Author: Editor Desk

ಕುಂದಾಪುರ: ಯಶಸ್ವಿ ಬದುಕು ಕಟ್ಟುವುದರಲ್ಲಿ ಮಹಿಳೆಯರ ಪಾತ್ರ ಹಿರಿದಾದದು. ಕುಟುಂಬ ಮತ್ತು ಸಮಾಜದಲ್ಲಿ ಸಮನ್ವಯತೆಯನ್ನು ಸಾಧಿಸಿಕೊಂಡು ಮುನ್ನಡೆದಾಗ ಮಹಿಳೆ ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹೇಳಿದರು. ಅವರು ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಆನ್ಸ್ ಕ್ಲಬ್ ಕುಂದಾಪುರ ಇದರ 2015-16ನೇ ಸಾಲಿನ ಪದಪ್ರದಾನ ನೆರವೇರಿಸಿ ಮಾತನಾಡಿದರು. ನೂತನ ಅಧ್ಯಕ್ಷೆಯಾಗಿ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುನೇತ್ರಾ ಸತೀಶ್ ಕೋಟ್ಯಾನ್ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆನ್ಸ್ ಕ್ಲಬ್ ನಿರ್ಗಮಿತ ಚೇರ್‌ಮೆನ್ ಡಾ| ಎಚ್. ಎಸ್. ಮಲ್ಲಿ, ಪ್ರಸಕ್ತ ಸಾಲಿನ ಚೇರ್‌ಮೆನ್ ವೆಂಕಟೇಶ್ ಉಪಸ್ಥಿರಿದ್ದರು. 2014-15ನೇ ಸಾಲಿನ ನಿಕಟಪೂರ್ವ ಹಾಗು ನಿರ್ಗಮಿತ ಅಧ್ಯಕ್ಷೆ ಬಿಂದು ಮನೋಜ್ ನಾಯರ್ ಅವರು ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸ್ಮಿತಾ ವೆಂಕಟೇಶ್ ಅವರು ಕಳೆದ ಸಾಲಿನ ಕಾರ್ಯ ಚಟುವಟಿಕೆಗಳ ವರದಿ ವಾಚಿಸಿದರು.

Read More

ಕುಂದಾಪುರ: ಇಲ್ಲಿನ ನೃತ್ಯ ವಸಂತ ನಾಟ್ಯಾಲಯ ರಿ. ಇದರ ದಶಮಾನೋತ್ಸವದ ಅಂಗವಾಗಿ ಭರತ ನಾಟ್ಯದ ಮುಖವರ್ಣಿಕೆ ಹಾಗೂ ವೇಶ ಭೂಷಣದ ಬಗ್ಗೆ ಉಚಿತ ತರಬೇತಿ ಕಾರ್ಯಗಾರವು ಜು.19ರ ಭಾನುವಾರದಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಹಂಗಳೂರಿನ ಶ್ರೀ ಅನಂತಪದ್ಮನಾಭ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದು, ನುರಿತ ತರಬೇತಿದಾರರಾದ ಸುನೀಲ್ ಕುಮಾರ್ ಉಚ್ಚಿಲ ಮಂಗಳೂರು ಅವರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9448487789ನ್ನು ಸಂಪರ್ಕಿಸಬಹುದಾಗಿದೆ. ಕುಂದಾಪ್ರ ಡಾಟ್ ಕಾಂ- editor@kundapra.com

Read More

ಕುಂದಾಪುರ: ಮಳೆಯಿಲ್ಲ ಎಂದು ಕಂಗಾಲಾಗಿದ್ದ ಕುಂದಾಪುರ ತಾಲೂಕಿನ ಜನತೆ ಮಂಗಳವಾರ ರಾತ್ರಿಯಿಂದ ಒಂದೇ ಸವನೇ ಸುರಿದ ಧಾರಾಕಾರ ಮಳೆ ಸಂತಸವನ್ನುಂಟುಮಾಡಿತ್ತಾದರೂ ಹಲವೆಡೆ ಮನೆ, ರಸ್ತೆ, ಕೃಷಿ ಭೂಮಿ, ತಗ್ಗು ಪ್ರದೇಶಗಳು ಜಲಾವೃತಗೊಂಡು ಆತಂಕ ಮೂಡಿಸಿತು. ಕುಂದಾಪುರ ನಗರ ಸೇರಿದಂತೆ ತಾಲೂಕಿನ ಗಂಗೊಳ್ಳಿ, ನಾವುಂದ, ಮರವಂತೆ, ತೆಕ್ಕಟ್ಟೆ, ಕೊಟೇಶ್ವರ, ಬಸ್ರೂರು, ಅಮಾಸೆಬೈಲು, ಸಿದ್ಧಾಪುರ, ಹಳ್ಳಿಹೊಳೆ,  ಕೊಲ್ಲೂರು, ಜಡ್ಕಲ್, ಬೆಳ್ವೆ, ಗೊಳಿಯಂಗಡಿ ಮುಂತಾದೆಡೆ ಭಾರಿ ಮಳೆ ಸುರಿದಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರೇ, ಕೆಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಕೃತಕ ನೆರೆ ಸೃಷ್ಟಿಯಾಯಿತು. ಮುಖ್ಯರಸ್ತೆ ಸೇರಿದಂತೆ ಹಲವು ರಸ್ತೆಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡ ದೃಶ್ಯ ಸಾಮಾನ್ಯವಾಗಿತ್ತು. ಸ್ಥಳೀಯ ಪುರಸಭೆ ಹಾಗೂ ಗ್ರಾಮ ಪಂಚಾಯತ್ ಚರಂಡಿ ಶುಚಿಗೊಳಿಸದ ಹಾಗೂ ಚರಂಡಿ ಒತ್ತುವರಿಯನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಮಳೆ ನೀರು ರಸ್ತೆ ಮೇಲೆ ನಿಲ್ಲುವಂತಾಗಿತ್ತು. ಇದರಿದಾಗಿ ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ನಾವುಂದದ ಸಾಲ್ಬುಡದಲ್ಲಿ ಸೌಪರ್ಣಿಕ ನದಿಗೆ ಸೇರುವ ಕಿರುಹೊಳೆಯಲ್ಲಿ ನೀರು ತುಂಬಿ…

Read More

ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಿಂತ ಮಳೆಯ ನೀರಿನ ಮಧ್ಯದಿಂದ ನೀರು ಚಿಮ್ಮುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ರಭಸವಾಗಿ ನೀರು ಚಿಮ್ಮುತ್ತಿದ್ದರಿಂದ ಕೈ ಅಥವಾ ಕಾಲನ್ನು ಇಟ್ಟಾಗ ದೂಡಿದ ಅನುಭವವಾಗುತ್ತಿತ್ತು. ಇದನ್ನು ಕಂಡ ಕೆಲವರು ಭೂಮಿಯಿಂದ ನೀರು ಚಿಮ್ಮುತ್ತಿದೆ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ನೀರು ಭೂಮಿಯಲ್ಲಿ ಇಂಗುತ್ತಿದ್ದು, ಇದರಿಂದ ಈ ರೀತಿಯ ನೀರಿನ ಗುಳ್ಳೆಗಳು ಎಳುತ್ತಿದೆ ಎಂದು ಆಡಿಕೊಳ್ಳುತ್ತಿದ್ದರು. ಕಾಲೇಜಿನ ಕ್ರೀಡಾಂಗಣವು ಮರಳು ಮಿಶ್ರಿತವಾಗಿರುವುದರಿಂದ ಮಳೆಯ ನೀರು ಶೇಖರಣೆಗೊಂಡು ಭೂಮಿಯಲ್ಲಿ ಇಂಗುವಾಗ ಭೂಮಿಯ ಅಡಿಯಲ್ಲಿರುವ ಗಾಳಿಯು ಹೊರಗೆ ಬರುವ ಸಂದರ್ಭ ಈ ರೀತಿಯ ವಾತಾವರಣ ಸೃಷ್ಟಿಯಾಗಿರಬಹುದು ಎಂದು ಶಾಲೆಯ ಪ್ರಾಂಶುಪಾಲ ಆರ್.ಎನ್.ರೇವಣಕರ್ ಅಭಿಪ್ರಾಯಪಟ್ಟಿದ್ದಾರೆ. ಇದು ವುಜರೆ ಎಳುವುದು ಎಂದಿರುವ ಸ್ಥಳೀಯರು, ಮಳೆ ಹೆಚ್ಚಾದಾಗ ಮೆದು ನೆಲದಲ್ಲಿ ಕೆಲವೊಂದು ಬಾರಿ ಈ ರೀತಿಯಾಗಿ ನೀರಿನ ಚಿಮ್ಮುವುದು ಕಂಡು ಬರುತ್ತದೆ.  ಹೊಲಗದ್ದೆ ಮತ್ತು ಮೆದು ನೆಲದಲ್ಲಿ ಮಳೆಗಾಲದಲ್ಲಿ ಇದು ಸಾಮಾನ್ಯವಾಗಿ ಕಂಡು ಬರುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಅಪರೂಪಕ್ಕೆ…

Read More

 ಪಟ್ಟಾ ಜಾಗದಲ್ಲಿದ್ದ ನೀರು ಹರಿಯುವ ತೋಡನ್ನು ಬ್ಲಾಕ್ ಮಾಡಿದ ಮಾಲಿಕ. ತೆರವುಗೊಳಿಸಲು ಬಂದಿದ್ದಕ್ಕೆ ಅಡ್ಡ ಮಲಗಿ ಪ್ರತಿಭಟನೆ  ಕುಂದಾಪುರ: ಇಲ್ಲಿನ ಕೋಟಿಲಿಂಗೇಶ್ವರ ದೇವಸ್ಥಾನದ ಬಳಿಯ ಖಾಸಗಿ ಜಾಗದಲ್ಲಿ ತಡೆಹಾಕಲಾಗಿದ್ದ ನೀರಿನ ತೋಡನ್ನು ಕುಂದಾಪುರ ತಹಶೀಲ್ದಾರರು ಅಧಿಕಾರಿಗಳೊಂದಿಗೆ ತೆರವುಗೊಳಿಸಲು ತೆರಳಿದಾಗ ಅಧಿಕಾರಿಗಳ ಎದುರೇ ಆ ಜಾಗದ ವಾರೀಸುದಾರರು ಅಡ್ಡ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಕೋಟೇಶ್ವರದಲ್ಲಿ ನಡೆದಿದೆ. ದೇವಸ್ಥಾನ ಬಳಿ ಇರುವ ಖಾಸಗಿ ಜಾಗದಲ್ಲಿ ಹರಿದು ಹೋಗುತ್ತಿದ್ದ ಗಲೀಜು ನೀರು ತೋಡನ್ನು ಸ್ಥಳದ ಮಾಲೀಕರು ಮುಚ್ಚಿ ಹಾಕಿದ್ದರು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿದ್ದು ನೀರು ಸರಾಗವಾಗಿ ಹರಿದು ಹೋಗಲು ಬ್ಲಾಕ್ ತೆರವುಗೊಳಿಸಿ ಅನುವು ಮಾಡಿಕೊಡುವುದಾಗಿ ಕುಂದಾಪುರ ಉಪವಿಭಾಗಾಧಿಕಾರಿ ಹೇಳಿದ್ದರು. ಅದರಂತೆ ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯಕ್ ಪೊಲೀಸ್ ಸಹಾಯದ ಜೊತೆ ತೋಡು ತೆರೆವಿಗೆ ಹೋದಾಗ ಜಾಗದ ಮಾಲೀಕರಾದ ಹರಿದಾಸ ಆಚಾರ್ಯ, ಪತ್ನಿ ಭಾಗೀರಥಿ ಮತ್ತು ಮಗ ಪದ್ಮನಾಭ ಆಚಾರ್ಯ ಜಾಗದಲ್ಲಿ ಅಡ್ಡಮಲಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿ…

Read More

ಕುಂದಾಪುರ: ಹೊರಜಿಲ್ಲೆಗಳಿಗೆ ಮಾಡುತ್ತಿರುವ ಮರಳು ಸಾಗಾಟವನ್ನು ನಿಷೇಧಿಸಬೇಕು ಹಾಗೂ ಮರಳಿಗೆ ಸರಕಾರವೇ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿ ಕುಂದಾಪುರದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ತಾಲೂಕಿನಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿದ್ದ ವೇಳೆ ಇಲ್ಲಿನ ಜನರಿಗೆ ಹೇರಳವಾಗಿ ಮರಳು ದೊರೆಯುತ್ತಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಇಲ್ಲಿನವರಿಗಿಂತ ಹೆಚ್ಚಾಗಿ ಮರಳು ಹೊರ ಜಿಲ್ಲೆಗಳಿಗೆ ಸಾಗಾಟವಾಗುತ್ತಿದೆ. ಹಾಗಾಗಿ ಮರಳಿನ ಬೆಲೆಯೂ ಗಗನಕ್ಕೇರಿದೆ. ಇದರಿಂದಾಗಿ ಕಟ್ಟಡ ಮಾಲಕರು , ರೈತರು ಹಾಗೂ ಸಾರ್ವಜನಿಕರಿಗೆ ಮರಳಿನ ಅಭಾವ ಉಂಟಾಗಿ ದುಪ್ಪಟ್ಟು ಹಣವನ್ನು ನೀಡಿ ಮರಳು ಖರೀದಿಸಬೇಕಾದ ಸ್ಥಿತಿ ಇದೆ. ಹೊರ ಜಿಲ್ಲೆಗಳಿಗೆ ಹೋಗುವ ಮರಳನ್ನು ನಿಷೇಧಿಸಿ ಇಲ್ಲಿನವರಿಗೇ ಮರಳು ದೊರೆಯುವಂತೆ ಮಾಡಬೇಕು ಎಂದವರು ಆಗ್ರಹಿಸಿದರು. ಕುಂದಾಪುರ ಶಾಸ್ತ್ರಿ ಸರ್ಕಲ್‌ನಿಂದ ಮಿನಿ ವಿಧಾನಸೌಧದ ತನಕ ಕಾಲ್ನಡಿಗೆಯಲ್ಲಿ ಸಾಗಿ…

Read More

ಬೈಂದೂರು: ಇಲ್ಲಿಗೆ ಸಮೀಪದ ನಾವುಂದದಲ್ಲಿ ಒಂದೇ ಲಾರಿಯಲ್ಲಿ ೧೯ ಕೋಣಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದ ವೇಳೆಗೆ, ಮಾಹಿತಿಯ ಮೇರೆಗೆ ದಾಳಿ ನಡೆಸಲು ಮುಂದಾದ ಬೈಂದೂರು ಠಾಣೆ ಪೊಲೀಸರು ಬುಧವಾರ ಮುಂಜಾನೆ ಲಾರಿಯನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಲು ಮಂದಾದಾಗ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬುಧವಾರ ಬೆಳಿಗ್ಗೆ 5:30 ರ ಸುಮಾರಿಗೆ ನಾವುಂದದ ಪೆಟ್ರೋಲ್ ಬಂಕ್ ಬಳಿ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಬೈಂದೂರು ಪೊಲೀಸರು ಒತ್ತೊತ್ತಾಗಿ, ಹಿಂಸಾತ್ಮಕವಾಗಿ ಕೋಣಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ತಡೆದು ಅದರಲ್ಲಿದ್ದ ೧೯ ಕೋಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಕೋಣಗಳನ್ನು ಅಕ್ರಮವಾಗಿ ಕೇರಳದ ಖಸಾಯಿಖಾನೆಗೆ ಸಾಗಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. 19ಕೋಣಗಳನ್ನು ಬೈಂದೂರು ಠಾಣೆಯಲ್ಲಿಯೇ ಕಟ್ಟಿ ನೀರು ಮೇವು ನೀಡಲಾಯಿತು.  ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Read More

ಕುಂದಾಪುರ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಶಾಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೇವಲ್ಕುಂದ ಗ್ರಾಮದ ಕೆಲ ಹಿತಾಸಕ್ತಿಗಳು ಇಲ್ಲಿನ ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ. 50 ವರ್ಷಗಳ ಹಿಂದೆ ಸರಕಾರಿ ಜಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಶ್ರೀ ವಿಜಯಾ ಅನುದಾನಿತ ಶಾಲೆ 2011ರಲ್ಲಿ ಮಕ್ಕಳ ಕೊರತೆಯಿಂದಾಗಿ ಸಂಪೂರ್ಣ ಮುಚ್ಚಿಹೋಗಿತ್ತು. ಆದರೆ ಮತ್ತೆ ಗ್ರಾಮ ಸೇವಾ ಸಂಗಮ ರಿ. ಎಂಬ ಸಂಸ್ಥೆಯ ಮೂಲಕ ಶಾಲೆಯನ್ನು ಮತ್ತೆ ಆರಂಭಿಸಲಾಗಿತ್ತು. ಶಾಲೆಯಲ್ಲಿ ಒಟ್ಟು 223 ವಿದ್ಯಾರ್ಥಗಳು ಕಲಿಯುತ್ತಿದ್ದಾರೆ. ಮೂರು ವರ್ಷಗಳಿಂದ ಶಾಲೆಯಲ್ಲಿ 1-5ರ ವರೆಗೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಿಕ್ಷಣವನ್ನು ನೀಡುತ್ತಾ ಬರಲಾಗುತ್ತಿದ್ದು, 6-7ನೇ ತರಗತಿಗೆ ಆರಂಭಿಸಲು ಪರವಾನಿಗೆ ಇಲ್ಲವೆಂಬುದನ್ನು ನೆಪವಾಗಿಸಿಕೊಂಡ ಕೆಲವರು, ಜಾಗದ ವಿಚಾರವನ್ನು ಮಂದಿಟ್ಟುಕೊಂಡು ಪ್ರತಿಭಟನೆಗಿಳಿದಿದ್ದರು. ಶಾಲೆ ಪ್ರಾರಂಭಿಸಿದ ಸ್ಥಳ ಸರಕಾರಕ್ಕೆ ಸೇರಿದೆ, ಸುಳ್ಳು ದಾಖಲೆ ನೀಡಿ ನೋಂದಣಿ ಮಾಡಲಾಗಿದೆ ಎಂದು ಶಾಲೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ…

Read More

ಕುಂದಾಪುರ: ಇಲ್ಲಿನ ರೋಟರಿ ಕ್ಲಬ್ ಮಿಡ್‌ಟೌನ್, ರೋಟರ‍್ಯಾಕ್ಟ್ ಕ್ಲಬ್ ಸೆಂಟ್ರಲ್ ಕುಂದಾಪುರ ಹಾಗೂ ಸ್ಥಳೀಯ ಮಹಾವಿಷ್ಣು ಯುವಕ ಮಂಡಲ ರಿ. ಹರೆಗೋಡು ಇವರ ಸಹಕಾರದೊಂದಿಗೆ ಕಟ್‌ಬೇಲ್ತೂರು ಹರೆಗೋಡಿನಲ್ಲಿ ರೈತ ಮಹಿಳೆಯರಿಗೆ ನಾಟಿ ಸ್ಪರ್ಧೆ ನಡೆಯಿತು. ಕುಂದಾಪುರ ರೋಟರಿ ಮಿಡ್ ಟೌನ್ ಕ್ಲಬ್‌ನ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ರೈತರಿಗೆ ಕೃಷಿ ಪರಿಕರ ವಿತರಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಿ ಮಾತನಾಡಿ, ಕೃಷಿಯನ್ನು ಉಳಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರವು ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ ಕೃಷಿಕರು ಅತ್ಮಹತ್ಯೆ ಮಾಡಿಕೊಳ್ಳತ್ತಿರುವುದು ತುಂಬಾ ಬೇಸರದ ಸಂಗತಿ. ಕೃಷಿಕರಿಗೆ ಪ್ರೋತ್ಸಾಹ ನೀಡಿ ಅವರ ಬದುಕನ್ನು ಹಸನಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹರೆಗೋಡು ಮಹಾವಿಷ್ಣು ಯುವಕ ಮಂಡಲದ ಗೌರವಾಧ್ಯಕ್ಷರಾದ ರಾಘವೇಂದ್ರ ನಾವಡ, ಮಿಡ್‌ಟೌನ ರೋಟರಿಯ ಕಾರ್ಯದರ್ಶಿ ರವಿಶ್ಚಂದ್ರ ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ಅಜಯ್ ಭಂಡರಕಾರ್, ಮಹಾವಿಷ್ಣು ಯುವಕ ಮಂಡಲದ ಅಧ್ಯಕ್ಷ ರವೀಶ್ ಡಿ. ಎಚ್., ರೋಟರ‍್ಯಾಕ್ಟ್ ಕ್ಲಬ್‌ನ ರವೀಂದ್ರ, ಸ್ಥಳೀಯ ಕೃಷಿಕರಾದ ನರಸಿಂಹ ಗಾಣಿಗ,…

Read More

ಕುಂದಾಪುರ:  ದುಬೈನ ಯುನೈಟೆಡ್ ಅರಬ್ ಎಮಿರೇಟ್ಸ್ ಪದ್ಮಶಾಲಿ ಸಮುದಾಯದ ಕನ್ನಡಿಗರ ಸಂಘದ ವತಿಯಿಂದ ಇತ್ತೀಚೆಗೆ ಸಿಂಧ್ ಸೆಂಟರ್ ಹಾಲ್‌ನಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಪೌರೋಹಿತ್ಯವನ್ನು ಮಾಡಿ ಹಾಗೂ ಧಾರ್ಮಿಕ ಪ್ರವಚನ ನೀಡಿದ ವಾಸ್ತುತಜ್ಞ, ಜ್ಯೋತಿಷಿ ಬಸವರಾಜ್ ಶೆಟ್ಟಿಗಾರರಿಗೆ ೨೧೫ನೇ ಸನ್ಮಾನ ಅದ್ಧೂರಿಯಾಗಿ ಜರಗಿತು. ಅಧ್ಯಕ್ಷರಾದ ರವಿ ಕಾರ್ಕಳ್‌ರವರು ಶೆಟ್ಟಿಗಾರರನ್ನು ಸನ್ಮಾನಿಸಿ ಮಾತನಾಡುತ್ತಾ ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರು ಒಂದೇ ರಂಗದಲ್ಲಿ ಸಾಧನೆ ಮಾಡುವವರನ್ನು ಕಾಣಬಹುದು. ಆದರೆ ಬಸವರಾಜರು ವಾಸ್ತುಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಧಾರ್ಮಿಕ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಯಕ್ಷಗಾನರಂಗ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪದ್ಮಶಾಲಿ ಸಮಾಜದ ಅನರ್ಘ್ಯರತ್ನರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಶಾರ್ಜದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಗಣೇಶ್ ರೈಯವರು ಮಾತನಾಡುತ್ತಾ ಕೇರಳದಲ್ಲಿ ಪಾಂಡಿತ್ಯವನ್ನು ಅರ್ಜಿಸಿಕೊಂಡ ಶೆಟ್ಟಿಗಾರರ ಪೌರೋಹಿತ್ಯದಲ್ಲಿ ನಡೆದ ಸತ್ಯನಾರಾಯಣ ಪೂಜೆ ಹಾಗೂ ತಾಳಮದ್ದಲೆಯ ಅರ್ಥದಂತೆ ಮಾಡಿದ ಕಥಾರೂಪಕ ನಭೂತೋ ನಭವಿಷ್ಯತಿ ಎಂಬಂತೆ ಯಶಸ್ವಿಯಾಗಿದ್ದು ನನ್ನ ಜೀವನದಲ್ಲಿ ಇಂತಹ ಸಂಪ್ರದಾಯಬದ್ಧ ಪೂಜೆಯನ್ನು ನೋಡಿದ್ದು ಜನ್ಮಸಾರ್ಥಕ್ಯವನ್ನು ಪಡೆದುಕೊಂಡ ಅನುಭವವಾಗಿದೆ.…

Read More