ಕುಂದಾಪುರ: ಕಲಿಯುಗದಲ್ಲಿ ದಾನ, ಧರ್ಮಗಳ ಮೂಲಕ ಮೋಕ್ಷ ಹೊಂದಲು ಸಾಧ್ಯ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಧರ್ಮ ಸಂಸ್ಕೃತಿಯ ಆಚರಣೆಗಳಲ್ಲಿ ಎಲ್ಲರೂ ಒಟ್ಟುಗೂಡಿ ನಡೆಸಿದಾಗ ಪ್ರಾಮುಖ್ಯತೆಯನ್ನು ಹೊಂದಲು ಸಾಧ್ಯವಿದೆ ಎಂದು ಬೆಳ್ವೆ ಉದ್ಯಮಿ ಬಿ. ಗಣೇಶ ಕಿಣಿ ಬೆಳ್ವೆ ಅವರು ಹೇಳಿದರು. ಅವರು ಗೋಳಿಯಂಗಡಿ ಪ್ರಜ್ಞಾ ಯುವಕ ಮಂಡಲ, ಶ್ರೀ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಗೋಳಿಯಂಗಡಿ, ನಾರಾಯಗುರು ಬಿಲ್ಲವ ಸೇವಾ ಸಂಘ ಬೆಳ್ವೆ ವಲಯ, ಕುಡುಬಿ ಸಮಾಜೋದ್ಧಾರಕ ಸಂಘ ಹಿಲಿಯಾಣ ಆಮ್ರಕಲ್ಲು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೋಳಿಯಂಗಡಿ ಇವರ ಸಂಯುಕ್ತ ಅಶ್ರಯದಲ್ಲಿ ಹಿಲಿಯಾಣ ಆಮ್ರಕಲ್ಲು ಶ್ರೀ ಮಲ್ಲಿಕಾರ್ಜುನ ಸಭಾಭವನದಲ್ಲಿ ಸೆ.6ರಂದು ನಡೆದ 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆವರ್ಸೆ ಗ್ರಾ. ಪಂ. ಅಧ್ಯಕ್ಷ ಚಿತ್ತರಂಜನ್ದಾಸ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬೆಳ್ವೆ ಗ್ರಾ. ಪಂ. ಉಪಾಧ್ಯಕ್ಷ ಸುರೇಂದ್ರ ನಾಯ್ಕ ಯಳಂತೂರು, ಸದಸ್ಯರಾದ ಚಂದ್ರಶೇಖರ್ ಶೆಟ್ಟಿ ಸೂರೊYàಳಿ, ವೈ. ಕರುಣಾಕರ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಇಲ್ಲಿನ ಕಂಡ್ಲೂರು ಬಸ್ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮರದ ಅಡಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಕಾವ್ರಾಡಿ ಗ್ರಾಮದ ದೂಪದಕಟ್ಟೆ ನಿವಾಸಿ ಮಹೇಶ ಆಚಾರಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೆ.ಪಿ.ಎಲ್ಕ್ರಿಕೆಟ್ಪಂದ್ಯಾಟದ ನಮ್ಮ ಶಿವಮೊಗ್ಗ ಹಾಗೂ ಬಿಜಾಪುರ ಬುಲ್ಸ್ತಂಡಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು ಗಂಟೆಗೆ ದಾಳಿ ನಡೆಸಿದ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ಅವರು , ಆತನನ್ನು ಬಂಧಿಸಿ ಮೊಬೆ„ಲ್, ರೂ.15 ಸಾವಿರ ನಗದು, ಚೆವರ್ಲೆಟ್ ಕಾರು ಹಾಗೂ ಇತರ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘಟನೆ, ಸ್ವಸ್ಥ ಚಿಂತನೆಯಿಂದ ಉತ್ತಮ ಸಮಾಜ ನಿರ್ಮಾಣ : ಕೋಟ ಶ್ರೀನಿವಾಸ ಪೂಜಾರಿ ಕುಂದಾಪುರ: ಸಮಾಜದ ಸರ್ವಾಂಗೀಣ ವಿಕಾಸದ ದೃಷ್ಠಿಯಿಂದ ಪ್ರತಿಯೊಬ್ಬರು ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವತ್ತ ಆಸಕ್ತಿಯನ್ನು ಬೆಳೆಸಿ ಕೊಂಡಾಗ ಪರಿಸರದಲ್ಲಿ ಪರಿವರ್ತನೆ ಆರಂಭವಾಗುತ್ತದೆ. ಆದುದರಿಂದ ಸಂಘಟನೆ, ಸ್ವಸ್ಥ ಚಿಂತನೆಯಿಂದ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾಯಕದಲ್ಲಿ ಯುವ ಜನತೆ ಕಾರ್ಯಪ್ರವೃತ್ತರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಕುಂದಾಪುರ ವಲಯದ ಅಧ್ಯಕ್ಷೆ ಶ್ರೀಮತಿ ಗುಣರತ್ನ ಅವರನ್ನು ಸನ್ಮಾನಿಸಲಾಯಿತು. ಪುಟಾಣಿ ರಾಜ ರಾಣಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ರೋಟರಿ ಗವರ್ನರ್ ಎ. ಎಸ್. ಎನ್. ಹೆಬ್ಬಾರ್, ಕುಂದಾಪುರ ಪುರಸಭೆ ಅಧ್ಯಕ್ಷೆ ಶ್ರೀಮತಿ…
ಕುಂದಾಪುರ: ಪತ್ರಿಕೆಯೊಂದರ ಸಂಪಾದಕನೆಂದು ಹೇಳಿಕೊಂಡ ವ್ಯಕ್ತಿಯೋರ್ವ ಕುಂದಾಪುರದ ವಿಠಲವಾಡಿಯ ಉದ್ಯಮಿ ಗಣೇಶ ಪೂಜಾರಿ ಎಂಬುವವರಿಗೆ ದೂರವಾಣಿ ಕರೆಮಾಡಿ ಹಣದ ಬೇಡಿಕೆಯಿಟ್ಟು ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಈ ಬಗ್ಗೆ ಕುಂದಾಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ವಿವರ: ‘ಪ್ರಸಿದ್ಧ ಪತ್ರಿಕೆ’ ಯ ಸಂಪಾದಕನೆನ್ನಲಾದ ಸಂತೋಷ್ ಸುವರ್ಣ ಎಂಬುವವರು ಕುಂದಾಪುರದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಗಣೇಶ್ ಪೂಜಾರಿ ಎಂಬುವವರಿಗೆ ಸೆ.೧ರಂದು ಕರೆಮಾಡಿ, ತಾವು ಒಂದು ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಅದಕ್ಕೆ ಪೂರಕವಾಗಿ ಕಾಗದ ಪತ್ರಗಳು ಹಾಗೂ ಪೋನ್ ಕರೆಗಳು ನಮಗೆ ಬರುತ್ತಿದೆ. ಈ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಬರೆಯುವುದಾಗಿ ಹೇಳಿಕೊಂಡಿದ್ದ. ಇದೆಲ್ಲ ಸುಳ್ಳೆಂದು ಹೇಳಿದರೂ ಮತ್ತೆ ಮತ್ತೆ ಕರೆಮಾಡಿ ಬೇರೆ ಕಾರಣ ರೂ. 30,000ದಿಂದ 1,20,000ದ ವರೆಗೆ ಹಣದ ಬೇಡಿಕೆ ಒಡ್ಡಿದ್ದಾರೆ ಎಂದು ಗಣೇಶ್ ಪೂಜಾರಿ ದೂರು ನೀಡಿದ್ದಾರೆ. ಸಂತೋಷ್ ಸುವರ್ಣ ಕರೆ ಮಾಡಿದಾಗ ಓದುಗರ ಬಳಗ ವಿಠಲವಾಡಿ ಹಾಗೂ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆಗಳು ಬರುತ್ತಿದ್ದು ನಿಮ್ಮ ಹಗರಣಗಳ ವರದಿಯನ್ನು…
ಕುಂದಾಪುರ: ಇಂದಿನ ಯುವಕರು ಖಿನ್ನತೆ ಹಾಗೂ ಇತರೇ ಕಾರಣಕ್ಕಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಯಿಂದಾಗಿ ಮರಣ ಹೊಂದುತ್ತಿದ್ದಾರೆ. ಇಂದು ಇತರೇ ಮಾರಕ ಕಾಯಿಲೆಗಳಿಂದಾಗಿ ಸಾಯುವವರಿಗಿಂತ ಎರಡು ಪಟ್ಟು ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರುವುದು ಆಘಾತಕಾರಿ. ಆತ್ಮಹತ್ಯೆಗೆ ಪ್ರಯತ್ನಿಸುವವರನ್ನು ತಡೆದು, ಸಮಾಲೋಚನೆ ನಡೆಸುವುದಲ್ಲದೇ ಹೀಗೆ ಪ್ರಯತ್ನಿಸುವವರ ಮೇಲೆ ನಿಗಾ ವಹಿಸುವುದು ಅಗತ್ಯ ಎಂದು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ| ಪ್ರಕಾಶ್ ಸಿ. ತೋಳಾರ್ ಹೇಳಿದರು. ಅವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಹಾಗೂ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ಆಸ್ಪತ್ರೆಯಲ್ಲಿ ಆಯೋಜಿಸಲಾದ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯಲ್ಲಿ ಸಂಪನ್ಮೂಲ ಆತ್ಮಹತ್ಯೆ ಕಾರಣ ಮತ್ತು ತಡೆಯುವ ಬಗ್ಗೆ ಉಪನ್ಯಾಸ ನೀಡಿದರು. 2007ರ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಒಂದು ಲಕ್ಷಕ್ಕೆ ೭ಮಂದಿ ಆತ್ಮಹತ್ಯೆ ಮಾಡಿಕೊಂಡರೇ, 2012ರಲ್ಲಿ 12ಮಂದಿಗೆ ಏರಿದೆ. ವಿಶ್ವದಲ್ಲಿ ವರ್ಷಕ್ಕೆ ೮ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇ ಕರ್ನಾಟಕದಲ್ಲಿ 15,000 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಭಾರತದಲ್ಲಿ…
ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಂದೂರು ಶಿರೂರಿನಿಂದ ತೂದಳ್ಳಿ ಮಾರ್ಗವಾಗಿ ಸಾಗಿ ಮುಂದೆ 4 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದಾಗ ಮಿನಿ ಜೋಗ ಖ್ಯಾತಿಯ ಕೂಸಳ್ಳಿಯ ಅಬ್ಬಿ ಜಲಪಾತ ಎದುರುಗೊಳ್ಳುತ್ತದೆ. ಕಣ್ಣು ಹಾಯಿಸಿದಷ್ಟು ಹಚ್ಚ ಹಸುರಿನ ಪಶ್ಚಿಮ ಘಟ್ಟದ ಕಾನನದ ನಡುವೆ ಹತ್ತಾರು ಚಿಕ್ಕ ಪುಟ್ಟ ತೊರೆಗಳನ್ನು ದಾಟಿ, ಅಲ್ಲಲ್ಲಿ ಎದುರಾಗುವ ಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ತೆರಳುವ ಕಾಡುಹಾದಿ ಚಾರಣಪ್ರೀಯರ ಅಚ್ಚುಮೆಚ್ಚಿನ ತಾಣ. ನೂರಾರು ಅಡಿ ಎತ್ತರದಿಂದ ಎರಡು ಹಂತದಲ್ಲಿ ಧುಮುಕುವ ಜಲಪಾತದ ಹಾಲ್ನೊರೆಯನ್ನೊಮ್ಮೆ ನೋಡಿ ಕಣ್ಣುತುಂಬಿಕೊಳ್ಳಬೇಕು. ಫೆಬ್ರವರಿಯ ತನಕ ಸಾಮಾನ್ಯವಾಗಿ ನೀರಿದ್ದರೂ ಮಳೆಗಾಲದಲ್ಲಿ ಇದರ ಅದ್ಬುತ ಸೋಬಗನ್ನು ವರ್ಣಿಸಲಸಾಧ್ಯ. ಜಲಪಾತದಿಂದ ಹರಿಯುವ ನೀರು ಸುಂಕದಗುಂಡಿಯ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಈ ನಡುವೆ ನೂರಾರು ಕೃಷಿ ಭೂಮಿಗಳಿಗೂ ಆಸರೆಯಾಗಿದೆ. ಜಲಪಾತದ ತನಕ ಕ್ರಮಿಸುವುದಕ್ಕೆ ಕ್ಲಿಷ್ಟ ಹಾದಿಯಿದ್ದರೂ ಅಲ್ಲಿನ ಸೋಬಗಿನ ಮಂದೆ ಅವೆಲ್ಲವೂ ನಗಣ್ಯವೆನಿಸುತ್ತದೆ. ಯಾವ ದೊಡ್ಡ ಜಲಪಾತಗಳಿಗೂ ಪರ್ಯಾಯವಾಗಬಲ್ಲ ಈ ಜಲಪಾತ ಮಾಹಿತಿ ಕೊರತೆಯಿಂದ ಮರೆಯಲ್ಲಿಯೇ ಉಳಿದಿದೆ.
ಬೈಂದೂರು ಕೊಲ್ಲೂರು ಅಥವಾ ಕುಂದಾಪುರ ಕೊಲ್ಲೂರು ಮಾರ್ಗ ಮಧ್ಯೆ ಸಿಗುವ ಆನೆಝರಿ ನೇಸರಧಾಮವು ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಸೂರ್ಯನ ಕಿರಣಗಳನ್ನು ಕಾಣಲಾಗದಷ್ಟು ದಟ್ಟ ಕಾನನ. ಹೆಮ್ಮರಗಳು, ಅವಕ್ಕೆ ಸುತ್ತಿಕೊಂಡ ಬಳ್ಳಿಗಳು, ಔಷಧಿ ಗಿಡಗಳು ಸೇರಿದಂತೆ ನೂರಾರು ಬಗೆಯ ಸಸ್ಯ ಪ್ರಬೇಧಗಳು, ಪ್ರಾಣಿ, ಪಕ್ಷಿ, ಸೂಕ್ಷಜೀವಿಗಳ ಆವಾಸಸ್ಥಾನ ಆನೆಝರಿ. ಸೌಪರ್ಣಿಕಾ ನದಿಯಲ್ಲಿ ಜಲಕ್ರೀಡೆ ಆಡುತ್ತಾ, ಕಾಡಿನ ಮಧ್ಯದಿ ಸಾಗಿ ಹಕ್ಕಿಗಳ ಕಲರವವನ್ನು ಕೇಳುತ್ತಾ, ಅಲ್ಲಲ್ಲಿ ಸಂಚರಿಸುವ ಪ್ರಾಣಿಗಳನ್ನು ನೋಡುತ್ತಾ ಸುತ್ತುವಾಗ ಬೇರೆಯದೇ ಲೋಕದಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಅರಣ್ಯ ಇಲಾಖೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಚಿಕ್ಕ ಕುಟೀರ ಟೆಂಟ್ ಹಾಕಿದೆ. ಹಾಗೆ ನದಿಯಲ್ಲಿ ದೋಣಿ ವಿಹಾರ ಮಾಡಬಹುದು. ಕೊಲ್ಲ್ಲೂರು ಶ್ರೀ ಮಾಕಾಂಬಿಕೆ ದೇವಿ ದರ್ಶನ ಮಾಡಿದವರು ಹಾಗೆ ಆನೆಝರಿಗೂ ಭೇಟಿ ನೀಡುತ್ತಾರೆ. ದೂರದಲ್ಲಿ ಅರಶಿಣಗುಂಡಿ ಜಲಪಾತವೂ ಇದೆ.
ಸೋಮೇಶ್ವರ ಕಡಲತೀರಕ್ಕೆ ತಾಕಿಕೊಂಡಿರುವ ಗುಡ್ಡವೇ ಒತ್ತಿನಣೆ. ಹಲವು ಬಗೆಯ ಔಷದ ಸಸ್ಯಗಳು, ಅಪರೂಪದ ಮರಗಿಡಗಳು ಈ ಭಾಗದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 200 ಅಡಿ ಎತ್ತರದಲ್ಲಿರುವ ನೇಸರಧಾಮದ ತುದಿಯಿಂದ ಸಮುದ್ರ ವೀಕ್ಷಣೆ ಮಾಡಿದವರಿಗೆ ಸ್ವರ್ಗವೀಕ್ಷಿಸಿದಂತಹ ಅನುಭವ. ಇಲ್ಲಿ ನಿಂತು ಸಮುದ್ರ ನದಿಗಳು ಸೇರುವ ದೃಶ್ಯ, ಸೂರ್ಯಾಸ್ತಮಾನ ಇವೆಲ್ಲವನ್ನೂ ನೋಡುವುದೇ ಮನಮೋಹಕವಾಗಿರುತ್ತದೆ. ಸಮುದ್ರದ ಸೊಬಗು ಸವಿಯಲೆಂದೇ 1996ರಲ್ಲಿ ಒತ್ತಿನಣೆಯಲ್ಲಿ ಅರಣ್ಯ ಇಲಾಖೆ ಕ್ಷಿತಿಜ ನೇಸರಧಾಮವನ್ನು ನಿರ್ಮಿಸಿದೆ. ಎರಡು ಹವಾನಿಯಂತ್ರಿತ ಕಾಟೇಜ್ ಹಾಗೂ ಐದು ಸಾಮಾನ್ಯ ಕಾಟೇಜ್ ಮತ್ತು ಫಲಹಾರ ಮಂದಿರ ನೇಸರಧಾಮದಲ್ಲಿದೆ. ಇಲ್ಲಿಂದ ಕೆಳಗಿಳಿಯಲು ಮೆಟ್ಟಿಲು ವ್ಯವಸ್ಥೆ ಇದ್ದು ರಸ್ತೆಯನ್ನು ದಾಟಿ ಸೋಮೇಶ್ವರ ಕಡಲತೀರಕ್ಕೆ ತೆರಳಬಹುದಾಗಿದೆ. ರಾಷ್ಟ್ರಿಯ ಹೆದ್ದಾರಿಯಿಂದ 2 ಕಿ. ಮೀ. ದೂರದಲ್ಲಿರುವ ಕ್ಷಿತಿಜ ನೇಸರಧಾಮಕ್ಕೆ ತೆರಳಲು ಅರ್ಧ ಕಿ.ಮೀ. ನಷ್ಟು ಡಾಂಬಾರು ರಸ್ತೆಯಿದ್ದು, ಮುಂದೆ ಮಣ್ಣಿನ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ಅರಣ್ಯ ಇಲಾಖೆಗೆ ಒಳಪಡುವ ಒತ್ತಿನಣೆ ಪ್ರದೇಶದಲ್ಲಿ ಅನೇಕ ಔಷಧಿ ಸಸ್ಯಗಳೂ ಇವೆ.
ಬೈಂದೂರಿನ ಪೇಟೆಯಲ್ಲಿರುವ ಅಧಿದೇವ ಶ್ರೀ ಸೇನೇಶ್ವರ ದೇವಸ್ಥಾನ ಧಾರ್ಮಿಕ ಪಾವಿತ್ರ್ಯ ಕ್ಷೇತ್ರ ಮಾತ್ರವಲ್ಲದೇ ಪ್ರವಾಸಿ ತಾಣವೂ ಹೌದು. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಸೇನವಾರ ಅರಸರು ಈ ದೇವಾಲಯವನ್ನು ನಿರ್ಮಿಸಿದರೆಂದು ಇತಿಹಾಸ ತಿಳಿಸುತ್ತದೆ. ದೇವಾಲಯದ ಗರ್ಭಗುಡಿ, ಸುಕನಾಸಿ, ಬಸವ ಮಂಟಪ ಸಂಪೂರ್ಣ ಶಿಲೆಯಿಂದಲೇ ನಿರ್ಮಿತವಾಗಿದೆ. ಇಲ್ಲಿನ ಅದ್ಬುತವೆನಿಸುವ ಶಿಲ್ಪಗಳ ಚಿತ್ತಾರ ಎಂಥವರನ್ನೂ ಬೆರಗುಗೊಳಿಸುತ್ತದೆ. ಚಾಲುಕ್ಯರ ದೇವಾಲಯಗಳ ಶೈಲಿಯಲ್ಲಿಯೇ ಈ ದೇವಾಲಯ ನಿರ್ಮಾಣಗೊಂಡಿದ್ದು ಇಲ್ಲಿನ ಪ್ರತಿ ಕೆತ್ತನೆಯೂ ಚಿತ್ತಾಕರ್ಷಕವಾದುದು. ದೇವಾಲಯದ ನಂದಿ ಮಂಟಪ, ಲೇಪಾಕ್ಷಿ, ಸುಕನಾಸಿಯ ಜಾಲಂದ್ರಗಳ ಮಧ್ಯದಲ್ಲಿರುವ ಮಕರ ತೋರಣ ಇವೆಲ್ಲರ ನಡುವೆ ವಿರಾಜಿಸುವ ಶ್ರೀ ಸೇನೇಶ್ವರನ ಸನ್ನಿಧಾನ ಭಕ್ತಿ ಭಾವನೆಯನ್ನು ತುಂಬುವುದರೊಂದಿಗೆ ಕಲಾಪ್ರೀಯರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.
ಅಳ್ವೆಗದ್ದೆ ಕಡಲತೀರ ಶಿರೂರು ರಾಷ್ಟ್ರಿಯ ಹೆದ್ದಾರಿ 66ರಿಂದ 3 ಕಿ.ಮೀ ದೂರದಲ್ಲಿರುವ ಅಳ್ವೆಗದ್ದೆ ಕಡಲತೀರ ನಿಸರ್ಗ ಸೌಂದರ್ಯದಿಂದ ಕಂಗೊಳಿಸುತ್ತದೆ. ಇದು ಸಮುದ್ರ ಹಾಗೂ ನದಿಗಳ ಸಂಗಮ ಸ್ಥಾನ ಹಾಗೂ ಕಿರು ಬಂದರು ಪ್ರದೇಶವಾಗಿದೆ. ಸಮುದ್ರದ ನಡುವಲ್ಲಿರುವ ಬಂಡೆ ಹಾಗೂ ಬಂಡೆಯ ಅಪ್ಪಳಿಸುವ ತೆರೆಗಳನ್ನು ನೋಡುವುದೇ ಮನಮೋಹಕವಾಗಿರುತ್ತದೆ. ಬಂಡೆಯ ತನಕ ತೆರಳಲು ಕಲ್ಲಿನ ಹಾಸು ಇದ್ದು ಇತ್ತಿಚಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉಪ್ಪುಂದ ಮಡಿಕಲ್ ಕಡಲತೀರ ಉಪ್ಪುಂದದ ರಾಷ್ಟ್ರಿಯ ಹೆದ್ದಾರಿಯಿಂದ ಮಡಿಕಲ್ ತೆರಳುವ ಮಾರ್ಗವಾಗಿ 3 ಕಿ.ಮೀ ಕ್ರಮಿಸಿದರೆ ಉಪ್ಪುಂದದ ಈ ಕಡಲತಡಿ ಎದುರುಗೊಳ್ಳುತ್ತದೆ. ಸೋಮೇಶ್ವರ, ಅಳ್ವೆಗದ್ದೆ ಕಡಲತೀರಕ್ಕಿಂತ ಸ್ವಲ್ಪ ಭಿನ್ನವಾಗಿಯೇ ಕಾಣಿಸಿಕೊಂಡಿರುವ ಮಡಿಕಲ್ ಕಡಲತೀರ ಕೂಡ ಪ್ರವಾಸೋದ್ಯಮ ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಚರ್ಚ್ಗುಡ್ಡ ಕ್ರೈಸ್ತರ ಪವಿತ್ರ ಸ್ಥಳವಾಗಿರುವ ಚರ್ಚ್ಗುಡ್ಡ ಪ್ರವಾಸಿಗರಿಗೂ ಅಚ್ಚುಮೆಚ್ಚು. ಬೈಂದೂರು ಚರ್ಚ್ರಸ್ತೆಯ ಮೂಲಕ ಸಾಗಿ ಮುಂದೆ ಚರ್ಚ್ ಗುಡ್ಡಕ್ಕೆ ತೆರಳಲು ರಸ್ತೆ ಇದ್ದು ಇಲ್ಲಿಂದ ಸಮುದ್ರ ಹಾಗೂ ಕೂಸಳ್ಳಿ ಜಲಪಾತವನ್ನೂ ದೂರದಿಂದ ವೀಕ್ಷಿಸಬಹುದಾಗಿದೆ.
