ದಲಿತ ಮಕ್ಕಳ ಸಜೀವ ದಹನ ಖಂಡಿಸಿ ಶಾಸ್ತ್ರೀವೃತ್ತದ ಬಳಿ ಪ್ರತಿಭಟನೆ

Call us

Call us

Call us

ಕುಂದಾಪುರ: ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ವಹಿಸಿದ ಬಳಿಕ ನಿರಂತರವಾಗಿ ದಲಿತರ, ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಹಾಸನದ ಸಿಗರನಹಳ್ಳಿ ಪ್ರಕರಣ, ದಾವಣಗೆರೆಯ ಯುವ ಲೇಖಕ ಹುಚ್ಚಂಗಿ ಪ್ರಸಾದ್‌ರವರ ಕೈಗಳನ್ನು ಹಿಂದುತ್ವವಾದಿಗಳು ಕತ್ತರಿಸಿರುವ ಪ್ರಕರಣಗಳನ್ನು ಗಮನಿಸಿದರೆ ಕಾಂಗ್ರೇಸ್ ಸರಕಾರ ದಲಿತರಿಗೆ ರಕ್ಷಣೆ ನೀಡುವ ಬದಲು ಅತ್ಯಂತ ದಲಿತ ವಿರೋಧಿಯಾಗಿರುವುದು ಸಾಬೀತಾಗಿದೆ.

Call us

Click Here

ಹರಿಯಾಣದಲ್ಲಿ ದಲಿತ ಮಕ್ಕಳ ಸಜೀವದಹನ ಮನುಷ್ಯ ರೂಪದ ರಾಕ್ಷಕರು ನಡೆಸಿದ ಅತ್ಯಂತ ವೈಶಾಚಿತ ಕೃತ್ಯವಾಗಿದೆ. ಕೇಂದ್ರ ಸರಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು ಬಿಜೆಪಿ ಸಂಸದರು, ಸಚಿವರಾದ ವಿ.ಕೆ.ಸಿಂಗ್‌ರವರು ದಲಿತರನ್ನು ನಾಯಿಗೆ ಹೋಲಿಸಿ ಅವಹೇಳನ ಮಾಡುವ ಪ್ಯಾಸಿಸ್ಟ್ ಮಾದರಿಯ ಕೀಳು ಭಾಷೆಗಳನ್ನು ಬಳಸಿ ನಿಂದಿಸಿರುವುದು ಖಂಡನೀಯವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು.

ಅವರು ಇತ್ತೀಚೆಗೆ ದೇಶದಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದಾಳಿಯನ್ನು ಖಂಡಿಸಿ, ರಾಜಕೀಯ ಕಾರಣಕ್ಕಾಗಿ ಕೊಲೆಯಾದ ಅಖ್ಲಾಕ್ ಹಾಗೂ ಮೂಡುಬಿದಿರೆಯ ಪ್ರಶಾಂತ ಪೂಜಾರಿ ಹತ್ಯೆ ಖಂಡಿಸಿ ಕುಂದಾಪುರದ ಶಾಸ್ರ್ತೀ ವೃತ್ತದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸಿಪಿಐಎಂ ರಾಜ್ಯ ಮುಖಂಡರಾದ ಕೆ. ಪ್ರಕಾಶ್ ಮಾತನಾಡಿ, ದಾದ್ರಿಯ ಅಖ್ಲಾಕ್ ಹತ್ಯೆ ಅದು ಆಕಸ್ಮಿಕ ಘಟನೆ ಅಲ್ಲ. ಅದೊಂದು ಕೋಮುವಾದಿ ಅಜೆಂಡಾದ ರಾಜಕೀಯವಾಗಿದೆ. ಮಾಂಸ ಸೇವಿಸುವುದು ಹಿಂದುಳಿದವರ – ಅಲ್ಪಸಂಖ್ಯಾತರ ಪರಂಪರಾಗತ ಹಕ್ಕು. ಹಿಂದುತ್ವವಾದಿಗಳು ಭವಿಷ್ಯದಲ್ಲಿ ದೇವರ ಹೆಸರಿನ ಪುರಾಣಗಳಲ್ಲಿ ದಶಾವತಾರ ಎಂಬ ವಾದ ಹರಿಯಬಿಟ್ಟು, ಮುಂದೆಯೂ ಮೀನು ಮತ್ಸ್ಯವತಾರ, ವರಾಹವತಾರ ಎಂದು ಜನರನ್ನು ದಿಕ್ಕು ತಪ್ಪಿಸಿ, ಬಹುಸಂಖ್ಯಾತರ ಆಹಾರ ಕಸಿಯುವ ಅಪಾಯವಿದೆ ಎಂದು ಹೇಳಿದರು.

ಜನರಿಗೆ ಸನ್ಮಾರ್ಗ ತೋರಿಸಬೇಕಾದ ಪೇಜಾವರ ಶ್ರೀಗಳು ಅಖ್ಲಾಕ್ ಕೊಲೆಗೆ ಸಿಕ್ಕಿದ ಪ್ರಚಾರದ ಮಹತ್ವ ಪ್ರಶಾಂತ ಪೂಜಾರಿ ಕೊಲೆಗೆ ಸಿಕ್ಕಿಲ್ಲ ಎಂದು ಹೇಳಿರುವುದು ಖಂಡನೀಯವಾಗಿದೆ. ಯಾವುದೇ ಕೊಲೆಗಳನ್ನು ಸಮರ್ಥಿಸುವ ಬದಲು ನಾಗರಿಕ ಸಮಾಜದಲ್ಲಿ ಎಲ್ಲಾ ಹತ್ಯೆಗಳೂ ಸಮಾಜದ ಸ್ವಾಸ್ಥ ಕೆಡಿಸುತ್ತದೆ ಎಂಬ ಅರಿವಿರಬೇಕು. ಪ್ರಶಾಂತ ಪೂಜಾರಿ ಹತ್ಯೆಗೆ ರಾಜಕೀಯ ಆಯಾಮಗಳಿದ್ದರೂ ಮಾನವೀಯತೆ ಇರುವ ಯಾರು ಕೂಡ ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Click here

Click here

Click here

Click Here

Call us

Call us

ದಲಿತ ಮಕ್ಕಳ ಸಜೀವ ದಹನಕ್ಕೆ ಕೇಂದ್ರ ಸಚಿವರಾದ ವಿ.ಕೆ.ಸಿಂಗ್‌ರವರ ಅವಮಾನದ ಹೇಳಿಕೆ ದೇಶದ ಎಲ್ಲಾ ಜಾತಿ ಧರ್ಮಗಳ ಐಕ್ಯತೆ ಕಾಪಾಡುವ ಜವಾಬ್ದಾರಿ ಹೊಂದಿರುವ ರಕ್ಷಣ ಸಚಿವರ ವರ್ತನೆ ಅಪಾಯಕಾರಿಯಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ, ಬೈಂದೂರು ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಮಹಾಬಲ ವಡೇರಹೋಬಳಿ, ಲಕ್ಷ್ಮಣ ಕಾಪು, ರಾಜೇಶ್ ವಿ. ವೆಂಕಟೇಶ ಕೋಣಿ, ಬಲ್ಕೀಸ್, ನಾಗರತ್ನ ನಾಡ, ಶೀಲಾವತಿ, ಸುಬ್ರಹ್ಮಣ್ಯ ಆಚಾರ್, ಕವಿರಾಜ್, ರಾಜ ಬಿಟಿಆರ್ ಉಪಸ್ಥಿತರಿದ್ದರು.

CITU Kudnapura

Leave a Reply