ಕುಂದಾಪ್ರ ಡಾಟ್ ಕಾಂ ಲೇಖನ. ಒಂದೇ ನೋಟಕ್ಕೆ ಮನತುಂಬಿದ ನಗು, ಒಮ್ಮೊಮ್ಮೆ ಸೆಡವು, ಬಾಗುವ ರೇಖೆಗೆ ತಕ್ಕಂತೆ ಬದಲಾಗುವ ಭಾವಲಹರಿ. ಕಾರ್ಟೂನ್ ಎಂದರೆ ಹಾಗೆ. ಆಳುವವರಿಗೊಂದು ಚಾಟಿ. ಜನಸಾಮಾನ್ಯನಿಗೆ ನಗುವಿನ ಚಟಾಕಿ. ಕಾರ್ಟೂನಿಷ್ಠರಲಲ್ಲಿ ಕಲಾವಿದ, ಪತ್ರಕರ್ತ ಏಕಕಾಲಕ್ಕೆ ಜಾಗೃತನಾಗಿರುತ್ತಾನೆ. ನೂರು ಪದಗಳಲ್ಲಿ ಹೇಳುವುದನ್ನು ಒಂದು ರೇಖೆಯಲ್ಲಿ ಹೇಳಿ ಮುಗಿಸುವ ಛಾತಿ ಕಾರ್ಟೂನಿಷ್ಠರದ್ದು. ಇಂತಹ ಕಾರ್ಟೂನಿಷ್ಠರನ್ನು ಕಾರ್ಟೂನಿಷ್ಠರ ತವರು, ಕುಂದಾಪುರದಲ್ಲಿ ಒಗ್ಗೂಡಿಸಿ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ ಮತ್ತೆ ಬಂದಿದೆ. ವಿನೋದ, ಪುಳಕ, ಕಲಿಕೆ, ಸ್ವರ್ಧೆ, ಅರಿವಿನ ಜೊತೆಗೆ ಕಾರ್ಟೂನು ಪ್ರೀಯರಿಗೆ ಭರಪೂರ ಮನೋರಂಜನೆಯನ್ನು ನೀಡುತ್ತಿರುವ ಕಾರ್ಟೂನು ಹಬ್ಬ ಈ ಭಾರಿಯೂ ನವೆಂಬರ್ 16ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ‍್ಯ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ತಂಡದ ಕಾರ್ಟೂನಿಷ್ಠರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ರಂಗು ರಂಗಾಗಿ ನಡೆಯುತ್ತಿದ್ದು ಈ ಭಾರಿಯೂ ಮೂರು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಲೇಖನ. ಮರವಂತೆ ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿಷ್ಣು ಹಾಗೂ ಶ್ರೀ ವಿಷ್ಣುವಿನ ದಶವತಾರಗಳಲ್ಲಿ ಎರಡು ಮುಖ್ಯ ಅವತಾರಗಳಾದ ಶ್ರೀ ವರಾಹ ಮತ್ತು ಶ್ರೀ ನರಸಿಂಹ ದೇವರು ಈ ಮೂರು ದೇವರ ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿ ಸಾಲಾಗಿ ಸ್ಥಾಪಿಸಲ್ಪಟ್ಟಿರುವುದು ಈ ದೇವಾಲಯದ ವೈಶಿಷ್ಟ್ಯ. ಮೂರು ಮೂರ್ತಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿದ್ದರೂ ಎಡನಾಳಿ ಮತ್ತು ಮುಖಮಟಂಪ ಮಾತ್ರ ಒಂದೇ. ಮೂರು ದೇವರಿಗೆ ಆಗಮವಿದೆಯಂತೆ ಹಗಲು ಮತ್ತು ರಾತ್ರಿ ಪೂಜೆ ನಡೆಯುತ್ತದೆ. ಭರತ ಭೂಮಿಯಲ್ಲಿನ ಏಳು ವರಾಹ ದೇವಸ್ಥಾನಗಳಲ್ಲಿ ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನವು ಒಂದೇನಿಸಿಕೊಂಡಿದೆ. ದೇವಳದ ಐತಿಹ್ಯ: ಮರವಂತೆ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಕ್ಷೇತ್ರ. ಗತ ಪೂರ್ವದಲ್ಲಿ ದೇವೇಂದ್ರನು ಗೌತಮ ಮುನಿಯ ಪತ್ನಿ ಅಹಲ್ಯೆಯಲ್ಲಿ ಕಾಮಾತುರನಾಗಿ ಗೌತಮ ಋಷಿಯ ಶಾಪಕ್ಕೀಡಾಗಿ ಭೂಲೋಕದ ಸೌಪರ್ಣಿಕ ನದಿಯ ತಟದಲ್ಲಿ ವಾಸಿಸುತ್ತಿದ್ದನು. ಆ ಸಮಯದಲ್ಲಿ ಗುಹೇಶ್ವರ ಲಿಂಗವನ್ನು ಪೂಜಿಸಿ, ತಪಸ್ಸು ಮಾಡುತ್ತಾ, ಸಮಯ ಕಳೆದ ದೇವೇಂದ್ರನು ಶಾಪ ವಿಮುಕ್ತಿಯಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಟಾಲಿವುಡ್‌ನ ಪ್ರಖ್ಯಾತ ನಟ, ತೆಲುಗು ಸಿನಿಪ್ರೀಯರ ಕಣ್ಮಣಿ, ಜ್ಯೂನಿಯರ್ ಎನ್‌ಟಿಆರ್ ಕುಂದಾಪುರ ಮೂಲದವರು! ಹೌದು. ಇಂತಹದ್ದೊಂದು ಹುಬ್ಬೇರಿಸುವ ಕಥೆಯನ್ನು ಸ್ವತಃ ಜ್ಯೂನಿಯರ್ ಎನ್‌ಟಿಆರ್ ಅದೂ ಶುದ್ಧ ಕನ್ನಡದಲ್ಲಿಯೇ ಹೇಳಿಕೊಂಡಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಪ್ರಖ್ಯಾತ ನಟ ಎನ್.ಟಿ. ರಾಮ ರಾವ್ ಅವರ ಮೊಮ್ಮಗನಾಗಿರುವ ಜ್ಯೂನಿಯರ್ ಎನ್‌ಟಿಆರ್ ಐಫಾ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಭಾವುಕರಾಗಿ ತಮ್ಮ ಕುಂದಾಪುರದ ನಂಟನ್ನು ಬಿಚ್ಚಿಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಏನಂದ್ರು ಜ್ಯೂ. ಎನ್‌ಟಿಆರ್: ಐಫಾ ಚಿತ್ರೋತ್ಸವದ ಕೊನೆಯ ದಿನ ಅವರ ’ಜನತಾ ಗ್ಯಾರೇಜ್’ ಸಿನೆಮಾ ನಟನೆಗೆ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಹತ್ತಿದ್ದರು. ಕಾಕತಾಳಿಯವೆಂಬಂತೆ ಕರಾವಳಿಯ ನಟ ರಕ್ಷಿತ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲು ವೇದಿಕೆಗೆ ಬಂದಿದ್ದರು. ನಿರೂಪಕರು ನಟ ರಕ್ಷಿತ್ ಶೆಟ್ಟಿ ಅವರ ಪರಿಚಯ ಮಾಡುತ್ತಿದ್ದಾಗ ಅವರ ಊರಿನ ಬಗೆಗೆ ಹೇಳುತ್ತಿದ್ದರು. ಆಗ ಜ್ಯೂನಿಯರ್ ಎನ್‌ಟಿಆರ್ ತನಗೂ ಕರಾವಳಿಗೂ ಇರುವ ನಂಟನ್ನು ಬಿಚ್ಚಿಟ್ಟರು. ನನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಲ್ಫ್: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಘ್ ಇದರ ಉದ್ಘಾಟನಾ ಸಮಾರಂಭ ಹಾಗೂ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶ ಮಾಚ್ 31ರ ಬೆಳಿಗ್ಗೆ ಯುಎಐ ಬರ್‌ದುಬಾಯಿ ರೀಜೆಂಟ್ ಪ್ಯಾಲೇಸ್ ಹೋಟೆಲ್‌ನಲ್ಲಿ ಜರುಗಲಿದ್ದು ಸಕಲ ಸಿದ್ಧತೆ ನಡೆದಿದೆ. ಕುಂದಾಪುರ ಭಾಷಿಕರನ್ನು ಒಂದುಗೂಡಿಸುವುದರೊಂದಿಗೆ ಒಂದು ಸಾಂಸ್ಥಿಕ ರೂಪ ನೀಡಿ, ಪರಸ್ಪರ ಸಹಾಯ ಸಹಕಾರ ಮಾಡುವ ಸಲುವಾಗಿ ಹುಟ್ಟುಹಾಕಿರುವ ಕುಂದಾಪ್ರ ಕನ್ನಡ ಬಳಗದ ಉದ್ಘಾಟನೆಯೊಂದಿಗೆ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶದಲ್ಲಿ ಕುಂದಾಪುರ ಮೂಲಕ ವಿವಿಧ ಉದ್ಯಮಿಗಳು ಒಂದೆಡೆ ಸೇರಲಿದ್ದಾರೆ. ಕುಂದಾಪ್ರ ಕನ್ನಡ ಬಳಗ: ಗಲ್ಫ್ ರಾಷ್ಟ್ರದಲ್ಲಿ ನೆಲೆಸಿರುವ ಕುಂದಾಪ್ರ ಭಾಷಿಕರ ಕೂಡಿವಿಕೆ ಒಂದು ವೇದಿಕೆ ದೊರಕಿಸಿಕೊಡುವುದು. ಉದ್ಯೋಗ ಅರಿಸಿ ಬರುವ ಕುಂದಾಪುರಿಗರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವುದು, ಕುಂದಾಪುರ ಭಾಷೆಯ ಬದುಕು, ಕಲೆ ಸಾಹಿತ್ಯವನ್ನು ದಾಖಲಿಸುವುದು, ಭಾಷಿಕ ಸಾಧಕರನ್ನು ಗುರುತಿಸಿ ಗೌರವ ಸನ್ಮಾನ ನೀಡುವುದು ಇದರ ಜೊತೆ ಜೊತೆಗೆ ಬಡ ವಿದ್ಯಾರ್ಥಿಗಳಿಗೆ, ಅಶಕ್ತರು ಹಾಗೂ ವಯೋವೃದ್ಧರಿಗೆ ನೆರವು ಸೇರಿದಂತೆ ಹಲವು ಪ್ರಮುಖ…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಕುಂದಾಪುರ: ಬಿಸಿನೀರಿನಿಂದ ಸ್ನಾನ ಮಾಡಲು ಕಟ್ಟಿಗೆಯನ್ನು ತಂದು ಹಂಡೆ ಬಿಸಿ ಮಾಡಬೇಕೆಂದಿಲ್ಲ. ಸಾವಿರಾರು ರೂಪಾಯಿ ತೆತ್ತು ಗ್ಯಾಸ್ ಗ್ಲಿಝರಿನ್, ಸೋಲಾರ್ ವಾಟರ್ ಹೀಟರ್‌ಗೆ ಮೊರೆ ಹೋಗಬೇಕೆಂದೂ ಇಲ್ಲ. ಒಂದು ಭಾರಿ ಅತಿ ಕಡಿಮೆ ಬಂಡವಾಳ ವಿನಿಯೋಗಿಸಿದರೆ ಸಾಕು. ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ನಿಮ್ಮ ಮನೆ, ಹೋಟೆಲ್‌ಗಳಿಗೆ ದಿನವಿಡಿ ಸುಲಭವಾಗಿ ಬಿಸಿನೀರು ಪಡೆದುಕೊಳ್ಳುವ ಸರಳ ತಂತ್ರಜ್ಞಾನವನ್ನು ನೀವೆ ಅಳವಡಿಸಿಕೊಳ್ಳಬಹುದು! ಅಂದ ಹಾಗೆ ಈ ಸರಳ ತಂತ್ರಜ್ಞಾನದ ಆವಿಷ್ಕಾರವನ್ನು ಮಾಡಿರುವುದಲ್ಲದೇ, ತನ್ನದೇ ಮನೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಳವಡಿಸಿಕೊಂಡು ಅವಶ್ಯಕತೆಗೆ ತಕ್ಕಷ್ಟು ಬಿಸಿನೀರು ಪಡೆದುಕೊಳ್ಳುತ್ತಿದ್ದಾರೆ ಸಾಲಿಗ್ರಾಮದ ನಿವಾಸಿ ದಿನೇಶ್ ಸಿ ಹೊಳ್ಳ. ತನ್ನ ಆವಿಷ್ಕಾರವನ್ನು ’ಪಾಕೆಟ್ ಸ್ನೇಹಿ ಸೋಲಾರ್ ವಾಟರ್ ಹೀಟರ್’ ಎಂದು ಕರೆದಿರುವ ಹೊಳ್ಳರು, ಬಿಸಿನೀರಿಗಾಗಿ ಕಟ್ಟಿಗೆಯನ್ನು ತಂದು ಬೆಂಕಿ ಹೊತ್ತಿಸಿ ಕಾಯಿಸುವುದಲ್ಲದೇ ಅದರ ಹೊಗೆಯನ್ನೂ ಸಹಿಸಿಕೊಳ್ಳಬೇಕು. ಇದು ಪರಿಸರಕ್ಕೂ ಹಾನಿ ಎಂಬುದನ್ನು ಅರಿತು ಬೇರೆನು ಮಾಡಬಹುದು ಎಂದು ಯೋಚಿಸುತ್ತಿರುವಾಗಲೇ ಅವರಿಗೆ ಹೊಳೆದದ್ದು ಈ ಸರಳ ಉಪಾಯ. ಕುಂದಾಪ್ರ…
ಬೀಚ್ ಬದಿಯೇ ಲಾರಿಗಳಿಗೆ ಪಾರ್ಕಿಂಗ್ ತಾಣ. ಚತುಷ್ಪಥ ಕಾಮಗಾರಿಯಿಂದ ನಿಸರ್ಗ ಸೌಂದರ್ಯ ಮರೆ. ಪ್ರವಾಸಿಗರಿಗೂ ಇಲ್ಲ ಸೂಕ್ತ ವ್ಯವಸ್ಥೆ. ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಸುಂದರ ಸಮುದ್ರದೊಂದಿಗೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಮರವಂತೆ ಕಡಲ ಕಿನಾರೆಯ ಅನುಪಮವಾದ ಸೊಬಗು ದಿನದಿಂದ ದಿನಕ್ಕೆ ಮಾಸುತ್ತಲೇ ಇದೆ. ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿರುವ ಮರವಂತೆ ಕಡಲತೀರದಲ್ಲಿ ಒಂದೆಡೆ ಸಮುದ್ರಕ್ಕೆ ಅಡ್ಡಲಾಗಿ ಸರತಿ ಸಾಲಿನಲ್ಲಿ ನಿಲ್ಲುವ ಲಾರಿಗಳು ಹಾಗೂ ಪ್ರವಾಸಿಗರ ವಾಹನಗಳ ಸಾಲು; ಇನ್ನೊಂದೆಡೆ ಪ್ರಗತಿಯ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಇಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುವವರಿಗೆ ನಿರಾಸೆ ಮೂಡಿಸುತ್ತಿದೆ. ಇಷ್ಟು ಸಾಲದೆಂಬಂತೆ ಸಮುದ್ರ ಬದಿಯಲ್ಲಿ ನಿಲ್ಲುವ ಮೀನು ಲಾರಿಗಳು ಹೊರಹಾಕುವ ಮಲಿನ ನೀರು ಗಬ್ಬುನಾತ ಬೀರುತ್ತಿದ್ದು, ತೀರದ ಬಳಿ ಒಂದು ಕ್ಷಣವೂ ನಿಲ್ಲಲಾಗದ ಪರಿಸ್ಥಿತಿ ಎದುರಾಗಿದೆ. [quote bgcolor=”#ffffff” arrow=”yes” align=”right”]> ತ್ರಾಸಿ-ಮರವಂತೆ ಕಡಲ ಕಿನಾರೆಯ ಅಭಿವೃದ್ಧಿಯೆಂಬುದು ಈಗ ಭ್ರಮನಿರಸನ ಎಂದೆನ್ನಿಸತೊಡಗಿದೆ. ಅಭಿವೃದ್ಧಿಗೆ ಹಣ ಮಂಜುರಾಗುವುದನ್ನು ಎಂದು…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ನಾಲ್ಕು ದಶಕಗಳ ಕನಸು ನನಸಾಗುವ ಹಂತ ತಲುಪಿದೆ. ರಾಜ್ಯ ಬಜೆಟ್‌ನಲ್ಲಿ ಬೈಂದೂರು ತಾಲೂಕು ಘೋಷಣೆಯಾಗುವ ಮೂಲಕ ನಾಗರಿಕರು ಇಲ್ಲಿಯ ತನಕ ನಡೆಸುತ್ತಾ ಬಂದ ಹೋರಾಟಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ. ಈ ಸಂಭ್ರಮದ ನಡುವಲ್ಲಿಯೇ ಘೋಷಣೆಯಾದ ತಾಲೂಕು ರಚನೆಯ ಪ್ರಸ್ತಾಪ ಅನುಷ್ಠಾನದ ಹಂತ ತಲುಪಬೇಕಿದ್ದರೇ, ತಾಲೂಕಿಗೆ ಪೂರಕವಾದ ಸರಕಾರಿ ಕಛೇರಿ ಹಾಗೂ ಜನರು ತಾಲೂಕು ಕೇಂದ್ರವನ್ನು ನೆಚ್ಚಿಕೊಳ್ಳಲು ಪೂರಕವಾದ ಸೌಲಭ್ಯಗಳು ಶೀಘ್ರವೇ ದೊರೆಯುವಂತಾಗಬೇಕು. ಪ್ರತ್ಯೇಕತೆಯ ಕೂಗಿಗೂ ಒಂದು ನ್ಯಾಯ ಒದಗಿಸಬೇಕು. ಈ ಎಲ್ಲದಕ್ಕೂ ನಮ್ಮ ಜನಪ್ರತಿನಿಧಿಗಳು ತ್ವರಿತ ಗತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ತಾಲೂಕು ಕನಸು – ಒಂದು ಹಿನ್ನೋಟ: ಉಡುಪಿ ಜಿಲ್ಲೆಯ ಶಿರೋಭಾಗದಲ್ಲಿರುವ ಬೈಂದೂರು ತಾಲೂಕು ರಚನೆಯ ವಿಚಾರ ಪ್ರಸ್ತಾಪಗೊಂಡು 35 ವರ್ಷಗಳೇ ಆಗಿವೆ. ಸರಕಾರ ಆಡಳಿತ ಸುಧಾರಣೆಯ ದೃಷ್ಠಿಯಿಂದ ನೂತನ ತಾಲೂಕು ರಚನೆಗೆ ಸಮಿತಿ, ಆಯೋಗಗಳು ಶಿಫಾರಸ್ಸು ಮಾಡಿದ್ದವು. ಈ ಭಾಗದ ಜನ ನಡೆಸುತ್ತಿರುವ ಹೋರಾಟದ ಕೂಗು…
ನೇರ ಪ್ರಸಾರ: ವಿವೇಕ ಪರ್ವ – ಬೈಂದೂರಿನಲ್ಲಿ ಬೃಹತ್ ಸಮಾರಂಭ ► ಸ್ವಾಮಿ ವಿವೇಕಾನಂದರ ಚಿಂತನೆಯಂತೆ ಹೊಸ ದಿಕ್ಕಿನತ್ತ ಭಾರತ ► ಬೈಂದೂರಿನ ವಿವೇಕ ಪರ್ವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ► More news and Photos – http://kundapraa.com/?p=20970 .
