ಸಮಾಜದ ಧೋರಣೆ ಬದಲಾದಾಗ ಹೆಣ್ಣು ಸಬಲೆಯಾಗಬಲ್ಲಳು: ಪ್ರಮೀಳಾ ವಾಝ್

Call us

Call us

Call us

ಕುಂದಾಪುರ: ಸಮಾಜದಲ್ಲಿ ಹೆಣ್ಣು ಗಂಡುಗಳಿಗೂ ಸಮಾನ ಅವಕಾಶವಿದ್ದರೂ ಮಹಿಳೆಯರ ಕುರಿತಾಗಿ ಬೇಧಭಾವ ತೋರುವುದು ಕಾಣುತ್ತದೆ. ಮಹಿಳೆ ಹಾಗೂ ಪುರುಷರ ನಡುವಿನ ಹೊಂದಾಣಿಕೆಯಿಂದ ಮಾತ್ರ ಸಾಧ್ಯ ಭೇದಭಾವವನ್ನು ತೊಡೆದುಹಾಕಲು ಸಾಧ್ಯ. ಜೊತೆಗೆ ಸಮಾಜದ ಮನೋಧೋರಣೆ ಬದಲಾದಾಗ ಮಾತ್ರ ಹೆಣ್ಣು ಸಬಲೆಯಾಗಲು ಸಾಧ್ಯ ಎಂದು ಪ್ರಮೀಳಾ ವಾಝ್ ಹೇಳಿದರು.

Call us

Click Here

ಅವರು ಕೋಡಿಯ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.  ಆರ್ಥಿಕ, ಸಾಮಾಜಿಕವಾಗಿ ಮಹಿಳೆಗೆ ಪ್ರಾಶಸ್ತ್ಯ ಸಿಕ್ಕಾಗ ಮಾತ್ರ ಮಹಿಳಾ ಸಬಲೀಕರಣದ ಕನಸು ನನಸಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ವಹಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೋ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರು ಸಿದ್ದಪ್ಪ ಕೆ.ಎಸ್, ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಫಿರ್ದೋಸ್ ಇವರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ನಂದಿನಿ ಕೆ ಸ್ವಾಗತಿಸಿದರು. ಪೂರ್ಣಿಮಾ ವಂದಿಸಿ, ದಿವ್ಯಾ ಕಾರ‍್ಯಕ್ರಮವನ್ನು ನಿರೂಪಿಸಿದರು.

Leave a Reply