Author: Editor Desk

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ 2014ನೇ ಸಾಲಿನ ಪ್ರಶಸ್ತಿಗಳು ಪ್ರಕಟಗೊಂಡಿದ್ದು ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. 34 ಪತ್ರಕರ್ತರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ಜೀವಮಾನದ ಸಾಧನೆಗಾಗಿ ಒಬ್ಬರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಪ್ರಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತದೆ. 2014ನೇ ಸಾಲಿಗೆ ಕೋಲಾರ ಮೂಲದವರಾದ ಹಿರಿಯ ಪತ್ರಕರ್ತರಾದ ಶ್ರೀ ಎಂ.ಎಸ್. ಪ್ರಭಾಕರ ಅವರು ಸುಮಾರು 30 ವರ್ಷದಿಂದ ` ದಿ ಹಿಂದು’ ಪತ್ರಿಕೆಯ ದಕ್ಷಿಣ ಆಫ್ರಿಕಾದ ವಿಶೇಷ ಪ್ರತಿನಿಧಿಯಾಗಿ ಹಾಗೂ ಅಸ್ಸಾಂ ರಾಜ್ಯದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾಮರೂಪಿ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದಾರೆ. ಅವರನ್ನು ವಾರ್ಷಿಕವಾಗಿ ನೀಡಲಾಗುವ ವಿಶೇಷ ಪ್ರಶಸ್ತಿಗೆ ಆಯ್ಕೆ…

Read More

ಉಡುಪಿ : ಅಮಾಸೆಬೈಲು ಗ್ರಾ.ಪಂ, ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌, ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಉಡುಪಿ ಮತ್ತು ಕುಂದಾಪುರ, ಹಿಂದುಳಿದ ವರ್ಗ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕುಂದಾಪುರ, ಕರ್ಣಾಟಕ ಬ್ಯಾಂಕ್‌ ಮಂಗಳೂರು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಎ.10ರಂದು ಬೆಳಗ್ಗೆ 10.30ಕ್ಕೆ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ಜರಗಲಿದೆ ಎಂದು ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಸಚಿವ ವಿನಯ ಕುಮಾರ್‌ ಸೊರಕೆ, ಸಭಾ ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್‌ ಅಧ್ಯಕ್ಷ ಅನಂತಕೃಷ್ಣ ಉದ್ಘಾಟಿಸಲಿದ್ದಾರೆ. ಮೀನು ಮಾರುಕಟ್ಟೆ ಶಂಕುಸ್ಥಾಪನೆಯನ್ನು ಸಚಿವ ಅಭಯಚಂದ್ರ ಜೈನ್‌ ನೆರವೇರಿಸಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಿದ್ದಾರೆ. ಕೃಷಿ ಮಾರುಕಟ್ಟೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌, ಜೈವಿಕ ಅನಿಲ ಘಟಕವನ್ನು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು ಶ್ರೀ…

Read More

ಕುಂದಾಪುರ: ಇಂದು ದೇಶದಲ್ಲಿ ಮಕ್ಕಳ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಶೇ.8.2ರಷ್ಟು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ನಾವು ನೋಡುತ್ತೇವೆ. ವರ್ಷಕ್ಕೆ ಸುಮಾರು ಮೂರೂವರೆ ಲಕ್ಷದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೋರ್ವಿ ಹೇಳಿದರು. ಅವರು ಕುಂದಾಪುರ ಪಿ.ವಿ.ಎಸ್‌.ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ತಾ.ಪಂ. ಕುಂದಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಿದ್ದರು ಮಕ್ಕಳಿಗೆ ನಿರುಪಯುಕ್ತವಾದ ವಸ್ತುಗಳು ಒಳ್ಳೆಯದೆಂಬಂತೆ ಗೋಚರಿಸುತ್ತವೆ. ಅವರಲ್ಲಿ ಚರ್ಚಿಸುವ, ಬದುಕುವ, ಹೋರಾಟದ ಮನೋಭಾವವನ್ನು ಮೂಡಿಸುವುದರೊಂದಿಗೆ ಅವರ ಹಕ್ಕುಗಳ ಹಾಗೂ ಕರ್ತವ್ಯಗಳನ್ನು ತಿಳಿದುಕೊಳ್ಳಬೇಕಾಗಿದೆ. ಮಕ್ಕಳಲ್ಲಿ ಶಿಕ್ಷಣವನ್ನು ಕೊಡುವ ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಪರಿಸರ, ಕುಟುಂಬ ಹಾಗೂ ಶಾಲೆಗಳು ಮಾಡಬೇಕಾಗಿದೆ ಎಂದರು. ಜಿ.ಪಂ.ಉಪಾಧ್ಯಕ್ಷ ಪ್ರಕಾಶ್‌ ಟಿ.ಮೆಂಡನ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ…

Read More

ಮುಂಬಯಿ: ದಾಯ್ಜಿವರ್ಲ್ಡ್, ಕೆಮ್ಮಣ್ಣು, ಕೆನರ ನ್ಯೂಸ್‌ ಡಾಟ್‌ ಕಾಂ ಇದರ ಮಹಾರಾಷ್ಟ್ರದ ಬ್ಯೂರೊ ಚೀಫ್‌, ಸುದ್ದಿ ಸಂಪಾದಕರಾಗಿ ಸೇವೆಸಲ್ಲಿಸುತ್ತಿರುವ ರೋನ್ಸ್‌ ಬಂಟ್ವಾಳ್‌ ಅವರಿಗೆ “ಕರ್ನಾಟಕ ರಾಜ್ಯ ಮಾಧ್ಯಮ’ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ನಗರ ಹಾಗೂ ನಾಡಿನ ಪ್ರಸಿದ್ಧ ಪತ್ರಿಕೆಗಳು ಸೇರಿದಂತೆ ಹತ್ತಾರು ಕನ್ನಡ-ಕೊಂಕಣಿ ವಾರಪತ್ರಿಕೆಗಳು,ಇಂಗ್ಲಿಷ್‌ ಸಾಪ್ತಾಹಿಕಗಳು, ಪಾಕ್ಷಿಕ ಮತ್ತು ಅನೇಕ ಮಾಸಿಕಗಳ ಅಧಿಕೃತ ವರದಿಗಾರರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ತೊಡಗಿಸಿಕೊಂಡು ಯಶಸ್ವಿ ಪತ್ರಿಕೋದ್ಯಮಿಯಾಗಿರುವ ಅವರು ಸಿವಿಲ್‌ ಎಂಜಿನಿಯರ್‌ ಪದವೀಧರರಾಗಿ ಉದ್ಯೋಗದ ನಿಮಿತ್ತ ಮುಂಬಯಿಗೆ ಆಗಮಿಸಿ ವ್ಯಂಗ್ಯಚಿತ್ರ ಕಲಾಕಾರರಾಗಿ ಪತ್ರಿಕಾರಂಗಕ್ಕೆ ಪ್ರವೇಶಿಸಿದ್ದರು. ರಾಕೊ ಕೊಂಕಣಿ ವಾರಪತ್ರಿಕೆಯ ಮೂಲಕ ಮುಂಬಯಿಯಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಅವರು ಕ್ರಮೇಣ “ಜನವಾಹಿನಿ’ ಕನ್ನಡ ದೈನಿಕ ಮುಂಬಯಿ ಮುಖ್ಯಸ್ಥರಾಗಿದ್ದರು. ಅನಂತರ ಉದಯವಾಣಿ, ತರಂಗ, ರೂಪತಾರ ಮುಂತಾದ ಪತ್ರಿಕೆಗಳಲ್ಲಿ ಸತತ ಆರುವರೆ ವರ್ಷಗಳ ಗಣನೀಯ ಸೇವೆಸಲ್ಲಿಸಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕ ಗೌ|ಪ್ರ| ಕಾರ್ಯದರ್ಶಿಯಾಗಿ ಪತ್ರಕರ್ತ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.…

Read More

ಹೆಬ್ರಿ: ಬಡವರ ಪರವಾದ ಕಾಂಗ್ರೆಸ್‌ ಪಕ್ಷ ಅಕ್ರಮ-ಸಕ್ರಮ 94 ಸಿ ಮುಂತಾದ ಕಾನೂನುಗಳನ್ನು ಜಾರಿಗೆ ತಂದು ಅಭಿವೃದ್ಧಿಯಲ್ಲಿ ಜನಪರವಾಗಿದೆ.ಆದರೆ ಈಗ ಏಕಾಏಕಿಯಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರ ಭೂ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು ಜನರು ಕಂಗಾಲಾಗಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಜನರ ಭಾವನೆಗಳಿಗೆ ಧ‌ಕ್ಕೆತರುವ ಕೇಂದ್ರ ಸರಕಾರ ಈ ಕೂಡಲೇ ಈ ಕಾಯಿದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ ಅವರು ಪ್ರತಿಯೊಬ್ಬರ ಖಾತೆಗೆ 5 ಸಾವಿರ ರೂ. ಜಮೆ ಮಾಡುವುದಾಗಿ ಹೇಳಿದ ಮೋದಿ 5 ಪೈಸೆಯನ್ನೂ ಹಾಕಿಲ್ಲ. ಸದಾ ಸುಳ್ಳು ಹೇಳುವುದರ ಮೂಲಕ ಜನಪ್ರಿಯತೆಯನ್ನು ಕಂಡು ಕೊಂಡ ಮೋದಿಯಿಂದ ಅಚ್ಛೇದಿನ್‌ ಯಾವಾಗ ಬರಲು ಸಾಧ್ಯ ಎಂದು ಕಾರ್ಕಳ ಮಾಜಿ ಶಾಸಕ ಎಚ್‌ ಗೋಪಾಲ್‌ ಭಂಡಾರಿ ಹೇಳಿದರು. ಅವರು  ಹೆಬ್ರಿ ಬಸ್‌ ಸ್ಟಾಂಡ್‌ ವಠಾರದಲ್ಲಿ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಡೆದ ಕೇಂದ್ರ ಬಿಜೆಪಿ ಸರಕಾರ ಭೂ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ತಂದ ಬಗ್ಗೆ ವಿರೋಧಿಸಿ ನಡೆದ ಪ್ರತಿಭಟನ ಸಭೆ ಹಾಗೂ ಧರಣಿ ಯಲ್ಲಿ…

Read More

ಬೈಂದೂರಿನ ಉದಯೋನ್ಮಖ ಛಾಯಾಚಿತ್ರಗಾರ ನಿತೀಶ್ ಬೈಂದೂರು ಬೈಂದೂರು: ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಆಕಾಶವನ್ನೇರೋದು ಕೂಡ ದೊಡ್ಡ ವಿಷಯವೇನಲ್ಲ. ಬದುಕಿನಲ್ಲಿ ಆಗಸದಷ್ಟು ಕನಸುಗಳನ್ನು ಕಂಡು ನನಸು ಮಾಡಿಕೊಳ್ಳಲು ಹೆಣಗಾಡುವವರ ನಡುವೆ ಕಂಡ ಕನಸುಗಳನ್ನು ಸಾಕಾರಗೊಳಿಸುತ್ತಾ, ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನೇರುತ್ತಿರುವ ಬೈಂದೂರಿನ ಹುಡುಗ ನಿತೀಶ್ ಎಲ್ಲರಿಗಿಂತ ಕೊಂಚ ಭಿನ್ನವಾಗಿ ನಿಲ್ಲತ್ತಾನೆ. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಥಮ ಎಂಸಿಜೆ ವಿದ್ಯಾರ್ಥಿಯಾಗಿರುವ ನಿತೀಶ್ ಪಿ. ಬೈಂದೂರು ಛಾಯಾಗ್ರಹಣದಲ್ಲಿ ಉತ್ಕಟ ಆಸಕ್ತಿ ಹೊಂದಿರುವ ಯುವಪ್ರತಿಭೆ. ಆತ ಪೋಟೋಗಳನ್ನು ಸುಂದರವಾಗಿಸುವಷ್ಟು ತಯಾರಿ ನಡೆಸಿ, ಅದರಲ್ಲಿಯೇ ತಲ್ಲಿನನಾಗುವ ಪರಿ ವೃತ್ತಿಪರ ಛಾಯಾಗ್ರಾಹಕರೂ ಬೆರಗು ಪಡುವಂತದ್ದು. ಬೆಳಕನ್ನು ಸೆರೆಹಿಡಿವ ಆಟದೊಂದಿಗೆ ಆತ ಸದಾ ತಲ್ಲೀನ. ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಬೈಂದೂರು ಪಡುವರಿಯ ಸುಬ್ರಾಯ ಪಿ. ಮತ್ತು ಕಲಾವತಿ ದಂಪತಿಗಳ ಪುತ್ರನಾದ ನಿತೀಶ್ ಹವ್ಯಾಸದೊಂದಿಗೆ ಓದಿಗೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ. .ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆಯುತ್ತಿರುವ ಅವಧಿಯಲ್ಲಿ ಕರ್ನಾಟಕ ಫೋಟೋ ನ್ಯೂಸ್, ದಿ ಹಿಂದೂ, ಸ್ವಂದನ ವಾಹಿನಿಗಳಲ್ಲಿ ಇಂಟರ್‌ಶಿಫ್ ವಿದ್ಯಾರ್ಥಿಯಾಗಿ…

Read More

ಏಷ್ಯನ್ ಮೀಡಿಯಾ ಮತ್ತು ಮಾರ್ಕೆಟಿಂಗ್ ಗ್ರೂಪ್ ಈಸ್ಟರ್ನ್ ಐ 2015ನೇ ಸಾಲಿನ ‘ಏಷ್ಯಾದ 101 ಶ್ರೀಮಂತರು’ ಪಟ್ಟಿಯಲ್ಲಿ ಹಿಂದೂಜಾ ಸೋದರರು ಮತ್ತು ಲಕ್ಷ್ಮಿ ಮಿತ್ತಲ್ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ. ಬಹು ವ್ಯವಹಾರ ನಡೆಸುತ್ತಿರುವ ಜಿ.ಪಿ. ಹಿಂದೂಜಾ ಮತ್ತು ಎಸ್.ಪಿ. ಹಿಂದೂಜಾ ಅವರ ಸಂಪತ್ತು 200 ಕೋಟಿ ಪೌಂಡ್‌ನಿಂದ 1550 ಕೋಟಿ ಪೌಂಡ್ ಗೆ ಏರಿದೆ. ಉಕ್ಕು ಬೆಲೆ ಇಳಿಕೆಯಾಗಿರುವುದರಿಂದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಸಂಪತ್ತಿನಲ್ಲಿ 230 ಕೋಟಿ ಪೌಂಡ್ ಇಳಿಕೆಯಾಗಿದ್ದು, 970 ಕೋಟಿ ಪೌಂಡ್ ಹೊಂದಿದ್ದಾರೆ. ಲಾರ್ಡ್ ಸ್ವರಾಜ್‌ಪಾಲ್ ಅವರು 12ನೇ ಸ್ಥಾನದಲ್ಲಿದ್ದು, ಅವರ ಸಂಪತ್ತು 2.5ಕೋಟಿ ಪೌಂಡ್‌ನಷ್ಟು ಕುಸಿದಿದ್ದು, 72.5 ಕೋಟಿ ಪೌಂಡ್ ಇದೆ.

Read More

ನಾ ಮುಂದು, ತಾ ಮುಂದು ಎಂದು ಎಫ್‌ಎಂ ಚಾನೆಲ್‌ಗಳು ಆರಂಭವಾಗುತ್ತಿವೆ. ಮಧ್ಯಮ ಪ್ರಮಾಣದ ಬಂಡವಾಳ ತೊಡಗಿಸಿದರೆ ಹೆಚ್ಚಿನ ಲಾಭ ಇದರಲ್ಲಿ ಸಿಗುತ್ತದೆ ಎಂಬುದು ಕಾರಣ. ಒಂದು ಲಕ್ಷ ಮಿಕ್ಕಿ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಎಫ್‌ಎಂ ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತದಲ್ಲಿ 839 ಹೊಸ ಎಫ್‌ಎಂ ಚಾನೆಲ್‌ಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ. ಬೆಂಗಳೂರು,ಹುಬ್ಬಳ್ಳಿ- ಧಾರವಾಡ ಬೆಳಗಾವಿ,ಗುಲ್ಬರ್ಗಾ,ಮಂಗಳೂರು, ಮೈಸೂರು,ಮುಂತಾದ ನಗರಗಳಲ್ಲಿ ಸದ್ಯದಲ್ಲೇ ಎಫ್‌ಎಂ ಕಾರ್ಯಾರಂಭ ಮಾಡಲಿವೆ. ಇದರಿಂದಾಗಿ ಆರ್‌ಜೆಗಳಿಗೆ ಬೇಡಿಕೆ ಉಂಟಾಗಿದೆ. ಸದ್ಯ ಬೆಂಗಳೂರಿನಲ್ಲಿ ನಾಲ್ಕೈದು ಎಫ್‌ಎಂಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಇನ್ನೂ ನಾಲ್ಕು ಎಫ್‌ಎಂ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸದ್ಯ ಆಕಾಶವಾಣಿಯ ಒಂದು ಚಾನೆಲ್ ಕಾರ್ಯ ನಿರ್ವಹಿಸುತ್ತಿದೆ. ಧಾರವಾಡದ ಕಷಿ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಬಿವಿಬಿ ಎಂಜಿನಿಯರ್ ಕಾಲೇಜಿನಲ್ಲಿ ಕೆಲವೇ ದಿನಗಳ ಹಿಂದಷ್ಟೆ ಸಮುದಾಯ ಬಾನುಲಿ ಕೇಂದ್ರ ಆರಂಭವಾಗಿದೆ. ಇಲ್ಲಿಯು ನಾಲ್ಕು ಎಫ್‌ಎಂ ಮತ್ತು ಗುಲ್ಬರ್ಗಾ ನಗರದಲ್ಲೂ ಎಫ್‌ಎಂ ಚಾನೆಲ್‌ಗಳು ಸದ್ಯ ಆರಂಭವಾಗಲಿವೆ. ಬೆಳಗಾವಿಯ ಕೆಎಲ್‌ಇ ಸಂಸ್ಥೆಯಲ್ಲಿ ಕೆಎಲ್‌ಇ ಧ್ವನಿ ಎಂಬ ಚಾನೆಲ್ ಆರಂಭವಾಗಿದೆ.…

Read More

ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಲಿಮಿಟೆಡ್‌ ಇದರ ಭಾರತ್‌ ಬ್ಯಾಂಕ್‌ ಸ್ಟಾಫ್‌ ವೆಲ್ಫೆರ್‌ ಕ್ಲಬ್‌ನ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವು ಮಾ. 23 ರಿಂದ ಮಾ. 29 ರವರೆಗೆ ಎಲ್ಲಾ ಶಾಖೆಗಳಲ್ಲಿ ಆಯೋಜಿಸಲಾಗಿತ್ತು. ಶಿಬಿರಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದ ನಿರ್ವಹಣಾ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸಿ. ಆರ್‌. ಮೂಲ್ಕಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಅನಿವಾರ್ಯವಾಗಿದೆ. ಖನ್ನತೆ, ಒತ್ತಡ ಮತ್ತು ಮಾನಸಿಕ ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಬೇಕು. ಆವಾಗ ಮಾತ್ರ ಅದು ನಿಯಂತ್ರಕ್ಕೆ ಬರಲು ಸಾಧ್ಯವಾಗುತ್ತದೆ. ಕೌಶಲ್ಯ ಭರಿತ ಸೇವೆಯಲ್ಲಿ ಆರೋಗ್ಯದ ಪಾತ್ರ ಮಹತ್ತರವಾಗಿದೆ. ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಮತ್ತು ನಿರ್ದೇಶಕ ಮಂಡಳಿಯ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಗಿದೆ. ಸಿಬ್ಬಂದಿ ಹಾಗೂ ಪರಿವಾರದವರು ಸೇರಿ ಸುಮಾರು 600 ಮಂದಿ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು. ಗೌರವ ಪ್ರಧಾನ ಕಾರ್ಯದರ್ಶಿ ಶೀತಲ್‌ ಅಮೀನ್‌, ಜತೆ ಕಾರ್ಯದರ್ಶಿ ಮೋಕ್ಷಾ ಕೋಟ್ಯಾನ್‌, ಮುಖ್ಯ ಮಹಾಪ್ರಬಂಧಕ ಅನಿಲ್‌ ಕುಮಾರ್‌ ಆರ್‌.…

Read More

ಮುಂಬಯಿ: ವಚನ ಸಾಹಿತ್ಯದ ಮೂಲಕ ಮಹಿಳೆ ತನ್ನ ಅಭಿವ್ಯಕ್ತಿಯನ್ನು ಆರಂಭಿಸಿದ್ದಾಳೆ. ಅದಕ್ಕೂ ಮುನ್ನ ಸಂವೇದನೆಗೆ ಅಕ್ಷರ ಸಿಕ್ಕಿ ಅದು ಜಾನಪದ ರೂಪದಲ್ಲಿ ಹೊರಹೊಮ್ಮಿರುತ್ತದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ವಾಪಿ ಕನ್ನಡ ಸಂಘ ಈಗ ಸಾಹಿತ್ಯಕ ಚಟುವಟಿಕೆಗಳಲ್ಲಿ ತನ್ನ ಅಭಿಯಾನವನ್ನು ಮುಂದುವರೆಸಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಪ್ರಸಿದ್ಧ ಸಾಹಿತಿ, ಚಿಂತಕಿ ವೈದೇಹಿ ನುಡಿದರು. ಇತ್ತೀಚೆಗೆ ವಾಪಿ ಕನ್ನಡ ಸಂಘದ ಸಭಾಗೃಹದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ತ್ರೀ ಸಂವೇದನೆಯ ಬಗ್ಗೆ ಮಾತನಾಡಿದ ಅವರು, ಸರಸ್ವತಿ ರಾಜವಾಡೆ ಅವರು ದೊಡ್ಡ ಚಳುವಳಿಯನ್ನು ನಡೆಸಿದರು. ಕೊಡಗಿನ ಗೌರಮ್ಮನವರು ಮುಂದಿನ ದಿನಗಳಲ್ಲಿ ಗುರುತಿಸಿಕೊಂಡವರಲ್ಲಿ ಪ್ರಮುಖರು. ಮಹಿಳಾ ಸಾಹಿತ್ಯವನ್ನು ಅಡುಗೆ ಮನೆ ಸಾಹಿತ್ಯ ಎಂದು ಹಣೆಪಟ್ಟಿ ಕಟ್ಟಿದ ದಿನಗಳಲ್ಲಿ ಅದನ್ನು ಬಲವಾಗಿ ಪ್ರತಿಭಟಿಸಿದವರಲ್ಲಿ ಅನುಪಮಾ ನಿರಂಜನ ಪ್ರಮುಖರು. ಅದನ್ನು ಎಂ. ಕೆ. ಇಂದಿರಾ, ಎಂ. ಕೆ. ವಿಜಯಲಕ್ಷಿ¾à ಮುಂದುವರಿಸಿಕೊಂಡು ಹೋದರು. ಹೆಣ್ಣು ಮಗು ಓದುವ ಅಗತ್ಯವಿಲ್ಲವೆಂದು ತಿಳಿದಿದ್ದ ಕಾಲದಲ್ಲಿ, ಓದೇ ಬರದಾಗ…

Read More