ಅಂದೊಂದಿತ್ತು ಕಾಲ…

Click Here

Call us

Call us

Call us

ಸಂದೀಪ ಶೆಟ್ಟಿ ಹೆಗ್ಗದ್ದೆ
ನನ್ನದು ಸಿಂಪಲ್ ಲೈಫ್. ಚಿಕ್ಕಂದಿನಿಂದಲೂ ಯೋಚನೆಗಳನ್ನು ಸ್ವಲ್ಪ ಡಿಫರೆಂಟ್ ಆಗಿ ರಿಯಬಿಡುವುದು ನನ್ನ ಗುಣಧರ್ಮಗಳಲ್ಲೊಂದು. ಅವನೇನೋ ಮಾಡುತ್ತಾನೆ, ಅವರೇನೋ ಹೇಳುತ್ತಾರೆ ಎಂದು ಕೊರಗಿ ಕೂತು ಮೂಲೆ ಮನೆಯೇ ಗತಿ ಎಂದು ಅಳುಕುವ ಜಾಯಮಾನ ನಂದಲ್ಲ. ಯಾಕೆಂದರೆ ಮೂಲೆ ಮನೆಯನ್ನೇ ಪಡಸಾಲೇಯನ್ನಾಗಿ ಮನದಾಸ್ತಾನದಲ್ಲಿ ಪರರಾಜ್ಯದ ಮನಸ್ಸನ್ನು ಒಳಬಿಟ್ಟು ಆಳ್ವಿಕೆ ಮಾಡಿಸಿಕೊಳ್ಳುವಷ್ಟು ದುರ್ಬಲ ಮನಚಿತ್ತ ನನ್ನಲಿಲ್ಲ. ಒಮ್ಮೊಮ್ಮೆ ಅರಚುತ್ತೇನೆ, ಒಮ್ಮೊಮ್ಮೆ ಕಿರುಚುತ್ತೇನೆ.., ಆದರೆ ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ, ಗೊತ್ತುಪಡಿಸುವುದು ಇಲ್ಲ… ಬಿಕಾಸ್ ಅವೆಲ್ಲವೂ ನನ್ನೊಳಗೆ ಆಗುವ ನನ್ನತನ. ನನ್ನಲ್ಲಿ ಏನಿದ್ದರೂ ನಂದೇ ರಾಜ್ಯಭಾರ. ಹಾಗಂತ ಯಾರಿಗೂ ತೊಂದರೆ ಮಾಡುವ, ನೀಡುವ ಜಾಯಮಾನ ನನ್ನಲಿಲ್ಲ. ಹೊಸ ಬಟ್ಟೆ ಇದ್ದರೂ, ಹಳೆ ಬಟ್ಟೆಯನ್ನು ತೊಟ್ಟರೇನು? ಮಲಗಲು ಹಾಸಿಗೆ ಇದ್ದರೂ, ಚಾಪೆ ಮೇಲೆ ಮಲಗಿದರೇನು? ಎಂದು ಆಗಾಗ ಪ್ರತಿಭಟಿಸುವುದು ನನ್ನ ಸುಪ್ತ ಮನದ ಸಹಜ ಭಾವ.

Call us

Click Here

…ಓ ಗಾಡ್ ಇಷ್ಟು ಸಿಂಪಲ್ ಜೀವನ ನನ್ನೊಳಗೆ ಇದ್ದರೂ, ಬಾಹ್ಯ ಜೀವನ ಅಂದುಕೊಂಡಂತೆ ಒಗ್ಗುತ್ತಿಲ್ಲ. ಜೀವನದ ಹಿಂದಿನ ದಿನಗಳನ್ನು ಮತ್ತೆ ಮೆಲುಕು ಹಾಕಿದರೆ ಕೈಗೆ ಸಿಗುವುದು ಖಚಿತವಿಲ್ಲ… ಸಿಗುವುದು ತುಂಬಾನೆ ಕಷ್ಟವಿದೆ ಬಿಡಿ…ಪ್ರಪಂಚ ಬದಲಾಗಿದೆ ಹಾಗೆ ನಾವು ಬದಲಾಗಿದ್ದೇವೆ. ದಿನೆ ದಿನೇ ತ್ವರಿತಗತಿಯ ಪ್ರಗತಿ ಕಾಣುತ್ತಿದ್ದೇವೆ, ಅದಕ್ಕೆ ತಕ್ಕಂತೆ ಚಲನೆ ಪಡೆಯುತ್ತಿದ್ದೇವೆ. ಅಂದುಕೊಂಡ ಕನಸುಗಳನ್ನು ಬೆನ್ನೆತ್ತಿ ಸಾಗುತ್ತಿರುವ ನಾವುಗಳು, ಭೂತಕಾಲದಲ್ಲಿ ಅನುಭವಿಸುವ ಅನೇಕ ದಿನಮಾನಸವನ್ನು ಹಿಂತಿರುಗಿ ನೋಡಿದರೆ ಅಚ್ಚರಿಯ ಪ್ರತಿಬಿಂಬ ಕನ್ನಡಿಗೆ ಬೆಳಕಿನಂತೆ ಬಡಿದು ಕಣ್ಣಿನ ಮನಸ್ಸಿನೊಳಗೆ ಸೀದಾ ಪ್ರತಿಫಲಿಸಿ ಛೇ ಎಂಥಾ ಕಾಲವದು!! ಮತ್ತೆ ಬರುದಿಲ್ಲವಲ್ಲಾ!? ಎನ್ನುವ ಅಳುಕುಂಟು ಮಾಡುತ್ತದೆ. ಏನೂ ಇಲ್ಲದ ಆ ದಿನಗಳನ್ನು ಬಳುವಳಿಯಾಗಿ ನಮ್ಮ ಮುಂದಿನ ತಲೆಮಾರಿಗೆ ಕೊಡುವುದು ಹಾಗಿರಲಿ, ತೋರಿಸಲು ಕಷ್ಟವೇನೋ ಎನ್ನುವ ನತದೃಷ್ಟ ಸ್ಥಿತಿಗೆ ಸಾಗುತ್ತಿರುವ ನಮ್ಮ ಇಂದಿನ ಪಾಡು ’ಬ್ಯುಸಿ’ ಎನ್ನುವ ಷೆಡ್ಯೂಲ್‌ನಲ್ಲೇ ದಿನವಿಡಿ ಸಾಗುತ್ತಿದೆ. ಅಂದಿನ ಪ್ರತಿಷ್ಠೆಯ ಕ್ಷಣಗಳು ಇಂದು ಹೊಸ ಪ್ರತಿಷ್ಠಾನದೊಂದಿಗೆ ನಗುಬೀರುತ್ತಿವೆ. ಅವೆಲ್ಲವೂ ಯಾವ ಬಣ್ಣದೋಕುಳಿಯಿಂದ ಮಾಯವಾದವೋ ಎಂದು ಚಿಂತಿಸಿದರೆ ಕಾರಣ ಒಂದಾ…? ಎರಡಾ…? ಎನ್ನುವಷ್ಟು ದೊಡ್ಡ ಲಿಸ್ಟೇ ರೆಡಿಯಾಗಿ ನಿಲ್ಲುತ್ತದೆ. ಇಂದು ಎಲ್ಲದಕ್ಕೂ ಆಧುನಿಕರಣ ಒಂದೇ ಉತ್ತರ ಸಮರ್ಪಕ ಎನಿಸಿದರೂ, ಅದರ ವಿವಿಧ ಬಾಹುಗಳು ಇನ್ನೂ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದೂ, ಮುಂದೆನಾಗುತ್ತದೋ!??? ಎನ್ನುವ ವಿಸ್ಮಯದಲ್ಲೇ ಬೆರಗುಗೊಳ್ಳುವಂತೆ ಮಾಡುತ್ತಿದೆ.

ನಾವಂದು ಕಾಲೇಜು ದಿನಗಳಲ್ಲಿ ಕಾಲೇಜ್ ಬ್ಯಾಗ್ ಹೆಗಲಿಗೆ ಜೋತಾಕಿಕೊಂಡು ನಮ್ಮದೇ ಒಂದೊಂದು ಗುಂಪ್ ಮಾಡಿಕೊಂಡು, ಇವತ್ತು ಹಾಗಾಯು!, ನಿನ್ನೆ ಹೀಗಾಯ್ತು!, ಅವನೂ ಅವಳಿಗೆ.., ಅವಳು ನನಗೆ.., ಲೆಕ್ಚರ್ ಯಾಕೆ ಹಾಗ್ ಆಡ್ತಾರೆ?, ಮಿಸ್ ಯಾಕೆ ಹೀಗೆ?, ಅದು ನಿನ್ಗೋತ್ತಾ? ಇದ್ ಏನ್ ತಿಳಿತಾ? ಹಾಗೆ ಹೀಗೆ ಮಾತನಾಡುತ್ತಾ ಕಾಲೇಜ್ ಕ್ಯಾಂಪಸ್‌ನಲ್ಲಿ ಒಡಾಡಿಕೊಂಡು ಶೈಕ್ಷಣಿಕ ಜೀವನ ಮುಗಿಸಿದ್ದೆವು. ಇನ್ನೂ ಪದವಿ ಶಿಕ್ಷಣದಲ್ಲಿರುವಾಗಂತೂ ಅದೇ ಬೇರೆ ರೀತಿಯ ಮರೆಯಲಾಗದ ಜೀವನ ನೀಡಿತ್ತು. ಪಠ್ಯಕ್ರಮ, ಆಟೋಟ, ಲೈಬ್ರೇರಿಯ ಪುಸ್ತಕದ ಓದಿನಲ್ಲೇ ಸಂತೋಷಗೊಳ್ಳುತ್ತಿದ್ದೆವು. ಇಂದಿನ ಮಕ್ಕಳ ಶಿಕ್ಷಣ ಭೀತಿಯಂತೆ ಅಂದಿರಲಿಲ್ಲ. ಉಳಿದಂತೆ ಮನೆ ಕೆಲಸ, ಹಬ್ಬ ಹರಿದಿನಗಳ ಎಂಜಾಯ್‌ಮೆಂಟ್, ಯಕ್ಷಗಾನ, ಮದುವೆ, ನಾಟಕ, ಇವುಗಳ ವಿನೋಧ ಬಿಟ್ಟರೆ ಬೇರ‍್ಯಾವ ಟೈಮ್ ಪಾಸ್ ವಕ್ರಗಳು ನಮ್ಮ ಜೀವನದಲ್ಲಿ ಬಂದ ಅನುಭವವಿರಲಿಲ್ಲ. ಆಗ ಈಗಿರುವಷ್ಟು ಟೆಕ್ನಾಲಜಿಗಳು ಇರಲಿಲ್ಲ. ಬಹುಶಃ ಅದಾಗಲೇ ಇಂದಿನ ಟೆಕ್ನಾಲಜಿ ಮರಿ ಮೊಳಕೆಯಂತೆ ಚಿಗುರುತಿತ್ತು ಅಷ್ಟೆ. ಅಬ್ಬಾಬ್ಬಾ ಅಂದರೆ ಸ್ಟಾಂಡರ್ಡ್ ಫ್ಯಾಮಿಲಿಯಿಂದ ಬಂದ ಹುಡುಗರಲ್ಲಿ ಒಂದು ಬ್ಲ್ಯಾಕ್ ಆಂಡ್ ವೈಟ್ ನೋಕಿಯ ಮೊಬೈಲ್ ಕಾಣ ಸಿಗುತ್ತಿತ್ತು. ಕಂಪ್ಯೂಟರ್‌ಗಳನ್ನು ಕಂಡಿದ್ದೆ ಕಂಪ್ಯೂಟರ್ ಕ್ಲಾಸ್ ಕಲಿಯಲು ಹೋದಾಗ. ಇನ್ನೂ ಲ್ಯಾಪ್ ಟಾಪ್‌ಗಳೋ ಅದರ ಹೆಸರೇ ಕೇಳಿರಲಿಲ್ಲ. ಎಚ್.ಎಮ್.ಟಿ ವಾಚ್ ಬಿಟ್ಟರೆ ಬೇರೆ ಕಂಪೆನಿ ಕೈ ಗಡಿಯಾರ ಇರುವುದೇ ತಿಳಿದಿರಲಿಲ್ಲ… ಇವುಗಳಲ್ಲಿ ಯಾವುದನ್ನು ಹೊಂದಿದ್ದರೂ ಆತನಿಗೆ ವಿಶಾಲ ಹೆಗ್ಗಳಿಕೆ. ಪದವಿ ನಂತರ ಹಾಗೋ ಹೀಗೋ ಉನ್ನತ ಶಿಕ್ಷಣ ಪೂರ್ಣ ಗೊಳಿಸುವ ಹೊತ್ತಿಗೆ ಚೈನಾ ಕಂಪೆನಿಯ ಅಷ್ಟಿಷ್ಟು ಕಡಿಮೆ ಬೆಲೆಯ ಮೊಬೈಲ್, ವಾಚ್‌ಗಳು, ಕಂಪ್ಯೂಟರ್‌ಗಳು ಇನ್ನೂ ಅನೇಕ ಎಲೆಕ್ಟ್ರಾನಿಕ್ಸ್ ಐಟಮ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ಎಲ್ಲರಿಗೂ ’ಟೆಕ್ನಾಲಜಿಯ ಒಗ್ಗು’ ಎನ್ನುವ ಮೂಲಭೂತ ಹೊಂದುವಿಕೆಯ ಅಡಿಪಾಯಕ್ಕೆ ಬಂದಿತ್ತು ಜನ ಸಮೂಹ.

ಆದರೆ ಇಂದು..!!??
ಊಹಿಸಿ…
ಅಂದಿದ್ದ ಅತಿ ಚಿಕ್ಕ ಮೊಬೈಲ್ ಸ್ಕ್ರೀನ್ ಇಂದು ಸ್ಲೇಟ್ ಗಾತ್ರದಷ್ಟು ದೊಡ್ಡರೂಪ ಪಡೆದಿದೆ, ಆ ಕಾಲದ ವೈಟೆಡ್ ಕಂಪ್ಯೂಟರ್‌ಗಳು ಇಂದು ಭಾರ ಕಳೆದುಕೊಂಡಿವೆ. ಕ್ಯಾಸೆಟ್ ಸಿಡಿಗಳು ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿವೆ. ಅಂದಿನ ಬ್ಲರ್ ಸ್ಕ್ರೀನ್‌ಗಳಲ್ಲಿ ಹೆಚ್.ಡಿ ಕಳೆ ಮೂಡಿದೆ, ಹ್ಯೂಜ್ ಪ್ರೈಸ್‌ಗಳು, ನಾರ್ಮಲ್ ರೇಟ್‌ಗೆ ಇಳಿದಿದೆ, ಇಂತಹವರಿಗೆ ಮಾತ್ರಾ ಎನಿಸಿದ್ದ ವಸ್ತುಗಳು ಎಲ್ಲರಿಗೂ ಮೀಸಲು ಎನ್ನುವ ಸ್ಥಿತಿಗೆ ತಲುಪಿದೆ. ಹಾಗಾದರೆ ಮುಂದೇನು..!?

ಇದು ಯಾವುದರ ಪರಮಾವಧಿ?
ಹೀಗೊಂದು ಪ್ರಶ್ನೆಯನ್ನು ಆಳವಾಗಿ ಚಿಂತಿಸಿದರೆ ಪ್ರತಿಯೊಬ್ಬರ ಮನಸ್ಸಲ್ಲು ರಿಪಿಟ್!., ರಿಪಿಟ್!.. ಯಾವುದು!?, ಯಾವುದು!? ಎಲ್ಲವೂ…!!! ಎನ್ನುವ ಉತ್ತರ ಮೂಡಿ ಬರಬಹುದು. ಇಂದು ಸಾಗುತ್ತಿರುವ ಟೆಕ್ನಾಲಜಿಯ ವೇಗ ಇದೇ ವೇಗದಲ್ಲೇ ಮುಂದೆ ಸಾಗಿದರೆ ಮುಂದಿನ ತಲೆಮಾರುಗಳ ಜನ ಬುದ್ಧಿವಂತರಾಗಬಹುದಾ? ಅಥವಾ ದಡ್ಡ ಶಿಖಾಮಣಿಗಳಾಬಹುದಾ?, ಜಗತ್ತಿನ ಗತಿ ಎತ್ತಸಾಗಬಹುದು? ಈಗಾಗಲೇ ಸೋಷಿಯಲ್ ಮೀಡಿಯಾಗಳ ಹಾವಳಿ ಯುವ ಜನತೆಯನ್ನು ದಿಕ್ಕು ತಪ್ಪಿಸಿದ್ದು, ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಯಂತ್ರಗಾರಿಕೆಯ ಮತ್ತದರ ರೂಪರೇಷೆಯ ಬದಲಾವಣೆಯಿಂದ ಎಲ್ಲವೂ ಮಿತಿಮೀರಿ ಅಟ್ಟಹಾಸ ಮೆರೆಯುವಂತೆ ಮಾಡುತ್ತಿದೆ. ಬೃಹದಾಕಾರದ ಮನೆಗಳಲ್ಲಿ ದೊಡ್ಡ ಯಂತ್ರಗಳಂತೆ ಕೆಲಸ ಮಾಡುತ್ತಾ ಗಣಿತದ ಲೆಕ್ಕಾಚಾರಗಳನ್ನು ಚಕ ಚಕನೆ ಮುಗಿಸುತ್ತಿದ್ದ ಕಂಪ್ಯೂಟರ್ ಈಗ ಎಲ್ಲರ ಕೈ ಬೆರಳುಗಳ ಕೀಲಿಮಣೆ ಆಟದ ಆಟಿಕೆಯಾಗಿದೆ. ಡೆಸ್ಕ್ ಟಾಪ್‌ಗಳು ಲ್ಯಾಪ್ಟಾಪ್‌ಗಳಾಗಿ, ಮೊಬೈಲ್ ಫೋನ್‌ಗಳು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಟಚ್ ಪ್ಯಾಡ್ ಹೀಗೆ ಹತ್ತು ಹಲವು ರೂಪ ಪಡೆದಿವೆ. ನೆಟ್‌ಬುಕ್‌ಗಳು ಸಾಮಾನ್ಯನಿಗೂ ಕಂಪ್ಯೂಟರ್‌ರನ್ನು ದಿನ ನಿತ್ಯದ ಡೈರಿಗಿಂತ ಹೆಚ್ಚಿನ ಸಂಗಾತಿಯನ್ನಾಗಿ ಮಾಡಿವೆ.

Click here

Click here

Click here

Click Here

Call us

Call us

ಅಂದು ನಮಗೆ ಮೆಮೋರಿ ಕಾರ್ಡ್ ಎಂದರೇನೆಂದೂ ತಿಳಿದಿರಲಿಲ್ಲ, ಪೆಂಡ್ರೈವ್ ಹೆಸರೇ ಗೊತ್ತಿರಲಿಲ್ಲ, ಹಾರ್ಡ್ ಡಿಸ್ಕ್ ಬಗ್ಗೆ ಅರಿವಿರಲಿಲ್ಲ, ಇಂಟರ್ ನೆಟ್ ಗೋಜಿನ ಸುಳಿವಿರಲಿಲ್ಲ… ಆದರರಿಂದು.!?,,,
ಮೊಬೈಲ್ ಫೋನ್ , ನೆಟ್ ಬುಕ್, ಟ್ಯಾಬ್, ಅಗ್ಗದ ಬೆಲೆಯ ಆಂಡ್ರಾಯಿಡ್ ಫೋನುಗಳು ಅಷ್ಟೇ ಏಕೆ ಕಂಪ್ಯೂಟರ್‌ಗಳು ಟಚ್ ಅನುಭವ ಕೊಡುತ್ತಾ, ಇಂದಿನ ಯುವ ಪೀಳಿಗೆ ಇಂಟರ್‌ನೆಟ್‌ನೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಮಾಡಿದೆ. ಇತ್ತೀಚೆಗೆ ಲಗ್ಗೆ ಇಟ್ಟ ನೆಟ್ ಬುಕ್ ಮತ್ತು ಟ್ಯಾಬ್‌ಗಳು ಕೂಡ ಇದೀಗ ಹಳೆಯದಾಗಿವೆ, ಇನ್ನೂ ಹೊಸ ಹೊಸ ಆವಿಷ್ಕಾರಗಳು ಬರುತ್ತಿವೆ. ಅತೀ ಸಣ್ಣ ತಂತ್ರಾಂಶಗಳು ದೈನಂದಿನ ಕೆಲಸಕ್ಕೆ ಬೇಕಾದ ಸೌಲಭ್ಯಗಳನ್ನು ಬೆರಳಂಚಿನಲ್ಲಿ ತಂದಿರುವುದು ಮುಂದಿನ ದಿನಗಳಲ್ಲಿ ಬರೀ ಬ್ರೌಸರ್ ಒಂದರಿಂದಲೇ ಎಲ್ಲಿಂದಾದರೂ ಕುಳಿತಲ್ಲೆ ಪೂರ್ತಿ ಕೆಲಸ ಮಾಡುವ, ಅನುಪಸ್ಥಿತಿಯಲ್ಲೂ, ಉಪಸ್ಥಿತಿ ಕೈಗೊಳ್ಳುವ ಕಾಲ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ಪ್ರಾರಂಭದಲ್ಲೇ ಹೇಳಿದಂತೆ ನಾನು, ನನ್ನದು, ನನ್ನ ಮನಸ್ಥಿತಿ, ಕೇವಲ ಇವಷ್ಟೇ ನನ್ನದು!!. ಬೇರ‍್ಯಾವುದು ನನ್ನದಲ್ಲ, ಆದರೆ ಇಂದಿನ ತಂತ್ರಜ್ಞಾನದ ಬಿಸಿ ಆ ನಾನು!,, ನನ್ನದು!, ನನ್ನದಾದ ಕೆಲವೊಂದು ಎನ್ನುವ ಪರ್ಸ್‌ನಲ್ ವಿಚಾರಕ್ಕೂ ಲಗ್ಗೆ ಇಟ್ಟು ನಮ್ಮ ತನವನ್ನು ಅಪಹರಿಸಿಕೊಂಡು ಹೋಗುತ್ತಿದೆಯೇನೋ ಎಂದು ಅನಿಸುತ್ತಿದೆ. ಮೊದಲೆಲ್ಲ ಒಂದೈದು ನಿಮಿಷ ಫ್ರೀ ಟೈಮ್ ಸಿಕ್ಕರೆ ಪುಸ್ತಕ ಓದುವುದೋ, ಗೆಳೆಯರ ಜೊತೆ ಹರಟುವುದೋ, ಮನೆಯಲ್ಲಿ ಕುಳಿತು ಕೆಲಸ ಕೈಗೊಳ್ಳುವುದೋ ಮಾಡುತ್ತಿದ್ವಿ. ಆದರೆ ಇಂದು ಒದಗಿ ಬರುವ ಅದೇ ಅರೆಘಳಿಗೆ ಗೊತ್ತಿಲ್ಲದಂತೆ ಮೊಬೈಲ್ ಸ್ಕ್ರೀನ್‌ನ ಮೇಲೆ ಕೈ ಓಡಿಸುತ್ತಾ, ಯಾರ್ಯಾರನ್ನೋ ಫ್ರೆಂಡ್ ಮಾಡಿಕೊಳ್ಳುತ್ತಾ, ಬೇಕು ಬೇಡದ ವಿಷಯಗಳನ್ನ ತಡಕಾಡುತ್ತಾ, ಒಳಗೊಳಗೆ ನಗುತ್ತಾ, ಅಳುತ್ತಾ, ಅಯ್ಯೋ ನನಗೆ ಟೈಮೆ ಸಿಗುತ್ತಿಲ್ಲ ಬ್ಯುಸಿ ಬ್ಯುಸಿ ಎನ್ನುವ ಹಂತಕ್ಕೆ ತಲುಪಿದ್ದೇವೆ. ಇದರಿಂದ ಇಂದು ಸಹಜ ವರ್ತನೆಯ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ನಾವಂದು ಪರೀಕ್ಷೆಗೆ ಓದಿಕೊಳ್ಳುತ್ತಿದ್ದ ಸಮಯ ಕೈಯಲ್ಲಿ ಪುಸ್ತಕ ಬಿಟ್ಟರೆ ಬೇರೆನೂ ಕಾಣಲಾಗುತ್ತಿರಲಿಲ್ಲ. ಆದರೆ ಇಂದು ಮಕ್ಕಳು ಪುಸ್ತಕ ಮಡಚಿಟ್ಟು ಮೊಬೈಲ್‌ನಲ್ಲೇ ಚಾಟಿಂಗ್ ಮಾಡುತ್ತಾ ಅತ್ಯಮೂಲ್ಯ ಸಮಯಗಳನ್ನ ಹಾಳುಗೆಡವಿಕೊಳ್ಳುತ್ತಿದ್ದಾರೆ. ಒಂದು ಮಾತು ನಿಜ, ’ನಿರಂಂತರವಾಗಿ ಆವಿಷ್ಕಾರವಾಗುವ ಆಧುನಿಕ ತಂತ್ರಜ್ಞಾನದ ಯಾವುದೇ ವಸ್ತುವೂ ನಮಗೆ ಮಾರಕವಲ್ಲ. ಆದರೆ ಅದು ಅತಿಯಾಗಿ ಬಳಕೆಯಾದರೆ ಖಂಡಿತ ಮಾನವನ ಅಭಿವೃದ್ಧಿಗೆ ಶಾಪವಾಗುವುದು ಗ್ಯಾರಂಟಿ’. ಲೇಖನದ ಪೀಠಿಕೆಯಲ್ಲಿ ಹೇಳಿದಂತೆ ನನ್ನ ವೈಯಕ್ತಿಕ ಬದುಕು ಹಾಗೆಲ್ಲ ಇದ್ದರೂ ಒಮ್ಮೊಮ್ಮೆ ಅವುಗಳೇ ಹಿಂದಿದ್ದ ರೀತಿಯಲ್ಲಿ ಈಗಿಲ್ಲ, ಬದಲಾವಣೆ ಕಂಡಿದೆಯೇನೋ ಅನ್ನಿಸುತ್ತದೆ. ಅಂದಿದ್ದ ಸ್ಟ್ರಾಂಗ್ ಮೈಂಡೆಡ್ ಇಂದು ಈ ಟೆಕ್ನಾಲಜಿಯ ಮೊಮ್ಮಕ್ಕಳಾದ ಇಂಟರನೆಟ್ ಹಾಗೂ ಸೋಷಿಯಲ್ ಮೀಡಿಯಾಗಳ, ತಂತ್ರಜ್ಞಾಗಳ ಅತಿರೇಖದಿಂದ ಸ್ಟ್ರೆಸ್ ಆಗಿ ವೀಕ್ ಆಗುತ್ತಾ ಸಾಗುತ್ತಿದೆಯೇನೋ ಅನ್ನಿಸುತ್ತಿದೆ. ಎಲ್ಲೋ ಒಂದು ಕಡೆ ನಾವು ತಂತ್ರಜ್ಞಾನದ ದಾಸರಾಗುತ್ತಿದ್ದೇವಾ ಎನಿಸುತ್ತ್ತಿದೆ. ನನ್ನಲ್ಲಿ ಇವುಗಳ ಹಾವಳಿಯಿಂದ ಒಮ್ಮೊಮ್ಮೆ ನನ್ನತನವೂ ಮರೆಯುತ್ತಿದೆ. ಹಾಗಂತ ಇವುಗಳಿಂದ ದೂರ ಇರುವುದು ಶೊಭೆಯಲ್ಲ. ಬಿಟ್ಟು ಬಿಡಲು ಆಗುವುದಿಲ್ಲ. ಅತಿಯಾದರೆ ಅಮ್ರತವೂ ವಿಷ ಎನ್ನುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಎಷ್ಟೆಷ್ಟೂ ಮುಂದುವರಿಯುತ್ತಿದ್ದೇವೋ, ಅಷ್ಟುಷ್ಟು ತೊಂದರೆಗಳ ದಾಸರಾಗುತ್ತಿದ್ದೇವೆಂದೆ ಅರ್ಥ.

ಕೊನೆಗೊಂದು ಮಾತು

ಆರಂಭದಲ್ಲಿ ಎಲ್ಲರೂ ಸನ್ಮಾರ್ಗದಲ್ಲೇ ಇರುತ್ತಾರೆ. ಹಣ, ಅಂತಸ್ತು, ಗೌರವ, ಹಿಂಬಾಲಕರ ಪಡೆ ಎಲ್ಲವೂ ಬಂತು ಜೀವನ ಶೈಲಿಯೇ ಬದಲಾಗುತ್ತೆ. ಎಲ್ಲಾ ಸೌಲಭ್ಯಗಳು ಬಂದಾಗ ಆದರ್ಶ, ತನ್ನ ತನ ಎಲ್ಲವನ್ನೂ ಮರೆಯುವ ಗತಿ ಬಂದೆರಗುವುದು ಖಚಿತ. ಅದೇನೆ ಇರಲಿ ನಾ ಬದುಕೋ ಶೈಲಿ, ಇಷ್ಟು ದಿನ ಉಳಿಸಿಕೊಂಡು ಬಂದಿರೋ ನನ್ನ ವೈಖರಿ ಇತ್ಯಾದಿಗಳು ಈ ಭರದ ಆಧುನೀಕತೆಯ ಜೀವನದಲ್ಲಿ ಸಿಕ್ಕಿ ಕೊಚ್ಚಿಕೊಂಡು ಹೋಗದಿದ್ದರೆ ಸಾಕು. ಟೆನ್ಷನ್ ಲೈಫ್ ಬಿ.ಪಿ ತರಿಸದಿದ್ದರೆ ಸಾಕು. ಅದಕ್ಕಾಗಿ ಕಳೆದ ಹಳೆಯ ದಿನಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಮೈಮರೆಯುವೆ, ಖುಷಿ ಪಡುವೆ… ನಮಗೆ ನೆನೆಸಿಕೊಳ್ಳಲಾದರೂ ಆ ದಿನದ ನೆನಪುಗಳಿವೆ, ನಮ್ಮ ಮೊಮ್ಮಕ್ಕಳಿಗೆ ಅದು ಇಲ್ಲ. ಬರುವ ದಿನಗಳು ಭಯ ತರಿಸುತ್ತಿವೆ…ಏನೂ ಇಲ್ಲದ ಸಂಧರ್ಭಗಳಲ್ಲೇ ಬದುಕು ಚೆನ್ನಾಗಿತ್ತು ಎನಿಸುತ್ತಿದೆ…

Leave a Reply