Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೀಚ್ ಬದಿಯೇ ಲಾರಿಗಳಿಗೆ ಪಾರ್ಕಿಂಗ್ ತಾಣ. ಚತುಷ್ಪಥ ಕಾಮಗಾರಿಯಿಂದ ನಿಸರ್ಗ ಸೌಂದರ್ಯ ಮರೆ. ಪ್ರವಾಸಿಗರಿಗೂ ಇಲ್ಲ ಸೂಕ್ತ ವ್ಯವಸ್ಥೆ. ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಸುಂದರ ಸಮುದ್ರದೊಂದಿಗೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಮರವಂತೆ ಕಡಲ ಕಿನಾರೆಯ ಅನುಪಮವಾದ ಸೊಬಗು ದಿನದಿಂದ ದಿನಕ್ಕೆ ಮಾಸುತ್ತಲೇ ಇದೆ. ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿರುವ ಮರವಂತೆ ಕಡಲತೀರದಲ್ಲಿ ಒಂದೆಡೆ ಸಮುದ್ರಕ್ಕೆ ಅಡ್ಡಲಾಗಿ ಸರತಿ ಸಾಲಿನಲ್ಲಿ ನಿಲ್ಲುವ ಲಾರಿಗಳು ಹಾಗೂ ಪ್ರವಾಸಿಗರ ವಾಹನಗಳ ಸಾಲು; ಇನ್ನೊಂದೆಡೆ ಪ್ರಗತಿಯ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಇಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುವವರಿಗೆ ನಿರಾಸೆ ಮೂಡಿಸುತ್ತಿದೆ. ಇಷ್ಟು ಸಾಲದೆಂಬಂತೆ ಸಮುದ್ರ ಬದಿಯಲ್ಲಿ ನಿಲ್ಲುವ ಮೀನು ಲಾರಿಗಳು ಹೊರಹಾಕುವ ಮಲಿನ ನೀರು ಗಬ್ಬುನಾತ ಬೀರುತ್ತಿದ್ದು, ತೀರದ ಬಳಿ ಒಂದು ಕ್ಷಣವೂ ನಿಲ್ಲಲಾಗದ ಪರಿಸ್ಥಿತಿ ಎದುರಾಗಿದೆ. [quote bgcolor=”#ffffff” arrow=”yes” align=”right”]> ತ್ರಾಸಿ-ಮರವಂತೆ ಕಡಲ ಕಿನಾರೆಯ ಅಭಿವೃದ್ಧಿಯೆಂಬುದು ಈಗ ಭ್ರಮನಿರಸನ ಎಂದೆನ್ನಿಸತೊಡಗಿದೆ. ಅಭಿವೃದ್ಧಿಗೆ ಹಣ ಮಂಜುರಾಗುವುದನ್ನು ಎಂದು…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ನಾಲ್ಕು ದಶಕಗಳ ಕನಸು ನನಸಾಗುವ ಹಂತ ತಲುಪಿದೆ. ರಾಜ್ಯ ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆಯಾಗುವ ಮೂಲಕ ನಾಗರಿಕರು ಇಲ್ಲಿಯ ತನಕ ನಡೆಸುತ್ತಾ ಬಂದ ಹೋರಾಟಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ. ಈ ಸಂಭ್ರಮದ ನಡುವಲ್ಲಿಯೇ ಘೋಷಣೆಯಾದ ತಾಲೂಕು ರಚನೆಯ ಪ್ರಸ್ತಾಪ ಅನುಷ್ಠಾನದ ಹಂತ ತಲುಪಬೇಕಿದ್ದರೇ, ತಾಲೂಕಿಗೆ ಪೂರಕವಾದ ಸರಕಾರಿ ಕಛೇರಿ ಹಾಗೂ ಜನರು ತಾಲೂಕು ಕೇಂದ್ರವನ್ನು ನೆಚ್ಚಿಕೊಳ್ಳಲು ಪೂರಕವಾದ ಸೌಲಭ್ಯಗಳು ಶೀಘ್ರವೇ ದೊರೆಯುವಂತಾಗಬೇಕು. ಪ್ರತ್ಯೇಕತೆಯ ಕೂಗಿಗೂ ಒಂದು ನ್ಯಾಯ ಒದಗಿಸಬೇಕು. ಈ ಎಲ್ಲದಕ್ಕೂ ನಮ್ಮ ಜನಪ್ರತಿನಿಧಿಗಳು ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ತಾಲೂಕು ಕನಸು – ಒಂದು ಹಿನ್ನೋಟ: ಉಡುಪಿ ಜಿಲ್ಲೆಯ ಶಿರೋಭಾಗದಲ್ಲಿರುವ ಬೈಂದೂರು ತಾಲೂಕು ರಚನೆಯ ವಿಚಾರ ಪ್ರಸ್ತಾಪಗೊಂಡು 35 ವರ್ಷಗಳೇ ಆಗಿವೆ. ಸರಕಾರ ಆಡಳಿತ ಸುಧಾರಣೆಯ ದೃಷ್ಠಿಯಿಂದ ನೂತನ ತಾಲೂಕು ರಚನೆಗೆ ಸಮಿತಿ, ಆಯೋಗಗಳು ಶಿಫಾರಸ್ಸು ಮಾಡಿದ್ದವು. ಈ ಭಾಗದ ಜನ ನಡೆಸುತ್ತಿರುವ ಹೋರಾಟದ ಕೂಗು…

Read More

ನೇರ ಪ್ರಸಾರ: ವಿವೇಕ ಪರ್ವ – ಬೈಂದೂರಿನಲ್ಲಿ ಬೃಹತ್ ಸಮಾರಂಭ  ► ಸ್ವಾಮಿ ವಿವೇಕಾನಂದರ ಚಿಂತನೆಯಂತೆ ಹೊಸ ದಿಕ್ಕಿನತ್ತ ಭಾರತ ► ಬೈಂದೂರಿನ ವಿವೇಕ ಪರ್ವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ► More news and Photos –  http://kundapraa.com/?p=20970 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಕೇವಲ ಕಲಿಕಾ ವಿಷಯಗಳು ಮಾತ್ರ ಮುಖ್ಯ ಪಾತ್ರ ವಹಿಸದೆ, ಸೃಜನಾತ್ಮಕ ಬರವಣಿಗೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಗುರುತರ ಪಾತ್ರ ವಹಿಸುತ್ತವೆ. ಶಾಲೆಯಲ್ಲಿ ಮಕ್ಕಳು ತಮ್ಮ ಪಠ್ಯ ವಿಷಯದ ಜೊತೆಗೆ ವಿಭಿನ್ನ ಬಗೆಯ ಸಹ ಪಟ್ಯ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಬೌದ್ಧಿಕ ವಿಕಾಸ ಪೂರಕವಾಗುತ್ತದೆ ಎಂದು.ಎನ್.ವಿನಯ್. ಹೆಗಡೆ, ಕುಲಪತಿಗಳು ನಿಟ್ಟೆ ಡೀಮ್ದ್ ಯುನಿವರ್ಸಿಟಿ ಅಭಿಪ್ರಾಯ ಪಟ್ಟರು. ಅವರು ಗುರುಕುಲ ವಿದ್ಯಾಸಂಸ್ಥೆ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗುರುಕುಲ ವಾರ್ಷಿಕ ಸಂಚಿಕೆ ’ಗುರುಸ್ಪರ್ಶ’ ಬಿಡುಗಡೆ ಮಾಡಿ ಮಾತನಾಡಿದರು. ಶಾಲಾ ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳ ಮತ್ತು ಶಾಲೆಯ ವಾರ್ಷಿಕ ಕ್ರೀಯಾ ಚಟುವಟಿಕೆಗಳ ತೋರಿಸುವ ಕೈಗನ್ನಡಿ ಎಂದು ಹೇಳಿದರಲ್ಲದೆ, ಈ ವಾರ್ಷಿಕ ಸಂಚಿಕೆಯ ವಿದ್ಯಾರ್ಥಿಗಳ ಮತ್ತು ವಿದ್ಯಾಸಂಸ್ಥೆಯ ನೆನಪಿನ ಭುತ್ತಿ ಎಂದು ಬಣ್ಣಿಸಿದರು. ಗುರುಸ್ಪರ್ಶ ವಾರ್ಷಿಕ ಸಂಚಿಕೆ, ವಾರ್ಷಿಕೋತ್ಸವದ ಸಮಾರಂಭದಲ್ಲಿ ಬಿಡುಗಡೆಗೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಹಾಗೆಯೇ ಪ್ರತಿವರ್ಷವು ಇನ್ನಷ್ಟು ಸೃಜನಾತ್ಮಕ ಬರವಣಿಗೆಯೊಂದಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ನ.೨೮ರ ಬೆಳಿಗ್ಗೆ ೧೦ಗಂಟೆಗೆ ’ಸೈಬರ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಎಂಬ ವಿಷಯದಲ್ಲಿ ಒಂದನ್ನು ಆಯ್ದುಕೊಳ್ಳಬಹುದಾಗಿದ್ದು ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದೆ. ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರೇ ತರಬೇಕಿದ್ದು ಎಲ್ಲಾ ಸ್ವರ್ಧೆಯಲ್ಲಿ ಆಯ್ಕೆಗೊಂಡ ಕಾರ್ಟೂನುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕಾರ್ಟೂನು ಹಬ್ಬದ ಸಮಾರೋಪ ಸಮಾರಂಭಲ್ಲಿ ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2016ಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನ. 18ರಿಂದ 20ರ ವರೆಗೆ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಉದ್ಘಾಟನೆ ಹಾಗೂ ಪ್ರಮುಖ ಕಾರ್ಯಕ್ರಮಗಳು ಜರುಗಿದರೆ, ಉಳಿದ ಸಮನಾಂತರ ವೇದಿಕೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಕರ್ನಾಟಕದ ನಾಳೆಗಳು ಎಂಬ ಪರಿಕಲ್ಪನೆಯಲ್ಲಿ ಈ ಭಾರಿಯ ನುಡಿಸಿರಿ ಜರುಗಲಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ನ.೨೬ರ ಮಧ್ಯಾಹ್ನ ೨ ಗಂಟೆಗೆ ’ಕಾರ್ಟೂನು ಮೊಗ್ಗು ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಜ್ಯೂನಿಯರ್ ಹಾಗೂ ಸಿನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದ್ದು ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಕಾಳಧನ ಈ ಮೂರು ವಿಷಯದಲ್ಲಿ ಯಾವುದಾದರೂ ಎರಡು ವಿಷಯವನ್ನು ಆಯ್ದುಕೊಂಡು ಎರಡು ಗಂಟೆಯ ಅವಧಿಯಲ್ಲಿ ಸ್ಥಳದಲ್ಲಿಯೇ ಕಾರ್ಟೂನು ರಚಿಸಬಹುದಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ನ.೨೮ರ ಬೆಳಿಗ್ಗೆ ೧೦ಗಂಟೆಗೆ ’ಸೈಬರ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಎಂಬ ವಿಷಯದಲ್ಲಿ ಒಂದನ್ನು ಆಯ್ದುಕೊಳ್ಳಬಹುದಾಗಿದ್ದು ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದೆ. ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರೇ ತರಬೇಕಿದ್ದು ಎಲ್ಲಾ ಸ್ವರ್ಧೆಯಲ್ಲಿ ಆಯ್ಕೆಗೊಂಡ ಕಾರ್ಟೂನುಗಳಿಗೆ ಕ್ರಮವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿನಿಯರಲ್ಲಿ ಕಾರ್ಟೂನು ಕಲೆಯತ್ತ ಒಲವು ಬೆಳೆಸುವ ಹಾಗೂ ಉತ್ತೇಜಿಸುವ ಸಲುವಾಗಿ ಶಾಲಾ-ಕಾಲೇಜುಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿನಿಯರಿಗಾಗಿ ನ.೨೬ರ ಮಧ್ಯಾಹ್ನ ೨ ಗಂಟೆಗೆ ಖ್ಯಾತ ಕಾರ್ಟೂನಿಷ್ಠ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥವಾಗಿ, ಮಾಯಾ ಕಾಮತ್ ಕುಟುಂಬದ ಸಹಭಾಗಿತ್ವದಲ್ಲಿ ’ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಜ್ಯೂನಿಯರ್ ಹಾಗೂ ಸಿನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದ್ದು ವಿದ್ಯಾರ್ಥಿನಿಯರು ಸೋಶಿಯಲ್ ಮೀಡಿಯಾ, ಡಿಜಿಟಲ್ ಇಚಿಡಿಯಾ ಹಾಗೂ ಕಾಳಧನ ಈ ಮೂರು ವಿಷಯದಲ್ಲಿ ಯಾವುದಾದರೂ ಎರಡು ವಿಷಯವನ್ನು ಆಯ್ದುಕೊಂಡು ಎರಡು ಗಂಟೆಯ ಅವಧಿಯಲ್ಲಿ ಸ್ಥಳದಲ್ಲಿಯೇ ಕಾರ್ಟೂನು ರಚಿಸಬಹುದಾಗಿದೆ. ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿನಿಯರೇ ತರಬೇಕಿದ್ದು, ಸ್ವರ್ಧೆಯಲ್ಲಿ ಆಯ್ಕೆಗೊಂಡ ಮೂರು ಕಾರ್ಟೂನುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕಾರ್ಟೂನು ಹಬ್ಬದ ಸಮಾರೋಪ ಸಮಾರಂಭಲ್ಲಿ…

Read More