Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ್ದ ವಿದ್ಯಾರ್ಥಿನಿಗೆ ಡಾ. ಗೋವಿಂದ ಬಾಬು ಪೂಜಾರಿ ಅವರಿಂದ ನೆರವು ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಗ್ವಾಡಿಯ ಯುವತಿ ಶ್ರಾವ್ಯಾ, ತನ್ನ ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿರುವ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಉದಾರಿಗಳಿಂದ ನೆರವು ಹರಿದು ಬಂದಿದೆ. ಆಕೆಯ ಶಿಕ್ಷಣ ವೆಚ್ಚ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸಲು ದಾನಿಗಳು ಮುಂದೆ ಬಂದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಶ್ರಾವ್ಯಳ ಪ್ರತಿಭೆ ಹಾಗೂ ಆಕೆಯ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದುಕೊಂಡ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ಸ್ವತಃ ಬಗ್ವಾಡಿ ಸಿಂಗನಕೊಡ್ಲುವಿನಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿ ಧೈರ್ಯತುಂಬಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಆಕೆಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿ ಕುಟುಂಬಕ್ಕೆ ಬೆಳಕಾಗಿದ್ದಾರೆ. ಒಂದು ವರ್ಷದ ಚಿಕಿತ್ಸೆ ವೆಚ್ಚ ಭರಿಸುವ ಜೊತೆಗೆ ಮಣಿಪಾಲ ಖಾಸಗಿ ಆಸ್ಪತ್ರೆಯ ವೈದ್ಯರು ಶಿಪಾರಸ್ಸು ಮಾಡಿದ…

Read More

7,000 ಕಿ.ಮೀ ಪಯಣ, ಮಹಿಳಾ ಸಬಲೀಕರಣ ಜಾಗೃತಿಯ ಕಂಕಣ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಕ್ ರೈಡಿಂಗ್ ಅನ್ನೊಂದು ಒಂದು ಥ್ರಿಲ್ಲಿಂಗ್ ಅನುಭವ. ಅದ್ರಲ್ಲೂ ಇಷ್ಟವಾದ ಬೈಕ್ ಸಿಕ್ಕರಂತೂ ಲಾಂಗ್ ಟ್ರಿಪ್ ಹೋಗೋದು ಪ್ರತಿ ಬೈಕರ್’ಗಳ ಕನಸು. ಅಂತಹದ್ದೊಂದು ರೈಡಿಂಗ್ ಕನಸು ಕಂಡದ್ದು ಮಾತ್ರವಲ್ಲ, ಒಂದು ತಿಂಗಳೊಳಗೆ ಅದನ್ನು ಸಾಕಾರಗೊಳಿಸಿಕೊಳ್ಳುವ ಸಾಹಸ ಮಾಡಿದ್ದಾಳೆ ಕುಂದಾಪುರದ ಈ ಹುಡುಗಿ. ಕುಂದಾಪುರ ತಾಲೂಕಿನ ಕುಂಭಾಸಿಯ ಸಾಕ್ಷಿ ಹೆಗಡೆ ಅಂತಹದ್ದೊಂದು ಸಾಹಸಕ್ಕೆ ಮುಂದಾದ ಯುವತಿ. ಕುಂಭಾಸಿಯಿಂದ ಕಾಶ್ಮೀರದ ತನಕ ಒಟ್ಟು 7,000 ಕಿ.ಲೋ ಮೀಟರ್ ಪ್ರಯಾಣ, 15 ದಿನಗಳ ಗುರಿ, ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶದೊಂದಿಗೆ ಸಾಕ್ಷಿಯ ಏಕಾಂಗಿ ಬೈಕ್ ಯಾತ್ರೆ, ಕಾಶ್ಮೀರ ತಲುಪಿ, ಮತ್ತೆ ಅಲ್ಲಿಂದ ಗ್ವಾಲಿಯರ್ ತನಕ ಹಿಂದಿರುಗಿಯಾಗಿದೆ. ಮೂಲತಃ ಇಡುಗುಂಜಿಯವರಾದ, ಪ್ರಸ್ತುತ ಕುಂಭಾಸಿಯಲ್ಲಿ ನೆಲೆಸಿರುವ ಶಿವರಾಮ ಹೆಗಡೆ ಹಾಗೂ ಪುಪ್ಪಾ ದಂಪತಿಗಳ ತೃತೀಯ ಪುತ್ರಿಯಾದ ಸಾಕ್ಷಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ಬಗ್ಗೆ ಕ್ರೇಜ್ ಹೊಂದಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ’ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ 2022’ನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲಿರುವ ಕಥೆಗೆ ರೂ.50,000; ದ್ವೀತಿಯ ಸ್ಥಾನಕ್ಕೆ 25,000, ತೃತೀಯ ಸ್ಥಾನಕ್ಕೆ ರೂ. 15,000 ಮತ್ತು ಉಳಿದಂತೆ ಮೂರು ಕತೆಗಳಿಗೆ ತಲಾ ರೂ.5000 ಸಮಾಧಾನಕರ ಬಹುಮಾನ ನೀಡಲಾಗುವುದು. ಕನ್ನಡದ ಸಮೃದ್ಧ ಕಥಾ ಪರಂಪರೆ ಇನ್ನೂ ಹೆಚ್ಚು ಶ್ರೀಮಂತವಾಗಲಿ, ಮತ್ತಷ್ಟು ಮೌಲ್ಯಯುತವಾದ ಕಥೆಗಳು ಹೊರಹೊಮ್ಮಲಿ ಎನ್ನುವುದೇ ’ಬುಕ್ ಬ್ರಹ್ಮ- ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಯ ಮೂಲ ಉದ್ದೇಶ. ಕನ್ನಡ ಕಥಾ ಪ್ರಪಂಚದಲ್ಲಿ ಹಲವು ಮಹತ್ವದ ವಾರ್ಷಿಕ ಸ್ಪರ್ಧೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಆ ಝುಳು ಝುಳು ಹರಿವ ನದಿಗೆ ಹೊಸದಾಗಿ ಈಗ ’ಬುಕ್ ಬ್ರಹ್ಮ’ ತೊರೆ ಸೇರಲಿದೆ. ಪ್ರತಿ ವರ್ಷ ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಸ್ಪರ್ಧೆಯನ್ನು ಸಂಸ್ಥೆಯು ನಡೆಸಲಿದೆ. ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ: ಕತೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.ಕತೆಯು ಅಪ್ರಕಟಿತವಾಗಿಬೇಕು. ಮುದ್ರಣ…

Read More

ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ವಿಹಾರ – ವಿರಾಮಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಪಾರ್ಕ್, ಉದ್ಘಾಟನೆಗೂ ಮುನ್ನವೇ ಮದ್ಯ ವ್ಯಸನಿಗಳ ಅಡ್ಡವಾಗಿ ಪರಿಣಮಿಸಿದೆ. ಕುಂದಾಪುರ ಪುರಸಭಾ ಅಧ್ಯಕ್ಷರೇ ಪ್ರತಿನಿಧಿಸುವ ಟಿಟಿ ರಸ್ತೆ ವಾರ್ಡಿನಲ್ಲಿರುವ ಉದ್ಯಾನವನವೀಗ ನಿರುಪಯುಕ್ತ ತಾಣವಾಗಿ ಮಾರ್ಪಾಡಾಗಿದೆ. ಟಿಟಿ ರಸ್ತೆಯ ಪ್ರಮುಖ ಹಾದಿಯಲ್ಲಿಯೇ ಇರುವ, ಇನ್ನು ಹೆಸರಿಡದ ಪಾರ್ಕ್ ಹೊರಗಿನಿಂದ ನೋಡಲಷ್ಟೇ ವಿಹಾರ ತಾಣವೆನಿಸುತ್ತದೆ. ಒಳಭಾಗದಲ್ಲಿ ಇಣುಕಿದರೆ ಅಲ್ಲಿನ ನಿಜಬಣ್ಣ ಬಯಲಾಗುತ್ತೆ. ರಾಶಿ ರಾಶಿ ಮಧ್ಯದ ಬಾಟಲಿಗಳು, ಸಿಗರೇಟು, ಕಸದ ರಾಶಿ, ಸುತ್ತಲೂ ಬೆಳೆದ ಗಿಡಗಂಟಿ ಪಾರ್ಕಿನ ಅಂದಗೆಡಿಸಿಬಿಟ್ಟಿದೆ. ಪಾರ್ಕ್ ಒಳಗೆ ಕುಳಿತು ಮದ್ಯವ್ಯಸನ ಮಾಡುವ ಘಟನೆಗಳು ನಡೆಯುತಿದ್ದು, ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವುದು ಕೂಡ ಕಷ್ಟವೆನಿಸಿದೆ ಎಂದು ಸ್ಥಳೀಯರೊಬ್ಬರು ಹೇಳಿಕೊಂಡಿದ್ದಾರೆ. ಅಭಿವೃದ್ಧಿಗೊಳಿಸಿ 2ವರ್ಷ ಕಳೆದರೂ ಉದ್ಘಾಟನೆಯ ಭಾಗ್ಯವಿಲ್ಲ:ಈ ಭಾಗದ ಸಾರ್ವಜನಿಕರು ಹಾಗೂ ಮಕ್ಕಳ ಉಪಯೋಗಕ್ಕಾಗಿ ಟಿಟಿ ರಸ್ತೆಯ ಬೃಹತ್ ವಾಟರ್ ಟ್ಯಾಂಕ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಸ್ಥಗಿತಗೊಂಡಿರುವ ಮೀನುಗಾರಿಕಾ ಬಂದರಿನ ಜೆಟ್ಟಿ ಕಾಮಗಾರಿಯನ್ನು ಪುನರಾರಂಭಿಸಲು ಕ್ರಮಕೈಗೊಳ್ಳಲಾಗುವುದು. ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಅನುಮತಿ ದೊರೆತಿದ್ದು, ಆದಷ್ಟು ಶೀಘ್ರ ಸರ್ವೆ ಕಾರ್ಯ ನಡೆಯಲಿದೆ. ಗಂಗೊಳ್ಳಿಯ ಅನೇಕ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲಾಗಿದ್ದು, ಇಲ್ಲಿನ ಜನರ ಬಹುಬೇಡಿಕೆಯ ರಿಂಗ್ ರೋಡ್ ನಿರ್ಮಾಣದ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಗಂಗೊಳ್ಳಿಗೆ ಸೋಮವಾರ ಭೇಟಿ ನೀಡಿದ ಅವರು ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಮಾರಸ್ವಾಮಿ ನೇತೃತ್ವದ ಸರಕಾರ, ಯಡಿಯೂರಪ್ಪನವರ ನೇತೃತ್ವದ ಸರಕಾರ ಹಾಗೂ ಬೊಮ್ಮಾಯಿ ನೇತೃತ್ವದ ಸರಕಾರಗಳಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನಿರೀಕ್ಷೆಗೂ ಮೀರಿ ಅನುದಾನ ದೊರೆತಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು. ಗಂಗೊಳ್ಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂತರಾಷ್ಟ್ರೀಯ ಮಟ್ಟದ ಸಂಸ್ಥೆ ರೋಟರಿ ಸಂಸ್ಥೆ. ಈಗಾಗಲೇ ಜಗತ್ತಿನದ್ಯಾಂತ ಸಾಕಷ್ಟು ಬಹುತೇಕ ಜನೋಪಯೋಗಿ ಸೇವೆಗಳನ್ನು ನೀಡುವ ಮೂಲಕ ರೋಟರಿ ಸಂಸ್ಥೆಯು ಜನಮಾನಸವಾಗಿ ಉಳಿದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೋಟರಿ ಕ್ಲಬ್ ನೇತೃತ್ವದಲ್ಲಿ ನಿರ್ಮಾಣ ಮಾಡಲಾದ ಈ ಸುಸಜ್ಜಿತ ಬಸ್ಸು ತಂಗುದಾಣ ಪ್ರಯಾಣಿಕರ ದಣಿವನ್ನು ನಿವಾರಿಸಿದೆ. ಈ ತಂಗುದಾಣವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಕೋಟೇಶ್ವರ ರೋಟರಿ ಕ್ಲಬ್ ಮತ್ತು ಪ್ರಯೋಜಕರ ಕಾರ‍್ಯ ಶ್ಲಾಘನೀಯವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು. ಅವರು ಕೋಟೇಶ್ವರ ರೋಟರಿ ಕ್ಲಬ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ರ ರಿಲಿಯನ್ಸ್ ಮಾಲ್ ಎದುರು ನೂತನವಾಗಿ ನಿರ್ಮಿಸಲಾದ ಬಸ್ಸು ತಂಗುದಾಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಜಿ ಅಭಿನಂದನ್ ಶೆಟ್ಟಿ, ಕೋಟೇಶ್ವರ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ, ಬಸ್ಸು ನಿಲ್ದಾಣದ ಪ್ರಯೋಜಕರಾದ ಉದ್ಯಮಿ ಸಹನಾ ಸುರೇಂದ್ರ ಶೆಟ್ಟಿ, ಅಕ್ಷಯ ಶೇಟ್, ವಲಯ ೨ರ ಅಸಿಸ್ಟೆಂಟ್ ಗರ್ವನರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಚಿತ್ರರಂಗದ ಖ್ಯಾತ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಮಂಗಳವಾರ ಕುಂದಾಪುರ ತಾಲೂಕಿನ ಕೊಲ್ಲೂರು ಹಾಗೂ ಕುಂಭಾಶಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗೆ ಯಶ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಈ ಸಂದರ್ಭ ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು ಮೊದಲಾದವರು ಜೊತೆಗಿದ್ದರು. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಬಸ್ರೂರಿನ ಸ್ಟುಡಿಯೋದಲ್ಲಿ ಕೆಜಿಎಫ್-2ಗೆ ಅಂತಿಮ ಟಚ್ ಮ್ಯೂಸಿಕ್ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಇಲ್ಲಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ರವಿ ಬಸ್ರೂರು ಅವರ ಮನೆ ಬಳಿಯ ಆಟದ ಮೈದಾನದಲ್ಲಿ ಯಶ್ ಹುಡುಗರೊಂದಿಗೆ ಕೆಲ ಹೊತ್ತು ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೈಂದೂರು ತಾಲೂಕಿನ ತ್ರಾಸಿ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪ್ರಾರಂಭಿಸಲಾಗುತ್ತಿರುವ ಸೇವಾ ಸಿಂಧು ಕೇಂದ್ರಗಳಿಗೆ ತ್ರಾಸಿ ವಲಯ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ತ್ರಾಸಿ ವಲಯಾಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ ಸೋಮವಾರ ಚಾಲನೆ ನೀಡಿದರು. ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ., ಸ್ವಸಹಾಯ ಸಂಘಗಳ ತ್ರಾಸಿ ವಲಯ ಅಧ್ಯಕ್ಷ ನಾಗರಾಜ ಖಾರ್ವಿ, ತಾಲೂಕು ನೋಡಲ್ ಅಧಿಕಾರಿ ಕುಮಾರ್, ಸ್ಥಳೀಯ ಒಕ್ಕೂಟದ ಅಧ್ಯಕ್ಷೆ ರೇಣುಕಾ, ಗುಲಾಬಿ, ಒಕ್ಕೂಟದ ಪದಾಧಿಕಾರಿಗಳು, ತ್ರಾಸಿ ವಲಯ ಮೇಲ್ವಿಚಾರಕ ಗಿರೀಶ್, ಸೇವಾ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಪದವಿ ಕಾಲೇಜಿನ ಐಟಿ ಘಟಕದ ವತಿಯಿಂದ ’ಐಟಿ ಕ್ಷೇತ್ರದ ಪ್ರಾಮುಖ್ಯತೆ ಮತ್ತು ವ್ಯಕ್ತಿತ್ವ ವಿಕಸನ’ ಕುರಿತು ಕಾರ್ಯಕ್ರಮ ನಡೆಯಿತು. ಮೈಸೂರು ಜೆಎಸ್‌ಎಸ್ ಸೈನ್ನ್ ಆಂಡ್ ಟೆಕ್ನಾಲಜಿ ಯುನಿವರ್ಸಿಟಿ ಪ್ರೊಫೆಸರ್ ಡಾ. ಅನಿಲ್ ಕುಮಾರ್ ಬಿಸಿಎ ಕೋರ್ಸ್‌ನ ಪ್ರಾಮುಖ್ಯತೆ ಕುರಿತಾಗಿ ಮಾತನಾಡಿದರು. ಇನ್ಫೋಸಿಸ್ ಕಂಪೆನಿಯ ಸೀನಿಯರ್ ಇಂಜಿನಿಯರ್, ಫಾತಿನ್ ಮಿಸ್ಬ ಇವರು ವ್ಯಕ್ತಿತ್ವ ವಿಕಸನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ತಂತ್ರಜ್ಞಾನ ಕ್ಷೇತ್ರದ ಹಲವು ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮೈಸೂರು ಸೈಂಟ್ ಜೋಸೆಫ್ ಸ್ಕೂಲ್ ಪ್ರಾಂಶುಪಾಲರಾದ ವೀಣಾ, ಮೇರಿ, ಸಂಸ್ಥೆಯ ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ಉಪಸ್ಥಿತರಿದ್ದರು. ಗಣಕ ವಿಜ್ಞಾನ ವಿಭಾಗದ ಮುಖ್ಕಸ್ಥೆ ನೂತನ ಇವರು ಅತಿಥಿ ಗಣ್ಯರನ್ನು ವಂದಿಸಿ ಉಪನ್ಯಾಸಕಿ ಹರ್ಷಿತಾ ಕಾಂiiಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸಂಸ್ಕೃತ ಉಪನ್ಯಾಸಕಿ ಸುಲೇಖಾ ಆರೀಫ ಅವರು ಕೊಡುಗೆಯಾಗಿ ನೀಡಿದ ನಲವತ್ತೆಂಟು ಸಾವಿರ ರೂಪಾಯಿ ಮೊತ್ತದ ಮೂವತ್ತು ಖುರ್ಚಿಗಳನ್ನು ಕಾಲೇಜಿಗೆ ಹಸ್ತಾಂತರಿಸಲಾಯಿತು. ಈ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ ಜಿ ಯವರು ವಹಿಸಿದ್ದರು. ಕುರ್ಚಿಯನ್ನು ಹಸ್ತಾಂತರಿಸಿ ಮಾತನಾಡಿದ ಸುಲೇಖಾ ಆರೀಫರವರು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೀಡುವ ಎಲ್ಲ ರೀತಿಯ ಸೇವೆ ಮತ್ತು ಸಹಕಾರಗಳು ದೇವರಿಗೆ ಮಾಡುವ ಸೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಭುಜಂಗ ಶೆಟ್ಟಿ, ಚಂದ್ರಶೇಖರ, ಶಿವಾನಂದ ನಾಯಕ ಮತ್ತು ಪೂರ್ಣಿಮಾ ನಾಯಕ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ನಾಯಕ ವಂದಿಸಿದರು.

Read More