ಬೈಂದೂರು: ತಾಲೂಕಿನ ಉಪ್ಪುಂದ ಸಮೀಪದ ನಂದನವನ ಎಂಬಲ್ಲಿ ದುರಸ್ತಿಗಾಗಿ ವಿದ್ಯುತ್ ಟ್ರಾನ್ಸ್ಫರ್ಮರ್ ಹತ್ತಿದ ಲೈಮ್ಮೆನ್ ಒಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ರವಿರಾಜ್ ದವಾಖಾನೆ(33) ಮೃತ ದುರ್ದೈವಿ. ಘಟನೆಯ ವಿವರ: ಉಪ್ಪುಂದ ವ್ಯಾಪ್ತಿಯ ಕಟ್ಕೇರಿ ಎಂಬಲ್ಲಿ ವಿದ್ಯುತ್ ಇಲ್ಲದಿದ್ದುದರಿಂದ ಟ್ರಾನ್ಸ್ಫಾರ್ಮರ್ಗೆ ದುರಸ್ತಿಗಾಗಿ (ಪ್ಯೂಸ್ ಹಾಕಲು) ಮೇಲೆ ಹತ್ತಿದ್ದ ರವಿರಾಜ್ ದವಾಖಾನೆ ಆಯತಪ್ಪಿ ಒಮ್ಮೆಲೆ ಕೆಳಗೆ ಬಿದ್ದಿದ್ದಾರೆ. ಗಾಯಾಳು ಕೂಗಿಕೊಳ್ಳುವುದನ್ನು ಕೇಳಿ ಘಟನಾ ಸ್ಥಳಕ್ಕೆ ಓಡಿ ಬಂದ ಸ್ಥಳೀಯರೋರ್ವರು, ಕೂಡಲೇ ಅಂಬುಲೆನ್ಸ್ ಮೂಲಕ ಅವರನ್ನು ಬೈಂದೂರಿನ ಖಾಸಗಿ ಆಸ್ವತ್ರೆಯೊಂದಕ್ಕೆ ದಾಖಲಿಸಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ರವಿರಾಜ್ ದಾರಿಮಧ್ಯೆ ಕೊನೆಯುಸಿರೆಳೆದರು. ಬಾಗಲಕೋಟೆ ಮೂಲದವರಾದ ರವಿರಾಜ್ ಕಳೆದ ಎಪ್ರಿಲ್ ತಿಂಗಳಿನಲ್ಲಿ ಬೈಂದೂರು ಮೆಸ್ಕಾಂನಲ್ಲಿ ಲೈನ್ಮೆನ್ ಆಗಿ ಹೊಸದಾಗಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ಕೆಲವೇ ತಿಂಗಳುಗಳಲ್ಲಿ ಈ ದುರ್ಘಟನೆ ನಡೆದಿರುವುದು ಮನೆಯವರನ್ನು ಕಂಗಾಲಾಗಿಸಿದೆ. ಮೃತರು ಪತ್ನಿ ಹಾಗೂ ಎರಡು ವರ್ಷದ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ತಾಲೂಕಿನ ತಲ್ಲೂರು ಬಸ್ ನಿಲ್ದಾಣದಲ್ಲಿ ಕುಂದಾಪುರ ಬರಲು ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯೋರ್ವಳ ಕುತ್ತಿಗೆಯಿಂದ ಕರಿಮಣಿ ಸರವನ್ನು ಹರಿದ ಬೈಕಿನಲ್ಲಿ ಬಂದ ಆಗಂತುಕರು, ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂದು ಮಧ್ಯಾಹ್ನದ ವರದಿಯಾಗಿದೆ. ಘಟನೆಯ ವಿವರ: ಕುಂದಾಪುರ ತಾಲೂಕಿನ ನೇರಳಕಟ್ಟೆ ಹಿಲ್ಕೋಡುವಿನ ನಿವಾಸಿಯಾದ ತೇಜ ಗಾಣಿಗ ಹಾಗೂ ಅವರ ಪತ್ನಿ ಸೀತಾ ಗಾಣಿಗ ಎಂಬುವವರು ತಲ್ಲೂರಿನ ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆ ತೆರಳಿ ಅಲ್ಲಿಂದ ಕುಂದಾಪುರಕ್ಕೆ ತೆರಳುವ ಬಸ್ಸಿಗಾಗಿ ತಲ್ಲೂರಿನ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಅದೇ ವೇಳೆಗೆ ಅಲ್ಲಿಗೆ ಕಪ್ಪು ಬಣ್ಣದ ೨೨೦ ಸಿಸಿ ಪಲ್ಸರ್ ಬೈಕಿನಲ್ಲಿ ಬಂದ ಮಧ್ಯ ವಯಸ್ಸಿನ ಯುವಕರೀರ್ವರು ಒಮ್ಮೆಲೆ ಸೀತಾ ಗಾಣಿಗ ಅವರ ಕತ್ತಿಗೆಗೆ ಕೈ ಹಾಕಿ ಅವರ ಕರಿಮಣಿ ಸರವನ್ನು ಎಗರಿಸಿ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರಿಗೆ ಸರಗಳ್ಳತನದ ಮಾಹಿತಿ ದೊರಕುತ್ತಿದ್ದಂತೆ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ನಾಕಬಂಧಿ ಹಾಕಿ ನಿಂತಿದ್ದರು. ಆದರೆ ಅತಿವೇಗದಿಂದ ಬಂದ ಬೈಕ್ ಸವಾರರು ಅಲ್ಲಿಯೂ ಬೈಕ್ ನಿಲ್ಲಿಸದೇ ಪರಾರಿಯಾಗಿದ್ದಾರೆ.…
ಕುಂದಾಪುರ: ಅಂದಿನ ಗಾಂಧಾರದಿಂದ ಬ್ರಹ್ಮದೇಶದವರೆಗೆ ಜಗತ್ತಿನ ಅತ್ಯಂತ ಹೆಸರುವಾಸಿಯಾದ ಹಿಮಾಲಯದಿಂದ ಸಮುದ್ರದ ವರೆಗೆನ ಅಖಂಡ ಭೂಭಾಗವನ್ನು ಭಾರತ ಎಂದು ಕರೆಯುತ್ತಿದ್ದ ಅಂದಿನ ಭಾರತ ಹೇಗೆ ಅಖಂಡವಾಗಿತ್ತೋ, ಅದೇ ಭಾರತವನ್ನು ಮತ್ತೊಮ್ಮೆ ಕಟ್ಟುವ ಸಂಕಲ್ಪವೇ ಈ ಅಖಂಡ ಭಾರತ ಸಂಕಲ್ಪ ದಿನದ ಉದ್ಧೇಶ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು. ಕುಂದಾಪುರದ ಶ್ರೀ ಮಹಾದೇವಿ ಕುಂತಿಯಮ್ಮ ದೇವಸ್ಥಾನದ ಅಂಗಣದಲ್ಲಿ ತಲ್ಲೂರು ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಂಡ ಭಾರತ ಸಂಪಕಲ್ಪ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾಂತಂತ್ರ್ಯಾಪೂರ್ವದಲ್ಲಿ ಅಖಂಡ ಭಾರತದ ರಕ್ಷಣೆಗೆ ಬ್ರಿಟಿಷರ ವಿರುದ್ಧ ಭಾರತೀಯರೆಲ್ಲರೂ ಹೋರಾಟವನ್ನು ರೂಪಿಸಿದ್ದರೋ ಅದೇ ರೀತಿ ಹರಿದು ಹಂಚಿ ಹೋಗುತ್ತಿರುವ ಭಾರತಮಾತೆಯ ರಕ್ಷಣೆಗಾಗಿ ಪಣ ತೊಡಬೇಕಾಗಿದೆ. ದೇಶದ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸುವ ಹೋರಾಟಕ್ಕಾಗಿ ಸಿದ್ಧಗೊಳ್ಲಬೇಕಾದ ಅನಿವಾರ್ಯತೆ ಮತ್ತೆ ಭಾರತಕ್ಕೆ ಬಂದಿದೆ. ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಭಾರತೀಯರಾದ ನಾವೆಲ್ಲರೂ ಸಂಘಟಿತರಾಗುವತ್ತ ದೃಢ ಮನಸ್ಸು ಮಾಡಬೇಕಿದೆ ಎಂದರು.…
ಕುಂದಾಪುರ: ಆಗಸ್ಟ್ 1ರಂದು ಪುತ್ತೂರಿನಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಕ್ಷುಲಕ ಕಾರಣಕ್ಕೆ ಹಲ್ಲೆ ನಡೆಸಿದ ಆರೋಪಿಗಳಾದ ಮೊಹಮ್ಮದ್ ಇಕ್ಬಾಲ್ ಮತ್ತು ಸಹಚರರ ವಿರುದ್ಧ ದೂರು ದಾಖಲಾದರೂ ಈವರೆಗೆ ಬಂದಿಸಿಲ್ಲ. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಕುಂದಾಪುರ ಐಎಂಎ ಆಗ್ರಹಿಸಿದೆ. ಈ ಸಂಬಂಧ ಪುತ್ತೂರು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮತ್ತು ವೈದ್ಯರ ವೇದಿಕೆ ವೃತ್ತಿ ಬಾಂಧವರು ಕೆಲಸ ಕಾರ್ಯ ಸ್ಥಗಿತಗೊಳಿಸಿ, ಪ್ರತಿಭಟಿಸುತ್ತಿರುವುದಕ್ಕೆ ಕುಂದಾಪುರ ಶಾಖೆಯು ಬೆಂಬಲ ವ್ಯಕ್ತ ಪಡಿಸಿದ್ದು, ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬಳಿಕ ಕುಂದಾಪುರ ಶಾಖೆ ತಹಶೀಲ್ದಾರರ ಮೂಲಕ ಮನವಿಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಸಲ್ಲಿಸಿತು. ಕುಂದಾಪುರ ಐಎಂಎ ಶಾಖೆಯ ಅಧ್ಯಕ್ಷರಾದ ಡಾ.ಮೋಹನ ಕಾಮತ್, ಕಾರ್ಯದರ್ಶಿ ಡಾ.ರಂಜಿತ್ ಹೆಗ್ಡೆ, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಂದಾಪುರ: ಇಲ್ಲಿನ ಮಹಿಳಾ ಪೊಲೀಸ್ ರಾಣೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ತಾಲೂಕಿನ ಮಹಿಳಾ ಮಿತ್ರ ಹಾಗೂ ಮಕ್ಕಳ ಮಿತ್ರದ ಪ್ರತಿನಿಧಿಗಳು ಹಾಗೂ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಸದಸ್ಯರು ಕುಂದಾಪುರ ವಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಮಿತ್ರ ಕಾರ್ಯಕರ್ತ ಹಾಗೂ ಬೀಜಾಡಿ ಗ್ರಾ.ಪಂ ಸದಸ್ಯ ರವೀಂದ್ರ ದೊಡ್ಮನೆ ಮಾತನಾಡಿ ಕುಂದಾಪುರದಲ್ಲಿ ಮಹಿಳಾ ಠಾಣೆ ಇರುವುದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿದೆ. ತಾಲೂಕು ಕೇಂದ್ರದಲ್ಲಿಯೇ ಠಾಣೆ ಇರುವಾಗ ಮಹಿಳೆಯರು ದೂರನ್ನು ನೀಡಲು ಹಿಂಜರಿಯುತ್ತಾರೆ. ಹೀಗಿರುವಾಗ ಜಿಲ್ಲಾ ಕೇಂದ್ರಕ್ಕೆ ಠಾಣೆಯನ್ನು ಸ್ಥಳಾಂತರಿಸುವುದು ಸರಿಯಲ್ಲ. ವರ್ಗವಣೆಯ ಹುನ್ನಾರ ಮುಂದುವರಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಗೊಳಿಹೊಳೆ ಗ್ರಾಮದ ಮಕ್ಕಳ ಮತ್ತು ಮಹಿಳಾ ಮಿತ್ರ ದೇವಿ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಠಾಣೆಯನ್ನು ವರ್ಗಾಯಿಸುವುದು ಸಮಂಜಸವಲ್ಲ. ಬದಲಿಗೆ ಗಾಮಾಂತರ ಪ್ರದೇಶದಲ್ಲಿ ಮಹಿಳಾ ಠಾಣೆಯನ್ನು…
ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಗಳಿಗೆ ಪರವಾನಿಗೆ ನೀಡುವುದನ್ನು ವಿರೋಧಿಸಿ ಇಲ್ಲಿನ ಗ್ರಾಮಸ್ಥರು ಕಾಳವಾರ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಯನ್ನು ಆರಂಭಿಸಲು ನಿಯೋಜಿಸಿದ ಸ್ಥಳಕ್ಕೆ ಸಮೀಪದಲ್ಲಿ ಅಂಗನವಾಡಿ ಹಾಗೂ ಶಾಲೆ ಇದೆ. ಬಸ್ ನಿಲ್ದಾಣವೂ ಸಮೀಪದಲ್ಲಿದ್ದು ಶಾಲೆಗೆ ತೆರಳುವ ಈ ಮಾರ್ಗದ ಮೂಲಕವೇ ಸಾಗುವುದರಿಂದ ಅವರ ಮೇಲೆಯೂ ದುಷ್ಪರಿಣಾಮ ಬೀರಲಿದೆ. ಮಧ್ಯದಂಗಡಿಯನ್ನು ಆರಂಭಿಸುವುದಕ್ಕೆ ನಮ್ಮ ನಂಪೂರ್ಣ ವಿರೋಧವಿದ್ದು ಒಂದು ವೇಳೆ ಮಧ್ಯದಂಗಡಿ ಆರಂಭಗೊಂಡರೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕಾಳಾವರ, ಆಸೋಡು, ವಕ್ವಾಡಿಯ ಗ್ರಾಮಸ್ಥರು, ಕಾಳಾವರದ ನೇತಾಜಿ ಯುವಕ ಮಂಡಲ ಹಾಗೂ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಸದಸ್ಯರುಗಳು ಭಾಗವಹಿಸಿದ್ದರು. ಬಳಿಕ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕರು ಹಾಗೂ ಪಿಡಿಒಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ: ಇಂದಿಗೆ ಬರೋಬ್ಬರೀ 33 ವರ್ಷಗಳ ಕೆಳಗೆ ಅಮಾಯಕ ವಿದ್ಯಾರ್ಥಿಯಾಗಿ, ಕುಂದಾಪುರದಲ್ಲಿಯೇ ಶಾಲೆಗೆ ಹೋಗಿ ಹೊತ್ತಲ್ಲದ ಹೊತ್ತಿನಲ್ಲಿ ಕುಂದಾಪುರದ ಅಂಗಳವನ್ನು ದಾಟಿದ ಬಾಲಕನೋರ್ವ ಕಾಲನ ಬರ್ಬರ ಹಿತ್ತಲಿನಲ್ಲಿ ಹಜ್ಜೆಯಿಕ್ಕಿ ರಕ್ತ ರಂಜಿತ ಭೂಗತ ಲೋಕದ ಅನಭಿಷಿಕ್ತ ರಾಜನಾಗಿ ಎರಡೂ ಕೈಗಳಿಗೆ ಪಾತಕ ಪ್ರಪಂಚದ ನೆತ್ತರನ್ನು ಅಂಟಿಸಿ ಕೊಂಡು ಇದೀಗ ಪೋಲಿಸರ ಬಂಧಿಯಾಗಿ ಗುರುತು ಸಿಗದಂತೇ ಬದಲಾಗಿ ಹೋಗಿದ್ದಾನೆ. ಒಂದು ಕಾಲದ ಅಮಾಯಕ ಬಾಲಕ, ನಂತರದ ಸುಂದರ ಸುರದ್ರೂಪಿ ಯುವಕ ಇವನೇನಾ ಅಂತಾ ಕುಂದಾಪುರ ಮಾತನಾಡಿಕೊಳ್ಳುತ್ತಿದೆ. ಬನ್ನಂಜೆ ರಾಜ ಗುರತೇ ಸಿಗದಂತೆ ಬದಲಾಗಿದ್ದಾನೆ. ಮೊರಕ್ಕೋದಲ್ಲಿ ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಶುಕ್ರವಾರ ಬೆಳಗಾವಿಗೆ ಕರೆತರಲಾದ ಬನ್ನಂಜೆ ರಾಜ(47)ನನ್ನು ಶನಿವಾರ ಉಡುಪಿಗೆ ಕರೆತಂದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕುಂದಾಪುರದ ನಂಟು: ಕಂದಾಯ ಇಲಾಖೆಯಲ್ಲಿ ನೌಕರರಾಗಿದ್ದ ಸುಂದರ ಶೆಟ್ಟಿಗಾರ್ ಹಾಗೂ ಶಿಕ್ಷಕಿಯಾಗಿದ್ದ ವಿಲಾಸಿನಿ ದಂಪತಿಗಳ ಮೂವರು ಗಂಡು ಮಕ್ಕಳಲ್ಲಿ ಕೊನೆಯವನು ರಾಜೇಂದ್ರ ಕುಮಾರ್ ಯಾನೆ ಬನ್ನಂಜೆ ರಾಜ. ಅವರದ್ದು ಸಭ್ಯ ಕುಟುಂಬ. ತಾಯಿಯ ವರ್ಗವಣೆಯಾದಂತೆಲ್ಲಾ ಮಕ್ಕಳೂ…
ಕುಂದಾಪುರ: ಸಂಘ-ಸಂಸ್ಥೆಯನ್ನು ಬೆಳೆಸುವುದಷ್ಟೇ ಅಲ್ಲದೇ, ಸಮಾಜದ ಬಡವರ ಕುರಿತು ಕಳಕಳಿಯನ್ನು ಹೊಂದಿ ಅವರನ್ನು ಪ್ರೋತ್ಸಾಹಿಸುವುದು ಕೂಡ ಮುಖ್ಯವಾಗುತ್ತದೆ ಎಂದು ಸಹಕಾರಿ ಯೂನಿಯನ್ ನ ಅಧ್ಯಕ್ಷ ಕಿಶನ್ಕುಮಾರ್ ಹೆಗ್ಡೆ ಕೊಳ್ಕೆಬೈಲು ಹೇಳಿದರು. ಅವರು ಕೋಟೇಶ್ವರದ ಅಂಬಿಕಾ ಬಿಲ್ಡಿಂಗ್ನಲ್ಲಿ ನೂತನವಾಗಿ ಆರಂಭಗೊಂಡ ದೇವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ದೇಶಕ್ಕೆ ಕಾನೂನು ಸಚಿವರು, ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟದ್ದು ದೇವಾಡಿಗ ಸಮಾಜ ಎಂದ ಅವರು, ದೇವಬಂಧು ಸಹಕಾರಿ ಸಂಘ ಆರಂಭದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನೊಳಗೊಂಡು ಆರಂಭಗೊಳ್ಳುತ್ತಿರುವುದು ದಾಖಲೆಯೇ ಸರಿ ಎಂದರು. ವಿಧಾನ ಪರಿಷತ್ ಸದಸ್ಯ ದೇವಬಂಧು ಸಹಕಾರಿ ಸಂಘದ ಕಟ್ಟಡವನ್ನು ಲೋಪಾರ್ಪಣೆಗೊಳಿಸಿದರು. ಪಂಚಗಂಗಾವಳಿ ಸಹಕಾರಿ ಸಂಘದ ಅಧ್ಯಕ್ಷರಾದ ರಾಜು ದೇವಾಡಿಗ ಠೇವಣಿ ಪ್ರಮಾಣಪತ್ರವನ್ನು ವಿತರಿಸಿದರು. ಜಿಲ್ಲಾ ಪಂಚಯತ್ ಸದಸ್ಯ ಗಣಪತಿ ಶ್ರೀಯಾನ್ ಗಣಕಯಂತ್ರ ಉದ್ಘಾಟಿಸಿದರು. ಕೊಳ್ಕೆಬೈಲು ಕಿಶನ್ಕುಮಾರ್ ಹೆಗ್ಡೆ ಭದ್ರತಾಕೋಶವನ್ನು ಉದ್ಘಾಟಿಸಿದರು. ಅರಣ್ಯ ಇಲಾಖೆಯ ನೌಕರರ ಮಹಾಮಂಡಲದ ಅಧ್ಯಕ್ಷ ಆಲೂರು ರಘುರಾಮ ದೇವಾಡಿಗ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಕುಂದಾಪುರ ಶಾಸಕ…
ಕುಂದಾಪುರ: ತಾಲೂಕಿನ ದೇವಲ್ಕುಂದ ಆರೋಗ್ಯ ಉಪ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ (28) ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಕಿಗೆ ಬಂದಿದೆ. ಮೂಲತಃ ಚಿತ್ರದುರ್ಗದ ಎ.ಎಸ್.ಐ ಕೆಂಚರಪ್ಪ ಅವರ ಮಗನಾದ ಕಿರಣ, ತಾನು ಪ್ರೀತಿಸುತ್ತಿದ್ದ ಹುಡುಗಿ ತನನ್ನು ತಿರಸ್ಕರಿಸಿದ್ದಾಳೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. 2009ರಲ್ಲಿ ಆರೋಗ್ಯ ಇಲಾಖೆಯ ನೌಕರನಾಗಿ ಗಂಗೊಳ್ಳಿಗೆ ನೇಮಕಗೊಂಡಿದ್ದ ಕಿರಣ್, ಕಳೆದ ಒಂದು ವರ್ಷದ ಹಿಂದಷ್ಟೇ ದೇವಲ್ಕುಂದದ ಉಪ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ವರ್ಗವಣೆಗೊಂಡಿದ್ದರು. ಆರೋಗ್ಯ ಕೇಂದ್ರದ ಬಳಿಯೇ ಇದ್ದ ವಸತಿಗೃಹದಲ್ಲಿ ಅವರು ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿರಣ್, ಮಧ್ಯಾಹ್ನದವರೆಗೆ ಸಹೋದ್ಯೊಗಿಗಳೊಂದಿಗೆ ಕಾಲ ಕಳೆದು ಬಳಿಕ ದೇವಲ್ಕುಂದದ ವಸತಿ ಗೃಹಕ್ಕೆ ತೆರಳಿದ್ದರು. ರಾತ್ರಿಯ ವರೆಗೆ ವಸತಿಗೃಹದಲ್ಲಿಯೇ ತಂಗಿದ್ದ ಕಿರಣ್ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವತ್ತು ಬೆಳಿಗ್ಗೆ ಆಶಾ ಕಾರ್ತಕರ್ತೆಯೊಬ್ಬರು…
