Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಗಂಗೊಳ್ಳಿ : ಸೇವಾ ಸಂಘ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ೪೧ನೇ ವರ್ಷದ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಮುಳ್ಳಿಕಟ್ಟೆಯಿಂದ ಶ್ರೀ ಶಾರದಾ ಮಂಟಪದ ತನಕ ಶ್ರೀ ದೇವಿಯ ವಿಗ್ರಹ ಪ್ರತಿಷ್ಠಾಪನ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ಶ್ರೀ ಶಾರದಾ ಮಂಟಪದಲ್ಲಿ ಶ್ರೀದೇವಿಯ ವಿಗ್ರಹದ ಪ್ರತಿಷ್ಠಾಪನೆಯ ಕಾರ್ಯಕ್ರಮಗಳು ಸಮಿತಿಯ ಅಧ್ಯಕ್ಷ ಸತೀಶ ಜಿ. ನೇತೃತ್ವದಲ್ಲಿ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಪುರೋಹಿತರಾದ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಉದಯಶಂಕರ ರಾವ್, ಶ್ರೀಧರ ಸಕ್ಲಾತಿ, ಗೋಪಾಲ ಚಂದನ್, ಲಕ್ಷ್ಮೀಕಾಂತ ಮಡಿವಾಳ, ಸುರೇಂದ್ರ ಖಾರ್ವಿ, ಸೌಪರ್ಣಿಕ ಬಸವ ಖಾರ್ವಿ, ವೈ.ಸುರೇಶ ಖಾರ್ವಿ, ಟಿ.ವಾಸುದೇವ ದೇವಾಡಿಗ, ರತ್ನಾಕರ ಗಾಣಿಗ, ರಾಘವೇಂದ್ರ ಗಾಣಿಗ, ಶೇಖರ ಜಿ., ರವೀಂದ್ರ ಪಟೇಲ್, ಅಶೋಕ ಪೂಜಾರಿ, ಗೋಪಾಲ ಖಾರ್ವಿ ದಾವನಮನೆ, ಗಿರೀಶ ಕುಮಾರ್, ರಘುವೀರ ಕೆ., ನಿತ್ಯಾನಂದ ಖಾರ್ವಿ, ದಿಲೀಪ ಖಾರ್ವಿ, ಮಹಿಳಾ ಮಂಡಳಿಯ ಪ್ರೇಮಾ ಸಿ.ಪೂಜಾರಿ, ಅನಿತಾ ಶೇಟ್, ರೇಣುಕಾ ವಾಸುದೇವ ದೇವಾಡಿಗ, ಶಾರದಾ ಎಸ್.ಖಾರ್ವಿ, ಜಯಂತಿ…

Read More

ಬೈಂದೂರು: ಇಲ್ಲಿನ ಶ್ರೀಸೇನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ 42ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಪ್ರತಿಷ್ಟಾಪಿಸಿ ಪೂಜಿಸುತ್ತಿರುವ ಶ್ರೀ ಶಾರದಾ ಮಾತೆ.

Read More

ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ – ಇದರ ಸಂಯುಕ್ತ ಆಶ್ರಯದಲ್ಲಿ – ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಬೃಹತ್ ಸಮಾವೇಶವು  ನವಂಬರ್ 01 ರ ಅಪರಾಹ್ನ 3 ಗಂಟೆಗೆ  ಗಂಗೊಳ್ಳಿ ಪೇಟೆ ವಿರೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಲಿರುವುದು. ಕೋಟೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ-ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡ ಕರಿಯದೇವಾಡಿಗ ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸುತ್ತಾರೆ. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಜನಸಾಂದ್ರತೆಯ ಗಂಗೊಳ್ಳಿ ಜನ ನಿಬಿಡ ಪ್ರದೇಶದ ಬಡ ಮೀನುಗಾರ, ಕೃಷಿ ಕೂಲಿ ಕಾರ್ಮಿಕ ನಿವೇಶನ ರಹಿತರು ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತ್ ಕಛೇರಿಗೆ ನಿವೇಶನ ಹಕ್ಕು ಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ಈ ಕೂಡಲೇ ವಿಲೇವಾರಿ ಮಾಡಿ, ಭೂಮಿ ಹಕ್ಕು ಪತ್ರ ಮಂಜೂರು ಮಾಡುವುದಕ್ಕೆ…

Read More

ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕೆಯ ಸನ್ನಿಧಿಯ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾಗಳೊಂದಿಗೆ ವಿಜೃಂಭಣೆಯಿಂದ ಜರುಗುತ್ತಿದ್ದು 7ನೇ ದಿನಕ್ಕೆ ಕಾಲಿರಿಸಿದೆ . ಅ.22ರ ವಿಜಯದಶಮಿಯ ವಿಜಯಾಚರಣೆ ಮೂಲಕ ಸಮಾಪನಗೊಳ್ಳಲಿರುವ ಉತ್ಸವದಲ್ಲಿ ಪ್ರತಿನಿತ್ಯವೂ ದೇಶ-ವಿದೇಶಗಳ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವಿಯ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ಉತ್ಸವದ ಅಂಗವಾಗಿ ದೇವಿಯ ಸನ್ನಿಧಾನವು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುವುದು, ನವರಾತ್ರಿಗಳಿಗೆ ರಂಗು ತುಂಬಿದಂತಾಗಿದೆ. [quote font_size=”16″ bgcolor=”#ffffff” bcolor=”#dd3333″ arrow=”yes” align=”right”]ಭಕ್ತರಿಗೆ ಸಕಲ ಸೌಕರ್ಯ: ದೇಗುಲಕ್ಕೆ ಆಗಮಿಸುವ ಭಕ್ತರಿಗೆ ವಾಹನ ನಿಲುಗಡೆ ಹಾಗೂ ವಸತಿಗೃಹಗಳ ಹಾಗೂ ಇನ್ನಿತರ ವ್ಯವಸ್ಥೆಯ ಕುರಿತು ಆಡಳಿತ ಮಂಡಳಿ ವಿಶೇಷ ಕಾಳಜಿ ವಹಿಸಿದೆ. 5ನೇ ನವರಾತ್ರಿ ನಂತರದ ದಿನಗಳಲ್ಲಿ ಭಕ್ತರಿಗಾಗಿ ಭೋಜನದ ಜತೆಯಲ್ಲಿ ಬೆಳಗ್ಗಿನ ಉಪಹಾರಗಳನ್ನು ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. – ಕೃಷ್ಣಪ್ರಸಾದ ಅಡ್ಯಂತಾಯ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ[/quote] ಇಲ್ಲಿನ ನವರಾತ್ರಿಯನ್ನು ಢಾಮರಿ ತಂತ್ರಾಗಮ ಪದ್ದತಿಯಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸುತ್ತಿದ್ದು, ಪ್ರತಿ ದಿನವೂ ಶ್ರೀ ದೇವಿಗೆ ಕಟ್ಟಕಟ್ಟಳೆ…

Read More

ಕುಂದಾಪುರ: ಕೇವಲ ಅಲ್ಪಸಂಖ್ಯಾತರನ್ನೇ ಓಲೈಸುವುದರಲ್ಲಿ ಮುಳುಗಿರುವ ಕಾಂಗ್ರೆಸ್ ಸರಕಾರಕ್ಕೆ ನಡುಬೀದಿಯಲ್ಲಿ ಹತ್ಯೆಯಾದ ಪ್ರಶಾಂತ ಬಗೆಗಾಗಲಿ, ಆತನ ಕುಟುಂಬದ ಬಗೆಗಾಗಲಿ ಒಂದಿಷ್ಟೂ ಕನಿಕರವಿಲ್ಲ. ಮೂಡುಬಿದಿಯವರೇ ಆದ ಸಚಿವರು ಸೌಜನ್ಯಕ್ಕಾದರೂ ಆತನ ಮನೆಗೆ ತೆರಳಿ ಸಂತಾಪ ಸೂಚಿಸಿಲ್ಲ. ಸಚಿವರ ಈ ನಡೆ ಸರಕಾರದ ತಾರತಮ್ಯ ನೀತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು. ಅವರು ಮೂಡುಬಿದಿರೆಯಲ್ಲಿ ಪ್ರಶಾಂತ ಪೂಜಾರಿಯವರ ಹತ್ಯೆಯನ್ನು ವಿರೋಧಿಸಿ ನಗರದ ಶಾಸ್ತ್ರಿ ವೃತ್ತದ ಬಳಿ ವಿಶ್ವ ಹಿಂದೂ ಪರಿಷತ್, ಸಂಸ್ಕಾರ ಭಾರತಿ ಹಾಗೂ ಭಜರಂಗದಳದ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಕಾಂಗ್ರೆಸ್ ಸರಕಾರದ ಇಬ್ಬಗೆಯ ನೀತಿಯನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸುತ್ತದೆ. ತನ್ನೂರಿನ್ನಲೇ ಕೊಲೆ ಪ್ರಕರಣ ನಡೆದಿದ್ದರೂ ಆ ಕುಟುಂಬಕ್ಕೆ ಸಾಂತ್ವಾನ ಹೇಳದ ಸಚಿವ ಅಭಯಚಂದ್ರ ಜೈನ್ ಭಾಗವಹಿಸುವ ಎಲ್ಲಾ ಕಾರ್ಯಕ್ರಮದಲ್ಲೂ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಪ್ರತಿಭಟಸಲಿದೆ ಎಂದವು ಹೇಳಿದರು. (ಕುಂದಾಪ್ರ ಡಾಟ್ ಕಾಂ…

Read More