ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೊಟೋ ಅಳವಡಿಸಿರುವ ಬಗ್ಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪೋಟೋ ತೆರವುಗೊಳಿಸುವಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಏರುದ್ವನಿಯಲ್ಲಿ ಮಾತುಕತೆಗಳು ನಡೆದು ಹೋಗಿದೆ. ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರ ಕೊಠಡಿಯಲ್ಲಿ ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಪೋಟೋದೊಂದಿಗೆ ದೇಶದ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋವನ್ನೂ ಹಾಕಲಾಗಿತ್ತು. ಆದರೆ ಇದಕ್ಕೆ ಕೆಲವು ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿರುವುದರಿಂದ ಅವರ ಪೊಟೋ ಹಾಕಲಾಗಿದೆ ಎಂದು ಬಿಜೆಪಿ ಪಕ್ಷದ ತಾಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಮಜಾಯಸಿ ನೀಡಿದ್ದರೇ, ಪೊಟೋ ಹಾಕುವುದಿದ್ದರೇ ಯುಪಿಎ ಸರಕಾರದ ಪ್ರಧಾನ ಮಂತ್ರಿ ಮನಮೋಹನಸಿಂಗ್ ಪೊಟೋವನ್ನು ಹಾಕುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪಡುವರಿ ಗ್ರಾಪಂ ವ್ಯಾಪ್ತಿಯ ಸೋಮೇಶ್ವರದ ಭಂಡಾರಿಮನೆ ಬಚ್ಚಿ ನಾರಾಯಣ ಮೋಗವೀರ ಎಂಬುವರ ಮನೆಯ ಮೇಲೆ ಭಾರಿ ಗಾಳಿ ಮಳೆಯಿಂದಾಗಿ ತೆಂಗಿನಮರ ಉರುಳಿ ಮನೆ ಸಂಪೂರ್ಣ ಹಾನಿಗೀಡಾದ ಘಟನೆ ವರದಿಯಾಗಿದೆ. ಅಪಾರ ಹಾನಿ: ಮಧ್ಯಾಹ್ನದ ಸಮಯದಲ್ಲಿ ಮನೆಯ ಮೇಲೆ ಮರ ಬಿದ್ದಿದ್ದು, ಮೂರು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಯಾಗಿ ವಿಶ್ರಾಂತಿ ಪಡೆಯುತ್ತಿದ್ದ ಕೃಷ್ಣ ಮೊಗವೀರ ಎಂಬುವವರಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದೆ. ತಕ್ಷಣ ಇವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಉಳಿದಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಟಿವಿ, ಗ್ರೈಂಡರ್, ಗ್ಯಾಸ್ ಸ್ಟೋವ್ ಸೇರಿದಂತೆ ವಿದ್ಯುತ್ ಉಪಕರಣಗಳು ಹಾನಿಗೀಡಾಗಿದ್ದು ಸುಮಾರು ರೂ. 3 ಲಕ್ಷ ನಷ್ಟ ಅಂದಾಜಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಪಡುವರಿ ಗ್ರಾಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಪಿಡಿಒ ಮಂಜುನಾಥ ಶೆಟ್ಟಿ, ಗ್ರಾಮ ಕರಣಿಕ ಪ್ರಕಾಶ್, ಜಿಪಂ ಅಭಿಯಂತರ ಅರುಣ್‌ಕುಮಾರ್ ಸುದ್ಧಿ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಎರಡು ಮೂರು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಂಗೊಳ್ಳಿ, ಮರವಂತೆ, ಕೊಡೇರಿ, ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು, ಶಿರೂರು ಸೇರಿದಂತೆ ಮುಂತಾದ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ, ಕೆಲವಡೆ ತಾತ್ಕಲಿಕವಾಗಿ ಅಳವಡಿಸಿದ ಕಲ್ಲು ಸಮುದ್ರದ ಅಲೆಗೆ ಕೊಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿದೆ, ಇದರಿಂದಾಗಿ ಸಮುದ್ರ ದಡದಲ್ಲಿ ಕೊರೆತ ಉಂಟಾಗಿದ್ದು, ಇಲ್ಲಿನ ಹತ್ತಾರು ತೆಂಗಿನಮರ ಸಮುದ್ರ ಪಾಲಾಗುವ ಆತಂಕ ಎದುರಾಗಿದೆ. ತೀವ್ರ ಕಡಲ್ಕೊರೆತ ಉಂಟಾದ ಹೊಸಹಿತ್ಲು ಭಾಗಕ್ಕೆ ಬೈಂದೂರು ವಿಶೇಷ ತಹಶೀಲ್ದಾರ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದ ನಾಲ್ಕುದಿನಗಳಿಂದ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಕೆಲ ಭಾಗಗಳಲ್ಲಿ ನೆರೆ ಸೃಷ್ಠಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅಸಮರ್ಪಕ ನಿರ್ವಹಣೆ, ಗ್ರಾಮ ಪಂಚಾಯತಿಗಳ ನಿರ್ಲಕ್ಷ್ಯ ದೋರಣೆಯಿಂದಾಗಿ ಹಲವೆಡೆ ಕೃತಕ ನೆರೆ ಸೃಷ್ಠಿಯಾಗಿದೆ. ಯಡ್ತರೆ ಗ್ರಾಪಂ ವ್ಯಾಪ್ತಿಯ ಬೈಂದೂರು ಬೈಪಾಸಿನ ಹತ್ತಿರವಿರುವ ಸಮಾರು ಆರು ಮನೆಗಳಿಗೆ ನೀರು ನುಗ್ಗಿ ಸಂಪೂರ್ಣ ದ್ವೀಪವಾಗಿದೆ. ಮೂರು ಮನೆಯವರು ಮನೆಯನ್ನು ಕೂಡಾ ಬಿಟ್ಟು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಬೈಂದೂರು ರಾ.ಹೆ. ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹೋಗುವ ತೋಡುಗಳು ರೋಡಾಗಿ ಮಾರ್ಪಟ್ಟಿದೆ. ಮಳೆಯ ನೀರು ಮೊದಲಿನ ಹಾಗೆ ಚರಂಡಿಯಲ್ಲಿ ಹರಿದು ಹೋಗುತ್ತಿಲ್ಲ. ಹೆದ್ದಾರಿ ಬದಿಯಲ್ಲಿ ಮಣ್ಣು ಹಾಕಿರುವ ಕಾರಣ ಇದರಿಂದ ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದೆ. ಚರಂಡಿಯಲ್ಲಿ ತುಂಬಿದ ಹೂಳು ಕೂಡಾ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಶಿರೂರು ಗ್ರೀನ್‌ವ್ಯಾಲಿ ಖಾಸಗಿ ಶಾಲಾ ಬಸ್ಸಿಗೆ ಕಾರು ಡಿಕ್ಕಿಯಾದ ಘಟನೆ ಶಿರೂರು ಸಂಕದಗುಂಡಿ ಎಂಬಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಶಾಲೆ ಮುಗಿದ ಬಳಿಗೆ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಕುಂದಾಪುರ ಕಡೆಗೆ ತೆರಳುತ್ತಿದ್ದ ಐಟ್ವೆಂಟಿ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನುಜ್ಜುನುಜ್ಜಾಗಿದೆ. ಬಸ್ಸಿನಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಕಾರಿನಲ್ಲಿಸದ್ದವರು ಅಪಾಯದಿಂದ ಪಾರಾಗಿದ್ದಾರೆ. ವಿದ್ಯಾರ್ಥಿಗಳನ್ನು ಬದಲಿ ಶಾಲಾ ವಾಹನದಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ ತ್ರಾಸಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಎಂಟು ಮಂದಿ ವಿದ್ಯಾರ್ಥಿಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಹಸಿಯಾಗಿರುವಾಗಲೇ ತಾಲೂಕಿನಲ್ಲಿ ಮತ್ತೊಂದು ಅಫಘಾತ ನಡೆದಿರುವುದು ಪೊಷಕರ ನಿದ್ದೆಗೆಡಿಸಿದೆ./ ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಸಂಘವು ವಾರ್ಷಿಕ ಬಂದ ಲಾಭಾಂಶದಲ್ಲಿ ರೂ. 7-8ಲಕ್ಷ ಹಣವನ್ನು ಪ್ರತಿ ಮಗುವು ಶಿಕ್ಷಣ ವಂಚಿತವಾಗದೆ ಪ್ರತಿಭಾವಂತರಾಗಬೇಕು ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಸಂಬಂಧಪಟ್ಟ ಚಟುವಟಿಕೆಗಾಗಿ ವ್ಯಯಿಸುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಉಪ್ಪುಂದದ ಶಂಕರ ಕಲಾ ಮಂದಿರದ ಸಮೃದ್ಧ್ ಸಭಾಭವನದಲ್ಲಿ ನಡೆದ ಸಂಘದ ವತಿಯಿಂದ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ 38 ಸರಕಾರಿ ಹಿರಿಯ, ಪ್ರಾಥಮಿಕ ಶಾಲೆಗಳ 8ನೇ ತರಗತಿಯವರೆಗಿನ 3271 ವಿದ್ಯಾರ್ಥಿಗಳಿಗೆ ಸುಮಾರು 4ಲಕ್ಷ ರೂ. ಮೌಲ್ಯದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು ಸಮಾಜದ ಬದ್ದತೆಗೆ ಅನುಕೂಲ ನೀಡಬೇಕಾದ ನೆಲೆಯಲ್ಲಿ ಹಾಗೂ ಸಮಾಜವನ್ನು ಮುನ್ನಡೆಸುವ ಹೊಣೆ ಅರಿತು ಸರಕಾರ ಒಂದರಿಂದ ಏಳನೇ ತರಗತಿಯವರೆಗೆ ಅತೀ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಚಿಂತನೆ ಮಾಡಬೇಕು. ಮುಂದಿನ ೧೦ ವರ್ಷದ ದೂರದೃಷ್ಠಿತ್ವದಿಂದ ಯೋಚಿಸಿದಾಗ ಸರಕಾರಿ ಶಾಲೆಗಳಿಗೆ ಮಕ್ಕಳೆ ಸಿಗದ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಗ್ರಾಮೀಣ ಭಾಗದ ಸಂಪರ್ಕಕ್ಕೆ ರೂಟ್ ಮ್ಯಾಪ್ ಆಗಿದ್ದರೂ ಬಸ್ಸು ಓಡುತ್ತಿಲ್ಲ, ಶಾಲೆಗಳು ಶಿಥಿಲಗೊಂಡಿದ್ದರೂ ದುರಸ್ಥಿ ನಡೆಯುತ್ತಿಲ್ಲ. ನಾವುಂದದಲ್ಲಿ ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಫೇಲ್ ಆಗಿದ್ದರೂ ಕ್ರಮ ಕೈಗೊಂಡಿಲ್ಲ. ಶಂಕರನಾರಾಯಣದ ಬಸ್ ನಿಲ್ದಾಣವನ್ನು ತಾಪಂ ಅನುಮತಿ ಪಡೆಯದೇ ಏಕಾಏಕಿ ಕೆಡವಿದ್ದು ಸರಿಯಲ್ಲ. ಪಡಿತರ ಸಮಸ್ಯೆ ನಿವಾರಣೆಯಾಗಿಲ್ಲ. 94-ಸಿ ಗೊಂದಲ ಮುಗಿದಿಲ್ಲ. ಇದು ಮಂಗಳವಾರ ಕುಂದಾಪುರ ತಾಪಂ ಸಭಾಂಗಣದಲ್ಲಿ ಜರುಗಿದ ಪ್ರಥಮ ತಾಪಂ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರ ಹೈಲೈಟ್ಸ್. ಉತ್ತರ ಕೊಡದ ಮೇಲೆ ಸಭೆಗೆ ಬಂದೇನು ಪ್ರಯೋಜನ? ನಡುವಳಿಯಲ್ಲಿ ಕೇಳವಾಗುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಅಧಿಕಾರಿಗಳು ಬರೋದಿಲ್ಲ. ಅವರ ಪರವಾಗಿ ಬರುವವರಿಗೆ ಸಮಸ್ಯೆ ಅರಿವೇ ಇರೋದಿಲ್ಲ. ಪೂರ್ವ ತಯಾರಿಯಿಲ್ಲದೆ, ಕಾಟಾಚಾರಕ್ಕೆ ಸಭೆಗೆ ಹಾಜರಾಗುವುದಾದರೇ ಅದರ ಅವಶ್ಯಕತೆ ಏನುದೆ ಎನಿದೆ ಎಂದು ಶಂಕರನಾರಾಯಣ ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು. ಕುಂದಾಪ್ರ ಡಾಟ್ ಕಾಂ ವರದಿ. ಬಸ್ಸು ಬಿಡದಿದ್ದರೇ ಪ್ರತಿಭಟಿಸುವ…
ಕೈ-ಕೈ ಜೋಡಿಸಿದ ಶಾಸಕ ಗೋಪಾಲ ಪೂಜಾರಿ ಸಚಿವ ಪ್ರಮೋದ್ ಮಧ್ವರಾಜ್ ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ರಾಜ್ಯ ಕಾಂಗ್ರೆಸ್ ಸರಕಾರ ಸಚಿವ ಸಂಪುಟ ಪುನರ್ ರಚನೆಯ ವೇಳೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡದಿರುವುದಕ್ಕೆ ಅಸಮಾಧಾನಗೊಂಡಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಅವರ ಕೊನೆಗೂ ಭಿನ್ನರ ರೇಸ್‌ನಿಂದ ಹಿಂದೆ ಸರಿದಿದ್ದು, ಅವರ ನಿವಾಸಕ್ಕೆ ತೆರಳಿದ್ದ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಪ್ರೀತಿಯಿಂದಲೇ ಆಹ್ವಾನಿಸಿಕೊಂಡು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದ ಮಂತ್ರಿ ಪದವಿ ವಂಚಿತ ಭಿನ್ನರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಗೋಪಾಲ ಪೂಜಾರಿ ಅವರು ತಮ್ಮ ನಿಲುವು ಬದಲಿಸಿದ್ದು ಅಭಿವೃದ್ಧಿಗಾಗಿ ನೂತನ ಸಚಿವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಅಸಮಾಧಾನ ಸತತ ನಾಲ್ಕನೇ ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ಸಹಜ ನಿರೀಕ್ಷೆ ಇದ್ದಿತ್ತು. ಸ್ವತಃ ಅವರೇ ತಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ ಸಂಪುಟ ಪುನರ್ ರಚನೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ಹಿಂದಿನ ಪ್ರಮುಖ ಯಕ್ಷಗಾನ ಭಾಗವತರ ಶೈಲಿಯ ಅನುಕರಣೆ ನಡೆಯುತ್ತಲೇ ಇದೆ. ಆದರೆ ಮರವಂತೆ ನರಸಿಂಹ ದಾಸ ಮತ್ತು ಅವರ ಸಹೋದರ ಶ್ರೀನಿವಾಸ ದಾಸರ ಶೈಲಿಗಳನ್ನು ಯಾರೂ ಅನುಕರಣೆ ಮಾಡಿಲ್ಲ. ಇದಕ್ಕೆ ಕಾರಣ ಅವರ ಶೈಲಿಯ ಅನುಕರಣೆ ಅಸಾಧ್ಯವೆನ್ನುವಷ್ಟು ಭಿನ್ನ. ಪರಂಪರೆಯ ಚೌಕಟ್ಟಿನಲ್ಲೇ ಹೊಸ ಹಾದಿ ತುಳಿದು ಕ್ರಾಂತಿ ಮಾಡಿದವರು ಅವರು ಎಂದು ಖ್ಯಾತ ಯಕ್ಷಗಾನ ವಿಮರ್ಶಕ, ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ವಿ. ಉದಯಕುಮಾರ ಶೆಟ್ಟಿ ಹೇಳಿದರು. ಮರವಂತೆಯ ದಾಸ ಭಾಗವತ ಟ್ರಸ್ಟ್ ಅಲ್ಲಿನ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ದಾಸ ಭಾಗವತರ ಸಂಸ್ಮರಣಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಸಂಸ್ಮರಣ ಭಾಷಣ ಮಾಡಿದರು. ದಾಸ ಸಹೋದರರು ಭಾಗವತ ಶಿರೋಮಣಿಗಳು. ಧ್ವನಿವರ್ಧಕಗಳಿಲ್ಲದ ಕಾಲದಲ್ಲಿ ಅವರು ಇಡೀ ರಾತ್ರಿ ಹಾಡಬಲ್ಲವರಾಗಿದ್ದರು. ಅವರ ಧ್ವನಿ ಸಾಮರ್ಥ್ಯ ಮತ್ತು ಮಾಧುರ್ಯ ಅದ್ವಿತೀಯವೆನಿಸಿತ್ತು. ನರಸಿಂಹ ದಾಸರು ತೆಂಕು ಮತ್ತು ಬಡಗು ತಿಟ್ಟುಗಳೆರಡರಲ್ಲೂ ಮಿಂಚಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ಕುಂದಾಪುರ ಘಟಕದ ವತಿಯಿಂದ ಸಂಘಟನೆಯ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಕುಂದಾಪುರದ ಕೋಯಾಕುಟ್ಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ್ ಕಾಂಚನ್ ಸಂಘಟನೆಯ ಗೀತಾನಂದ ಫೌಂಡೇಶನ್ ಕೋಟ ಇದರ ವತಿಯಿಂದ ಕೊಡಮಾಡಿದ ವಿವಿಧ ಸಸಿಗಳ ವಿತರಿಸಿ ನಂತರ ಮಾತನಾಡಿ, ಪ್ರತೀ ವರ್ಷವೂ ಮೊಗವೀರ ಯುವ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸದಸ್ಯತ್ವ ನೋಂದಣಿ ಪ್ರಕ್ರಿಯೆ ಪ್ರಮುಖವಾಗಿದೆ. ಈ ಬಾರಿಯ ಸದಸ್ಯತ್ವ ನೋಂದಣಿಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕುಂದಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೇ ಡಾ. ಜಿ.ಶಂಕರ್ ಮಾರ್ಗದರ್ಶನದಲ್ಲಿ ಮೊಗವೀರ ಯುವ ಸಂಘಟನೆಯು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದ್ದು, ಸಮುದಾಯದ ಬಹಳಷ್ಟು ಗಣ್ಯ ವ್ಯಕ್ತಿಗಳು ಸಂಘಟೆನೆಗೆ ಬೆಂಬಲ ನೀಡುತ್ತಿರುವುದರಿಂದ ಸಂಘಟನೆ ದೀರ್ಘ ಕಾಲದವರೆಗೆ ತನ್ನ ಕಾರ್ಯಕ್ಷೇತ್ರವನ್ನು ಉಳಿಸಿ ಬೆಳೆಸೆಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಸಂಘಟನೆಯ ಅಧ್ಯಕ್ಷ…
