ಸುದ್ದಿಗೋಷ್ಠಿಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮಂಜುನಾಥ ಭಂಡಾರಿ ಕುಂದಾಪುರ: ಹಿಂದೆ ವಿರೋಧ ಪಕ್ಷದಲ್ಲಿ ಇದ್ದ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಬೇಕು ಎನ್ನುವ ಏಕೈಕ ಉದ್ದೇಶಕ್ಕಾಗಿ ಯುಪಿಐ ಸರ್ಕಾರದ ಕಾರ್ಯಕ್ರಮಗಳನ್ನು ವಿರೋಧ ಮಾಡುತ್ತಿದ್ದರು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ಹಿಂದಿನ ಕಾರ್ಯಕ್ರಗಳನ್ನೆ ಹೆಸರು ಬದಲಾವಣೆ ಮಾಡಿ ನಮ್ಮದು ಎಂದು ಹೆಗಲು ತಟ್ಟಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಲೇವಡಿ ಮಾಡಿದ್ದಾರೆ. ಹೆಮ್ಮಾಡಿಯ ಖಾಸಗಿ ಹೋಟೇಲ್‌ನಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಯುಪಿಐ ಸರ್ಕಾರದ ಉದ್ಯೋಗ ಭರವಸೆ, ಆಧಾರ್ ಕಾರ್ಡ್, ಬಳಕೆದಾರರ ಖಾತೆಗೆ ನೆರವಾಗಿ ಗ್ಯಾಸ್ ಸಬ್ಸಿಡಿ ನೀಡಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದ್ದಾರೆ. ಕೇಂದ್ರದಲ್ಲಿ ವಿತ್ತ ಸಚಿವರಾಗಿದ್ದ ಬಿ.ಜನಾರ್ಧನ್ ಪೂಜಾರಿಯವರು ಬ್ಯಾಂಕಿನ ಬಾಗಿಲಿಗೆ ಬಡವರನ್ನು ತರುವ ಪ್ರಯತ್ನವಾಗಿ ಯೋಜಿಸಿದ್ದ ಸಾಲ ಮೇಳದ ಕಾರ್ಯಕ್ರಮವನ್ನೆ ಅಲ್ಪ-ಸ್ವಲ್ಪ ಬದಲಾವಣೆಯೊಂದಿಗೆ ಜನ್ ಧನ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಯುಪಿಐ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪೇಟ್ರೋಲ್ ಬ್ಯಾರೆಲ್…
Author: Editor Desk
ಕುಂದಾಪುರ: ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಗಳು ಭರದಿಂದ ಸಾಗಿದ್ದು ಸುವ್ಯವಸ್ಥಿತಗಾಗಿ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ. ಶಾಂತಿಯುವ ಮತದಾನಕ್ಕಾಗಿ ನಡೆಸಲು ಪೊಲೀಸ್ ಇಲಾಖೆ ನಿನ್ನೆ ಸಂಜೆಯಿಂದಲೇ ಸಜ್ಜಾಗಿ ನಿಂತಿದ್ದರೇ, ಚುನಾವಣಾಧಿಕಾರಿಗಳು, ಸಹಾಯಕ ಕಮೀಷನರ್ ಹಾಗೂ ತಾಲೂಕು ತಹಶೀಲ್ದಾರರು ತಂಡ ಚುನಾವಣೆಗಾಗಿ ಸಕಲ ರೀತಿಯ ವ್ಯವಸ್ಥೆಗಳನ್ನೂ ಮಾಡಿದೆ. ಕುಂದಾಪುರದಲ್ಲಿ ಪೊಲೀಸರು ಬುಧವಾರ ಸಂಜೆ ಸಭೆ ನಡೆಸಿದರು ನಡೆಸಿದರು. ವಿವಿಧೆಡೆಯಿಂದ ಬಂದ 450 ಕ್ಕೂ ಅಧಿಕ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ಡರು. ಒಟ್ಟು 25 ಪಂಚಾಯತ್‌ಗಳನ್ನು ನಕ್ಸಲ್ ಪೀಡಿತ, 16 ಅತೀ ಸೂಕ್ಷ್ಮ, 36 ಸೂಕ್ಷ್ಮ 214 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆ ಕೆ.ಎಸ್.ಆರ್.ಪಿ. ತುಕಡಿಗಳು, ಡಿ.ಎ.ಆರ್. ವಾಹನ, ನಕ್ಸಲ್ ಪೀಡಿತ ಪ್ರದೇಶಕ್ಕೆ ಆರ್ಮಡ್ ಪೊಲೀಸ್ ಗಾರ್ಡ್, ಆಂಟಿ ಸಬೂಟೇಜ್ ಟೀಮ್ (ಎ.ಸಿ.) ನಿಯೋಜಿಸಲಾಗಿದೆ. ಅಲ್ಲದೇ ಒಬ್ಬರು ಡಿವೈಎಸ್ಪಿ, 6 ಇನ್ಸ್‌ಪೆಕ್ಟರ್, 20 ಸಬ್ ಇನ್ಸ್‌ಪೆಕ್ಟರ್, 32 ಎ.ಎಸ್.ಐ. ಸೇರಿದಂತೆ ಹೆಡ್‌ಕಾನ್ಸ್‌ಟೇಬಲ್,…
ಕುಂದಾಪುರ: ಕುಂದಾಪುರ ಕ್ಷೇತ್ರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಳೆದ ಎರಡು ದಿನಗಳಿಂದ ಬರುತ್ತಿದ್ದ ಬೆದರಿಕೆಯ ಕರೆಗೆ ಅಂತೂ ಒಂದು ಅಂತ್ಯ ದೊರೆತಿದೆ. 10ಕೋಟಿ ಹಣದ ಬೇಡಿಕೆ ಇಟ್ಟಿದ್ದ ಭೂಗತ ಪಾತಕಿ ರವಿ ಪೂಜಾರಿಯು, ಹಣ ನೀಡದಿದ್ದರೆ ಕೊಲೆ ಮಾಡುತ್ತೇನೆಂದು ಬೆದರಿಕೆಯೊಡ್ಡಿದ್ದು ಶಾಸಕರ ಆಪ್ತ ವಲಯದಲ್ಲಿ ತೀವ್ರ ಸಂಚಲನವನ್ನುಂಟುಮಾಡಿತ್ತಲ್ಲದೇ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲೂ ಆತಂಕ ಮನೆಮಾಡಿತ್ತು. ಮೊದಲ ದಿನ ಕರೆ ಮಾಡಿ ಹಣ ನೀಡಲು ಮೂರು ದಿನದ ಗಡುವು ನೀಡಿದ್ದ ವ್ಯಕ್ತಿಯು, ಎರಡನೇ ದಿನವೂ ಕರೆ ಮಾಡಿದ್ದ. ಆದರೆ ಶ್ರೀನಿವಾಸ ಶೆಟ್ಟರು ಆತನೊಂದಿಗೆ ಮಾತನಾಡಿರಲಿಲ್ಲ. ಮೂರನೇ ದಿನ ಮತ್ತೆ ಕರೆ ಮಾಡಿದ ರವಿ ಪೂಜಾರಿ ಹಣದ ಬೇಡಿಕೆಯನ್ನು ಹಿಂತೆಗೆದುಕೊಂಡು ಶಾಸಕರಲ್ಲಿ ಕ್ಷಮೆಯಾಚಿಸಿ ಅಚ್ಚರಿ ಮೂಡಿಸಿದ್ದಾನೆ. ಕೊನೆಯ ಭಾರಿ ಆತನ ಕರೆಯನ್ನು ಹಾಲಾಡಿಯವರು ಸ್ವೀಕರಿಸಿದಾಗ ಮಾತನಾಡಿದ ರವಿ ಪೂಜಾರಿ, ‘ನಿಮ್ಮ ಬಗ್ಗೆ ತಿಳಿದಿದ್ದೇನೆ. ನಿಮ್ಮ ಬಳಿ ನಾನು ಕೇಳಿದಷ್ಟು ಹಣವಿಲ್ಲ ಎಂದು ಗೊತ್ತಿದೆ. ಆದರೇ ನಿಮ್ಮ ಹೆಸರು ಹೇಳಿಕೊಂಡು…
ಕುಂದಾಪುರ: ಮೋದಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ವಿವಿಧ ಹಂತದಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದರೇ, ಕುಂದಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಭಿಮಾನಿಯೊಬ್ಬರು ತನ್ನ ಆಟೋ ರಿಕ್ಷಾದಲ್ಲಿ ಒಂದು ದಿನದಲ್ಲಿ 5 ಕಿಲೋಮೀಟರ್ ವರೆಗೆ 1 ರೂಪಾಯಿ ಪ್ರಯಾಣ ದರ ನಿಗದಿ ಮಾಡುವ ಮೂಲಕ ತನ್ನ ಅಭಿಮಾನ ಮೇರೆದಿದ್ದಾನೆ. ಕುಂದಾಪುರ ವಿನಾಯಕ ಟಾಕೀಸ್ ಬಳಿಯ ಆಟೋ ನಿಲ್ದಾಣದಲ್ಲಿರುವ ರಿಕ್ಷಾದ ಮೇಲೆ ಬ್ಯಾನರ್ ಕಂಡು ಎಲ್ಲರೂ ಚಿಕಿತರಾಗಿದ್ದರು. ಮೋದಿ ಸರಕಾರದ ಸಾಧನೆಯಿಂದ ಪ್ರೇರಿತಗೊಂಡಿರುವ ಅಂಕದಕಟ್ಟೆಯ ಸುರೇಶ್ ಪ್ರಭು ಎಂಬುವವರು ಸರಕಾರಕ್ಕೆ ಒಂದು ವರ್ಷವಾದ ದಿನದಂದು ತಮ್ಮ ಆಟೋ ಹಿಂದೆ 1ರೂಪಾಯಿ ಪ್ರಯಾಣ ದರದ ಮಾಹಿತಿ ನೀಡಿ ಓಡುಸುತ್ತಿದ್ದರು ಎಂಬುದು ತಿಳಿದು ಬಂತು . ದಿನದ ಕೊನೆಯಲ್ಲಿ 80 ಪ್ರಯಾಣಿಕರು 1 ರೂಪಾಯಿಯಲ್ಲಿ ಪ್ರಯಾಣಿಸಿ ಖುಷಿಪಟ್ಟರೇ, ಇಂತಹ ಅವಕಾಶ ಮಾಡಿಕೊಟ್ಟ ಸುರೇಶ್ ಪ್ರಭು ತಮ್ಮ ಕೆಲಸದಿಂದ ತೃಪ್ತರಾದರು. ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಲೂ 1ರೂಗೆ ರಿಕ್ಷಾ ಓಡಿಸಿದ್ದರು.
ಹಣ ಹೆಂಡದ ಹಂಗಿಲ್ಲ. ಅನವಶ್ಯ ವ್ಯಯಿಸುವ ಜನರಲ್ಲ. ಇಂತವರು ಆಗಬೇಕಿದೆ ನಮಗೆ ಮಾದರಿ ಕುಂದಾಪುರ: ಚುನಾವಣೆ ಬಂತೆಂದರೆ ಸಾಕು. ಹಣ ಹೆಂಡದ ಸುಗ್ಗಿಯೋ ಸುಗ್ಗಿ. ಲೋಕಸಭಾ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯತ್ ಚುನಾವಣೆಯ ತನಕ ಪಕ್ಷ ಹಾಗೂ ಅಭ್ಯರ್ಥಿಗಳು ಪ್ರಚಾರ ಕ್ಯಾನ್ವಾಸ್ ಮುಂತಾದವುಗಳಿಗೆ ಲಕ್ಷಾಂತರ ರೂಪಾಯಿ ಹಣ ವ್ಯಯಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಪ್ರತಿ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾನೆ ಮತ್ತು ಖರ್ಚುಮಾಡಿದ ಹಣವನ್ನು ವಾಪಾಸು ಪಡೆಯಲು ಗೆದ್ದನಂತರ ಮತ್ತೆ ಭ್ರಷ್ಟಾಚಾರಕ್ಕಿಳಿಯುತ್ತಾನೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ ಜನಪರ ಕೆಲಸ ಮಾಡುವವರಿಗೆ ಹಣದ ಅವಶ್ಯಕತೆಯೇ ಇಲ್ಲ. ಅತ್ಯಂತ ಕಡಿಮೆ ಖರ್ಚಿನಯೂ ಚುನಾವಣೆಗೆ ಸ್ವರ್ಧಿಸಬಹುದುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ಕಾಳಾವಾರ ಗ್ರಾ.ಪಂ ಎರಡು ವಾರ್ಡುಗಳ ಸಿಪಿಎಂ ಬೆಂಬಲಿತ ಎಸ್. ರಾಮಚಂದ್ರ ನಾವಡ ಹಾಗೂ ಅವರದೇ ಬಣದ ಇನ್ನಿತರ ನಾಲ್ವರು ಅಭ್ಯರ್ಥಿಗಳು. ಈ ಪೈಕಿ ರಾಮಚಂದ್ರ ನಾವಡರ ಜನಪರ ಕಾಳಜಿ ವಿಶೇಷವಾದುದು. ಕಾಳಾವರ ಗ್ರಾಮ ಪಂಚಾಯತ್ ನ ಎರಡನೇ ವಾರ್ಡಿನಿಂದ ಸ್ವರ್ಧಿಸುತ್ತಿರುವ ನಾವಡರು ಭ್ರಷ್ಟ ವ್ಯವಸ್ಥೆಯ ವಿರುದ್ಧ…
ಹಂಗಳೂರು ಗ್ರಾಮ ಪಂಚಾಯತ್ ನಿಂದ ಚುನಾವಣೆಗೆ ಸ್ವರ್ಧೆ ಕುಂದಾಪುರ: ಸಮಾಜ ಸೇವೆಗೆ ಅಂಗವಿಕಲತೆ ಅಡ್ಡಿ ಇಲ್ಲ. ಮನಸ್ಸು ಮಾಡಿದರೆ ಎನನ್ನೂ ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಸಾವಿರಾರು ಮಂದಿ ಇದ್ದಾರೆ. ಅಂತವರಲ್ಲಿ ಈ ಭಾರಿಯ ಗ್ರಾ.ಪಂ ಚುನಾವಣೆಯಲ್ಲಿ ಸ್ವರ್ಧಿಸುತ್ತಿರುವ ಸುಧಾಕರ ಪೂಜಾರಿಯೋ ಒಬ್ಬರು. ಬಾಲ್ಯದಲ್ಲೇ ಪೋಲಿಯೋ ಪೀಡಿತರಾಗಿ ಒಂದು ಕಾಲಿನ ಸಂಪೂರ್ಣ ಬಲವನ್ನು ಕಳೆದುಕೊಂಡಿರುವ ಮೂರುವರೆ ಅಡಿ ಎತ್ತರದ ಕುಂದಾಪುರದ ಹಂಗಳೂರು ನಿವಾಸಿ ಕೋಟಿ ಮನೆಯ ಬಾಲ ಪೂಜಾರಿಯವರ ಮಗ 42 ವರ್ಷ ಪ್ರಾಯದ ಸುಧಾಕರ ಪೂಜಾರಿ ತನ್ನದೇ ಗ್ರಾಮವಾದ ಹಂಗಳೂರಿನ ನಾಲ್ಕನೇ ವಾರ್ಡಿನಿಂದ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿವಾಹಿತರಾಗಿ ಒಂದು ಗಂಡು ಮಗುವಿನ ತಂದೆಯಾಗಿರುವ ಇವರು ಕಳೆದ 25 ವರ್ಷಗಳಿಂದಲೂ ತನ್ನ ಅಂಗವೈಖಲ್ಯವನ್ನು ಮೆಟ್ಟಿ ನಿಂತು ತನ್ನ ಗ್ರಾಮದಲ್ಲಿ ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ವೃತ್ತಿಯಲ್ಲಿ ಅರ್ಜಿ ಬರಹಗಾರರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ತನ್ನ ಕೆಲಸದಲ್ಲಿನ ಚುರುಕುತನದಿಂದ, ಹಾಸ್ಯಭರಿತ ಮಾತುಗಾರಿಕೆಯಿಂದ ಮತ್ತು ತನ್ನ ಅಂಗವೈಕಲ್ಯತೆಯ ನಡುವೆಯೂ ಪರರಿಗೆ…
ಕುಂದಾಪುರ: ಬಣ್ಣದ ಮಾತುಗಳನ್ನಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಯುಪಿಎ ಸರಕಾರ ಅವಧಿಯಲ್ಲಿನ ಜನವಿರೋಧಿ ನೀತಿಗಳನ್ನೇ ಮುಂದುವರಿಸುತ್ತಿದೆ ಎಂದು ಸಿಐಟಿಯು ತಾಲೂಕು ಸಮಿತಿಯ ಅಧ್ಯಕ್ಷ ಎಚ್. ನರಸಿಂಹ ಹೇಳಿದರು. ಅವರು ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಕುಂದಾಪುರ ಸಿಐಟಿಯು ತಾಲೂಕು ಸಮಿತಿಯ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡಿ ಮಾಲಿಕರ ಪರವಾದ ನೀತಿಗಳನ್ನು ಜಾರಿಗೆ ತರುವುದನ್ನು ಹಾಗೂ ಪಿ.ಎಫ್, ಇ.ಪಿ.ಎಫ್ ಹಾಗೂ ಇ.ಎಸ್.ಐಗಳನ್ನು ಕಾರ್ಮಿಕರಿಂದ ಕಸಿಯುವ ಷಡ್ಯಂತ್ರವನ್ನು ಸಿಐಟಿಯು ವಿರೋಧಿಸುತ್ತದೆ. ವಿದೇಶದಿಂದ ಕಪ್ಪುಹಣವನ್ನು ತರುವುದಾಗಿ ಹೇಳಿದ ಸರಕಾರ ಇಂದು ನಮ್ಮ ಖಾತೆಯಿಂದಯೇ ಹಣ ವಸೂಲಿ ಮಾಡುವ ಹುನ್ನಾರ ಮಾಡುತ್ತದೆ ಎಂದವರು ಆರೋಪಿಸಿದರು. ಕೇಂದ್ರ ಸರಕಾರದ ಪ್ರತಿಕೃತಿಯನ್ನು ದಹಿಸಿ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಪೋಷಣೆ ಕೂಗಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್, ಸಿಐಟಿಯು ಪ್ರಮುಖರಾದ ವೆಂಕಟೇಶ ಕೋಣಿ, ಸುರೇಶ್ ಕಲ್ಲಾಗರ್, ಮಹಾಬಲ ವಡೇರಹೊಬಳಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ: ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಲಕ್ಷಾಂತರ ಮಂದಿಗೆ ನೆರವು ನೀಡುತ್ತಿರುವುದು ಕೆಲಸ ಶ್ಲಾಘನೀಯವಾದುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಬಳಿ ಭಾರತೀಯ ನೂತನವಾಗಿ ಆರಂಭಗೊಂಡ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಕ್ತನಿಧಿ ಕಟ್ಟಡವನ್ನು ಉದ್ಘಾಟಿಸಿ ಬಳಿಕ ಆರ್.ಎನ್. ಶೆಟ್ಟಿ ಸಂಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐ.ಆರ್.ಸಿ.ಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಸಿ. ಸೋಮಶೇಖರ ಮಾತನಾಡಿ ಮಾನವೀಯತೆ, ನಿಷ್ಪಕ್ಷತೆ, ಸ್ವಾತಂತ್ರ್ಯ ಏಕತೆ ಮುಂದಾದ ಧೋರಣೆಗಳನ್ನಿಟ್ಟುಕೊಂಡು ನೊಂದವರಿಗೆ ಸ್ನೇಹದ ಹಸ್ತ, ಪ್ರಕೃತಿ ವಿಕೋಪವಾದಾಗ ನಿರಾಶ್ರಿತರಿಗೆ ಸ್ಪಂದಿಸುವ ಆಶಯದೊಂದಿಗೆ ರೆಡ್ ಕ್ರಾಸ್ ಕಾರ್ಯಾಚರಿಸುತ್ತಿದೆ. ಕುಂದಾಪುರದಲ್ಲಿ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ಒಂದು ಮಾನವೀಯ ಕಾರ್ಯದ ಆವಿಷ್ಕಾರವಾದಂತಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಆರ್.ಸಿ.ಎಸ್ ರಾಜ್ಯ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐ.ಆರ್.ಸಿ.ಎಸ್ ರಾಜ್ಯ ಘಟಕದ ಕಾರ್ಯದರ್ಶಿ ಎಸ್. ಅಶೋಕ್ ಕುಮಾರ್…
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆಯ ಕರೆ ಕುಂದಾಪುರ: ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಇಂದು ಭೂಗತ ಪಾತಕಿ ರವಿ ಪೂಜಾರಿಯಿಂದ ಹಣದ ಬೇಡಿಕೆ ಇಟ್ಟ ಬೆದರಿಕೆ ಕರೆ ಬಂದಿದ್ದು ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಶಾಸಕರು ದೂರು ದಾಖಲಿಸಿದ್ದು, ಕರೆಯ ಸತ್ಯಾಸತ್ಯತೆಗಳ ಬಗ್ಗೆ ಪೊಲೀಸರು ತನಿಕೆ ನಡೆಸುತ್ತಿದ್ದಾರೆ. ಶಾಸಕರು ಸೋಮವಾರ ಮಧ್ಯಾಹ್ನ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಮೊಬೈಲಿಗೆ ಆಸ್ಟ್ರೇಲಿಯಾದ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿಯು ತಾನು ಡಾನ್ ರವಿ ಪೂಜಾರಿ ಎಂದು ತುಳುವಿನಲ್ಲಿ ಮಾತು ಆರಂಭಿಸಿದ್ದಾನೆ. ತಮ್ಮ ಬಳಿ ಸಾಕಷ್ಟು ಭೂಮಿ ಇರುವುದರಿಂದ ತನಗೆ 10ಕೋಟಿ ರೂ. ಹಣ ನೀಡಬೇಕು ಎಂದು ಶಾಸಕರ ಬಳಿ ಬೇಡಿಕೆಯಿಟ್ಟಿದ್ದಾನೆ. ಮಾತನಾಡುತ್ತಿದ್ದಂತೆಯೇ ಕರೆ ಕಡಿತಗೊಂಡಿದ್ದು ಸ್ಪಲ್ಪ ಹೊತ್ತಿನ ಬಳಿಕ ಬೆರೋಂದು ಸಂಖ್ಯೆಯಿಂದ ಕರೆ ಮಾಡಿದ ಅದೇ ವ್ಯಕ್ತಿ ತನಗೆ ಮೂರು ದಿನದೊಳಗೆ ಹಣ ನೀಡುವಂತೆ…
ಬೈಂದೂರು: ಇನೋವಾ ಗಾಡಿಯೊಂದು ಓವರ್ ಟೇಕ್ ಮಾಡುವ ಭರದಲ್ಲಿ ಎದುರು ಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಮಹದೇವ ಖಾರ್ವಿ (25) ಸ್ಥಳದಲ್ಲೇ ಮೃತಪಟ್ಟ ಘಟನೆ ಮರವಂತೆ ಸಮೀಪದ ನಾವುಂದದಲ್ಲಿ ವರದಿಯಾಗಿದೆ. ಫಟನೆಯ ವಿವರ ಮಂಗಳೂರಿನಿಂದ ಭಟ್ಕಳ ಕಡೆದ ಸಾಗುತ್ತಿದ್ದ ಇನ್ನೊವಾ ವಾಹನವು ಓವರ್ ಟೇಕ್ ಮಾಡುತ್ತಿರುವಾಗ ಎದುರು ಬದಿಯಿಂದ ಬಂದ ಬೈಕ್ ಸವಾರನಿಗೆ ಢಿಕ್ಕಿ ಹೊಡೆದಿತ್ತು. ಹೊಡೆತದಿಂದಾಗಿ ಬೈಕ್ ಸವಾರ ಮಹದೇವ ಖಾರ್ವಿಯ ತಲೆಯ ಹಾಗೂ ಇತರ ಭಾಗಗಳಿಗೆ ಬಲವಾದ ಏಟು ಬಿದ್ದುದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕೊಡೇರಿಯ ಮುರ್ಡೇಶ್ವರ ಮನೆ ನಾಗ ಖಾರ್ವಿ ಅವರ ಪುತ್ರರಾದ ಮಹದೇವ ಮೀನುಗಾರಿಕೆಯನ್ನು ತನ್ನ ಕಸುಬನ್ನಾಗಿಸಿಕೊಂಡಿದ್ದರು. ರಾತ್ರಿ ವೇಳೆಯಲ್ಲಿ ಕೆಲಸಕ್ಕಾಗಿ ಕೊಡೇರಿಯಿಂದ ಗಂಗೊಳ್ಳಿ ಬಂದರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪೊಲೀಸರ ವಿರುದ್ಧ ಆಕ್ರೋಶ ಅಪಘಾತ ಸಂಭವಿಸಿ ಬಳಿಕ ತಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಸಾರ್ವಜನಿಕರು ಹಾಗೂ…
