ಕುಂದಾಪುರ: ಸ್ವಚ್ಛ ಭಾರತ್ ಮಿಶನ್ ಅನುಷ್ಠಾನದ ಸ್ವಚ್ಛ ಭಾರತ್ ಪಾಕ್ಷಿಕ ಕಾರ್ಯಕ್ರಮ ಅಂಗವಾಗಿ ಕುಂದಾಪುರ ಪುರಸಭೆಯ ವತಿಯಿಂದ ಕೋಡಿ ಕಡಲ ಕಿನಾರೆಯ ಸ್ವಚ್ಛತಾ ಕಾರ್ಯಕ್ರಮ ಕೋಡಿ ಲೈಟ್ ಹೌಸ್ ಬಳಿ ಜರುಗಿತು. ಕುಂದಾಪುರದ ಭಂಡಾರ್ಸಕಾರ್ಸ್ ಕಾಲೇಜು, ಕೋಡಿ ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿದೇಶಿ ಸ್ವಯಂ ಸೇವಕರುಗಳ ಸಹಕಾರದೊಂದಿಗೆ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪುಸಭಾ ಅಧ್ಯಕ್ಷೆ ಕಲಾವತಿ ಯು.ಎಸ್., ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ರೋಟರಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ವಕೀಲ ಸಂಘದ ಕಾರ್ಯದರ್ಶಿ ಮುರಳೀಧರ ಶೆಟ್ಟಿ ಶಿರಿಯಾರ, ಪುರಸಭಾ ಸದಸ್ಯರಾದ ಸಂದೀಪ್ ಕೋಡಿ, ಪ್ರಭಾಕರ, ಜ್ಯೋತಿ ಉಪಸ್ಥಿತರಿದ್ದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ರಾಜೇಶ್ ಕಾವೇರಿ, ಶ್ರೀಧರ್ ಶೇರುಗಾರ್, ಚಂದ್ರಶೇಖರ್, ಪುಷ್ಪಾ ಶೇಟ್, ದೇವಕಿ ಸಣ್ಣಯ್ಯ, ಗುಣರತ್ನಾ, ರವಿರಾಜ ಖಾರ್ವಿ, ರವಿಕಲಾ, ವಿಜಯ ಎಸ್. ಪೂಜಾರಿ, ಸಿಸಿಲಿ ಕೋಟ್ಯಾನ್ ಮೊದಲಾದವರು ಭಾಗವಹಿಸಿದ್ದರು.