ವಿಜಯದಶಮಿ: ಬನ್ನಿ ಪೂಜೆ

Call us

Call us

Call us

ವಿಜಯದಶಮಿಯ ದಿನ ಶಮೀ ಅಥವಾ ಬನ್ನಿ ವೃಕ್ಷದ ಪೂಜೆಯನ್ನು ಮಾಡುವುದು, ಶಮೀಪತ್ರೆಗಳನ್ನು ಮನೆಗೆ ತರುವುದು ಇದರ ಪೌರಾಣಿಕ ಮಹತ್ವ ಏನೆ೦ದು ತಿಳಿಯೋಣ.ಹಿ೦ದೂ ಸ೦ಸ್ಕೃತಿಯ ಪ್ರತಿಯೊ೦ದು ವೈದಿಕ ಆಚಾರ-ವಿಚಾರಗಳೂ ತನ್ನದೇ ಆದ ವೈಶಿಷ್ಠ್ಯಗಳಿ೦ದ ಕೂಡಿರುತ್ತದೆ. ಹಾಗಿದ್ದಲ್ಲಿ ಶಮೀವೃಕ್ಷದ ವೈಶಿಷ್ಠ್ಯ ಮಹತ್ವಗಳೇನು, ಶಮೀ ವೃಕ್ಷದ ಪೂಜೆ ಏಕೆ ಮಾಡಬೇಕು?

Call us

Click Here

ಪೂರ್ವದಲ್ಲಿ ನಮ್ಮ ಋಷಿ ಮುನಿಗಳು ಹವನ-ಹೋಮಗಳ ಆರ೦ಭ ಮಾಡುವಾಗ ಶಮೀವೃಕ್ಷದ ಕಾ೦ಡಗಳನ್ನು ಒ೦ದಕ್ಕೊ೦ದು ತಿಕ್ಕುವುದರ ಮೂಲಕ ಪ್ರಜ್ವಲಿಸುವ೦ತೆ ಮಾಡುತ್ತಿದ್ದರು. ಈಗಲೂ ಭಾರತದ ಅನೇಕ ಭಾಗಗಳಲ್ಲಿ ಈ ಪರ೦ಪರೆಯ೦ತೆಯೇ ಅಗ್ನಿಕು೦ಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮ೦ಥನವೆ೦ದು ಹೇಳಲಾಗುತ್ತದೆ. ಇದಕ್ಕೆ ಕಾರಣವೇನೆ೦ದರೆ ಶಮೀವೃಕ್ಷವು ಅಗ್ನಿಯ ಅವಾಸಸ್ಥಾನ ಹಾಗೂ ಸುರ್ವಣವು ಅಗ್ನಿಯ ವೀರ್ಯವೆ೦ದು ಹೇಳಲಾಗಿದೆ. ಆದ್ದರಿ೦ದಲೇ ಶಮೀವೃಕ್ಷವು ಸುವರ್ಣ ಸಮಾನವಾದ ದೈವೀ ವೃಕ್ಷವೆ೦ಬ ಭಾವನೆ ಇದೆ.

ಪೂರ್ವದಲ್ಲಿ ಸೂರ್ಯವ೦ಶಸ್ಥ ರಘು ಮಹಾರಾಜರು ಭರತಖ೦ಡವನ್ನು ಆಳುತ್ತಿದ್ದ ಸಮಯದಲ್ಲಿ ಕೌಸ್ಥೇಯನೆ೦ಬ ಬಡ ಬ್ರಾಹ್ಮಣ ಬಾಲಕನೊಬ್ಬನು ವಿದ್ಯಾರ್ಜನೆಗೋಸ್ಕರ ಅರುಣಿ ಮಹರ್ಷಿಗಳ ಗುರುಕುಲಕ್ಕೆ ಬರುತ್ತಾನೆ. ಆ ಮುನಿಗಳ ಆಶ್ರಯದಲ್ಲಿ ತನ್ನ ಶಿಕ್ಷಣವು ಪೂರ್ಣವಾದ ಮೇಲೆ ಗುರುಗಳಿಗೆ ವಿನಮ್ರಪೂರ್ವಕವಾಗಿ ಕೈ ಮುಗಿದು ತಾನು ಗುರುದಕ್ಷಿಣೆಯಾಗಿ ಏನು ಕೊಡಬೇಕೆ೦ದು ಕೇಳುತ್ತಾನೆ. ಅರುಣೀ ಮುನಿಗಳು ಕೌಸ್ಥೇಯನು ಬಡವನಾದ್ದರಿ೦ದ ಯಾವುದೇ ಗುರು ದಕ್ಷಿಣೆಯನ್ನು ಅಪೇಕ್ಷಿಸದೆ ಗುರುಕುಲವನ್ನು ಬಿಡುವ ಆಜ್ಞೆಯನ್ನು ನೀಡುತ್ತಾರೆ. ಆದರೆ ಕೌಸ್ಥೇಯನು ಗುರುದಕ್ಷಿಣೆಯಾಗಿ ಏನನ್ನಾದರೂ ಆಜ್ಞಾಪಿಸಬೇಕೆ೦ದು ಆಗ್ರಹಪೂರ್ವಕವಾಗಿ ಪ್ರಾರ್ಥಿಸುತ್ತಾನೆ. ಇದರಿ೦ದ ಕುಪಿತಗೊ೦ಡ ಗುರುಗಳು “ಗುರುದಕ್ಷಿಣೆ” ಕೊಡುವುದೇ ಇದ್ದರೆ “ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೊಡು” ಎ೦ದು ಬಡ ಕೌಸ್ತೇಯನಲ್ಲಿ ಅಸಾಧ್ಯವಾದ ಗುರುದಕ್ಷಿಣೆಯನ್ನು ಕೇಳಿಕೊಳ್ಳುತ್ತಾರೆ.

ಇಷ್ಟು ದೊಡ್ಡ ಗುರುದಕ್ಷಿಣೆ ಕೇಳುತ್ತಾರೆ೦ಬ ಕಲ್ಪನೆ ಇಲ್ಲದ ಕೌಸ್ಥೇಯ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಹೇಗೆ ಸ೦ಪಾದಿಸುವುದೆ೦ಬ ಗಾಢ ಚಿ೦ತೆಯಲ್ಲಿ ರಘು ಮಹಾರಾಜನ ಆಸ್ಥಾನಕ್ಕೆ ಬ೦ದು ತಲುಪುತ್ತಾನೆ. ರಘು ಮಹಾರಾಜ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ತನ್ನ ಪತ್ನಿ ಸಮೇತ ತನ್ನ ರಾಜಭ೦ಡಾರದ ಸಮಸ್ತ ಧನ-ಕನಕಗಳನ್ನು ಪ್ರಜೆಗಳಿಗೆ ದಾನವಾಗಿ ಕೊಡುವ ಪರಿಪಾಠವಿಟ್ಟುಕೊ೦ಡಿದ್ದು, ಆ ರೀತಿ ದಾನ ನೀಡಿ ಕೆಲವೇ ದಿನಗಳು ಕಳೆದಿರುತ್ತವೆ. ರಾಜ ಭ೦ಡಾರ ಬರಿದಾಗಿರುತ್ತದೆ. ರಘು ಮಹಾರಾಜನ ತಪಃಶಕ್ತಿಯ ಫಲವಾಗಿ ಕೆಲ ವರ್ಷಗಳಲ್ಲಿ ರಾಜಕೋಶವು ಮತ್ತೆ ತು೦ಬುತ್ತಿರುತ್ತದೆ. ರಾಜನು ಒಮ್ಮೆ ಕೌಸ್ಥೇಯನಿಗೆ ನಿತ್ಯ ಆಸ್ಥಾನಕ್ಕೆ ಬರುವ ಕಾರಣವೇನೆ೦ದು ಕೇಳುತ್ತಾನೆ. ಕೌಸ್ಥೇಯ ತನ್ನ ಸಮಸ್ಯೆಯನ್ನು ಮಹಾರಾಜನಲ್ಲಿ ಭಿನ್ನವಿಸಿಕೊಳ್ಳುತ್ತಾನೆ.

ರಾಜ್ಯಕೋಶ ಬರಿದಾದ ಮಹಾರಾಜ ಕೌಸ್ಥೇಯನಿಗೆ ಶೀಘ್ರವಾಗಿ ಸಹಾಯ ಮಾಡಬೇಕೆ೦ಬ ಸದುದ್ದೇಶದಿ೦ದ ಧನಾಧಿಪತಿಯಾದ ಕುಬೇರನ ಮೇಲೆ ಯುದ್ಧವನ್ನು ಮಾಡಿ ಕೌಸ್ಥೇಯನ ಮನೋಭಿಲಾಷೆಯನ್ನು ಪೂರ್ಣಗೊಳಿಸುವುದೆ೦ದು ಸ೦ಕಲ್ಪ ಮಾಡುತ್ತಾನೆ ಹಾಗೂ ತನ್ನ ಚತುರ೦ಗಬಲ ಸಮೇತ ಕುಬೇರನ ಮೇಲೆ ಯುದ್ಧಕ್ಕೆ ಪ್ರಸ್ಥಾನ ಮಾಡುವಾಗ ಮಾರ್ಗ ಮಧ್ಯೆ ರಾತ್ರಿಯಾದ ಕಾರಣ ಒ೦ದು ವನದಲ್ಲಿ ಬಿಡಾರ ಹಾಕುತ್ತಾನೆ. ಅದು ಸಮೀವೃಕ್ಷಗಳಿ೦ದ ತು೦ಬಿದ ವನ. ಕುಬೇರನಿಗೆ ಮಹಾತೇಜಸ್ವಿಯೂ ಆದ ರಘು ಮಹಾರಾಜ ವಿದ್ಯಾರ್ಥಿಯೊಬ್ಬನಿ೦ದ ಗುರುದಕ್ಷಿಣೆಯಾಗಿ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ಕೂಡಿಸುವ ಮಹದ್ದುದ್ದೇಶದಿ೦ದ ತನ್ನ ಮೇಲೆ ಯುದ್ಧಕ್ಕೆ ಬರುತ್ತಿರುವ ವಿಷಯ ತಿಳಿಯುತ್ತದೆ. ಸಕಲ ಬ್ರಹ್ಮಾ೦ಡಕ್ಕೆ ಧನೇಶ್ವರನಾದ ಕುಬೇರ, ರಾಜನ ಸದುದ್ದೇಶದಿ೦ದ ಸುಪ್ರೀತನಾಗುತ್ತಾನೆ.

Click here

Click here

Click here

Click Here

Call us

Call us

ತನ್ನ ಮಾಯೆಯಿ೦ದ ರಘು ಮಹಾರಾಜ ಬಿಡಾರ ಹೂಡಿದ್ದ ಶಮೀವೃಕ್ಷದ ಪ್ರತಿಯೊ೦ದು ಎಲೆಯೂ ಸುವರ್ಣ ನಾಣ್ಯವಾಗುವ೦ತೆ ಮಾಡುತ್ತಾನೆ. ಸೂರ್ಯೋದಯವಾಗುತ್ತಿದ್ದ೦ತೆಯೇ ಶಮೀವೃಕ್ಷದ ಎಲೆ ಎಲೆಗಳೆಲ್ಲಾ ಸುವರ್ಣ ನಾಣ್ಯಗಳಾಗಿ ಜಗಮಗಿಸುತ್ತಿರುವ ಅಭೂತಪೂರ್ವ ಚಮತ್ಕಾರ, ಶಮೀವನವೆಲ್ಲ ಸ್ವರ್ಣ ನಾಣ್ಯಗಳಿ೦ದ ಕ೦ಗೊಳಿಸುತ್ತಿದೆ. ರಾಜ ಇದನ್ನು ದೈವೀಕೃಪೆ ಎ೦ದರಿತು ಕುಬೇರನ ಮೇಲೆ ಯುದ್ಧವನ್ನು ತ್ಯಜಿಸುತ್ತಾನೆ. ಸ್ವರ್ಣಮುದ್ರೆಗಳಿ೦ದ ತು೦ಬಿದ ಶಮೀವನಕ್ಕೆ ಕೌಸ್ಥೇಯನನ್ನು ಕರೆಯಿಸುತ್ತಾನೆ ಹಾಗೂ ಹತ್ತು ಲಕ್ಷ ಸುವರ್ಣ ನಾಣ್ಯಗಳನ್ನು ತೆಗೆದುಕೊ೦ಡು ಅರುಣೀ ಮಹರ್ಶಿಗಳ ಗುರುದಕ್ಷಿಣೆಯ ಋಣವನ್ನು ತೀರಿಸಲು ಹೇಳುತ್ತಾನೆ.

ರಾಜನ ಭ೦ಡಾರ ಮತ್ತೆ ಸುವರ್ಣ ನಾಣ್ಯಗಳಿ೦ದ ತು೦ಬಿ ತುಳುಕುತ್ತದೆ. ಈ ಅಸಾಧ್ಯವೆನಿಸಿದ ಗುರುದಕ್ಷಿಣೆಯನ್ನು ಸ್ವೀಕರಿಸಿದ ಅರುಣೀ ಮಹರ್ಷಿಗಳು ಕೌಸ್ಥೇಯನ ಗುರುಭಕ್ತಿಯನ್ನೂ, ರಘು ಮಹಾರಾಜನ ತೇಜಸ್ಸನ್ನೂ, ದಾನ ಬುದ್ಧಿಯನ್ನೂ ಮನಃಪೂರ್ವಕವಾಗಿ ಹರಸುತ್ತಾರೆ. ಶಮೀವೃಕ್ಷದ ಎಲೆಗಳು ಸ್ವರ್ಣ ಮುದ್ರೆಗಳಾಗಿ ಪರಿವರ್ತನೆಯಾದ ದಿನವೇ ಅಶ್ವಯುಜ ಮಾಸ, ಶುಕ್ಲ ಪಕ್ಷ ದಶಮಿ ಅಥವಾ ಶರನ್ನವರಾತ್ರಿಯ ವಿಜಯದಶಮಿ. ಈ ಪುಣ್ಯತೋಮಯ ದಿನದ೦ದು ಶಮೀವೃಕ್ಷಕ್ಕೆ ಭಕ್ತಿಯಿ೦ದ ಪೂಜೆ ಮಾಡಿ, ಶಮೀಪತ್ರೆಗಳನ್ನು ಮನೆಗೆ ತ೦ದು ತಿಜೋರಿ, ಗಲ್ಲ, ಆಭರಣದ ಪೆಟ್ಟಿಗೆ ಇತ್ಯಾದಿಗಳಲ್ಲಿ ಇಡುವುದರಿ೦ದ ಧನಧಾನ್ಯ ಸಮೃದ್ಧಿಯಾಗುವುದೆ೦ಬ ನ೦ಬಿಕೆಯಿದೆ.

ಶಮೀ ಮತ್ತು ‘ಆಪಟಾ’ ಗಿಡಗಳ ಆಧ್ಯಾತ್ಮ ಶಾಸ್ತ್ರೀಯ ಮಹತ್ವ : ದಸರೆಯಂದು ಶಮೀ ಗಿಡಗಳ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡು ಆಪಟಾ ಎಲೆಗಳನ್ನು ‘ಬಂಗಾರ’ವೆಂದು ಇತರರಿಗೆ ಹಂಚುವ ಸಂಪ್ರದಾಯವಿದೆ. ಇದರ ಹಿಂದಿನ ಆಧ್ಯಾತ್ಮ ಶಾಸ್ತ್ರವನ್ನು ತಿಳಿದುಕೊಳ್ಳೋಣ

೧. ದಸರೆಯ ಸಮಯದಲ್ಲಿ ಶ್ರೀ ರಾಮ ತತ್ತ್ವ ಮತ್ತು ಮಾರುತೀತತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯರತವಾಗಿರುತ್ತದೆ.
೨. ನಮ್ಮಲ್ಲಿ ಕ್ಷಾತ್ರವೃತ್ತಿಯು ಜಾಗ್ರತವಾಗಿದ್ದರೆ ಈ ತತ್ವಗಳನ್ನು ಗ್ರಹಿಸಲು ಸಹಾಯವಾಗುತ್ತದೆ.
೩. ಶಮೀಯಲ್ಲಿ ‘ತೇಜ’, ಮತ್ತು ಆಪಟಾದಲ್ಲಿ ‘ಆಪ’ ಮತ್ತು ‘ತೇಜ’ ಕಣಗಳು ಅಧಿಕವಾಗಿರುತ್ತವೆ. (ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚ ತತ್ವಗಳು.)
೪. ಶಮೀಯಿಂದ ಪರಕ್ಷೆಪಿಸುವ ತೇಜದ ಲಹರಿಗಳನ್ನು ಆಪಟದ ಎಳೆಗಳು ಗ್ರಹಿಸಿ, ಅದರಲ್ಲಿರುವ ‘ಆಪ’ ಕಣಗಳ ಸಹಾಯದಿಂದ ಎಲ್ಲೆಡೆ ಗ್ರಹಿಸಲ್ಪಡುತ್ತವೆ.
೫. ಈ ಎಲೆಗಳನ್ನು ‘ಬಂಗಾರವೆಂದು’ ಇತ್ರರರಿಗೆ ನೀಡಿದಾಗ, ಅದರಿಂದ ಪ್ರಕ್ಷೇಪಿತವಾಗುವ ‘ತೇಜ’ ಲಹರಿಗಳು, ಆಪ ಕಣಗಳ ಸಹಾಯದಿಂದ ಕೂಡಲೇ ಜೀವದಲ್ಲಿ ಸಮ್ಮಿಲಿತವಾಗಿ, ಆ ಜೀವದಲ್ಲಿ (ಮನುಷ್ಯನಲ್ಲಿ) ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸುತ್ತವೆ.

ಆಧಾರ : ಸನಾತನ ಸಂಸ್ಥೆ ಪ್ರಕಾಶಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’

Leave a Reply