Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕೋಟ: ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಅಕ್ಟೋಬರ್ 1ರಿಂದ 10ರವರೆಗೆ ನಡೆಯಲಿರುವ ಚಿತ್ತಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲಿರುವ ರಂಗಕರ್ಮಿ ಛಾಯಾಗ್ರಾಹಕ ಸದಾನಂದ ಸುವರ್ಣ ಅವರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭ ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ ಅವರು ಶ್ರೀಯುತರಿಗೆ ಶಾಲು ಹೊದಿಸಿ ಗೌರವಿಸಿ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿದರು. ಈ ಸಂದರ್ಭ ಪ್ರತಿಷ್ಠಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ಕೋಟ ನರೇಂದ್ರ ಕುಮಾರ್, ಸಂಜೀವ ಗುಂಡ್ಮಿ ಮತ್ತು ಥೀಂ ಪಾರ್ಕ ವಕ್ತಾರ ಅಶ್ವಥ್ ಆಚಾರ್ಯ ಯಡಬೆಟ್ಟು ಉಪಸ್ಥಿತರಿದ್ದರು.

Read More

ಬೈಂದೂರು: ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಅರೆಶಿರೂರಿನ ನಿವಾಸಿ ಹೋಟೆಲ್ ಉದ್ಯಮಿಯಾಗಿದ್ದ ಕೆ. ನರಸಿಂಹಮೂರ್ತಿ ಶ್ಯಾನುಭಾಗ್(49) ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಖಾಸಗಿ ಅಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಇವರ ಪತ್ನಿ ಬೈಂದೂರು ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಎನ್. ಶ್ಯಾನುಭಾಗ್‌ರನ್ನು ಅಗಲಿದ್ದಾರೆ.

Read More

ಕುಂದಾಪುರ: ಸೌಪರ್ಣಿಕ ವಾರ್ತೆ ಪತ್ರಿಕೆಯ ಸಂಪಾದಕ ಸುಭ್ರಹ್ಮಣ್ಯ ಭಟ್ ಅಲ್ಪಕಾಲದ ಅಸೌಖ್ಯದಿಂದ ಸೆ.25ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿರುತ್ತಾರೆ. ಉದಯವಾಣಿ ದೈನಿಕದ ಜಾಹೀರಾತು ವಿಭಾಗದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದ ಪತ್ರಕರ್ತ ಸುಬ್ರಹ್ಮಣ್ಯ ಭಟ್‌, ಇತ್ತೀಚೆಗೆ “ಸೌಪರ್ಣಿಕಾ ವಾರ್ತೆ’ ಎಂಬ ಸ್ವಂತ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಈ ಹಿಂದೆ ಹಲವು ಪತ್ರಿಕೆಗಳಲ್ಲಿ ದುಡಿದಿ ದ್ದರು. ಮೃತರು ವಂಡ್ಸೆ ಸಮೀಪದ ಹೊಸೂರು ಮೂಲದವರಾಗಿದ್ದು ಕುಂದಾಪುರ ಹವ್ಯಕ ಬ್ರಾಹ್ಮಣ ಸಮಾಜದ ಸಂಘಟನೆಯಲ್ಲಿ ಸಕ್ರಿಯ ರಾಗಿದ್ದರು. ಹೊಸನಗರದ ರಾಮಚಂದ್ರ ಮಠದೊಡನೆ ನಿಕಟ ಸಂಬಂಧವನ್ನು ಹೊಂದಿರುವ ಅವರು ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಸದಸ್ಯ ರಾಗಿದ್ದರು. ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅತೀವ ದುಃಖ ವ್ಯಕ್ತ ಪಡಿಸಿದ್ದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.

Read More

ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯ ಅರಿವು ಮೂಡಿಸಲು ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ಹಮ್ಮಿಕೊಂಡ ಆರೋಗ್ಯಕ್ಕಾಗಿ ಓಟ ಕುಂದಾಪುರ: ವಿಶ್ವ ಹೃದಯ ದಿನದ ಅಂಗವಾಗಿ, ಆರೋಗ್ಯದ ಬಗೆಗೆ ಜನಜಾಗೃತಿ ಮೂಡಿಸಲು ಇಂದು(ಸೆ.27) ರೋಟರಿ ಕ್ಲಬ್ ಕುಂದಾಪುರ ಹಾಗೂ ನ್ಯೂ ಮೆಡಿಕಲ್ ಸೆಂಟರ್ ಜಂಟಿಯಾಗಿ ಹಮ್ಮಿಕೊಂಡ ’ಆರೋಗ್ಯಕ್ಕಾಗಿ ಓಟ-2015’ ಭಾರಿ ಜನಮನ್ನಣೆ ಗಳಿಸಿತು. ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಆಯೋಜಿಸಲಾಗಿದ್ದ ಓಟ ಸ್ವರ್ಧೆಯಲ್ಲಿ 18 ವರ್ಷ ಮೇಲ್ಪಟ್ಟ 150ಕ್ಕೂ ಹೆಚ್ಚು ಸ್ವರ್ಧಾಳುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಬೆಳ್ಳಿಗೆ ೮ಗಂಟೆಗೆ ಕುಂದಾಪುರದ ಗಾಂಧಿಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಬಲೂನ್ ಹಾರಿಸಿ, ಬಾವುಟದ ನಿಶಾನೆ ತೋರುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ಗಾಂಧಿಮೈದಾನದಿಂದ ಹೊರಟ ಸ್ವರ್ಧಾಳುಗಳು ಶಾಸ್ತ್ರಿ ಪಾರ್ಕ್, ಪಾರಿಜಾತ ಸರ್ಕಲ್ ಮೂಲಕ ಹೊಸ ಬಸ್ ನಿಲ್ದಾಣವನ್ನು ತಲುಪಿ ಅಲ್ಲಿಂದ ಪುರಸಭೆ ರಸ್ತೆಯನ್ನು ದಾಟಿ ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆಯ ಮೂಲಕ ಮತ್ತೆ ಗಾಂಧಿ ಮೈದಾನವನ್ನು ತಲುಪಿದರು. ಒಟ್ಟು 3.2ಕಿ.ಮೀ ದೂರವನ್ನು…

Read More

ಕುಂದಾಪುರ: ರೆಡ್ ಆಪಲ್ ಮೂವಿಸ್ ಕ್ರೀಯೆಷನ್ಸ್ ನ ಯುವ ನಿರ್ದೇಶಕ ದೇವರಾಜ್ ಪೂಜಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ‘ ಕಿನಾರೆ’ ಗೆ ಉಡುಪಿ, ಕುಂದಾಪುರ ಭಾಗಗಳಿಂದ ಪ್ರತಿಭಾವಂತ ಕಲಾವಿದರು ಬೇಕಾಗಿದ್ದಾರೆ.  ಆಸಕ್ತರು ತಮ್ಮ ಇತ್ತಿಚಿನ ಭಾವಚಿತ್ರದೊಂದಿಗೆ ಸೆಪ್ಟಂಬರ್ 27ರ ಭಾನುವಾರ ಕುಂದಾಪುರ ಹೋಟೆಲ್ ಶರೋನ್ ಮಿನಿ ಹಾಲಿನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ನಡೆಯುವ ಆಡಿಶನ್ ನಲ್ಲಿ ತಮ್ಮ ಇತ್ತಿಚಿನ ಭಾವಚಿತ್ರದೊಂದಿಗೆ ಭಾಗವಹಿಸಬಹುದಾಗಿದೆ.

Read More

ಕುಂದಾಪುರ: ಸಿಐಟಿಯುಗೆ ಸಂಯೋಜಿಸಲ್ಪಟ್ಟ ಕುಂದಾಪುರ ಬೀಡಿ ವರ್ಕರ್ಸ್ ಯೂನಿಯನ್ ಇದರ 22ನೇ ವಾರ್ಷಿಕ ಮಹಾಸಭೆಯ ಇತ್ತಿಚಿಗೆ ಕುಂದಾಪುರ ಕಾರ್ಮಿಕ ಭವನದಲ್ಲಿ ಜರಗಿತು. ಬೀಡಿ ವರ್ಕರ್ಸ್ ಯೂನಿಯನ್ ಕುಂದಾಪುರ ತಾಲೂಕು ಅಧ್ಯಕ್ಷೆ ಬಲ್ಕೀಸ್‌ರವರು ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಬೀಡಿ ಕೈಗಾರಿಕೆ ಬಿಕ್ಕಟ್ಟಿನಲ್ಲಿದೆ. ಜಗತ್ತಿನಾದ್ಯಂತ ತಂಬಾಕು ನಿಷೇದದಿಂದಾಗಿ ಭಾರತದಲ್ಲಿ 1.5 ಕೋಟಿ ಬೀಡಿ ಕೆಲಸಗಾರರು ಕೆಲಸ ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬದಲಿ ಕೆಲಸ ಸೃಷ್ಠ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಬೀಡಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ನುಂಗಿ ಹಾಕಲು ಬೀಡಿ ಮಾಲಕರು ಮತ್ತು ಸರಕಾರಗಳು ಪ್ರಯತ್ನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಿಐಟಿಯು ಮುಖಂಡರಾದ ಎಚ್. ನರಸಿಂಹ, ಸುರೇಶ ಕಲ್ಲಾಗರ, ವೆಂಕಟೇಶ ಕೋಣಿ, ಇವರು ಶುಭಕೋರಿ ಮಾತನಾಡಿದರು. ಏಪ್ರಿಲ್ 2015 ರಿಂದ ಬೀಡಿ ಕಾರ್ಮಿಕರಿಗೆ 1000 ಬೀಡಿಗೆ ಕೊಡಬೇಕಾದ ರೂ. 12.75 ರಂತೆ ತುಟ್ಟಿಭತ್ಯೆಯನ್ನು ಮೂರು ವರ್ಷಗಳ ಮಾಲಕರ ಪರವಾಗಿ ರಾಜ್ಯ ಸರಕಾರ ತಡೆ ಹಿಡಿದು ಬೀಡಿ ಕಾರ್ಮಿಕರಿಗೆ…

Read More

ಕುಂದಾಪುರ: ವೇಗವಾಗಿ ಮುನ್ನಡೆಯುತ್ತಿರುವ ಆಧುನಿಕ ಜಗತ್ತಿನ ಜನಜೀವನಕ್ಕೆ ಹತ್ತಿರವಾಗುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸಾಂಸ್ಕೃತಿಕ, ಸಂಘಾಟನಾತ್ಮಕ ಚಟುವಟಿಕೆಯ ಮೆರಗನ್ನು ಇಮ್ಮಡಿಗೊಳಿಸಬಲ್ಲ ಎಲ್‌ಇಡಿ ವಾಲ್‌ನ್ನು ಪರಿಚಯಿಸುತ್ತಿರುವ ಗೋಡೆ ವೀಡಿಯೊ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಎಸ್‌ಕೆಪಿಎ ಕುಂದಾಪುರ ವಲಯದ ಸಲಹಾ ಸಮಿತಿ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಹೇಳಿದರು. ಅವರು ಕುಂದಾಪುರದ ಹೋಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಎಸೋಸಿಯೇಶನ್(ರಿ) ಕುಂದಾಪುರ ವಲಯದ 21ನೇ ಮಹಾಸಭೆಯಲ್ಲಿ ಕುಂದಾಪುರದ ಗೋಡೆ ಡಿಜಿಟಲ್ ಸ್ಟುಡಿಯೋ ಮತ್ತು ವೀಡಿಯೋ ಅವರ ಎಲ್‌ಇಡಿ ವಾಲ್‌ನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿಶೇಷ ಸಭೆ, ಸಮ್ಮೇಳನ, ರಾಜಕೀಯ ಸಮಾವೇಶ, ಸಾಂಸ್ಕೃತಿಕ ಉತ್ಸವ, ಧಾರ್ಮಿಕ ಉತ್ಸವ, ಶಾಲಾ, ಕಾಲೇಜು ವಾರ್ಷಿಕೋತ್ಸವ, ಮದುವೆ ಮೊದಲಾದ ಶುಭ ಸಮಾರಂಭಗಳ ಅಂದವನ್ನು ಇಮ್ಮಡಿಗೊಳಿಸಬಲ್ಲ ಎಲ್‌ಇಡಿ ವಾಲ್‌ನ್ನು ಬಳಸಿಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಕುಂದಾಪುರದ ಗೋಡೆ ಡಿಜಿಟಲ್ ಸ್ಟುಡಿಯೋ ಮತ್ತು ವೀಡಿಯೋ ಮಾಲಕ ದಿನೇಶ್ ಗೋಡೆ, ಉಡುಪಿ ಜಿ. ಪಂ. ಉಪಾಧ್ಯಕ್ಷ ಪ್ರಕಾಶ್ ಟಿ. ಮೆಂಡನ್,…

Read More

ಕುಂದಾಪುರ: ದಕ್ಷಿಣಕನ್ನಡ ಜಿಲ್ಲಾ ಪದ್ಮಶಾಲಿ ಸಮಾಜ ಸೇವಾಕೂಟ (ರಿ.) ಬೆಂಗಳೂರು ಇದರ ರಜತ ಮಹೋತ್ಸವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಜ್ಯೋತಿಷಿ ಹಾಗೂ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರನ್ನು ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಗೋಪಾಲ್‌ಕೃಷ್ಣ ಕೊಂಚಾಡಿಯವರು ಸನ್ಮಾನಿಸಿ ಗೌರವಿಸಿದರು. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಪದ್ಮಶಾಲಿ ಸಮಾಜ ಸೇವಾ ಕೂಟದ ಅಧ್ಯಕ್ಷರಾದ ಮಾಧವ ಶೆಟ್ಟಿಗಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನಸೌಧದ ಮಾಜಿ ವರದಿಗಾರ ರಘು ಶೆಟ್ಟಿಗಾರ್ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭದ ಅಧ್ಯಕ್ಷ ಪುರದಂದ ಡಿ. ಶೆಟ್ಟಿಗಾರ್, ಮುಂಬೈಯ ಪದ್ಮಶಾಲಿ ಸಂಘದ ದಯಾನಂದ ಶೆಟ್ಟಿಗಾರ್, ದುಬೈಯ ಪದ್ಮಶಾಲಿ ಸಮುದಾಯದ ರವಿ ಶೆಟ್ಟಿಗಾರ್, ಕರ್ನಾಟಕ ರಾಜ್ಯ ಪದ್ಮಶಾಲಿ ಸಂಘದ ಅಧ್ಯಕ್ಷ ಕೆ.ಎನ್.ಕೃಷ್ಣಮೂರ್ತಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ವೆಂಕಟೇಶ್ವರ್, ಕಲ್ಲಿಕೋಟೆ ಮಲಬಾರ್ ಕಣ್ಣಿನ ಆಸ್ಪತ್ರೆ ಸಂಶೋಧನ ಕೇಂದ್ರದ ಡಾ| ಚಂದ್ರಶೇಖರ್, ಮಣಿಪಾಲ್ ಮೆಡಿಕಲ್ ಕಾಲೇಜಿನ ಡಾ| ವಸುಧಾದೇವಿ, ಮಹಾರಾಷ್ಟ್ರದ ಹೈಸ್ಕೂಲಿನ ಪ್ರಾಚಾರ್ಯರಾದ ಶ್ರೀಮತಿ ಸರೋಜಾ ಎಸ್. ಶೆಟ್ಟಿಗಾರ್…

Read More

ಗಂಗೊಳ್ಳಿ: ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಕುಂದಾಪುರ ಹಾಗೂ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಸಹಕಾರದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ಉಡುಪಿ ಶಿರ್ವದ ಡಾನ್ ಬಾಸ್ಕೋ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ. ಇತ್ತೀಚಿಗೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲೆಯ ಶಿಕ್ಷಕ-ರಕ್ಷಕ ಸಮಿತಿಯ ಉಪಾಧ್ಯಕ್ಷ ಶಿವಾನಂದ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಮಧುಕರ, ಕುಂದಾಪುರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಉಡುಪಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ…

Read More

ಕುಂದಾಪುರ: ತಾಲೂಕಿನ ಮಾವಿನಕಟ್ಟೆ ಜಂಕ್ಷನ್‌ ಬಳಿ ಅಕ್ರಮವಾಗಿ ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಕುಂದಾಪುರ ಪೊಲೀಸರು, ಗೋ ಮಾಂಸ ಹಾಗೂ ಒಂದು ಕರುವನ್ನು ವಶಪಡಿಸಕೊಂಡಿದ್ದು, ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಮಾವಿನಕಟ್ಟೆ ಜಂಕ್ಷನ್ ಬಳಿ ಅಕ್ರಮ ಗೊಮಾಂಸ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್‌ ವೃತ್ತ ನಿರೀಕ್ಷಕ ದಿವಾಕರ್‌ ನೇತೃತ್ವದ ತಂಡ ದಾಳಿ ನಡೆಸಿತ್ತು. ಪೊಲೀಸರು ಬರುತ್ತಿದ್ದಾರೆಂಬ ಮಾಹಿತಿ ದೊರೆತ ಕೂಡಲೇ ಶಂಕಿತ ಆರೋಪಿಗಳಾದ ರಶೀದ್‌ ಹಾಗೂ ಇತರ ಇಬ್ಬರು ಪರಾರಿಯಾಗಿದ್ದಾರೆ. ಮಾಂಸಕ್ಕಾಗಿ ತಯಾರಿಸಿದ್ದ ಒಂದು ಕ್ವಿಂಟಾಲಿಗೂ ಅಧಿಧಿಕ ಗೋ ಮಾಂಸ, ಒಂದು ಜೀವಂತ ಕರು ಹಾಗೂ ಮೊಬೈಲ್‌, ಚೂರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶ ಖಾಯಂ ಕಸಾಯಿಖಾನೆಯಾಗಿರದೇ ಗೋ ಮಾಂಸ ತಯಾರಿಕೆಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಅಡ್ಡೆಯಾಗಿತ್ತು ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದರಿಂದ ಸ್ವಲ್ಪ ಸಮಯ ಬಿಗು ವಾತಾವರಣ ಕಂಡು ಬಂದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಅಲ್ಲಿ ಜಮಾಯಿಸಿದ…

Read More