ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಹಾಡಿದ್ದಾರೆ. ಕುಂದಾಪ್ರ ಕನ್ನಡ ಬಿಲಿಂಡರ್ ಚಿತ್ರ ಹೊಸ ನಿರೀಕ್ಷೆ ಹುಟ್ಟಿಸಿದೆ. ● ಸುನಿಲ್ ಹೆಚ್. ಜಿ. ಬೈಂದೂರು. ಕುಂದಾಪ್ರ ಡಾಟ್ ಕಾಂ: ಕುಂದಗನ್ನಡಕ್ಕೊಂದು ಹೊಸ ಖದರ್ ನೀಡುತ್ತಿದ್ದಾರೆ ನಮ್ ರವಿ ಬಸ್ರೂರ್! ಕುಂದಾಪ್ರ ಕನ್ನಡದಲ್ಲಿ ಹಾಡು, ಸಿನೆಮಾ ನಿರ್ಮಿಸಿ ಸೈ ಎನಿಸಿಕೊಂಡ ರವಿ ಬಸ್ರೂರು ತಮ್ಮ ಕುಂದಾಪ್ರ ಕನ್ನಡದ ಹೊಸ ಚಿತ್ರ ’ಬಿಲಿಂಡರ್’ನ ಹಾಡನ್ನು ಕನ್ನಡದ ಪವರ್ಸ್ಟಾರ್ ಪುನಿತ್ ರಾಜ್ಕುಮಾರ್ ಹಾಗೂ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರಿಂದ ಕುಂದಗನ್ನಡದಲ್ಲಿಯೇ ಹಾಡಿಸಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಸಂಗೀತವನ್ನು ತಂದು ಕೇಳುಗರ ಮನಮಿಡಿದಿದ್ದ ಬಸ್ರೂರು ಅವರ ಕುಂದಗನ್ನಡ ಪ್ರೀತಿ ಒಂದು ಸಿನೆಮಾಕ್ಕಷ್ಟೇ ಮುಗಿದಿಲ್ಲ. ಗರ್ಗರ್ಮಂಡ್ಲದಿಂದ ಆರಂಭಗೊಂಡು ಈಗಿನ ಬಿಲಿಂಡರ್ ಸಿನೆಮಾದಲ್ಲಿಯೂ ಮುಂದುವರಿದಿದೆ. ಕಣ್ಮರೆಯಾಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ತನ್ನೂರ ಭಾಷೆ ಸೇರಬಾರದೆಂಬುದೇ ರವಿ ಅವರ ಬಯಕೆ. ಹಾಗಾಗಿ ಅಚ್ಚಗನ್ನಡದ ಭಾಷೆಯಲ್ಲಿಯೇ ತಮ್ಮ ಸೃಜನಶೀಲತೆಯನ್ನು ಬೆರೆಸಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಬಂದ ಅವರು ಇಂದು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕುಂದಗನ್ನಡದ ಮಾತುಗಾರಿಕೆಯ ಮೂಲಕ ಮನೆಮಾತನಾಗಿರುವ ಶಿಕ್ಷಕ ಮನೋಹರ ಹಂದಾಡಿ (ಮನು ಹಂದಾಡಿ) ಅವರು ಇತ್ತಿಚಿಗೆ ಅತ್ಯುತ್ತಮ ಶಿಕ್ಷಕ ಗೌರವಕ್ಕೆ ಪಾತ್ರರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಹುಬ್ಬಳ್ಳಿಯ ಸ್ವ-ರಕ್ಷಾ ಶಿಕ್ಷಣ ಸಂಸ್ಥೆಯು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಧಾರವಾಡದ ಕರ್ನಾಟಕ ಕಾಲೇಜು ಆವರಣದ ಡಾ. ಅಣ್ಣಾಜಿರಾವ್ ಸಿರೂರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ದಯಾನಂದ ವಿದ್ಯಾಸಾಗರ ಭಾರತಿ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಇಂಗ್ಲೀಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮನು ಹಂದಾಡಿಯವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಅವರು ಅತ್ಯುತ್ತಮ ಶಿಕ್ಷಕ ಗೌರವಕ್ಕೆ ಪಾತ್ರರಾದವರನ್ನು ಗೌರವಿಸಿದರು. ಧಾರವಾಡ ಶಿಕ್ಷಣ ಇಲಾಖೆಯ ಉಪನಿರ್ದೇಕರು ಸೇರಿದಂತೆ ಹುಬ್ಬಳ್ಳಿಯ ವಿವಿಧ ಅತಿಥಿ ಗಣ್ಯರು ವೇದಿಕೆಯಲ್ಲಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಇದನ್ನೂ ಓದಿ ► ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆಗೊಸಿದ ಮನು ಹಂದಾಡಿ – http://kundapraa.com/?p=8608 ► Download Kundapra.com’s Mobile…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಜಯಗಳಿಸಿದ್ದರೇ, ಕಾಂಗ್ರೆಸ್ ಎರಡು ಸ್ಥಾನದಲ್ಲೂ ಜಯ ಸಾಧಿಸಿದೆ. ಕಂಬದಕೋಣೆ, ಕಾವ್ರಾಡಿ ಕಾಂಗ್ರೆಸ್ ಪಾಲಾದರೆ, ಶಿರೂರು, ಬೈಂದೂರು, ತ್ರಾಸಿ, ವಂಡ್ಸೆ, ಸಿದ್ದಾಪುರ, ಹಾಲಾಡಿ, ಕೋಟೇಶ್ವರ ಬೀಜಾಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಜಿಪಂ ಮಾಜಿ ಸದಸ್ಯೆ ಸಾಧು ಎಸ್.ಬಿಲ್ಲವ, ಮದನ ಕುಮಾರ್, ಮಂಜಯ್ಯ ಶೆಟ್ಟಿ ಹರ್ಕೂರು, ಸಂಪಿಗೇಡಿ ಸಂಜೀವ ಶೆಟ್ಟಿ, ಮಾಜಿ ಜಿಪಂ ಸದಸ್ಯ ಅನಂತ ಮೋವಾಡಿ, ಜಿಪಂ ಮಾಜಿ ಸದಸ್ಯ ಸಂತೋಷ ಕುಮಾರ್ ಶೆಟ್ಟಿ ಸೋತ ಪ್ರಮುಖರಾದರೆ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ, ಮಾಜಿ ಜಿಪಂ ಉಪಾಧ್ಯಕ್ಷ ರಾಜು ದೇವಾಡಿಗ, ಮಾಜಿ ಕುಂದಾಪುರ ತಾಪಂ ಅಧ್ಯಕ್ಷೆ ಜ್ಯೋತಿ ವಿ. ಪುತ್ರನ್ ಗೆದ್ದ ಪ್ರಮುಖರು. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಹೊಸ ವರ್ಷವೆಂಬುದು ನಿತ್ಯ ನಿರಂತರ ಕಾಯಕಕ್ಕೊಂದು ಹೊಸ ಹುರುಪು, ಹೊಳಪು ನೀಡುವ ದಿನ. ಬದಲಾವಣೆ ಬಯಸುವವರಿಗೊಂದು ನೆಪ. ಕನಸು ಕಂಗಳಿಗೊಂದು ಭರವಸೆಯ ಮೂಟೆ. ಹೊಸ ವರ್ಷ ದಿನವೂ ಹರ್ಷ ತರಲಿ ಎಂಬ ಹಾರೈಕೆ ‘ಕುಂದಾಪ್ರ ಡಾಟ್ ಕಾಂ’ನದ್ದು. ಸಂಭ್ರಮದ ನಡುವೆ ಈ ನಿಲ್ಲದ ಕಾಲದ ಹಿಂದೆ ನಡೆದು ಬಂದ ಹಾದಿಯ ಅವಲೋಕನ ಮಾಡುತ್ತಾ ಮುನ್ನಡೆಯೋಣ ಬನ್ನಿ. 2016 ನಮಗೆ ಹೊಸತಾಗಿ ಕಂಡರೂ ಈ ಎಲ್ಲಾ ಸುದ್ದಿ, ಘಟನೆ, ಸವಾಲುಗಳು ಹೊಸತಾಗಿ ಉಳಿದಿಲ್ಲ. ಅದು ನಿರಂತರವಾಗಿ ಘಟಿಸುವಂತದ್ದು. ಆದರೆ ಎಡವಿದಲ್ಲೇ ಮತ್ತೆ ಎಡವದೇ, ಮಾಡಿದ ತಪ್ಪನ್ನೇ ಮತ್ತೆ ಮಾಡದೇ, ಸಹನೆಗೂ ಮೀರಿದ ಆಕ್ರಮಣವನ್ನು ಸಹಿಸಿಕೊಳ್ಳದೇ ಪ್ರತಿಭಟಿಸುತ್ತಾ, ಅಭಿವ್ಯಕ್ತಪಡಿಸುತ್ತಾ, ಅಭಿವೃದ್ಧಿಯ ವ್ಯಾಖ್ಯಾನಕ್ಕೆ ಹೊಸ ಅರ್ಥ ನೀಡುತ್ತಾ, ಸೃಜನಶೀಲ, ಸೌಹಾರ್ದಯುತ ಮನಸ್ಸುಗಳನ್ನು ಕಟ್ಟಲು ಹೊಸವರ್ಷವೊಂದು ಸ್ಪೂರ್ತಿಯಾಗಬೇಕಿದೆ. ಕುಂದಾಪುರ ತಾಲೂಕಿನ ಮಟ್ಟಿಗೆ 2015ರ ಆರಂಭ ಚನ್ನಾಗಿಯೇ ಆಗಿದ್ದರೂ ಬರಬರುತ್ತಲೇ ಸಾಕಷ್ಟು ತವಕ, ತಲ್ಲಣಗಳನ್ನು ಸೃಷ್ಟಿಸಿತ್ತು. ತಾಲೂಕಿನಾದ್ಯಂತ ಹಿಂದೆಂದೂ ಕಂಡು ಕೇಳರಿಯದ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಆ ಮನೆಯ ಸಂಭ್ರಮವೆಲ್ಲ ಉಡುಗಿ ಹದಿನೈದು ವರ್ಷಗಳೇ ಕಳೆದಿದೆ. ಹೊಸ ವರ್ಷ ಆಚರಣೆಗೆ ತೆರಳಿದ್ದವನಿಗೆ ವಿಧಿ ಸುಸ್ತು ಹೊಡೆಸಿದೆ. ಭವಿಷ್ಯದ ಕನಸುಗಳ ನನಸಾಗಿಸುತ್ತಾ ನಡೆಯಬೇಕಿದ್ದ ಯುವಕ ಚೈತನ್ಯ ಕಳೆದುಕೊಂಡು ವಿಕಲಚೇತನನಾಗಿ ಹಾಸಿಗೆ ಹಿಡಿದಿದ್ದಾನೆ. ಮಾತು ಮರೆತಿದ್ದಾನೆ. ತ್ರಾಣವಿಲ್ಲದೆ ಬದುಕಿರುವ ಮಗ, ಮಗುವಿನಂತೆ ತನ್ನ ತಾಯಿಯ ಆಸರೆಯಲ್ಲಿ ಬದುಕಿದ್ದಾನೆ. ಇದು ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಹೊಸ ವರ್ಷದ ಆಹ್ವಾನಿಸುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸ್ನೇಹಿತರೊಂದಿಗೆ ತೆರಳಿದ 21ವರ್ಷದ ದಿನೇಶ ಎಂಬ ಯುವಕನ ಬದುಕಿನ ದುರಂತ ಅಧ್ಯಾಯ. ಮೊಜಿನ ನಡುವಿನ ಸಣ್ಣ ಕಲಹ, ಕೆಲಸದ ನಡುವಿನ ಪೊಲೀಸರ ಆತುರ, ಯುವಕನಿಗೆ 36 ವರ್ಷಗಳಾದರೂ ಆತನ ಬದುಕನ್ನು ಜೀವಂತ ಶವವನ್ನಾಗಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ದಿನೇಶರ ಬದುಕಿನಲ್ಲಿ ಕರಾಳ ದಿನ: ಕುಂದಾಪುರ ಕಾಳಿಬೆಟ್ಟು ನಡುಮನೆ ನಿವಾಸಿ ದಿನೇಶ್, ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಬದುಕು ಬರಡಾಗಿಸಿಕೊಂಡ ಯುವಕ. ದಿ.ಪಂಜು ಪೂಜಾರಿ ಮತ್ತು ಲಚ್ಚ ಅವರ ಒಂದು ಹೆಣ್ಣು ಮತ್ತು ಇಬ್ಬರು ಗಂಡು…
ಕುಂದಾಪುರ : ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ ಸುಮಾರು 362 ಎಕ್ರೆ ದಲಿತರಿಗೆ ಮೀಸಲಿಟ್ಟ ಸರಕಾರಿ ಭೂಮಿ ಕಬಳಿಕೆ ಮಾಡಿರುವ ಬಾರಿ ಭೂ ಹಗರಣ ಬೆಳಕಿಗೆ ಬಂದಿದ್ದು, ಬೈಂದೂರು ವಿಶೇಷ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೂಮಾಲಿಕರೊಬ್ಬರು 400 ಎಕ್ರೆ ಖಾಸಗಿ ಭೂಮಿ ಖರಿದಿಸುವ ನೆಪದಲ್ಲಿ ಬಡ ದಲಿತ, ಅಲ್ಪಸಂಖ್ಯಾತ ಹಾಗೂ ಇತರ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ಮೀಸಲಿಟ್ಟ 362ಎಕ್ರೆ ಸರಕಾರಿ ಭೂಮಿ ವಶಪಡಿಸಿ ಕೊಂಡಿರುವುದು ಖಚಿತಪಟ್ಟದೆ, ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ 362 ಎಕ್ರೆ ಭೂಮಿ ಸರಕಾರಿ ಹೆಚ್ಚುವರಿ ಭೂಮಿಯೆಂದು ಪರಿಗಣಿಸಿ 1982-83 ರಲ್ಲಿ ಬಡ ದಲಿತ,ಮತ್ತು ಇತರ ಹಿಂದುಳಿದ ವರ್ಗದ 59 ಬಡ ಕುಟುಂಬಗಳಿಗೆ ಮಂಜೂರು ಗೊಳಿಸಲಾಗಿತ್ತು ಮಂಜೂರಾದ ಭೂಮಿಗೆ ಹಕ್ಕು ಪತ್ರ ನೀಡಬೇಕಾಗಿದ್ದ, ಇಲಾಖೆಯ ನಿರ್ಲಕ್ಷೆಯಿಂದ ಪಶ್ಚಿಮಘಟ್ಟದ ದಟ್ಟವಾದ ಅರಣ್ಯ ಪ್ರದೇಶವಾಗಿರುದರಿಂದ ಕ್ರೃಷಿಗೆ ಯೋಗ್ಯವಲ್ಲದ ಭೂಮಿಯೆಂದು ಪರಿಗಣಿಸಿ ಮಂಜೂರಾತಿಯನ್ನು ತಾತ್ಕಲಿಕವಾಗಿ ತಡೆಹಿಡಿಯಲಾಗಿತ್ತು, ಇದೀಗ ಖಾಸಗಿ ಭೂಮಿ ಖರಿದಿಸುವ ಹೆಸರಿನಲ್ಲಿ ೫೯…
ಕೋಟ: ಎರಡು ಜಿಲ್ಲೆಯ ಕಾಂಗ್ರೆಸ್ ಪಕ್ಷ ನಾಯಕರು ಮತ್ತು ಕಾರ್ಯಕರ್ತರು ಡಿಸೆಂಬರ್ ೨೭ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯನ್ನು ಗಭೀರವಾಗಿ ಪರಿಗಣಿಸಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರತಾಪಚಂದ್ರ ಶೆಟ್ಟಿ ಅವರ ಗೆಲುವಿಗೆ ಯಾವುದೆ ಆತಂಕವಿಲ್ಲ, ಕೋಟ ಶ್ರೀನಿವಾಸ ಪೂಜಾರಿ ಅವರಿಗಿಂತ ಅತ್ಯಧಿಕ ಮತಗಳಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಕೋಟ ಬ್ಲಾಕ್ ಕಾಂಗ್ರೆಸ್ ಕಛೇರಿ ಇಂದಿರಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಚುನಾವನೆ ಹೇಗಾದರು ಮಾಡಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿಯ ಕಡೆಯವರು ಅನೈತಿಕವಾಗಿ ಮತದಾರರನ್ನು ಸಂಪರ್ಕ ಮಾಡಿ, ತಮ್ಮತ್ತ ಸೆಳೆಯುವ ಕಾರ್ಯ ನಡೆಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ನಮ್ಮ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರ ಕುರಿತು ಪೂರಕವಾದ ಅಭಿಪ್ರಾಯ ಮೂಡಿಬರುತ್ತಿದೆ. ಇದಲ್ಲದೆ ಹೆಗ್ಡೆಯವರ ಕುರಿತು ಬಿಜೆಪಿಯಲ್ಲೂ ಕೂಡ ಯಾವುದೇ ಒಲವಿಲ್ಲ. ಕಾಂಗ್ರೆಸ್ ಮತಗಳು ಮಾತ್ರವಲ್ಲದೇ ಬಂಡಾಯ ಅಭ್ಯರ್ಥಿಗಳು ಊಹಿಸದ ರೀತಿಯಲ್ಲಿ…
ಕುಂದಾಪುರ.ಡಿ.26: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94ನೇ ಶ್ರೀ ರಾಮ ಭಜನಾ ಸಂಕೀರ್ತನೆ ಈ ಸಂದರ್ಭದಲ್ಲಿ ಪುಷ್ಪಾಲಂಕೃತಗೊಂಡ ವಸಂತ ಮಂಟಪ. ಸುಬ್ಬ ಪೈ ಸ್ಮರಣಾರ್ಥ ದೇವಸ್ಥಾನದಲ್ಲಿ ಸಂಜೆ 5:30 ರಿಂದ ಗಾಯಕಿ ಆಶಾ ಶೆಣೈ (ಪಾಂಗಾಳ ಆಶಾ ಎಸ್.ನಾಯಕ್) ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಬೈಂದೂರು: ರೈತರ ಬದುಕು ಸ್ವಾಭಿಮಾನದ ಬದುಕಾಗಿದ್ದು, ಸಮಸ್ಯೆಗಳಿಗೆ ಧೃತಿಗೆಡದೆ ಜೀವನ ಸಾಗಿಸುವ ರೈತರ ಜೀವನ ಇತರರಿಗೆ ಮಾದರಿಯಾಗಿದೆ. ಇಂದು ರೈತರ ಹೆಸರು ಬಳಸಿಕೊಂಡು ವೈಭವಿಕರಣದ ವ್ಯಾಪಾರೀಕರಣ ನಡೆಯುತ್ತಿದೆ ಆದರೆ ನಿಜವಾದ ರೈತರ ಸ್ಥಿತಿ ಚಿಂತಜನಕವಾಗಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಉಪ್ಪುಂದ ಶಂಕರ ಕಾಲಾ ಮಂದಿರ ಸಮೃದ್ಧ್ ಸಭಾಭವನದಲ್ಲಿ ಖಂಬದಕೋಣೆ ರೈತರ ಸೇವಾ ಸಂಘ, ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ ಹಾಗೂ ರೈತ ಸೇವಾ ಕೂಟ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ದಿನಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ್ಪುಂದ ತುಂಡಿಹಿತ್ಲು ಹಿರಿಯ ರೈತ ವಿಠಲ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್, ಕುಂದಾಪುರ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಚಿದಂಬರ್ ರಾವ್, ಜಿಪಂ ಮಾಜಿ ಸದಸ್ಯ ಮದನ್ ಕುಮಾರ್,…
