ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ಕರ್ನಾಟಕ ಘಟಕದ ವತಿಯಿಂದ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಸ್ನೇಹಕೂಟ-2015, ಮಾರ್ಚ್ 26 ರ ಶುಕ್ರವಾರ ರಾತ್ರಿ ಇಲ್ಲಿನ ಅಲ್-ರುಶೇದ್ ರೆಸೋರ್ಟ್ನಲ್ಲಿ ನಡೆಯಿತು. ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಫ್ಎಫ್ ರಿಯಾದ್ ಕರ್ನಾಟಕ ಘಟಕದ ಅಧ್ಯಕ್ಷರಾದ ಜ! ಹಾರೀಸ್ ಅಂಗರಗುಂಡಿಯವರು ವಹಿಸಿದ್ಧು, ಐಎಫ್ಎಫ್ ರಿಯಾದ್ ರೀಜಿಯನ್ ಅಧ್ಯಕ್ಷರಾದ ಜ! ಇಲ್ಯಾಸ್ ಕೇರಳ ರವರು ಉದ್ಘಾಟನೆಯನ್ನು ನೆರವೇರಿಸಿದರು. ತನ್ನ ಉಧ್ಘಾಟನಾ ಭಾಷಣದಲ್ಲಿ ಐಎಫ್ಎಫ್ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಸೇವಾ ಕೆಲಸಗಳ ಬಗೆಗೆ ವಿವರಿಸುತ್ತಾ , ಮುಂದಿನ ದಿನಗಳಲ್ಲಿ ಸಂಘಟನೆಗೆ ಸಾರ್ವಜನಿಕರ ಸಹಕಾರದ ಅಗತ್ಯತೆಯನ್ನು ತಿಳಿಸಿದರು. ಮುಖ್ಯ ಭಾಷಣ ಮಾಡಿದ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಜ!ಅಬ್ದುಲ್ ರಝಾಕ್ ಕೆಮ್ಮಾರ , ಭಾರತ ದೇಶದ ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈಗೊಳ್ಳುತ್ತಿರುವ ಕೆಲಸ ಕಾರ್ಯಗಳ ಬಗೆಗೆ ವಿವರಿಸುತ್ತಾ, ಈ ಸಮುದಾಯಗಳ ಸಬಲೀಕರಣಕ್ಕಾಗಿ ಏಕತೆಯ ಅಗತ್ಯತೆಯನ್ನು…
Author: Editor Desk
ಮುಂಬಯಿ: ಹೊರರಾಜ್ಯದಲ್ಲಿ ಇಂದು ಜರಗುತ್ತಿರುವ ನಾಟಕೋತ್ಸವವನ್ನು ಉದ್ಘಾಟಿಸಲು ಅಭಿಮಾನವಾಗುತ್ತಿದೆ. ಹೊರನಾಡಿನಲ್ಲಿ ನಿರಂತರ ಕನ್ನಡ ನುಡಿ ಸೇವೆಗೈಯುವ ಕರ್ನಾಟಕ ಸಂಘವು ಇಂದಿನ ನಾಟಕೋತ್ಸವವನ್ನು ಆಯೋಜಿಸಿರುವುದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷನಾಗಿ ನನಗೆ ಅತ್ಯಂತ ಸಂತೋಷವಾಗಿದೆ. ಸಂಸ್ಕƒತಿ, ಕಲೆ, ನಾಟಕಗಳು ಜೀವನದ ತಪ್ಪು ಒಪ್ಪುಗಳನ್ನು ತಿದ್ದಲು ಸಹಕಾರಿಯಾಗುತ್ತದೆ. ರಂಗಭೂಮಿ, ಸಂಸ್ಕƒತಿ ಬಗ್ಗೆ ಎಲ್ಲರಲ್ಲೂ ಶ್ರದ್ಧೆ ಇರಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಎಲ್. ಬಿ. ಶೇಖ್ (ಮಾಸ್ತರು) ನುಡಿದರು. ಎ. 2 ರಂದು ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗƒಹದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕƒತಿ ಇಲಾಖೆ ಹಾಗೂ ಕರ್ನಾಟಕ ಸಂಘದ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿದ ಹೊರರಾಜ್ಯ ನಾಟಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಜೀವನದಲ್ಲಿ ಎಲ್ಲವನ್ನೂ ಕಲಿಸಿಕೊಡುತ್ತದೆ. ಗಾಂಧೀಜಿಯವರು ಕೂಡಾ ಸತ್ಯಹರಿಶ್ಚಂದ್ರ ನಾಟಕದಿಂದ ಪ್ರಭಾವಿತರಾದವರು. ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಕರ್ನಾಟಕ ಸಂಘದ ನಾಟಕವನ್ನು ಅಯೋಜಿಸಲು ಅವಕಾಶವನ್ನು…
ಉಡುಪಿ: ಭಾರತ ಚುನಾವಣಾ ಆಯೋಗವು ಮತದಾರ ಪಟ್ಟಿಯ ಡೇಟಾಗೆ ಆಧಾರ ಸಂಖ್ಯೆಯನ್ನು ಸಂಯೋಜಿಸಿ ಮತದಾರ ಪಟ್ಟಿಯನ್ನು ಶುದ್ಧೀಕರಿಸಲು ಮಾ. 3ರಿಂದ ರಾಷ್ಟ್ರಾದ್ಯಂತ ಇಲೆಕ್ಟೊರಲ್ ರೊಲ್ಸ್ ಪ್ಯುರಿಫಿಕೇಶನ್ ಮತ್ತು ಆಥೆಂಟಿಕೇಶನ್ ಪ್ರೋಗ್ರಾಂ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ. ಈ ಕುರಿತು ದೇಶಾದ್ಯಂತ ಎಲ್ಲ ಜಿಲ್ಲೆಗಳ ಎಲ್ಲಾ ಮತಗಟ್ಟೆಗಳಲ್ಲಿ ಎ. 12ರ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬ ಮತದಾರನು ಅವನ/ಳ ಹೆಸರು ಮತದಾರ ಪಟ್ಟಿಯಲ್ಲಿ ಸರಿಯಾಗಿ ನೋಂದಾವಣೆ ಆಗಿರುವುದನ್ನು ಪರಿಶೀಲಿಸುವುದಲ್ಲದೆ ತಪ್ಪುಗಳಾಗಿದಲ್ಲಿ ದಾಖಲೆಗಳೊಂದಿಗೆ ನಮೂನೆ 8ರಲ್ಲಿ ಅರ್ಜಿಯನ್ನು ಮತ್ತು ಡಬ್ಬಲ್ ಎಂಟ್ರಿಯಾಗಿದ್ದಲ್ಲಿ ಯಾವುದಾದರೂ ಒಂದನ್ನು ತೆಗೆದುಹಾಕಲು ನಮೂನೆ 7ರಲ್ಲಿ ಅರ್ಜಿಯನ್ನು ಬಿಎಲ್ಒರಿಂದ ಪಡೆದು ಅವರಿಗೆ ಸಲ್ಲಿಸಬಹುದಾಗಿದೆ. ಜ. 5ರಂದು ಪ್ರಕಟಿಸಲಾದ ಮತದಾರ ಪಟ್ಟಿಯೊಂದಿಗೆ ಬಿಎಲ್ಒ ಅವರು ಮತಗಟ್ಟೆಯಲ್ಲಿ ಹಾಜರಿರುವರು. ಆಯಾ ಮತಗಟ್ಟೆಯ ಮತದಾರರಿಂದ ಬಿಎಲ್ಒ ಅವರು ಆಧಾರ್, ಎಪಿಕ್, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ವಿವರಗಳನ್ನು ಪಡೆಯುವರು. ಆಧಾರ್, ಎಪಿಕ್, ಮೊಬೈಲ್ ಸಂಖ್ಯೆ…
ಬಸ್ರೂರು: ಬಸ್ರೂರು ಒಂದು ಐತಿಹಾಸಿಕ ನಗರವಾಗಿದೆ. ಈ ಪ್ರಾಚೀನ ನಗರಕ್ಕೆ ಸುದೀರ್ಘ ಇತಿಹಾಸವಿದೆ. ಇದೊಂದು ರೇವು ಪಟ್ಟಣವೂ ಆಗಿತ್ತು. ರಾಜಧಾನಿಯೂ ಆಗಿತ್ತು. ಏಳು ಕೆರೆ ಹಾಗೂ ಏಳು ಕೇರಿಗಳ ಈ ಐತಿಹಾಸಿಕ ನಗರದ ಹಿರಿಮೆಗೆ ಪ್ರತಿ ವರ್ಷ ನಡೆಯುವ ರಥೋತ್ಸವ ಸಾಕ್ಷಿಯಾಗಿದೆ. ಇಲ್ಲಿ ರಥೋತ್ಸವದ ಸಂದರ್ಭ ನಡೆಯುವ ಸ್ನೇಹ ಸಮ್ಮಿಲನ ವಾರ್ಷಿಕೋತ್ಸವ ಅಷ್ಟೇ ಮಹತ್ವ ಪಡೆಯುತ್ತದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಬಸ್ರೂರು ರಥೋತ್ಸವದ ಪ್ರಯುಕ್ತ ನಡೆದ ಸ್ನೇಹ ಸಮ್ಮಿಲನದ ವಾರ್ಷಿಕೋತ್ಸವ ಸಮಾರಂಭದ ಅಧ್ಯ ಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿ.ಪಂ. ಉಪಾಧ್ಯಕ್ಷ ಪ್ರಕಾಶ್ ಮೆಂಡನ್ ಅವರನ್ನು ಅಪ್ಪಣ್ಣ ಹೆಗ್ಡೆ ಸಮ್ಮಾನಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ, ಗ್ರಾ.ಪಂ. ಅಧ್ಯಕ್ಷೆ ಸುಮತಿ ಎಸ್. ಮೆಂಡನ್, ಹರೀಶ್ ಪಡಿ ಯಾರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ನೇಹ ಸಮ್ಮಿಲನದ ಅಧ್ಯಕ್ಷ ಅಶೋಕ್ ಅವರು ವಂದಿಸಿದರು.
ಮುಂಬಯಿ: ಜಿ. ಎಸ್. ಬಿ. ಮಂಡಲ ಡೊಂಬಿವಲಿ ಇದರ ವಾರ್ಷಿಕ ಶ್ರೀ ರಾಮ ನವಮಿ ಉತ್ಸವವು ಕಳೆದ ಮಂಗಳವಾರ ಸ್ಥಳೀಯ ಸ್ವಯಂವರ ಸಭಾಗೃಹದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ರಾಮನವಮಿ ಹವನ, ಪವಮಾನ ಅಭಿಷೇಕ, ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನೇರವೇರಿತು. ಸಂಜೆ ಭಕ್ತಾಧಿಗಳ ಸಹಯೋಗದೊಂದಿಗೆ ಶ್ರೀ ರಾಮ ದೇವರಿಗೆ 6 ಲಕ್ಷ ರೂ. ಗಳ ವೆಚ್ಚದಿಂದ ಸಂಪೂರ್ಣ ಸಾಗುವಾಗಿ ಮರದಿಂದ ನಿರ್ಮಿಸಲಾದ ರಾಮರಥದಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ರಥೋತ್ಸವ ನಡೆಸಲಾಯಿತು. ರಥವನ್ನು ಉತ್ತರ ಕನ್ನಡ ಕುಮಟಾದ ಮಹಾಲಸಾ ಹ್ಯಾಂಡಿಕೃಷ್ಟನ್ ಡಿ. ಡಿ. ಶೇನ್ ಅವರು ನಿರ್ಮಿಸಿದ್ದಾರೆ. 6 ಆಡಿ ಉದ್ದ, 5 ಆಡಿ ಅಗಲ ಮತ್ತು 12 ಅಡಿ ಎತ್ತರವಿರುವ ಈ ರಥವು ಊರಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುತ್ತಿದೆ. ರಥವನ್ನು ಡೊಂಬಿವಲಿಯ ಪ್ರಾಮುಖ ರಸ್ತೆಯಲ್ಲಿ ಎಳೆದು ನಂತರ ಜಿ. ಎಸ್. ಬಿ. ಮಂಡಲದ ಶಾಲೆಯ ಅಂಬಿಕಾನಗರ ಗೋಗಾ„ನ್ವಾಡಿಯಲ್ಲಿ ಮೆರವಣಿಗೆಯ ಮೂಲಕ ಸಾಗಿಸಲಾಯಿತು.…
ಕುಂದಾಪುರ: ಇಲ್ಲಿನ ಟೋರ್ಪಡೋಸ್ ಸ್ಟೋರ್ಟ್ ಕ್ಲಬ್ ಆಶ್ರಯದಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಡಬಲ್ ವಿಕೆಟ್ ಕ್ರಿಕೆಟ್ ಪಂದ್ಯಾಂಟ ನಗರದ ಮಧ್ಯಭಾಗದಲ್ಲಿರುವ ಗಾಂಧಿಮೈದಾನದಲ್ಲಿ ನಡೆಯಲಿದೆ. ಈ ಬಗ್ಗೆ ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ಟೋರ್ಪೊಡೋಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ ಕುಂದಾಪುರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೇ1ರಿಂದ 3ನೇ ತಾರೀಕಿನ ತನಕ ಡಬಲ್ ವಿಕೆಟ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ. ಅತ್ಯಂತ ರೋಮಾಂಚಕವಾದ ಕ್ರಿಕೆಟ್ ಪ್ರಕಾರವಾದ ಡಬಲ್ ವಿಕೆಟ್ ಎಂಬುದು ಕ್ರಿಕೆಟ್ ನ ವಿಶಿಷ್ಟ ಪ್ರಕಾರವಾಗಿದ್ದು ಇದು ಬ್ಯಾಟಿಂಗ್, ಬೌಲಿಂಗ್ ಸಾಮರ್ಥ್ಯ ಹಾಗೂ ನೈಪುಣ್ಯತೆಯನ್ನಲ್ಲದೇ ನಾಯಕತ್ವದ ಗುಣಗಳನ್ನು ಪರೀಕ್ಷಿಸುತ್ತದೆ. ಪದ್ಯಾಟದಲ್ಲಿ ದೇಶದ ನೂರಾರು ಅಪ್ರತಿಮ ಕ್ರಿಕೆಟಿಗರ ಜೋಡಿಗಳು ಭಾಗವಹಿಸಲಿದೆ ಎಂದರು. ಮೂರು ದಿನಗಳ ಕಾಲ ನಡೆಯಲಿರುವ ಪದ್ಯಾಂಟದಲ್ಲಿ ಭಾಗವಹಿಸುವ ಸ್ವರ್ಧಾರ್ಥಿಗಳಿಗೆ ವಸತಿ, ಉಟ ಹಾಗೂ ಸಮವಸ್ತ್ರದ ವ್ಯವಸ್ಥೆಯನ್ನು ಮಾಡಲಾಗಿದೆ. ಎಪ್ರಿಲ್ 15 ತಂಡವನ್ನು ನೊಂದಾಯಿಸಲು ಕೊನೆಯ ದಿನವಾಗಿದ್ದು ನೋದಣಿ ಶುಲ್ಕ ಆರು ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಪಂದ್ಯದಲ್ಲಿ…
ಕುಂದಾಪುರ: ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಜನ ಭಕ್ತವೃಂದವರು ರಥೋತ್ಸವದ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡರು. ರಥೋತ್ಸವದ ಅಂಗವಾಗಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಮಹಿಷಮರ್ದಿನಿ ದೇವರ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಮೊಗವೀರ ಸಮುದಾಯದ ಇಷ್ಟದೇವರಾದ ಬಗ್ವಾಡಿ ದೇವಸ್ಥಾನಕ್ಕೆ ದೂರದ ಮುಂಬೈ, ಬೆಂಗಳೂರು ಮುಂತಾದ ನಗರಗಳಿಂದ ಭಕ್ತರು ತಪ್ಪದೇ ಭೇಟಿ ನೀಡುತ್ತಾರೆ.
ಕೋಟೇಶ್ವರ: ಇಲ್ಲಿನ ಸ್ವಾಗತ್ ಫ್ರೆಂಡ್ಸ್ನ ವಿಂಶತಿ ಉತ್ಸವದಲ್ಲಿ ವಾಸ್ತುತಜ್ಞ, ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರರಿಗೆ 200ನೇ ಸನ್ಮಾನದ ಪ್ರಯುಕ್ತ ಕೀರ್ತಿ ಕಲಶ ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಿ, ಧ್ವಜಪುರ ರತ್ನ ಬಿರುದು ನೀಡಿ ಸಮ್ಮಾನಿಸಿ, ಗೌರವಿಸಲಾಯಿತು. ಸಮಾರಂಭವನ್ನು ನ್ಯಾಯವಾದಿ ಎ.ಎಸ್.ಎನ್.ಹೆಬ್ಟಾರ್ ಅವರು ಉದ್ಘಾಟಿಸಿ ಶುಭಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ ಶೆಟ್ಟಿಯ ವಹಿಸಿದ್ದರು. ಕುಂದಾಪುರ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್, ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾವ್ಯಶ್ರೀ ಬಿ. ಶೆಟ್ಟಿಗಾರ್ ಅವರನ್ನು ಮುತ್ತೈದೆಯರು ಭಾಗೀನ ನೀಡಿ ಹರಸಿದರು. ಕ್ರೀಡಾಪಟು ದಿವ್ಯಜ್ಯೋತಿ, ಕಲ್ಕುಡ ದೇವಸ್ಥಾನದ ಮತಿವಂತ ಕಾಮತ್ ಅವರನ್ನು ಗೌರವಿಸಲಾಯಿತು. ಸ್ವಾಗತ್ಫ್ರೆಂಡ್ಸ್ನ ಸುರೇಶ್ ಗೊಲ್ಲ ಸ್ವಾಗತಿಸಿದರು. ಅಧ್ಯಕ್ಷ ಸೋಮಶೇಖರ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಗೊಲ್ಲ…
ಬೈಂದೂರು: ಕ್ಷೇತ್ರದಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ವಿವಿಧೆಡೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂಬ ದೂರುಗಳಿದ್ದು, ಅಧಿಕಾರಿಗಳು ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಇವುಗಳಿಗೆ ಪರಿಹಾರ ರೂಪಿಸಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆದ್ದಾರಿ ಪ್ರಾಧಿ ಕಾರದ ಯೋಜನಾ ಪ್ರಬಂಧಕ ಕೆ. ಎಂ. ಹೆಗ್ಡೆ, ಗುತ್ತಿಗೆದಾರ ಕಂಪೆನಿಯ ಯೋಗೇಂದ್ರಪ್ಪ ಮತ್ತು ಸುರೇಶ ಪಾಟೀಲ್ ಜತೆ ಅವರು ಶುಕ್ರವಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜನಪ್ರತಿನಿಧಿಗಳು ಮತ್ತು ಜನರೊಂದಿಗೆ ಚರ್ಚಿಸಿದ ಬಳಿಕ ಕೆಲವು ಸೂಚನೆಗಳನ್ನಿತ್ತರು. ಮರವಂತೆಯಲ್ಲಿ ಮೀನುಗಾರಿಕಾ ಬಂದರು ಪ್ರದೇಶದಿಂದ ವಾಹನಗಳು ಹೆದ್ದಾರಿ ಪ್ರವೇಶಿಸಲು ಅವಕಾಶ ಇರಬೇಕು. ನಾವುಂದದಲ್ಲಿ ಬಡಾಕೆರೆ ಜಂಕ್ಷನ್ ಬಳಿ ಅಂಡರ್ ಪಾಸ್ ಮತ್ತು ಸರ್ವೀಸ್ ರೋಡ್ ನಿರ್ಮಿಸಬೇಕು, ತ್ರಾಸಿ, ಅರೆಹೊಳೆ ಕ್ರಾಸ್, ಯಡ್ತರೆ ಕ್ರಾಸ್ನಲ್ಲಿ ಜಂಕ್ಷನ್ ರಚಿಸಬೇಕು. ಬೈಂದೂರಿನಲ್ಲಿ ಫ್ಲೈ ಓವರ್ ನಿರ್ಮಿ ಸಬೇಕು ಎಂದು ಸಾರ್ವಜನಿಕರು ನೀಡಿದ ಸಲಹೆಗಳನ್ನು ಕಾರ್ಯಗತಗೊಳಿಸ ಬೇಕೆಂದು ಸೂಚಿಸಿದರು. ಮರವಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.…
ಮುಂಬಯಿ: ಪ್ರತಿಯೊಬ್ಬರು ಜೀವನದಲ್ಲಿ ಮೇಲೆ ಬರಬೇಕು. ಇಂದು ನನ್ನ ಸಾಧನೆಯನ್ನು ಗುರುತಿಸಿ ಗಣ್ಯರಿಂದ ನನಗೆ ಸಮ್ಮಾನ ಸಿಕ್ಕಿರುವುದು ಸಂತೋಷವಾಗುತ್ತಿದೆ. ನನ್ನ ಅಮೂಲ್ಯ ಸಮಯವನ್ನು ಮೀಸಲಿಟ್ಟು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರಕ್ಕೆ ಬಂದಿದ್ದೇನೆ. ನಾನು ಬರದಿದ್ದರೆ ಒಂದು ಸುಂದರ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ. ತುಳುನಾಡ ತಾಯಿಯ ಆಶೀರ್ವಾದದಿಂದ ನಾನಿಂದು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಘನ್ಸೋಲಿ ಶ್ರೀ ಮೂಕಾಂಬಿಕೆಯ ಸನ್ನಿಧಾನಕ್ಕೆ ಬಂದು ನನ್ನ ಜೀವನ ಪಾವನವಾದಂತಾಗಿದೆ ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅಭಿಪ್ರಾಯಿಸಿದರು. ಎ. 2 ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಶ್ರೀ ಮೂಕಾಂಬಿಕಾ ದೇವಿಗೆ ಶತಚಂಡಿಕಾಯಾಗ ಸಹಿತ ಅಷ್ಟಬಂಧ ಬ್ರಹ್ಮಕಲಶೋತ್ಸವ, ಸುವರ್ಣ ಕವಚ ಸಮರ್ಪಣೆಯ ಅಂಗವಾಗಿ ಮಂದಿರಕ್ಕೆ ಭೇಟಿನೀಡಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಪಾಲಕರೊಂದಿಗೆ ಮಂದಿರಕ್ಕೆ ಭೇಟಿ ನೀಡಲು ಸಂತೋಷವಾಗುತ್ತಿದೆ. ಮಂದಿರದ ಒಳಗಡೆ ಬಂದಾಕ್ಷಣ ಭಕ್ತಿ ಉಕ್ಕಿ ಹರಿಯುತ್ತಿದೆ. ತುಳುವರ ಸಂಘಟನಾ ಚಾತುರ್ಯಕ್ಕೆ ಮನತುಂಬಿ ಬರುತ್ತಿದೆ ಎಂದರು. ಎ.…
