ಬಗ್ಗೆ ಯಾರೊಬ್ಬರೂ ಆಲೋಚಿಸಲಾರರು. ಈ ಜಮಾನದ ಸೆಲ್ಫಿ ನೆಪದಲ್ಲಾದರೂ ಒಂದಷ್ಟು ಗಿಡ ನೆಲಕ್ಕೂರಲಿ ಎನ್ನುವುದು ನಮ್ಮ ಅಭಿಯಾನದ ಆಶಯ. ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
    – ಪ್ರವೀಣ್ ಯಕ್ಷಿಮಠ ಸಾಸ್ತಾನ, ಅಭಿಯಾನದ ಸಂಘಟಕ

news Selfie with Green Sastana1 news Selfie with Green Sastana5 news Selfie with Green Sastana2 news Selfie with Green Sastana4

Leave a Reply