Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕೋಟ: ಇಲ್ಲಿನ ಠಾಣಾ ವ್ಯಾಪ್ತಿಯ ಜನ್ನಾಡಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ವರದಿಯಾದ್ದು, ಮಹಿಳೆಯ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇಂದಿರಾ(33) ಎಂಬುವವರು ಮೃತ ದುರ್ದೈವಿ. ಘಟನೆಯ ವಿವರ: ಜನ್ನಾಡಿ ಗ್ರಾಮದ ಮಲಾಡಿಯಲ್ಲಿ ಪತಿ ದೇವೇಂದ್ರ ಶೆಟ್ಟಿ ಅವರೊಂದಿಗೆ ವಾಸವಿದ್ದ ಇಂದಿರಾಗೆ ಆರು ವರ್ಷ ಪ್ರಾಯದ ಮಗನಿದ್ದಾನೆ. ಬೆಳಿಗ್ಗೆ ಸುಮಾರು 6ಗಂಟೆಯ ವೇಳೆಗೆ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಹೆಂಡತಿಯ ಮೃತದೇಹವನ್ನು ಕಂಡು ಹೆದರಿದ ದೇವೇಂದ್ರ ತನ್ನ ಸಂಬಂಧಿಗಳಿಗೆ ವಿಷಯ ತಿಳಿಸಿದ್ದಾನೆ. ಸ್ಥಳಿಯರು ಇದು ವ್ಯವಸ್ಥಿತ ಕೃತ್ಯವೆಂದು ಅರಿತು ಕೋಟ ಪೊಲೀಸರಿಗೂ ವಿಷಯ ಮುಟ್ಟಿಸಿದ್ದು ಘಟನಾ ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್‌ ಇನ್ಸ್‌ಪೆಕ್ಟರ್‌ ಅರುಣ್‌ ನಾಯಕ್‌, ಕೋಟ ಠಾಣಾ ಎಸ್‌.ಐ. ಕಮಲಾಕರ ನಾಯ್ಕ ಮೊದಲಾದವರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ದೇವೇಂದ್ರನ್ನನು ಪೊಲೀಸ್ ವಿಚಾರಣೆಗಾಗಿ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಅನುಮಾನ ವ್ಯಕ್ತವಾದ ನಿನ್ನೆಲೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ್ ಆಸ್ವತ್ರೆಗೆ ರವಾನಿಸಲಾಗಿದೆ.       ಇಂದಿರಾ ಕೆಲವು…

Read More

ಬೈಂದೂರು: ಸಮೀಪದ ಬಿಜೂರಿನವರಾದ ಶಂಕರ ಪೂಜಾರಿ ಕಾಡಿನತಾರು ಎ.25ರಿಂದ 29ರ ತನಕ ಗೋವಾದ ಪಣಜಿಯಲ್ಲಿ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಫೆಡರೇಷನ್‌ ಆಯೋಜಿಸಿದ ರಾಷ್ಟ್ರ ಮಟ್ಟದ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್ ಶಿಫ್ -2015 ಇದರಲ್ಲಿ 4×100 ರಿಲೇ ಓಟದ 35ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗೆದ್ದಿದ್ದಾರೆ. ಇವರು ಕಳೆದ ಬಾರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಮೂರು ಪದಕ ಪಡೆದು ಫ್ರಾನ್ಸ್‌ ದೇಶದಲ್ಲಿ ಇದೇ ಅಗಸ್ಟ್‌ನಲ್ಲಿ ನಡೆಯುವ ವಿಶ್ವ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ – 2015 ಕ್ಕೆ ಆಯ್ಕೆಯಾಗಿರುತ್ತಾರೆ. ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಅಧೀಕ್ಷಕರ ಕಛೇರಿಯ ನಿಸ್ತಂತು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಇವರನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಕೆ.ಅಣ್ಣಾಮಲೈ ಐ.ಪಿ.ಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸಂತೋಷ್‌ ಕುಮಾರ್‌ ಹಾಗೂ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಕೆ.ಎಂ ಚಂದ್ರಶೇಖರರವರು ಅಭಿನಂದಿಸಿರುತ್ತಾರೆ.

Read More

ಬೈಂದೂರು: ವ್ಯಕ್ತಿಯ ಶ್ರೇಷ್ಠತೆಯನ್ನು ನಿರ್ದಿಷ್ಟವಾದ ಮಾನದಂಡದಿಂದ ಅಳೆಯುವ ಮೂರ್ಖತನಕ್ಕೆ ಮುಂದಾಗಬಾರದು. ಪ್ರತಿ ವ್ಯಕ್ತಿಯಲ್ಲೂ ಅವರದ್ದೇ ಆದ ಪ್ರತಿಭೆ ಅಡಗಿರುತ್ತದೆ ಎಂಬುದನ್ನು ಅರಿಯಬೇಕು ಎಂದು ಬರಹಗಾರ ಹಾಗೂ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿದ ಮಕ್ಕಳ ಲಾವಣ್ಯ-2015ರ ‘ರಜೆಯಲ್ಲಿ ರಂಗಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಯಾವುದೇ ಬಗೆಯ ರಂಗಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಮಕ್ಕಳು ರಂಗಭೂಮಿಯಲ್ಲಿ ಒಮ್ಮೆ ತೊಡಗಿಸಿಕೊಂಡರೆ ಮುಂದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎಂದು ಹೇಳಿದ ಅವರು ಮನಬಂದಂತೆ ನಾಟಕಗಳನ್ನು ವಿಮರ್ಶಿಸುವ ವಿಮರ್ಶಕರು, ಮೊದಲು ಅದರ ಆಶಯ, ಹಿನ್ನೆಲೆ, ರಚನೆಯ ಕಾಲ ಮುಂತಾದವುಗಳನ್ನು ಕುರಿತು ಅರಿತು ವಿಮರ್ಷಿಸಿದರೆ ಒಳ್ಳೆಯದು ಎಂದು ಸಲಹೆಯಿತ್ತರು. ರಂಗಶಿಬಿರದ ನಿರ್ದೇಶಕ ಸತ್ಯನಾ ಕೊಡೇರಿ ಸಮಾರೋಪದ ನುಡಿಗಳನ್ನಾಡುತ್ತಾ ನಾವುಗಳು ಮಕ್ಕಳ ಬಾಲ್ಯವನ್ನು ಕಸಿಯುತ್ತಿದ್ದೆವೇನೋ ಎಂಬ ಆತಂಕ ಕಾಡುತ್ತಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳ ಪ್ರೀತಿ, ಸ್ನೇಹ, ಮಮತೆ ಎಲ್ಲವನ್ನೂ ಕಲಿಯುತ್ತಾರೆ. ರಂಗಭೂಮಿಯು ಜನರಿಗೆ ಹತ್ತಿರದಿಂದ ಸ್ಪಂದಿಸುವ…

Read More

ಕುಂದಾಪುರ.ಮೇ.1: ನಗರದಲ್ಲಿ ಹೆಚ್ಚಿದ ವಾಹನ ದಟ್ಟಣೆಯಿಂದಾಗಿ ಇಂದು ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಮುಖ್ಯರಸ್ತೆಯಲ್ಲಿ ಸಾಲು ಸಾಲು ವಾಹನಗಳು ಕೆಲಹೊತ್ತು ಜಾಮ್ ಆಗಿ ನಿಲ್ಲುವ ದೃಶ್ಯ ಕಂಡುಬಂತು. ವಾಹನ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ಕುಂದಾಪುರದ ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದರು. ಇಂದು ಕುಂದಾಪುರದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯುನಿಂದ ಬೃಹತ್ ಬೈಕ್, ರಿಕ್ಷಾ ರ್ಯಾಲಿ, ಕಾಲ್ನಡಿಗೆಯ ಜಾಥಾ ಇದ್ದ ಕಾರಣ ಸಾವಿರ ಸಂಖ್ಯೆಯ ಮಂದಿ ಶಾಸ್ತ್ರಿ ವೃತ್ತ ಹಾಗೂ ನೆಹರು ಮೈದಾನದ ಸುತ್ತ ನೆರೆದಿದ್ದರು. ಇನ್ನೊಂದೆಡೆ ಕುಂದಾಪುರ, ಹಂಗಳೂರು ಮುಂತಾದೆಡೆ ಅನೇಕ ಶುಭ ಸಮಾರಂಭಗಳೂ ನಡೆಯುತ್ತಿದ್ದವು. ಪರಿಣಾಮವಾಗಿ ಅಧಿಕ ಸಂಖ್ಯೆಯ ಜನರು ಇಂದು ನಗರಲ್ಲಿ ಆಗಮಿಸುತ್ತಿದ್ದರು. ಇದರಿಂದಾಗಿ ಬೆಳ್ಳಿಗ್ಗೆ 9:30ರಿಂದ ಮಧ್ಯಾಹ್ನ 12:45ರ ತನಕ ಭಾರಿ ಜನಸಂದಣಿ ಕಂಡುಬಂತು. ಇಂದು ಸರಕಾರಿ ರಜಾದಿನವಾದ್ದರಿಂದ ದಿನನಿತ್ಯ ಕಛೇರಿಗೆ ತೆರಳುವ ನೌಕರರ ಸಂಖ್ಯೆ ಕಡಿಮೆ ಇತ್ತು. ಕುಂದಾಪುರ ಗಾಂಧಿ ಮೈದಾನದ ಎದುರು ಚತುಷ್ಪತ ಕಾಮಗಾರಿ ಕಳೆದ 2-3ವರ್ಷಗಳಿಂದ ನಡೆಯುತ್ತಲೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ…

Read More

ಮೋದಿಯದ್ದು ಕಾರ್ಮಿಕ ವಿರೋಧಿ ಸರಕಾರ: ಪ್ರಕಾಶ್ ಕುಂದಾಪುರ: ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಸರಕಾರ ಹಿಂದಿನ ಸರಕಾರಕ್ಕಿಂತ ಹೆಚ್ಚು ಹಗರಣಗಳಲ್ಲಿ ತೊಡಗಿಕೊಂಡಿದೆ. ಇದು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾರ್ಮಿಕ ವಿರೋಧಿ ನೀತಿಯು ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರಿಗಾಗಿ ಇರುವ ಐವತ್ನಾಲ್ಕು ಕಾನೂನುಗಳನ್ನು ಮೊಟಕುಗೊಳಿಸಿ ಕೇವಲ ಮೂರು ಕಾನೂನಿಗೆ ಪರಿವರ್ತಿಸುವ ಹುನ್ನಾರದ ಹಿಂದೆ ಬಂಡವಾಳಶಾಹಿಗಳ ಪರವಾದ ದೋರಣೆ ಅಡಗಿದೆ ಎಂದು ಸಿಐಟಿಯು ರಾಜ್ಯ ಮುಖಂಡ ಪ್ರಕಾಶ್‌ ಆರೋಪಿಸಿದರು. ಅವರು ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೋಟಿ ಕೋಟಿ ಹಣವನ್ನು ಕೇಲವ ಜಾಹೀರಾತಿಗಾಗಿ ಖರ್ಚುಮಾಡಿ ಜನರನ್ನು ಮರುಳುಗೊಳಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಳೆದ ಒಂದು ವರ್ಷದಿಂದ ಬಡವರು, ಕಾರ್ಮಿಕರ ಏಳಿಗೆಗೆ ಶ್ರಮಿಸಿಲ್ಲ. ಮೆಕ್ ಇನ್ ಇಂಡಿಯಾದಂತಹ ಪರಿಕಲ್ಪನೆಯನ್ನು ಸೃಷ್ಟಿಸಿದ ಮೋದಿ, ದೇಶದ ಜನರಿಗೆ ನೆರವು ಮಾಡಿಕೊಡುವ ಬದಲಿಗೆ ವಿದೇಶಿ ಬಂಡವಾಳದಾರರಿಗೆ ನೆರವು…

Read More

ಬೈಂದೂರು: ಮನುಷ್ಯ ತನ್ನ ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಕಲೆ, ಸಾಹಿತ್ಯದಂತಹ ಹಲವು ಮಾಧ್ಯಮವನ್ನು ಕಂಡುಕೊಂಡಿದ್ದಾನೆ. ದಿನನಿತ್ಯದ ಕಾಯಕದ ನಡುವೆ ಒಂದಿಷ್ಟು ಹೊತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವೂ ಆಗಿದೆ ಎಂದು ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಹೇಳಿದರು. ಅವರು ಬೈಂದೂರು ರಥೋತ್ಸವದ ಅಂಗವಾಗಿ ಸುರಭಿ ರಿ. ಬೈಂದೂರು ಇಲ್ಲಿನ ಶಾರದಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ನಾಲ್ಕು ದಿನಗಳ ’ಸುರಭಿ ಕಲಾಸಿರಿ’ಯ ಕೊನೆಯ ದಿನ ಸಭಾ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣಕಾರರಾಗಿ ಮಾತನಾಡಿದರು. ದಿನವೂ ಅನ್ನ ಊಟಮಾಡುವವನಿಗೆ ಅದು ಹೆಚ್ಚು ರುಚಿಸುವುದಿಲ್ಲ. ಅದಕ್ಕಾಗಿ ಒಂದಿಷ್ಟು ವ್ಯಂಜನಗಳನ್ನು ಸೇರಿಸಿಕೊಂಡು ಊಟಮಾಡುತ್ತಾನೆ. ಬದುಕು ಕೂಡ ಒಂದು ದೃಷ್ಠಿಯಲ್ಲಿ ಅನ್ನದಂತೆ. ಇಲ್ಲಿ ದುಡಿಯುವುದು, ಗಳಿಸುವುದು ಎಲ್ಲಾ ಇದ್ದದ್ದೇ. ಆದರೆ ಬದುಕಿನಲ್ಲಿ ಕಲೆ ಎಂಬ ವ್ಯಂಜನ ಸೇರಿಕೊಂಡಾಗ ಅದು ಮತ್ತಷ್ಟು ಸುಂದರಗೊಳ್ಳುತ್ತದೆ ಎಂದ ಅವರು ಬೈಂದೂರಿನ ಎಲ್ಲಾ ಸಂಘಟನೆಗಳೂ ಕಲೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೆಲಸವನ್ನು ಮಾಡುತ್ತಾ ಬಂದಿವೆ ಎಂದು ಶ್ಲಾಘಿಸಿದರು. ಯಡ್ತರೆ ಗ್ರಾ.ಪಂ ಅಧ್ಯಕ್ಷ…

Read More

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯ ನಾಯಕನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಬೈಕ್ ಸವಾರನ ಮೇಲೆ ಹರಿದು ಹೋದ ಪರಿಣಾಮ ಬೈಕ್ ಸವಾರನ ಅರ್ಧದೇಹ ಛಿದ್ರಗೊಂಡು ಮೃತಪಟ್ಟ ವಿದ್ರಾವಕ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಹೇರಂಜಾಲು ಗಾಣಿಗರ ಬೆಟ್ಟು ಮುತ್ತ ಗಾಣಿಗರ ಮಗ ವೀರೇಂದ್ರ ಗಾಣಿಗ ( 28 ) ಎಂದು ಗುರುತಿಸಲಾಗಿದೆ. ವೀರೇಂದ್ರ ರಾತ್ರಿ ವೇಳೆಯಲ್ಲಿ ಬೈಂದೂರು ಕಡೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಛಿದ್ರಗೊಂಡ ದೇಹ ಕೆಲವು ಹೊತ್ತು ರಸ್ತೆಯಲ್ಲಿಯೇ ಬಿದ್ದಿತ್ತು. ಮೃತಪಟ್ಟವರು ಯಾರೆಂದು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಸ್ಥಳಕ್ಕಾಗಮಿಸಿದರ ಬೈಂದೂರು ಪೊಲೀಸರು ಮಹಜರು ನಡೆಸಿ ಮೃತರ ಮೊಬೈಲ್ ಮೂಲಕ ಸಂಬಂಧಿಗಳಿಗೆ ಕರೆಮಾಡಿ ಗುರುತು ಪತ್ತೆ ಹಚ್ಚಿದ್ದರು. ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಊರಿಗೆ ಆಗಮಿಸಿದ್ದ ವಿರೇಂದ್ರ ಒಂದು ದಿನದಲ್ಲಿ ಮತ್ತೆ ಮುಂಬೈಗೆ ಹಿಂತಿರುಗುವವರಿದ್ದರು. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

Read More

ಗಂಗೊಳ್ಳಿ/ಶಾರ್ಜಾ : ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾದನೆಯ ಬಿರುದು ಪಡೆದುಕೊಂಡಿದ್ದಾರೆ. ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್‌ನಲ್ಲಿ ಇತ್ತೀಚಿಗೆ ಜರಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ ಜನಾಬ್ ಶೇಖ್ ಸುಲ್ತಾನ್ ಬಿನ್ ಮೊಹಮ್ಮದ್ ಬಿನ್ ಸುಲ್ತಾನ್ ಅಲ್ ಕಾಸಿಮಿ ಇವರು ಪ್ರೇರಣಾ ಪೈ ಇವರಿಗೆ ಬಿರುದು ಪ್ರದಾನ ಮಾಡಿದರು. ಪ್ರೇರಣಾ ಮೂಲತ: ಗಂಗೊಳ್ಳಿಯವರಾದ ಮಣಿಪಾಲದ ನಿವಾಸಿ ಬಾಂಡ್ಯ ಸಂಜೀವ ಪೈ ಹಾಗೂ ಶಾರದಾ ಎಸ್.ಪೈ ಅವರ ಮೊಮ್ಮಗಳಾಗಿದ್ದು, ಬಾಂಡ್ಯ ಹರೀಶ್ ಪೈ ಮತ್ತು ರಾಗಿಣಿ ಹರೀಶ್ ಪೈ ಅವರ ಪುತ್ರಿಯಾಗಿದ್ದಾಳೆ. ಪ್ರತಿಷ್ಠಿತ ಶೈಕ್ಷಣಿಕ ಶ್ರೇಷ್ಠತೆಗಾಗಿ 2012-13ನೇ ಆವೃತ್ತಿ 15ರ ‘ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಕ್ತೂಮ್ ಬಿರುದನ್ನು ಪಡೆದುಕೊಂಡಿರುವ ಪ್ರೇರಣಾ ತನ್ನ ಸಂಪೂರ್ಣ ಶೈಕ್ಷಣಿಕ ಪಯಣದಲ್ಲಿ ತನ್ನ ನೆಚ್ಚಿನ ವಿಷಯಗಳಾದ ವಿಜ್ಞಾನ ಮತ್ತು ಗಣಿತದಲ್ಲಿ ಸರ್ವಶ್ರೇಷ್ಠ ವಿದ್ಯಾರ್ಥಿನಿಯಾಗಿದ್ದಾರೆ. ತಾನು ಕೈಗೆತ್ತಿಕೊಂಡಿರುವ ಕಾಯಕವನ್ನು ಅತ್ಯುತ್ತಮ ರೀತಿಯಲ್ಲಿ…

Read More

ಕುಂದಾಪುರ: ಕೇಂದ್ರ ಸರಕಾರದ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015’ಅಂಗಿಕಾರಗೊಳ್ಳುವುದನ್ನು ವಿರೋಧಿಸಿ ಅಖೀಲ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಇಂದು (ಎ. 30) ದೇಶಾದ್ಯಂತ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದರ ಪರಿಣಾಮ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ತಾಲೂಕಿನಲ್ಲಿಯೂ ಸರಕಾರಿ ಬಸ್ ಸಂಚಾಯ ಸ್ಥಗಿತಗೊಂಡಿದ್ದರೇ, ಖಾಸಗಿ ಬಸ್ಸುಗಳ ಓಡಾಟ ವಿರಳವಾಗಿತ್ತು. ಕುಂದಾಪುರ ತಾಲೂಕಿನ ಕೆಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಲೋಕಲ್ ಬಸ್ಸುಗಳು ವಿರಳವಾಗಿ ಸಂಚರಿಸುತ್ತಿರುವುದು ಕಂಡುಬಂತು. ಆದರೆ ಕುಂದಾಪುರದಿಂದ ಬೈಂದೂರು, ಭಟ್ಕಳಕ್ಕೆ ಸಂಚರಿಸು ಖಾಸಗಿ ಬಸ್ಸುಗಳು ಕೂಡ ರಸ್ತೆಗಿಳಿಯದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಆಟೋರಿಕ್ಷಾ ಚಾಲಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಾದರೂ ರಿಕ್ಷಾಗಳ ಸಂಚಾರ ಕಂಡುಬರುತ್ತಿತ್ತು. ಸಂಜೆಯಾಗುತ್ತಿದ್ದಂತೆ ದೂರದ ಮುಂಬೈ, ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸುಗಳು ತಮ್ಮ ಪ್ರಯಾಣವನ್ನು ಆರಂಭಿಸಿದವು. ಉಡುಪಿಯಲ್ಲಿ ಸಿಐಟಿಯು ಸಂಯೋಜಿತ ಬಸ್‌ ನೌಕರರ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುದುದಾಗಿ ತಿಳಿಸಿತ್ತು. ಖಾಸಗಿ ಬಸ್‌ ಮಾಲಕರು ತಾವು ಬಂದ್‌ ಆಚರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರಾದರೂ, ನೌಕರರು…

Read More

ಕುಂದಾಪುರ: ಭಯ ಎಂಬುದು ಜಾತಿ ಧರ್ಮವನ್ನು ಮೀರಿದ್ದು! ಮೊದಲು ಎದುರಾದ ಕಂಟಕಕ್ಕೊಂದು ಅಂತ್ಯ ಸಿಕ್ಕರೆ ಸಾಕು ಎಂದು ಜನಸಾಮಾನ್ಯರು ಬಯಸುತ್ತಾರೆ. ಇಂದು ಮುಂಜಾನೆಯೇ ಕುಂದಾಪುರ ಪೇಟೆಯ ಪ್ಯಾನ್ಸಿ ಅಂಗಡಿಯ ಮುಂಭಾಗದಲ್ಲಿ ಯಾರೋ ಕಿಡಿಗೇಡಿಗಳಿಂದಾಗಿ ಎದುರಾದ ಕಂಟಕವೊಂದು ಅಂಗಡಿಯ ಮಾಲಿಕರನ್ನು ಕ್ಷಣಕಾಲ ವಿಚಲಿತರಾಗುವಂತೆ ಮಾಡಿತ್ತಾದರೂ ಅಲ್ಲಿಗೆ ವಿಜ್ಞಾನದ ಶಿಕ್ಷಕರೊರ್ವದಿಂದ ಪರಿಸ್ಥಿತಿ ತಿಳಿಯಾಯಿತು. ಏನಿದು ಘಟನೆ? ಕುಂದಾಪುರದ ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ, ಬ್ಯೂಟಿ ಕ್ವೀನ್ ಅಂಗಡಿ ಮಾಲಕ ಹುಸೇನ್ ಹೈಕಾಡಿ ಎಂಬುವರ ಎಂದಿನಂತೆಯೇ ಶಟರ್ ಎಳೆದು ಅದರ ಬಲಭಾಗದಲ್ಲಿ ಬೀಗ ಹಾಕಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದರೆ, ಶಟರಿನ ಎಡಭಾಗದಲ್ಲಿ ಒಂದು ಬೊಂಡವನ್ನಿಟ್ಟು, ಅದರ ಮೇಲೊಂದು ನಿಂಬೆ ಹಣ್ಣು ಇಡಲಾಗಿತ್ತು. ಮೂರೂ ಬದಿಗೆ ಬೊಂಡದ ಸುತ್ತ ಮೂರು ನಿಂಬೆ ಹಣ್ಣು ಇಡಲಾಗಿತ್ತು. ಕುಂಕುಮ ಮತ್ತು ಅರಶಿನಪುಡಿ ಚೆಲ್ಲಲಾಗಿತ್ತು. ಉರಿಸದ ಊದುಬತ್ತಿಯ ಕಟ್ಟನ್ನು ಶೆಟರ್‌ಗೆ ಸಿಕ್ಕಿಸಿಡಲಾಗಿತ್ತು. ಬೆಳಿಗ್ಗೆ ಸ್ಥಳೀಯ ಉಪನ್ಯಾಸಕರೊಬ್ಬರು ನಡೆದು ಬರುತ್ತಿದ್ದಾಗ ಗಮನಿಸಿ ಅಂಗಡಿ ಮಾಲೀಕರಿಗೆ ಸುದ್ಧಿ ಮುಟ್ಟಿಸಿದ್ದಾರೆ. ತಕ್ಷಣ ಅಂಗಡಿಗೆ ಬಂದ…

Read More