Author: Editor Desk

ಬೈಂದೂರು: ನಾಟಕ ಮನುಶತ್ವವನ್ನು ಕಲಿಸುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಬದುಕನ್ನು ಕಟ್ಟಿಕೊಡುತ್ತದೆ. ನಾಟಕದ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯವಿದೆ. ಕಲೆಯಿಲ್ಲದೇ ಬದುಕೆಂಬುದೇ ಇಲ್ಲ ಎಂದು ರಂಗನಟ ಪ್ರದೀಪಚಂದ್ರ ಕುತ್ವಾಡಿ ಹೇಳಿದರು ಅವರು ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಮುಲ್ಲಿಬಾರು ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ’ಶರತ್ ರಂಗ ಸಂಚಲನ -೨೦೧೫’ರ ನಾಲ್ಕು ದಿನಗಳ ರಂಗಸುಗ್ಗಿಯಲ್ಲಿ ಸಮಾರೋಪ ನುಡಿಗಳನ್ನಾಡಿದರು. ಪ್ರಕೃತಿಯೊಂದಿಗೆ ಬದುಕುವವರು ರಂಗಭೂಮಿಯ ಕಲಾವಿದರಿಗಿಂತ ಉತ್ತಮವಾಗಿ ನಟಿಸಬಲ್ಲರು. ಪ್ರಕೃತಿಯೊಂದಿಗೆ ಬೆರೆತು, ಬಾಳುವ ಸೂಕ್ಷ್ಮತೆ ಹಳ್ಳಿಗರಿಗೆ ಮಾತ್ರ ತಿಳಿದಿದೆ. ಸಂಚಲನ ಹೊಸೂರು ಶರತ್ ಋತುವಿನಲ್ಲಿ ನಾಟಕವನ್ನು ಆಯೋಜಿಸಿ ಸಂಚಲವನ್ನು ಮೂಡಿಸಿರುವುದು ಶ್ಲಾಘನಾರ್ಹ ಎಂದರು. ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಸಾದ ಪ್ರಭು, ಮುಲ್ಲಿಬಾರು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಪಿ. ಮೇಸ್ತ, ಯಡ್ತರೆ ಗ್ರಾ.ಪಂ ಸದಸ್ಯ ಸಿ. ಜೆ. ರೋಯಿ, ಮಾಜಿ ಸದಸ್ಯ ಕುಪ್ಪ ಮರಾಠಿ ಉಪಸ್ಥಿತರಿದ್ದರು. ಸಂಚಲನ…

Read More

ಬೈಂದೂರು: ಕಲಾವಿದರು ಎಲ್ಲಿಯೇ ಇದ್ದರೂ ಸಹಜವಾಗಿ ಕಲೆಯನ್ನು ಅರಳಿಸಬಲ್ಲರು. ಕಲೆಗೆ ಧರ್ಮ, ಜಾತಿ, ದೇಶ, ಗಡಿಯ ಹಂಗಿಲ್ಲ ಎಂದು ಪತ್ರಕರ್ತ ಅರುಣಕುಮಾರ್ ಶಿರೂರು ಹೇಳಿದರು. ಅವರು ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಹೊಸೂರಿನ ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ’ಶರತ್ ರಂಗ ಸಂಚಲನ -೨೦೧೫’ರ ಮೂರನೇ ದಿನ ರಂಗ-ಗಾನ-ವೈಭವದಲ್ಲಿ ಶುಭ ಶಂಸನೆಗೈದರು. ಅನುಕೂಲವಿದ್ದಾಗ ಎಲ್ಲರೂ ಕಾರ್ಯಕ್ರಮ ಮಾಡುತ್ತಾರೆ. ಆದರೆ ಅನಾನುಕೂಲವಿದ್ದಾಗಲೂ ಕಾರ್ಯಕ್ರಮ ಆಯೋಜಿಸುವುದು ವಿಶೇಷವಾದದು. ಇದು ನೈಜ ಕಲಾವಿದರಿಂದ ಮಾತ್ರ ಸಾಧ್ಯವಾಗುತ್ತದೆ. ಇಂತಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಅದ್ಭುತ ಕಲಾವಿದರುಗಳು ಹುಟ್ಟಿಕೊಳ್ಳುವಂತಾಗಲಿ ಎಂದು ಆಶಿಸಿದರು. ರಂಗನಟ ಗಿರೀಶ್ ಬೈಂದೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿ ಕೂಲಿ ಕಾಯಕದ ಜನರ ನಡುವೆ ನಾಟಕ ತಂಡವನ್ನು ಕಟ್ಟುವುದು ಸಾಮಾನ್ಯವಾದುದಲ್ಲ. ರಾಜ್ಯದಲ್ಲಿ ಬುಡಕಟ್ಟು ಜನಾಂಗದ ನಾಟಕ ತಂಡವಿರುವುದು ಹೊಸೂರಿನಲ್ಲಿ ಮಾತ್ರವೆಂಬುದು ವಿಶೇಷ ಎಂದರು. ಕಾರ್ಯಕ್ರಮದಲ್ಲಿ ಹೊಸೂರು ಸುಬ್ಬ ಪೂಜಾರಿ ಉಪಸ್ಥಿತಿರಿದ್ದರು.

Read More

ಯಂಕ…. ಹ್ಯಾಂಗಿದ್ದಿ? ಈಗಳ್ ನಮ್ಮೂರ್ ದಾರಿಯಂಗೆ ಎತ್ತಿನ ಬಂಡಿಯೆಲ್ಲ ಕಾಂಬುಕ್ಕಿಲ್ಲ. ಇಲ್ಲ್ ಎಲ್ಲಾ ನಿನ್ ಕಂಡಂಗೆ ಬದ್ಲಾಯಿಬಿಟ್ಟಿತ್ ಗುತಿತ. ಆಡದ್, ಹಾಡದ್, ಅರ್ಚದ್, ಹಲ್ಬದ್ ದಿನುವೆಲ್ಲ ಆಗಳಿಕೇ ಮುಗ್ದೋಯ್ತಲ್ದ….! ಈಗಿಲ್ಲೆಂಥದೂ ಉಳ್ದಿಲ್ಯೆ ಆ ಹಳೀ ನೆನ್ಪೆಲ್ಲ ನಿನ್ಗಿನ್ನೂ ಇದ್ರೆ ಒಳ್ಳೇದ್. ಶಾಲಿಗ್ವಾಪತಿಗೆ ನಂಗೊತ್ತಿಲ್ದಿದ್ ನೀ ತಿದ್ದಿ, ನಿಂಗೊತ್ತಿಲ್ದಿದ್ ನಾ ಹೇಳಿಯೂ ನಮ್ಮಿಬ್ರಿಗ್ ಸಿಕ್ಕ್ ಅಂಕ್ದಲ್ಲೇನೂ ಎತ್ಯಾಸು ಇರ್ಲಿಲ್ಲ ಬಿಡ್. ನೀನಿಗಳ್ ಪ್ಯಾಟಿ ಗಂಡ. ಆರೂ ನೀನಿಲ್ದಿದ್ ಕೊರ್ಗ್ ನನ್ನೊಳ್ಗಿಲ್ಲ. ಈಗಳೂ ನಮ್ಮನೆಲ್ ಕೋಳಿ ಕೂಗತ್, ಅಪರೂಪ್ಕೆ ಗೆದ್ದಿ ಬದಿಯಲ್ ನವಿಲ್‍ಬಂದ ಕೊಣಿತ್, ಸಲ್ಪ ಬಿರ್ಸ್, ಇನೊಂದ ಸಲ್ಪ ಬಿಸಿ ಬಿಟ್ರೆ… ಅದೇ ಹಿತ್ವಾದ್ ಗಾಳಿ ಬೀಸತ್. ನಿಂಗೆ ಅಲ್ಲ್ ಎಂತ ಇತ್ ಹೇಳ್‍ಕಾಂಬ. ನಂಬದಿ ಬೀಸು ತಂಪ್ ಗಾಳಿ ನೀನಿರೊ ಎಸಿರೂಮಲ್ ಸಿಕ್ಕುದಿಲ್ಲ…. ಮನಿ ಹಬ್ಬು, ಊರಬ್ಬು, ಗೆಂಡು, ಬಯ್ಲಾಟು, ಸೆರೆಹಿಟ್ಟ್ ಕಡ್ಬ್ ಇಂಥದೆಲ್ಲ ಆ ಕಾಂಕ್ರೀಟ್ ಊರಲ್ ಹುಡುಕ್ರೂ ಸಿಕ್ಕುದಿಲ್ಯೆನೊ. ಹೊಟ್ಟಿ ಬೆಚ್ಚಗ್ ಮಾಡೊ ತಂಗ್ಳು, ಮನೆ ಮುಂದಿನ ಅಂಗ್ಳು.…

Read More

ಬೈಂದೂರು: ಇಲ್ಲಿಗೆ ಸಮೀಪದ ಬಂಕೇಶ್ವರ ನಿವಾಸಿ ಸವಿತಾ ಕಾಮತ್ ಎಂಬುವವರು ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಸಂಭವಿಸಿದೆ. ಮೃತರು ಬೈಂದೂರು ಶ್ರೀಗಣೇಶ್ ಸ್ಟುಡಿಯೋ ಮಾಲಕ ಶಿವಾನಂದ ಕಾಮತ್‌ ಅವರ ಪತ್ನಿಯಾಗಿದ್ದು, ಎಂದಿನಂತೆ ಗುರುವಾರ ರಾತ್ರಿ ಊಟ ಮುಗಿಸಿ ಮಲಗಿದ್ದರು. ಶುಕ್ರವಾರ ಬೆಳಿಗ್ಗೆ 6:45ರ ವೇಳೆ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಪತಿ, ಮಕ್ಕಳು ಹುಡುಕಾಟ ನಡೆಸುತ್ತಿರುವಾಗ ಮನೆ ಎದುರಿನ ಬಾವಿಯಲ್ಲಿ ಆಕೆಯ ಶವ ತೇಲುವ ಸ್ಥಿತಿಯಲ್ಲಿ ಕಂಡುಬಂದಿತ್ತು. ತನ್ನ ಪತ್ನಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದರಿಂದ ಈ ಘಟನೆ ಸಂಭವಿಸಿರಬಹುದೆಂದು ಸವಿತಾ ಪತಿ ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಮೃತರು ಪತಿ, ಎರಡು ಪುತ್ರ ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಗಂಗೊಳ್ಳಿ: ಕಳೆದ ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿರುವ ಗಂಗೊಳ್ಳಿಯ ಮೆಸ್ಕಾಂ ಸಬ್‌ಸ್ಟೇಶನ್ ಕಾರ್ಯಾರಂಭಿಸದಿರುವ ಹಾಗೂ ಕಳೆದ ಹಲವು ದಿನಗಳಿಂದ ಅನಿಯಮಿತ ವಿದ್ಯುತ್ ಕಡಿತ ವಿರೋಧಿಸಿ ಗಂಗೊಳ್ಳಿ ನಾಗರಿಕರು ಗಂಗೊಳ್ಳಿಯ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಗಂಗೊಳ್ಳಿಯ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳೀಯ ಪೋಸ್ಟ್ ಆಫೀಸಿನ ಬಳಿಯಿಂದ ಮೆರವಣಿಗೆ ಮೂಲಕ ಮೇಲ್‌ಗಂಗೊಳ್ಳಿಯಲ್ಲಿರುವ ಮೆಸ್ಕಾಂ ಕಛೇರಿಗೆ ತೆರಳಿದ ನೂರಾರು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಇಲಾಖೆಯ ಕ್ರಮವನ್ನು ಖಂಡಿಸಿದರು. ಕಳೆದ ಸುಮಾರು ಐದು ವರ್ಷಗಳ ಹಿಂದೆ ಮಂಜೂರಾಗಿದ್ದ ಗಂಗೊಳ್ಳಿಯ ಮೆಸ್ಕಾಂ ಸಬ್‌ಸ್ಟೇಶನ್‌ನ ಕಾಮಗಾರಿ ಪೂರ್ಣಗೊಂಡು ಸುಮಾರು ಎರಡು ವರ್ಷ ಕಳೆದಿದ್ದರೂ ಸಬ್‌ಸ್ಟೇಶನ್ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಸಬ್‌ಸ್ಟೇಶನ್‌ನಲ್ಲಿ ಅಳವಡಿಸಲಾಗಿರುವ ಯಂತ್ರೋಪಕರಣಗಳಿಗೆ ತುಕ್ಕು ಹಿಡಿಯಲಾರಂಭಿಸಿದೆ. ಆದುದರಿಂದ ಇನ್ನೊಂದು ತಿಂಗಳೊಳಗೆ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಎದುರಾಗಿರುವ ತೊಡಕುಗಳನ್ನು ನಿವಾಸಿ ಸಬ್‌ಸ್ಟೇಶನ್ ಕಾರ್ಯಾರಂಭಕ್ಕೆ ಪ್ರಯತ್ನಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಳೆದ ಹಲವು ದಿನಗಳಿಂದ ದಿನವೀಡಿ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಸಂಜೆ ಬಳಿಕ…

Read More

 ಇಲ್ಲಿನ ಯುಸ್ಕೋರ್ಡ್ ಟ್ರಸ್ಟ್ (ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನ-ಸಂಸ್ಕೃತಿ ಸಂಭ್ರಮ ೨೦೧೫ರ ಮೂರನೇ ದಿನದಂದು ಆಯ್ದ ಕವಿಗಳಿಂದ ’ಕವಿಗೋಷ್ಠಿ’ ನಡೆಯಿತು. ಯುವ ಕವಿಗಳಾದ ಚಂದ್ರ ಕೆ. ಹೆಮ್ಮಾಡಿ ನ್ಯಾಯ ಭಾಗ್ಯ ಹಾಗೂ ನಮ್ ಭಾಷಿ ನಮ್ ಜೀವ, ಪೂರ್ಣಿಮಾ ಭಟ್ ದಶಾವತಾರಿಣಿ ಹಾಗೂ ಹೌಂದಬ್ರ್, ನಾಗರಾಜ ಅಲ್ತಾರು ಒಂದು ಪ್ರಶ್ನೆ ಹಾಗೂ ನನ್ನ ಕವನ, ರಮೇಶ ಗೌಡ ಕನ್ಯೆಯ ಸ್ವಗತ ಹಾಗೂ ಮಣ್ಣಿನ ತಗಹು ಮತ್ತು ಶೇಖರ ದೇವಾಡಿಗ ಪ್ರಕೃತಿ ಕಂದನ ಆಕ್ರಂದನ ಹಾಗೂ ಶವಣನ ಬುಟ್ಟಿ ಎಂಬ ಕವನಗಳನ್ನು ವಾಚಿಸಿದರು. ಬೈಂದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಸುಬ್ರಮಣ್ಯ ಭಟ್ ಕವಿಗೋಷ್ಠಿಯ ಸಮನ್ವಯಕಾರರಾಗಿದ್ದರು. ಕನ್ನಡ ಉಪನ್ಯಾಸಕ ಪ್ರೋ. ಅನಿಲ್‌ಕುಮಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು

Read More

ಬೈಂದೂರು: ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತಿಗಳಾಗಬೇಕು ಎಂಬ ಉದ್ದೇಶದಿಂದ ಸಾಹಿತ್ಯ ಸೃಷ್ಠಿಯಾಗುತ್ತಿದೆ. ಅತಿ ಹೆಚ್ಚು ಜ್ಞಾನಪೀಠ ಪಡೆದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಗಳು ಯಾರೆಂದು ಗುರುತಿಸಲು ಕಷ್ಟವಾಗುತ್ತಿರುವುದು ವಿಷಾದನೀಯ ಎಂದು ಡಾ| ಸುಬ್ರಮಣ್ಯ ಭಟ್ ಹೇಳಿದರು. ಅವರು ಯುಸ್ಕೋರ್ಡ್ ಟ್ರಸ್ಟ್ (ರಿ) ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಜನ-ಸಂಸ್ಕೃತಿ ಸಂಭ್ರಮ ೨೦೧೫ರ ಮೂರನೇ ದಿನದಂದು ಕಾವ್ಯೋತ್ಸವ- ಕವಿಗೋಷ್ಠಿಯಲ್ಲಿ ಶುಭಶಂಸನೆಗೈಯುತ್ತಾ ಸಾಹಿತ್ಯವೆನ್ನುವುದು ಜಾತಿ, ಧರ್ಮ, ರಾಜಕೀಯದ ಹೊರತಾಗಿರಬೇಕು ಎಂದರು. ಬೈಂದೂರು ಗ್ರಾ.ಪಂ ಅಧ್ಯಕ್ಷ ಯು. ಜನಾರ್ಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ಊರಿನಲ್ಲೂ ಸಾಕಷ್ಟು ಯುವ ಬರಹಗಾರರು ಇದ್ದಾರೆ. ಆದರೆ ಅವರೆಲ್ಲರೂ ಬೆಳಕಿಗೆ ಬರುವುದು ಕಡಿಮೆ. ಅವರಿಗೆ ಸೂಕ್ತ ಪ್ರೋತ್ಸಾಹ ದೊರೆತರೆ ಮುಂದೆ ಉತ್ತಮ ಸಾಹಿತಿಗಳಾಗಿ ಹೊರಹೊಮ್ಮುತ್ತಾರೆ ಎಂದರು. ಮುಖ್ಯ ಅಥಿತಿಗಳಾಗಿ ತಾ.ಪಂ. ಸದಸ್ಯ ಕೆ. ರಾಮ, ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ…

Read More

ಬೈಂದೂರು: ಸರಕಾರಿ ಶಾಲೆಗಳಿಗೆ ಮಕ್ಕಳು ಬರೋದಿಲ್ಲ ಎಂಬ ದೂರು ಸಾಮಾನ್ಯವಾದುದು. ಆದರೆ ಎಷ್ಟು ಸರಕಾರಿ ಶಾಲೆಗಳು ಮಕ್ಕಳಿಗೆ ಪೂರಕವಾದ ವಾತಾವರನ್ನು ಕಲ್ಪಿಸಿವೆ ಎಂದು ಲೆಕ್ಕ ಹಾಕಿ ನೋಡಿದರೂ ಅವುಗಳ ಸಂಖ್ಯೆ ಎರಡಂಕಿ ದಾಟುವುದಿಲ್ಲ. ಕಡಲತಡಿಯಲ್ಲಿರುವ ಕೊಡೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಯನ್ನು ಕಂಡವರು ಮಕ್ಕಳನ್ನು ಕಳುಹಿಸಲು ಹೆದರುತ್ತಾರೆ.  ಈ ಶಾಲೆಯ ಸುಮಾರು 30 ವರ್ಷದ ಹಿಂದಿನ ಕಟ್ಟಡ ಈಗ ದುಸ್ಥಿತಿ ತಲುಪಿದ್ದು, ಕಳೆದ ಮಳೆಗಾಲದಲ್ಲಿ ಕಟ್ಟಡವು ಬಿರುಗಾಳಿಯ ರಭಸಕ್ಕೆ ತುತ್ತಾಗಿ ಮೇಲ್ಛಾವಣೆ ಸಂಪೂರ್ಣ ಕುಸಿದಿದೆ. ಮೇಲ್ಛಾವಣೆಯ ಮರದ ಪಕಾಸು, ರೀಪು ಹಾಗೂ ಹಂಚುಗಳು ಗಾಳಿಗೆ ಹಾರಿಹೋಗಿವೆ. ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ ಇಲಾಖಾಧಿಕಾರಿಗಳು ಕಟ್ಟಡಕ್ಕೆ ತಾತ್ಕಲಿಕವಾಗಿ ಟರ್ಪಾಲು ಹೊದಿಸಲು ಸೂಚನೆ ನೀಡಿದರು, ಅದರಂತೆ ಶಿಥಿಲಗೊಂಡ ಕಟ್ಟಡಕ್ಕೆ ತಾತ್ಕಲಿಕವಾಗಿ ಟರ್ಪಾಲು ಹೊದಿಸಿ, ಹಾಗೂ ಹೀಗೂ ಕಳೆದ ಮಳೆಗಾಲವಂತೂ ದೂಡಲಾಯಿತು. ಆ ಬಳಿಕ ಕಡಲ ತೀರದ ಗಾಳಿಯ ರಭಸಕ್ಕೆ ಟರ್ಪಾಲು ಹಾರಿಹೋಗಿ ಸಮುದ್ರ ಪಾಲಾಯಿತು. ಪ್ರಸ್ತುತ ಶಾಲಾ ಕಟ್ಟಡ ಹಾಗೇ ಬಾಯ್ತೆರೆದುಕೊಂಡಿದ್ದು,…

Read More

ಬೈಂದೂರು: ಸಮೀಪದ ಕಲ್ಮಕ್ಕಿಯಲ್ಲಿ ಸಂಜೆ ಗಂಟೆ 4ರ ಸುಮಾರಿಗೆ ಬೀಸಿದ ಭಾರೀ ಸುಂಟರಗಾಳಿಗೆ ನೆಲ್ಸನ್ ಪಿ.ಜೆ. ಎಂಬುವರ ಮನೆ ಸಂಪೂರ್ಣ ನೆಲಸಮವಾಗಿದೆ.. ನೆಲ್ಸನ್ ಅಂಗವಿಕಲರಾದರೂ ತಮ್ಮ ಜೀವನಕ್ಕೆ ಕೃಷಿಯನ್ನೆ ನಂಬಿ ಬದುಕುತ್ತಿದ್ದು, ಈಗ ವಾಸದ ಮನೆಬಿದ್ದು ಸಮಾರು 2ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದ್ದು, ಬಡ ಕುಟುಂಬಕ್ಕೆ ಸಿಡಿಲೆರಗಿದಂತಾಗಿದೆ. ಮನೆಯ ಕೋಣೆಯಲ್ಲಿದ್ದ ಮಡದಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಸಮಯವಾದ್ದರಿಂದ ಮಕ್ಕಳು ಮನೆಯಲ್ಲಿಲಿಲ್ಲ. ಹಾಗಾಗಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಕಳೆದ ವರ್ಷ ಇವರ ಮನೆ ವಿದ್ಯುತ್ ಶಾರ್ಟ್ ಸರ‍್ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾಗಿತ್ತು. ಈ ಬಾರಿ ಸಾಲಮಾಡಿ ಪುನ: ಮನೆಕಟ್ಟಿದ್ದೂ ಬಿರುಗಾಳಿಗೆ ಸಿಕ್ಕಿ ನಾಶವಾಗಿದೆ. ಮಳೆಗಾಲವಾದ್ದರಿಂದ ದಿನ ಕಳೆಯುವುದು ಕಷ್ಟವಾಗಿದೆ.  ಸ್ಥಳಕ್ಕಾಗಮಿಸಿದ ಬೈಂದೂರು ಗ್ರಾಮ ಲೆಕ್ಕಿಗ ಮಂಜು ಹಾನಿಯ ನಷ್ಟದ ವರದಿ ಮಾಡಿದ್ದಾರೆ. ಗ್ರಾಪಂ ಸದಸ್ಯ ಬಿ. ರಾಘವೇಂದ್ರ ಸ್ಥಳದಲ್ಲಿ ಇದ್ದು, ನೊಂದ ಕುಟುಂಬಕ್ಕೆ ನೆರವಾಗುತ್ತಿದ್ದಾರೆ.

Read More

ಬೈಂದೂರು: ಕಲಾವಿದರು ರೇಖೆ ಹಾಗೂ ಬಣ್ಣಗಳ ಮೂಲಕ ಮೂಡಿಸುವ ಚಿತ್ರವು ವಿಶಿಷ್ಟವಾದ ಅರ್ಥವನ್ನು ನೀಡುವುದಲ್ಲದೇ ವಿವಿಧ ಭಾವನೆಯನ್ನು ಮೂಡಿಸುತ್ತದೆ. ಒಂದು ಚಿತ್ರದಲ್ಲಿನ ರೇಖೆಗಳ ವಿನ್ಯಾಸ ಹಾಗೂ ವರ್ಣ ಸಂಯೋಜನೆ ಅದರ ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದು ಹಿರಿಯ ಸಾಹಿತಿ, ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು. ಅವರು ಯುಸ್ಕೋರ್ಡ್ ಟ್ರಸ್ಟ್ (ರಿ) ಬೈಂದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಐದು ದಿನಗಳ ಜನ-ಸಂಸ್ಕೃತಿ ಸಂಭ್ರಮ ೨೦೧೫ರ ಎರಡನೇ ದಿನ ವರ್ಷಚಿತ್ರ ವೈಭವವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಪಂಚದ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ವ್ಯಕ್ತಿಯನ್ನು ಯಶಸ್ಸಿನೆಡೆಗೆ ಕೊಂಡೊಯ್ದರೇ, ತಿಳಿದಿದ್ದನ್ನು ಇತರರಿಗೂ ಹಂಚುವ ಪ್ರವೃತ್ತಿ ಆತನನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯತ್ತದೆ. ಪ್ರಪಂಚದ ಅದ್ಭುತವಾದ ಕ್ರೀಯಾ ಶಕ್ತಿಯನ್ನು ಬೆರಗುಗಣ್ಣಿನಿಂದ ನೋಡಿದರೆ ಮಾತ್ರ ಅದನ್ನು ಅನುಭವಿಸಲು ಸಾಧ್ಯ ಎಂದರು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ಕಾರ್ಯಕ್ರಮದ…

Read More