ಕುಂದಾಪುರ: ಸುವರ್ಣ ಕನ್ನಡ ವಾಹಿನಿಯು ಕಿರುತೆರೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಮ್ಮಂದಿರಿಗಾಗಿ ಡ್ಯಾನ್ಸ್ ರಿಯಾಲಿಟಿ ಶೋ ‘ಸೈ ಟು ಡ್ಯಾನ್ಸ್’ ನಡೆಸುತ್ತಿದ್ದು. 10 ಜನ ತಾಯಂದಿರು ಇದರಲ್ಲಿ ಭಾಗವಹಿಸುತ್ತಿದ್ದಾರೆ. 10 ಜನ ನೃತ್ಯ ತಾಯಂದಿರಿಗಾಗಿ ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕುಂದಾಪುರ ಮೂಲದವರಾದ, ಪ್ರಸ್ತುತ ಪುಣೆಯಲ್ಲಿ ನೆಲೆಸಿರುವ ಭಾವನಾ ಆರ್. ದೇವಾಡಿಗ ಆಯ್ಕೆಯಾಗಿದ್ದಾರೆ. ನಟಿ ಶೃತಿ, ಶರ್ಮಿಳಾ ಮಾಂಡ್ರೆ ಮತ್ತು ಐಂದ್ರಿತಾ ರೇ ನಿರ್ಣಾಯಕರಾಗಿ ಭಾಗವಹಿಸಿದ್ದರು.
ಪುಣೆಯಲ್ಲಿ ನೆಲೆಸಿರುವ ರಾಮ ದೇವಾಡಿಗ ಅವರ ಪತ್ನಿಯಾದ ಭಾವನಾ, ತ್ರಾಸಿಯ ನಿವೃತ್ತ ಕಂದಾಯ ನಿರೀಕ್ಷಕ ಮಂಜು ದೇವಾಡಿಗ ಮತ್ತು ಶಾರದಾ ಎಮ್. ಡಿ. ಇವರ ಪುತ್ರಿ. ಪುಣೆಯಲ್ಲಿ ಭಾವನಾಸ್ ಡಾನ್ಸ್ ಸ್ಟೂಡಿಯೋ ಮೂರು ಶಾಖೆಗಳನ್ನು ಹೊಂದಿರುವ ಭಾವನಾ, ಹಲವಾರು ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಅವರ ಮೂರನೇ ಸ್ಟುಡಿಯೋ ಇತ್ತಿಚಿಗಷ್ಟೇ ಪುಣೆಯ ವಿಶ್ರಾಂತ್ ವಾಡಿಯಲ್ಲಿ ಲೋಕಾರ್ಪಣೆಗೊಂಡಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಅಕ್ಟೋಬರ್ 24 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಸೈ ಟು ಡ್ಯಾನ್ಸ್’ನಲ್ಲಿ ಆಟ, ಮನೋರಂಜನೆ ಜೊತೆಗೆ ಕುಟುಂಬಕ್ಕೆ ಸಂಬಂಧಪಟ್ಟ ಟಾಸ್ಕ್ ಗಳಿದ್ದು. ದೇಶವಿದೇಶ ಸಂಸ್ಕೃತಿಯ ಜೊತೆಗೆ ಸಂಸಾರಕ್ಕೆ ಅನುಗುಣವಾಗಿ ನೃತ್ಯ ವಿಷಯಗಳು ಇರುತ್ತದೆ. ಚಿತ್ರರಂಗದ ದಿಗ್ಗಜ ಜಗ್ಗೇಶ್ ನಿರ್ಣಾಯಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿರಂಜನ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಪ್ರತಿ ವಾರವೂ ಒಂದು ಎಲಿಮಿನೇಷನ್ ರೌಂಡ್ ಇದ್ದು ಒಬ್ಬೊಬ್ಬರು ಎಲಿಮಿನೇಟ್ ಆಗುತ್ತಾರೆ. ‘ಸೈ ಟು ಡ್ಯಾನ್ಸ್’ ಮೂಲಕ ನಾಡಿನ ವೀಕ್ಷಕರಿಗೆ ಅಮ್ಮಂದಿರ ಅಭಿಲಾಷೆಯನ್ನು ಪೊರೈಸುವಲ್ಲಿ ಪ್ರಯತ್ನಿಸುತ್ತದೆ ಎಂದು ಸುವರ್ಣ ವಾಹಿನಿ ಹೇಳಿಕೊಂಡಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಇದನ್ನೂ ಓದಿ: ಪುಣೆಯಲ್ಲಿ ಭಾವನಾಸ್ ಡ್ಯಾನ್ಸ್ ಸ್ಟುಡಿಯೋ ಲೋಕಾರ್ಪಣೆ