ಬೈಂದೂರು: ಸಮೀಪದ ನಾಗೂರು ಕುಸುಮ ಫೌಂಡೇಶನ್ ಆಶ್ರಯದಲ್ಲಿ ಅಲ್ಲಿನ ಲಲಿತ ಕೃಷ್ಣ ಕಲಾಮಂದಿರದಲ್ಲಿ ಬೈಂದೂರು ಶಿಕ್ಷಣ ವಲಯದ ಯುವಜನರಿಗಾಗಿ ಗಾನಕುಸುಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೀರ್ಪುಗಾರರಾಗಿದ್ದ ಬಸ್ರೂರು ಭಾಸ್ಕರ ಆಚಾರ್ಯ, ಕುಂದಾಪುರದ ಮೀರಾ ಕಾಮತ್, ಮೂಕಾಂಬಿಕಾ ಉಡುಪ, ಮಲ್ಪೆಯ ಸುದರ್ಶನ, ಗಂಗೊಳ್ಳಿಯ ಗಣೇಶ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಆಯೋಜಿಸಿದ್ದ ಕುಸುಮ ಫೌಂಡೇಶನ್‌ನ ಪ್ರಮುಖ ನಳಿನ್‌ಕುಮಾರ್ ಶೆಟ್ಟಿ ಸ್ವಾಗತಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಸಂಗೀತ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಗಾನಕುಸುಮ ಕಾರ್ಯಕ್ರಮದ ಉದ್ದೇಶ. ಎರಡು ಅಥವಾ ಮೂರು ಸುತ್ತುಗಳಲ್ಲಿ ಆಯ್ಕೆ ನಡೆಸಿ ಅಂತಿಮವಾಗಿ ಹೊರಹೊಮ್ಮುವ 6 ಪ್ರತಿಭೆಗಳಿಗೆ ಮುಂದೆ ನಡೆಯುವ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ವೃತ್ತಿಪರ ಗಾಯಕರೊಂದಿಗೆ ಹಾಡುವ ಅವಕಾಶ ನೀಡಲಾಗುವುದು ಎಂದು ಹೇಳಿದರು. ನಿರ್ದೇಶಕಿ ವಿದ್ಯಾ ಕಾರ್ಯಕ್ರಮದ ಮಾಹಿತಿ ನೀಡಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಪೂರ್ಣಿಮಾ ನಿರೂಪಿಸಿದರು. ಮೊದಲ ಸುತ್ತಿನಲ್ಲಿ 60 ಅಭ್ಯರ್ಥಿಗಳು ಭಾಗವಹಿಸಿದರು.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಕಸ್ತೂರಿರಂಗನ್ ವರದಿಯಲ್ಲಾಗುತ್ತಿರುವ ಲೋಪದ ಬಗ್ಗೆ ರಾಜಕಾರಣಿಗಳನ್ನು ದೂಷಿಸುವ ಮೊದಲು ಈ ವಿಚಾರದಲ್ಲಿ ಅಧಿಕಾರಿಗಳು ಮಾಡುತ್ತಿರುವ ರಾಜಕೀಯವನ್ನು ವಿರೋಧಿಸಬೇಕಿದೆ. ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಪಡೆಯನ್ನೇ ವರದಿ ಸಿದ್ಧಪಡಿಸಲು ಹೇಳಿದ್ದರೂ, ಯಾವೊಬ್ಬ ಅಧಿಕಾರಿಯೂ ಗ್ರಾಮಕ್ಕೆ ಬಂದು ಜನರ ಸಮಸ್ಯೆಗಳನ್ನು ಆಲಿಸದೇ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಕಾರ್ಕಳ ತಾಲೂಕು ಅಧ್ಯಕ್ಷ ಮುಟ್ಲಪಾಡಿ ಸತೀಶ್ ಶೆಟ್ಟಿ ಹೇಳಿದರು. ಜಡ್ಕಲ್ ಪಂಚಾಯತ್ ವಠಾರದಲ್ಲಿ ಕಸ್ತೂರಿರಂಗನ್ ವರದಿಯ ವಿರುದ್ದ ಸುಪ್ರಿಂ ಕೋರ್ಟಿಗೆ ಮೇನ್ಮನವಿ ಸಲ್ಲಿಸುವ ಸಲುವಾಗಿ ಹಮ್ಮಿಕೊಂಡ ಜಡ್ಕಲ್-ಮುದೂರು ಗ್ರಾಮಸ್ಥರ ಸಹಿ ಸಂಗ್ರಹ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲು ನವೆಂಬರ್ ೪ ಕೊನೆಯ ದಿನವಾಗಿದ್ದು ಅಷ್ಟರೊಳಗೆ ವರದಿ ವಿರೋದಿಸುವ ಬಗ್ಗೆ ಸಹಿ ಹಾಕಿ, ಕೇಂದ್ರ ಪರಿಸರ ಇಲಾಖೆಯ ಮೂಲಕ ಸುಪ್ರಿಂ ಕೋರ್ಟಿನ ಹಸಿರು ಪೀಠದಲ್ಲಿ ಮೇಲ್ಮನವಿಯನ್ನು ದಾಖಲಿಸಬೇಕಿದೆ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ. ಇಲ್ಲಿ ರಾಜಕೀಯ ಮರೆತು ಹೋರಾಟ ಮಾಡದಿದ್ದರೇ ನಮ್ಮನ್ನು ಧಮನಿಸುವ…
ಕುಂದಾಪುರ: ಈಗಂತು ಹೇಳಿ ಕೇಳಿ ಇಂಟರ್‌ನೆಟ್ ಯುಗ. ಎಲ್ಲವೂ ಆನ್‌ಲೈನ್‌ಮಯ. ಸಾಮಾಜಿಕ ತಾಣಗಳ ದೆಸೆಯಿಂದ ದಿನವಿಡೀ ಮೊಬೈಲ್ ಡಾಟ್ ಆನ್ ಆಗಿಯೇ ಇರುತ್ತೆ. ತಿಂಗಳಿಗೋ ನೂರಾರು ರೂಪಾಯಿ ಖರ್ಚು. ಹೀಗಿರುವಾಗ ಉಚಿತ ಇಂಟರ್‌ನೆಟ್ ಸೌಲಭ್ಯ ಸಿಕ್ಕರೆ ಯಾರು ತಾನೆ ಬೇಡ ಅಂದಾರು? ದೊಡ್ಡ ನಗರ, ಸ್ಟಾರ್ ಹೋಟೆಲ್, ಆಫೀಸುಗಳಿಗಷ್ಟೇ (ಕೆಲವೆಡೆ ಮಾಲಕರಿಗೆ ತಿಳಿಯದೆ ವೈಫೈ ಆನ್ ಇರುತ್ತದೆ.) ಸೀಮಿತವಾದ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಕುಂದಾಪುರಲ್ಲಿಯೂ ವೈಫೈ ಮೂಲಕ ನೀಡುತ್ತಾರೆಂದರೆ, ಯಾರು ತಾನೆ ಬಳಸದೇ ಇದ್ದಾರು? ಹೌದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿನ ದೃಷ್ಠಿ ಡಿಜಿಟಲ್ಸ್ ಬ್ಯಾನರ್ಸ್ ಮಾಲಿಕರಾದ ಸಂತೋಷ್ ಖಾರ್ವಿ ಹಾಗೂ ರಾಜೇಶ್ ಖಾರ್ವಿ ಸಾರ್ವಜನಿಕರಿಗೆ ವೈಫೈ ಇಂಟರ್‌ನೆಟ್ ಒದಗಿಸುವ ಮೂಲಕ ಆನ್ಲೈನ್ ಪ್ರೀಯರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಮೊದಲಿಗೆ ವೈಫೈ ಎಲ್ಲರೂ ಬಳಸಿಕೊಳ್ಳಲಿ ಎಂದು ಓಪನ್ ಆಗಿಯೇ ಇಟ್ಟಿದ್ದರು. ಆದರೆ ಅದು ಹೆಚ್ಚಿನ ಮಂದಿಗೆ ತಿಳಿಯುತ್ತಲೇ ಇರಲಿಲ್ಲ. ಹಾಗಾಗಿ ಕೆಲವು ತಿಂಗಳ ಹಿಂದೆ ತಮ್ಮ ಅಂಗಡಿಯ ಎದುರು Free wifi…
ಕುಂದಾಪುರ: ಕೃಷಿಗೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ವ್ಯಾಪಕವಾಗಿ ಕಾಡುತ್ತಿದ್ದು, ಸಮಸ್ಯೆಯ ಪರಿಹಾರಕ್ಕೆ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮಗಳ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ಚೀನ ಮೊದಲಾದ ರಾಷ್ಟ್ರಗಳಲ್ಲಿ ಕಾಡು ಪ್ರಾಣಿಗಳ ಬೆದರಿಸಲು ಬೇರೆ ಬೇರೆ ವಿಧಾನಗಳಿದ್ದು, ಇಲ್ಲೂ ಕೂಡಾ ಅಂಥಹ ಪ್ರಯೋಗಗಳು ನಡೆಯಬೇಕಿದೆ ಎಂದು ಭಾ.ಕಿ.ಸಂ.ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ವಿ ಪೂಜಾರಿ ಅಭಿಪ್ರಾಯ ಪಟ್ಟರು. ಉಡುಪಿ ಜಿಲ್ಲಾ ರೈತ ಸಂಘ, ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಸಮಿತಿ, ಭಾ.ಕಿ.ಸಂ.ಕುಂದಾಪುರ ಕ್ಷೇತ್ರ ಹಾಗೂ ಕೋಟೇಶ್ವರ ವಲಯ ಸಮಿತಿ ಸಹಭಾಗಿತ್ವದಲ್ಲಿ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ರೈತರ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಕೃಷಿಯ ಬಗ್ಗೆ ಹಿಮ್ಮುಖ ನೀತಿ ಆತಂಕ ಮೂಡಿಸುತ್ತಿದೆ. ಸರಿಯಾದ ಪ್ರೋತ್ಸಾಹ, ಧಾರಣೆ ಇಲ್ಲದಿರುವುದು ಕೂಡಾ ಇದಕ್ಕೆ ಕಾರಣ ಎಂದ ಅವರು, ಇವತ್ತು ಕೃಷಿಕರು, ಕೃಷಿಕಾರ್ಮಿಕರು ಮದ್ಯ ವ್ಯಸನಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಇವತ್ತು ಎಲ್ಲ ಕೆಟ್ಟ ಕೃತ್ಯಗಳ ಹಿಂದೆಯೂ ಮದ್ಯದ ಇರುತ್ತದೆ. ಈ ಬಗ್ಗೆ ಜಾಗೃತಿ ಕೃಷಿಕರಲ್ಲಿ…
ಬೈಂದೂರು: ಮನುಷ್ಯನಲ್ಲಿ ನಾಯಕತ್ವದ ಗುಣ, ಸಮಾಜಮುಖಿ ಬದುಕನ್ನು ರೂಪಿಸುವುದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ. ಮನುಷ್ಯ ಜೀವನದಲ್ಲಿ ಸಫಲತೆ, ಯಶಸ್ಸನ್ನು ಕಂಡುಕೊಳ್ಳಬೇಕಾದರೆ ಅವನಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಆತ್ನವಿಶ್ವಾಸ ಅತ್ಯಗತ್ಯ. ಶಿಕ್ಷಣ ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಕಿಸಿಕೊಡಬಲ್ಲದೇ ಎಂಬುದನ್ನು ಯೋಚಿಸಿ ಶಿಕ್ಷಣ ಜೊತೆಗೆ ವ್ಯಕ್ತಿತ್ವ ರೂಪಿಸುವ, ನಾಯಕತ್ವ ಬೆಳೆಸುವ ಎನ್ನೆಸ್ಸೆಸ್‌ನಂತಹ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅವಶ್ಯಕ ಎಂದು ರೋಟರಿ ಜಿಲ್ಲೆ 3180ರ ಮಾಜಿ ಅಸಿಸ್ಟೆಂಟ್ ಗವರ್ನರ್ ಅಭಿನಂದನ ಎ.ಶೆಟ್ಟಿ ಹೇಳಿದರು. ಅವರು ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ‘ರಾಷ್ಟ್ರೀಯ ಸೇವಾ ಯೋಜನಾ ಘಟಕದ ೨೦೧೫ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಮನುಷ್ಯ ಸಮಾಜಮುಖಿಯಾದ ಬದುಕು ನಡೆಸಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಾಲೇಜಿನ ಪಾಠೇತರ ಚಟುವಟಿಕೆಗಳಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಎನ್ನೆಸ್ಸೆಸ್…
ಬೈಂದೂರು: ಇಲ್ಲಿನ ಶಿವದರ್ಶನ್ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದು ಬರುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಢಿಕ್ಕಿಯಾದ ಪರಿಣಾಮ ಪಾದಾಚಾರಿ ಸ್ಥಳದಲ್ಲಿ ಮೃತಪಟ್ಟ ಘಟನೆ ನಸುಕಿನ 5:30ರ ಸಮಾರಿಗೆ ನಡೆದಿದೆ. ಬಾದಾಮಿ ಜಿಲ್ಲೆಯ ಗುಳೆದಗುಡ್ಡದ ನಿವಾಸಿ ಆಸಂಗಿ (24) ಮೃತಪಟ್ಟ ದುದೈವಿ. ಆಸಂಗಿ ಮಣಿಪಾಲದಲ್ಲಿ ಕೂಲಿ ಕೆಲಸ ಮಾಡಿಕೊಂಡು ದ್ವೀತೀಯ ವರ್ಷದ ಡಿಪ್ಲೋಮೊ ಓದುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಊರಿಗೆ ತೆರಳಿ ಅಲ್ಲಿಂದ ಬಸ್ಸಿನಲ್ಲಿ ಮಣಿಪಾಲಕ್ಕೆ ಹಿಂತಿರುಗುತ್ತಿದ್ದರು. ಮಾರ್ಗಮಧ್ಯೆ ಕಾಫಿ ಕುಡಿಯಲೆಂದು ಬಸ್ಸು ಶಿವದರ್ಶನ್ ಹೋಟೆಲ್ ಬಳಿ ನಿಲ್ಲಿಸಿತ್ತು. ಈ ಸಂದರ್ಭದಲ್ಲಿ ಆಸಂಗಿ ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿರುವಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ) ವಾಹನ ವ್ಯಕ್ತಿಯ ದೇಹದ ಮೇಲೆ ಹರಿದಿದ್ದರಿಂದ ಆತನ ದೇಹ ಛಿದ್ರಗೊಂಡಿತ್ತು. ಢಿಕ್ಕಿ ಹೊಡೆದ ವಾಹನ ಇನ್ನೂ ಪತ್ತೆಯಾಗಿಲ್ಲ. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣಾಧಿಕಾರಿ ಸಂತೋಷ್ ಎ.ಕಾಯ್ಕಿಣಿ ತಂಡ ವಾಹನ ಪತ್ತೆಗೆ ಬಲೆ ಬೀಸಿದ್ದಾರೆ.
ಕುಂದಾಪುರ: ನಿಧಿಷ್ಟ ಗುರಿಯ ಹಿಂದೆ ಮಾತಾ-ಪಿತೃ ಗುರು ಭಕ್ತಿ ಮತ್ತು ಸಕಾರಾತ್ಮಕ ಚಿಂತೆಯ ಕೊರತೆಯಿಂದ ಸದೃಢ ಸಮಾಜ ನಿರ್ಮಿಸಲು ಧಕ್ಕೆಯಾಗಿದೆ. ಸೇವಾ ಮನೋಭಾವನೆಯ ಮೂಲಕ ಸಧ್ವಾವ-ಸದ್ಗುಣಗಳನ್ನು ಮೈಗೂಡಿಸಿಕೊಂಡು ಗುರುತ್ವ ಜಾಗೃತೆಯಿಂದ ಸಾಂಸ್ಕೃತಿಕ ಮೌಲ್ಯಗಳು ಏಳಿಗೆ ಸಾದ್ಯ ಎಂದು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಡಾ. ಉದಯ ಕುಮಾರ್ ಶೆಟ್ಟಿ ಹೇಳಿದರು. ಅವರು ಉಡುಪಿ ಜಿಲ್ಲಾ ಪಂಚಾಯಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳುಂಜೆ ಶಂಕರನಾರಾಯಣ ಇಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು,ಕೊಲ್ಲೂರು ಶ್ರೀ ಮೂಕಾಂಬಿಕ ದೇವಳ ಸ್ವತಂತ್ರ ಪ.ಪೂ.ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದದಲ್ಲಿ ‘ಪ್ರಸ್ತುತ ಸನ್ನಿವೇಶದಲ್ಲಿ ಸಾಂಸ್ಕೃತಿಕ ಮೌಲ್ಯಗಳ ಮಹತ್ವ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಭ್ರಷ್ಟಾಚಾರ ಬಿಟ್ಟರೆ ಭಾರತಕ್ಕೆ ಸಾಂಸ್ಕೃತಿಕ ಮೌಲ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ ಆದರೆ, ಟಿವಿಯಲ್ಲಿ ಬರುವ ಅಸಂಬದ್ಧ ಕಾರ್ಯಕ್ರಮಗಳ ವೀಕ್ಷಣೆ, ಹೋಲಿಕೆಯ ಜೀವನದಿಂದ ಆಸೆ-ದುರಾಸೆಗಳಿಗೆ ಒಳಗಾಗಿ ಒತ್ತಡದಿಂದ ಹೊರಗೆ ಬರಬೇಕಾದರೆ…
ಕುಂದಾಪುರ: ಸಮಾಜದಲ್ಲಿ ಹೆಣ್ಣು ಗಂಡುಗಳಿಗೂ ಸಮಾನ ಅವಕಾಶವಿದ್ದರೂ ಮಹಿಳೆಯರ ಕುರಿತಾಗಿ ಬೇಧಭಾವ ತೋರುವುದು ಕಾಣುತ್ತದೆ. ಮಹಿಳೆ ಹಾಗೂ ಪುರುಷರ ನಡುವಿನ ಹೊಂದಾಣಿಕೆಯಿಂದ ಮಾತ್ರ ಸಾಧ್ಯ ಭೇದಭಾವವನ್ನು ತೊಡೆದುಹಾಕಲು ಸಾಧ್ಯ. ಜೊತೆಗೆ ಸಮಾಜದ ಮನೋಧೋರಣೆ ಬದಲಾದಾಗ ಮಾತ್ರ ಹೆಣ್ಣು ಸಬಲೆಯಾಗಲು ಸಾಧ್ಯ ಎಂದು ಪ್ರಮೀಳಾ ವಾಝ್ ಹೇಳಿದರು. ಅವರು ಕೋಡಿಯ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಆರ್ಥಿಕ, ಸಾಮಾಜಿಕವಾಗಿ ಮಹಿಳೆಗೆ ಪ್ರಾಶಸ್ತ್ಯ ಸಿಕ್ಕಾಗ ಮಾತ್ರ ಮಹಿಳಾ ಸಬಲೀಕರಣದ ಕನಸು ನನಸಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ವಹಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೋ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರು ಸಿದ್ದಪ್ಪ ಕೆ.ಎಸ್, ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಫಿರ್ದೋಸ್ ಇವರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ನಂದಿನಿ ಕೆ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿ,…
ಕುಂದಾಪುರ: ಜನರ ಅನುಕೂಲಕ್ಕಾಗಿ ಸರಕಾರಿ ಆಡಳಿತ ಕಛೇರಿಗಳನ್ನು ಒಂದೇ ಸೂರಿನಡಿಯಲ್ಲಿ ತರಬೇಕೆಂಬ ಮಹೋದ್ದೇಶದಿಂದ ಕುಂದಾಪುರದಲ್ಲಿ ಮಿನಿ ವಿಧಾನಸೌಧವನ್ನೇ ಕಟ್ಟಿಲಾಗಿದ್ದರೂ ತಾಲೂಕು ಆಡಳಿತದ ಒಣ ಪ್ರತಿಷ್ಠೆಯಿಂದಾಗಿ ಕುಂದಾಪುರ ಸರಕಾರಿ ಆಸ್ಪತ್ರೆ ಎದುರಿನ ಗ್ರಾಮ ಲೆಕ್ಕಿಗರ ಹಳೆ ಕಛೇರಿಯನ್ನು ಕೆಡವಿ ಮತ್ತೆ ಅಲ್ಲಿಯೇ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಕ್ರಮ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುತ್ತಿರುವ ಪುರಸಭೆ ಕಾರ್ಯಕ್ಕೆ ಸಾಥ್ ನೀಡಬೇಕಿದ್ದ ತಾಲೂಕು ಆಡಳಿತ, ತನ್ನ ಸರ್ವಾಧಿಕಾರಿ ಧೋರಣೆಯನ್ನು ತೋರಿ ಅಲ್ಲಿಯೇ ಕಟ್ಟಡ ಕಟ್ಟಲು ಹೊರಟಿರುವ ಹಿಂದಿನ ಉದ್ದೇಶವೇನು ಎಂಬುದು ಮಾತ್ರ ಅರಿಯದಾಗಿದೆ. ಕುಂದಾಪುರದ ಪುರಸಭಾ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆಯೊಂದಿಗೆ ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ಹಾಗಾಗಿ ಕೆಲವು ತಿಂಗಳಿನಿಂದಿಚೆಗೆ ಅಕ್ರಮ ಒತ್ತುವರಿ ಮಾಡಿಕೊಂಡ ಕಟ್ಟಡಗಳ ಮಾಲಿಕರುಗಳಿಗೆ ನೋಟಿಸ್ ನೀಡಿ, ಯಾರ ಒತ್ತಡಕ್ಕೂ ಮಣಿಯದೇ ತೆರವುಗಳಿಸಲಾಗುತ್ತಿದೆ. ಏತನ್ಮಧ್ಯೆ ಹೂವಿನ ಮಾರುಕಟ್ಟೆಯ ಪಕ್ಕದ ಗ್ರಾಮಲೆಕ್ಕಿಗರ ಕಛೇರಿಗಾಗಿ ಹಳೆ ಕಟ್ಟಡವನ್ನು ಕೆಡವಿ, ಹೊಸ ಕಟ್ಟಡ ಕಟ್ಟಲು ತಾಲೂಕು ಆಡಳಿತ ಮುಂದಾಗಿತ್ತು. ಆದರೆ ಜನನಿಬಿಡ…
