ಬೈಂದೂರು: ವ್ಯಕ್ತಿಯ ಶ್ರೇಷ್ಠತೆಯನ್ನು ನಿರ್ದಿಷ್ಟವಾದ ಮಾನದಂಡದಿಂದ ಅಳೆಯುವ ಮೂರ್ಖತನಕ್ಕೆ ಮುಂದಾಗಬಾರದು. ಪ್ರತಿ ವ್ಯಕ್ತಿಯಲ್ಲೂ ಅವರದ್ದೇ ಆದ ಪ್ರತಿಭೆ ಅಡಗಿರುತ್ತದೆ ಎಂಬುದನ್ನು ಅರಿಯಬೇಕು ಎಂದು ಬರಹಗಾರ ಹಾಗೂ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಜರುಗಿದ ಮಕ್ಕಳ ಲಾವಣ್ಯ-2015ರ ‘ರಜೆಯಲ್ಲಿ ರಂಗಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಯಾವುದೇ ಬಗೆಯ ರಂಗಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಮಕ್ಕಳು ರಂಗಭೂಮಿಯಲ್ಲಿ ಒಮ್ಮೆ ತೊಡಗಿಸಿಕೊಂಡರೆ ಮುಂದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಎಂದು ಹೇಳಿದ ಅವರು ಮನಬಂದಂತೆ ನಾಟಕಗಳನ್ನು ವಿಮರ್ಶಿಸುವ ವಿಮರ್ಶಕರು, ಮೊದಲು ಅದರ ಆಶಯ, ಹಿನ್ನೆಲೆ, ರಚನೆಯ ಕಾಲ ಮುಂತಾದವುಗಳನ್ನು ಕುರಿತು ಅರಿತು ವಿಮರ್ಷಿಸಿದರೆ ಒಳ್ಳೆಯದು ಎಂದು ಸಲಹೆಯಿತ್ತರು. ರಂಗಶಿಬಿರದ ನಿರ್ದೇಶಕ ಸತ್ಯನಾ ಕೊಡೇರಿ ಸಮಾರೋಪದ ನುಡಿಗಳನ್ನಾಡುತ್ತಾ ನಾವುಗಳು ಮಕ್ಕಳ ಬಾಲ್ಯವನ್ನು ಕಸಿಯುತ್ತಿದ್ದೆವೇನೋ ಎಂಬ ಆತಂಕ ಕಾಡುತ್ತಿದೆ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳ ಪ್ರೀತಿ, ಸ್ನೇಹ, ಮಮತೆ ಎಲ್ಲವನ್ನೂ ಕಲಿಯುತ್ತಾರೆ. ರಂಗಭೂಮಿಯು ಜನರಿಗೆ ಹತ್ತಿರದಿಂದ ಸ್ಪಂದಿಸುವ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ.ಮೇ.1: ನಗರದಲ್ಲಿ ಹೆಚ್ಚಿದ ವಾಹನ ದಟ್ಟಣೆಯಿಂದಾಗಿ ಇಂದು ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಮುಖ್ಯರಸ್ತೆಯಲ್ಲಿ ಸಾಲು ಸಾಲು ವಾಹನಗಳು ಕೆಲಹೊತ್ತು ಜಾಮ್ ಆಗಿ ನಿಲ್ಲುವ ದೃಶ್ಯ ಕಂಡುಬಂತು. ವಾಹನ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ಕುಂದಾಪುರದ ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದರು. ಇಂದು ಕುಂದಾಪುರದಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಸಿಐಟಿಯುನಿಂದ ಬೃಹತ್ ಬೈಕ್, ರಿಕ್ಷಾ ರ್ಯಾಲಿ, ಕಾಲ್ನಡಿಗೆಯ ಜಾಥಾ ಇದ್ದ ಕಾರಣ ಸಾವಿರ ಸಂಖ್ಯೆಯ ಮಂದಿ ಶಾಸ್ತ್ರಿ ವೃತ್ತ ಹಾಗೂ ನೆಹರು ಮೈದಾನದ ಸುತ್ತ ನೆರೆದಿದ್ದರು. ಇನ್ನೊಂದೆಡೆ ಕುಂದಾಪುರ, ಹಂಗಳೂರು ಮುಂತಾದೆಡೆ ಅನೇಕ ಶುಭ ಸಮಾರಂಭಗಳೂ ನಡೆಯುತ್ತಿದ್ದವು. ಪರಿಣಾಮವಾಗಿ ಅಧಿಕ ಸಂಖ್ಯೆಯ ಜನರು ಇಂದು ನಗರಲ್ಲಿ ಆಗಮಿಸುತ್ತಿದ್ದರು. ಇದರಿಂದಾಗಿ ಬೆಳ್ಳಿಗ್ಗೆ 9:30ರಿಂದ ಮಧ್ಯಾಹ್ನ 12:45ರ ತನಕ ಭಾರಿ ಜನಸಂದಣಿ ಕಂಡುಬಂತು. ಇಂದು ಸರಕಾರಿ ರಜಾದಿನವಾದ್ದರಿಂದ ದಿನನಿತ್ಯ ಕಛೇರಿಗೆ ತೆರಳುವ ನೌಕರರ ಸಂಖ್ಯೆ ಕಡಿಮೆ ಇತ್ತು. ಕುಂದಾಪುರ ಗಾಂಧಿ ಮೈದಾನದ ಎದುರು ಚತುಷ್ಪತ ಕಾಮಗಾರಿ ಕಳೆದ 2-3ವರ್ಷಗಳಿಂದ ನಡೆಯುತ್ತಲೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ…
ಮೋದಿಯದ್ದು ಕಾರ್ಮಿಕ ವಿರೋಧಿ ಸರಕಾರ: ಪ್ರಕಾಶ್ ಕುಂದಾಪುರ: ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಸರಕಾರ ಹಿಂದಿನ ಸರಕಾರಕ್ಕಿಂತ ಹೆಚ್ಚು ಹಗರಣಗಳಲ್ಲಿ ತೊಡಗಿಕೊಂಡಿದೆ. ಇದು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾರ್ಮಿಕ ವಿರೋಧಿ ನೀತಿಯು ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರಿಗಾಗಿ ಇರುವ ಐವತ್ನಾಲ್ಕು ಕಾನೂನುಗಳನ್ನು ಮೊಟಕುಗೊಳಿಸಿ ಕೇವಲ ಮೂರು ಕಾನೂನಿಗೆ ಪರಿವರ್ತಿಸುವ ಹುನ್ನಾರದ ಹಿಂದೆ ಬಂಡವಾಳಶಾಹಿಗಳ ಪರವಾದ ದೋರಣೆ ಅಡಗಿದೆ ಎಂದು ಸಿಐಟಿಯು ರಾಜ್ಯ ಮುಖಂಡ ಪ್ರಕಾಶ್ ಆರೋಪಿಸಿದರು. ಅವರು ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೋಟಿ ಕೋಟಿ ಹಣವನ್ನು ಕೇಲವ ಜಾಹೀರಾತಿಗಾಗಿ ಖರ್ಚುಮಾಡಿ ಜನರನ್ನು ಮರುಳುಗೊಳಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಳೆದ ಒಂದು ವರ್ಷದಿಂದ ಬಡವರು, ಕಾರ್ಮಿಕರ ಏಳಿಗೆಗೆ ಶ್ರಮಿಸಿಲ್ಲ. ಮೆಕ್ ಇನ್ ಇಂಡಿಯಾದಂತಹ ಪರಿಕಲ್ಪನೆಯನ್ನು ಸೃಷ್ಟಿಸಿದ ಮೋದಿ, ದೇಶದ ಜನರಿಗೆ ನೆರವು ಮಾಡಿಕೊಡುವ ಬದಲಿಗೆ ವಿದೇಶಿ ಬಂಡವಾಳದಾರರಿಗೆ ನೆರವು…
ಬೈಂದೂರು: ಮನುಷ್ಯ ತನ್ನ ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಕಲೆ, ಸಾಹಿತ್ಯದಂತಹ ಹಲವು ಮಾಧ್ಯಮವನ್ನು ಕಂಡುಕೊಂಡಿದ್ದಾನೆ. ದಿನನಿತ್ಯದ ಕಾಯಕದ ನಡುವೆ ಒಂದಿಷ್ಟು ಹೊತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವೂ ಆಗಿದೆ ಎಂದು ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಹೇಳಿದರು. ಅವರು ಬೈಂದೂರು ರಥೋತ್ಸವದ ಅಂಗವಾಗಿ ಸುರಭಿ ರಿ. ಬೈಂದೂರು ಇಲ್ಲಿನ ಶಾರದಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ನಾಲ್ಕು ದಿನಗಳ ’ಸುರಭಿ ಕಲಾಸಿರಿ’ಯ ಕೊನೆಯ ದಿನ ಸಭಾ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣಕಾರರಾಗಿ ಮಾತನಾಡಿದರು. ದಿನವೂ ಅನ್ನ ಊಟಮಾಡುವವನಿಗೆ ಅದು ಹೆಚ್ಚು ರುಚಿಸುವುದಿಲ್ಲ. ಅದಕ್ಕಾಗಿ ಒಂದಿಷ್ಟು ವ್ಯಂಜನಗಳನ್ನು ಸೇರಿಸಿಕೊಂಡು ಊಟಮಾಡುತ್ತಾನೆ. ಬದುಕು ಕೂಡ ಒಂದು ದೃಷ್ಠಿಯಲ್ಲಿ ಅನ್ನದಂತೆ. ಇಲ್ಲಿ ದುಡಿಯುವುದು, ಗಳಿಸುವುದು ಎಲ್ಲಾ ಇದ್ದದ್ದೇ. ಆದರೆ ಬದುಕಿನಲ್ಲಿ ಕಲೆ ಎಂಬ ವ್ಯಂಜನ ಸೇರಿಕೊಂಡಾಗ ಅದು ಮತ್ತಷ್ಟು ಸುಂದರಗೊಳ್ಳುತ್ತದೆ ಎಂದ ಅವರು ಬೈಂದೂರಿನ ಎಲ್ಲಾ ಸಂಘಟನೆಗಳೂ ಕಲೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೆಲಸವನ್ನು ಮಾಡುತ್ತಾ ಬಂದಿವೆ ಎಂದು ಶ್ಲಾಘಿಸಿದರು. ಯಡ್ತರೆ ಗ್ರಾ.ಪಂ ಅಧ್ಯಕ್ಷ…
ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯ ನಾಯಕನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಬೈಕ್ ಸವಾರನ ಮೇಲೆ ಹರಿದು ಹೋದ ಪರಿಣಾಮ ಬೈಕ್ ಸವಾರನ ಅರ್ಧದೇಹ ಛಿದ್ರಗೊಂಡು ಮೃತಪಟ್ಟ ವಿದ್ರಾವಕ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಹೇರಂಜಾಲು ಗಾಣಿಗರ ಬೆಟ್ಟು ಮುತ್ತ ಗಾಣಿಗರ ಮಗ ವೀರೇಂದ್ರ ಗಾಣಿಗ ( 28 ) ಎಂದು ಗುರುತಿಸಲಾಗಿದೆ. ವೀರೇಂದ್ರ ರಾತ್ರಿ ವೇಳೆಯಲ್ಲಿ ಬೈಂದೂರು ಕಡೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಛಿದ್ರಗೊಂಡ ದೇಹ ಕೆಲವು ಹೊತ್ತು ರಸ್ತೆಯಲ್ಲಿಯೇ ಬಿದ್ದಿತ್ತು. ಮೃತಪಟ್ಟವರು ಯಾರೆಂದು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಸ್ಥಳಕ್ಕಾಗಮಿಸಿದರ ಬೈಂದೂರು ಪೊಲೀಸರು ಮಹಜರು ನಡೆಸಿ ಮೃತರ ಮೊಬೈಲ್ ಮೂಲಕ ಸಂಬಂಧಿಗಳಿಗೆ ಕರೆಮಾಡಿ ಗುರುತು ಪತ್ತೆ ಹಚ್ಚಿದ್ದರು. ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಊರಿಗೆ ಆಗಮಿಸಿದ್ದ ವಿರೇಂದ್ರ ಒಂದು ದಿನದಲ್ಲಿ ಮತ್ತೆ ಮುಂಬೈಗೆ ಹಿಂತಿರುಗುವವರಿದ್ದರು. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.
ಗಂಗೊಳ್ಳಿ/ಶಾರ್ಜಾ : ಶಾರ್ಜಾದ ದೆಹಲಿ ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಂಡ್ಯಾ ಪ್ರೇರಣಾ ಪೈ 2014-15ನೇ ಸಾಲಿನ 21ನೇ ಶೈಕ್ಷಣಿಕ ಮಹತ್ಸಾದನೆಯ ಬಿರುದು ಪಡೆದುಕೊಂಡಿದ್ದಾರೆ. ಶಾರ್ಜಾ ನಗರದ ಶಾರ್ಜಾ ವಿಶ್ವವಿದ್ಯಾನಿಲಯದ ಸಿಟಿ ಹಾಲ್ನಲ್ಲಿ ಇತ್ತೀಚಿಗೆ ಜರಗಿದ ಸಮಾರಂಭದಲ್ಲಿ ಶಾರ್ಜಾದ ಯುವರಾಜ ಜನಾಬ್ ಶೇಖ್ ಸುಲ್ತಾನ್ ಬಿನ್ ಮೊಹಮ್ಮದ್ ಬಿನ್ ಸುಲ್ತಾನ್ ಅಲ್ ಕಾಸಿಮಿ ಇವರು ಪ್ರೇರಣಾ ಪೈ ಇವರಿಗೆ ಬಿರುದು ಪ್ರದಾನ ಮಾಡಿದರು. ಪ್ರೇರಣಾ ಮೂಲತ: ಗಂಗೊಳ್ಳಿಯವರಾದ ಮಣಿಪಾಲದ ನಿವಾಸಿ ಬಾಂಡ್ಯ ಸಂಜೀವ ಪೈ ಹಾಗೂ ಶಾರದಾ ಎಸ್.ಪೈ ಅವರ ಮೊಮ್ಮಗಳಾಗಿದ್ದು, ಬಾಂಡ್ಯ ಹರೀಶ್ ಪೈ ಮತ್ತು ರಾಗಿಣಿ ಹರೀಶ್ ಪೈ ಅವರ ಪುತ್ರಿಯಾಗಿದ್ದಾಳೆ. ಪ್ರತಿಷ್ಠಿತ ಶೈಕ್ಷಣಿಕ ಶ್ರೇಷ್ಠತೆಗಾಗಿ 2012-13ನೇ ಆವೃತ್ತಿ 15ರ ‘ಶೇಕ್ ಹಮ್ದಾನ್ ಬಿನ್ ರಾಶಿದ್ ಅಲ್ ಮಕ್ತೂಮ್ ಬಿರುದನ್ನು ಪಡೆದುಕೊಂಡಿರುವ ಪ್ರೇರಣಾ ತನ್ನ ಸಂಪೂರ್ಣ ಶೈಕ್ಷಣಿಕ ಪಯಣದಲ್ಲಿ ತನ್ನ ನೆಚ್ಚಿನ ವಿಷಯಗಳಾದ ವಿಜ್ಞಾನ ಮತ್ತು ಗಣಿತದಲ್ಲಿ ಸರ್ವಶ್ರೇಷ್ಠ ವಿದ್ಯಾರ್ಥಿನಿಯಾಗಿದ್ದಾರೆ. ತಾನು ಕೈಗೆತ್ತಿಕೊಂಡಿರುವ ಕಾಯಕವನ್ನು ಅತ್ಯುತ್ತಮ ರೀತಿಯಲ್ಲಿ…
ಕುಂದಾಪುರ: ಕೇಂದ್ರ ಸರಕಾರದ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ- 2015’ಅಂಗಿಕಾರಗೊಳ್ಳುವುದನ್ನು ವಿರೋಧಿಸಿ ಅಖೀಲ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಇಂದು (ಎ. 30) ದೇಶಾದ್ಯಂತ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದರ ಪರಿಣಾಮ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ತಾಲೂಕಿನಲ್ಲಿಯೂ ಸರಕಾರಿ ಬಸ್ ಸಂಚಾಯ ಸ್ಥಗಿತಗೊಂಡಿದ್ದರೇ, ಖಾಸಗಿ ಬಸ್ಸುಗಳ ಓಡಾಟ ವಿರಳವಾಗಿತ್ತು. ಕುಂದಾಪುರ ತಾಲೂಕಿನ ಕೆಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಲೋಕಲ್ ಬಸ್ಸುಗಳು ವಿರಳವಾಗಿ ಸಂಚರಿಸುತ್ತಿರುವುದು ಕಂಡುಬಂತು. ಆದರೆ ಕುಂದಾಪುರದಿಂದ ಬೈಂದೂರು, ಭಟ್ಕಳಕ್ಕೆ ಸಂಚರಿಸು ಖಾಸಗಿ ಬಸ್ಸುಗಳು ಕೂಡ ರಸ್ತೆಗಿಳಿಯದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಆಟೋರಿಕ್ಷಾ ಚಾಲಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರಾದರೂ ರಿಕ್ಷಾಗಳ ಸಂಚಾರ ಕಂಡುಬರುತ್ತಿತ್ತು. ಸಂಜೆಯಾಗುತ್ತಿದ್ದಂತೆ ದೂರದ ಮುಂಬೈ, ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸುಗಳು ತಮ್ಮ ಪ್ರಯಾಣವನ್ನು ಆರಂಭಿಸಿದವು. ಉಡುಪಿಯಲ್ಲಿ ಸಿಐಟಿಯು ಸಂಯೋಜಿತ ಬಸ್ ನೌಕರರ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುದುದಾಗಿ ತಿಳಿಸಿತ್ತು. ಖಾಸಗಿ ಬಸ್ ಮಾಲಕರು ತಾವು ಬಂದ್ ಆಚರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರಾದರೂ, ನೌಕರರು…
ಕುಂದಾಪುರ: ಭಯ ಎಂಬುದು ಜಾತಿ ಧರ್ಮವನ್ನು ಮೀರಿದ್ದು! ಮೊದಲು ಎದುರಾದ ಕಂಟಕಕ್ಕೊಂದು ಅಂತ್ಯ ಸಿಕ್ಕರೆ ಸಾಕು ಎಂದು ಜನಸಾಮಾನ್ಯರು ಬಯಸುತ್ತಾರೆ. ಇಂದು ಮುಂಜಾನೆಯೇ ಕುಂದಾಪುರ ಪೇಟೆಯ ಪ್ಯಾನ್ಸಿ ಅಂಗಡಿಯ ಮುಂಭಾಗದಲ್ಲಿ ಯಾರೋ ಕಿಡಿಗೇಡಿಗಳಿಂದಾಗಿ ಎದುರಾದ ಕಂಟಕವೊಂದು ಅಂಗಡಿಯ ಮಾಲಿಕರನ್ನು ಕ್ಷಣಕಾಲ ವಿಚಲಿತರಾಗುವಂತೆ ಮಾಡಿತ್ತಾದರೂ ಅಲ್ಲಿಗೆ ವಿಜ್ಞಾನದ ಶಿಕ್ಷಕರೊರ್ವದಿಂದ ಪರಿಸ್ಥಿತಿ ತಿಳಿಯಾಯಿತು. ಏನಿದು ಘಟನೆ? ಕುಂದಾಪುರದ ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ, ಬ್ಯೂಟಿ ಕ್ವೀನ್ ಅಂಗಡಿ ಮಾಲಕ ಹುಸೇನ್ ಹೈಕಾಡಿ ಎಂಬುವರ ಎಂದಿನಂತೆಯೇ ಶಟರ್ ಎಳೆದು ಅದರ ಬಲಭಾಗದಲ್ಲಿ ಬೀಗ ಹಾಕಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದರೆ, ಶಟರಿನ ಎಡಭಾಗದಲ್ಲಿ ಒಂದು ಬೊಂಡವನ್ನಿಟ್ಟು, ಅದರ ಮೇಲೊಂದು ನಿಂಬೆ ಹಣ್ಣು ಇಡಲಾಗಿತ್ತು. ಮೂರೂ ಬದಿಗೆ ಬೊಂಡದ ಸುತ್ತ ಮೂರು ನಿಂಬೆ ಹಣ್ಣು ಇಡಲಾಗಿತ್ತು. ಕುಂಕುಮ ಮತ್ತು ಅರಶಿನಪುಡಿ ಚೆಲ್ಲಲಾಗಿತ್ತು. ಉರಿಸದ ಊದುಬತ್ತಿಯ ಕಟ್ಟನ್ನು ಶೆಟರ್ಗೆ ಸಿಕ್ಕಿಸಿಡಲಾಗಿತ್ತು. ಬೆಳಿಗ್ಗೆ ಸ್ಥಳೀಯ ಉಪನ್ಯಾಸಕರೊಬ್ಬರು ನಡೆದು ಬರುತ್ತಿದ್ದಾಗ ಗಮನಿಸಿ ಅಂಗಡಿ ಮಾಲೀಕರಿಗೆ ಸುದ್ಧಿ ಮುಟ್ಟಿಸಿದ್ದಾರೆ. ತಕ್ಷಣ ಅಂಗಡಿಗೆ ಬಂದ…
ಬೈಂದೂರು: ಕಲ್ಲೆದೆಯನ್ನೂ ಕರಗಿಸುವ, ದ್ವೇಷವನ್ನು ದಹಿಸುವ ಶಕ್ತಿ ಇರುವುದು ಕಲೆಗೆ ಮಾತ್ರ. ಕಲಾಕಾರರು ಆನಂದದ ಲಹರಿಯನ್ನು ಹರಿಸಿ, ಪ್ರೀತಿಯನ್ನು ಬಿತ್ತುವ ಶಾಂತಿದೂತರು ಎಂದು ಬೈಂದೂರು ರತ್ತೂಬಾಯಿ ಹೈಸ್ಕೂಲ್ ನ ಮುಖ್ಯೋಪಧ್ಯಾಯ ಜಿ. ಎಸ್. ಭಟ್ ಹೇಳಿದರು. ಅವರು ಬೈಂದೂರು ರಥೋತ್ಸವದ ಅಂಗವಾಗಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ‘ಸುರಭಿ ಕಲಾಸಿರಿ’ ಸಾಂಸ್ಕೃತಿಕ ವೈಭವದಲ್ಲಿ ಮೂರನೇ ದಿನ ಜರುಗಿದ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಎಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಪ್ರೋತ್ಸಾಹ ಸಿಗುವುದಿಲ್ಲವೋ ಅಲ್ಲಿ ಅದರ ಉಳಿವು ಸಾಧ್ಯವಿಲ್ಲ. ಬೈಂದೂರಿನ ಸುರಭಿ ಸಂಸ್ಥೆಯು ಸತತವಾಗಿ ಕಲೆಯನ್ನು ಅರಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ ಎಂದವರು ನುಡಿದರು. ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಸುಪ್ರಿತಾ ದೀಪಕ್ ಶೆಟ್ಟಿ ಮಾತನಾಡಿ ಬೈಂದೂರಿನ ಸಾಂಸ್ಕೃತಿಕ ಲೋಕಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿರುವ ಸುರಭಿಯನ್ನು ಬೈಂದೂರಿನಿಂದ ಬೇರ್ಪಡಿಸಿ ನೋಡಲಾಗದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಅರಣ್ಯ…
ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸುಧಾಕರ ವಕ್ವಾಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಾಂಶುಪಾಲ ಸಿ.ಸೀತಾರಾಮ ಮಧ್ಯಸ್ಥ ಅವರಿಂದ ತೆರವಾದ ಸ್ಥಾನಕ್ಕೆ ನಿಯುಕ್ತರಾದ ಅವರು ಹೆಮ್ಮಾಡಿ ಶ್ರೀ.ವಿ.ವಿ.ವಿ. ಮಂಡಳಿಯ ಅಧ್ಯಕ್ಷ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರಿಂದ ನೇಮಕಗೊಂಡಿದ್ದಾರೆ. ಸುಧಾಕರ ವಕ್ವಾಡಿ ಅವರು ಹೆಮ್ಮಾಡಿ ಕಾಲೇಜಿನ ಸ್ಥಾಪಕ ಉಪನ್ಯಾಸಕರಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ೧೯ ವರ್ಷಗಳ ಸೇವಾ ಅನುಭವ ಪಡೆದಿದ್ದಾರೆ. ರಂಗ ನಿರ್ದೇಶಕ, ನಟನಾಗಿ ರಾಷ್ಟ್ರಮಟ್ಟದವರೆಗೂ ಕನ್ನಡ ಸೇರಿದಂತೆ ಹಿಂದಿ, ಆಂಗ್ಲ ಭಾಷೆಯ ನಾಟಕ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.೧೯೯೬ ರಲ್ಲಿ ತೆರೆಕಂಡ ಕುಂದಾಪುರದ ದಲಿತ ಕವಿ ಕೆ.ಕೆ.ಕಾಳಾವರ್ಕರ್ ಅವರ ತುಳು ಚಲನಚಿತ್ರ ‘ಕಾಲ’ ದಲ್ಲಿ ಕಲಾತ್ಮಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಪತಂಜಲಿ ಹಾಗೂ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿದ್ಧ ಯೋಗ ಸಾಧಕರಾಗಿರುತ್ತಾರೆ.
