ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಆ ಕಾರ್ಮಿಕರಿಗೆ ತಾಯಿಯನ್ನು ಅಗಲಿದ ದುಃಖ. ಕೊನೆ ಪಕ್ಷ ಆಕೆಯ ಮುಖವನ್ನಾದರೂ ನೋಡಲು ಸಿಗುತ್ತದೋ ಇಲ್ಲವೋ ಎಂಬ ಆತಂಕ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಊರಿಗೆ ತೆರಳಲು ಏನೂ ಊಳಿದಿಲ್ಲ. ಕಡೆಗೆ ದುಡ್ಡು ಹೊಂದಿಸಿಕೊಂಡರೂ ತೆರಳಲು ಬಸ್ಸಿಲ್ಲ. ರಾಷ್ಟ್ರವ್ಯಾಪಿ ನಡೆದ ಕಾರ್ಮಿಕ ಸಂಘಟನೆಗಳ ಮುಷ್ಕರದ ಕರಾಳ ಮುಖವೊಂದು ಕುಂದಾಪರದಲ್ಲಿ ಅನಾವರಣಗೊಂಡ ಪರಿಯಿದು. ತಾಯಿಯನ್ನು ಕಳೆದುಕೊಂಡ ಕಾರ್ಮಿಕ ಹಾಗೂ ಆತನ ಸಂಬಂಧಿಗಳೇ ಮುಷ್ಕರದಿಂದ ಅನುಭವಿಸಿದ ಪರಿಪಾಟಲು ಹೇಳತೀರದು. ನಂದಿಕೂರಿನಿಂದ ಕುಮಟಾ ಬಳಿಯ ಹಳ್ಳಿಯೊಂದಕ್ಕೆ ತೆರಳಬೇಕಿದ್ದ ಕಾರ್ಮಿಕರು ಬಸ್ಸಿಲ್ಲದ್ದರಿಂದ ಕುಂದಾಪುರದವರೆಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿಳಿದಿದ್ದರು. ಎಕ್ಸ್‌ಪ್ರೆಸ್ ರೈಲಾಗಿದ್ದರಿಂದ ಕುಂದಾಪುರದವರೆಗಷ್ಟೇ ತೆರಳಲು ಹಣವಿದ್ದುದರಿಂದ ಅಲ್ಲಿಯ ತನಕವಷ್ಟೇ ಟಿಕೇಟ್ ಮಾಡಿದ್ದರು. ಅದೇ ರೈಲಿನಲ್ಲಿ ಕುಮಟಾ ವರೆಗೆ ತೆರಳಬಹುದಿದ್ದರೂ ಸಹ ನೋವಿನಲ್ಲೂ ಕಾನೂನು ಪಾಲಿಸುವುದನ್ನು ಆ ಕಾರ್ಮಿಕರು ಮರೆತಿರಲಿಲ್ಲ. ಬಸ್ಸಿಗಾಗಿ ಹೊಂದಿಕೊಂಡಿದ್ದ ಹಣವೂ ಖರ್ಚಾಗಿ ಹೋಗಿತ್ತು. ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಡೆದು ಶಾಸ್ತ್ರೀವೃತ್ತದ ತನಕ ಬಂದರೂ ಮುಷ್ಕರದ ಹಿನ್ನೆಲೆಯಲ್ಲಿ ಯಾವೊಂದು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕುಂದಾಪುರ ಪರಿಸರದ ಶತಾಯುಷಿ ಅಜ್ಜಿ ಎಂದೇ ಖ್ಯಾತರಾದ ಶತಾಯುಷಿ ನೇತ್ರಾವತಿಯಮ್ಮ (101) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಾಲಿಗ್ರಾಮದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಸಾಲಿಗ್ರಾಮದ ವಾಣಿವಿಲಾಸಿನಿ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರಾಗಿದ್ದ, ವೇದಮೂರ್ತಿ ದಿವಂಗತ ರಾಮಚಂದ್ರ ಶಾಸ್ತ್ರಿಯವರ ಧರ್ಮಪತ್ನಿಯಾಗಿರುವ ಇವರು, ಓರ್ವ ಪುತ್ರ, ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಜತೆ ಮೋಕ್ತೇಸರರಾದ ಕೋಡಿ ಶ್ರೀನಿವಾಸ ಶೆಣೈ (76 ) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಅ.10ರಂದು ನಿಧನರಾದರು. 1982ರಿಂದ ಸುಮಾರು 34 ವರ್ಷಗಳ ಕಾಲ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಜತೆ ಮೋಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದರು. ಕುಂದಾಪುರದ ಶ್ರೀ ವೆಂಕಟರಮಣ ದೇವ ಎಜುಕೇಶನಲ್ ಟ್ರಸ್ಟ್‌ನ ಸ್ಥಾಪಕ ಸದಸ್ಯರಾಗಿ, ಪ್ರಸ್ತುತ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಸದಸ್ಯರಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದರು. ಕೃಷಿ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಇವರ ನಿಧನದ ಹಿನ್ನಲೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಿ ಶೋಕಾಚರಣೆ ನಡೆಸಿದರು. ಕೋಡಿ ಶ್ರೀನಿವಾಸ ಶೆಣೈ ಅವರ ನಿಧನಕ್ಕೆ ಸಮಾಜದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಒರ್ವ ಪುತ್ರ,, ಮೆಲಕಾ ಮಣಿಪಾಲ ಮೆಡಿಕಲ್ ಕಾಲೇಜಿನ…
ಸುನಿಲ್ ಹೆಚ್. ಜಿ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತನ್ನ ಮೇರು ಕಂಠದ ಮೂಲಕ ಸುಮಧುರವಾಗಿ ಆ ಹುಡುಗಿ ಹಾಡುತ್ತಿದ್ದರೇ ಅಲ್ಲಿದ್ದ ಸಂಗೀತಕಾರರು ನಿಬ್ಬೆರಗಾಗಿ ಕೇಳುತ್ತಿದ್ದರು. ನೆರೆದಿದ್ದ ಪ್ರೇಕ್ಷಕರಿಂದ ಸಾಲು ಸಾಲು ಕರತಾಡನ. ತನ್ನ ಅಪ್ರತಿಮ ಕಂಠಸಿರಿಯ ಮೂಲಕವೇ ‘&ಟಿವಿ’ ಪ್ರಸಿದ್ಧ ಹಿಂದಿ ವಾಹಿನಿಯಲ್ಲಿ ನಡೆಯುತ್ತಿರುವ ‘ದಿ ವಾಯ್ಸ್ ಇಂಡಿಯಾ ಕಿಡ್ಸ್’ ರಿಯಾಲಿಟಿ ಶೋಗೆ ಆಯ್ಕೆಗೊಂಡು ಅಸಂಖ್ಯಾತ ಪ್ರೇಕ್ಷಕರ ಮನಗೆದ್ದಿದ್ದಾಳೆ ಕುಂದಾಪುರ ಮೂಲದ ಪೋರಿ ಸಾನ್ವಿ ವಿ. ಶೆಟ್ಟಿ ಬೆಂಗಳೂರಿನ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಸಾನ್ವಿ, ವಿನಯ್ ಶೆಟ್ಟಿ ಹಾಗೂ ಪ್ರೀತಿ ದಂಪತಿಗಳ ಈರ್ವರು ಮಕ್ಕಳಲ್ಲಿ ಹಿರಿಯವಳು. ತಂಗಿ ಆರ್ನಾಳೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಕೆಯ ತಾಯಿ ಶಂಕರನಾರಾಯಣದವರಾದರೇ, ತಂದೆ ಬ್ರಹ್ಮಾವರದ ಪಡುಬೆಟ್ಟಿನವರು. ಸಾನ್ವಿ ಕುಂದಾಪುರ ವಿನಯ ಆಸ್ಪತ್ರೆಯ ಖ್ಯಾತ ಹೃದಯತಜ್ಞ ಕಿಶೋರ್ ಶೆಟ್ಟಿ ಅವರ ಸೊಸೆ. ಆಕೆ ಪುಟ್ಟ ಮಗುವಿದ್ದಾಗಲಿಂದಲೂ ಸಂಗೀತವೆಂದರೆ ಪ್ರೀತಿ. ಹಾಡು ಕೇಳಿಸಿದರಷ್ಟೇ ಊಟ, ನಿದ್ರೆ. ಯಾವುದಾದರೂ ಹಾಡು ಕೇಳಿದರೇ ಅದೇ ದಾಟಿಯಲ್ಲಿ ಹಾಡುವ…
ಡಾ. ಶುಭಾ ಮರವಂತೆ. ಕುಂದಾಪ್ರ ಡಾಟ್ ಕಾಂ ಅಂಕಣ. ಮೀನು ಹೇಳಿತು ನೀರಿಗೆ; ಓ ನೀರೇ, ನೀನು ನನ್ನ ಕಣ್ಣೀರನ್ನು ಎಂದೆಂದೂ ಕಾಣಲಾರೆ. ನಿನ್ನೊಂದಿಗೇ ನಾನಿದ್ದರೂ ನನ್ನ ಕಣ್ಣೀರು ನಿನಗೆ ಕಾಣುವುದೆ? ನೀರು ಉತ್ತರಿಸಿತು: ಆದರೆ ನಾನು ನಿನ್ನ ಕಣ್ಣೀರನ್ನು ಅನುಭವಿಸಬಲ್ಲೆ. ಏಕೆಂದರೆ ನೀನು ನನ್ನ ಹೃದಯದಲ್ಲಿದ್ದಿಯೆ ಇದು ’ಸ್ನೇಹ ಸಂವೇದ’ಗೆ ಬಂದ ಒಂದು ಪುಟ್ಟ ಎಸ್.ಎಂ.ಎಸ್. ನೀರಿಗೂ ಮೀನಿಗೂ, ಭೂಮಿಗೂ ಬಾನಿಗೂ, ನಮಗೂ ನಿಮಗೂ ಶಬ್ದಗಳಿಲ್ಲದೆ ಅರ್ಥವಾಗುವ ಸಂವೇದನೆಯಿದು. ಮಾತು ಮೀರಿ ಬರುವ ಅನುಭವವಿದು. ಅದೇ ಸ್ನೇಹ. ಹೃದಯದ ಭಾಷೆ. ಸ್ನೇಹಿತರಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವೆ? ಖಂಡಿತ ಇಲ್ಲ. ಆಬಾಲ ವೃದ್ಧರಿಗೂ ತಮ್ಮದೇ ಸ್ನೇಹ ಬಳಗಬೇಕು. LKG, UKG age ಅಲ್ಲೂ ಅವರದ್ದೇ ಒಂದು ಸ್ನೇಹಕೂಟ. ಒಂದೇ ಚಾಕಲೇಟನ್ನು ಅಂಗಿಯ ಮರೆಯಲ್ಲಿ ಕಡಿದು ಅರ್ಧ ಅರ್ಧ ತಿನ್ನುವ ಸಂಭ್ರಮ. ಜಾರು ಬಂಡೆಯಲ್ಲಿ ಜೊತೆಯಾಗಿ ಜೀಕಿದ ಅನುಭವ. ಧೂಳಿನಲ್ಲಿ ಹೊರಳಿ, ತಲೆಯ ಮೇಲೆಲ್ಲಾ ಮಣ್ಣು ಸುರಿದು ಸುಖಿಸಿದ ಸುಖ.. ಒಂದಾ, ಎರಡಾ?…
Rajaram Polymers koteshwara – Sunrise icon multi use tanks manufactured first time in India
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ನಾಟಿ ಕಾರ್ಯ ಪೂರ್ಣಗೊಂಡಿದೆ. ಕಂಠದ ಮನೆಯ ಕುಂಟುಂಬಿಕರಲ್ಲಿ ಹಿರಿಯವರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರಿಂದ ವಾಡಿಕೆಯಂತೆ ಒಂದೇ ದಿನಲ್ಲಿ ಕೃಷಿ ಕಾರ್ಯ ಪೂರ್ಣಗೊಂಡಿದೆ. ಜಿಪಂ ಸದಸ್ಯ ಬಾಬು ಶೆಟ್ಟಿ, ಗ್ರಾಪಂ ಸದಸ್ಯ ಬಾಲಕೃಷ್ಣ ಹೆಗ್ಡೆ, ಉದಯ ಹೆಗ್ಡೆ, ಅರ್ಜುನ ಹೆಗ್ಡೆ, ಮೊದಲಾದವರು ಸಾಂಪ್ರದಾಯಿಕ ಕೃಷಿ ಕಾರ್ಯಕ್ಕೆ ಚಾಲನೆ ನೀಡುವ ವೇಳೆಗೆ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ. ಸಾಂಪ್ರದಾಯಿಕ ಕೃಷಿ ಕಾರ್ಯ ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆ ಇದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಳೆಯ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕುಂದಾಪುರ ದಕ್ಷಿಣದ 2016-17 ನೇ ಸಾಲಿನ ಅಧ್ಯಕ್ಷರಾಗಿ ಕೆನರಾ ಕೆಟರರ‍್ಸ್ ಮಾಲಕ ಒಝಲಿನ್ ರೆಬೆಲ್ಲೊ ಆಯ್ಕೆಯಾಗಿದ್ದಾರೆ. ಉತ್ತಮ ಸಮಾಜ ಸೇವಕರು, ಸಂಘಟಕರು ಆಗಿರುವ ಇವರು ಗಂಗೊಳ್ಳಿಯಲ್ಲಿ ಪೆರಿಶ್ ಚರ್ಚ್‌ನ ಕೆಥೋಲಿಕ್ ಸಭಾ ಅಧ್ಯಕ್ಷರಾಗಿ, Iಅಙಒ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿ,ವಂದೇ ಮಾತರಂ ವಿವಿಧ್ದೋದೇಶ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾರ್ಯದರ್ಶಿ ಫ್ಲೈವನ್ ಡಿ’ಸೋಜಾ ನೇಮಕಗೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ನಡುವೆಯೇ ದೊರೆಯಬಹುದಾದ ಹಲವು ಶೈಕ್ಷಣಿಕ ಸಂಗತಿಗಳನ್ನು ಕಳೆದುಕೊಳ್ಳುತ್ತಾ ದಿಢೀರನೆ ಆಗುವ ಚಟುವಟಿಕೆಗಳಿಗೆ ಮಕ್ಕಳನ್ನು ತುರುಕಿಸುತ್ತಿರುವ ಆಂತಕದ ಸಂಗತಿಗಳ ನಡುವೆ ಸಾಂಸ್ಕೃತಿಕ ಕ್ರಿಯೆ ಹೆಚ್ಚುಚ್ಚು ನಡೆಯಬೇಕಾಗಿರುವುದು ಇಂದಿನ ಅಗತ್ಯತೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಹೇಳಿದರು. ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಬೈಂದೂರು ಗ್ರಾಪಂ ವ್ಯಾಪ್ತಿಯ ಹೊಸೂರಿನ ಹೊಂಗಿರಣ ರಂಗಮಂದಿರದಲ್ಲಿ ಚಾಲನೆಗೊಂಡ ನಾಲ್ಕು ದಿನಗಳ ಕಾರ್ಯಕ್ರಮ ಕಾನನದೊಳಗೊಂದು ರಂಗಸುಗ್ಗಿ ‘ಶರತ್ ರಂಗ ಸಂಚಲನ -2016’ರಲ್ಲಿ ಶುಭಶಂಸಗೈದರು. ರಂಗಭೂಮಿ ಎಂಬುದು ಭೂಮಿಯ ಜೊತೆಗಿನ ಸಂಬಂಧವನ್ನು, ನಮ್ಮದೇ ಕಥೆಯನ್ನು ನಮಗೆ ಅರಹುವ ಒಂದು ಪ್ರಕ್ರಿಯೆ. ನಾಟಕ ಹಾಗೂ ನಮ್ಮ ಬದುಕಿನ ಜೊತೆಗಿನ ನಂಟನ್ನು ಬೇರ್ಪಡಿಸಿ ನೋಡಲು ಸಾಧ್ಯವಾಗುವುದೇ ಇಲ್ಲ ಈ ಪ್ರಕ್ರಿಯೆಯೊಳಕ್ಕೆ ಎಲ್ಲರೂ ನಮ್ಮವಾಗಿಬಿಡುವ, ಎಲ್ಲವನ್ನೂ ಹಂಚಿಕೊಳ್ಳುವ ಕ್ರಿಯೆ ಮಹತ್ವದ್ದೆನಿಸಿದೆ ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕಲಾವಿದ ರವೀಂದ್ರ ಕಿಣಿ ಮಾತನಾಡಿ ಸಂಸ್ಥೆಯೊಂದನ್ನು ಕಟ್ಟುವುದಲ್ಲದೇ ಹಳ್ಳಿಯ ಜನರನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕೆಲಸ ಈ ಭಾಗದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಿಂದ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತ ಧರ್ಮಶ್ರೀ ಶೆಟ್ಟಿ ಮರು ಮೌಲ್ಯಮಾಪನದಲ್ಲಿ 13 ಅಂಕ ಹೆಚ್ಚಿಗೆ ಗಳಿಸಿದ್ದಾಳೆ. 602 ಇದ್ದ ಅವಳ ಅಂಕದ ಮೊತ್ತ ಈಗ 615ಕ್ಕೆ ಏರಿದೆ. ಮೊದಲು ಬಂದಿದ್ದ ಫಲಿತಾಂಶದಂತೆ ಅವಳಿಗೆ ಕನ್ನಡದಲ್ಲಿ 125, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ತಲಾ 95, ಗಣಿತದಲ್ಲಿ 85, ವಿಜ್ಞಾನದಲ್ಲಿ 99 ಮತ್ತು ಸಮಾಜ ವಿಜ್ಞಾನದಲ್ಲಿ 97 ಅಂಕಗಳು ಬಂದಿದ್ದುವು. ಈ ಫಲಿತಾಂಶದಿಂದ ತೃಪ್ತಳಾಗದ ಅವಳು ನಾಲ್ಕು ವಿಷಯಗಳ ಮರುಮೌಲ್ಯ ಮಾಪನಕ್ಕೆ ಕೋರಿಕೆ ಸಲ್ಲಿಸಿದ್ದಳು. ಇದೀಗ ಅದರ ಫಲಿತಾಂಶ ಬಂದಿದ್ದು, ಅದರಂತೆ ಆ ನಾಲ್ಕೂ ವಿಷಯಗಳಲ್ಲಿ ಅಂಕ ಪರಿಷ್ಕರಣೆ ಆಗಿದೆ. ಹಿಂದಿ ಮತ್ತು ವಿಜ್ಞಾನದಲ್ಲಿ ಒಂದೊಂದು ಅಂಕ ಏರಿಕೆಯಾದರೆ, ಗಣಿತದಲ್ಲಿ 8 ಹಾಗೂ ಸಮಾಜ ವಿಜ್ಞಾನದಲ್ಲಿ 3 ಏರಿಕೆಯಾಗಿದೆ. ಹಿಂದೆ ಅವಳ ಸರಾಸರಿ ಅಂಕ ಶೇ. 96.32 ಆಗಿದ್ದರೆ ಈಗ ಅದು ಶೇ. 98.4 ಆಗಿದೆ. ಪರಿಷ್ಕೃತ ಫಲಿತಾಂಶದಿಂದಾಗಿ…
