Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ವಹಿಸಿದ ಬಳಿಕ ನಿರಂತರವಾಗಿ ದಲಿತರ, ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಹಾಸನದ ಸಿಗರನಹಳ್ಳಿ ಪ್ರಕರಣ, ದಾವಣಗೆರೆಯ ಯುವ ಲೇಖಕ ಹುಚ್ಚಂಗಿ ಪ್ರಸಾದ್‌ರವರ ಕೈಗಳನ್ನು ಹಿಂದುತ್ವವಾದಿಗಳು ಕತ್ತರಿಸಿರುವ ಪ್ರಕರಣಗಳನ್ನು ಗಮನಿಸಿದರೆ ಕಾಂಗ್ರೇಸ್ ಸರಕಾರ ದಲಿತರಿಗೆ ರಕ್ಷಣೆ ನೀಡುವ ಬದಲು ಅತ್ಯಂತ ದಲಿತ ವಿರೋಧಿಯಾಗಿರುವುದು ಸಾಬೀತಾಗಿದೆ. ಹರಿಯಾಣದಲ್ಲಿ ದಲಿತ ಮಕ್ಕಳ ಸಜೀವದಹನ ಮನುಷ್ಯ ರೂಪದ ರಾಕ್ಷಕರು ನಡೆಸಿದ ಅತ್ಯಂತ ವೈಶಾಚಿತ ಕೃತ್ಯವಾಗಿದೆ. ಕೇಂದ್ರ ಸರಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು ಬಿಜೆಪಿ ಸಂಸದರು, ಸಚಿವರಾದ ವಿ.ಕೆ.ಸಿಂಗ್‌ರವರು ದಲಿತರನ್ನು ನಾಯಿಗೆ ಹೋಲಿಸಿ ಅವಹೇಳನ ಮಾಡುವ ಪ್ಯಾಸಿಸ್ಟ್ ಮಾದರಿಯ ಕೀಳು ಭಾಷೆಗಳನ್ನು ಬಳಸಿ ನಿಂದಿಸಿರುವುದು ಖಂಡನೀಯವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಇತ್ತೀಚೆಗೆ ದೇಶದಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದಾಳಿಯನ್ನು ಖಂಡಿಸಿ, ರಾಜಕೀಯ ಕಾರಣಕ್ಕಾಗಿ ಕೊಲೆಯಾದ ಅಖ್ಲಾಕ್ ಹಾಗೂ ಮೂಡುಬಿದಿರೆಯ ಪ್ರಶಾಂತ ಪೂಜಾರಿ ಹತ್ಯೆ ಖಂಡಿಸಿ ಕುಂದಾಪುರದ ಶಾಸ್ರ್ತೀ ವೃತ್ತದ ಬಳಿ ನಡೆದ…

Read More

ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ ೪೧ನೇ ವರ್ಷದ ಶ್ರೀ ಶಾರದಾ ದೇವಿಯ ಜಲಸ್ತಂಭನದ ಪುರಮೆರವಣಿಗೆ ವಿಜೃಂಭಣೆಯಿಂದ ಜರಗಿತು. ಶ್ರೀ ಶಾರದಾ ಮಂಟಪದಿಂದ ಹೊರಟ ಪುರಮೆರವಣಿಗೆಯು ಮೇಲ್‌ಗಂಗೊಳ್ಳಿಯ ಬಾವಿಕಟ್ಟೆ ತನಕ ಸಾಗಿ ಪುನ: ಮುಖ್ಯರಸ್ತೆ ಮುಖಾಂತರ ಗಂಗೊಳ್ಳಿ ಬಂದರಿನ ಪೋರ್ಟ್ ಆಫೀಸಿನ ತನಕ ಸಾಗಿ ಪಂಚಗಂಗಾವಳಿ ನದಿಯಲ್ಲಿ ಶ್ರೀ ಶಾರದಾ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. ಚಂಡೆ ವಾದನ, ನಾಸಿಕ್ ಬ್ಯಾಂಡ್, ಸುಮಾರು ಏಳು ಸ್ತಬ್ಧ ಚಿತ್ರಗಳು, ಹುಲಿವೇಷ, ಛದ್ಮವೇಷಗಳು ಪುರಮೆವಣಿಗೆಯ ಮೆರಗು ಹೆಚ್ಚಿಸಿದವು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ಪುರೋಹಿತರಾದ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ ಜಿ., ಪ್ರಧಾನ ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಕಾರ್ಯದರ್ಶಿ ಗೋಪಾಲ ಚಂದನ್, ಕೋಶಾಧಿಕಾರಿ ನಾಗೇಂದ್ರ ಪಿ.ಪೈ, ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ರೇಣುಕಾ ವಾಸುದೇವ ಶೇರುಗಾರ್, ಅನಿತಾ ಶೇಟ್, ರೇಷ್ಮಾ ವಿ.ನಾಯಕ್, ಪ್ರೇಮಾ ಸಿ.ಎಸ್.ಪೂಜಾರಿ ಹಾಗೂ ಸಮಿತಿಯ ಮತ್ತು ಮಹಿಳಾ…

Read More

ಕುಂದಾಪುರ: ಕರ್ನಾಟಕದ ಜನರು ಭಾಷಾ ಶ್ರೀಮಂತಿಕೆ ಹೊಂದಿದವರು. ಶಿಕ್ಷಣ ಹಾಗೂ ಇತರ ಉದ್ದೇಶಗಳಿಗಾಗಿ ಇಲ್ಲಿಗೆ ಬರುವ ಪ್ರತಿಯೊಬ್ಬರನ್ನು ನಮ್ಮ ಮನೆ ಮಂದಿಯಂತೆ ಸ್ವೀಕಾರ ಮಾಡುವ ಮನೋಭಾವವನ್ನು ಹೊಂದಿದ್ದಾರೆ. ನಮ್ಮ ರಾಜ್ಯ ಸಮೃದ್ದ ಭಾಷೆ ಹಾಗೂ ಅಭಿಮಾನವನ್ನು ಹೊಂದಿರುವ ಸುಂದರ ಹೂ ತೋಟ ಎಂದು ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಎಂ.ಮಂಜುನಾಥ ಶೆಟ್ಟಿ ಹೇಳಿದರು. ಇಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಮಣಿಪಾಲದ ಟಿ.ಎ ಪೈ ಮ್ಯಾನೇಜ್‌ಮೆಂಟ್ ಇನ್ಟಿಟ್ಯೂಟ್ (ಟ್ಯಾಪ್‌ಮಿ) ವಿದ್ಯಾರ್ಥಿಗಳು ಆಯೋಜಿಸಿದ್ದ ’ಬ್ರಾಂಡ್ ಸ್ಕ್ಯಾನ್-2015’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಾಭ್ಯಾಸದ ಜತೆಯಲ್ಲಿ ಶಿಕ್ಷಣೇತರ ಚಟುವಟಿಕೆಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಸ್ತುಪ್ತವಾಗಿರುವ ಪ್ರತಿಭೆಗಳು ಅನಾವಣಗೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಆರ್ ಶೆಟ್ಟಿಯವರು ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದ ತವರು. ಇಲ್ಲಿಗೆ ಶಿಕ್ಷಣ ಆಶ್ರಯಿಸಿ ಬರುವ ಪ್ರತಿಯೊಬ್ಬರಿಗೂ ಇಲ್ಲಿನ ಜನ ಮಾತೃ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇಲ್ಲಿ ಶಿಕ್ಷಣ…

Read More

ಇತ್ತೀಚೆಗೆ ವಿದ್ಯಾಗಿರಿಯ ಆಳ್ವಾಸ್ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಿಖಿತ ಪರೀಕ್ಷೆ, ಆಶು ಭಾಷಣ ಸ್ಪರ್ಧೆ ಮತ್ತು ಸಂದರ್ಶನದ ಮೂಲಕ ಈ ಆಯ್ಕೆಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳನ್ನು ಮತ್ತು ಇತರ ಗೋಷ್ಠಿಗಳಿಗಿರುವ ಭಾಷಣಕಾರರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಮೌಲ್ಯ ಮಾಪಕರಾಗಿ ಅಂಡಾರು ಗುಣಪಾಲ ಹೆಗ್ಡೆ, ಶ್ರೀಧರ ಜೈನ್ , ಡಾ. ಧನಂಜಯ ಕುಂಬ್ಳೆ ಭಾಗವಹಿಸಿದ್ದರು. ಅದ್ಯಕ್ಷೆಯಾಗಿ ಆಯ್ಕೆಯಾದ ಶಾಲಿಕಾ ಎಕ್ಕಾರು ರಂಗಭೂಮಿ, ಯಕ್ಷಗಾನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಹಲವು ಶ್ರೇಷ್ಠ ನಿರ್ದೇಶಕರು ನಿರ್ದೇಶಿಸಿದ ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟನೆ. ನೀಲಿಕುದುರೆ, ನಿದ್ರಾನಗರಿ, ಪಂಜರ ಶಾಲೆ, ಪುಷ್ಪರಾಣಿ, ಅಗ್ನಿಪಥ, ಮಕ್ಕಳ ರಾಮಾಯಣ, ಗೆಲಿಲಿಯೋ, ಮೇರಿಕ್ಯೂರಿ, ಮಹಿಳಾ ಭಾರತ ಅವರು ನಟಿಸಿದ ಮುಖ್ಯ ನಾಟಕಗಳು. ಖ್ಯಾತ ಯಕ್ಷಗಾನ ಭಾಗವತ ಶ್ರೀ ಸದಾನಂದ ಐತಾಳರ…

Read More

ಕುಂದಾಪುರ: ಸುವರ್ಣ ಕನ್ನಡ ವಾಹಿನಿಯು ಕಿರುತೆರೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಮ್ಮಂದಿರಿಗಾಗಿ ಡ್ಯಾನ್ಸ್ ರಿಯಾಲಿಟಿ ಶೋ ‘ಸೈ ಟು ಡ್ಯಾನ್ಸ್’ ನಡೆಸುತ್ತಿದ್ದು. 10 ಜನ ತಾಯಂದಿರು ಇದರಲ್ಲಿ ಭಾಗವಹಿಸುತ್ತಿದ್ದಾರೆ. 10 ಜನ ನೃತ್ಯ ತಾಯಂದಿರಿಗಾಗಿ ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕುಂದಾಪುರ ಮೂಲದವರಾದ, ಪ್ರಸ್ತುತ ಪುಣೆಯಲ್ಲಿ ನೆಲೆಸಿರುವ ಭಾವನಾ ಆರ್. ದೇವಾಡಿಗ ಆಯ್ಕೆಯಾಗಿದ್ದಾರೆ. ನಟಿ ಶೃತಿ, ಶರ್ಮಿಳಾ ಮಾಂಡ್ರೆ ಮತ್ತು ಐಂದ್ರಿತಾ ರೇ ನಿರ್ಣಾಯಕರಾಗಿ ಭಾಗವಹಿಸಿದ್ದರು. ಪುಣೆಯಲ್ಲಿ ನೆಲೆಸಿರುವ ರಾಮ ದೇವಾಡಿಗ ಅವರ ಪತ್ನಿಯಾದ ಭಾವನಾ, ತ್ರಾಸಿಯ ನಿವೃತ್ತ ಕಂದಾಯ ನಿರೀಕ್ಷಕ ಮಂಜು ದೇವಾಡಿಗ ಮತ್ತು ಶಾರದಾ ಎಮ್. ಡಿ. ಇವರ ಪುತ್ರಿ. ಪುಣೆಯಲ್ಲಿ ಭಾವನಾಸ್ ಡಾನ್ಸ್ ಸ್ಟೂಡಿಯೋ ಮೂರು ಶಾಖೆಗಳನ್ನು ಹೊಂದಿರುವ ಭಾವನಾ, ಹಲವಾರು ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಅವರ ಮೂರನೇ ಸ್ಟುಡಿಯೋ ಇತ್ತಿಚಿಗಷ್ಟೇ ಪುಣೆಯ ವಿಶ್ರಾಂತ್ ವಾಡಿಯಲ್ಲಿ ಲೋಕಾರ್ಪಣೆಗೊಂಡಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಅಕ್ಟೋಬರ್ 24 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ…

Read More

ವಿಜಯದಶಮಿಯ ದಿನ ಶಮೀ ಅಥವಾ ಬನ್ನಿ ವೃಕ್ಷದ ಪೂಜೆಯನ್ನು ಮಾಡುವುದು, ಶಮೀಪತ್ರೆಗಳನ್ನು ಮನೆಗೆ ತರುವುದು ಇದರ ಪೌರಾಣಿಕ ಮಹತ್ವ ಏನೆ೦ದು ತಿಳಿಯೋಣ.ಹಿ೦ದೂ ಸ೦ಸ್ಕೃತಿಯ ಪ್ರತಿಯೊ೦ದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಠ್ಯಗಳಿ೦ದ ಕೂಡಿರುತ್ತದೆ. ಹಾಗಿದ್ದಲ್ಲಿ ಶಮೀವೃಕ್ಷದ ವೈಶಿಷ್ಠ್ಯ ಮಹತ್ವಗಳೇನು, ಶಮೀ ವೃಕ್ಷದ ಪೂಜೆ ಏಕೆ ಮಾಡಬೇಕು? ಪೂರ್ವದಲ್ಲಿ ನಮ್ಮ ಋಷಿ ಮುನಿಗಳು ಹವನ-ಹೋಮಗಳ ಆರ೦ಭ ಮಾಡುವಾಗ ಶಮೀವೃಕ್ಷದ ಕಾ೦ಡಗಳನ್ನು ಒ೦ದಕ್ಕೊ೦ದು ತಿಕ್ಕುವುದರ ಮೂಲಕ ಪ್ರಜ್ವಲಿಸುವ೦ತೆ ಮಾಡುತ್ತಿದ್ದರು. ಈಗಲೂ ಭಾರತದ ಅನೇಕ ಭಾಗಗಳಲ್ಲಿ ಈ ಪರ೦ಪರೆಯ೦ತೆಯೇ ಅಗ್ನಿಕು೦ಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮ೦ಥನವೆ೦ದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನೆ೦ದರೆ ಶಮೀವೃಕ್ಷವು ಅಗ್ನಿಯ ಅವಾಸಸ್ಥಾನ ಹಾಗೂ ಸುರ್ವಣವು ಅಗ್ನಿಯ ವೀರ್ಯವೆ೦ದು ಹೇಳಲಾಗಿದೆ. ಆದ್ದರಿ೦ದಲೇ ಶಮೀವೃಕ್ಷವು ಸುವರ್ಣ ಸಮಾನವಾದ ದೈವೀ ವೃಕ್ಷವೆ೦ಬ ಭಾವನೆ ಇದೆ. ಪೂರ್ವದಲ್ಲಿ ಸೂರ್ಯವ೦ಶಸ್ಥ ರಘು ಮಹಾರಾಜರು ಭರತಖ೦ಡವನ್ನು ಆಳುತ್ತಿದ್ದ ಸಮಯದಲ್ಲಿ ಕೌಸ್ಥೇಯನೆ೦ಬ ಬಡ ಬ್ರಾಹ್ಮಣ ಬಾಲಕನೊಬ್ಬನು ವಿದ್ಯಾರ್ಜನೆಗೋಸ್ಕರ ಅರುಣಿ ಮಹರ್ಷಿಗಳ ಗುರುಕುಲಕ್ಕೆ ಬರುತ್ತಾನೆ. ಆ ಮುನಿಗಳ ಆಶ್ರಯದಲ್ಲಿ ತನ್ನ ಶಿಕ್ಷಣವು ಪೂರ್ಣವಾದ ಮೇಲೆ…

Read More

ಗಂಗೊಳ್ಳಿ : ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ವತಿಯಿಂದ ಗಂಗೊಳ್ಳಿಯ ಶಾರದಾ ಮಂಟಪದಲ್ಲಿ ಜರಗುವ 41ನೇ ವರ್ಷದ ಶ್ರೀ ಶಾರದಾ ಮಹೋತ್ಸವದಲ್ಲಿ ಮಂಗಳವಾರ ಶ್ರೀದೇವಿಯ ಪ್ರೀತ್ಯರ್ಥ ಹಾಗೂ ಲೋಕ ಕಲ್ಯಾಣಾರ್ಥ ಗ್ರಾಮಾಭಿವೃದ್ಧಿಗೋಸ್ಕರ ಸಾರ್ವಜನಿಕ ಶ್ರೀ ಚಂಡಿಕಾಯಾಗ ಜರಗಿತು. ವೇದಮೂರ್ತಿ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ನೇತೃತ್ವದಲ್ಲಿ ಯಾಗದ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ್ ಜಿ., ಕಾರ್ಯದರ್ಶಿ ಗೋಪಾಲ ಚಂದನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶೀ ಜಯಂತಿ ಆರ್.ಖಾರ್ವಿ, ಸಮಿತಿಯ ಪದಾಧಿಕಾರಿಗಳು ಹಾಗೂ ಸೇವಾದಾರ ಕುಟುಂಬಸ್ಥರು ಉಪಸ್ಥಿತರಿದ್ದರು. ಊರಿನ ಹತ್ತು ಸಮಸ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Read More

ಕುಂದಾಪುರ: ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಚಂಡಿಕಾಯಾಗ ಹಾಗೂ ನವರಾತ್ರಿ ರಥೋತ್ಸವ ದೇಗುಲದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು. ದೇಗುಲದ ಸರದಿ ಅರ್ಚಕ ಕೆ. ಮಂಜುನಾಥ ಅಡಿಗ ಅವರ ನೇತೃತ್ವದಲ್ಲಿ ನಿತ್ಯಾನಂದ ಅಡಿಗ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಅರ್ಚಕರಾದ ಡಾ| ಕೆ.ಎನ್‌. ನರಸಿಂಹ ಅಡಿಗ, ಶ್ರೀಧರ ಅಡಿಗ, ಕೆ.ಎನ್‌. ಗೋವಿಂದ ಅಡಿಗ ಅವರು ಚಂಡಿಕಾ ಯಾಗದಲ್ಲಿ ಪಾಲ್ಗೊಂಡರು.ಚಿನ್ನದ ರಥದಲ್ಲಿ ಉತ್ಸವ ಮೂರ್ತಿ ಕುಳ್ಳಿರಿಸಿ ದೇಗುಲದ ಒಳಪೌಳಿಯಲ್ಲಿ ರಥ ಒಂದು ಸುತ್ತು ಬರುತ್ತಿರುವಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ಭಕ್ತಿ ಪರವಶರಾಗಿ ಮೂಕಾಂಬಿಕೆಯ ದೇವಿ ಸ್ತ್ರೋತ್ರ ಜಪಿಸಿದರು. ಈ ಸಂದರ್ಭ ಅರ್ಚಕರು ಎಸೆಯುವ ನಾಣ್ಯ ಹಿಡಿಯಲು ಭಕ್ತರು ನಡೆಸುತ್ತಿದ್ದ ಪೈಪೋಟಿ ನಡೆಸುತ್ತಿದ್ದರು. ದೇಗುಲದಲ್ಲಿ ಬಿಗು ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ವಿ. ಪ್ರಸನ್ನ ಸಂಕಲ್ಪದಲ್ಲಿ ಪಾಲ್ಗೊಂಡರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಉಪಕಾರ್ಯನಿರ್ವಹಣಾಧಿಕಾರಿ…

Read More

ಸುನಿಲ್ ಹೆಚ್. ಜಿ. ಬೈಂದೂರು ಕುಂದಾಪುರ: ಕಾಲ ಉರುಳಿದ ಹಾಗೇ ನಮ್ಮ ಆಸಕ್ತಿಯೂ ಬದಲಾಗುತ್ತದೆ. ಹೊಸತನಕ್ಕೆ ತುಡಿಯುವ ಈ ಬದಲಾವಣೆಯೊಂದಿಗೆ ನಮ್ಮ ಕಲೆ, ಸಂಸ್ಕೃತಿ ಸಂಪ್ರದಾಯಗಳ ಪೈಕಿ ಕೆಲವು ಹೊಸ ಆಯಾಮ ಪಡೆದು ಮತ್ತೆ ನಮ್ಮ ಮುಂದೆ ಬಂದರೆ, ಇನ್ನು ಕೆಲವು ಮರೆಯಾಗಿಬಿಡುತ್ತವೆ. ಆದರೆ ಅಪರೂಪಕ್ಕೊಂದು ಸಂಸ್ಥೆಗಳು ಈ ಮರೆಯಾಗುವ ಕಲೆಗಳಿಗೆ ಮರುಜೀವ ತುಂಬುವ ಪ್ರಯತ್ನವನ್ನು ಮಾಡುತ್ತಲೇ ಬರುತ್ತವೆ. ಹೌದು. ಕಲಾಕ್ಷೇತ್ರ ಕುಂದಾಪುರ ಅಂಥಹದ್ದೊಂದು ಭಿನ್ನ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಆಯೋಜಿಸಿತ್ತು. ಹಿಂದೆಲ್ಲ ನವರಾತ್ರಿಯ ಸಮಯದಲ್ಲಿ ರಾತ್ರಿಯ ವೇಳೆಗೆ ಹೆಚ್ಚಾಗಿ ಕಂಡುಬರುತ್ತಿದ್ದ ಹುಲಿವೇಷವನ್ನು ಮತ್ತೆ ರಾತ್ರಿಯಲ್ಲಿಯೇ ಕಾಣುವಂತೆ ಮಾಡಿತ್ತು. ಅದೂ ಗ್ಯಾಸ್ ಲೈಟ್ ಬೆಳಕಿನೊಂದಿಗೆ. ಹುಲಿವೇಷ ಇಂದು ವ್ಯಾವಹಾರಿಕ ತಿರುವನ್ನು ಪಡೆದಿದೆ. ಹೊಸಬರು ಬರುತ್ತಿಲ್ಲ. ಕಲಿಯುವವರ್ಯಾರು, ಕುಣಿಯುವವರ್ಯಾರು ಪ್ರಶ್ನೆ. ಕುಣಿದರೂ ಅದು ಪಟ್ಟಣ, ದನಿಗಳ ಮನೆಗಳಿಗಷ್ಟೇ ಸೀಮಿತವಾಗಿದೆ. ಹೀಗಿರುವಾಗ ಹಳೆಯ ದಿನಗಳನ್ನೊಮ್ಮೆ ಮೆಲಕು ಹಾಕಿದರೆ ಎಷ್ಟು ಚಂದವಿರುತ್ತೆಂಬ ಆಲೋಚನೆಯೊಂದಿಗೆ ಆಯೋಜಿಸಿದ ಗ್ಯಾಸ್ ಲೈಟ್ ಬೆಳಕಿನ ಹುಲಿವೇಷ ಕುಂದಾಪುರ ಮಟ್ಟಿಗೆ ವಿಶೇಷವಾಗಿಯೇ ಮೂಡಿಬಂದಿತ್ತು. (ಕುಂದಾಪ್ರ…

Read More