ಸಂದೀಪ್ ಶೆಟ್ಟಿ ಹೆಗ್ಗದ್ದೆ | ಕುಂದಾಪ್ರ ಡಾಟ್ ಕಾಂ ಅಂಕಣ.ಅಭ್ಯಾಸ ಕಡಿಮೆ ನಂಗೆ ಅನುಭವದ ಅಭಾವಕಣ್ಮುಚ್ಚಿದರೂ ಕಾಣುತ್ತದೆ ಒಮ್ಮೊಮ್ಮೆ ಅವಳದೇ ಹಾವ ಭಾವ… ಗೊತ್ತಿಲ್ಲ!.. ಅವಳು ಮತ್ತೆ ಮತ್ತೆ ನೆನಪಾಗುತ್ತಾಳೆ. ಯಾವ ದೈವಲೀಲೆಯೋ ತಿಳಿದಿಲ್ಲ!!! ಮೊನ್ನೆ ಮೊನ್ನೆ ಮತ್ತೆ ನೆನಪಾದಳು!.. ಸುಮ್ಮನಿದ್ದ ನನ್ನಲ್ಲಿ ಇತ್ತೀಚಿಗೆ ಕಾಡಲು ಶುರುವಿಟ್ಟಿದ್ದೆ ಅವಳ ಅಂದಿನ ವೈಯಾರದ ನೆಪ, ವಿಧವಿಧದಲ್ಲಿ ಮಿಡುಕಿ ನನ್ನ ಮನಸ್ಸನ್ನು ಕದ್ದು ಹೋದವಳು ಅವಳು. ಅಂದು ನಾ ಅವಳಿಗೆ ಬಿದ್ದೋಗಲು ಭವಣೆ ಸಮಾಚಾರ ಬೇಡವಾಗಿತ್ತು ಬದಲಾಗಿ ಅವಳ ಹವ ಭಾವವೊಂದೇ ಸಾಕಾಗಿತ್ತು. ಬಾಳ ಸಂತೆಯ ತುಂಬಾಅವಳದೇ ವೈಖರಿ…ಬಿಟ್ಟು ಹೋದ ಕ್ಷಣದಿಂದಎದೆಯ ರಂಗದಲ್ಲಿ ಮುನ್ನಡೆಯುತ್ತಲೇ ಇದೆ ಮಂಜರಿ… ಅವಳೆಂದರೆ ನನಗೊಂದು ಸಂತೆ, ತುದಿಯನ್ನೇ ಕಾಣದ ಆನಂತ ರೇಖೆ. ಹಲವಾರೂ ಅದ್ಭುತಗಳ ಕಂತೆ. ಅನೇಕಾನೇಕ ಮೂಲ ಪರಿಕರಗಳ ಕುಂಟೆ. ಹೀಗೆಲ್ಲ ಆಗಿರುವ ಅವಳು ನೆನಪೋದರೆ ತಾನೆ ನೆನಪಿಸಿಕೊಳ್ಳಲು!!. ಗೊತ್ತಿಲ್ಲ..,ಕಳ್ಳಿ ಅವಳು!, ನೆನಪಲ್ಲೂ ಬಿಟ್ಟೋಗುತ್ತಾಳೆ!.. ನೆನಪೋಗಿ, ನೆನೆಸಿ ಮತ್ತೆ ಮತ್ತೆ ನೆನಪಾಗುತ್ತಾಳೆ. ಪಯಣದ ಮಧ್ಯೆ ಇದಿರಾಗುವ…
Author: ಕಚಗುಳಿ
ಸಂದೀಪ್ ಶೆಟ್ಟಿ ಹೆಗ್ಗದ್ದೆ | ಕುಂದಾಪ್ರ ಡಾಟ್ ಕಾಂ ಅಂಕಣನಾನೊಬ್ಬ ಸತ್ತೋದರೆ!?… ಹೀಗೊಂದು ಪದ ಕಾqಲು ಶುರುವಿಟ್ಟಿದ್ದ್ದು ಮೊನ್ನೆ ಮೊನ್ನೆಯಿಂದ… ಸರಿಸುಮಾರು ಐದಾರು ವರ್ಷಗಳಿಂದ ನನ್ನದು ಸದಾ ಒಂದಿಲ್ಲೊಂದು ವಿಭಾಗದಲ್ಲಿ ಹೋರಾಟದ ಬದುಕೆಂದರೆ ತಪ್ಪಿಲ್ಲ. ಇಲ್ಲಿ ಪ್ರತಿದಿನದ ಬದುಕನ್ನು ತುಂಬಾ ಪ್ರೀತಿಸುವ, ಹೆಚ್ಚು ಪರಿಪೂರ್ಣವಾಗಿಸಿಕೊಳ್ಳುವ ಹಂಬಲ ನನ್ನದು. ನನ್ನ ಕೆಲಸ ಕಾರ್ಯಗಳಿಗೆ ಹುಂಬತನದಲ್ಲೋ, ಹೊಟ್ಟೆಕಿಚ್ಚಿನಿಂದಲೋ ಅಡ್ಡಗಟ್ಟುವವರ ಸಂಖ್ಯೆ ಹೆಚ್ಚಿದ್ದರೂ, ನನ್ನದು ನಿಲ್ಲದ ಹೋರಾಟ. ಎಂ.ಕಾಂ ಕಲಿಕೆಯಲ್ಲಿ ಉನ್ನತ ದರ್ಜೆ ಪಡೆದಿದ್ದರೂ, ನಾನಾಯ್ಕೆ ಮಾಡಿಕೊಂಡಿದ್ದು ನನ್ನ ನೆಚ್ಚಿನ ಪತ್ರಿಕೋದ್ಯಮವನ್ನೇ. ಇದು ನನ್ನ ಹುಚ್ಚು. ಇದರಿಂದ ಪಡೆದುಕೊಂಡೆನೇ ವಿನಃ, ಏನನ್ನೂ ಕಳೆದುಕೊಂಡಿಲ್ಲ. ಐದಾರು ವರ್ಷದ ಹಿಂದೆ ಬದುಕಿನ ಸಣ್ಣ ಏರುಪೇರಿಂದ ಎಲ್ಲವನ್ನೂ ಕಳೆದುಕೊಂಡಿದ್ದಾಗ!, ವಿಶ್ವಾಸಿಗರೆಂದುಕೊಂಡಿದ್ದ ಎಲ್ಲರಿಂದ ಬಸವಳಿದು ನನ್ನಾತ್ಮ ನಂಬುಗೆ ಕಳೆದುಕೊಂಡಾಗ!, ಕಷ್ಟವೆಂದಿದ್ದಾಗ ಕೈ ಬಿಟ್ಟು ನಡೆದಿದ್ದ ಎಲ್ಲರಿಂದಲೂ ದೂರವಿರೋಣವೆಂದು ದೊಡ್ಡ ನಗರಿಗೆ ಬಂದು ನೆಲೆನಿಂತಾಗ!, ಜೊತೆಯಿದ್ದ ಅಣ್ಣನೊಬ್ಬನನ್ನ ಬಿಟ್ಟರೆ ಹಿಂದೆ-ಮುಂದೆ, ಆಚೆ-ಈಚೆ ಕಂಡು ಬಂದಿದ್ದೆಲ್ಲಾ ವೈರಿಗಳೇ. ಕಣ್ಮುಚ್ಚಿದರೂ, ಕಣ್ತೆರೆದರೂ ಜಡಿಯುವ ಅವರ ಅಟ್ಟಹಾಸದ…
ಕೈ ನಡುಗುತ್ತಿದೆ!.. ಪದಗಳು ಜಾರುತ್ತಿವೆ!.. ಭಾವ ಯಾವುದರದೋ ಬೆನ್ನೇರಿ ಸಾಗಿದಂತಿದೆ!.. ಮಾತುಗಳು ಮೌನತೆ ಪಡೆದಿವೆ!.. ಕಾರಣವಿಷ್ಟೇ ಮನೆಯ ಹಿರಿಯ ಕೊಂಡಿಯೊಂದು ಕಳಚಿದೆ!!. ಮನೆಯವರಾದ ಮಾಮನ ಉಸಿರು ನಿಂತಿದೆ. ಕಳೆದ 85 ವರ್ಷಗಳಿಂದಲೂ ಸದಾ ಒಂದಿಲ್ಲೊಂದು ವಿಚಾರದಲ್ಲಿ ಚಲನೆ ಕಂಡಿದ್ದ ಮನೆತನದ ಹಿರಿಯ ಕೊಂಡಿ ಇಹಲೋಕ ತ್ಯಜಿಸಿ ದೂರ ಸಾಗಿದೆ. ಅಂದು ಮಧ್ಯಾಹ್ನ ಮನೆಯಿಂದ ಫೋನ್ ಬಂದು ವಿಷಯ ತಿಳಿದಾಗ, ಸರಿಸುಮಾರು ಜೀವಮಾನದ 25ವರ್ಷಗಳ ಇಂದಿನ ಬದುಕಿನವರೆಗೆ ಸಂಬಂಧಿಗಳ ಪೈಕಿ ತೀರಾ ಹತ್ತಿರವಾದವರನ್ನು ಮೊದಲ ಬಾರಿಗೆ ಶಾಶ್ವತ ಉಪಸ್ಥಿತಿಯಿಂದ ಕಳೆದುಕೊಂಡ ಶಾಕ್ ನನಗೆ!.. ಹಿಂದಿನ ಬದುಕಲ್ಲಿ ಸ್ನೇಹಿತನ ಮನೆಯಲ್ಲೋ, ಪಕ್ಕದ ಮನೆಯಲ್ಲೋ ಅಥವಾ ಹಳ್ಳಿಯ ಇನ್ಯಾರದ್ದೋ ಮನೆಗಳಲ್ಲಿ ಈ ಥರದ ಅಗಲಿಕೆಯನ್ನು ಕಂಡಾಗ ಮನಸ್ಸಿಗೆ ನೋವಾಗುತ್ತಿದ್ದರೂ, ತದ ನಂತರ ಅದರ ಕಾಡುವಿಕೆ ವಿರಳವಾಗಿರುತಿತ್ತು. ಆದರೆ ನನ್ನವರೇ ಆದ ಮಾಮನ ಸಾವು ಅವೆಲ್ಲದರ ಔಚಿತ್ಯದಂತಾಗಲಿಲ್ಲ. ಮಾಮ ನನ್ನ ಬೆಳವಣಿಗೆಯ ಜೊತೆಯಲ್ಲಿ ಒಬ್ಬರಾಗಿ ಇದ್ದ ವ್ಯಕ್ತಿಯಾದ್ದರಿಂದ, ಮನೆಯಿಂದ ಮಸಣತಲುಪಿ, ವಿಧಿವಿಧಾನ ಜರುಗಿ ಇಷ್ಟು ದಿನವಾದರೂ ಕಾಡುತ್ತಿದ್ದಾರೆ.…
ಸಂದೀಪ್ ಶೆಟ್ಟಿ ಹೆಗ್ಗದ್ದೆ | ಕುಂದಾಪ್ರ ಡಾಟ್ ಕಾಂ ಅಂಕಣಅವಳು ಮಾತೆ. ಪ್ರಾಯ 80 ಆಗಿರಬಹುದು. ಬೆನ್ನು ಬಾಗಿದೆ. ನೇರವಾಗಿ ನಿಲ್ಲುವುದು ಬಿಡಿ, ನೆಟ್ಟಗೆ ಕಾಲು ಚಾಚಿ ಮಲಗಲು ಕಷ್ಟಪಡುವ ಸ್ಥಿತಿಯಲ್ಲಿದ್ದಾಳೆ. ಜೀವ ಇದ್ದು ಸಾಯಿಸುತ್ತಿರುವ ಉಬ್ಬಸ, ವಿಪರೀತ ಕೆಮ್ಮು ಖಾಯಂ ಆಗಿ ಸತಾಯಿಸಿ ಪ್ರತಿ ದಿನವೂ ನಿದ್ದೆಗೆಡಿಸುತ್ತಿದೆ. ಆಗಾಗ ಹಳೆ ನೆನಪುಗಳಿಗೆ ಹೋಗಿ ಹೋಗಿ ಬರುತ್ತಿದ್ದ ಅವಳ ಕಣ್ಣಂಚಿನಲ್ಲಿ ಕಣ್ಣೀರು ಸುಮಾರು ವರ್ಷಗಳಿಂದ ಮಾಮೂಲಾಗಿ ಜಿನುಗುತ್ತಿದೆ. ಒಂದು ಕಾಲದಲ್ಲಿ ತನ್ನದೇ ಸ್ವಂತ ಮನೆ, ಮಗ, ಗಂಡ ಆಸ್ತಿ ಎಲ್ಲವನ್ನು ಹೊಂದಿದ್ದ ಅವಳ ಜೀವನ ಇಂದು ಸಾಗುತ್ತಿರುವುದು ವೃದ್ಧಾಶ್ರಮದಲ್ಲಿ. ಅಂದು ಅದೆಷ್ಟೋ ಜನರಿಗೆ ಊಟ ನೀಡಿದ್ದ ಕೈಗಳು ಇಂದು ಅನ್ನ ಪಡೆಯಲು ಹವಣಿಸುತ್ತಿದೆ. ಜೀವಕ್ಕೆ ಜೀವವಾಗಿದ್ದ ಗಂಡ ಆ ದಿನ ಹೃದಯಾಘಾತದಿಂದ ತೀರಿಕೊಂಡ ಬಳಿಕ ಎಲ್ಲಾ ನೋವನ್ನು ಬಿಗಿಹಿಡಿದುಕೊಂಡು ಇದ್ದ ಒಬ್ಬ ಮಗನಿಗೆ ಅಲ್ಲೋ ಇಲ್ಲೋ ಸಾಲ ಮಾಡಿ ಮದುವೆ ಮಾಡಿಸಿ, ಬಡ ಕುಟುಂಬದ ಹುಡುಗಿಯನ್ನೇ ಆರಿಸಿಕೊಂಡು ಮನೆ ಬೆಳಗಿಸಿಕೊಂಡಿದ್ದಳು. ಒಂದಷ್ಟು ದಿನ…
ಸಂದೀಪ ಶೆಟ್ಟಿ ಹೆಗ್ಗದ್ದೆನನ್ನದು ಸಿಂಪಲ್ ಲೈಫ್. ಚಿಕ್ಕಂದಿನಿಂದಲೂ ಯೋಚನೆಗಳನ್ನು ಸ್ವಲ್ಪ ಡಿಫರೆಂಟ್ ಆಗಿ ರಿಯಬಿಡುವುದು ನನ್ನ ಗುಣಧರ್ಮಗಳಲ್ಲೊಂದು. ಅವನೇನೋ ಮಾಡುತ್ತಾನೆ, ಅವರೇನೋ ಹೇಳುತ್ತಾರೆ ಎಂದು ಕೊರಗಿ ಕೂತು ಮೂಲೆ ಮನೆಯೇ ಗತಿ ಎಂದು ಅಳುಕುವ ಜಾಯಮಾನ ನಂದಲ್ಲ. ಯಾಕೆಂದರೆ ಮೂಲೆ ಮನೆಯನ್ನೇ ಪಡಸಾಲೇಯನ್ನಾಗಿ ಮನದಾಸ್ತಾನದಲ್ಲಿ ಪರರಾಜ್ಯದ ಮನಸ್ಸನ್ನು ಒಳಬಿಟ್ಟು ಆಳ್ವಿಕೆ ಮಾಡಿಸಿಕೊಳ್ಳುವಷ್ಟು ದುರ್ಬಲ ಮನಚಿತ್ತ ನನ್ನಲಿಲ್ಲ. ಒಮ್ಮೊಮ್ಮೆ ಅರಚುತ್ತೇನೆ, ಒಮ್ಮೊಮ್ಮೆ ಕಿರುಚುತ್ತೇನೆ.., ಆದರೆ ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ, ಗೊತ್ತುಪಡಿಸುವುದು ಇಲ್ಲ… ಬಿಕಾಸ್ ಅವೆಲ್ಲವೂ ನನ್ನೊಳಗೆ ಆಗುವ ನನ್ನತನ. ನನ್ನಲ್ಲಿ ಏನಿದ್ದರೂ ನಂದೇ ರಾಜ್ಯಭಾರ. ಹಾಗಂತ ಯಾರಿಗೂ ತೊಂದರೆ ಮಾಡುವ, ನೀಡುವ ಜಾಯಮಾನ ನನ್ನಲಿಲ್ಲ. ಹೊಸ ಬಟ್ಟೆ ಇದ್ದರೂ, ಹಳೆ ಬಟ್ಟೆಯನ್ನು ತೊಟ್ಟರೇನು? ಮಲಗಲು ಹಾಸಿಗೆ ಇದ್ದರೂ, ಚಾಪೆ ಮೇಲೆ ಮಲಗಿದರೇನು? ಎಂದು ಆಗಾಗ ಪ್ರತಿಭಟಿಸುವುದು ನನ್ನ ಸುಪ್ತ ಮನದ ಸಹಜ ಭಾವ. …ಓ ಗಾಡ್ ಇಷ್ಟು ಸಿಂಪಲ್ ಜೀವನ ನನ್ನೊಳಗೆ ಇದ್ದರೂ, ಬಾಹ್ಯ ಜೀವನ ಅಂದುಕೊಂಡಂತೆ ಒಗ್ಗುತ್ತಿಲ್ಲ. ಜೀವನದ ಹಿಂದಿನ ದಿನಗಳನ್ನು…
ಸಂದೀಪ್ ಶೆಟ್ಟಿ ಹೆಗ್ಗದ್ದೆ. ಮುಂಜಾನೆ ಸೂರ‍್ಯಕಿರಣ ನೆತ್ತಿಯಿಂದ ಎದ್ದು ತನ್ನ ಪ್ರಖರತೆಯ ಮೃದು ಬಿಸಿಯನ್ನು ಭೂಮಿಗೆ ತಾಗುವ ಮುನ್ನವೇ ಮುಂಗಾಲನ್ನು ಊರಿ, ಹಿಂಗಾಲನ್ನು ಮಡಚಿ, ಸಣ್ಣ ಕಿರು ನಗೆಯೊಂದಿಗೆ ನನ್ನ ಏಳುವಿಕೆಯನ್ನು ಕಾಯುತ್ತಾ ಕುಳಿತಿರುತ್ತಿದ್ದ ಆ ಜಾಗದಲ್ಲಿ ಇವತ್ತಿನ ನಿನ್ನ ಇಲ್ಲದಿರುವಿಕೆಯನ್ನು ನೆನೆದರೆ ವೇದನೆಯ ಜೊತೆಗೆ ಮನ ಪಟಲದಲ್ಲಿ ಎಕಾಂಗಿ ಭಾವ ಮೂಡಿ ಕಣ್ಣಿನ ಅಂಚಲ್ಲಿ ಕಂಬನಿ ಜಿನುಗುತ್ತೆ. ಅದ್ಯಾಕೋ ಗೊತ್ತಿಲ್ಲ…!, ನೀನಂದ್ರೇ ನಂಗೆ ತುಂಬಾ ಇಷ್ಟ ಕಣೋ, ನಾನು ನಿನ್ನ ತುಂಬಾ ಹಚ್ಚಿಕೊಂಡಿದ್ದೆ. ನಿನಗೂ ಕೂಡ ನಾನಂದ್ರೆ ಪಂಚಪ್ರಾಣ ಅಂತ ಗೊತ್ತು. ರಜೆಯಲ್ಲಿ ಅಜ್ಜ- ಅಜ್ಜಿಯ ಊರು ಅಂತ ಮನೆಬಿಟ್ಟು ಅಲ್ಲಿ- ಇಲ್ಲಿ ಸ್ವಲ್ಪ ದಿನ ಇದ್ದರೂ ನೀನು ಮಾತ್ರಾ ಪ್ರತಿದಿನ ನನ್ನ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ನನ್ನ ಬರುವಿಕೆಯಂತೂ ನಿನಗೆಷ್ಟು ಖುಷಿ ಕೊಡುತ್ತಿತ್ತೆಂದರೆ ಅದರ ಅಂದವನ್ನು ನೀನು ಕೂಗಿ ವರ್ಣಿಸುತ್ತಿದ್ದ ಸೋಜಿಗವೇ ಬೇರೆ ಎನಿಸುತ್ತೆ. ಪ್ರತಿ ದಿನ ನನ್ನ ಶಾಲೆಗೆ ಬಿಟ್ಟು, ಸಂಜೆ ನಾ ಮನೆಗೆ ಬರುವ ಸಮಯವನ್ನು…
ಸಂದೀಪ ಶೆಟ್ಟಿ ಹೆಗ್ಗದ್ದೆ. ಊರು ಉಡಿಯೊಳಿಟ್ಟುಕೊಂಡುನಿಂತ ತೆಂಗು ಅಡಿಕೆಯು ಬೆಟ್ಟಗಳಿಗೆ ಹಗಲಿರುಳು ನೀಲ ನೀಲ ನಿದ್ದೆಯು ಊರ ಸುತ್ತ ತೆನೆಗಳಿಂದ ತೊನೆವ ಹಸಿರು ಗದ್ದೆಯು ಮುಗಿಲು ಹರಿದ ಹಾಗೆ ಸುರಿದು ಬಿದ್ದ ನೀರ ಮಳೆಯು ಸಾಲು ಮರದ ನೆರಳಿನಲ್ಲಿ ಹಾವಿನಂಥಾ ಹಾದಿಯು ಇದೇನೂ ಕವಿತೆಯಾ!? ಆಥವಾ ಕಥೆಯಾ!? ಎಂದು ಕೇಳಬೇಡಿ! ಯಾಕೆಂದರೆ ಮೊನ್ನೆ ಮೊನ್ನೆ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತು ಅನುಭವಿಸಿದ ಪುಳಕವನ್ನು ಕವಿತೆಯ ಮೂಲಕ ಹೇಳಲಾ? ಅಥವಾ ಕತೆಯ ಮೂಲಕ ಹೇಳಲಾ? ಎಂದು ತಿಳಿಯಲಾಗದೆ ಧ್ವಂಧ್ವದಲ್ಲೇ ಭಾವನೆಗಳನ್ನು ಬಚ್ಚಿಟ್ಟು ಕುಳಿತುಕೊಂಡಿರುವೆ. ಮೇಲಿನ ಸಾಲುಗಳನ್ನು ಓದಿ ಕಣ್ಮುಚ್ಚಿ ಮನನ ಮಾಡಿದರೆ ನಿಮಗೂ ನಿಮ್ಮ ಬಾಲ್ಯ, ಆಟ, ಪಾಠ, ಹಳೆಯ ನೆನಪುಗಳು ಮತ್ತೆ ಮನದಲ್ಲಿ ಮೂಡಬಹುದು. ಒಂದೈದು ದಿನಗಳ ರಜೆ ಪಡೆದು ಊರಿಗೆ ಬಸ್ ಹತ್ತಿದ ನನಗೆ ರಾತ್ರಿಯ ತಂಪಾದ ಗಾಳಿಯಲ್ಲಿ ಒಳ್ಳೆಯ ನಿದ್ದೆಬಂದಿತ್ತು. ಬಸ್ ಶಿರಾಡಿಘಾಟ್ ದಾಟಿ ಮುಂದೆ ಸಾಗಿ ಮಂಗಳೂರನ್ನು ಬಳಸಿ ನಮ್ಮೂರ ಕಡೆ ಸಾಗುವ ಬರದಲ್ಲಿ ಕಿಟಕಿಯಿಂದ ನುಗ್ಗಿದ…
ಅದೊಂದು ಶುದ್ಧ ’ಬ್ಯಾಡ್ ಡ್ರೀಮ್’… ಕನಸುಗಳೇ ಹಾಗೆ ಎಲ್ಲಿ ಕಾಡುತ್ತವೋ, ಎಲ್ಲಿ ತೂರುತ್ತವೋ, ಎಲ್ಲಿ ಸತ್ಯಾಸತ್ಯದಿಂದ ಕೂಡಿರುತ್ತವೋ, ಮನಸಿನ ಕಣ್ಣುಗಳಿಗೆ ಯಾವ ರೀತಿಯ ’ಫಿಲ್ಮ್’ಗಳನ್ನು ತೋರಿಸುತ್ತವೆಯೋ, ಹೇಳಲಾಗದು, ಮರೆತರಂತೂ ವರ್ಣಿಸಲೂ ಆಗದು… ಒಬ್ಬ ವ್ಯಕ್ತಿ ನಿದ್ರೆಯಲ್ಲಿ ಅನುಭವಿಸುವ ಕಥೆ ಪೂರ್ತಿ ಕಾಲ್ಪನೆಗಳಿಂದ ಕೂಡಿದ್ದರೂ ನಿಜ ಜೀವನಕ್ಕೆ ಸಂಬಂಧಿಸಿರುವ ಸಂಬಂಧಿಕನಂತೆಯೂ ಕೆಲವೊಮ್ಮೆ ನಾಟ್ಯವಾಡುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ ಇನ್ನೂ ಕೆಲವು ಕಹಿ ಅನುಭವ ಕೊಡುತ್ತವೆ. ಆ ದಿನ ರಾತ್ರಿ ನನ್ನು ಮನದಾಳದಲ್ಲಿ ಕೆಟ್ಟ ಕಸಸೊಂದು ತೆರೆಯಂತೆ ಅಪ್ಪಳಿಸಿತ್ತು. ಕನಸಿನ ವಿಷಯಗಳನ್ನು ಚೆನ್ನಾಗಿ ಜಗತ್ತಿಗೆ ತೋರಿಸಿಕೊಟ್ಟ ಮಹಾ ಮನೋವಿಜ್ಞಾನಿಗಳಾದ ಫ್ರಾಯ್ಡ್ ಮತ್ತು ಯುಂಗ್ ಪ್ರಾಯ್ಡ್‌ರು ಹೇಳುವಂತೆ, ಕನಸುಗಳು ಸುಪ್ತ ಮನಸ್ಸಿನಲ್ಲಿ ಹುದುಗಿರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇರುವ ಮಾರ್ಗವಂತೆ. ಇವರ ಪ್ರಕಾರ ನಮಗೆ ಇಷ್ಟವಾಗದ ಎಷ್ಟೋ ಭಾವನೆಗಳನ್ನು(ಕೋಪ, ನೋವು) ನಾವು ಸುಪ್ತ ಮನಸ್ಸಿನೊಳಗೆ ತಳ್ಳಿ ಬಿಡುತ್ತೆವಂತೆ. ನಿದ್ರಿಸುವಾಗ ಆ ಸುಪ್ತಮನಸ್ಸಿನ ಒಳಗಿರುವ ವಿಷಯಗಳೇ ಮೇಲೇರಿ ಬರುತ್ತವಂತೆ. ಅಂತಹ ಸುಪ್ತಮನಸ್ಸಿನಿಂದ ಎದ್ದು ಬಂದ ’ಫಿಲ್ಮೇ’…
ಸಂದೀಪ್ ಶೆಟ್ಟಿ ಹೆಗ್ಗದ್ದೆ ಮೊನ್ನೆಯಷ್ಟೆ ನಾಲ್ಕೈದು ದಿನಗಳ ರಜೆ ಪಡೆದು ಊರಿನ ಕಡೆ ಪ್ರಯಾಣ ಬೆಳೆಸಿದ್ದೆ. ಊರು ಬಿಟ್ಟು ಬಂದು ಬರೋಬ್ಬರಿ ಮೂರು ವರ್ಷದ ನಂತರ ನನ್ನ ಈ ಪ್ರಯಾಣ ನನ್ನೂರಿಗೆ. ಸ್ವಲ್ಪ ಅದ್ಭುತ, ಸ್ವಲ್ಪ ಕುತೂಹಲದ ನಡುವೆ ಹೋಗುವಾಗಲೇ ಹಳೆಯ ನಮ್ಮ ಹಳ್ಳಿಯ ವೈಖರಿ ನಾವಾಗಾ ಬೆಳೆದಿದ್ದು, ಓದಿದ್ದು, ಎಲ್ಲಾ ನೆನಪು ಮಾಡಿಕೊಂಡೆ. ಅದೇ ಟಾರು, ಅದೇ ರೋಡು, ಅದೇ ಬಿಲ್ಡಿಂಗ್‌ಗಳು, ಅದೇ ಟ್ರಾಫಿಕ್‌ನ ಸಂಧಿಗೊಂದಿ, ಬೇಡದ ನೂಕು ನುಗ್ಗಲು, ಕರುಣೆ ತೋರದ ಜನಗಳು, ಸದಾ ಮಂಡೆಬಿಸಿ ಮಾಡುವ ಓಡಾಟಗಳು… ಇವುಗಳಿಗೆಲ್ಲಾ ಬ್ರೇಕ್ ಹಾಕಿ ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ನೆಮ್ಮದಿಯಲ್ಲಿ ಒಂದಿಷ್ಟು ದಿನವಾದರೂ ಆರಾಮಾಗಿ ಸುಖಿಸಿ ಸರಿಯಾದ ನಿದ್ರೆಯ ಜೊತೆಗೆ ಸ್ವಲ್ಪ ಹಳ್ಳಿಯ ಅಂದವನ್ನು ಸವಿದುಕೊಂಡು ಬರೋಣವೆಂದು ಹೊರಟಿದ್ದೆ. ಈಗೆಲ್ಲಾ ಮನೆಯ ಹತ್ತಿರವೇ ಬಸ್ಸು ಹೋಗುವುದರಿಂದ ಮೊದಲಿನ ರೀತಿ ಮೈನ್ ರೋಡ್‌ನಲ್ಲಿ ಬಸ್ಸಿಳಿದು, ಬಳಿಕ ಕೈಲಿರುವ ಭಾರದ ಬ್ಯಾಗನ್ನು ಹಿಡಿದುಕೊಂಡು ಎತ್ತಿನ ಗಾಡಿಯೋ, ಜೀಪನ್ನೋ ಬಳಸಿಕೊಂಡು, ಅದಾದ ನಂತರ ಇನ್ನರ್ಧ ಕಿಲೋ…
ಅದು ನನ್ನ ಟೀನೇಜ್‌ನ ಸಮಯ. ಆಗ ತಾನೆ ಪಿ.ಯು.ಸಿ.ಮುಗಿಸಿ ಪದವಿಗೆ ಎಂಟ್ರಿಕೊಟ್ಟಿದ್ದೆ. ಪದವಿ ಶಿಕ್ಷಣವೆಂದರೆ ಕೇಳಬೇಕೆ, ಅದೊಂಥರ ಮರೆಯಲಾಗದ ಸವಿದಿನಗಳ ಮಧುರ ಬಾಂಧವ್ಯ ನೀಡುವ ಬೀಡು. ಎಲ್ಲಾ ಹೊಸ-ಹೊಸ ಗೆಳೆಯರ ಗೂಡು ಅದಕ್ಕೆ ಅದರದೇ ಆದಂತ ಗತ್ತು, ಹದಿ ಹರೆಯದ ವಯಸ್ಸಿನ ಹುಡುಗ-ಹುಡುಗಿಯರ ತುಡಿತ-ಮಿಡಿತ, ಓದುವಿಕೆಯ ಒಡನಾಟದ ಜೀವನ, ಲಚ್ಚರ್‌ಗಳ ಪಾಠ, ಟೈಮ್‌ಪಾಸ್ ಆಗದಿರೋ ಕ್ಲಾಸ್‌ಗಳು, ಸುಮ್‌ಸುಮ್ನೆ ರೇಗುವಂತೆ ಮಾಡುವ ಕಾಮೆಂಟ್‌ಗಳು, ಬೇಡ ಬೇಡವೆಂದರೂ ಬರುವ ಪರೀಕ್ಷೆಗಳು, ಟೆನ್ಷನ್ ಹಾಲಿಡೇಗಳು, ಕ್ಲಾಸಿಗೆ ಬಂಕ್ ಹಾಕಿ ಚಕ್ಕರ್ ಹೊಡಿಯೋ ಪೋಲಿಗಳು, ಇವುಗಳ ಮಧ್ಯೆಅವರರವರ ಪ್ರೀತಿ-ಪ್ರೇಮಗಳು ಇತ್ಯಾದಿಗಳ ಸಂಗಮವದು… ಇನ್ನೂ ಪದವಿಗೆ ಮೊದಲ ದಿನ ಹೋದಾಗಲಂತೂ ಅದೊಂಥರ ಹೊಸ ಕಥೆ.. ಸೀನಿಯರ್‌ಗಳು ರ‍್ಯಾಗಿಂಗ್ ಮಾಡುತ್ತಾರೋ ಏನೋ ಅನ್ನೋ ಭಯ, ಮೊದಲ ಬಾರಿ ದೊಡ್ಡ ಕಾಲೇಜಿಗೆ ಹೋಗುತ್ತಿದ್ದೆ ಏನಾಗುತ್ತದೋ.. ಹೇಗಿರುತ್ತೋ ಅನ್ನೋ ನಡುಕ, ಹೊಸ ಹೊಸ ಡ್ರಸ್‌ತೊಟ್ಟು ಬರುವ ಹೊಸ ಹೊಸ ಹುಡುಗಿಯರ ಲಕ-ಲಕ ಹೊಳಪು. ಅವರಲ್ಲಿ ಯಾರೊಬ್ಬಳ್ಳಿಗಾದರು ಲೈನ್ ಹಾಕಿ ನಾನೋಬ್ಬ ಭಯಂಕರ ಹುಡುಗ…
