Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಯುವ ಸಾಹಿತಿ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರನ್ನು ಇತ್ತಿಚಿಗೆ ಜೇಸಿಐ ಚಿತ್ತೂರು-ಮಾರಣಕಟ್ಟೆಯ ಅದ್ವಿತಾ 2015 ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಸಂದೀಪ್ ಅವರನ್ನು ಸನ್ಮಾನಿಸಿರು. ಜೇಸಿಐ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪುರ: ವಂಡ್ಸೆ ಗ್ರಾಮವನ್ನು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಮರು ಸೇರ್ಪಡೆಗೊಳಿಸಿದ್ದನ್ನು ಖಂಡಿಸಿ, ಅ. ೧೩ ರಂದು ವಂಡ್ಸೆಯಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು. ಅವೈಜ್ಞಾನಿಕವಾದ ವರದಿಯಿಂದ ವಂಡ್ಸೆ ಗ್ರಾಮವನ್ನು ತಕ್ಷಣ ಕೈಬಿಡಬೇಕು. ನಮ್ಮ ಅಹವಾಲನ್ನು ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರರು ಸ್ಥಳಕ್ಕೆ ಬಂದು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾ ನಿರತರು ಕೆಲವೊಷ್ಟು ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ವಂಡ್ಸೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ.ಸದಸ್ಯ ಹೆಚ್. ಮಂಜಯ್ಯ ಶೆಟ್ಟಿ, ಕಸ್ತೂರಿ ರಂಗನ್ ವರದಿ ಬಗ್ಗೆ ಜನರಲ್ಲಿ ಗೊಂದಲವಿದೆ. ಸ್ಪಷ್ಟ ಮಾಹಿತಿಯನ್ನು ನೀಡುವ ಕೆಲಸ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿಲ್ಲ. ಅವೈಜ್ಞಾನಿಕವಾಗಿ ಪಶ್ಚಿಮಘಟ್ಟಗಳಿಂದ ದೂರವಿರುವ ಗ್ರಾಮಗಳನ್ನು ಮರು ಸೇರ್ಪಡೆಯಾಗಲು ಯಾವ ಬೇಜಬ್ದಾರಿ ಕಾರಣವೋ ಗೊತ್ತಿಲ್ಲ. ಒಟ್ಟಾರೆಯಾಗಿ ಜನರಿಗೆ ತೊಂದರೆ ಆಗಬಾರದು ಎಂದರು. ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕತೆಯ ಬಗ್ಗೆ…

Read More

ಕುಂದಾಪುರ: ಸಮಾಜ ತಿದ್ದಲಿಕ್ಕೆ ಆಗದ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಕಾನೂನು ಬುದ್ದಿ ಹೇಳುವ ಕೆಲಸ ಮಾಡುತ್ತದೆ. ಸಮಾಜದ ಶಾಂತಿ ಕದಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ಸಂಖ್ಯೆ ಇರುವುದು ಬೆರಳೆಣಿಕೆ ಮಾತ್ರ. ಅಂತಹ ವ್ಯಕ್ತಿಗಳನ್ನು ಹುಡುಕಿ ಅವರನ್ನು ಕಾನೂನು ಕೈಗೆ ಒಪ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ತಾಲ್ಲೂಕಿನ ಬೆಳ್ವೆ ಗೋಳಿಯಂಗಡಿಯಲ್ಲಿ  ನಡೆದ ಸಾರ್ವಜನಿಕ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ಅಮಾನುಷವಾಗಿ ಹತ್ಯೆಯಾಗಿದ್ದ ಯುವತಿಯ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ಕೊಲೆಯಾದ ಅಮಾಯಕ ಹುಡುಗಿ ನಮ್ಮ ಮನೆ ಮಗಳು ಎನ್ನುವ ಭಾವನೆ ನಮ್ಮಲ್ಲಿದೆ. ಸಾರ್ವಜನಿಕರ ಸಹಕಾರದಿಂದ ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಯನ್ನು ಕಾನೂನು ತೆಕ್ಕೆಗೆ ಒಪ್ಪಿಸುವ ಕೆಲಸವನ್ನು ಇಲಾಖೆ ಮಾಡಿದೆ. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗೆ ಕಾನೂನು ವ್ಯಾಪ್ತಿಯ ಒಳಗೆ ಗರಿಷ್ಠ ಶಿಕ್ಷೆಯಾಗುವಂತೆ ಇಲಾಖೆ ಪ್ರಾಮಾಣಿಕ ಪ್ರಯತ್ನ…

Read More

ಕುಂದಾಪುರ: ಕಳೆದ ಜೂನ್ ತಿಂಗಳಿನಿಂದಿಚೆಗೆ ಕುಂದಾಪುರ ತಾಲೂಕಿನಲ್ಲಿ ಆರಕ್ಕೂ ಹೆಚ್ಚು ದೇವಾಲಯಗಳ ಕಳ್ಳತನ ಪ್ರಕರಣ ವರದಿಯಾಗಿದೆ. ಆದರೆ ಈವರೆಗೆ ಕಳ್ಳರು ಮಾತ್ರ ಪತ್ತೆಯಾಗಿಲ್ಲ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಕಳ್ಳತನ ಶುರುವಿಟ್ಟುಕೊಂಡಿದ್ದ ಚೋರರು ಪ್ರಮುಖ ದೇವಾಲಯಗಳನ್ನೇ ಟಾರ್ಗೇಟ್ ಮಾಡಿ ದೇವರ ಆಭರಣ, ಹುಂಡಿಯಲ್ಲಿದ್ದ ದುಡ್ಡು ಹಾಗೂ ಇತರೆ ಸೊತ್ತುಗಳನ್ನು ಎಗರಾಯಿಸಿದ್ದರು. ಹೀಗೆ ಒಂದರ ಹಿಂದೊಂದು ಸರಣಿ ಕಳ್ಳತನ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿರುವ ಪೊಲೀಸ್ ಇಲಾಖೆ ಶೀಘ್ರವೇ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ತಾಲೂಕಿನ ಎಲ್ಲೆಲ್ಲಿ ಕಳ್ಳತನ? ಕುಂದಾಪುರ ತಾಲೂಕಿನ ಕಾಲ್ತೋಡು ಮಹಾಲಸಾ ಮಾರಿಕಾಂಬ ದೇವಸ್ಥಾನ, ಕಿರಿಮಂಜೇಶ್ವರದ ಅಗಸ್ತೇಶ್ವರ ದೇವಸ್ಥಾನ, ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಸಮೀಪದ ದೈವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನ, ತಲ್ಲೂರು ರಕ್ತೇಶ್ವರ ದೇವಸ್ಥಾನ ಸೇರಿದಂತೆ ಉಡುಪಿ ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಕಳವು ನಡೆದಿತ್ತು. ಲೆಕ್ಕಕ್ಕೆ ಸಿಕ್ಕವು ಇವಿಷ್ಟು ಮಾತ್ರ. ಇನ್ನು ಸಣ್ಣ ದೇವಸ್ಥಾನಗಳಲ್ಲಾದ ಸಣ್ಣ-ಪುಟ್ಟ ಕಳವಿನ ಬಗ್ಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ. ಕಳೆದ ವರ್ಷ…

Read More

ಕೊಲ್ಲೂರು: ನಿರಂತರವಾಗಿ ರಕ್ತದಾನ ಶಿಬಿರಗಳ ಆಯೋಜಿಸುವ ಮೂಲಕ ಇವತ್ತು ಗ್ರಾಮಾಂತರ ಪ್ರದೇಶಗಳಲ್ಲಿಯೂ ರಕ್ತದಾನದ ಅರಿವು ಮೂಡಿದ್ದ, ಜಿಲ್ಲೆಯಾದ್ಯಂತ ಜನತೆ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವುದರ ಮೂಲಕ ಉಡುಪಿ ಜಿಲ್ಲೆ ಇವತ್ತು ರಕ್ತದಾನಿಗಳ ಜಿಲ್ಲೆ ಎಂದು ಘೋಷಿಸಲ್ಪಟ್ಟಿದೆ. ಈಗಾಗಳೆ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ೬೦ ಸಾವಿರ ಯೂನಿಟ್ ರಕ್ತ ಸಂಗ್ರಹ ಮಾಡುವ ಮೂಲಕ ಸಾಧನೆ ಮಾಡಿದೆ ಎಂದು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಸದಾನಂದ ಬಳ್ಕೂರು ಹೇಳಿದರು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ರಕ್ತನಿಧಿ, ಕೆಎಂಸಿ ಮಣಿಪಾಲ, ಜಿಲ್ಲಾಡಳಿತ ಉಡುಪಿ ಮತ್ತು ಶ್ರೀ ವಿನಾಯಕ ಯುವಕ ಸಂಘ ರಿ, ನೆಂಪು ಇವರ ಸಹಯೋಗದಲ್ಲಿ ನೆಂಪುವಿನ ಸ.ಪ.ಪೂ.ಕಾಲೇಜಿನಲ್ಲಿ ನqದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ…

Read More

ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಉತ್ಸವ ಸಮಿತಿ ರಚನೆಗೊಂಡಿದ್ದು, ನೂತನ ಸಮಿತಿಯ ಅಧ್ಯಕ್ಷರಾಗಿ ಸೀತರಾಮ ಹೇರಿಕುದ್ರು ಆಯ್ಕೆಯಾದರು. ವ್ಯವಸ್ಥಾಪನಾ ಮಾರ್ಗದರ್ಶಕರಾಗಿ ಗಣಪತಿ ಸುವರ್ಣ, ಗೌರವಾಧ್ಯಕ್ಷರಾಗಿ ಕೆ. ಬಿ. ಪ್ರಕಾಶ್, ಉಪಾಧ್ಯಕ್ಷರಾಗಿ ರಾಜು ಮಠದಬೆಟ್ಟು, ಚಂದ್ರಶೇಖರ, ವೀಣಾ ಪ್ರಕಾಶ್, ಕಾರ್ಯದರ್ಶಿ ರಮೇಶ್ ಮಕ್ಕಿ, ಜೊತೆ ಕಾರ್ಯದರ್ಶಿ ಶರತ್, ಲೆಕ್ಕಪರಿಶೋಧಕರಾಗಿ ಸಂತೋಷ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧೀರ್ ಕೃಷ್ಣ, ಸಂಘಟನಾ ಕಾರ್ಯದರ್ಶಿಯಾಗಿ ಉದಯ, ಮುಖ್ಯ ಸಲಹೆಗಾರರಾಗಿ ಜನಾರ್ಧನ, ವಿನಯ ಹೇರಿಕುದ್ರು, ಗಣೇಶ್ ಡಿ. ನಾಯಕ್, ಸುಧೀರ್ ಬಿ. ಕುಂದರ್, ರತ್ನಾಕರ ಗಾಣಿಗ, ಅಣ್ಣಯ್ಯ ಹೋಬಳಿದಾರ್, ಪೂರ್ಣಿಮ ಕೋಟೇಶ್ವರ, ಸುಮತಿ, ಸರಸ್ವತಿ, ಸದಸ್ಯರಾಗಿ ಕಿರಣ್ ಮೆಂಡನ್, ನಿತ್ಯಾನಂದ, ವಿಜೇಂದ್ರ, ಪ್ರಜ್ವಲ್, ದೀಕ್ಷಿತ್, ಪವನ್, ರಂಜಿತ್, ರಾಜೇಂದ್ರ, ರಾಘವೇಂದ್ರ ಕೋಟೇಶ್ವರ ಆಯ್ಕೆಯಾದರು.

Read More

ಕುಂದಾಪುರ: ಕರ್ನಾಟಕ ವಿಕಾಸ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮಾಹಿತಿ ಹಾಗೂ ಸಾಲ ಮಂಜೂರಾತಿ ಕರ್ಯಕ್ರಮ ಜರುಗಿತು. ಶಾಖಾ ಪ್ರಬಂಧಕ ಮೋಹನದಾಸ್ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮುದ್ರಾ ಯೋಜನೆಯ ಕಿಶೋರ ಸಾಲ ರುಪಾಯಿ 4 ಲಕ್ಷದ ಮಂಜೂರಾತಿ ಪತ್ರವನ್ನು ಫಲಾನುಭವಿ ಕುಂದಾಪುರದ ಬಾಲಾಜಿ ಟೆಕ್ಸ್‌ಟೈಲ್ಸ್ ಮಾಲಕ ಚಂದ್ರರವರಿಗೆ ಹಸ್ತಾಂತರಿಸಿದರು. ಮುದ್ರಾ ಯೋಜನೆಯ ಹಾಗೂ ಇತರ ಸಾಲ ಸೌಲಭ್ಯದ ಮಾಹಿತಿಯನ್ನು ಶಾಖಾ ಉಪ ಪ್ರಬಂಧಕಿ ಅನಿತಾ ಕಟ್ಟಿಯವರು ಗ್ರಾಹಕರಿಗೆ ಸುವಿಸ್ತಾರವಾಗಿ ವಿವರಿಸಿದರು. ಬ್ಯಾಂಕ್‌ನ ಸಿಬ್ಬಂದಿ ಜಗದೀಶ್ ಕೆದಿಲಾಯ, ಮನೋಜ ಕುಮಾರ್ ಹಾಗೂ ರೇಷ್ಮಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ನಿತ್ಯನಿಧಿ ಸಂಗ್ರಾಹಕರಾದ ಬಿ.ಎಸ್.ದಾಮೋದರ್ ನಾಯಕ್ ಸ್ವಾಗತಿಸಿದರು ಹಾಗೂ ಸಚ್ಚಿದಾನಂದ ಎಮ್.ಎಲ್. ವಂದಿಸಿದರು.

Read More

ಕುಂದಾಪುರ: ದಶಮಾನೋತ್ಸವದ ಹೊಸ್ತಿನಲ್ಲಿರುವ ಬಸ್ರೂರು ರಥಬೀದಿ ಫ್ರೆಂಡ್ಸ್‌ನ ಲಾಂಛನ ಬಿಡುಗಡೆ ಸಮಾರಂಭವು ಗೌರವ ಅಧ್ಯಕ್ಷರಾದ ರಾಮ್ ಕಿಶನ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಕಛೇರಿಯಲ್ಲಿ ಜರುಗಿತು. ಬೆಂಗಳೂರಿನ ಉದ್ಯಮಿ ಬಸ್ರೂರು ಗಣೇಶ್ ಪಡಿಯಾರ್ ಲಾಂಛನ ಬಿಡುಗಡೆ ಮಾಡಿ ದಶಮಾನೋತ್ಸವ ಆಚರಿಸುತ್ತಿರುವ ಸಮಿತಿಯ ಉತ್ತರೋತ್ತರ ಅಭಿವೃದ್ಧಿ ಹೊಂದಲಿ, ದಶಮಾನೋತ್ಸವ ಸಮಾರಂಭವು ಅದ್ದೂರಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಹರೀಶ್ ಪಡಿಯಾರ್ ದಶಮಾನೋತ್ಸವ ಸಮಾರಂಭ ಯಶಸ್ವಿಗೊಳಿಸುವಂತೆ ಸಮಿತಿಯ ಸದಸ್ಯರಿಗೆ ಕರೆನೀಡಿದರು. ಬಸ್ರೂರು ರಥಬೀದಿ ಫ್ರೆಂಡ್ಸ್‌ನ ಅಧ್ಯಕ್ಷ ಶ್ರೀಕಾಂತ್ ಕೆರೆಕಟ್ಟೆ ಉಪಸ್ಥಿತರಿದ್ದರು. ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ನಾಗೇಶ್ ಬಳ್ಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಕೇಶ್ ಕೆಳಾಮನೆ ವಂದಿಸಿದರು.

Read More

ಗಂಗೊಳ್ಳಿ: ಕರ್ನಾಟಕ ಸರಕಾರವು ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಗಣನೀಯ ಸಾಧನೆಗೈದ ಯುವಜನ ಸಂಘಗಳಿಗೆ ನೀಡಲಾಗುತ್ತಿರುವ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಆಯ್ಕೆಯಾಗಿದೆ. 2013-144ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರದಾನ ಮಾಡಲು ಸರಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. 1984ರಲ್ಲಿ ಸ್ಥಾಪನೆಗೊಂಡ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಅನೇಕ ಕ್ರೀಡೋತ್ಸವ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ನಡೆಸಿರುವುದಲ್ಲದೆ ಸುಮಾರು 5 ಸಾವಿರ ಜನರಿಗೆ ಕೊಂಕಣಿ ಮಣಿಪಾಲ ಆರೋಗ್ಯ ಕಾರ್ಡ್ ವಿತರಿಸಿದೆ. ಜಿಲ್ಲಾ ಮಟ್ಟದ ಯುವಜನೋತ್ಸವ, 9 ಬಾರಿ ನಾಡಿ ಪರೀಕ್ಷೆ ಶಿಬಿರ, 9 ಬಾರಿ ಯೋಗ, ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯಾ ಶಿಬಿರ ಸಹಿತ ಅನೇಕ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು, ಪ್ರತಿವರ್ಷ ಗುರುಜ್ಯೋತಿ ವಿದ್ಯಾನಿಧಿ ಯೋಜನೆ ಮೂಲಕ ವಿದ್ಯಾರ್ಥಿವೇತನ ವಿತರಣೆ ಮಾಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿತ್ತು. ಸಂಸ್ಥೆಯ ಉತ್ತಮ ಕಾರ್ಯಕ್ರಮಗಳಿಗೆ ಉಡುಪಿ…

Read More

ಗಂಗೊಳ್ಳಿ: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನಡೆಸಲಾಯಿತು. ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ಸುಮಾರು 5 ಲಕ್ಷ ರೂ. ವೆಚ್ಚದ ಕಾಂಕ್ರೀಟಿಕರಣ ಕಾಮಗಾರಿಗೆ ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್ ಗುದ್ದಲಿ ಪೂಜೆ ನೆರವೇರಿಸಿ ಶುಭ ಹಾರೈಸಿದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ಹರೀಶ ಮೇಸ್ತ, ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ದೇವಳದ ವಿಶ್ವಸ್ಥ ಜಿ.ರೋಹಿದಾಸ ನಾಯಕ್, ಗಣೇಶ ನಾಯಕ್, ನಾಡ ಸತೀಶ ನಾಯಕ್, ಗುಜ್ಜಾಡಿ ಗ್ರಾಪಂ ಸದಸ್ಯರಾದ ವೇದಾವತಿ ಪೂಜಾರಿ, ಕಾವ್ಯ ಶೇರುಗಾರ್, ತಮ್ಮಯ್ಯ ದೇವಾಡಿಗ, ರಾಜು ಪೂಜಾರಿ, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ವಾಸುದೇವ ಯಡಿಯಾಳ, ಚಂದ್ರಕಾಂತ, ಸ್ಥಳೀಯರಾದ ರಾಜೇಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪುರೋಹಿತರಾದ ವೇದಮೂರ್ತಿ ಜಿ.ವಿಠಲದಾಸ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

Read More