ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ವಿಶ್ವ ಕುಂದಾಪ್ರ ಕನ್ನಡ ಪ್ರತಿಷ್ಠಾನದ ನೇತೃತ್ವದಲ್ಲಿ ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಸಂಘದಲ್ಲಿ ಅದ್ದೂರಿ ಕುಂದಾಪುರ ಕನ್ನಡ ಹಬ್ಬ ಭಾನುವಾರ ಯಶಸ್ವಿಯಾಗಿ ನೆರವೇರಿತು. ಸಾವಿರಾರು ಕುಂದಾಪ್ರ ಕನ್ನಡಿಗರು ಒಂದುಗೂಡಿ ಸಂಭ್ರಮಿಸಿ ಬೆಂಗಳೂರಿನಲ್ಲಿಯೂ ಅಭಿವ್ಯಕ್ತಿಯ ಮೂಲಕವೇ ಕುಂದಾಪುರವನ್ನು ಸೃಷ್ಟಿಸಿದರು. ಬೆಳಿಗ್ಗೆ ಕುಂದಾಪುರದ ರಥವನ್ನು ಶಾಸಕರುಗಳಾದ ಗುರುರಾಜ್ ಗಂಟಿಹೊಳೆ ಕಿರಣ್ ಕುಮಾರ್ ಕೊಡ್ಗಿ , ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರು ಅವರು ಜತೆಯಾಗಿ ಎಳೆದು ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಯಕ್ರಮವನ್ನೂ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು. ಇದನ್ನೂ ಓದಿ: ► ಕುಂದಾಪ್ರ ಡಾಟ್ ಕಾಂ & ಕುಂದ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನ – https://kundapraa.com/?p=67728 . ಉದ್ಘಾಟನೆ ಬಳಿಕ ಯಕ್ಷಗಾನ, ಹಾಡು ನಾಟಕ ಪ್ರದರ್ಶನಗೊಂಡವು. ನೃತ್ಯ, ಮಾತಿನ ಚಾವಡಿ, ಟೀಮ್ ಕುಂದಾಪುರಿಯನ್ಸ್ ತಂಡದಿಂದ ಮಿಂಚುಳ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿನಿ, ಬಸ್ರೂರು ಮೂರುಕೈ ಬ್ಯಾಂಕರ‍್ಸ್ ಕಾಲನಿ ನಿವಾಸಿ ಜಗದೀಶ್ ರಾವ್ ಹಾಗೂ ಸ್ಮಿತಾ ಜೆ.ರಾವ್ ಪುತ್ರಿ ನೇಹಾ ಜೆ. ರಾವ್, ವಿಜ್ಞಾನ ವಿಭಾಗದಲ್ಲಿ 594 ಅಂಕ ಪಡೆದು ತೃತೀಯ ರ‍್ಯಾಂಕ್ ಪಡೆದರೆ ಉಡುಪಿ ಜಿಲ್ಲೆಗೆ 2ನೇ ರ್ಯಾಂಕ್ ಪಡೆದಿದ್ದಾಳೆ. ರ‍್ಯಾಂಕ್ ಪಡೆದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವಿದ್ಯಾರ್ಥಿನಿ ನೇಹಾ ಕುಂದಾಪ್ರ ಡಾಟ್ ಕಾಂ ಜೊತೆಗೆ ಸಂತಸ ಹಂಚಿಕೊಂಡಿದ್ದು, ನಾನು ಯಾವುದೇ ಟೂಶನ್ ತರಗತಿಗೆ ಹೋಗದೆ, ಕಾಲೇಜು ಶಿಕ್ಷಕರ ತರಬೇತಿ ಹಾಗೂ ಮಾರ್ಗದರ್ಶನದಿಂದ ಮತ್ತು ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಟೈಮ್ಟೇಬಲ್ ಪ್ರಕಾರ ಓದುತ್ತಿರಲಿಲ್ಲ. ಓದಿಗೆ ಒತ್ತಡವೂ ಇರಲಿಲ್ಲ. ಹೆಚ್ಚಾಗಿ ಹಗಲಿನ ವೇಳೆ ಓದುತ್ತಿದ್ದೆ ಎಂದಿದ್ದಾಳೆ. ಮುಂದೆ ಕಂಟ್ಯೋಟರ್ ಸೈನ್ ತೆಗೆದುಕೊಂಡು ಇಂಜಿನಿಯರ್ ಮಾಡುವ ಗುರಿ ಇದೆ ಎಂದಿದ್ದಾಳೆ. ನೇಹಾಳಿಗೆ ಟ್ರಾಯಿಂಗ್, ಪೇಂಟಿಂಗ್ ನೆಚ್ಚಿನ ಅವ್ಯಾಸವಾಗಿದ್ದು, ಆಂಕರ್ ಆಸಕ್ತ ಕ್ಷೇತ್ರವಾಗಿದ್ದು, ಕಾಲೇಜು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡೂವುದೂ ಇಷ್ಟದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಸುಗಮ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಎಲ್ಲಾ ಸಿದ್ದತೆಗಳ್ನು ನಡೆಸಲಾಗುತ್ತಿದ್ದು, ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಸನ್ನದುದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದರು. ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊದಿಗೆ ಹಾಗೂ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಯಲ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಮದ್ಯ ಮಾರಾಟಗಾರರು ಪ್ರತಿ ದಿನದ ದಾಸ್ತಾನು ಮತ್ತು ಮಾರಾಟದ ವಿವರಗಳ ದಾಖಲೆಗಳನ್ನು ನಿರ್ವಹಿಸುವುದರ ಜೊತೆಗೆ ಅಬಕಾರಿ ಇಲಾಖೆಗೆ ನಿಗಧಿತ ಮಾಹಿತಿಯನ್ನು ಒದಗಿಸಬೇಕು, ಇದರಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಮತ್ತು ನಿಗಧಿತ ಸ್ಥಳವನ್ನು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಲ್ಲಿ ಅಂತಹ ಸನ್ನದುದಾರರ…
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿಬೈಂದೂರು: ಕಡಲ ತಡಿ ಮತ್ತು ಸಹ್ಯಾದ್ರಿ ಶಿಖರಶ್ರೇಣಿಯ ನಡುವೆ ಹಚ್ಚ ಹಸುರನ್ನು ಹೊದ್ದು ಮಲಗಿರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ನಿಧಾನಕ್ಕೆ ಏರುತ್ತಿದೆ. ಸದ್ಯ ಕ್ಷೇತ್ರದಲ್ಲಿ ಬೇಕು – ಬೇಡ, ಬೇಡಿಕೆಗಳದ್ದೇ ಮಾತು. ತೀರಾ ಹಿಂದುಳಿದ, ಗುಡ್ಡಗಾಡು ಪ್ರದೇಶವನ್ನು ಒಳಗೊಂಡ ವಿಧಾನಸಭಾ ಕ್ಷೇತ್ರವೆಂಬ ಹಣೆಪಟ್ಟಿ ಹೊಂದಿರುವ ಬೈಂದೂರು ಸುಮಾರು 110 ಕಿ.ಮೀ ಪಶ್ಚಿಮ ಘಟ್ಟ ಹಾಗೂ 40 ಕಿ.ಮೀ ಪಶ್ಚಿಮ ಕರಾವಳಿ ಪ್ರದೇಶವನ್ನೊಳಗೊಂಡಿದ್ದು, ಭೌಗೋಳಿಕವಾಗಿ ವಿಸ್ತಾರವಾಗಿದೆ. 2008ರಲ್ಲಿ ಕ್ಷೇತ್ರ ಮರುವಿಂಗಡನೆಯ ಸಂದರ್ಭ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಕುಂದಾಪುರದ ಕೆಲವು ಭಾಗಗಳು ಸೇರ್ಪಡೆಗೊಂಡಿದೆ. ಅಲ್ಲದೇ ಇದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಸೇರ್ಪಡೆಗೊಂಡಿತ್ತು. ಕುಂದಾಪುರ ತಾಲೂಕಿನ ಭಾಗವಾಗಿದ್ದ ಬೈಂದೂರು 2018ರಲ್ಲಿ ಸ್ವತಂತ್ರ ತಾಲೂಕಾಯಿತು. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸೋದ್ಯಮ, ವಾಣಿಜ್ಯೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅನುಭವದ ಕೊರತೆಯಿಂದಾಗಿಯೇ ಅಭಿವೃದ್ಧಿ ಎಂಬುದು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೇ ಸೀಮಿತವಾಗಿದೆ. ನೀರು, ರಸ್ತೆ,…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ 24 ವರ್ಷಗಳಿಂದ ಶಾಸಕರಾಗಿ, ಅಭಿಮಾನಿಗಳಗೆ ‘ಕುಂದಾಪುರದ ವಾಜಪೇಯಿ’ ಎಂದೆನಿಸಿಕೊಂಡಿರುವ ಹಾಲಾಡಿ ಅವರ ಈ ನಡೆಯಿಂದಾಗಿ, ಸದ್ಯ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಕುತೂಹಲ ಮೂಡಿದೆ. ವಿಧಾನಸಭಾ ಚುನಾವಣೆಗೆ ಪುರ್ವಭಾವಿಯಾಗಿ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸ್ವತಃ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಈ ಇಚ್ಛೆ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದ ಇದನ್ನು ಸ್ವತಃ ಶಾಸಕರ ಆಪ್ತರು ದೃಢೀಕರಿಸಿದ್ದಾರೆ. ಎ.ಜಿ. ಕೊಡ್ಗಿ ಅವರ ಪುತ್ರ ಹಾಗೂ ತಮ್ಮ ಆಪ್ತ ಕಿರಣ ಕೊಡ್ಗಿ ಅವರಿಗೆ ಕುಂದಾಪುರದ ಟಿಕೆಟ್ ನೀಡುವಂತೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಈ ಭಾರಿ ಬಿಜೆಪಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ನೀಡುತ್ತಾ – ಇಲ್ಲವೇ ಎಂಬ ಚರ್ಚೆಯ ಬೆನ್ನಲೇ ಸ್ವತಃ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರಕ್ಕೆ…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಅರಬ್ಬೀ ಸಮುದ್ರದ ತಟ, ಮಲೆನಾಡಿನ ಪ್ರದೇಶಗಳನ್ನೊಳಗೊಂಡ ಜಿಲ್ಲೆಯ ವಿಸ್ತಾರವಾದ ಪ್ರದೇಶ – ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಕ್ಷಗಳ ಹುರಿಯಾಳುಗಳ ಮತಭೇಟೆಯಲ್ಲಿ ತೊಡಗಿದ್ದಾರೆ. ಈ ಭಾರಿ ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬ ಕುತೂಹಲವಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಅಭ್ಯರ್ಥಿ ಯಾರು ಎಂಬುವುದರ ಮೇಲೆ ಕಾಂಗ್ರೆಸ್ – ಬಿಜೆಪಿ ಗೆಲುವಿನ ಲೆಕ್ಕಾಚಾರ ನಿರ್ಣಯವಾಗಲಿದೆ. 69 ಗ್ರಾಮಗಳನ್ನು ಹೊಂದಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 218 ಮತಗಟ್ಟೆಗಳಿವೆ. ಕ್ಷೇತ್ರ ಪುನರ್ ವಿಂಗಡನೆಯ ಬಳಿಕ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಬಹುಪಾಲು ಕ್ಷೇತ್ರಗಳು ಕುಂದಾಪುರ ಕ್ಷೇತ್ರವನ್ನು ಸೇರಿದ್ದವು. ಹಂಗಾರಕಟ್ಟೆಯಿಂದ ಕೋಡಿ ತನಕದ ಕರಾವಳಿ ಭಾಗ, ಹೊಸಂಗಡಿಯಿಂದ ಈಚೆಗಿನ ಮಲೆನಾಡಿನ ಗ್ರಾಮಗಳು, ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತಿ ಕುಂದಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಕುಂದಾಪುರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಂಯುಕ್ತ ಜನತಾದಳ ಪಕ್ಷಗಳು ಸ್ಪರ್ಧಿಸಿದ್ದರೂ, ಬಿಜೆಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಬೆಂಗಳೂರು ಇವರು ಡಿಸೆಂಬರ್-2022ರಲ್ಲಿ ನಡೆಸಿದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ವೈಶವಿ ಶೆಟ್ಟಿಗಾರ್ ಇವರು ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಂಕಿತ ದೀಪಕ್ ಬೆಂಗಳೂರು ಇವರ ಶಿಷ್ಯರಾಗಿದ್ದು, ದಯಾನಂದ ಶೆಟ್ಟಿಗಾರ್ ಮತ್ತು ಶ್ಯಾಮಲಾಕ್ಷಿ ಶೆಟ್ಟಿಗಾರ್ ಅವರ ಪುತ್ರಿ.
ಇನ್ನೊಬ್ಬರ ಕಣ್ಣೀರು ಒರೆಸುವಲ್ಲಿ ನಿಜವಾದ ಖುಷಿಯಿದೆ – ಗೋವಿಂದ ಬಾಬು ಪೂಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಬಂದರು ಹಿತ್ಲುಗದ್ದೆ ಮನೆ ಶ್ರೀ ಪಂಜುರ್ಲಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯೋತ್ಸವ ಹಾಗೂ ಮಾರಿಜಾತ್ರೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು. ಸೋಮವಾರ ಗುರುಪೂಜೆ, ಕಲಾತತ್ವಹೋಮ, ೧೦೮ ಕಲಶ ಸ್ಥಾಪನೆ, ಅಧಿವಾಸ ಹೋಮ, ಮಹಾಪೂಜೆ, ಸ್ವಾಮಿ ಮತ್ತು ಬೊಬ್ಬರ್ಯ ದೈವಸ್ಥಾನದಲ್ಲಿ ನವಕ ಪ್ರಧಾನ ಕಲಾತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಂಗಳವಾರ ಶ್ರೀ ನಾಗ ದೇವರಿಗೆ ಆಶ್ಲೇಷಬಲಿ, ಕಲಾತತ್ವಹೋಮ, ಪಂಚವಿಂಶತಿ ಕಲಶ ಸ್ಥಾಪನೆ, ಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಮಾರಿಜಾತ್ರೆ, ತುಲಾಭಾರ ಸೇವೆ ಹಾಗೂ ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು. ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ವರದಿ.ಬೈಂದೂರು: ಗುಣಮಟ್ಟದ ಶಿಕ್ಷಣದ ಮೂಲಕವೇ ಬೈಂದೂರು ಪರಿಸರದಲ್ಲಿ ಮನೆಮಾತಾದ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನಗೈದ ಶಾಲೆಗೀಗ 50ರ ಹರೆಯ. ಖಾವಂದರೆಂದರೆ ನಡೆದಾಡುವ ದೇವರೆಂದು ಪೂಜಿಸುವ ಮಂದಿಯ ನಡುವೆ, ಖಾವಂದರ ಆಶೀರ್ವಾದದ ಫಲವಾಗಿ ಮುನ್ನಡೆಯುತ್ತಾ ಬಂದ ಉಡುಪಿ ಜಿಲ್ಲೆಯ ಏಕೈಕ ಅನುದಾನಿತ ಶಾಲೆಯೀಗ ತನ್ನ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸುತ್ತಿದೆ. ಹೌದು. ತಾಲೂಕಿನ ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಗೀಗ ಸುವರ್ಣ ಸಂಭ್ರಮ. ಎಸ್.ಡಿ.ಎಂ ಹಿರಿಯ ಪ್ರಾಥಮಿಕ ಶಾಲೆಯಾಗಿ ಗುರುತಿಸಿಕೊಳ್ಳುವ ಮೊದಲು ಮಯ್ಯಾಡಿಯಲ್ಲಿದ್ದುದು ನಿತ್ಯಾನಂದ ಎಡೆಡ್ ಹೈಯರ್ ಪ್ರೈಮೆರಿ ಸ್ಕೂಲ್ ಎಂಬ ಅನುದಾನಿತ ಶಾಲೆ. 1938ರಲ್ಲಿ ಶೈಕ್ಷಣಿಕ ಸೇವೆಯ ಮಹದಾಸೆಯಿಂದ ಸಮಾನ ಮನಸ್ಕರೊಡಗೂಡಿ ಆರಂಭಿಸಿದ ಶಾಲೆ ಮಯ್ಯಾಡಿಯ ಖಾಸಗಿ ಕಟ್ಟಡಗಳಲ್ಲಿಯೇ ಹತ್ತಾರು ವರ್ಷ ಮುನ್ನಡೆದಿತ್ತು. ಎಂ. ದ್ಯಾವಪ್ಪ ಶೇರುಗಾರ್ ಅವರು ಶಾಲೆಯ ಮುಖ್ಯೋಪಧ್ಯಾಯರಾಗಿದ್ದರು. ಕಾಲಕ್ರಮೇಣ ಸರಕಾರದ ನೀತಿಯಂತೆ ಅನುದಾನ ಪಡೆಯಲು ಸ್ವಂತ ಕಟ್ಟಡ ಪಡೆಯುವುದು ಅನಿವಾರ್ಯವಾದಾಗ ಆಡಳಿತ ಮಂಡಳಿಗೆ ಜಾಗ ಖರೀದಿಸಿ, ಕಟ್ಟಡ ನಿರ್ಮಿಸುವುದು ಕಷ್ಟಸಾಧ್ಯವಾಯಿತು. ಆಗ ಮಯ್ಯಾಡಿಯ…
