ಕುಂದಾಪುರ: ಕಾರ್ಕಳದ ಎಣ್ಣೆಹೊಳೆ ಹಂಚಿಕಟ್ಟೆ ಶ್ರೀ ಮಹಾಮ್ಮಾಯಿ ದೇವಳದ ವಠಾರದಲ್ಲಿ ನಡೆಯಲಿರುವ ೬ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಸಿದ್ಧ ವಾಗ್ಮಿ, ಸಾಹಿತಿ ಎ ಎಸ್ ಎನ್ ಹೆಬ್ಬಾರ್ ಅವರಿಗೆ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸಮಿತಿಯು ಅವರ ನಿವಾಸ ’ನುಡಿ’ಯಲ್ಲಿ ಆಮಂತ್ರಣ ನೀಡಿ ಆಹ್ವಾನಿಸಿತು. ಸಂಘಟಕರುಗಳ ಪರವಾಗಿ ಆಹ್ವಾನ ನೀಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆಯೇ ವಿಶಷ್ಠವಾಗಿದೆ. ಅಂತಹ ವೈಶಿಷ್ಟ್ಯಪೂರ್ಣ ಸಮ್ಮೇಳನದ ಅಧ್ಯಕ್ಷರನ್ನಾಗಿ ಎ.ಎಸ್.ಎನ್.ಹೆಬ್ಬಾರ್ ಆಯ್ಕೆ ಮಾಡಿರುವುದು ಅತ್ಯಂತ ಸ್ತುತ್ಯರ್ಹವಾಗಿದೆ. ಹೆಬ್ಬಾರ್ ಕನ್ನಡಕ್ಕೆ ಸಾಕಷ್ಟು ಕೆಲಸ ಮಾಡಿ, ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದರು. ಈ ಸಂದರ್ಭದಲ್ಲಿ ಡಾ.ಎಚ್.ವಿ.ನರಸಿಂಹ ಮೂರ್ತಿ, ಗಡಾದ ರಾಮಕೃಷ್ಣ ರಾವ್, ದೇವಿದಾಸ ಕಾಮತ್, ವಸಂತ ರಾವ್, ಕಿಶೋರ್ ಕುಮಾರ್ ಕೆಂಚನೂರು, ಕೆ.ಪಿ.ಭಟ್, ಯು.ಎಸ್. ಶೆಣೈ, ರೋಟರಿಯ ಮನೋಜ್ ನಾಯರ್, ಸೀತಾರಾಮ ಶೆಟ್ಟಿ, ಯಾಕೂಬ್ ಖಾದರ್ ಗುಲ್ವಾಡಿ, ಭಾಸ್ಕರ ಹೆಬ್ಬಾರ್,…
Author: Editor Desk
ಕರ್ನಾಟಕದ ಎಂ.ಎನ್. ಪೊನ್ನಮ್ಮ ಸೇರಿದಂತೆ ರಿತುರಾಣಿ ಸಾರಥ್ಯದ 18 ಮಂದಿ ಸದಸ್ಯರನ್ನೊಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು ನ್ಯೂಜಿಲೆಂಡ್‌ನಲ್ಲಿ ಏ.11 ರಿಂದ 19ರ ವರೆಗೆ ನಡೆಯಲಿರುವ ಹಾಕೀಸ್ ಬೇ ಕಪ್ ಟೂರ್ನಿಗೆ ಪ್ರಕಟಿಸಿಲಾಗಿದೆ. ಟೂರ್ನಿಯಲ್ಲಿ ಭಾರತವಲ್ಲದೆ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಚೀನಾ, ಜಪಾನ್, ಕೊರಿಯಾ, ಅಮೆರಿಕ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ. ರಿತು ರಾಣಿ ನಾಯಕಿಯಾಗಿ ಮುಂದುವರಿದರೆ, ಡಿಫೆಂಡರ್ ದೀಪಿಕಾ ಉಪನಾಯಕಿಯ ಸ್ಥಾನ ನಿರ್ವಹಿಸಲಿದ್ದಾರೆ. ಭಾರತ ಏ.11 ರಂದು ಚೀನಾ ವಿರುದ್ಧ ಅಭಿಯಾನ ಆರಂಭಿಸಲಿದೆ. ಬೆಲ್ಜಿಯಂನಲ್ಲಿ ನಡೆಯಲಿರುವ ಮುಂಬರುವ ಪ್ರಮುಖ ಹಾಕಿ ವಿಶ್ವ ಲೀಗ್ ಸೆಮಿಫೈನಲ್‌ಗೆ ಈ ಟೂರ್ನಿ ಪ್ರದರ್ಶನದ ವೇದಿಕೆಯಾಗಿದೆ. ತಂಡ ಇಂತಿದೆ ಗೋಲ್‌ಕೀಪರ್: ಸವಿತಾ, ರಜನಿ ಎತಿಮಾರ್ಪು; ಡಿಫೆಂಡರ್ಸ್: ದೀಪ್ ಗ್ರಾಸ್ ಎಕ್ಕಾ, ದೀಪಿಕಾ, ಸುನಿತಾ, ಲಾಕ್ರಾ, ಸುಶೀಲಾ ಚಾನು, ಎಂ.ಎನ್.ಪೊನ್ನಮ್ಮ, ಮೋನಿಕಾ; ಮಿಡ್‌ಫೀಲ್ಡರ್: ರಿತು ರಾಣಿ, ನಮಿತಾ ಟೊಪ್ಪೊ, ಲಿಲಿಮಾ ಮಿನ್ಜ್, ಲಿಲಿಯ್ ಚಾನು, ನವ್‌ಜೋತ್ ಕೌರ್, ಸೌಂದರ್ಯ ಯೆಂದಳಾ. ಫಾರ್ವರ್ಡ್ಸ್: ವಂದನಾ ಕಟಾರಿಯಾ, ರಾಣಿ ಪೂನಮ್…
ಕುವೈತ್: ಬಿಲ್ಲವ ಸಂಘದ ಹೊರಾಂಗಣ ವಿಹಾರಕೂಟವನ್ನು ಶುಕ್ರವಾರದಂದು ಬಹು ಸಂಖ್ಯೆಯಲ್ಲಿ ಬಿಲ್ಲವರೆಲ್ಲರು ಒಂದುಗೂಡಿ ಮಿಶ್ರೆಫ್ ಉದ್ಯಾನವನದಲ್ಲಿ ನಡೆಸಿಕೊಟ್ಟರು. ಹಿತಕರವಾದ ಹವಾಮಾನ ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಲು ಮತ್ತು ಎಲ್ಲಾ ಸದಸ್ಯರು ಅತ್ಯುತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನವನ್ನು ನೀಡಿತು. ಸಮಾರಂಭವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಶ್ರೀ ಚಿತ್ರೇಕ್ ಬಂಗೇರರವರು ವಿಶಿಷ್ಟವಾದ ಪರಿಕಲ್ಪನೆಯಾದ ಹಾಲು ಮತ್ತು ಜೇನನ್ನು ಮಿಶ್ರಣ ಮಾಡುವುದರೊಂದಿಗೆ ನೆಡೆಸಿದರು. ಇದು ಸಾಂಪ್ರದಾಯಿಕ ಅವಿಭಕ್ತ ಕುಟುಂಬದ ಸಂಕೇತವಾಗಿದೆ. ಭಗವಂತನಿಗೆ ಹಾಲು-ಜೇನಿನ ಮಿಶ್ರಣವು ತುಂಬಾ ಪ್ರಿಯ. ಅದೇ ರೀತಿ ಜನರು ಹೊಂದಿಕೊಂಡು ಸಾಮರಸ್ಯದಿಂದ ಹಾಲು ಜೇನಿನ ಮಿಶ್ರಣದಂತೆ ಬಾಳಬೇಕೆಂದು ಭಗವಂತನು ಬಯಸುತ್ತಾನೆ ಎನ್ನುವುದೇ ಈ ಪರಿಕಲ್ಪನೆಯೆ ಸಂದೇಶವಾಗಿದೆ. ಕ್ರೀಡಾ ಕಾರ್ಯದರ್ಶಿಯಾದ ಶ್ರೀ ಕೃಷ್ಣ ಪೂಜಾರಿಯವರು ರಿಬ್ಬನ್ ಕತ್ತರಿಸುವುದರೊಂದಿಗೆ ಮತ್ತು ಅಧ್ಯಕ್ಷರಾದ ಶ್ರೀ ಚಿತ್ರೇಕ್ ಬಂಗೇರರವರು ತೆಂಗಿನ ಕಾಯಿ ಒಡೆಯುವ ಮೂಲಕ ಕ್ರೀಡೋತ್ಸವವನ್ನು ಚಾಲನೆಗೊಳಿಸಿದರು. ಮಕ್ಕಳಿಗಾಗಿ ಹಾಗೂ ಎಲ್ಲಾ ಹರೆಯದ ಪುರುಷರು ಮತ್ತು ಮಹಿಳೆಯರಿಗಾಗಿ ಹಲವು ಆಟೋಟ, ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಿಲ್ಲವ ಸಂಘ ಕುವೈತ್…
ಯುಎಇ: ಇಂಡಿಯನ್ ಕಲ್ಚರಲ್ ಸೊಸೈಟಿ ಇದರ ವತಿಯಿಂದ ವಾರ್ಷಿಕ ಕ್ರೀಡಾಕೂಟವು ದಿನಾಂಕ 20-3-2015 ನೇ ಶುಕ್ರವಾರದಂದು ಶಾರ್ಜಾ ಯೂನಿವರ್ಸಿಟಿ ಯ ಕ್ರೀಡಾಂಗಣದಲ್ಲಿ ಬಹಳ ವಿಜೃಂಭಣೆಯಾಗಿ ನಡೆಯಿತು. ಈ ಕ್ರೀಡಾಕೂಟವನ್ನು ಇಂಡಿಯನ್ ಕಲ್ಚರಲ್ ಸೊಸೈಟಿ ಕೇರಳ ಶಾರ್ಜಾ ವಿಭಾಗದ ಅಧ್ಯಕ್ಷರಾದ ಸಾದುಲ್ಲ ರವರು ಉದ್ಘಾಟಿಸಿದರು.ಕ್ರೀಡಾಕೂಟಕ್ಕೆ ಸೇರಿದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಶುಭಹಾರೈಸಿ,ಈ ಕ್ರೀಡೆಯ ಏಕತೆ ಹಾಗೂ ಸಹೋದರತ್ವಕ್ಕೆ ಮಾದರಿಯಾಗಲಿ ಎಂದು ನುಡಿದರು. ಈ ಕ್ರೀಡಾಕೂಟಕ್ಕೆ ಕರ್ನಾಟಕದ ಕಿಂಗ್ಸ್,ಡೆಲ್ಲಿ ಯ ಚಾಲೆಂಜರ್,ತಮಿಳುನಾಡಿನ ಸ್ಮಾಷೆರ್ಸ್ ,ದುಬೈ ಯ ವಾರಿಯರ್ಸ್ ,ಶಾರ್ಜಾದ ಬ್ಲಾಸ್ಟರ್,ಹಾಗೂ ಅಬುಧಾಬಿಯ ರೈಡೆರ್ಸ್ ಮುಂತಾದ ಭಾರತೀಯರನ್ನು ಒಳಗೊಂಡ ವಿವಿಧ ತಂಡಗಳು ವಿಬಿನ್ನ ರೀತಿಯ ಧ್ವಜ,ಉಡುಪುನೊಂದಿಗೆ ಭಾಗವಹಿಸಿದರು. ಕ್ರೀಡಾಕೂಟದಲ್ಲಿ ವಾಲಿಬಾಲ್,ಹಗ್ಗ ಜಗ್ಗಾಟ,ಫುಟ್ಬಾಲ್,ಕಬಡ್ಡಿ, ಗುಂಡೆಸೆತ,ರನ್ನಿಂಗ್,ಹಾಗೂ ರಿಲೇ ಮುಂತಾದ ಆಟೋಟಗಳು ಆಯೋಜಿಸಲಾಗಿತ್ತು.ಮತ್ತು ಆಗಮಿಸಿದ್ದ ಕ್ರೀಡಾಭಿಮಾನಿಗಳು ವಿವಿಧ ಆಟೋಟ ಗಳಲ್ಲಿ ಸ್ಪರ್ದ್ದಿಸಿದರು. ಕ್ರೀಡಾಕೂಟದಲ್ಲಿ ಕನ್ನಡ,ಇಂಗ್ಲಿಷ್,ಹಿಂದಿ,ತಮಿಳ್,ಮಲಯಾಳಂ ಮುಂತಾದ ವಿವಿದ ಭಾರತೀಯ ಭಾಷೆಗಳಲ್ಲಿ ಮನರಂಜಿಸುವಂತಹ ಕಾಮೆಂಟರಿ ಮಾಡುವ ಮೂಲಕ ಕ್ರೀಡಾಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿತು. ಅದೇ ರೀತಿ ಮುಖ್ಯವಾಗಿ ಮಹಿಳೆಯರಿಗೆ ಒಳಾಂಗಣ ಸ್ಪರ್ಧೆಗಳನ್ನು ಮತ್ತು…
ಕುಂದಾಪುರ: ತಾಲೂಕಿನ ಪಶ್ಚಿಮಘಟ್ಟ ತಪ್ಪಲು ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು ಗಾಳಿ ಗುಡುಗು ಸಿಡಿಲು ಸಹಿತ ವ್ಯಾಪಕ ಮಳೆಯಾಗಿದೆ. ಗಾಳಿ ಅಬ್ಬರಕ್ಕೆ ಆವರ್ಸೆ ಗ್ರಾಮದ ವಂಡಾರು ಆಶಾ ಶೆಟ್ಟಿಯವರ ಮನೆ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದ್ದು ಅದಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸಿದ್ಧಾಪುರ, ಶೇಡಿಮನೆ, ಮಡಾಮಕ್ಕಿ, ಗೋಳಿಯಂಗಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದೆ. ಅಲ್ಲಲ್ಲಿ ಮರಮಟ್ಟು ಉರುಳಿರುವ ಹಿನ್ನೆಲೆಯಲ್ಲಿ ದೂರವಾಣಿ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ.
ಬಸ್ರೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಗೆ ಸೇರ್ಪಡೆಗೊಂಡ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಮಿಕ ಸಂಘಟನೆಗಳಾದ, ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರು, ಹಂಚು, ಬೀಡಿ ಕಾರ್ಮಿಕರು, ಅಂಗನವಾಡಿ ಅಕ್ಷರ ದಾಸೋಹ, ನೌಕರರು, ರಿಕ್ಷಾ ಚಾಲಕರು ಹಾಗೂ ಕೃಷಿ ಕೂಲಿಕಾರರ ಸಂಘದ ಮನೆ ನಿವೇಶನ ರಹಿತ ಅರ್ಜಿದಾರರ – ಬೃಹತ್ ಸಮಾವೇಶವು ಬಸ್ರೂರು ಮೂಡ್ಕಳಿ ಕೋಟಿ ಚೆನ್ನಯ ಗರಡಿ ದೇವಸ್ಥಾನದ ವಠಾರದಲ್ಲಿ ಜರುಗಿತು. ರೈತ ಕೃಷಿ ಕೂಲಿಕಾರರ ಮುಖಂಡರಾದ ಯು. ದಾಸ ಭಂಡಾರಿ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ದಿನಬಳಕೆಯ ಆಹಾರ ವಸ್ತುಗಳ ಬೆಲೆ ಏರಿಕೆಯಿಂದಾಗಿ, ಗ್ರಾಮೀಣ ಪ್ರದೇಶಧ ಬಡಕೂಲಿ ಕಾರ್ಮಿಕರು ಮೂಲಭೂತ ಸೌಕರ್ಯದಿಂದ ವಂಚಿತರಾಗಿ ಕಷ್ಟಕರವಾದ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಆರ್ಥಿಕ ಸಾಮಾಜಿಕ ಅನಿಷ್ಠಗಳ ವಿರುದ್ಧ ದುಡಿಯುವ ವರ್ಗ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು. ಸಿಐಟಿಯು ತಾಲೂಕು ಅಧ್ಯಕ್ಷ ಎಚ್. ನರಸಿಂಹ, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ, ವೆಂಕಟೇಶ ಕೋಣಿ ಮುಖ್ಯ ಅತಿಥಿಗಳಾಗಿ ಸಮಾವೇಶದಲ್ಲಿ ಭಾಗವಹಿಸಿದ್ದರು.…
ಚಿತ್ತೂರು: ಸಮಾಜದ ಅಗತ್ಯಕ್ಕೆ ತಕ್ಕಂತೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಗುತ್ತಿರುವ ಯಶಸ್ವಿ ಸಂಘಟನೆಯಾದ ಪ್ರೇರಣಾ ಯುವ ವೇದಿಕೆ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದು ಆಳ್ವಾಸ್ ಕಾಲೇಜು ಉಪನ್ಯಾಸಕ ದಿವ್ಯಾಧರ ಶೆಟ್ಟಿ ಕೆರಾಡಿ ಹೇಳಿದರು. ಅವರು ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರಿನ ಸಮುದಾಯ ಭವನದಲ್ಲಿ ಆಯೋಜಿಸಿದ ಆಧಾರ್ ಕಾರ್ಡ್ ಅಭಿಯಾನ ಮತ್ತು ಪಂಚಾಯತ್ ಸೌಲಭ್ಯಗಳ ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು ಪ್ರೇರಣಾ ಯುವ ವೇದಿಕೆಯ ಮಹತ್ವಾಕಾಂಕ್ಷೆಯ ಪ್ರೇರಣಾ ಇಂಗ್ಲಿಷ್ ಕಲಿಕಾ ಅಭಿಯಾನ ಕಾರ್ಯಕ್ರಮಕ್ಕೆ ಮೂರು ತಿಂಗಳ ವೇತನ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ಧನ್ ಪಂಚಾಯತಿನ ಸಂಪೂರ್ಣ ಸೌಲಭ್ಯಗಳನ್ನು ವಿವರಿಸಿ, ಸಾರ್ವಜನಿಕರೊಂದಿಗೆ ಚರ್ಚಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಾರಣಕಟ್ಟೆಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಚಿತ್ತೂರು ಮತ್ತು ವೇದಿಕೆಯ ಕಾನೂನು ಸಲಹೆಗಾರರಾದ ಕೆ.ಕುಸುಮಾಕರ ಶೆಟ್ಟಿ ವಕೀಲರು ಮಾತನಾಡಿ ವೇದಿಕೆಯ ಜನಪರ ಕಾರ್ಯ ಶ್ಲಾಘಿಸಿ, ಪ್ರೋತ್ಸಾಹಿಸಿದರು. ಒಟ್ಟು 415ಜನರಿಗೆ ಆಧಾರ್ ಕಾರ್ಡ್ ಮಾಡಿಸಲಾಯಿತು. ಪ್ರೇರಣಾ ಯುವವೇದಿಕೆಯ ಗೌರವ ಅಧ್ಯಕ್ಷರಾದ ರಾಮಚಂದ್ರ…
ಬೈಂದೂರು: ವಿಶ್ವವಿದ್ಯಾನಿಲಯ ನೀಡುವ ಪದವಿಯೊಂದಿಗೆ, ಉದ್ಯೋಗಕ್ಕೆ ಅಗತ್ಯವಿರುವ ಜೀವನ ಕೌಶಲ್ಯದ ಜೊತೆಗೆ ತಾಂತ್ರಿಕ ಕೌಶಲ್ಯ ಕಲಿತುಕೊಂಡಲ್ಲಿ ವೃತ್ತಿ ಹಾಗೂ ಔದ್ಯಮಿಕ ಜೀವನ ಯಶಸ್ಸಿನ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲಾ, ಆ ನೆಲೆಯಲ್ಲಿ ಕೌಶಲಾಭಿವೃದ್ಧಿ ಕಾರ್ಯಗಾರ ಅರ್ಥಪೂರ್ಣ ಮತ್ತು ಉಪಯುಕ್ತವೆಂದು ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ಮದುಸೂದನ್ ಭಟ್ ಹೇಳಿದರು. ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಐ.ಕ್ಯೂ.ಏ.ಸಿ ಮತ್ತು ಪ್ಲೆಸೆಮೆಂಟ್ ಸೆಲ್ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಎರಡು ದಿನದ ಕೌಶಲಾಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಾ, ಉಮೇಶ ಮಯ್ಯ ಪ್ರಸ್ತಾವಿಸಿ, ವಿದ್ಯಾರ್ಥಿಗಳಿಗೆ ಮೌಲ್ಯಶಿಕ್ಷಣ, ಗುರಿ, ನಿರ್ಧಾರ, ಸ್ವಉದ್ಯೋಗ, ಪದವಿ ನಂತರ ಉದ್ಯೋಗಾವಕಾಶಗಳು, ವೃತ್ತಿಪರ ಕೋರ್ಸಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಈ ಸಂದರ್ಭದಲ್ಲಿ ಕಾನೂನು ಪದವಿ ಸಂದರ್ಶನ ಎದುರಿಸುವುದು, ಬಯೋಡಾಟ ಬರೆಯುವ ಕಲೆ, ಸ್ಪರ್ದಾತ್ಮಕ ಪರೀಕ್ಷೇಗಳ ತಯಾರಿಗಳ ಬಗ್ಗೆ ವಿವರವಾದ ಮಾಹಿತಿ ಮತ್ತು ತರಬೇತಿ ನೀಡಲಾಗುವುದು ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೋ. ಬಿ,…
ಕುಂದಾಪುರ: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯು ಸಂಬಂಧಿತ ವಿಚಾರ ಕೇಂದ್ರಿತವಾಗಿರದೇ ಅಧ್ಯಕ್ಷರ ಪ್ರತಿಷ್ಠೆ, ಸದಸ್ಯರ ಆರೋಪ ಪ್ರತ್ಯಾರೋಪಗಳಿಗೆ ತುತ್ತಾಯಿತು. ಅಕ್ರಮ ಗೂಡಂಗಡಿ ತೆರವು ಪ್ರಕರಣವು ಸಭೆಯ ಕೊನೆಯವರೆಗೂ ಪ್ರತಿಧ್ವನಿಸಿದ್ದಲ್ಲದೇ ಆಡಳಿತ ಪಕ್ಷದ 13 ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರ ಮಾತಿನಿಂದ ಆಕ್ರೋಶಗೊಂಡು ಸಭೆಯಿಂದ ಹೊರನಡೆದ ಪ್ರಕರಣ ನಡೆಯಿತು. ಪುರಸಭಾ ಅಧ್ಯಕ್ಷೆ ಕಲಾವತಿ ಅಕ್ರಮ ಗೂಡಂಗಡಿ ವಿಚಾರವನ್ನು ಪ್ರಸ್ತಾವಿಸಿ ನಿರ್ಣಯ ಕೈಗೊಳ್ಳಲು ತಿಳಿಸಿದಾಗ ಪುರಸಭಾ ಸದಸ್ಯೆ ಪುಪ್ಪ ಶೇಟ್ ಮಾತನಾಡಿ, ಅಕ್ರಮ ಗೂಡಂಗಡಿಗಳನ್ನು ತೆರವುಗೊಳಿಸಲು ಸಾಕಷ್ಟು ಬಾರಿ ತಿಳಿಸಲಾಗಿತ್ತು. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ನಮ್ಮ ವಾರ್ಡಗಳಲ್ಲೂ ಇಂತಹ ಸಮಸ್ಯೆ ಸಾಕಷ್ಟಿವೆ ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಮತ್ತು ಈ ಹಿಂದೆ ನೀಡಿರುವ ದೂರುಗಳು ಏನಾದವು ಎಂಬುದನ್ನೂ ಅಧ್ಯಕ್ಷರು ತಿಳಿಸಬೇಕು ಎಂದು ಆಗ್ರಹಿಸಿದರು. ಸದಸ್ಯರಾದ ಶ್ರೀಧರ ಶೇರೆಗಾರ್, ಚಂದ್ರಶೇಖರ ಖಾರ್ವಿ ಧ್ವನಿಗೂಡಿಸಿದರು. ಈ ನಡುವೆ ಸದಸ್ಯ ರಾಜೇಶ್ ಕಾವೇರಿ ಮಾತನಾಡಿ ಯಾವುದೋ ಒಂದು ವಿಚಾರವನ್ನಿಟ್ಟುಕೊಂಡು ಗೂಡಂಗಡಿ…
ಕುಂದಾಪುರ: ತಾಲೂಕಿನಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಮಂಜಾನೆಯ ತನಕ ಸುರಿದ ಗುಡುಗು, ಸಿಡಿಲು ಸಹಿತ ಅಕಾಲಿತ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಜನಸಂಚಾರವು ಅಸ್ತವ್ಯಸ್ತಗೊಂಡು ಪರಿತಪಿಸುವಂತಾಯಿತು. ಅಕಾಲಿಕ ಮಳೆಗೆ ಕುಂದಾಪುರ ಬೈಂದೂರು, ಗಂಗೊಳ್ಳಿ ಮುಂತಾದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಜನಸಾಮಾನ್ಯರಿಗೆ ತೊಂದರೆಯುಂಟಾಯಿತು. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳ ಮೇಲೆ ವ್ಯಾಪಕ ನೀರು ನಿಂತು ಜನಸಂಚಾರಕ್ಕೆ ತೊಂದರೆಯಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದ ಕಾರಣ ಎಲ್ಲೆಡೆಯೂ ನೀರಿನ ಹರಿವಿಗೆ ತೊಂದರೆಯುಂಟಾಯಿತು. ಹಟ್ಟಿಯಂಗಡಿ ಗ್ರಾಮದ ಅರೆಕಲ್ಲು ಮನೆ ಭಾಸ್ಕರ ಪೂಜಾರಿಯವರ ಮನೆಗೆ ಸಿಡಿಲು ಅಪ್ಪಳಿಸಿದ ಪರಿಣಾಮ 2 ಹಸುಗಳು ಮೃತಪಟ್ಟಿವೆ. ಮನೆ ಜಖಂಗೊಂಡಿದೆ. ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿದೆ. ಕೊಡ್ಲಾಡಿ ಪಂಜುನಾಯ್ಕ್ ಅವರ ಮನೆ ಸಿಡಿಲು ಹೊಡೆತಕ್ಕೆ ಜರ್ಜರಿತವಾಗಿದೆ. ಗೋಡೆ, ಮೇಲ್ಮಾಡು, ವಿದ್ಯುತ್ ಉಪಕರಣ ಸುಟ್ಟುಹೋಗಿದ್ದು ಮನೆಯ ಸದಸ್ಯರಾದ ಗೌರಿ, ರೇವತಿ, ಪುಟ್ಟ ಮಕ್ಕಳಾದ ದೀಪ್ತಿ ಮತ್ತು ಪ್ರಥ್ವಿ ಸಿಡಿಲ ಆಘಾತಕ್ಕೆ ತುತ್ತಾಗಿದ್ದು ಕುಂದಾಪುರದ…
