ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಭಾರತ್ ಸ್ಕೌಟ್ಸ್-ಗೈಡ್ಸ್ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಜಾಂಬೂರಿಯ ತಯಾರಿ ಕೊನೆಯ ಹಂತದಲ್ಲಿದ್ದು, ದೇಶದ ವಿವಿಧ ಭಾಗಗಳ ಸೌಟ್ಸ್. ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್ ಪ್ರತಿನಿಧಿಗಳ ತಂಡ ಮೂಡುಬಿದಿರೆಯನ್ನು ತಲುಪಿವೆ. ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಬೃಹತ್ ನೋಂದಾವಣೆಯ ಬಳಿಕ ವಿದ್ಯಾರ್ಥಿಗಳನ್ನು ಜಿಲ್ಲೆ ಹಾಗೂ ತಾಲೂಕುಗಳಿಗೆ ಅನುಗುಣವಾಗಿ ವಿಂಗಡಿಸಿ, ವಿವಿಧ ಬ್ಲಾಕ್ಗಳಲ್ಲಿ ವಸತಿ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಪ್ರತಿ ಬ್ಲಾಕ್ಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನಿರ್ವಾಹಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ಕಿಟ್ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ೭ ದಿನಗಳಿಗೆ ಅಗತ್ಯವಿರುವ ಅಗತ್ಯ ಕಿಟ್ನ್ನು ಒದಗಿಸಲಾಗುವುದು. ಈ ಕಿಟ್ ಬ್ಯಾಗ್, ನೀರಿನ ಬಾಟಲಿ, ಬರೆಯುವ ಪುಸ್ತಕ, ಪೆನ್ ಸೇರಿದಂತೆ ೧೫ ಸಾಮಾಗ್ರಿಗಳನ್ನು ಒಳಗೊಂಡಿದೆ. ಹಬ್ಬದಡುಗೆಯ ಘಮ..!ಹಸಿದ ಹೊಟ್ಟೆಯನ್ನು ತಣಿಸಲು ಮೊದಲ ದಿನದಿಂದಲೇ ಮುಂಜಾನೆ ೪ ಗಂಟೆಗೆ ರುಚಿಯಾದ ಉಪಹಾರ ಹಾಗೂ ಭೋಜನಕ್ಕೆ ಸಿದ್ಧತೆ ನಡೆಯುತ್ತಿದೆ. ನುರಿತ ಬಾಣಸಿಗರ ತಂಡ ಸಮಯಕ್ಕೆ ಸರಿಯಾಗಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 500 ಕ್ವಿಂಟಾಲ್ ಅಕ್ಕಿಯನ್ನು ಹಸ್ತಾಂತರಿಸಲಾಯಿತು. ಮಾಣಿಲ ಮೋಹನ್ ದಾಸ್ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳ, ಹರ್ಷೇಂದ್ರ ಕುಮಾರ್ ಡಾ.ಎಂ ಮೋಹನ ಆಳ್ವ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕರಾವಳಿಯಿಂದ ಕೊಡಚಾದ್ರಿಯ ತಪ್ಪಲಿನ ತನಕದ ಪುಣ್ಯಭೂಮಿಯಲ್ಲಿ, ಆಸ್ತಿಕ ಬಂಧುಗಳ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ದೈವೀಶಕ್ತಿಗಳು ಅನೇಕಾನೇಕ. ಹೀಗೆ ಸಮೃದ್ಧ ಕೃಷಿ ಭೂಮಿಯ ಹಸಿರು ಹೊದಿಕೆ ನಡುವೆ ನೆಲೆನಿಂತು, ಭಕ್ತವರ್ಗವನ್ನು ಪೊರೆಯುತ್ತಿರುವ ಕಾರಣಿಕ ಸನ್ನಿಧಿಗಳಲ್ಲೊಂದು ಶ್ರೀ ಕ್ಷೇತ್ರ ತೆಂಕಬೆಟ್ಟುವಿನ ಶ್ರೀ ಕಾಲಭೈರವ ದೇವಸ್ಥಾನ. ಸನಾತನ ಹಿಂದೂ ಸಂಸ್ಕೃತಿಯ ಪ್ರತಿಪಾದರಾದ ನಾಥಪಂಥದ ಪರಮಪೂಜ್ಯ ಗುರು ಶ್ರೀ ಮತ್ಸೇಂದ್ರನಾಥರು ಹಾಗೂ ಶ್ರೀ ಗೋರಕ್ಷನಾಥರ ಆಶೀರ್ವಾದದೊಂದಿಗೆ ನಾಥಪಂಥದ ಗುರುಗಳಿಂದಲೇ ಸುಮಾರು 800 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ಸನ್ನಿಧಿಯೇ ಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನ. ಬೈಂದೂರು ತಾಲೂಕು ಕಂಬದಕೋಣೆ ಗ್ರಾಮದ ಹಳಗೇರಿಯಲ್ಲಿ, ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹಾಗೂ ನಾಗೂರು ಪೇಟೆಯಿಂದ 1 ಕಿ.ಮೀ ದೂರದಲ್ಲಿ ಶ್ರೀ ಕಾಲಭೈರವನ ಸಾನಿಧ್ಯವಿದೆ. ಶ್ರೀ ಕಾಲಭೈರವ ದೇವಸ್ಥಾನವು ದಕ್ಷಿಣ ಭಾರತದ ನಾಥ ಪಂಥದ ಮೂಲ ಮಠವಾದ ಕದ್ರಿ ಜೋಗಿ ಮಠ, ಯಡಮೊಗೆಯ ಶ್ರೀ ಕ್ಷೇತ್ರ ಸಿದ್ಧಪೀಠ ಕೊಡಚಾದ್ರಿ ಹಲವರಿ ಮಠಕ್ಕೆ ಸಂಬಂಧಿಸಿದ್ದಾಗಿದ್ದು, ಐತಿಹ್ಯವುಳ್ಳ ಕ್ಷೇತ್ರವಾಗಿದೆ. ಇಲ್ಲಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಹುನಿರೀಕ್ಷಿತ ಸಿನೆಮಾ ‘ಇನಾಮ್ದಾರ್’ ಚಿತ್ರೀಕರಣ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಬರಲಿದೆ. ಕರಾವಳಿಯ ಕನಸು ಕಂಗಳ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸಿದ್ದಪಡಿಸಿದ ಕಥೆಯನ್ನು ತೆರೆಯ ಮೇಲೆ ತರುವ ನಿಟ್ಟಿನಲ್ಲಿ ಐದು ತಿಂಗಳುಗಳ ಕಾಲ ಬಯಲು ಸೀಮೆಯಿಂದ ಹಿಡಿದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ತನಕ ಚಿತ್ರೀಕರಣದಲ್ಲಿ ತೊಡಗಿ ಸಾಕಷ್ಟು ಶ್ರಮವಹಿಸಿದ್ದಾರೆ. ನಿರ್ದೇಶಕರ ಆಸೆಗೆ ಮತ್ತು ಶ್ರಮಕ್ಕೆ ಪೂರಕವಾಗಿ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು. ಸಾಥ್ ನೀಡುವುದರ ಜೊತೆಗೆ 24/7 ನಿರ್ದೇಶಕರ ಬೆನ್ನೆಲುಬಾಗಿ ನಿಂತಿರುವುದು ಚಿತ್ರತಂಡದ ಸಂತಸ ಕ್ಕೆ ಕಾರಣವಾಗಿದೆ. ಮೂಲತಃ ಯೋಗ ಪಟುವಾಗಿರುವ ನಿರಂಜನ್ ಶೆಟ್ಟಿ ತಲ್ಲೂರು ಈಗಾಗಲೆ ತಮ್ಮ ಅದ್ಬುತ ಯೋಗ ಭಂಗಿಗಳ ಮೂಲಕ ವಿಶ್ವ ದಾಖಲೆ ಮಾಡಿದ್ದು, ಹೊಸ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ, ಹೊಸತನಕ್ಕೆ ಹಾರೈಸುವ ಅದ್ಭುತ ವ್ಯಕ್ತಿ ಎನ್ನುವುದು ಚಿತ್ರ ತಂಡದ ಹೇಳಿಕೆಯಾಗಿದೆ. ಇನ್ನು ಇನಾಮ್ದಾರ್ ಕಥೆಗೆ ಪೂರಕವಾದ ಫ್ರೇಮ್ ಮೂಲಕ ಕಣ್ಣಿಗೆ ಕಟ್ಟಿಕೊಡುವ ರೀತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.8: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾಲುಸಂಕದಿಂದ ಆಯತಪ್ಪಿ ಹಳ್ಳಕ್ಕೆ ಬಿದ್ದ ಬಾಲಕಿ ಸನ್ನಿಧಿಗಾಗಿ, ಎಡಮಾವಿನ ಹೊಳೆಯಲ್ಲಿ ಶೋಧಕಾರ್ಯ ಮುಂದುವರಿದಿದೆ. ಚಪ್ಪರಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮನೆಗೆ ತೆರಳುತ್ತಿದ್ದಾಗ, ಶಾಲೆಗೆ ಸಮೀಪದ ಬಿಜಮಕ್ಕಿ ಎಂಬಲ್ಲಿ ಕಾಲು ಸಂಕ ದಾಟುವಾಗ ಬಾಲಕಿ ಆಯಾತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ. ಈ ಹಳ್ಳ ಎಡಮಾವಿನ ಹೊಳೆ ಸೇರುತ್ತಿದ್ದು, ವಿಷಯ ತಿಳಿದ ತಕ್ಷಣ ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದರು. ನಿತ್ಯವೂ ಬೊಳ್ಳಂಬಳ್ಳಿ ಭಾಗದಿಂದ ಚಪ್ಪರಿಕೆ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ತೆರಳುತ್ತಿದ್ದು, ಮಳೆ ಹೆಚ್ಚಿದ್ದರಿಂದ ಬೇಗನೆ ಶಾಲೆ ಬಿಡಲಾಗಿತ್ತು. ಶಾಲೆಯ ಸಮೀಪವೇ ಇದ್ದ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಸ್ಥಳೀಯರೊರ್ವರು ಮಕ್ಕಳನ್ನು ಕಾಲುಸಂಕ ದಾಟಲು ನೆರವಾಗಿದ್ದಾರೆ. ಮೂವರು ವಿದ್ಯಾರ್ಥಿಗಳ ಕಾಲುಸಂಕ ದಾಟಿದ್ದು, ಸನ್ನಿಧಿ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲು ಜಾರಿದೆ. ಹಿಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ತೇಲಿ ಹೋಗಿದ್ದಾಳೆ ಎನ್ನಲಾಗಿದೆ. ಮುಂದುವರಿದ ಶೋಧ ಕಾರ್ಯ:ನಾಪತ್ತೆಯಾಗಿರುವ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು,…
ಕುಂದಾಪ್ರ ಡಾಟ್ ಕಾಂ ಲೇಖನ.ಮರವಂತೆ ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿಷ್ಣು ಹಾಗೂ ಶ್ರೀ ವಿಷ್ಣುವಿನ ದಶವತಾರಗಳಲ್ಲಿ ಎರಡು ಮುಖ್ಯ ಅವತಾರಗಳಾದ ಶ್ರೀ ವರಾಹ ಮತ್ತು ಶ್ರೀ ನರಸಿಂಹ ದೇವರು ಈ ಮೂರು ದೇವರ ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿ ಸಾಲಾಗಿ ಸ್ಥಾಪಿಸಲ್ಪಟ್ಟಿರುವುದು ಈ ದೇವಾಲಯದ ವೈಶಿಷ್ಟ್ಯ. ಮೂರು ಮೂರ್ತಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿದ್ದರೂ ಎಡನಾಳಿ ಮತ್ತು ಮುಖಮಟಂಪ ಮಾತ್ರ ಒಂದೇ. ಮೂರು ದೇವರಿಗೆ ಆಗಮವಿದೆಯಂತೆ ಹಗಲು ಮತ್ತು ರಾತ್ರಿ ಪೂಜೆ ನಡೆಯುತ್ತದೆ. ಭರತ ಭೂಮಿಯಲ್ಲಿನ ಏಳು ವರಾಹ ದೇವಸ್ಥಾನಗಳಲ್ಲಿ ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನವು ಒಂದೇನಿಸಿಕೊಂಡಿದೆ. ದೇವಳದ ಐತಿಹ್ಯ:ಮರವಂತೆ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಕ್ಷೇತ್ರ. ಗತ ಪೂರ್ವದಲ್ಲಿ ದೇವೇಂದ್ರನು ಗೌತಮ ಮುನಿಯ ಪತ್ನಿ ಅಹಲ್ಯೆಯಲ್ಲಿ ಕಾಮಾತುರನಾಗಿ ಗೌತಮ ಋಷಿಯ ಶಾಪಕ್ಕೀಡಾಗಿ ಭೂಲೋಕದ ಸೌಪರ್ಣಿಕ ನದಿಯ ತಟದಲ್ಲಿ ವಾಸಿಸುತ್ತಿದ್ದನು. ಆ ಸಮಯದಲ್ಲಿ ಗುಹೇಶ್ವರ ಲಿಂಗವನ್ನು ಪೂಜಿಸಿ, ತಪಸ್ಸು ಮಾಡುತ್ತಾ, ಸಮಯ ಕಳೆದ ದೇವೇಂದ್ರನು ಶಾಪ ವಿಮುಕ್ತಿಯಾದ ನಂತರ ಬ್ರಹಸ್ಪತಿ…
ಕುಂದಾಪ್ರ ಡಾಟ್ ಕಾಂ ವರದಿ.ಬೈಂದೂರು: ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ಬುಧವಾರ ಸಂಜೆ ನಡೆದ ಭೀಕರ ಅಪಘಾತ ಸಾರ್ವಜನಿಕರ ಎದೆ ನಡುಗಿಸಿದೆ. ಟೋಲ್ ಪ್ಲಾಜಾದಲ್ಲಿನ ಸಣ್ಣ ಎಡವಟ್ಟು, ಅಂಬುಲೆನ್ಸ್ ವೇಗ ನಾಲ್ಕು ಜೀವಗಳನ್ನು ಬಲಿಪಡೆದುಕೊಳ್ಳುವಂತಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟ ವ್ಯಕ್ತಿಯೊಂದಿಗೆ ಆತನ ಬಂಧುಗಳೂ ಮಸಣ ಸೇರುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ನಿರ್ವಹಣಾ ಕಂಪೆನಿಯ ಎಡವಟ್ಟುಗಳು ಹೆದ್ದಾರಿಯನ್ನು ಮೃತ್ಯುಕೂಪವನ್ನಾಗಿಸುತ್ತಿದೆ. ಆಗಿದ್ದೇನು?ಹೊನ್ನಾವರದ ಹಾಡಗೇರಿ ಸಮೀಪದ ಹೋಟೆಲಿನಲ್ಲಿ ನೌಕರನಾದ್ದ ಗಜಾನನ ಗಣಪ ನಾಯ್ಕ್ ಎಂಬುವವರಿಗೆ ಬುಧವಾರ ಮಧ್ಯಾಹ್ನದ ವೇಳೆ ಹೈಬಿಪಿ ಹಾಗೂ ವಾಂತಿ ಕಾಣಿಸಿಕೊಂಡು ಅನಾರೋಗ್ಯಕ್ಕೀಡಾಗಿದ್ದರಿಂದ ಹೊನ್ನಾವರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚನೆ ನೀಡಿದ್ದರು. ಅದರಂತೆ ಅಂಬ್ಯುಲೆನ್ಸ್ ಮೂಲಕ ಗಜಾನನ ನಾಯ್ಕ್ ಅವರ ಪತ್ನಿ, ಸಂಬಂಧಿಗಳು ಹಾಗೂ ಸ್ನೇಹಿತರು ಗಜಾನನ ನಾಯ್ಕ್ ಅವರನ್ನು ಕರೆದುಕೊಂಡು ಉಡುಪಿಗೆ ಹೊರಟಿದ್ದರು. ಸಂಜೆ ನಾಲ್ಕು ಗಂಟೆ ವೇಳೆಗೆ (04:07pm) ಅಂಬ್ಯುಲೆನ್ಸ್ ಶಿರೂರು ಟೋಲ್ ಪ್ಲಾಜಾ ತಲುಪಿದೆ.…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕುಂದಾಪುರ ನೆಲದ ಭಾಷೆ ಕುಂದಾಪ್ರ ಕನ್ನಡದ ಅಭಿವೃದ್ಧಿ ಹಾಗೂ ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದ್ದು, ಕುಂದಾಪ್ರ ಕನ್ನಡ ಭಾಷೆಯ ಉಳಿವು, ಪ್ರಸರಣ ಹಾಗೂ ದಾಖಲಾತಿ ದೃಷ್ಟಿಯಿಂದ ದಶಕಗಳ ಬೇಡಿಕೆಗೆ ಜೀವಕಳೆ ಬಂದಂತಾಗಿದೆ. ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಕ್ಕೆ ಕಳೆದೆರಡು ವರ್ಷಗಳಿಂದ ಹೆಚ್ಚಿನ ಆಸ್ಥೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಆರಂಭದಲ್ಲಿ ವಿಶ್ವ ವಿದ್ಯಾನಿಲಯದ ಆಂತರಿಕ ಸಂಪನ್ಮೂಲದಿಂದ ರೂ.25 ಲಕ್ಷ ಹಣವನ್ನು ಮೀಸಲಿರಿಸಲಾಗಿದ್ದು, ಸರಕಾರದ ಅನುದಾನವನ್ನು ನಿರೀಕ್ಷಿಸಲಾಗಿದೆ. ಕುಂದಾಪ್ರ ಕನ್ನಡದಲ್ಲಿ ಸಾಹಿತ್ತಿಕ ಚಟುವಟಿಕೆಗಳು, ತುಲನಾತ್ಮಕ ಅಧ್ಯಯನ, ಸಂಶೋಧನೆ, ವಿಚಾರ ಸಂಕೀರಣ, ಭಾಷಾ ಬೆಳವಣಿಗೆಗೆ ಪೂಕರ ಕಾರ್ಯಕ್ರಮಗಳು, ಈ ನೆಲದ ಐತಿಹ್ಯವನ್ನು ಬೆಳಕಿಗೆ ತರುವ ಕಾರ್ಯಚಟುವಟಿಕೆಗಳು ಸೇರಿದಂತೆ ಹಲವು ವಿಚಾರಗಳು ಅಧ್ಯಯನ ಪೀಠದ ಮೂಲಕ ನಡೆಯಲಿದೆ. ಕುಂದಾಪ್ರ ಡಾಟ್ ಕಾಂ ವರದಿ. ಅಧ್ಯಯನ ಪೀಠ ಕುಂದಾಪುರದಲ್ಲಿಯೇ ಆಗಲಿ:ಮಂಗಳೂರು ವಿಶ್ವವಿದ್ಯಾನಿಲಯ…
ಶಿಕ್ಷಕ, ಸಂಘಟಕ, ಸಾಹಿತಿ ನರೇಂದ್ರ ಕುಮಾರ್ ಕೋಟ ಅವರೊಂದಿಗೆ ಕುಂದಾಪ್ರ ಡಾಟ್ ಕಾಂ ಸಂದರ್ಶನ
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ,ಜೂ.15: ಲಾಂಗ್ ರೈಡ್ಗೆ ತೆರಳೋದು ಪ್ರತಿಯೊಬ್ಬ ಬೈಕರ್ಗಳ ಕನಸು. ಸ್ನೇಹಿತರ ಪಡೆ ಜೊತೆಯಾದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ ರೈಡಿಂಗ್ ಅನುಭವ. ಹೀಗೆ ಕುಂದಾಪುರದಿಂದ ಆರಂಭಿಸಿ ಭಾರತದ ಸ್ವರ್ಗ ಲೇಹ್ ಸೇರಿದಂತೆ ಲಡಾಕ್ ನಗರದ ವಿವಿಧ ಪ್ರವಾಸ ತಾಣಗಳ ಸುತ್ತುತ್ತಾ ಕುಂದಾಪ್ರ ಕನ್ನಡದಲ್ಲಿಯೇ ವ್ಲಾಗಿಂಗ್ (Vlogging) ಅನುಭವಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ ಕೊಲ್ಲೂರಿನ ಯುವಕ ಜಿತೇಂದ್ರ ಕುಮಾರ್. ತನ್ನ ರಾಯಲ್ ಎನ್ಫಿಲ್ಡ್ ಹಿಮಾಲಯನ್ ಬೈಕಿನಲ್ಲಿ ಛಂಡಿಗಡ್ ಮಾರ್ಗವಾಗಿ ತೆರಳಿ ಇಂದು ಲೇಹ್ ತಲುಪಿರುವ ಜಿತೇಂದ್ರ, ಭಾರತದ ಎತ್ತರದ ಮೋಟೋರೆಬಲ್ ತಾಣವಾದ ಕಾರ್ದುಂಗ್ಲಾ ಲಾ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ತೆರಳಿ ಬಳಿಕ ಶ್ರೀನಗರ ಮೂಲಕ ಮರಳಿ ಊರಿನ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಕುಂದಾಪ್ರ ಕನ್ನಡದ ಮೋಟೋ ವ್ಲಾಗರ್:ಜಿತೇಂದ್ರ ಕುಮಾರ್ ವ್ಲಾಗಿಂಗ್ ಹವ್ಯಾಸ ಹೊಂದಿದ್ದು, ಆಗಾಗ್ಗೆ ಸೋಲೋ ಹಾಗೂ ಸ್ನೇಹಿತರೊಂದಿಗೆ ಮೊಟೋ ವ್ಲಾಗ್ (Youtube: Jini on Wheels) ಮಾಡುತ್ತಿರುತ್ತಾರೆ. ಅವರ ಕುಂದಾಪ್ರ ಕನ್ನಡದ ವಿವರಣೆಯುಳ್ಳ ವ್ಲಾಗಿಂಗ್ ಎಲ್ಲರ ಗಮನ…
