ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ಕರ್ನಾಟಕ ಘಟಕದ ವತಿಯಿಂದ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಸ್ನೇಹಕೂಟ-2015, ಮಾರ್ಚ್ 26 ರ ಶುಕ್ರವಾರ ರಾತ್ರಿ ಇಲ್ಲಿನ ಅಲ್-ರುಶೇದ್ ರೆಸೋರ್ಟ್‌ನಲ್ಲಿ ನಡೆಯಿತು.
ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಫ್‌ಎಫ್ ರಿಯಾದ್ ಕರ್ನಾಟಕ ಘಟಕದ ಅಧ್ಯಕ್ಷರಾದ ಜ! ಹಾರೀಸ್ ಅಂಗರಗುಂಡಿಯವರು ವಹಿಸಿದ್ಧು, ಐಎಫ್‌ಎಫ್ ರಿಯಾದ್ ರೀಜಿಯನ್ ಅಧ್ಯಕ್ಷರಾದ ಜ! ಇಲ್ಯಾಸ್ ಕೇರಳ ರವರು ಉದ್ಘಾಟನೆಯನ್ನು ನೆರವೇರಿಸಿದರು.
ತನ್ನ ಉಧ್ಘಾಟನಾ ಭಾಷಣದಲ್ಲಿ ಐಎಫ್‌ಎಫ್ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಸೇವಾ ಕೆಲಸಗಳ ಬಗೆಗೆ ವಿವರಿಸುತ್ತಾ , ಮುಂದಿನ ದಿನಗಳಲ್ಲಿ ಸಂಘಟನೆಗೆ ಸಾರ್ವಜನಿಕರ ಸಹಕಾರದ ಅಗತ್ಯತೆಯನ್ನು ತಿಳಿಸಿದರು. ಮುಖ್ಯ ಭಾಷಣ ಮಾಡಿದ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಜ!ಅಬ್ದುಲ್ ರಝಾಕ್ ಕೆಮ್ಮಾರ , ಭಾರತ ದೇಶದ ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈಗೊಳ್ಳುತ್ತಿರುವ ಕೆಲಸ ಕಾರ್ಯಗಳ ಬಗೆಗೆ ವಿವರಿಸುತ್ತಾ, ಈ ಸಮುದಾಯಗಳ ಸಬಲೀಕರಣಕ್ಕಾಗಿ ಏಕತೆಯ ಅಗತ್ಯತೆಯನ್ನು ಸ್ಪಷ್ಟ ಮಾತುಗಳಿಂದ ವಿವರಿಸಿದರು. ಇಂಡಿಯನ್ ಸೊಷಿಯಲ್ ಫಾರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಜ! ಸಮೀರ್ ಎರ್ಮಾಳ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ಧರು.
ಐಎಫ್‌ಎಫ್ ರಿಯಾದ್ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಜ! ಇಸ್ಮಾಯಿಲ್ ಇನೋಳಿ ಅತಿಥಿಗಳನ್ನು ಸ್ವಾಗತಿಸಿದರು. ಜ! ರವೂಫ್ ಕಳಾಯಿ ಧನ್ಯವಾದಗೈದರು. ಶರೀಫ್ ಕಬಕ ಕಾರ್ಯಕ್ರಮ ನಿರೂಪಿಸಿದರು.