ಶಿರೂರಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಬೈಂದೂರು: ಶಿರೂರು ಗ್ರಾಮದಲ್ಲಿನ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ನಿರ್ಗತಿಕರು, ಅಶಿಕ್ಷಿತ ಮಕ್ಕಳು ಹಾಗೂ ಇತರೆ ಫಲಾನುಭವಿಗಳಿಗೆ ನೂರಕ್ಕೆ ನೂರರಷ್ಟು ಸರಕಾರಿ ಸೌಲಭ್ಯಗಳು ದೊರೆತಾಗ ಮಾತ್ರ ಆದರ್ಶ ಗ್ರಾಮ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಶಿರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಈಗಾಗಲೇ ಶಿರೂರು ಗ್ರಾಮದ ಆಸ್ಪತ್ರೆ, ರಸ್ತೆ, ಸೇತುವೆ, ಕುಡಿಯುವ ನೀರು, ಮೀನುಗಾರಿಕಾ ಜಟ್ಟಿ ಮುಂತಾದವುಗಳಿಗೆ ಅನುದಾನ ಮಂಜೂರು ಮಾಡಲಾಗಿದ್ದು ಕೆಲಸ ಪ್ರಗತಿಯಲ್ಲಿದೆ. ಗ್ರಾಮದ ಜನರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಹೈನುಗಾರಿಕೆ, ಕೋಳಿ ಸಾಕಣೆಯಂತಹ ಸಣ್ಣ ಉದ್ದಿಮೆಗಳತ್ತ ಗಮನಹರಿಸಬೇಕು. ಮಹಿಳಾ ಸಂಘಟನೆ, ಯುವ ಸಂಘಟನೆಗಳ ಬಲವರ್ಧನೆಯಾಗಬೇಕು. ಇವೆಲ್ಲವೂ…
Author: ಸುನಿಲ್ ಹೆಚ್. ಜಿ. ಬೈಂದೂರು
ಸದಾನಂದ ಸುವರ್ಣರಿಗೆ ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ. ಚಿತ್ತಾರ 15ರ ಸಮಾರೋಪ ಕುಂದಾಪುರ: ಕರಾವಳಿಯ ಆಗು-ಹೋಗುಗಳ ಕುರಿತು ಸದಾ ಸ್ಪಂದಿಸುತ್ತಿದ್ದ ಡಾ| ಶಿವರಾಮ ಕಾರಂತರು ಕರಾವಳಿ ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದರು. ಅವರು 20ನೇ ಶತಮಾನದ ಅದ್ಭುತ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ರಂಗಕರ್ಮಿ ಸದಾನಂದ ಸುವರ್ಣ ಅಭಿಪ್ರಾಯಪಟ್ಟರು. ಅವರು ಕೋಟ ಕಾರಂತಭವನದಲ್ಲಿ ಕೋಟತಟ್ಟು ಗ್ರಾ.ಪಂ. ಸಾರಥ್ಯದಲ್ಲಿ, ಕಾರಂತ ಹುಟ್ಟೂರು ಪ್ರತಿಷ್ಠಾನ, ಕಾರಂತ ಟ್ರಸ್ಟ್ ಉಡುಪಿ ಸಹಕಾರದೊಂದಿಗೆ ಜರಗಿದ ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ – ಚಿತ್ತಾರ 15ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಾರಂತರಿಗೆ ಜ್ಞಾನದ ಹಸಿವೆಂಬುದಿತ್ತು. ಆದ್ದರಿಂದಲೇ ಅವರು ಕಾಲೇಜು ತೊರೆದು, ಕೌಟುಂಬಿಕ ಸಂಬಂಧಗಳನ್ನು ಮೀರಿ ವಿಶ್ವವೆಂಬ ಕಾಲೇಜಿಗೆ ತನ್ನನ್ನು ತಾನು ತೆರೆದುಕೊಂಡರು. ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಕೆಲಸ ಮುಂದಿನ ಪೀಳಿಗೆಗೆ ಪ್ರೇರಕ ಶಕ್ತಿಯಾಗಿ ಉಳಿದಿದೆ ಎಂದರು. ಕೋಟದ ಕಾರಂತ ಭವನದ ಮೂಲಕ ಕಾರಂತರ ನೆನಪುಗಳು ಈ ಪರಿಸರದಲ್ಲಿ ಚಿರನೂತವಾಗಿರಿಸಿದ ಈ ಊರಿನವರ…
googlecf3b0db837df0f6f
ಕುಂದಾಪುರ: ಸ್ವಚ್ಛ ಭಾರತ್ ಮಿಶನ್ ಅನುಷ್ಠಾನದ ಸ್ವಚ್ಛ ಭಾರತ್ ಪಾಕ್ಷಿಕ ಕಾರ್ಯಕ್ರಮ ಅಂಗವಾಗಿ ಕುಂದಾಪುರ ಪುರಸಭೆಯ ವತಿಯಿಂದ ಕೋಡಿ ಕಡಲ ಕಿನಾರೆಯ ಸ್ವಚ್ಛತಾ ಕಾರ್ಯಕ್ರಮ ಕೋಡಿ ಲೈಟ್ ಹೌಸ್ ಬಳಿ ಜರುಗಿತು. ಕುಂದಾಪುರದ ಭಂಡಾರ್ಸಕಾರ್ಸ್ ಕಾಲೇಜು, ಕೋಡಿ ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿದೇಶಿ ಸ್ವಯಂ ಸೇವಕರುಗಳ ಸಹಕಾರದೊಂದಿಗೆ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪುಸಭಾ ಅಧ್ಯಕ್ಷೆ ಕಲಾವತಿ ಯು.ಎಸ್., ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ರೋಟರಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ವಕೀಲ ಸಂಘದ ಕಾರ್ಯದರ್ಶಿ ಮುರಳೀಧರ ಶೆಟ್ಟಿ ಶಿರಿಯಾರ, ಪುರಸಭಾ ಸದಸ್ಯರಾದ ಸಂದೀಪ್ ಕೋಡಿ, ಪ್ರಭಾಕರ, ಜ್ಯೋತಿ ಉಪಸ್ಥಿತರಿದ್ದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ರಾಜೇಶ್ ಕಾವೇರಿ, ಶ್ರೀಧರ್ ಶೇರುಗಾರ್, ಚಂದ್ರಶೇಖರ್, ಪುಷ್ಪಾ ಶೇಟ್, ದೇವಕಿ ಸಣ್ಣಯ್ಯ, ಗುಣರತ್ನಾ, ರವಿರಾಜ ಖಾರ್ವಿ, ರವಿಕಲಾ, ವಿಜಯ ಎಸ್. ಪೂಜಾರಿ, ಸಿಸಿಲಿ ಕೋಟ್ಯಾನ್ ಮೊದಲಾದವರು ಭಾಗವಹಿಸಿದ್ದರು.
ಗಂಗೊಳ್ಳಿ: ನಮ್ಮ ಅಂಗೈಯಲ್ಲಿಯೇ ನಮ್ಮ ಆರೋಗ್ಯವಿದೆ. ಪ್ರತಿನಿತ್ಯ ನಮ್ಮ ಹಸ್ತ ಮತ್ತು ಪಾದಗಳನ್ನು ನಿರ್ದಿಷ್ಟ ರೀತಿಯಲ್ಲಿ ಸ್ಪರ್ಶಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ನಿಯಮಿತ ಆಹಾರ ಪದ್ಧತಿ ಹಾಗೂ ಅಕ್ಯೂಪ್ರೆಶರ್ ಪದ್ಧತಿ ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಇದನ್ನು ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ನಾರಾಯಣ ಆಚಾರ್ ಸಾಲಿಗ್ರಾಮ ಹೇಳಿದರು. ಅವರು ಗಂಗೊಳ್ಳಿಯ ಸೇವಾಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಜರಗಿದ ಮಾತೆಯ ದಸರಾ ಶಿಬಿರದಲ್ಲಿ ’ಅಂಗೈಯಲ್ಲಿ ಆರೋಗ್ಯ – ಅಕ್ಯೂಪ್ರೆಶರ್’ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ, ಕಾರ್ಯದರ್ಶಿ ಸವಿತಾ ಯು.ದೇವಾಡಿಗ, ಶಿಶು ಮಂದಿರದ ಸದಸ್ಯರಾದ ಬಿ.ರಾಘವೇಂದ್ರ ಪೈ, ಉಷಾ ಪಿ.ಮಡಿವಾಳ, ವಸಂತಿ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಮಾತಾಜಿ ಶೈಲಾ ಸ್ವಾಗತಿಸಿದರು. ಮಾತಾಜಿ…
ಕುಂದಾಪುರ: ವ್ಯಾಯಾಮ ಆಸನಗಳಿಗಿಂತ ಮುಂದುವರಿದು ದೇಹ, ಮನಸ್ಸು ಮತ್ತು ಉಸಿರಿನ ಮೇಲೆ ನಿಯಂತ್ರಣ ಸಾಧಿಸುವುದೇ ಯೋಗ, ಮನಸ್ಸನ್ನು ಒಂದೆಡೆ ತಡೆಗಟ್ಟಿ ಅಂತರಾತ್ಮದ ಕಡೆಗೆ ತಿರುಗಿಸಿ ಆತ್ಮಾಭಿಮುಖವಾಗಿ ಶರೀರ ರೋಮಾಂಚನ ಸ್ಥಿತಿಯತ್ತ ಸಾಗುವುದೇ ಕುಂಡಲಿನಿ ಜಾಗೃತಿ ಎಂದು ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಹೇಳಿದರು. ಅವರು ಶಂಕರನಾರಾಯಣ ಮಾವಿನಕೊಡ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ.ಪೂ ಶಿಕ್ಷಣ ಇಲಾಖೆ ಬೆಂಗಳೂರು, ಶ್ರೀ ಮೂಕಾಂಬಿಕ ಪ.ಪೂ.ಕಾಲೇಜು ಕೊಲ್ಲೂರು ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಕುಂಡಲಿನಿ ಯೋಗದಿಂದ ವ್ಯಕ್ತಿತ್ವ ವಿಕಸನ’ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ ಮಂಜಯ್ಯ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಅರುಣ ಪ್ರಕಾಶ ಶೆಟ್ಟಿ ಮಾತನಾಡಿ, ಸದೃಢವಾದ ದೇಹದಲ್ಲಿ ಉತ್ತಮ ಮನಸ್ಸನ್ನು ಸೇರಿದಾಗ ಮನೋಬಲ ಸಾಧಿಸಲು ಸಾದ್ಯ ಎಂದರು. ಅಂಗನವಾಡಿ ಶಿಕ್ಷಕಿ ಸುಜಾತ, ಆಶಾ ಕಾರ್ಯರ್ತೆ ವಸಂತಿ, ಶಿಬಿರಾಧಿಕಾರಿ ನಾಗರಾಜ ಅಡಿಗ, ವಾಸುದೇವ…
ಗಂಗೊಳ್ಳಿ : ಸುಮಾರು 450 ವರ್ಷಗಳ ಇತಿಹಾಸವುಳ್ಳ ಉಡುಪಿ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಕುಂದಾಪುರ ತಾಲೂಕಿನ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಮಹೋತ್ಸವವು ಅ.13 ರಿಂದ 23ರವರೆಗೆ ಜರುಗಲಿದೆ. ನವರಾತ್ರಿ ಮಹೋತ್ಸವದಲ್ಲಿ ಶ್ರೀದೇವಿಯ ಸನ್ನಿಧಿಯಲ್ಲಿ ದುರ್ಗಾಷ್ಟಮಿಯಂದು ದುರ್ಗಾ ದೀಪ ನಮಸ್ಕಾರ ಸೇವೆ, ವಿಜಯ ದಶಮಿಯಂದು ರಜತ ಪಲ್ಲಕಿ ಸೇವೆ, ಅ.25ರಂದು ಚಂಡಿಕಾ ಹವನ, ಗ್ರಾಮಪುರುಷ ದರ್ಶನ ಸೇವೆ, ಹರಕೆ ಸೀರೆಗಳ ಏಲಂ, ಸಂಜೆ ರಜತ ಪಲ್ಲಕಿ ಉತ್ಸವ ಸೇವೆ ಜರುಗಲಿದೆ. ನವರಾತ್ರಿ ದಿನದಂದು ಪ್ರತಿದಿನ ಮಧ್ಯಾಹ್ನ ಮಹಾಪೂಜೆ, ಮಹಾಸಮಾರಾಧನೆ, ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋಟ: ನಮ್ಮೊಂದಿಗೆ ಬದುಕಲು ಭೂಮಿಗೆ ಬಂದ ಜೀವಿ ಹಾವುಗಳು. ಅವಗಳನ್ನು ಕಂಡಾಕ್ಷಣ ಭಯಭೀತರಾಗಿ ಆತಂಕಿತರಾಗಿ ಮಾಡುವ ಎಡವಟ್ಟುಗಳಿಂದ ಅನಾಹುತ ಸಂಭವಿಸುತ್ತದೆ ಹೊರತು, ತನ್ನಷ್ಟಕ್ಕೆ ಬಂದು ಕಚ್ಚುವ ಅಭ್ಯಾಸ ಅವುಗಳಿಗೆ ಇಲ್ಲ. ಹಾವುಗಳು ನಿರುಪದ್ರವಿ ಮತ್ತು ಸ್ನೇಹ ಜೀವಿಗಳು ಎಂದು ಶ್ರೀ ಕ್ಷೇತ್ರ ಅಂಬಲಪಾಡಿಯ ಧರ್ಮದರ್ಶಿ ಡಾ.ನಿ.ವಿಜಯ ಬಲ್ಲಾಳ್ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ ೮ನೇ ದಿನದ ಅಂಗವಾಗಿ ದಿ.ಸಿ.ಮನೋಹರ ತೋಳಾರ್ ದತ್ತಿನಿಧಿ ಪ್ರಾಯೋಜಕತ್ವದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಡ, ಅಜೇಯ ಕ್ರಿಕೆಟರ್ಸ್ ಕುಂಜಿಗುಡಿ, ಸೆಲ್ಕೋ ಸೋಲಾರ್ ಪ್ರೈ ಲಿಮಿಟೆಡ್, ಸಿಂಡಿಕೇಟ್ ಬ್ಯಾಂಕ್ ಸಾಲಿಗ್ರಾಮ ಶಾಖೆ, ಚೇಂಪಿ ನಾರಾಯಣ ಶ್ಯಾನುಭಾಗ ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಉರಗ ತಜ್ಞ ಗುರುರಾಜ ಸನಿಲ್ ಪ್ರಸ್ತುತ ಪಡಿಸಿದ ಉರಗ ಪ್ರದರ್ಶನ ಪ್ರಾತ್ಯಕ್ಷಿಕೆ ಹಾವು ನಾವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೊದಲು ನಮ್ಮಲ್ಲಿನ ಭಯ ನಿವಾರಣೆಯಾಗಬೇಕು. ಕೇವಲ ಉರಗಗಳ ವಿಚಾರಕ್ಕೆ ಹೊರತುಪಡಿಸಿ ಕೂಡ ನಮ್ಮಲ್ಲಿ ಭಯ ದೂರವಾದರೆ ಸಾಧನೆಗೆ ಅವಕಾಶವಾಗುತ್ತದೆ…
ಕೋಟ: ಅನುಕೂಲತೆಗಳು ಜಾಸ್ತಿಯಾದಂತೆ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಒಂದರ್ಥದಲ್ಲಿ ಜನ ಸಂಪತ್ಭರಿತರಾಗುತ್ತಿದ್ದಾರೆ ಎನ್ನಬಹುದು. ಕೃಷಿಯನ್ನು ನೆಚ್ಚಿಕೊಂಡು ಬದುಕು ಸಾಗಿಸಬೇಕಾದ ಅಗತ್ಯತೆ ಇಂದು ಇಲ್ಲವಾಗಿದೆ. ಕೃಷಿ ದೇಶವಾಗಿ ಗುರುತಿಸಿಕೊಂಡ ನಮ್ಮ ದೇಶ ಮುಂದೆ ಕೃಷಿ ದೇಶವಾಗಿ ಉಳಿಯುವ ಲಕ್ಷಣಗಳು ಕಾಣುತ್ತಿಲ್ಲ. ನಿರಾಸಕ್ತಿ ಕೃಷಿಗೆ ಮಾರಕವಾಗುತ್ತಿದೆ ಎಂದು ಸಾಂಸ್ಕೃತಿಕ ಚಿಂತಕ, ಕೃಷಿಕ ಶಿವಾನಂದ ಹಂದೆ ಹೇಳಿದರು. ಅವರು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಕಾರ್ಯಕ್ರಮದ ೭ ದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಕೋಟತಟ್ಟು ಒಕ್ಕೂಟ, ರೋಟರಿ ಕ್ಲಬ್ ಕೋಟ ಸಿಟಿ, ಅಘೋರೇಶ್ವರ ಫ್ರೆಂಡ್ಸ್ ಕಾರ್ತಟ್ಟು ಚಿತ್ರಪಾಡಿ ಇವರ ಆಶ್ರಯದಲ್ಲಿ ಆಯೋಜಿಸಲಾದ ಪ್ರಗತಿ ಪರ ರೈತರ ಸಮಾವೇಶ ಒತ್ತಾಸೆ ಅನುಭವದ ಭಾವಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮವನ್ನು ನಾಟಿ ಮಾಡುವುದರ ಮೂಲಕ ಉದ್ಘಾಟಿಸಲಾಯಿತು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ…
